ಅಲ್ ಅಸ್ಮಾಉಲ್ ಹುಸ್ನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ಸುಂದರವಾದ ನಾಮಗಳು ಅಲ್ಲಾಹನದ್ದಾಗಿವೆ. ಆದ್ದರಿಂದ ಅವುಗಳೊಂದಿಗೆ ಅವನನ್ನು ಕರೆಯಿರಿ" [ಕುರಾನ್: 7: 180]. ಇನ್ನೊಂದು ಕಡೆ ಅಲ್ಲಾಹು ಹೇಳುತ್ತಾನೆ: "ಅಲ್ಲಾಹ್, ಅವನಲ್ಲದೆ ಆರಾಧಿಸಲರ್ಹರಾದವರು ಯಾರೂ ಇಲ್ಲ. ಅವನಿಗೆ ಸುಂದರವಾದ ಸಾಮಗಳಿವೆ" [ಕುರಾನ್: 20: 8]. "ಹೇಳು, ಅಲ್ಲಾಹನು ಕರೆಯಿರಿ ಅಥವಾ ಅರಹ್ಮಾನ್ ನನ್ನು ಕರೆಯಿರಿ. ನೀವು ಯಾರನ್ನು ಕರೆದರೂ ಅವನಿಗೆ ಸುಂದರವಾದ ನಾಮಗಳಿವೆ" [ಕುರಾನ್: 17: 110]. ಅವನು ಅಲ್ಲಾಹನು. ಅವನಲ್ಲದೆ ಆರಾಧಿಸಲರ್ಹರು ಯಾರೂ ಇಲ್ಲ. ಅವನು ಅರಹ್ಮಾನ್ ಮತ್ತು ಅರಹೀಮ್ ಆಗಿದ್ದಾನೆ. ಅವನು ಅಲ್ಲಾಹನು. ಅವನಲ್ಲದೆ ಆರಾಧಿಸಲರ್ಹರಾದವರು ಯಾರೂ ಇಲ್ಲ. ಅವನು ಅಲ್ ಮಲಿಕ್, ಅಲ್ ಕುದ್ದೂಸ್, ಅಸ್ಸಲಾಮ್, ಅಲ್ ಮುಹ್ಮಿನ್, ಅಲ್ ಮುಹೈಮಿನ್, ಅಲ್ ಅಝೀಝ್, ಅಲ್ ಜಬ್ಬಾರ್, ಅಲ್ ಮತಕಬ್ಬಿರ್ ಆಗಿದ್ದಾನೆ. ನೀವು ಸಹಭಾಗಿಗಳನ್ನು ಉಂಟುಮಾಡುವುದರಿಂದ ಅಲ್ಲಾಹನು ಪರಮ ಪಾವನನಾಗಿದ್ದಾನೆ. ಅವನಾಗಿದ್ದಾನೆ ಅಲ್ಲಾಹ್, ಅಲ್ ಖಾಲಿಕ್, ಅಲ್ ಬಾರಿಹ್, ಅಲ್ ಮುಸವ್ವಿರ್. ಅವನಿಗೆ ಸುಂದರವಾದ ನಾಮಗಳಿವೆ. ಆಕಾಶಗಳಲ್ಲಿ ಮತ್ತು ಭುಮಿಯಲ್ಲಿರುವವರು ಅವನ ಪರಿಪಾವನತೆಯನ್ನುಕೊಂಡಾಡುತ್ತಾರೆ. ಅವನು ಅಲ್ ಅಝೀಝ್ ಮತ್ತು ಅಲ್ ಹಕೀಮ್ ಆಗಿದ್ದಾನೆ". [ಕುರಾನ್: 59: 22-24]