ಮದೀನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಮದೀನ - ಸೌದಿ ಅರೇಬಿಯಾದಲ್ಲಿರುವ ಮುಸ್ಲಿಮರ ಒಂದು ಧಾರ್ಮಿಕ ಕೇಂದ್ರ ನಗರ. ಜನಸಂಖ್ಯೆ 1,98,196 (1984). ಮೆಕ್ಕ ನಗರದ ಉತ್ತರಕ್ಕೆ ಸುಮಾರು 193ಕಿಮೀ ದೂರದಲ್ಲಿದೆ. ಈ ನಗರವನ್ನು ಮದೀನತ್-ಉಲ್-ನಬೀ, ಮದೀನಮುನವರ್ ಎಂದೂ ಕರೆಯುವುದುಂಟು. ಪ್ರವಾದಿ ಮುಹಮ್ಮದ್ ( ಸ.ಅ ) ಈ ನಗರಕ್ಕೆ ತೆರಳುವುದರ ಮುಂಚೆ ಇದನ್ನು ಯಸ್ರಬ್ ಎಂದು ಕರೆಯುತ್ತಿದ್ದರು. ನಗರ ಎತ್ತರವಾದ ಸ್ಥಳದಲ್ಲಿದೆ. ಇದರ ಸುತ್ತಲೂ ಫಲವತ್ತಾದ ಮೈದಾನ ಪ್ರದೇಶವಿದೆ. ಇಲ್ಲಿ ಖರ್ಜೂರ, ದ್ರಾಕ್ಷಿ, ವಿವಿಧ ತರಕಾರಿ ಮತ್ತು ದ್ವಿದಳಧಾನ್ಯಗಳನ್ನು ಬೆಳೆಸುತ್ತಾರೆ.

ನಗರಕ್ಕೆ ವಿಮಾನ ಸಂಪರ್ಕವಿದೆ. ಈ ನಗರ ಎತ್ತರವಾದ ಗೋಡೆಯಿಂದ ಸುತ್ತುವರಿದು ಅನೇಕ ಪುರಾತನ ಗೋಪುರ, ಗೋರಿ, ಮಸೀದಿಗಳಿಂದ ಕೂಡಿದೆ. ಹೆಚ್ಚು ಪ್ರವಾದಿಗಳ ಸಮಾಧಿಗಳಿರುವ ಮಸ್ಜಿದೆ-ನಬವಿ ಎಂಬ ಮಸೀದಿ ಆಕರ್ಷಣೀಯವಾದ್ದು.ಮುಹಮ್ಮದ್ ಪೈಗಂಬರರ ಸಮಾಧಿ ಅವರು ಪ್ರೀತಿಯ ಪತ್ನಿ ಆಯಿಷಾ (ರ.ಅ) ಮನೆಯಿದ್ದ ಸ್ಥಳದಲ್ಲಿದೆ. ಖಲೀಫರಾದ ಉಮರ್ (ರ.ಅ) ಹಾಗೂ ಉಸ್ಮಾನ್ (ರ.ಅ) ರಿಂದ ವಿಸ್ತರಿಸಲ್ಪಟ್ಟಿದ್ದ ಈ ಮಸೀದಿ ಕ್ರಿ.ಶ. 711ರಲ್ಲಿ ಬೈಜಾಂಟಿಯನ್ ಮಾದರಿಯಲ್ಲಿ ಖಲೀಫ ವಲೀದರ ಆಜ್ಞೆಯಂತೆ ಪುನರ್ರಚಿಸಲ್ಪಟ್ಟಿತು.ಮೊದಲ ಖಲೀಫರಾದ ಅಬೂಬಕರ್ (ರ.ಅ) ಮತ್ತು ಉಮರ್ (ರ.ಅ) ಅವರ ಗೋರಿಗಳೂ ಇಲ್ಲಿವೆ. ಮದೀನಕ್ಕೆ ಸುಮಾರು 4.8ಕಿಮೀ ದೂರದ ಖುಬ ಎಂಬಲ್ಲಿ ಪ್ರವಾದಿ ಮುಹಮ್ಮದರು ಕಟ್ಟಿದ ಮೊದಲ ಮಸೀದಿ ಇದೆ. ಇದನ್ನು ತರುವಾಯ ಅಬ್ದುಲ್ ಹಮೀದ್ ಸುಲ್ತಾನರು ಜೀರ್ಣೋದ್ಧಾರ ಮಾಡಿಸಿದರು.

ಮುಹಮ್ಮದರು ಮೆಕ್ಕಾ ಬಿಟ್ಟು ಮದೀನ ತಲುಪಿದಂದಿನಿಂದ (ಕ್ರಿ.ಶ. 622ರಿಂದ ಹಿಜರಿ ಶಕೆಯ ಪ್ರಾರಂಭ) ಉಮ್ಮಾಯದ್ ಸಂತತಿಯ ಖಲೀಫ ಡಮಾಸ್ಕಸ್‍ಗೆ ರಾಜಧಾನಿಯನ್ನು ಬದಲಾಯಿಸುವ ತನಕವೂ (661) ಮದೀನ ಮುಸ್ಲಿಮರ ರಾಜಧಾನಿಯಾಗಿತ್ತು. ಅನಂತರ ಇದು ಕೇವಲ ಧಾರ್ಮಿಕ ಅಧ್ಯಯನ ಕೇಂದ್ರವಾಗಿ ಉಳಿದಿದೆ.

1960ರಲ್ಲಿ ಇಸ್ಲಾಮಿಕ್ ವಿಶ್ವವಿದ್ಯಾಲಯ ಸ್ಥಾಪಿತವಾಗಿದೆ.

ಚಿತ್ರಸಂಪುಟ[ಬದಲಾಯಿಸಿ]


Wikisource-logo.svg
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಮದೀನಾ&oldid=948741" ಇಂದ ಪಡೆಯಲ್ಪಟ್ಟಿದೆ