ಕಂದಕ
ಗೋಚರ
ಕಂದಕವು ಸಾಮಾನ್ಯವಾಗಿ (ಹೆಚ್ಚು ಅಗಲದ ಕಮರಿ ಅಥವಾ ಅಗಳಿಗೆ ವಿರುದ್ಧವಾಗಿ) ಅಗಲಕ್ಕಿಂತ ಹೆಚ್ಚು ಆಳವಾಗಿರುವ, ಅದರ ಉದ್ದಕ್ಕೆ ಹೋಲಿಸಿದರೆ ಕಿರಿದಾದ ನೆಲದಲ್ಲಿನ ಒಂದು ಬಗೆಯ ಅಗೆಯುವಿಕೆ ಅಥವಾ ತಗ್ಗು.[೧]
ಭೂವಿಜ್ಞಾನದಲ್ಲಿ, ಕಂದಕಗಳು ನದಿಗಳಿಂದ ಭೂಸವೆತದ ಪರಿಣಾಮವಾಗಿ ಅಥವಾ ಭೂಮಿಯ ಹೊರಪದರಗಳ ಭೂವೈಜ್ಞಾನಿಕ ಚಲನೆಯಿಂದ ಸೃಷ್ಟಿಯಾಗುತ್ತವೆ. ನಾಗರಿಕ ಶಿಲ್ಪವಿಜ್ಞಾನ ಕ್ಷೇತ್ರದಲ್ಲಿ, ಕಂದಕಗಳನ್ನು ಹಲವುವೇಳೆ ನೆಲದಡಿಯ ಆಧಾರರಚನೆ ಅಥವಾ ಸೌಲಭ್ಯಗಳನ್ನು (ಉದಾ. ಅನಿಲ ಕೊಳವೆ, ನೀರು ಕೊಳವೆ, ದೂರವಾಣಿ ಮಾರ್ಗ) ಸ್ಥಾಪಿಸಲು, ಅಥವಾ ನಂತರ ಈ ಸ್ಥಾಪನೆಗಳನ್ನು ಸಮೀಪಿಸಲು ಸೃಷ್ಟಿಸಲಾಗುತ್ತದೆ. ಕಂದಕಗಳನ್ನು ಹಲವುವೇಳೆ ಮಿಲಿಟರಿ ರಕ್ಷಣಾತ್ಮಕ ಉದ್ದೇಶಗಳಿಗಾಗಿಯೂ ತೋಡಲಾಗಿದೆ. ಪುರಾತತ್ವ ಶಾಸ್ತ್ರದಲ್ಲಿ, "ಕಂದಕ ವಿಧಾನ"ವನ್ನು ಪ್ರಾಚೀನ ಅವಶೇಷಗಳನ್ನು ಹುಡುಕಲು ಮತ್ತು ಉತ್ಖನನ ಮಾಡಲು ಅಥವಾ ಗೋಡು ವಸ್ತುವಿನ ಸ್ತರಗಳೊಳಗೆ ಅಗೆಯಲು ಬಳಸಲಾಗುತ್ತದೆ.
ಉಲ್ಲೇಖಗಳು
[ಬದಲಾಯಿಸಿ]