ಅಬ್ದುಲ್ ಮುತ್ತಲಿಬ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಬ್ದುಲ್ ಮುತ್ತಲಿಬ್
عبد المطلب
ಕುರೈಷ್ ಬುಡಕಟ್ಟಿನ ನಾಲ್ಕನೇ ಮುಖಂಡರು
ಮುಖಂಡತ್ವ ಕ್ರಿ.ಶ. 497–578
ಪೂರ್ವಾಧಿಕಾರಿ ಹಾಶಿಂ ಬಿನ್ ಅಬ್ದ್ ಮನಾಫ್
ಉತ್ತರಾಧಿಕಾರಿ ಅಬೂ ತಾಲಿಬ್ ಬಿನ್ ಅಬ್ದುಲ್ ಮುತ್ತಲಿಬ್
ಗೋತ್ರ ಬನೂ ಹಾಶಿಂ
ತಂದೆ ಹಾಶಿಂ ಬಿನ್ ಅಬ್ದ್ ಮನಾಫ್
ತಾಯಿ ಸಲ್ಮಾ ಬಿಂತ್ ಅಮ್ರ್
ಜನನ ಕ್ರಿ.ಶ. 497
ಯಸ್ರಿಬ್, ಅರೇಬಿಯನ್ ಪರ್ಯಾಯ ದ್ವೀಪ [ಈಗಿನ ಮದೀನಾ, ಸೌದಿ ಅರೇಬಿಯಾ]
ಮರಣ ಕ್ರಿ.ಶ. 578
ಮಕ್ಕಾ, ಅರೇಬಿಯನ್ ಪರ್ಯಾಯ ದ್ವೀಪ [ಈಗಿನ ಮಕ್ಕಾ, ಸೌದಿ ಅರೇಬಿಯಾ]
Burial ಜನ್ನತುಲ್ ಮುಅಲ್ಲಾ, ಮಕ್ಕಾ

ಅಬ್ದುಲ್ ಮುತ್ತಲಿಬ್ ಬಿನ್ ಹಾಶಿಂ (ಅರಬ್ಬಿ: عبد المطلب بن هاشم) (c. 497–578) — ಕುರೈಷ್ ಬುಡಕಟ್ಟಿನ ನಾಲ್ಕನೆಯ ಮುಖಂಡರು ಮತ್ತು ಮುಹಮ್ಮದ್ ಪೈಗಂಬರರ ಅಜ್ಜ (ತಂದೆಯ ತಂದೆ).[೧]

ಜನನ ಮತ್ತು ಬೆಳವಣಿಗೆ[ಬದಲಾಯಿಸಿ]

ಅಬ್ದುಲ್ ಮುತ್ತಲಿಬ್‌ರ ತಂದೆಯ ಹೆಸರು ಹಾಶಿಂ ಬಿನ್ ಅಬ್ದ್ ಮನಾಫ್. ಇವರು ಮಕ್ಕಾದ ಪ್ರತಿಷ್ಠಿತ ಕುರೈಷ್ ಬುಡಕಟ್ಟಿಗೆ ಸೇರಿದ ಬನೂ ಹಾಶಿಂ ಗೋತ್ರದ ಜನಕ. ಕುರೈಷ್ ಬುಡಕಟ್ಟು ಪ್ರವಾದಿ ಅಬ್ರಹಾಮರ ಮಗ ಇಷ್ಮಾಯೇಲರ ಸಂತತಿಯೆಂದು ಹೇಳಲಾಗುತ್ತದೆ. ಅವರ ತಾಯಿ ಸಲ್ಮಾ ಬಿಂತ್ ಅಮ್ರ್. ಇವರು ಯಸ್ರಿಬ್ (ಈಗಿನ ಮದೀನಾ) ನ ಖಝ್ರಜ್ ಬುಡಕಟ್ಟಿನ ಬನೂ ನಜ್ಜಾರ್ ಗೋತ್ರಕ್ಕೆ ಸೇರಿದವರು. ವ್ಯಾಪಾರ ನಿಮಿತ್ತ ಗಾಝಾಗೆ ಹೋಗಿದ್ದ ಹಾಶಿಂ ಅಲ್ಲೇ ಕೊನೆಯುಸಿರೆಳೆದರು. ಆಗಿನ್ನೂ ಅಬ್ದುಲ್ ಮುತ್ತಲಿಬ್ ಹುಟ್ಟಿರಲಿಲ್ಲ.

ಉಲ್ಲೇಖಗಳು[ಬದಲಾಯಿಸಿ]

  1. The Encyclopaedia of Islam. Vol. 1. Brill. 1979. p. 80. ISBN 9004081143.