ಹಿಜರಿ ಕ್ಯಾಲೆಂಡರು

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಹಿಜರಿ ಕ್ಯಾಲೆಂಡರು ಅಥವಾ ಇಸ್ಲಾಮಿ ಕ್ಯಾಲೆಂಡರು ೩೫೪ ಅಥವಾ ೩೫೫ ದಿನಗಳ ಒಂದು ವರ್ಷದಲ್ಲಿ ೧೨ ಚಾಂದ್ರಮಾಸಗಳನ್ನು ಹೊಂದಿರುವ ಒಂದು ಚಾಂದ್ರಮಾನ ಕ್ಯಾಲೆಂಡರಾಗಿದೆ. ವಾರ್ಷಿಕ ಉಪವಾಸದ ಅವಧಿ ಮತ್ತು ಮಕ್ಕಾಗೆ ಯಾತ್ರೆಮಾಡುವ ಸರಿಯಾದ ಸಮಯದಂತಹ ಇಸ್ಲಾಮೀ ರಜಾದಿನಗಳು ಮತ್ತು ಕ್ರಿಯಾವಿಧಿಗಳ ಸರಿಯಾದ ದಿನಗಳನ್ನು ನಿರ್ಧರಿಸಲು ಇದನ್ನು ಬಳಸಲಾಗುತ್ತದೆ. ಗ್ರೆಗೋರಿಯನ್ ಕ್ಯಾಲೆಂಡರ್ ಮುಸ್ಲಿಮ್ ಧರ್ಮವು ಪ್ರಧಾನ ಧರ್ಮವಾಗಿರುವ ಬಹುತೇಕ ಎಲ್ಲ ದೇಶಗಳ ನಾಗರಿಕ ಕ್ಯಾಲೆಂಡರಾಗಿದೆ. ಸೌರಮಾನ ಹಿಜರಿ ಕ್ಯಾಲೆಂಡರನ್ನು ಬಳಸುವ ಇರಾನ್ ಮತ್ತು ಅಫ಼್ಘಾನಿಸ್ತಾನ್ ಈ ನಿಯಮಕ್ಕೆ ಗಮನಾರ್ಹ ಅಪವಾದಗಳಾಗಿವೆ. ಬಾಡಿಗೆಗಳು, ವೇತನಗಳು ಮತ್ತು ಹೋಲುವ ನಿಯಮಿತ ಬಾಧ್ಯತೆಗಳನ್ನು ಸಾಮಾನ್ಯವಾಗಿ ನಾಗರಿಕ ಕ್ಯಾಲೆಂಡರಿಗೆ ಅನುಗುಣವಾಗಿ ಪಾವತಿಸಲಾಗುತ್ತದೆ.

ಹಿಜರಿ ಕ್ಯಾಲೆಂಡರು ಹಿಜರಿ ಶಕೆಯನ್ನು ಬಳಸುತ್ತದೆ. ಇದರ ಯುಗಾರಂಭವನ್ನು ಇಸ್ಲಾಮೀ ಹೊಸವರ್ಷವಾದ ಕ್ರಿ.ಶ. ೬೨೨ ಎಂದು ಸ್ಥಾಪಿಸಲಾಯಿತು.[೧] ಆ ವರ್ಷ, ಮುಹಮ್ಮದ್ ಮತ್ತು ಅವನ ಅನುಯಾಯಿಗಳು ಮೆಕ್ಕಾದಿಂದ ಯಾತ್ರಿಬ್‍ಗೆ ವಲಸೆ ಹೋಗಿ ಮೊದಲ ಮುಸ್ಲಿಮ್ ಸಮುದಾಯವನ್ನು (ಉಮ್ಮಾ) ಸ್ಥಾಪಿಸಿದರು. ಈ ಘಟನೆಯನ್ನು ಹಿಜರಾ ಎಂದು ಸ್ಮರಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. The Beginning of Hijri calendar – Paul Lunde, Saudi Aramco World Magazine (November/December 2005), retrieved 1/1/2019