ನಿಝಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಝಾರ್ ಬಿನ್ ಮಅದ್ದ್ (ಅರಬ್ಬಿ: نزار بن معد) ― ಕುರೈಷ್ ಸೇರಿದಂತೆ ಉತ್ತರ ಅರೇಬಿಯಾದ ಹೆಚ್ಚಿನ ಅರಬ್ ಬುಡಕಟ್ಟುಗಳ ಪಿತಾಮಹ. ಮುಹಮ್ಮದ್ ಪೈಗಂಬರರ ಪೂರ್ವಜರಲ್ಲಿ ಒಬ್ಬರು. ಇವರ ಸಂತತಿಗಳನ್ನು ಬನೂ ನಿಝಾರ್ ಅಥವಾ ನಿಝಾರಿಯ್ಯ (ನಿಝಾರಿಗಳು) ಎಂದು ಕರೆಯಲಾಗುತ್ತದೆ.[೧]

ವಂಶ[ಬದಲಾಯಿಸಿ]

ನಿಝಾರ್‌ರ ತಂದೆ ಮಅದ್ದ್ ಬಿನ್ ಅದ್ನಾನ್. ತಾಯಿ ಮುಆನ ಬಿಂತ್ ಜಹ್ಲ. ಈಕೆ ದಕ್ಷಿಣ ಅರೇಬಯಾದ ಬುಡಕಟ್ಟುಗಳಲ್ಲಿ ಒಂದಾದ ಜುರ್ಹುಮ್ ಬುಡಕಟ್ಟಿಗೆ ಸೇರಿದವಳು. ಇವರ ಮಕ್ಕಳಲ್ಲಿ ರಬೀಅ, ಮುದರ್, ಅನ್ಮಾರ್ ಮತ್ತು ಇಯಾದ್ ಪ್ರಮುಖರು. ನಿಝಾ‌ರ್‌ರ ನಾಲ್ಕು ಮಕ್ಕಳ ಬಗ್ಗೆ ಮತ್ತು ಅವರ ತಂದೆ ಮಅದ್ದ್‌ರ ಬಗ್ಗೆ ಪ್ರಾಚೀನ ಅರಬ್ ಐತಿಹ್ಯ ಹಾಗೂ ಕಾವ್ಯಗಳಲ್ಲಿ ಯಥೇಷ್ಟ ಉಲ್ಲೇಖಗಳಿವೆಯಾದರೂ, ನಿಝಾರ್‌ರ ಬಗ್ಗೆ ಉಲ್ಲೇಖಗಳಿರುವುದು ಬಹಳ ಅಪರೂಪ. ಕ್ರಿ.ಶ. 684 ರಲ್ಲಿ ನಡೆದ ಮರ್ಜ್ ರಾಹಿತ್ ಕದನದ ನಂತರ ನಿಝಾರ್ ಎಂಬ ಹೆಸರು ವಂಶೀಯವಾಗಿ ಮತ್ತು ರಾಜಕೀಯವಾಗಿ ಹೆಚ್ಚು ಚಲಾವಣೆಯಾಗತೊಡಗಿತು. ಏಕೆಂದರೆ ಇದು ಉತ್ತರ ಅರಬ್ಬರು (ಅದ್ನಾನಿಗಳು) ಮತ್ತು ದಕ್ಷಿಣ ಅರಬ್ಬರ (ಕಹ್ತಾನಿಗಳು) ನಡುವೆ ವೈರವನ್ನು ಹುಟ್ಟುಹಾಕಿದ ಕದನ. ಇಬ್ನಾ ನಿಝಾರ್ (ನಿಝಾರರ ಇಬ್ಬರು ಮಕ್ಕಳು) ಎಂಬ ಹೆಸರು ಉತ್ತರ ಅರೇಬಿಯಾದ ರಬೀಅ ಮತ್ತು ಮುದರ್ (ಕೈಸ್ ಐಲಾನ್) ಎಂಬ ಎರಡು ದೊಡ್ಡ ಬುಡಕಟ್ಟುಗಳನ್ನು ಸೂಚಿಸುತ್ತದೆ. ಇವರು ನಿಝಾರ್‌ರ ಇಬ್ಬರು ಮಕ್ಕಳ ಸಂತತಿಗಳು. ಆದರೆ ಇನ್ನಿಬ್ಬರು ಮಕ್ಕಳಾದ ಅನ್ಮಾರ್ ಮತ್ತು ಇಯಾದ್‌ರ ಸಂತತಿಗಳ ಬಗ್ಗೆ ಹೆಚ್ಚಿನ ಉಲ್ಲೇಖಗಳಿಲ್ಲ.[೧]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ The Encyclopedia of Islam (in English). Vol. 3. E. J. Brill. 1995. pp. 82–83.{{cite book}}: CS1 maint: unrecognized language (link)
"https://kn.wikipedia.org/w/index.php?title=ನಿಝಾರ್&oldid=1157891" ಇಂದ ಪಡೆಯಲ್ಪಟ್ಟಿದೆ