ವಿಷಯಕ್ಕೆ ಹೋಗು

ಗೀತಾ ದತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Geeta
ಹಿನ್ನೆಲೆ ಮಾಹಿತಿ
ಜನ್ಮನಾಮGeeta Ghosh Roy Chowdhury
ಅಡ್ಡಹೆಸರುGeeta Dutt
ಜನನ(೧೯೩೦-೧೧-೨೩)೨೩ ನವೆಂಬರ್ ೧೯೩೦
Faridpur, British India
ಮರಣJuly 20, 1972(1972-07-20) (aged 41)
ಸಂಗೀತ ಶೈಲಿplayback singing
ವಾದ್ಯಗಳುVocalist
ಸಕ್ರಿಯ ವರ್ಷಗಳು1946–1971
ಅಧೀಕೃತ ಜಾಲತಾಣhttp://www.geetadutt.com/

(ನವೆಂಬರ್ ೨೩, ೧೯೩೦-ಜುಲೈ ೨೦, ೧೯೭೨)

'ಗೀತಾದತ್' ಸನ್.೧೯೩೦ ರಲ್ಲಿ ಒಬ್ಬ ಹಣವಂತ-ಜಮೀನ್ದಾರರ ಮನೆಯಲ್ಲಿ ಜನಿಸಿದರು. ಅವರ ಬಾಲ್ಯದ ಹೆಸರು, ಗೀತಾ ಘೋಷ್ ರಾಯ್ ಚೌಧರಿ ಫರಿದ್ ಪುರ್ (ಆಗ ಈ ಊರು ಈಗಿನ ಬಂಗ್ಲಾದೇಶದಲ್ಲಿತ್ತು) ೧೯೪೨ ರಲ್ಲಿ, ಗೀತ ೧೨ ವರ್ಷದವರಿದ್ದಾಗ, ಪರಿವಾರ ಬೊಂಬಾಯಿನ ದಾದರ್ ಜಾಗಕ್ಕೆ ಬಂದು ನೆಲೆಸಿದರು. ಗೀತರವರ ಹಾಡುಗಳನ್ನು ಆಲಿಸಿದ,ಆಗಿನ ಕಾಲದ ಸಂಗೀತ ರಚನಾಕಾರ,ಹನುಮಾನ್ ಪ್ರಸಾದ್ ರವರು, ಬಹಳವಾಗಿ ಮೆಚ್ಚಿಕೊಂಡರು. ಹಾಡುಗಾರಿಕೆಯಲ್ಲಿ, ಮುಂದೆ ಸರಿಯಾದ ತಾಲೀಮ್ ಕೊಡಲು ಆಶ್ವಾಸನೆಯನ್ನಿತ್ತರು. ೧೯೪೬ ರಲ್ಲಿ ಭಕ್ತ ಪ್ರಹ್ಲಾದ್ ಸಮೂಹಗೀತೆಯನ್ನು ಹಾಡಲು ಪ್ರೋತ್ಸಾಹಿಸಿದರು. ಗೀತ ಆಗ ಹಾಡಿದ್ದು ಕೇವಲ ೨ ಸಾಲುಗಳನ್ನು ಮಾತ್ರ. ಆದರೆ ಅವು ಅಲ್ಲಿನ, ಭಕ್ತಜನರನ್ನು ಸಂತೋಷಗೊಳಿಸಿದವು.

ದೊ ಭಾಯಿ ಚಿತ್ರದ ಹಿನ್ನೆಲೆಗಾಯಕಿಯಾಗಿ, ಪಾದಾರ್ಪಣೆ

[ಬದಲಾಯಿಸಿ]

ಇದಾದ ಕೆಲವೇ ದಿನಗಳಲ್ಲಿ,ದೊ ಭಾಯಿ ಚಿತ್ರದಲ್ಲಿ ಹಿಂಬದಿ ಗಾಯಕಿಯಾಗಿ, ಹಾಡಲು ಅವಕಾಶದ ಕರೆ ಬಂತು. ಆ ಹಾಡುಗಳನ್ನು ಕೇಳಿದ ಪ್ರೇಕ್ಷಕರು, ಅವರನ್ನು ಉತ್ತಮ ಹಿಂಬದಿ-ಗಾಯಕಿಯಾಗಿ ಒಪ್ಪಿಕೊಂಡರು. ಗೀಗೆ ಮುಂದುವರೆದ ಗೀತ, ಮತ್ತೆ ಹಿಂದಿರುಗಿ ನೋಡಲಿಲ್ಲ.ಮೊದಲು ಅವರು ಭಜನ್, ಕೆಲವು, ಶೋಕಗೀತೆಗಳು, ವಿರಹ ಗೀತೆಗಳನ್ನು ಹಾಡುತ್ತಿದ್ದರು.

'ಕ್ಲಬ್ ಸಾಂಗ್ಸ್ಗ್' ಮತ್ತು 'ಡ್ಯಾನ್ಸ್ ಸೀಕ್ವೆನ್ಸ್' ಗೆ ತಕ್ಕ ಕಂಠದಾನ

[ಬದಲಾಯಿಸಿ]

ಎಸ್.ಡಿ.ಬರ್ಮನ್ ದ ೧೯೫೧ ರ ಜಾಸ್ ಸಂಗೀತಕ್ಕೆ ಕರೆದಾಗ,ಬಾಝಿ ಚಿತ್ರದಲ್ಲಿ ಒಂದು ಹೊಸತನವನ್ನು ತಂದರು. ಪಾಶ್ಚಿಮಾತ್ಯ ಸಂಗೀತದ ಶೈಲಿಯಲ್ಲಿ ಪ್ರಣಯ-ಮಯ ಗೀತೆಗಳು ರಸಿಕರ ಮನಸ್ಸಿನಲ್ಲಿ ಪ್ರೀತಿಯ ಅಮಲನ್ನು ತೋರಿಸಿದ್ದವು. ೧೯೫೦ ರ ನಂತರ 'ಕ್ಲಬ್ ಸಾಂಗ್' ಮತ್ತು 'ಡಾನ್ಸ್' ಗಳಿಗೆ ಗೀತರವರ ಕಂಠದಾನ ಅತ್ಯವಶ್ಯಕವೆನ್ನುವಂತೆ, ಹಾಗೂ ಅವರನ್ನು ಬಿಟ್ಟರೆ ಯಾರೂ ಆ ಶೈಲಿಯಲ್ಲಿ ಹಾಡುವ ಗಾಯಕಿಯರು ಇಲ್ಲದೆ, ಗೀತಾದತ್ ರವರ, ಆವಶ್ಯಕತೆ ಚಿತ್ರರಂಗಕ್ಕೆ ಅತಿಯಾಯಿತು.

ಗೀತಾದತ್ ರ,ಧ್ವನಿಯಲ್ಲಿನ ಜಾದು

[ಬದಲಾಯಿಸಿ]

'ದೊ ಭಾಯಿ' ನಲ್ಲಿ ಎಸ್.ಡಿ ಬರ್ಮನ್ ೧೯೫೫ ರಲ್ಲಿ ನಿರ್ಮಿಸಿದ ದೇವ್ ದಾಸ್ ಚಿತ್ರ, ಪ್ಯಾಸ, (೧೯೫೭) ಆಜ್ ಸಾಜನ್ 'ಮೊಹೆ ಅಂಗ್ ಲಾಗಾ ಲೊ' ಬೆಂಗಾಲಿ ಕೀರ್ತನ ಹಿಂದಿ ಚಿತ್ರದಲ್ಲಿ ಬಂದು ಸೇರಿಕೊಂಡಿತು. ಓ.ಪಿ.ನಯ್ಯರ್ ತಮ್ಮ ಚಿತ್ರಗಳಲ್ಲಿ ಎಲ್ಲಾ ತರಹದ, (ಪ್ರಣಯ ಗೀತೆ, ಡ್ಯುಯೆಟ್, ಶೋಕಗೀತೆಗಳು,) ಮತ್ತಿತರ ಹಾಡುಗಳನ್ನು ಹಾಡಿಸುತ್ತಿದ್ದರು. ಗೀತಾದತ್ ಧ್ವನಿ, ಚಿತ್ರರಸಿಕರನ್ನು ಹುಚ್ಚೆಬ್ಬಿಸಿತ್ತು. ೧೯೫೦ ರಲ್ಲಿ ಶಮ್ ಶಾದ್ ಬೇಗಮ್, ಲತಾ ಮಂಗೇಶ್ಕರ್ ಹೆಚ್ಚಾಗಿ ಹಾಡುತ್ತಿದರು.

ಪ್ರಖ್ಯಾತ ಸಂಗೀತ ನಿರ್ದೇಶಕರ ಬಳಿ

[ಬದಲಾಯಿಸಿ]

ಗೀತಾದತ್ ತಮ್ಮ ಸಮಯದಲ್ಲಿ ಸುಮಾರು,೧೦೦ ರಚನೆಗಳಿಗೆ ಕಂಠದಾನ ಮಾಡಿದ್ದರು. ಹೇಮಂತ್ ಕುಮಾರ್ ಶಂಕರ್ ಜೈಕಿಶನ್, ಚಿತ್ರಗುಪ್ತ, ಬುಲೊ ಸಿ. ರಾನಿ, ಹಂಸ್ರಾಜ್ ಬೆಹ್ಲ್, ಹುಸನ್ಲಾಲ್ ಭಗತ್ ರಾಮ್, ಮದನ್ ಮೋಹನ್,

ಬೊಂಬಾಯಿನಲ್ಲಿ ಕಲಾವಿದ, ಗುರುದತ್ ರವರ ಭೇಟಿ

[ಬದಲಾಯಿಸಿ]

ಬಾಝಿ ಚಿತ್ರದ ಹಾಡೊಂದು ರೆಕಾರ್ಡ್ ಆಗುತ್ತಿದ್ದ ಸಮಯದಲ್ಲಿ ಯುವ ನಿರ್ದೇಶಕ,ನಟ ಗುರುದಟ್ ರವರ, ಪರಿಚಯವಾಯಿತು.ಒಬ್ಬರನ್ನೊಬ್ಬರು,ಮೆಚ್ಚಿಕೊಂಡರು. ಹಾಗೆ ಬೆಳೆದ ಸ್ನೇಹ, ೨೬, ಮೇ, ೧೯೫೩ ರಲ್ಲಿ ವಿವಾಹದೊಂದಿಗೆ ಕೊನೆಗೊಂಡಿತು. ಹಲವಾರು ಮರೆಯಲಾರದ ಗೀತೆಗಳನ್ನು ಗೀತ ತಮ್ಮ ಪತಿ ಗುರುದತ್ ಚಿತ್ರಗಳಿಗೆ, ಹಾಡಿದರು.

ಗುರುದತ್-ಗೀತಾದತ್ ರವರ ಪರಿವಾರ

[ಬದಲಾಯಿಸಿ]

ದಂಪತಿಗಳಿಗೆ, ೩ ಮಕ್ಕಳು.

ಸನ್.೧೯೫೭ ರಲ್ಲಿ ಗೀತದತ್ ರೊಡನೆ ಗುರುದತ್ ಗೌರಿ ಎಂಬಚಿತ್ರವನ್ನು ಲಾಂಚ್ ಮಾಡಿದರು. ಗೀತಾದತ್ ನಾಯಕಿಯ ಪಾತ್ರದಲ್ಲಿ, ಸಿಂಗಿಂಗ್ ಸ್ಟಾರ್ ತರಹ. ಅದು ಭಾರತದ 'ಮೊಟ್ಟಮೊದಲ ಸಿನಿಮಾಸ್ಕೋಪ್' ಚಿತ್ರವಾಗಬೇಕಿತ್ತು. ಆದರೆ ಕೆಲವು ಕಾರಣಗಳಿಂದ ಅದರ ಶೂಟಿಂಗನ್ನು ನಿಲ್ಲಿಸಬೇಕಾಯಿತು.

ಗುರುದತ್ ಮತ್ತು ಗೀತಾ ಬೇರೆಯಾದರು

[ಬದಲಾಯಿಸಿ]

ಆ ಹೊತ್ತಿಗೆ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯಗಳ ಹೊಗೆಯಾಡುತ್ತಿತ್ತು. ಹೊಸದಾಗಿ ಬಂದ ಅಭಿನೇತ್ರಿ, ವಹೀದಾ ರೆಹಮಾನ್ ಜೊತೆ ಗುರು ದತ್, ಹೆಚ್ಚು ಸಮಯ ಕಳೆಯುತ್ತಿದ್ದರು. ಗೀತ ಕುಡಿಯಲು ಶುರುಮಾಡಿದರು. ಸತಿ-ಪತಿಯರು,ಕೊನೆಗೆ, ಬೇರೆಯಾದರು. ಗೀತಾದತ್ ರವರ ಹಾಡಿನ ಕೆರಿಯರ್ ತೊಂದರೆಗೆ ಸಿಲುಕಿತು.

ಗುರುದತ್ ಮರಣ

[ಬದಲಾಯಿಸಿ]

ಸನ್, ೧೯೫೮ ರಲ್ಲಿ ಎಸ್.ಡಿ.ಬರ್ಮನ್, ಲತಾಮಂಗೇಷ್ಕರ್ ಭಿನ್ನಾಭಿಪ್ರಾಯದಿಂದ, ಗೀತರವರ ಸಹಾಯವನ್ನು ಅಪೇಕ್ಷಿಸಿದರು. ಗೀತ ಅವರ ಇಷ್ಟದ ಹಾಡುಗಳನ್ನು ಹಾಡಲು ಅಸಮರ್ಥರಾದರು. ಆಗ ತೆರೆಯ ಮರೆಯಲ್ಲಿ, ಅವಕಾಶಗಳಿಗಾಗಿ ಕಾಯುತ್ತಿದ್ದ ಆಶಾ ಭೌನ್ ಸ್ಲೆ, ಮುಂದೆ ಬಂದರು. ೧೯೬೪ ರಲ್ಲಿ ಅತಿಯಾದ ನಿದ್ರೆ-ಗುಳಿಗೆ ಸೇವನೆ, ಹಾಗೂ ಕುಡಿಯುವ ಚಟಕ್ಕೆ ಬಲಿಯಗಿ ಗುರುದತ್ ಮೃತರಾದರು. ಗೀತಾದತ್, ಮಾನಸಿಕವಾಗಿ ಬಹಳ ಬಳಲಿದರು. ಮನೆಯನ್ನು ನಡೆಸಲು, ಹಣದ ಸಮಸ್ಯೆ ಹೆಚ್ಚಾಯಿತು. ಗೀತಾದತ್, ಪುನಃ ಹಾಡಲು ಶುರುಮಾಡಿದರು.

'ಸ್ಟೇಜ್ ಶೋ', ಹಾಗೂ ದುರ್ಗಾ-ಪೂಜ ಗೀತೆಗಳ ಗೀತೆಗಳ ಪ್ರಸ್ತುತಿ

[ಬದಲಾಯಿಸಿ]

ದುರ್ಗ ಪೂಜಾ ಗೀತೆಗಳ ಧ್ವನಿಮುದ್ರಿಕೆಗಳು, ಸ್ಟೇಜ್ ಶೊಗಳು. ಮುಂತಾದವುಗಳನ್ನು ಅವರು ಪ್ರಾರಂಭಿಸಬೇಕಾಯಿತು. ೧೯೬೭ ರಲ್ಲಿ ಭಾದು ಭರನ್ ಎಂಬ ಬಂಗಾಲಿ ಚಿತ್ರ ನಾಯಕಿಯ ಪಾತ್ರವನ್ನು ಅಭಿನಯಿಸಿ, ಚೆನ್ನಾಗಿ ಹಾಡಿದರು. ೧೯೭೧ ರಲ್ಲಿ ಅನುಭವ್ ಎಂಬ ಚಿತ್ರದಲ್ಲಿ ಹಾಡಿದರು. ಅದಕ್ಕೆ ಕಾನು ರಾಯ್ ಸಂಗೀತ ನೀಡಿದ್ದರು.

ಗೀತಾದತ್ 'ಲಿವರ್ ಕ್ಯಾನ್ಸರ್' ನಿಂದ ಮರಣಿಸಿದರು

[ಬದಲಾಯಿಸಿ]

ಗೀತಾದತ್, 'ಲಿವರ್ ಕ್ಯಾನ್ಸರ್' ನಿಂದ ನರಳುತ್ತಿದ್ದರು. ಅವರು, ೧೯೭೨ ರ, ಜುಲೈ, ೨೦ ರಂದು ನಿಧನರಾದರು. ಆಗ ಅವರಿಗೆ, ೪೧ ವರ್ಷ ವಯಸ್ಸಾಗಿತ್ತು. ಗೀತಾದತ್ ಚಿತ್ರರಂಗದಲ್ಲಿ ಹೆಚ್ಚು ಕಾಣಿಸಿಕೊಂಡಿದ್ದು (೧೯೪೬-೧೯೭೧)ರ ಸಮಯದಲ್ಲಿ.