ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ
ಗೋಚರ
ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ,ಮಂಗಳೂರು ವಿಶ್ವವಿದ್ಯಾನಿಲಯ,ಮಂಗಳ ಗಂಗೋತ್ರಿ. | |
---|---|
ಸ್ಥಾಪನೆ | ೧೯೬೮ |
ಪ್ರಕಾರ | ಸಾರ್ವಜನಿಕ |
ಕುಲಪತಿಗಳು | ಶ್ರೀ ವಜುಭಾಯಿ ರೂಡಭಾಯಿ ವಾಲ.(ರಾಜ್ಯಪಾಲರು ಕರ್ನಾಟಕ,ಭಾರತ ಸರಕಾರ) |
ಉಪಕುಲಪತಿಗಳು | 'ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ'[೧]. |
ಸ್ನಾತಕೋತ್ತರ ಶಿಕ್ಷಣ | |
ಡಾಕ್ಟರೇಟ್ ಪದವಿ | '೧೪೨' |
ಆವರಣ | ಕೊಣಾಜೆ. |
ಅಂತರಜಾಲ ತಾಣ | www.mangaloreuniversity.ac.in |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಎಸ್. ವಿ. ಪಿ. ಕನ್ನಡ ಅಧ್ಯಯನ ಸಂಸ್ಥೆ ಎಸ್.ವಿ.ಪರಮೇಶ್ವರ ಭಟ್ಟ ಮಂಗಳಗಂಗೋತ್ರಿ
[ಬದಲಾಯಿಸಿ]- ೧೯೬೮ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿ ಆರಂಭವಾಯಿತು. ಮಂಗಳೂರು ವಿಶ್ವವಿದ್ಯಾನಿಲಯ ಆರಂಭಗೊಂಡಾಗ ಇದ್ದ ಕೆಲವೇ ವಿಭಾಗಗಳಲ್ಲಿ ಕನ್ನಡ ವಿಭಾಗವೂ ಒಂದಾಗಿದೆ.[೨]
- ಕನ್ನಡ ಸ್ನಾತಕೋತ್ತರ ಪದವಿ. ಕಲಿಕೆಯ ಭಾಗವಾಗಿ ಕಂಪ್ಯೂಟರ್,ಅನುವಾದ,ಸಮೂಹ ಮಾಧ್ಯಮಗಳ ಕುರಿತು ತಿಳುವಳಿಕೆ ಮತ್ತು ತರಭೇತಿ. ಸಾಹಿತ್ಯ ಬರವಣಿಗೆ ಮತ್ತು ಮಾತುಗಾರಿಕೆಯ ಕೌಶಲ. ರಾಷ್ಟೀಯ ವಿಚಾರ ಸಂಕಿರಣ,ಕಾರ್ಯಾಗಾರಗಳಲ್ಲಿ ಭಾಗವಹಿಸುವ ಅವಕಾಶ ಈಗಮಂಗಳೂರು ವಿಶ್ವವಿದ್ಯಾಲಯದಲ್ಲಿದೆ.
ಅಧ್ಯಯನ ವಿಷಯಗಳು ಮತ್ತು ವಿಶೇಷ ಅಧ್ಯಯನ ವಿಷಯಗಳು
[ಬದಲಾಯಿಸಿ]- ಕನ್ನಡ ಸಾಹಿತ್ಯ: ಪ್ರಾಚೀನ,ಮಧ್ಯಕಾಲಿನ ಮತ್ತು ಆಧುನಿಕ, ಭಾಷಾವಿಜ್ಞಾನ,ಛಂದಸ್ಸು,ತೌಲನಿಕ ಕಾವ್ಯ ಮೀಮಾಂಸೆ, ಕಂಪ್ಯೂಟರ್, ಕನ್ನಡ ಸಾಹಿತ್ಯ ಮತ್ತು ಸಮೂಹ ಮಾಧ್ಯಮ,ಭಾಷಾಂತರ.
- ತುಳುವ ಅಧ್ಯಯನ,ಪ್ರಾಧೇಶಿಕ ಅಧ್ಯಯನ ಮತ್ತು ಕೊಡವ ಅಧ್ಯಯನ ಐಚ್ಛಿಕ ಪತ್ರಿಕೆಗಳು.
ಕನ್ನಡ ಅಧ್ಯಯನ ಸಂಸ್ಥೆಯ ವಿಶೇಷತೆ
[ಬದಲಾಯಿಸಿ]- ಅನುಭವಿ ತಜ್ಞ ಪ್ರಾಧ್ಯಾಪಕರ ವ್ರಂಧ.
- ವಿದ್ಯಾರ್ಥಿಗಳ ಬಳಕೆಗೆ ಸುಸಜ್ಜಿತ ಅಂತರಜಾಲ ಸೌಲಭ‍್ಯವುಳ್ಳ ಕಂಪ್ಯೂಟರ್ ಲ್ಯಾಬ್.
- ಅತ್ಯಾಧುನಿಕ ಸವಲತ್ತುಗಳನ್ನೋಳಗೊಂಡ ಛಾಯಾಚಿತ್ರ ಕೊಠಡಿ ಮತ್ತು ರೆಕಾರ್ಡಿಂಗ್ ವ್ಯವಸ್ಥೆ,ಆಡಿಯೋ ವೀಡೀಯೋ ವಿಶುವಲ್ ಮಿನಿ ಥಿಯೇಟರ್,ಸೆಮಿನಾರ್ ಹಾಲ್ ಮತ್ತು ಬಯಲು ರಂಗ ಮಂದಿರ.
ವಿಭಾಗೀಯ ಗ್ರಂಥಾಲಯ
[ಬದಲಾಯಿಸಿ]- ಹಳೆಯ ತಾಳೆಗರಿಗಳ ಸಂಗ್ರಹ ಮತ್ತು ಸಂರಕ್ಷಣೆ ನವಯುಗ, ಸ್ವದೇಶಾಭಿಮಾನಿ... ಮೊದಲಾದ ಹಳೆಯ ಪತ್ರಿಕೆಗಳ ಅಪೂರ್ವ ಸಂಗ್ರಹ.
- ಸಾಹಿತ್ಯ,ಸಂಸ್ಕ್ರತಿ ಮತ್ತು ವಿವಿಧ ವಿಷಯಗಳ ಕುರಿತ ಅಮೂಲ್ಯ ಕ್ರತಿಗಳು, ವಿಶೇಷಾಂಕಗಳು.
- ಎಂ.ಫಿಲ್,ಪಿ.ಎಚ್ಡಿ, ಸಂಶೋಧನ ಮಹಾಪ್ರಬಂಧಗಳು, ವಿಚಾರ ಸಂಕಿರಣಗಳ ಪ್ರಬಂಧಗಳು,ದಿನ ಪತ್ರಿಕೆ,ನಿಯತಕಾಲಿಕೆ ಮತ್ತು ಸಾಹಿತ್ಯ ಪತ್ರಿಕೆಗಳು ಲಭ್ಯ.
ವಿಭಾಗದಲ್ಲಿ ಇರುವ ಪೀಠಗಳು
[ಬದಲಾಯಿಸಿ]- ಕನಕದಾಸರು ಸಂಶೋಧನಾ ಕೇಂದ್ರ.
- ಶಿವರಾಮ ಕಾರಂತ ಆಧ್ಯಯನ ಪೀಠ.
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ.
- ಅಂಬಿಗರ ಚೌಡಯ್ಯ ಅಧ್ಯಯನ ಕೇಂದ್ರ.
- ಕೊಡವಕೊಡವರು ಸಾಂಸ್ಕ್ರತಿಕ ಅಧ್ಯಯನ ಕೇಂದ್ರ.
- ಶ್ರೀ ಪಿ.ಸತೀಶ್ ಪೈ ಮತ್ತು ಪಿ.ದಯಾನಂದ ಪೈ ಯಕ್ಷಗಾನ ಅಧ್ಯಯನ ಕೇಂದ್ರ.
- ಜೈನ ಕವಿ ರತ್ನಾಕರ ವರ್ಣಿ ಅಧ್ಯಯನ ಪೀಠ.
ಕನ್ನಡ ಮ್ಯೂಸಿಯಂ
[ಬದಲಾಯಿಸಿ]- ಕರಾವಳಿಯ ಸಾಂಸ್ಕ್ರತಿಕ ಮಹತ್ವವನ್ನು ಸಾರುವ ಅಪೂರ್ವ ವಸ್ತುಗಳ ಸಂಗ್ರಹಾಲಯ.ಕೃಷಿ, ಭೂತಾರಾಧನೆಭೂತಾರಾಧನೆ,ಕೌಟಂಬಿಕ,ದಾರ್ಮಿಕ,ನಿತ್ಯ ಬಳಕೆಯ ವಸ್ತುಗಳು,ಕಾಷ್ಠಶಿಲ್ಪ ಮೊದಲಾದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಅಪೂರ್ವ ವಸ್ತುಗಳ ಸಂಗ್ರಹ.
ವಿವಿಧ ಸಂಶೋಧನಾ ಯೋಜನೆಗಳು
[ಬದಲಾಯಿಸಿ]- ಪಶ್ಚಿಮ ಘಟ್ಟಗಳ ಸಸ್ಯ ಜಾನಪದ.
- ಸಾಹಿತ್ಯ ವಿಮರ್ಶೆಯ ಸಿದ್ಧಾಂತಗಳು
- ಕನ್ನಡ ಭಾಷಾಭೀವೃದ್ಧಿ ಯೋಜನೆ(ದಕ್ಷಿಣ ಕನ್ನಡ,ಉಡುಪಿ ಮತ್ತು ಕೊಡಗು ಜಿಲ್ಲೆಗಳ ಸಾಹಿತ್ಯ ಸಂಸ್ಕ್ರತಿ ಮತ್ತು ಸಾಮಾಜಕ ಅಧ್ಯಯನ).
- ಪಿ.ಎಚ್.ಡಿ.ಸಂಶೋಧನೆ ಕನ್ನಡ ಆಧ್ಯಯನ,ತುಳುವ ಅಧ್ಯಯನ,ಜಾನಪದಜಾನಪದ ಅಧ್ಯಯನ,ಮಹಿಳಾ ಅಧ್ಯಯನ ಮತ್ತು ಸಾಂಸ್ಕ್ರತಿಕ ಅಧ್ಯಯನಕ್ಕೆ ಅವಕಾಶ.
ಕನ್ನಡ ವಿಭಾಗದಿಂದ ಹೊರಬಂದ ಪುಸ್ತಕಗಳು
[ಬದಲಾಯಿಸಿ]- ಡಾ.ಬಿ.ಪುರುಷೋತ್ತಮ-ಕರಾವಳಿ ಜಾನಪದ-೧೯೯೯೦
- ಡಾ.ಕೆ.ಚಿನ್ನಪ್ಪ ಗೌಡ-ಭೂತಾರಾಧನೆ ಜನಪದೀಯ ಅಧ್ಯಯನ-೧೯೯೦
- ಸಂ-ಡಾ.ಬಿ.ಎ.ವಿವೇಕ ರೈ- ಕಡೆಂಗೋಡ್ಲು ಸಾಹಿತ್ಯ-೧೯೮೮
- ಡಾ.ಬಿ.ಎ.ವಿವೇಕ ರೈ-ಕನ್ನಡ ಕಾದಂಬರಿಯ ಮೊದಲ ಹೆಜ್ಜೆಗಳು-೧೯೮೮
ಉಲ್ಲೇಖ
[ಬದಲಾಯಿಸಿ]- ↑ . P S Yadapadithaya in new vice-chancellor of Mangalore University - Times of India https://timesofindia.indiatimes.com/home/education/news/p-s-yadapadithaya-in-new-vice-chancellor-of-mangalore-university/articleshow/69638813.cms
- ↑ "ಆರ್ಕೈವ್ ನಕಲು". Archived from the original on 2023-11-22. Retrieved 2015-09-03.