ಮುಹಮ್ಮದ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮುಹಮ್ಮದ್ ಇಬ್ನ್ ಆಬ್ದುಲ್ಲಾಹ್ (محمد[೧] [೨] (ಸು. ೫೭೦ ಮೆಕ್ಕಾ - ಜೂನ್ ೮, ೬೩೨ ಮದೀನ),[೩] ಇಸ್ಲಾಂ ಧರ್ಮದ ಪ್ರಕಾರ ಅಲ್ಲಾಹನ ಕೊನೆಯ ಪ್ರವಾದಿ[೪] ಮತ್ತು ಇವರು ಹೊಸ ಧರ್ಮವನ್ನು ಸೃಷ್ಟಿಸಿದವರಲ್ಲ; ಆದರೆ ಆಡಮ್, ಅಬ್ರಾಹಮ್ ಇತ್ಯಾದಿ ಪ್ರವಾದಿಗಳಿಂದ ಸೃಷ್ಟಿಸಲಾದ ಮೂಲ ಧರ್ಮವನ್ನು ಪುನರ್ಸ್ಥಾಪನೆ ಮಾಡಿದವರು.[೫]

ಮುಹಮ್ಮದ್(ಸ) ರ ಜನನ ರಬೀಉಲ್ ಅವ್ವಲ್ ೯ನೇ ದಿನಾಂಕ ಕ್ರಿ.ಶ. ೫೭೧ರ ಎಪ್ರೀಲ್ ೨೦ ರಂದು ಮಕ್ಕಾ ಪಟ್ಟಣದಲ್ಲಿ ಆಗುತ್ತದೆ.ಇವರು ಇಡೀ ವಿಶ್ವದ ಪ್ರಭುವಾದ ಅಲ್ಲಾಹನ ವತಿಯಿಂದ ಬಂದಂತಹ ಪ್ರವಾದಿಯೂ ಲೋಕನಾಯಕರೂ ಆಗಿದ್ದಾರೆ. ನಿರಕ್ಷರಿಯಾದ ಪ್ರವಾದಿಗೆ ಅಲ್ಲಾಹನ ವಾಣಿಯು (ಪವಿತ್ರ ಕುರ್ಆನ್) ಜಿಬ್ರೀಲ್ ಎಂಬ ದೇವದೂತನ ಮುಖಾಂತರ ಅವತೀರ್ಣವಾಗುತ್ತದೆ. ತಂದೆ ತಾಯಿಗಳಾದ ಆಮಿನ ಮತ್ತು ಅಬ್ದುಲ್ಲಾ ಬಾಲ್ಯದಲ್ಲಿಯೇ ತೀರಿಹೋಗುತ್ತಾರೆ. ೪೦ನೇ ವರ್ಷದಲ್ಲಿ ಪ್ರಾವಾದಿತ್ವ ಲಭಿಸುತ್ತದೆ. ನಂತರ ೨೩ ವರ್ಷಗಳಲ್ಲಿ ಇಸ್ಲಾಮ್ ಧರ್ಮವನ್ನು ಸಂಸ್ಥಾಪಿಸುತ್ತಾರೆ. ೧೦ ವರ್ಷ ಮಕ್ಕಾದಲ್ಲಿ ಹಾಗೂ ೧೩ ವರ್ಷ ಮದೀನಾದಲ್ಲಿ ಅನೇಕ ಸಂಕಷ್ಟಗಳನ್ನು ಸಹಿಸಿ ಅಲ್ಲಾಹನ ಸಂಪ್ರೀತಿಗಾಗಿ ಅಂದಿನ ಕೆಡುಕುಗಳ ವಿರುದ್ಡ ಹೋರಾಡಿ ಶ್ರೇ‍ಷ್ಠ ಜೀವನ ಪದ್ದತಿಯಾದ ಇಸ್ಲಾಮನ್ನು ಸಂಸ್ಥಾಪಿಸುತ್ತಾರೆ.

ಮುಹಮ್ಮದ್‌ (ಸ)ರವರು ಕೇವಲ ಇಪ್ಪತ್ತಮೂರು ವರ್ಷಗಳ ತಮ್ಮ ದೌತ್ಯಜೀವನದ ಅತಿಸಂಕ್ಷಿಪ್ತ ಅವಧಿಯಲ್ಲಿ ಸಂಪೂರ್ಣ ಅರಬಿ ಪರ್ಯಾಯ ದ್ವೀಪವನ್ನು ಬಹುದೇವಾರಾಧನೆ, ಅಂಧವಿಶ್ವಾಸ ಮತ್ತು ಸೃಷ್ಟಿಪೂಜೆಯಿಂದ ಏಕದೇವಾರಾಧನೆಯೆಡೆಗೆ, ಜನಾಂಗೀಯ ಕಲಹ ಮತ್ತು ಸಮರಗಳಿಂದ ರಾಷ್ಟ್ರೀಯ ಒಗ್ಗಟ್ಟು ಮತ್ತು ಭಾವೈಕ್ಯತೆಯೆಡೆಗೆ, ಮದ್ಯಪಾನ ಮತ್ತು ವ್ಯಭಿಚಾರದಿಂದ ಸಮಚಿತ್ತತೆ ಮತ್ತು ದೇವಭಕ್ತಿಯೆಡೆಗೆ, ಅನಿರ್ಬಂಧತೆ ಮತ್ತು ಅರಾಜಕತೆಯಿಂದ ಶಿಸ್ತುಬದ್ಧ ಮತ್ತು ಮಾದರೀಯೋಗ್ಯ ಜೀವನದೆಡೆಗೆ, ಪರಿಪೂರ್ಣ ದಿವಾಳಿತ್ವದಿಂದ ನೈತಿಕ ಉತ್ಕೃಷ್ಟತೆಯ ಪಾರಮ್ಯದೆಡೆಗೆ ಪರಿಪೂರ್ಣವಾಗಿ ಪರಿವರ್ತಿಸಿದರು. ಮಾನವ ಚರಿತ್ರೆಯು ಎಂದೂ ಕಂಡರಿಯದ ಅಥವಾ ಆಲಿಸಿರದ ಇಂತಹ ಅಭೂತಪೂರ್ವ ಮತ್ತು ಅಮೂಲಾಗ್ರ ಬದಲಾವಣೆ! ಮತ್ತೆ ಊಹಿಸಿರಿ! ನಂಬಲಸಾಧ್ಯವಾದ ಈ ಅದ್ಭುತಗಳೆಲ್ಲವೂ ಕೇವಲ ಎರಡು ದಶಕಗಳ ಹೃಸ್ವಾವಧಿಯಲ್ಲಿ ಸಂಭವಿಸಿವೆ.

ಪ್ರವಾದಿ [ಸ]ರವರ ಕೊನೆಯ ವಚನ ಅರಫಾ ಮೈದಾನದಲ್ಲಿ:[ಬದಲಾಯಿಸಿ]

ಪ್ರವಾದಿ ಮುಹಮ್ಮದ್ [ಸ]ರು ಹೇಳಿದರು: ಓ ಜನರೇ ನಿಮ್ಮ ದೇವನು ಒಬ್ಬನು ಮತ್ತು ನಿಮ್ಮ ತಂದೆಯೂ ಒಬ್ಬನು. ಅರಬನಿಗೆ ಅರಬೇತರ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ ಮತ್ತು ಅರಬೇತರನಿಗೆ ಅರಬರ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. ಕೆಂಪು ಬಣ್ಣದವನಿಗೆ (ಅಂದರೆ ಕೆಂಪು ಮಿಶ್ರಿತ ಬಿಳಿಬಣ್ಣದವನು) ಕರಿಯನ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ ಮತ್ತು ಕರಿಯನಿಗೆ ಕೆಂಪು ಬಣ್ಣದವನ ಮೇಲೆ ಯಾವುದೇ ಶ್ರೇಷ್ಠತೆಯಿಲ್ಲ. ಭಯಭಕ್ತಿಯ ಮಾನದಂಡದಲ್ಲೇ ಹೊರತು. [ಮುಸ್ನಾದ್ ಅಹ್ಮದ್ # 22978]


ಉಲ್ಲೇಖಗಳು[ಬದಲಾಯಿಸಿ]

 1. Unicode has a special "Muhammad" ligature at U+FDF೪
 2. About this sound click here  for the Arabic pronunciation.
 3. Elizabeth Goldman (1995). Believers: spiritual leaders of the world. Oxford University Press. p. 63. 
 4. The Cambridge History of Islam (೧೯೭೭) writes that "It is appropriate to use the word 'God' rather than the transliteration 'Allah'. For one thing it cannot be denied that Islam is an offshoot of the Judaeo-Christians tradition, and for another the Christian Arabs of today have no other word for 'God' than 'Allah'." cf p.೩೨.
 5. See:
  • Esposito (೧೯೯೮), p.೧೨
  • Esposito (೨೦೦೨b), pp.೪–೫
  • F. E. Peters (೨೦೦೩), p.೯
"https://kn.wikipedia.org/w/index.php?title=ಮುಹಮ್ಮದ್&oldid=585915" ಇಂದ ಪಡೆಯಲ್ಪಟ್ಟಿದೆ