ವಿಷಯಕ್ಕೆ ಹೋಗು

ಜಬಲ್ ನೂರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಬಲ್ ನೂರ್
Highest point
ಎತ್ತರ642 m (2,106 ft)
Naming
ಸ್ಥಳೀಯ ಹೆಸರುجبل النور

ಜಬಲ್ ನೂರ್ (ಅರೇಬಿಕ್ جبل النور ಜಬಲುನ್ನೂರ್) ಪ್ರವಾದಿ ಮುಹಮ್ಮದ್‌ರಿಗೆ ಮೊತ್ತಮೊದಲು ದೇವವಾಣಿ ಅವತೀರ್ಣವಾಯಿತೆಂದು ನಂಬಲಾಗುವ ಪರ್ವತ.

ಜಬಲ್ ನೂರ್ (ಅರ್ಥ: ಬೆಳಕಿನ ಪರ್ವತ) ಮಕ್ಕಾ ಮಹಾ ಮಸೀದಿಯ ಈಶಾನ್ಯ ದಿಕ್ಕಿನಲ್ಲಿದೆ. ಇದು ಮಕ್ಕಾದಿಂದ ಮೂರು ಮೈಲು ದೂರದಲ್ಲಿದೆ. ಮುಸಲ್ಮಾನರ ನಂಬಿಕೆಯ ಪ್ರಕಾರ ಮುಹಮ್ಮದ್‌ರಿಗೆ ಈ ಪರ್ವತದ ಹಿರಾ ಗುಹೆಯಲ್ಲಿ ದೇವವಾಣಿಯು ಮೊತ್ತಮೊದಲು ಅವತೀರ್ಣವಾಯಿತು.[೧]

ವಿನ್ಯಾಸ

[ಬದಲಾಯಿಸಿ]

ಈ ಪರ್ವತವು 642 ಮೀಟರ್ (2,106 ಅಡಿ) ಎತ್ತರವಿದೆ. ಇದು 380 ಮೀಟರ್‌ನಿಂದ 500 ಮೀಟರ್ ಎತ್ತರದವರೆಗೆ ಕಡಿದಾಗಿದ್ದು, ನಂತರ ಪರ್ವತದ ತುದಿಯವರೆಗೆ ಲಂಬವಾಗಿದೆ. ಇದು 5,250 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದ್ದು, ಇದರ ತುದಿಯು ಗುಮ್ಮಟದಂತೆ ಅಥವಾ ಒಂಟೆಯ ಡುಬ್ಬದಂತೆ ಕಾಣುತ್ತದೆ.

ಹಿರಾ ಗುಹೆ

[ಬದಲಾಯಿಸಿ]
ಜಬಲ್ ನೂರ್ ಪರ್ವತದಲ್ಲಿರುವ ಹಿರಾ ಗುಹೆ

ಹಿರಾ ಈ ಪರ್ವತದಲ್ಲಿರುವ ಸಣ್ಣ ಗುಹೆ. ಈ ಗುಹೆಯಲ್ಲಿ ಮುಹಮ್ಮದ್ ಧ್ಯಾನ ನಿರತರಾಗುತ್ತಿದ್ದರು ಮತ್ತು ದೇವದೂತ ಗೇಬ್ರಿಯಲ್ ಈ ಗುಹೆಯಲ್ಲಿ ಪ್ರತ್ಯಕ್ಷವಾಗಿ ಮುಹಮ್ಮದ್‌ರಿಗೆ ಮೊತ್ತಮೊದಲ ದೇವವಾಣಿಯನ್ನು ತಲುಪಿಸಿದರು ಎಂದು ಮುಸಲ್ಮಾನರು ನಂಬುತ್ತಾರೆ. ಈ ಗುಹೆಯು ಪರ್ವತದ ಉತ್ತರ ದಿಕ್ಕಿನಲ್ಲಿದ್ದು, 3.7 ಮೀಟರ್ (12 ಅಡಿ) ಉದ್ದ ಮತ್ತು 1.6 ಮೀಟರ್ (5 ಕಾಲು ಅಡಿ) ಅಗಲವಾಗಿದೆ. ಒಮ್ಮೆಗೆ ಐದು ಜನರು ಇದರೊಳಗೆ ಕೂರಬಹುದು. ಇದೊಂದು ಪ್ರವಾಸಿ ತಾಣವಾಗಿದ್ದು ಹಜ್ಜ್ ಸಮಯದಲ್ಲಿ ದಿನನಿತ್ಯ 5,000 ಯಾತ್ರಾರ್ಥಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ.

ಇದನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. The Encyclopaedia of Islam, E.J. Brill, 1986, vol. 3 p.462