ಕುಮುದ್ವತಿ
ಕುಮುದ್ವತಿ ನದಿಗೆ ಶಿವಗಂಗೆ ಬೆಟ್ಟದ ಒಳಕಲ್ಲು ತೀರ್ಥ ಮತ್ತು ಕುಂಭತೀರ್ಥ ಎಂಬ ನೀರಿನ ಚಿಲುಮೆಗಳೇ ಕುಮುದ್ವತಿ ಉಗಮ ಸ್ಥಾನಗಳು.
ಶಿವಗಂಗೆಯಿಂದ 11.25 ಕಿ.ಮೀ. ದೂರ ಈಶಾನ್ಯ ದಿಕ್ಕಿನತ್ತ ಹರಿದು ದೇವರಾಯನದುರ್ಗ ಸೇರುವ ಈ ನದಿ, ಅಲ್ಲಿಂದ ದಕ್ಷಿಣಾಭಿಮುಖವಾಗಿ 31.7 ಕಿ.ಮೀ. ದೂರದ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಸೇರುತ್ತದೆ.
ತನ್ನ 43 ಕಿ.ಮೀ. ಉದ್ದದ ಜಾಡಿನಲ್ಲಿ ಕುಮುದ್ವತಿ 378 ಚದರ ಕಿ.ಮೀ. ವಿಸ್ತೀರ್ಣದ ಜಲಾಯನ ಪ್ರದೇಶವನ್ನು ಸೃಷ್ಟಿಸಿದೆ. ಒಟ್ಟಾರೆ 72 ಕಿರು ಜಲಾನಯನಗಳ ಸಂಗಮದಿಂದ ಈ ಪ್ರದೇಶ ಸೃಷ್ಟಿಯಾಗಿದೆ. ಮಹದೇವಪುರ, ಕೆಂಪಹಳ್ಳಿ, ಕಾವಲಪಾಳ್ಯ, ಹೇಮಾಪುರ, ಗುಂಡೇನಹಳ್ಳಿ, ಗಂಗಭೈರಪ್ಪನಪಾಳ್ಯ, ತ್ಯಾಮಗೊಂಡ್ಲು, ತೊರೆಹೊಸಪಾಳ್ಯ, ತೆಪ್ಪದಬೇಗೂರು, ತಾವರೆಕೆರೆ, ಶ್ರೀನಿವಾಸಪುರ, ಪಲ್ಲರಹಳ್ಳಿ, ಮೊಂಡಿಗೆರೆ, ಮಾಕನಕುಪ್ಪೆ ಈ ನದಿಯ ಮುಖ್ಯ ಜಲಾನಯನ ಪ್ರದೇಶಗಳಾಗಿವೆ.
ಅರ್ಕಾವತಿ ಮತ್ತು ಕುಮುದ್ವತಿ ನದಿ ಪುನಶ್ಚೇತನ ಸಮಿತಿ, ಸ್ವರಾಜ್, ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್, ನಾಗದಳ, ಜಲಚೇತನ, ರೈತ ಸಂಘ, ಸದ್ಗುರು ಯೋಗಿ ನಾರಾಯಣ ಟ್ರಸ್ಟ್ ಮೊದಲಾದ ಸಂಘಟನೆಗಳು ನದಿಗಳ ಪುನಶ್ಚೇತನಕ್ಕಾಗಿ ಶ್ರಮಿಸುತ್ತಿವೆ.
ಉಲ್ಲೇಖಗಳು
[ಬದಲಾಯಿಸಿ]ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |