ವಿಷಯಕ್ಕೆ ಹೋಗು

ಅಬೂ ತಾಲಿಬ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಅಬೂತಾಲಿಬ್ ಇಂದ ಪುನರ್ನಿರ್ದೇಶಿತ)
ಅಬೂ ತಾಲಿಬ್
أبو طالب
ಕುರೈಷ್ ಬುಡಕಟ್ಟಿಗೆ ಸೇರಿದ ಬನೂ ಹಾಶಿಂ ಗೋತ್ರದ ಮುಖಂಡರು
ಮುಖಂಡತ್ವ ಕ್ರಿ.ಶ. 578–619
ಪೂರ್ವಾಧಿಕಾರಿ ಅಬ್ದುಲ್ ಮುತ್ತಲಿಬ್ ಬಿನ್ ಹಾಶಿಂ
ಉತ್ತರಾಧಿಕಾರಿ ಅಬೂ ಲಹಬ್ ಬಿನ್ ಅಬ್ದುಲ್ ಮುತ್ತಲಿಬ್
ಗೋತ್ರ ಬನೂ ಹಾಶಿಂ
ತಂದೆ ಅಬ್ದುಲ್ ಮುತ್ತಲಿಬ್ ಬಿನ್ ಹಾಶಿಂ
ತಾಯಿ ಫಾತಿಮ ಬಿಂತ್ ಅಮ್ರ್
ಜನನ ಕ್ರಿ.ಶ. 535
ಮಕ್ಕಾ, ಅರೇಬಿಯನ್ ಪರ್ಯಾಯ ದ್ವೀಪ [ಈಗಿನ ಮಕ್ಕಾ, ಸೌದಿ ಅರೇಬಿಯಾ]
ಮರಣ ಕ್ರಿ.ಶ. 619
ಮಕ್ಕಾ, ಅರೇಬಿಯನ್ ಪರ್ಯಾಯ ದ್ವೀಪ [ಈಗಿನ ಮಕ್ಕಾ, ಸೌದಿ ಅರೇಬಿಯಾ]
Burial ಜನ್ನತುಲ್ ಮುಅಲ್ಲಾ, ಮಕ್ಕಾ

ಅಬೂ ತಾಲಿಬ್ ಬಿನ್ ಅಬ್ದುಲ್ ಮುತ್ತಲಿಬ್ (ಅರಬ್ಬಿ: أبو طالب بن عبد المطلب) (c. 535–619) — ಕುರೈಷ್ ಬುಡಕಟ್ಟಿಗೆ ಸೇರಿದ ಬನೂ ಹಾಶಿಂ ಗೋತ್ರದ ಮುಖಂಡರು ಮತ್ತು ಮುಹಮ್ಮದ್ ಪೈಗಂಬರರ ತಂದೆಯ ಸಹೋದರ. ನಾಲ್ಕನೆಯ ಇಸ್ಲಾಮಿಕ್ ಖಲೀಫ ಮತ್ತು ಶಿಯಾ ಮುಸ್ಲಿಮರ ಪರಮೋಚ್ಛ ನಾಯಕ ಅಲಿ ಬಿನ್ ಅಬೂ ತಾಲಿಬ್‌ರ ತಂದೆ. ಇವರ ನಿಜವಾದ ಹೆಸರು ಅಬ್ದ್ ಮನಾಫ್. ಇವರು ತಮ್ಮ ತಂದೆಯ ಮರಣಾನಂತರ ಸಿಕಾಯ ಮತ್ತು ರಿಫಾದ (ಯಾತ್ರಾರ್ಥಿಗಳಿಗೆ ಆಹಾರ ಪಾನೀಯಗಳನ್ನು ಸರಬರಾಜು ಮಾಡುವ ಉದ್ಯೋಗ) ವನ್ನು ಪಡೆದುಕೊಂಡರು ಎಂದು ಹೇಳಲಾಗುತ್ತದೆ. ಆದರೆ ಹಿಲ್ಫುಲ್ ಫುದೂಲ್ ಮತ್ತು ಫಿಜಾರ್ ಯುದ್ಧ ಸಂದರ್ಭ ಅವರ ಸಹೋದರ ಝುಬೈರ್ ಬನೂ ಹಾಶಿಂ ಗೋತ್ರದ ಮುಂಚೂಣಿಯ ನಾಯಕರಾಗಿದ್ದರು ಎನ್ನಲಾಗುತ್ತದೆ. ಅಬೂ ತಾಲಿಬ್ ದೊಡ್ಡ ಮಟ್ಟದ ಸಾಲಕ್ಕೆ ಬಲಿಯಾದ ಕಾರಣ, ಸಿಕಾಯ ಮತ್ತು ರಿಫಾದ ಉದ್ಯೋಗವನ್ನು ಸಹೋದರ ಅಬ್ಬಾಸ್‌ರಿಗೆ ವಹಿಸಿಕೊಟ್ಟರು. ಆದರೂ ಅವರು ಬನೂ ಹಾಶಿಂ ಗೋತ್ರದ ಮುಖಂಡರಾಗಿಯೇ ಮುಂದುವರಿದರು. ಮಕ್ಕಾ ನಗರದಲ್ಲಿ ಅವರು ವಾಸಿಸುತ್ತಿದ್ದ ಪ್ರದೇಶವನ್ನು ಶಿಅಬ್ ಅಬೂ ತಾಲಿಬ್ ಎಂದು ಕರೆಯಲಾಗುತ್ತಿತ್ತು.[]

ಅಬ್ದುಲ್ ಮುತ್ತಲಿಬ್‌ರ ಮರಣಾನಂತರ ಮುಹಮ್ಮದ್‌ರನ್ನು ಸಾಕುವ ಹೊಣೆಯನ್ನು ಅಬೂ ತಾಲಿಬ್ ವಹಿಸಿಕೊಂಡರು.[] ಅವರು ಮುಹಮ್ಮದ್‌ರನ್ನು ವ್ಯಾಪಾರ ನಿಮಿತ್ತ ಸಿರಿಯಾಕ್ಕೂ ಕರೆದೊಯ್ದಿದ್ದರು. ಮುಹಮ್ಮದ್ ಪ್ರವಾದಿಯಾದಾಗ ಸಂಪೂರ್ಣ ಕುರೈಷ್ ಬುಡಕಟ್ಟು ಅವರ ವಿರುದ್ಧ ಸೆಟೆದು ನಿಂತಾದ ಅಬೂ ತಾಲಿಬ್ ಮುಹಮ್ಮದ್‌ರಿಗೆ ಬೆಂಗಾವಲಾಗಿ ನಿಂತರು. ಕುರೈಷರು ಬನೂ ಹಾಶಿಂ ಮತ್ತು ಬನೂ ಮುತ್ತಲಿಬ್ ಗೋತ್ರಗಳನ್ನು ಬಹಿಷ್ಕರಿಸಿದಾಗಲೂ ಅಬೂ ತಾಲಿಬ್ ಮುಹಮ್ಮದ್‌ರಿಗೆ ರಕ್ಷಣೆಯಾಗಿ ನಿಂತರು. ಕ್ರಿ.ಶ. 619 ರಲ್ಲಿ ಬಹಿಷ್ಕಾರ ಮುಕ್ತಾಯವಾದ ಕೆಲವೇ ತಿಂಗಳಲ್ಲಿ ಅವರು ಇಹಲೋಕಕ್ಕೆ ವಿದಾಯ ಕೋರಿದರು. ಅವರ ನಂತರ ಅವರ ಸಹೋದರ ಅಬೂ ಲಹಬ್ ಬನೂ ಹಾಶಿಂ ಗೋತ್ರದ ಮುಖಂಡರಾದರೆಂದು ಹೇಳಲಾಗುತ್ತದೆ. ಅವರ ಇಬ್ಬರು ಮಕ್ಕಳು ಅಲಿ ಮತ್ತು ಜಅಫರ್ ಇಸ್ಲಾಂ ಧರ್ಮವನ್ನು ಸ್ವೀಕರಿಸಿದ್ದರು. ಆದರೆ ಅಬೂ ತಾಲಿಬ್ ಇಸ್ಲಾಂಗೆ ಮತಾಂತರವಾಗದೆ ತಮ್ಮ ತಂದೆಯ ಧರ್ಮದಲ್ಲೇ ಕೊನೆಯುಸಿರೆಳೆದರು.[]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ The Encyclopaedia of Islam. Vol. 1. Brill. 1979. pp. 152–153. ISBN 9004081143.
  2. "Muhammad: Biography according to the Islamic tradition". Britannica.com. Retrieved 26-02-2023. {{cite web}}: Check date values in: |access-date= (help)