ಅಲ್ಲಾಹ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಅರಬಿಕ್ ನಲ್ಲಿ ಅಲ್ಲಾಹ

ಅಲ್ಲಾಹ ಎಂಬ ಶಬ್ದವು ಅರೇಬಿಕ್ ಬಾಷೆಯಲ್ಲಿ ದೇವರನ್ನು ಸಂಕೇತಿಸುತ್ತದೆ. ಇದು ಇಸ್ಲಾಂ ಧರ್ಮೀಯರು ನಂಬುವ ಏಕಮಾತ್ರ ದೈವತ್ವ. ಅಂತೆಯೇ ಆ ಪ್ರದೇಶದ ಏಕದೇವ (monotheistic)ಧರ್ಮಗಳಲ್ಲಿ ಕೂಡಾ ಇದೇ ಶಬ್ದವನ್ನು ದೇವರ ಕುರಿತು ಉಪಯೋಗಿಸುತ್ತಾರೆ.

ಮೂಲ ಅರಬ್ಬೀ ಭಾಷೆಯ ಪದ ಅಲ್ ಇಲಾಹ್. ಇಸ್ಲಾಂ ಪೂರ್ವದಲ್ಲಿಯೇ ಈ ಪದ ಅರಬ್ಬರಲ್ಲಿ ಪ್ರಚಾರದಲ್ಲಿತ್ತು. ಅವರು ಪೂಜಿಸುತ್ತಿದ್ದ ಮೂರ್ತಿಗಳಲ್ಲಿ ಅಲ್ಲನ ಮೂರ್ತಿಯೇ ಪ್ರಮುಖ ವಾಗಿತ್ತು. ಇಸ್ಲಾಂ ಧರ್ಮ ಬಂದ ಮೇಲೆ ಈ ಪದಕ್ಕೆ ವಿಶಾಲವಾದ ಅರ್ಥ ಬಂತು. ಮುಸಲ್ಮಾನರಲ್ಲದೆ ಅರಬ್ಬೀ ಮಾತನಾಡುವ ಕ್ರಿಶ್ಚಿಯನ್ ದೇಶಗಳಲ್ಲೂ ಈ ಪದ ಬಳಕೆಯಲ್ಲಿದೆ.

ಅಯತುಲ್ ಕುರ್ಸಿ:[ಬದಲಾಯಿಸಿ]

ಅಲ್ಲಾಹ್ ಚಿರಂತನು, ಸ್ವಯಂಜೀವಂತನು, ಅಖಿಲ ಪ್ರಪಂಚದ ನಿಯಂತ್ರಕನಾದ ಆತನ ಹೊರತು ಆರಾಧ್ಯನಾರೂ ಇಲ್ಲ. ಅವನಿಗೆ ತೂಕಡಿಕೆಯಾಗಲೀ ನಿದ್ರೆ ಯಾಗಲೀ ಬಾಧಿಸುವುದಿಲ್ಲ. ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿ ಇರುವುದೆಲ್ಲವೂ ಆತನದೇ. ಆತನ ಸನ್ನಿಧಿಯಲ್ಲಿ ಆತನ ಅಪ್ಪಣೆಯಿಲ್ಲದೆ ಶಿಫಾರಸು ಮಾಡ ತಕ್ಕವ ನಾರಿದ್ದಾನೆ? ದಾಸರ ಮುಂದಿರುವುದನ್ನೂ ಆತನು ಬಲ್ಲನು. ಅವರಿಂದ ಮರೆಯಾಗಿರುವುದನ್ನೂ ಆತನು ಬಲ್ಲನು. ಆತನು ಸ್ವತಃ ತಿಳಿಯಗೊಡಿಸುವ ಹೊರತು ಆತನ ಜ್ಞಾನ ಭಂಡಾರದಿಂದ ಯಾವ ವಿಷಯವನ್ನೂ ಅವರು ತಿಳಿಯಲಾರರು. ಅವನ ಅಧಿಕಾರವು ಆಕಾಶಗಳನ್ನೂ ಭೂಮಿಯನ್ನೂ ವ್ಯಾಪಿಸಿದೆ. ಅವುಗಳ ಸಂರಕ್ಷಣೆಯು ಆತನಿಗೆ ದಣಿಸುವಂತ ಕಾರ್ಯವಲ್ಲ. ಅವನು ಏಕೈಕ ಮಹೋನ್ನತನೂ ಸರ್ವ ಶ್ರೇಷ್ಠನೂ ಆಗಿರುತ್ತಾನೆ. [ಕುರಾನ್: 2: 255]

ಅಲ್ಲಾಹು ಯಾರು?:[ಬದಲಾಯಿಸಿ]

1. [ಓ ಪ್ರವಾದಿಯವರೇ!] ಹೇಳಿರಿ: 'ಅವನು ಅಲ್ಲಾಹು! ಏಕಮೇವನಾಗಿರುವನು.

2. ಅಲ್ಲಾಹು ಸರ್ವರಿಗೂ ಆಶ್ರಯದಾತನಾಗಿರುವನು.

3. ಅವನು (ಯಾರಿಗೂ) ಜನ್ಮವನ್ನು ನೀಡಿಲ್ಲ. ಅವನು (ಯಾರದೇ ಸಂತತಿಯಾಗಿ) ಜನಿಸಿದವನೂ ಅಲ್ಲ.

4. ಅವನಿಗೆ ಸರಿಸಾಟಿಯಾಗಿ ಯಾರೂ ಇಲ್ಲ.

[ಕುರಾನ್: 112: 1-4]

ಅಸ್ಮಾಹುಲ್ ಹುಸ್ನ [ಅಲ್ಲಾಹನ 99 ಹೆಸರುಗಳು]:[ಬದಲಾಯಿಸಿ]

1. ಅರ್ರಹ್ಮಾನ್

2. ಅರ್ರಹೀಮ್

3. ಅಲ್-ಮಲಿಕ್

4. ಅಲ್-ಕುದ್ದೂಸ್

5. ಅಸ್ಸಲಾಮ್

6. ಅಲ್-ಮುಹ್ ಮಿನ್

7. ಅಲ್-ಮುಹೈ ಮಿನ್

8. ಅಲ್-ಅಝೀಝ್

9. ಅಲ್-ಜಬ್ಬಾರ್

10. ಅಲ್-ಮುತಕಬ್ಬಿರ್

ಅಲ್ಲಾಹನ 99 ಹೆಸರುಗಳಿಗೆ ಈ Link ಉಪಯೋಗಿಸಿ (ಇದರಲ್ಲಿ 99 ಹೆಸರುಗಳು ಪೂರ್ತಿ ಇದೆ) ಅಸ್ಮಾಹುಲ್ ಹುಸ್ನ / ಅಲ್ಲಾಹನ 99 ಹೆಸರುಗಳು

"http://kn.wikipedia.org/w/index.php?title=ಅಲ್ಲಾಹ&oldid=512880" ಇಂದ ಪಡೆಯಲ್ಪಟ್ಟಿದೆ