ವಿಷಯಕ್ಕೆ ಹೋಗು

ಕುರೈಷ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುರೈಷ್
قريش
Classification ಅದ್ನಾನಿ ಅರಬ್ ಬುಡಕಟ್ಟು
Religions ಇಸ್ಲಾಂ (630 ರಿಂದ ಇಂದಿನ ತನಕ)
ಬಹುದೇವ (230 - 630)
Languages ಅರಬ್ಬಿ
Region ಮಕ್ಕಾ, ಹಿಜಾಝ್, ಪಶ್ಚಿಮ ಅರೇಬಿಯಾ
Ethnicity ಅರಬ್ಬಿ
Feudal title ಕುರಷಿ

ಕುರೈಷ್ (ಅರಬ್ಬಿ: قريش) — ಅನೇಕ ಅರಬ್ ಗೋತ್ರಗಳನ್ನು ಒಳಗೊಂಡ ಒಂದು ಬುಡಕಟ್ಟು. ಇವರು ಐತಿಹಾಸಿಕವಾಗಿ ಮಕ್ಕಾ ನಗರದಲ್ಲಿ ವಾಸವಾಗಿದ್ದು ಮಕ್ಕಾ ಮತ್ತು ಕಅಬಾದ ಆಡಳಿತವು ಇವರ ಕೈಯಲ್ಲಿತ್ತು. ಮುಹಮ್ಮದ್ ಪೈಗಂಬರರು ಈ ಬುಡಕಟ್ಟಿನ ಬನೂ ಹಾಶಿಮ್ ಗೋತ್ರಕ್ಕೆ ಸೇರಿದವರು. ಮುಹಮ್ಮದ್ ಇಸ್ಲಾಂ ಧರ್ಮವನ್ನು ಬೋಧಿಸಿದಾಗ ಕುರೈಷರು ಅದನ್ನು ತೀವ್ರವಾಗಿ ವಿರೋಧಿಸಿದರು, ಮುಹಮ್ಮದ್‌ಗೆ ಅಸಹನೀಯ ಹಿಂಸೆ ಕೊಟ್ಟರು ಮತ್ತು ಕೊಲೆ ಮಾಡುವುದಕ್ಕೂ ಮುಂದಾದರು. ಮುಹಮ್ಮದ್ ಅವರಿಂದ ಪಾರಾಗಿ ಮದೀನಕ್ಕೆ ವಲಸೆ ಹೋದರು. ಅಲ್ಲಿ ಅವರು ಇಸ್ಲಾಮೀ ಸಾಮ್ರಾಜ್ಯವನ್ನು ಕಟ್ಟಿ ಹತ್ತು ವರ್ಷಗಳ ಬಳಿಕ ಮಕ್ಕಾದ ಮೇಲೆ ದಂಡೆತ್ತಿ ಬಂದು ಅದನ್ನು ವಶಪಡಿಸಿದರು. ನಂತರ ಕುರೈಷ್ ಬುಡಕಟ್ಟಿಗೆ ಸೇರಿದ ಗೋತ್ರಗಳೆಲ್ಲವೂ ಸಾಮೂಹಿಕವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರವಾದವು.

"https://kn.wikipedia.org/w/index.php?title=ಕುರೈಷ್&oldid=1157043" ಇಂದ ಪಡೆಯಲ್ಪಟ್ಟಿದೆ