ವಿಷಯಕ್ಕೆ ಹೋಗು

ಅರೇಬಿಯನ್ ಪರ್ಯಾಯ ದ್ವೀಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರೇಬಿಯನ್ ಪರ್ಯಾಯ ದ್ವೀಪ
شبه الجزيرة العربية
Area3,237,500 km2 (1,250,000 sq mi)
Population೮,೬೨,೨೨,೦೦೦
Population density೨೬.೬/km2
HDI0.788 (2018)
high
Countries
  •  ಬಹ್ರೇನ್
  •  ಇರಾಕ್
  •  ಜಾರ್ಡನ್
  •  ಕುವೈತ್
  •  ಒಮಾನ್
  •  ಕತಾರ್
  •  ಸೌದಿ ಅರೇಬಿಯಾ
  •  ಸಂಯುಕ್ತ ಅರಬ್ ಸಂಸ್ಥಾನ
  •  ಯೆಮೆನ್
Largest cities
ಅರೇಬಿಯನ್ ಪರ್ಯಾಯ ದ್ವೀಪದಲ್ಲಿರುವ 11 ಮಹಾ ನಗರಗಳು

ಅರೇಬಿಯನ್ ಪರ್ಯಾಯ ದ್ವೀಪ (ಆಂಗ್ಲ: Arabian Peninsula; ಅರೇಬಿಕ್: شبه الجزيرة العربية, ಶಿಬ್‌ಹುಲ್ ಜಝೀರತಿಲ್ ಅರಬಿಯ್ಯ, ಅಥವಾ جزيرة العرب, ಜಝೀರತುಲ್ ಅರಬ್) — ಏಷ್ಯಾ ಖಂಡವು ಆಫ್ರಿಕ ಖಂಡದೊಂದಿಗೆ ಸೇರುವ ಏಷ್ಯಾದ ನೈಋತ್ಯ ಭಾಗದಲ್ಲಿ ಮತ್ತು ಆಫ್ರಿಕದ ಈಶಾನ್ಯ ಭಾಗದಲ್ಲಿರುವ ಪರ್ಯಾಯ ದ್ವೀಪ.[] ಇದನ್ನು ಅರೇಬಿಯನ್ ಉಪಖಂಡ ಎಂದು ಕೂಡ ಕರೆಯಲಾಗುತ್ತದೆ. ಇದು ಮಧ್ಯಪ್ರಾಚ್ಯದ ಕೇಂದ್ರ ಭಾಗದಲ್ಲಿದ್ದು, 3,237,500 ಚ. ಕಿಮೀ (1,250,000 ಚ. ಮೈಲು) ವಿಸ್ತೀರ್ಣವನ್ನು ಹೊಂದಿದೆ. ಇದನ್ನು ಜಗತ್ತಿನ ಅತಿದೊಡ್ಡ ಪರ್ಯಾಯ ದ್ವೀಪವೆಂದು ಗುರುತಿಸಲಾಗುತ್ತದೆ.[]

ಅರೇಬಿಯನ್ ಪರ್ಯಾಯ ದ್ವೀಪವು ಭೌಗೋಳಿಕವಾಗಿ ಬಹ್ರೈನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ, ಸಂಯುಕ್ತ ಅರಬ್ ಸಂಸ್ಥಾನ (ಯು.ಎ.ಇ) ಮತ್ತು ಯೆಮೆನ್ ದೇಶಗಳನ್ನು ಒಳಗೊಳ್ಳುತ್ತದೆ. ಇರಾಕ್ ಮತ್ತು ಜೋರ್ಡಾನಿನ ದಕ್ಷಿಣ ಭಾಗಗಳು ಕೂಡ ಇದರಲ್ಲಿ ಸೇರುತ್ತವೆ.[] ಸೌದಿ ಅರೇಬಿಯಾ ಈ ದ್ವೀಪದ ಅತಿದೊಡ್ಡ ದೇಶವಾಗಿದೆ.[] ಪೌರಾಣಿಕ ಕಾಲದಲ್ಲಿ ಈಗಿನ ಸಿರಿಯಾದ ದಕ್ಷಿಣ ಭಾಗಗಳು, ಜೋರ್ಡಾನ್ ಮತ್ತು ಸಿನಾಯಿ ಪರ್ಯಾಯ ದ್ವೀಪಗಳನ್ನು ಅರೇಬಿಯಾದ ಭಾಗಗಳೆಂದು ಪರಿಗಣಿಸಲಾಗಿತ್ತು.[]

ಸುಮಾರು 56 ರಿಂದ 23 ದಶಲಕ್ಷ ವರ್ಷಗಳ ಹಿಂದೆ ಕೆಂಪು ಸಮುದ್ರದಲ್ಲಿ ಸಂಭವಿಸಿದ ಬಿರುಕಿನ ಕಾರಣದಿಂದ ಅರೇಬಿಯನ್ ಪರ್ಯಾಯ ದ್ವೀಪ ಅಸ್ತಿತ್ವಕ್ಕೆ ಬಂತು ಎಂದು ಭಾವಿಸಲಾಗುತ್ತದೆ. ಪಶ್ಚಿಮ ಮತ್ತು ನೈಋತ್ಯದಲ್ಲಿ ಕೆಂಪು ಸಮುದ್ರ, ಈಶಾನ್ಯದಲ್ಲಿ ಪರ್ಶಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿ, ಉತ್ತರದಲ್ಲಿ ಶಾಮ್ (ಮೆಡಿಟರೇನಿಯನ್ ಸಮುದ್ರದ ಪೂರ್ವ ಭಾಗ) ಮತ್ತು ಮೆಸಪೊಟೋಮಿಯ ಹಾಗೂ ದಕ್ಷಿಣ ಮತ್ತು ಆಗ್ನೇಯದಲ್ಲಿ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರಗಳು ಈ ಪರ್ಯಾಯ ದ್ವೀಪವನ್ನು ಆವರಿಸಿಕೊಂಡಿವೆ. ತೈಲ ಹಾಗೂ ನೈಸರ್ಗಿಕ ಅನಿಲದ ಅಗಾಧ ನಿಕ್ಷೇಪಗಳಿಂದಾಗಿ ಅರೇಬಿಯನ್ ಪರ್ಯಾಯ ದ್ವೀಪವು ಅರಬ್ ಜಗತ್ತಿನ ಭೌಗೋಳಿಕ ರಾಜಕೀಯದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಇಬ್ನುಲ್ ಫಕೀಹ್ ಹೇಳುವಂತೆ,[] ಹಿಂದಿನ ಕಾಲದಲ್ಲಿ ಈ ಪ್ರದೇಶವನ್ನು ನಾಲ್ಕು ಮುಖ್ಯ ಪ್ರಾಂತ್ಯಗಳಾಗಿ ವಿಂಗಡಿಸಲಾಗಿತ್ತು:

  1. ಕೇಂದ್ರೀಯ ಪ್ರಸ್ಥಭೂಮಿ (ನಜ್ದ್ ಮತ್ತು ಯಮಾಮ)
  2. ದಕ್ಷಿಣ ಅರೇಬಿಯಾ (ಯೆಮೆನ್, ಹದ್ರಮೌತ್ ಮತ್ತು ಒಮಾನ್)
  3. ಬಹ್ರೈನ್ (ಪೂರ್ವ ಅರೇಬಿಯಾ ಅಥವಾ ಅಲ್-ಹಸ್ಸ)
  4. ಹಿಜಾಝ್ (ತಿಹಾಮ).

ನಿಷ್ಪತ್ತಿ

[ಬದಲಾಯಿಸಿ]

ಹೆಲಿನಿಸ್ಟಿಕ್ ಕಾಲದಲ್ಲಿ ಈ ಪ್ರದೇಶವನ್ನು ಅರೇಬಿಯಾ ಅಥವಾ ಅರೇವಿಯಾ (ಗ್ರೀಕ್: Αραβία) ಎಂದು ಕರೆಯಲಾಗುತ್ತಿತ್ತು. ರೋಮನ್ನರು ಈಗಿನ ಅರೇಬಿಯನ್ ಪರ್ಯಾಯ ದ್ವೀಪಕ್ಕಿಂತಲೂ ಹೆಚ್ಚಿನ ಭಾಗಗಳೊಂದಿಗೆ ಈ ಪ್ರದೇಶವನ್ನು ಅರೇಬಿಯಾ ಎಂಬ ಪೂರ್ವಪ್ರತ್ಯಯವನ್ನು ಸೇರಿಸಿ ಮೂರು ಪ್ರಾಂತ್ಯಗಳಾಗಿ ವಿಂಗಡಿಸಿದ್ದರು:

  • ಅರೇಬಿಯಾ ಪೆಟ್ರಿಯಾ (ಆಂಗ್ಲ: Arabia Petraea ಶಿಲಾ ಅರೇಬಿಯಾ): ಇದು ಈಗಿನ ಸಿರಿಯಾದ ದಕ್ಷಿಣ ಭಾಗ, ಪ್ಯಾಲಸ್ತೀನ್, ಜೋರ್ಡಾನ್, ಸಿನಾಯಿ ಪರ್ಯಾಯ ದ್ವೀಪ ಮತ್ತು ಸೌದಿ ಅರೇಬಿಯಾದ ವಾಯುವ್ಯ ಭಾಗವನ್ನು ಒಳಗೊಂಡಿತ್ತು. ಇದು ಪ್ರಾಂತ್ಯದ ರೂಪ ಪಡೆದು ಪೆಟ್ರಾ ಅನ್ನು ತನ್ನ ರಾಜಧಾನಿಯನ್ನಾಗಿ ಮಾಡಿದ ಏಕೈಕ ಪ್ರದೇಶವಾಗಿದೆ.
  • ಅರೇಬಿಯಾ ಡೆಸರ್ಟಾ (ಆಂಗ್ಲ: Arabia Deserta ಮರುಭೂಮಿ ಅರೇಬಿಯಾ): ಇದು ಅರೇಬಿಯನ್ ಪರ್ಯಾಯ ದ್ವೀಪದ ಆಂತರಿಕ ಭಾಗವನ್ನು ಸೂಚಿಸುತ್ತದೆ.
  • ಅರೇಬಿಯಾ ಫೆಲಿಕ್ಸ್ (ಆಂಗ್ಲ: Arabia Felix ಅದೃಷ್ಟಶಾಲಿ ಅರೇಬಿಯಾ): ಇದು ಈಗಿನ ಯೆಮೆನ್ ದೇಶವನ್ನು ಸೂಚಿಸುತ್ತದೆ. ಈ ಪ್ರದೇಶವು ಹೆಚ್ಚು ಮಳೆಯನ್ನು ಪಡೆದು, ಪರ್ಯಾಯ ದ್ವೀಪದ ಇತರ ಭಾಗಗಳಿಗಿಂತ ಹೆಚ್ಚು ಹಸಿರು ಮತ್ತು ದೀರ್ಘಕಾಲದಿಂದ ಹೆಚ್ಚು ಉತ್ಪಾದಕ ಕ್ಷೇತ್ರಗಳನ್ನು ಆನಂದಿಸುತ್ತಿತ್ತು.
ಅರೇಬಿಯನ್ ಪರ್ಯಾಯ ದ್ವೀಪದ ಉಪಗ್ರಹ ಚಿತ್ರ

ಅರಬ್ಬರು ಮತ್ತು ಒಟ್ಟೋಮನ್ ಸಾಮ್ರಾಜ್ಯದವರು, ಅರಬ್ಬರು ವಾಸಿಸುತ್ತಿದ್ದ ಅರೇಬಿಯನ್ ಪರ್ಯಾಯ ದ್ವೀಪದ ಪಶ್ಚಿಮ ಪ್ರದೇಶವನ್ನು ಬಿಲಾದುಲ್-ಅರಬ್ (ಅರೇಬಿಕ್: بلاد العرب ಅರಬ್ಬರ ಭೂಮಿ) ಎಂದು ಪರಿಗಣಿಸುತ್ತಿದ್ದರು. ಬಿಲಾದು-ಶ್ಶಾಮ್ (ಅರೇಬಿಕ್: بلاد الشام), ಬಿಲಾದುಲ್-ಯಮನ್ (ಅರೇಬಿಕ್: بلاد اليمن) ಮತ್ತು ಬಿಲಾದುಲ್-ಇರಾಕ್ (ಅರೇಬಿಕ್: بلاد العراق ಅರಬ್ಬರ ಭೂಮಿ) ಇದರ ಪ್ರಮುಖ ವಿಭಾಗಗಳಾಗಿದ್ದವು.[]

ಭೌಗೋಳಿಕ ಸ್ಥಿತಿ

[ಬದಲಾಯಿಸಿ]

ಅರೇಬಿಯನ್ ಪರ್ಯಾಯ ದ್ವೀಪವು ಏಷ್ಯಾ ಖಂಡದಲ್ಲಿದೆ. ಇದು ಈಶಾನ್ಯದಲ್ಲಿ ಪರ್ಷಿಯನ್ ಕೊಲ್ಲಿ, ಪೂರ್ವದಲ್ಲಿ ಹರ್ಮುಝ್ ಜಲಸಂಧಿ ಮತ್ತು ಒಮಾನ್ ಕೊಲ್ಲಿ, ಆಗ್ನೇಯದಲ್ಲಿ ಅರಬ್ಬೀ ಸಮುದ್ರ, ದಕ್ಷಿಣದಲ್ಲಿ ಏಡನ್ ಕೊಲ್ಲಿ ಮತ್ತು ಸೊಮಾಲಿ ಸಮುದ್ರ, ನೈಋತ್ಯದಲ್ಲಿ ಬಾಬುಲ್-ಮಂದಬ್ ಜಲಸಂಧಿ ಮತ್ತು ಕೆಂಪು ಸಮುದ್ರದಿಂದ ಸುತ್ತುವರೆದಿದೆ.[] ಇದರ ಉತ್ತರ ಭಾಗವು ಸ್ಪಷ್ಟವಾದ ಗಡಿರೇಖೆಯಿಲ್ಲದೆ ಸಿರಿಯಾ ಮರುಭೂಮಿಯೊಂದಿಗೆ ವಿಲೀನಗೊಳ್ಳುತ್ತದೆ. ಆದಾಗ್ಯೂ ಇದರ ಉತ್ತರದ ಗಡಿಯನ್ನು ಸಾಮಾನ್ಯವಾಗಿ ಸೌದಿ ಅರೇಬಿಯಾ ಮತ್ತು ಕುವೈತ್‌ ದೇಶಗಳ ಉತ್ತರದ ಗಡಿಗಳು ಹಾಗೂ ಇರಾಕ್ ಮತ್ತು ಜೋರ್ಡಾನ್‌ ದೇಶಗಳ ದಕ್ಷಿಣ ಪ್ರದೇಶಗಳು ಎಂದು ಪರಿಗಣಿಸಲಾಗುತ್ತದೆ.[]

ಅರೇಬಿಯನ್ ಪರ್ಯಾಯ ದ್ವೀಪದ ಮುಖ್ಯ ಭಾಗವು ಮರುಭೂಮಿಯಾಗಿದೆ. ಆದರೂ ಇದರ ನೈಋತ್ಯದಲ್ಲಿ ಪರ್ವತ ಶ್ರೇಣಿಗಳಿವೆ. ಇದು ಪರ್ಯಾಯ ದ್ವೀಪದ ಉಳಿದ ಭಾಗಗಳಿಗಿಂತ ಹೆಚ್ಚಿನ ಮಳೆಯನ್ನು ಪಡೆಯುತ್ತದೆ. ಹರ್‍ರಾತು-ಶ್ಶಾಮ್ ಒಂದು ದೊಡ್ಡ ಜ್ವಾಲಾಮುಖಿ ಪ್ರದೇಶವಾಗಿದ್ದು, ಇದು ವಾಯುವ್ಯ ಅರೇಬಿಯಾದಿಂದ ಜೋರ್ಡಾನ್ ಮತ್ತು ದಕ್ಷಿಣ ಸಿರಿಯಾದವರೆಗೆ ವ್ಯಾಪಿಸಿದೆ.[]

ರಾಜಕೀಯ ಗಡಿಗಳು

[ಬದಲಾಯಿಸಿ]
ಅರೇಬಿಯಾದ ಅಂಗ ದೇಶಗಳು

ಕುವೈತ್, ಕತಾರ್, ಸಂಯುಕ್ತ ಅರಬ್ ಸಂಸ್ಥಾನ (ಯುಎಇ), ಒಮಾನ್, ಯೆಮೆನ್ ಮತ್ತು ಸೌದಿ ಅರೇಬಿಯಾ ಅರೇಬಿಯನ್ ಪರ್ಯಾಯ ದ್ವೀಪದ ಅಂಗ ದೇಶಗಳಾಗಿವೆ. ದ್ವೀಪ ರಾಷ್ಟ್ರವಾದ ಬಹ್ರೈನ್ ಪರ್ಯಾಯ ದ್ವೀಪದ ಪೂರ್ವ ಕರಾವಳಿಯ ಸ್ವಲ್ಪ ದೂರದಲ್ಲಿದೆ.

ಬಹ್ರೈನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇ – ಈ ಆರು ದೇಶಗಳು ಗಲ್ಫ್ ಸಹಕಾರ ಮಂಡಳಿಯ (Gulf Cooperation Council – GCC) ಸದಸ್ಯ ದೇಶಗಳಾಗಿವೆ.[]

ಪರ್ಯಾಯ ದ್ವೀಪದ ಹೆಚ್ಚಿನ ಭಾಗವನ್ನು ಸೌದಿ ಅರೇಬಿಯಾ ಒಳಗೊಂಡಿದೆ. ಪರ್ಯಾಯ ದ್ವೀಪದ ಬಹುಪಾಲು ಜನಸಂಖ್ಯೆಯು ಸೌದಿ ಅರೇಬಿಯಾ ಮತ್ತು ಯೆಮೆನ್‌ನಲ್ಲಿದೆ. ಅರೇಬಿಯನ್ ಪರ್ಯಾಯ ದ್ವೀಪವು ವಿಶ್ವದ ಅತಿದೊಡ್ಡ ತೈಲ ನಿಕ್ಷೇಪವನ್ನು ಹೊಂದಿದೆ. ಸೌದಿ ಅರೇಬಿಯಾ ಮತ್ತು ಯುಎಇ ಈ ಪ್ರದೇಶದ ಅತಿ ಶ್ರೀಮಂತ ರಾಷ್ಟ್ರಗಳಾಗಿವೆ. ಅರೇಬಿಕ್ ಭಾಷೆಯ ಅಲ್-ಜಝೀರಾ ದೂರದರ್ಶನ ಕೇಂದ್ರವು ಕತಾರ್‌ನಲ್ಲಿದೆ, ಇದು ಅಲ್-ಜಝೀರಾ ಇಂಗ್ಲಿಷ್ ಎಂಬ ಹೆಸರಿನಲ್ಲಿ ಆಂಗ್ಲ ಅಂಗಸಂಸ್ಥೆಯನ್ನೂ ಹೊಂದಿದೆ.

ಚರಿತ್ರೆ

[ಬದಲಾಯಿಸಿ]

ವಾಯವ್ಯ ಸೌದಿ ಅರೇಬಿಯಾದ ತಿಅಸುಲ್-ಗದಾದಲ್ಲಿ ಇತರ ಪ್ರಾಣಿಗಳ ಪಳೆಯುಳಿಕೆಗಳ ಜೊತೆಗೆ ಪತ್ತೆಯಾದ ಮಧ್ಯ ಪ್ರಾಚೀನ ಶಿಲಾಯುಗದ ಕಲ್ಲಿನ ಉಪಕರಣಗಳು 3,00,000 ದಿಂದ 5,00,000 ವರ್ಷಗಳ ಹಿಂದೆ "ಗ್ರೀನ್ ಅರೇಬಿಯಾ" ಮೂಲಕ ಹೋಮಿನಿನ್‌ಗಳು ವಲಸೆ ಬಂದಿರಬಹುದು ಎಂದು ಸೂಚಿಸುತ್ತವೆ.[೧೦] 2,00,000 ವರ್ಷಗಳಷ್ಟು ಹಳೆಯದಾದ ಕಲ್ಲಿನ ಉಪಕರಣಗಳನ್ನು ಪೂರ್ವದ ಅಲ್-ಖಾಸಿಮ್ ಪ್ರಾಂತ್ಯದ ಶುಐಬುಲ್-ಅದ್ಗಾಮ್‌ನಲ್ಲಿ ಸಂಶೋಧಿಸಲಾಗಿದೆ. ಇದು ಅನೇಕ ಇತಿಹಾಸಪೂರ್ವ ತಾಣಗಳು ಈ ಪ್ರದೇಶದಲ್ಲಿ ಒಮ್ಮೆ ಅಸ್ತಿತ್ವದಲ್ಲಿದ್ದವು ಎಂದು ಸೂಚಿಸುತ್ತದೆ.[೧೧] ಸುಮಾರು 188,000 ವರ್ಷಗಳ ಹಿಂದೆ ಅರೇಬಿಯನ್ ಪರ್ಯಾಯ ದ್ವೀಪದಲ್ಲಿ ಹೋಮಿನಿನ್‌ಗಳು ವಾಸಿಸುತ್ತಿದ್ದರು ಎಂದು ರಿಯಾದ್ ಪ್ರದೇಶದ ಸಫ್ಫಾಕದಲ್ಲಿ ಕಂಡುಬಂದ ಉಪಕರಣಗಳು ಸೂಚಿಸುತ್ತವೆ.[೧೨] ಅರೇಬಿಯಾದಲ್ಲಿ ಮಾನವ ವಾಸವು 1,30,000 ವರ್ಷಗಳ ಹಿಂದೆಯೇ ಸಂಭವಿಸಿರುವ ಸಾಧ್ಯತೆಯಿದೆ.[೧೩] ನಿಫೂದ್ ಮರುಭೂಮಿಯ ಅಲ್-ವುಸ್ತಾದಲ್ಲಿ ಪತ್ತೆಯಾದ ಪಳೆಯುಳಿಕೆಗೊಳಿಸಲಾದ ಹೋಮೋ ಸೇಪಿಯನ್ಸ್ ಬೆರಳಿನ ಮೂಳೆಯು ಸರಿಸುಮಾರು 90,000 ವರ್ಷಗಳ ಹಿಂದಿನದ್ದಾಗಿದ್ದು, ಇದು ಆಫ್ರಿಕಾ ಮತ್ತು ಮೆಡಿಟರೇನಿಯನ್ ಪೂರ್ವ ಭಾಗದ ಹೊರಗೆ ಪತ್ತೆಯಾದ ಅತ್ಯಂತ ಹಳೆಯ ಮಾನವ ಪಳೆಯುಳಿಕೆಯಾಗಿದೆ. ಇದು ಈ ಸಮಯದಲ್ಲಿ ಆಫ್ರಿಕಾದಿಂದ ಅರೇಬಿಯಾಕ್ಕೆ ಮಾನವ ವಲಸೆ ಸಂಭವಿಸಿರಬಹುದೆಂದು ಸೂಚಿಸುತ್ತದೆ.[೧೪]

ಇಸ್ಲಾಮಿಕ್ ಪೂರ್ವ ಅರೇಬಿಯ

[ಬದಲಾಯಿಸಿ]

ಅರೇಬಿಯನ್ ಉಪದ್ವೀಪದಲ್ಲಿ ಮಾನವ ವಾಸವು ಸುಮಾರು 1,06,000 ದಿಂದ 1,30,000 ವರ್ಷಗಳ ಹಿಂದೆಯೇ ಇತ್ತು ಎಂಬುದಕ್ಕೆ ಪುರಾವೆಗಳಿವೆ.[೧೫] ಆದರೆ ಕಠಿಣ ಹವಾಮಾನವು ಪಶ್ಚಿಮದ ಹಿಜಾಝ್‌ನಲ್ಲಿರುವ ಮಕ್ಕಾ ಮತ್ತು ಮದೀನಾದಂತಹ ಸಣ್ಣ ನಗರಗಳ ವಾಸಸ್ಥಳಗಳನ್ನು ಹೊರತುಪಡಿಸಿ, ಪರ್ಯಾಯ ದ್ವೀಪದ ಇತರ ಭಾಗಗಳಲ್ಲಿ ಜನರ ವಾಸವನ್ನು ತಡೆಯುತ್ತಿತ್ತು.[೧೬]

ಪುರಾತತ್ತ್ವ ಶಾಸ್ತ್ರವು ಇಸ್ಲಾಮಿಕ್-ಪೂರ್ವ ಅರೇಬಿಯಾದಲ್ಲಿ — ವಿಶೇಷವಾಗಿ ದಕ್ಷಿಣ ಅರೇಬಿಯಾದಲ್ಲಿ — ಸಮೂದ್‌ ಮುಂತಾದ ಅನೇಕ ನಾಗರಿಕತೆಗಳ ಅಸ್ತಿತ್ವವಿತ್ತೆಂದು ಸಂಶೋಧಿಸಿದೆ.[೧೭] ದಕ್ಷಿಣ ಅರೇಬಿಯನ್ ನಾಗರೀಕತೆಗಳಲ್ಲಿ ಸಬಾ, ಹಿಮ್ಯರಿ ಸಾಮ್ರಾಜ್ಯ, ಔಸಾನ್ ಸಾಮ್ರಾಜ್ಯ, ಮಾಇನ್ ಸಾಮ್ರಾಜ್ಯ ಮತ್ತು ಸೇಬಿಯನ್ ಸಾಮ್ರಾಜ್ಯಗಳು ಸೇರಿವೆ. ಕ್ರಿ.ಶ. 106 ರಿಂದ 630 ರವರೆಗೆ ವಾಯುವ್ಯ ಅರೇಬಿಯಾವು ರೋಮನ್ ಸಾಮ್ರಾಜ್ಯದ ನಿಯಂತ್ರಣದಲ್ಲಿತ್ತು. ಅವರು ಅದನ್ನು ಅರೇಬಿಯಾ ಪೆಟ್ರಿಯಾ ಎಂದು ಕರೆಯುತ್ತಿದ್ದರು.[೧೮] ಮಧ್ಯ ಅರೇಬಿಯಾವು 4 ನೇ ಶತಮಾನದಿಂದ 6 ನೇ ಶತಮಾನದ ಆರಂಭದವರೆಗೆ ಕಿಂದ ಸಾಮ್ರಾಜ್ಯದ ಪ್ರದೇಶವಾಗಿತ್ತು. ಪೂರ್ವ ಅರೇಬಿಯಾ ದಿಲ್ಮುನ್ ನಾಗರಿಕತೆಯ ನೆಲೆಯಾಗಿತ್ತು.[೧೯]

ಅರೇಬಿಯನ್ ಪರ್ಯಾಯ ದ್ವೀಪವನ್ನು ಬಹುಪಾಲು ವಿದ್ವಾಂಸರು ಸೆಮಿಟಿಕ್ ಭಾಷೆಗಳ ಮೂಲ ನೆಲೆಯೆಂದು ಬಹಳ ಹಿಂದಿನಿಂದಲೇ ಒಪ್ಪಿಕೊಂಡಿದ್ದಾರೆ.[೨೦][೨೧][೨೨]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ Nijim, Basheer K. "Arabia: Peninsula, Asia". britannica.com. Retrieved 27-02-2023. {{cite web}}: Check date values in: |access-date= (help)
  2. McColl, R. W. (2014-05-14). Encyclopedia of World Geography (in English). Infobase Publishing. ISBN 9780816072293.{{cite book}}: CS1 maint: unrecognized language (link)
  3. Cohen, Saul Bernard (2003). Geopolitics of the World System. Rowman & Littlefield. p. 337. ISBN 9780847699070.
  4. Zaken, Ministerie van Buitenlandse (2017-05-14). "Kingdom of Saudi Arabia – Doing business in the Gulf region – netherlandsworldwide.nl". www.netherlandsworldwide.nl (in English). Archived from the original on 11 May 2021. Retrieved 2021-02-19.{{cite web}}: CS1 maint: unrecognized language (link)
  5. Hopkins, Daniel J.; Staff, Merriam-Webster (2001). Merriam Webster's Geographical Dictionary (3rd ed.). Merriam-Webster. p. 61. ISBN 978-0877795469.
  6. Ibn al-Faqih (c. 903). Mukhtasar Kitab al-Buldan (in Arabic). Archived from the original on 20 April 2021. Retrieved 20 April 2021.{{cite book}}: CS1 maint: unrecognized language (link)
  7. Salibi, Kamal Suleiman (1988). A House of Many Mansions: The History of Lebanon Reconsidered. University of California Press. pp. 60–61. ISBN 978-0-520-07196-4.
  8. Weinstein, Y. (1 January 2007). "A transition from strombolian to phreatomagmatic activity induced by a lava flow damming water in a valley". Journal of Volcanology and Geothermal Research. 159 (1–3): 267–284. Bibcode:2007JVGR..159..267W. doi:10.1016/j.jvolgeores.2006.06.015.
  9. A.S. Alsharhan, Z. A. Rizk, A. E. M. Nairn [et al.], 2001, Waterology of an Arid Region, Elsevier.
  10. Roberts, Patrick; Stewart, Mathew; Alagaili, Abdulaziz N.; Breeze, Paul; Candy, Ian; Drake, Nick; Groucutt, Huw S.; Scerri, Eleanor M. L.; Lee-Thorp, Julia; Louys, Julien; Zalmout, Iyad S.; Al-Mufarreh, Yahya S. A.; Zech, Jana; Alsharekh, Abdullah M.; al Omari, Abdulaziz; Boivin, Nicole; Petraglia, Michael (29 October 2018). "Fossil herbivore stable isotopes reveal middle Pleistocene hominin palaeoenvironment in 'Green Arabia'". Nature Ecology & Evolution. Nature. 2 (12): 1871–1878. doi:10.1038/s41559-018-0698-9. hdl:10072/382068. PMID 30374171. S2CID 53099270. Archived from the original on 14 June 2020. Retrieved 1 November 2018.
  11. "Saudi Arabia's Qassim stone axe find points to prehistoric 'crossroads'". Arab News. 2 January 2021.
  12. Scerri, Eleanor M. L.; Shipton, Ceri; Clark-Balzan, Laine; Frouin, Marine; Schwenninger, Jean-Luc; Groucutt, Huw S.; Breeze, Paul S.; Parton, Ash; Blinkhorn, James; Drake, Nick A.; Jennings, Richard; Cuthbertson, Patrick; Al Omari, Abdulaziz; Alsharekh, Abdullah M.; Petraglia, Michael D. (29 November 2018). "The expansion of later Acheulean hominins into the Arabian Peninsula". Scientific Reports. 8 (1): 17165. Bibcode:2018NatSR...817165S. doi:10.1038/s41598-018-35242-5. PMC 6265249. PMID 30498259.
  13. Uerpmann, Hans-Peter; Usik, Vitaly I.; Parker, Adrian G.; Marks, Anthony E.; Jasim, Sabah A.; Armitage, Simon J. (2011-01-28). "The Southern Route "Out of Africa": Evidence for an Early Expansion of Modern Humans into Arabia". Science (in ಇಂಗ್ಲಿಷ್). 331 (6016): 453–456. Bibcode:2011Sci...331..453A. doi:10.1126/science.1199113. ISSN 0036-8075. PMID 21273486. S2CID 20296624.
  14. "First human migration out of Africa more geographically widespread than previously thought". Eurek Alert. 9 April 2018. Archived from the original on 2 December 2018. Retrieved 1 November 2018.
  15. "Saudi Embassy (US) Website". Archived from the original on 2016-03-04. Retrieved 20 January 2011.
  16. Gordon, Matthew (2005). The Rise of Islam. p. 4. ISBN 978-0-313-32522-9.
  17. Robert D. Burrowes (2010). Historical Dictionary of Yemen. Rowman & Littlefield. p. 319. ISBN 978-0810855281.
  18. Taylor, Jane (2005). Petra. London: Aurum Press Ltd. pp. 25–31. ISBN 9957-451-04-9.
  19. Philip Khuri Hitti (2002), History of the Arabs, Revised: 10th Edition
  20. Gray, Louis Herbert (2006) Introduction to Semitic Comparative Linguistics
  21. Courtenay, James John (2009) The Language of Palestine and Adjacent Regions
  22. Bromiley, Geoffrey W. (1995) The International Standard Bible Encyclopedia