ಚಿತ್ರಗುಪ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಚಿತ್ರಗುಪ್ತನು ಸೂರ್ಯವಂಶದ ಒಬ್ಬ ರಾಜ. ಈತನ ಮೊದಲ ಹೆಸರು ಚಿತ್ರ. ಶುದ್ಧಮನಸ್ಸಿನಿಂದ ಸೂರ್ಯದೇವನನ್ನು ಬಹುಕಾಲ ಆರಾಧಿಸಿ ಆತನ ಅನುಗ್ರಹದಿಂದ ಸರ್ವಜ್ಞತ್ತ್ವವನ್ನು ಸಂಪಾದಿಸಿದ್ದ. ಇದನ್ನು ತಿಳಿದ ಯಮ ಈತನನ್ನು ತನ್ನ ಲೇಖಕನನ್ನಾಗಿ ಮಾಡಿಕೊಂಡರೆ ತಾನು ನೆಮ್ಮದಿಯಾಗಿರಬಹುದೆಂದು ಭಾವಿಸಿ, ತನ್ನ ಕಿಂಕರ ಮೂಲಕ ಸಶರೀರವಾಗಿ ತನ್ನ ಲೋಕಕ್ಕೆ ಕರೆಸಿಕೊಂಡು ಚಿತ್ರಗುಪ್ತನೆಂದು ಹೆಸರಿಟ್ಟು ತನ್ನ ಲೇಖಕನನ್ನಾಗಿ ನೇಮಿಸಿಕೊಂಡ-ಎಂಬುದಾಗಿ ಸ್ಕಾಂದಪುರಾಣದಲ್ಲಿ ಹೇಳಿದೆ. ಅಂದಿನಿಂದ ವಿಶ್ವದ ಸಕಲ ಪ್ರಾಣಿಗಳ ಶುಭಾಶುಭ ಕರ್ಮಗಳನ್ನು ಬರೆದಿಡುವುದು ಈತನ ಕೆಲಸವಾಯಿತು. ಮರಣಾನಂತರ ಜೀವಿಗಳು ಯಮಲೋಕಕ್ಕೆ ಹೋದಾಗ ಅವಕ್ಕೆ ಈತನ ವರದಿಯ ಆಧಾರದ ಮೇಲೆ ಸ್ವರ್ಗ ಅಥವಾ ನರಕಗಳು ಪ್ರಾಪ್ತವಾಗುತ್ತವೆಯಂತೆ. ಯಮನನ್ನೂ ಒಮ್ಮೊಮ್ಮೆ ಚಿತ್ರಗುಪ್ತ ಎಂದು ಕರೆಯುವುದಿದೆ.

ಯಹೂದ್ಯರು ಕ್ರಿಶ್ಚನ್ನರು ಮತ್ತು ಮಹಮದೀಯರು ಕೂಡ ಇಂಥ ಒಂದು ದೇವತೆಯಲ್ಲಿ (ರಿಕಾರ್ಡಿಂಗ್ ಏಂಜಲ್) ನಂಬಿಕೆ ಇಟ್ಟುಕೊಂಡಿದ್ದಾರೆ.

Wikisource-logo.svg
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: