ಮಂಗಳೂರು ವಿಶ್ವವಿದ್ಯಾನಿಲಯ
ಗೋಚರ
(ಮಂಗಳೂರು ವಿಶ್ವವಿದ್ಯಾಲಯ ಇಂದ ಪುನರ್ನಿರ್ದೇಶಿತ)
ಮಂಗಳೂರು ವಿಶ್ವವಿದ್ಯಾನಿಲಯ | |
---|---|
ಸ್ಥಾಪನೆ | ೧೯೮೦ |
ಪ್ರಕಾರ | ಸಾರ್ವಜನಿಕ |
ಕುಲಪತಿಗಳು | ಥಾವರ್ ಚಂದ್ ಗೆಹ್ಲೋಟ್(ರಾಜ್ಯಪಾಲರು ಕರ್ನಾಟಕ,ಭಾರತ ಸರಕಾರ) |
ಉಪಕುಲಪತಿಗಳು | ಪ್ರೊ.ಪಿ.ಎಲ್. ಧರ್ಮ |
ಆವರಣ | ಗ್ರಾಮಾಂತರ |
ಮಂಗಳೂರು ವಿಶ್ವವಿದ್ಯಾನಿಲಯವು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಣಾಜೆ ಗ್ರಾಮದಲ್ಲಿ ಸ್ಥಾಪಿತವಾಗಿದೆ. ಇದರ ಧ್ಯೇಯ ವಾಕ್ಯ "ಜ್ಞಾನವೇ ಬೆಳಕು". ಮಂಗಳಗಂಗೋತ್ರಿ ಎಂಬುದು ಈ ವಿ ವಿ ಯ ಕ್ಯಾಂಪಸ್ ನ ಹೆಸರು. ಇದು ಸುಮಾರು ೩೬೦ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಪ್ರಸ್ತುತ ದಕ್ಷಿಣ ಕನ್ನಡ, ಮತ್ತು ಉಡುಪಿ ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಈ ವಿಶ್ವವಿದ್ಯಾನಿಲಯದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ.
ಹಿನ್ನೆಲೆ
[ಬದಲಾಯಿಸಿ]ಮೊದಲು ಇದು ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿತ್ತು. ೧೯೮೦ರಲ್ಲಿ ಸ್ವತಂತ್ರ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡಿತು. ೨೦೨೩ರಲ್ಲಿ ಕೊಡಗು ವಿಶ್ವಾವಿದ್ಯಾನಿಲಯವು ರೂಪೀಕರಣಗೊಳ್ಳುವ ತನಕ ಕೊಡಗು ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ಕೂಡ ಮಂಗಳೂರು ವಿಶ್ವವಿದ್ಯಾನಿಲದ ಆಡಳಿತ ವ್ಯಾಪ್ತಿಗೆ ಒಳಪಟ್ಟಿತ್ತು.
ಕ್ಯಾಂಪಸ್/ಆವರಣ
[ಬದಲಾಯಿಸಿ]೬೫೦ ಎಕರೆ ಪ್ರದೇಶದಲ್ಲಿ ವಿಸ್ತಾರವನ್ನು ಹೊಂದಿದೆ. ಸುಂದರವಾದ ಹುಲ್ಲುಹಾಸಿನ ಆವರಣ.
ಸಂಯೋಜಿತ ಕಾಲೇಜುಗಳು
[ಬದಲಾಯಿಸಿ]- ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟ, ಮಂಗಳೂರು
- ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು, ಮಡಿಕೇರಿ
- ಸ್ನಾತಕೋತ್ತರ ಅಧ್ಯಯನ ಕೇಂದ್ರ ಚಿಕ್ಕಅಳುವಾರ ಕುಶಾಲನಗರ ಕೊಡಗು.
- ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು
[ಬದಲಾಯಿಸಿ]ಕುಲಪತಿಗಳಾಗಿದ್ದ ಕಾಲ/ವರ್ಷ | ಕುಲಪತಿಗಳ ಹೆಸರು | ವಿಭಾಗ | ಅವಧಿ |
---|---|---|---|
೧೯೮೦-೧೯೮೫ | ಪ್ರೊ. ಬಿ. ಶೇಖ್ ಅಲಿ | ಇತಿಹಾಸ | ೫ |
೧೯೮೫-೧೯೮೯ | ಪ್ರೊ.ಶಫಿಯುಲ್ಲಾ | ಸಸ್ಯಶಾಸ್ತ್ರ | ೪ |
೧೯೮೯-೧೯೯೫ | ಪ್ರೊ.ಎಂ.ಐ ಸವದತ್ತಿ | ಭೌತಶಾಸ್ತ್ರ | ೬ |
೧೯೯೫-೨೦೦೧ | ಪ್ರೊ.ಎಸ್. ಗೋಪಾಲ | ಭೌತಶಾಸ್ತ್ರ | ೬ |
೨೦೦೧-೨೦೦೫ | ಪ್ರೊ.ಬಿ. ಹನುಮಯ್ಯ[೧] | ರಸಾಯನ ಶಾಸ್ತ್ರ | ೪ |
೨೦೦೫-೨೦೦೬ | ಪ್ರೊ.ತಿಮ್ಮೇಗೌಡ[೨] | ರಸಾಯನಶಾಸ್ತ್ರ | ೩ ತಿಂಗಳು (acting, three months) |
೨೦೦೬-೨೦೧೦ | ಪ್ರೊ.ಕೆ.ಎಂ.ಕಾವೇರಪ್ಪ[೩] | ಸಸ್ಯಶಾಸ್ತ್ರ | ೪ |
೨೦೧೦ | ಪ್ರೊ.ಕೆ.ಕೆ.ಆಚಾರ್ಯ | ಭೌತಶಾಸ್ತ್ರ | ೨ ತಿಂಗಳು (acting, two months) |
೨೦೧೦-೨೦೧೪ | ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ[೪] | ಭೌತಶಾಸ್ತ್ರ | ೪ |
೨೦೧೪ | ಪ್ರೊ.ಕೆ.ಭೈರಪ್ಪ | ಭೌತಶಾಸ್ತ್ರ | ೪ |
೨೦೧೮ | ಡಾ.ಕಿಶೋರ್ ಕುಮಾರ್. ಸಿ.ಕೆ. | ದೈಹಿಕ ಶಿಕ್ಷಣ | ೬ ತಿಂಗಳು (ಹಂಗಾಮಿ) |
೨೦೧೮ | ಡಾ. ಈಶ್ವರ ಪಿ. | ೬ ತಿಂಗಳು (ಹಂಗಾಮಿ) | |
೨೦೧೮ | ಡಾ.ಕಿಶೋರಿ ನಾಯಕ್ | ಆಂಗ್ಲ ಭಾಷೆ | ೬ ತಿಂಗಳು (ಹಂಗಾಮಿ) |
೨೦೧೯ | ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ[೫] | ವಾಣಿಜ್ಯ | ಜೂನ್ ೩ ರಿಂದ |
ವಿಭಾಗಗಳು
[ಬದಲಾಯಿಸಿ]- ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳಗಂಗೋತ್ರಿ.
ಹೊರಗಿನ ಸಂಪರ್ಕಗಳು
[ಬದಲಾಯಿಸಿ]Mangalore University ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
- ಅಧಿಕೃತ ಸಂಪರ್ಕ ತಾಣ
- ಕನ್ನಡದಲ್ಲಿ ಅಧಿಕೃತ ಸಂಪರ್ಕ ತಾಣ Archived 2007-02-12 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "Hanumaiah is new Mangalore varsity V-C". ದಿ ಟೈಮ್ಸ್ ಆಫ್ ಇಂಡಿಯಾ. 29 October 2001. Archived from the original on 2012-07-07. Retrieved 2017-07-16.
- ↑ "Thimme Gowda is acting VC". ದಿ ಹಿಂದೂ. 30 October 2005. Archived from the original on 1 ನವೆಂಬರ್ 2005. Retrieved 16 ಜುಲೈ 2017.
- ↑ "K.M. Kaveriappa appointed Executive Director of Higher Education Council". ದಿ ಹಿಂದೂ. 1 November 2010.
- ↑ "Prof T C Shivashankara Murthy Appointed Vice Chancellor of Mangalore University". daijiworld.com. Daijiworld News Network. 2 March 2010. Archived from the original on 4 ಮಾರ್ಚ್ 2016. Retrieved 16 ಜುಲೈ 2017.
{{cite web}}
: Cite has empty unknown parameter:|3=
(help) - ↑ .P S Yadapadithaya in new vice-chancellor of Mangalore University - Times of India https://timesofindia.indiatimes.com/home/education/news/p-s-yadapadithaya-in-new-vice-chancellor-of-mangalore-university/articleshow/69638813.cms