ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ,ಮಂಗಳೂರು ವಿಶ್ವವಿದ್ಯಾನಿಲಯ,ಮಂಗಳ ಗಂಗೋತ್ರಿ.
ಮಂಗಳೂರು ವಿಶ್ವವಿದ್ಯಾನಿಲಯ ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ
ಸ್ಥಾಪನೆ೧೯೬೮
ಪ್ರಕಾರಸಾರ್ವಜನಿಕ
ಕುಲಪತಿಗಳುಶ್ರೀ ವಜುಭಾಯಿ ರೂಡಭಾಯಿ ವಾಲ.(ರಾಜ್ಯಪಾಲರು ಕರ್ನಾಟಕ,ಭಾರತ ಸರಕಾರ)
ಉಪಕುಲಪತಿಗಳು'ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ'[೧].
ಸ್ನಾತಕೋತ್ತರ ಶಿಕ್ಷಣ
ಡಾಕ್ಟರೇಟ್ ಪದವಿ'೧೪೨'
ಆವರಣಕೊಣಾಜೆ.


ಎಸ್. ವಿ. ಪಿ. ಕನ್ನಡ ಅಧ್ಯಯನ ಸಂಸ್ಥೆ ಎಸ್.ವಿ.ಪರಮೇಶ್ವರ ಭಟ್ಟ ಮಂಗಳಗಂಗೋತ್ರಿ[ಬದಲಾಯಿಸಿ]

  1. ೧೯೬೮ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿ ಆರಂಭವಾಯಿತು. ಮಂಗಳೂರು ವಿಶ್ವವಿದ್ಯಾನಿಲಯ ಆರಂಭಗೊಂಡಾಗ ಇದ್ದ ಕೆಲವೇ ವಿಭಾಗಗಳಲ್ಲಿ ಕನ್ನಡ ವಿಭಾಗವೂ ಒಂದಾಗಿದೆ.[೨]
  2. ಕನ್ನಡ ಸ್ನಾತಕೋತ್ತರ ಪದವಿ. ಕಲಿಕೆಯ ಭಾಗವಾಗಿ ಕಂಪ್ಯೂಟರ್,ಅನುವಾದ,ಸಮೂಹ ಮಾಧ್ಯಮಗಳ ಕುರಿತು ತಿಳುವಳಿಕೆ ಮತ್ತು ತರಭೇತಿ. ಸಾಹಿತ್ಯ ಬರವಣಿಗೆ ಮತ್ತು ಮಾತುಗಾರಿಕೆಯ ಕೌಶಲ. ರಾಷ್ಟೀಯ ವಿಚಾರ ಸಂಕಿರಣ,ಕಾರ್ಯಾಗಾರಗಳಲ್ಲಿ ಭಾಗವಹಿಸುವ ಅವಕಾಶ ಈಗಮಂಗಳೂರು ವಿಶ್ವವಿದ್ಯಾಲಯದಲ್ಲಿದೆ.

ಅಧ್ಯಯನ ವಿಷಯಗಳು ಮತ್ತು ವಿಶೇಷ ಅಧ್ಯಯನ ವಿಷಯಗಳು[ಬದಲಾಯಿಸಿ]

  • ಕನ್ನಡ ಸಾಹಿತ್ಯ: ಪ್ರಾಚೀನ,ಮಧ್ಯಕಾಲಿನ ಮತ್ತು ಆಧುನಿಕ, ಭಾಷಾವಿಜ್ಞಾನ,ಛಂದಸ್ಸು,ತೌಲನಿಕ ಕಾವ್ಯ ಮೀಮಾಂಸೆ, ಕಂಪ್ಯೂಟರ್, ಕನ್ನಡ ಸಾಹಿತ್ಯ ಮತ್ತು ಸಮೂಹ ಮಾಧ್ಯಮ,ಭಾಷಾಂತರ.
  • ತುಳುವ ಅಧ್ಯಯನ,ಪ್ರಾಧೇಶಿಕ ಅಧ್ಯಯನ ಮತ್ತು ಕೊಡವ ಅಧ್ಯಯನ ಐಚ್ಛಿಕ ಪತ್ರಿಕೆಗಳು.

ಕನ್ನಡ ಅಧ್ಯಯನ ಸಂಸ್ಥೆಯ ವಿಶೇಷತೆ[ಬದಲಾಯಿಸಿ]

  • ಅನುಭವಿ ತಜ್ಞ ಪ್ರಾಧ್ಯಾಪಕರ ವ್ರಂಧ.
  • ವಿದ್ಯಾರ್ಥಿಗಳ ಬಳಕೆಗೆ ಸುಸಜ್ಜಿತ ಅಂತರ್ಜಾಲ ಸೌಲಭ‍್ಯವುಳ್ಳ ಕಂಪ್ಯೂಟರ್ ಲ್ಯಾಬ್.
  • ಅತ್ಯಾಧುನಿಕ ಸವಲತ್ತುಗಳನ್ನೋಳಗೊಂಡ ಛಾಯಾಚಿತ್ರ ಕೊಠಡಿ ಮತ್ತು ರೆಕಾರ್ಡಿಂಗ್ ವ್ಯವಸ್ಥೆ,ಆಡಿಯೋ ವೀಡೀಯೋ ವಿಶುವಲ್ ಮಿನಿ ಥಿಯೇಟರ್,ಸೆಮಿನಾರ್ ಹಾಲ್ ಮತ್ತು ಬಯಲು ರಂಗ ಮಂದಿರ.

ವಿಭಾಗೀಯ ಗ್ರಂಥಾಲಯ[ಬದಲಾಯಿಸಿ]

ವಿಭಾಗದ ಗ್ರಂಥಾಲಯ
ತಾಡ ಓಲೆ
  • ಹಳೆಯ ತಾಳೆಗರಿಗಳ ಸಂಗ್ರಹ ಮತ್ತು ಸಂರಕ್ಷಣೆ ನವಯುಗ, ಸ್ವದೇಶಾಭಿಮಾನಿ... ಮೊದಲಾದ ಹಳೆಯ ಪತ್ರಿಕೆಗಳ ಅಪೂರ್ವ ಸಂಗ್ರಹ.
ವಿಭಾಗ ಗ್ರಂಥಾಲಯ
  • ಸಾಹಿತ್ಯ,ಸಂಸ್ಕ್ರತಿ ಮತ್ತು ವಿವಿಧ ವಿಷಯಗಳ ಕುರಿತ ಅಮೂಲ್ಯ ಕ್ರತಿಗಳು, ವಿಶೇಷಾಂಕಗಳು.
  • ಎಂ.ಫಿಲ್,ಪಿ.ಎಚ್ಡಿ, ಸಂಶೋಧನ ಮಹಾಪ್ರಬಂಧಗಳು, ವಿಚಾರ ಸಂಕಿರಣಗಳ ಪ್ರಬಂಧಗಳು,ದಿನ ಪತ್ರಿಕೆ,ನಿಯತಕಾಲಿಕೆ ಮತ್ತು ಸಾಹಿತ್ಯ ಪತ್ರಿಕೆಗಳು ಲಭ್ಯ.

ವಿಭಾಗದಲ್ಲಿ ಇರುವ ಪೀಠಗಳು[ಬದಲಾಯಿಸಿ]

  1. ಕನಕದಾಸರು ಸಂಶೋಧನಾ ಕೇಂದ್ರ.
  2. ಶಿವರಾಮ ಕಾರಂತ ಆಧ್ಯಯನ ಪೀಠ.
  3. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಅಧ್ಯಯನ ಪೀಠ.
  4. ಅಂಬಿಗರ ಚೌಡಯ್ಯ ಅಧ್ಯಯನ ಕೇಂದ್ರ.
  5. ಕೊಡವಕೊಡವರು ಸಾಂಸ್ಕ್ರತಿಕ ಅಧ್ಯಯನ ಕೇಂದ್ರ.
  6. ಶ್ರೀ ಪಿ.ಸತೀಶ್ ಪೈ ಮತ್ತು ಪಿ.ದಯಾನಂದ ಪೈ ಯಕ್ಷಗಾನ ಅಧ್ಯಯನ ಕೇಂದ್ರ.
  7. ಜೈನ ಕವಿ ರತ್ನಾಕರ ವರ್ಣಿ ಅಧ್ಯಯನ ಪೀಠ.

ಕನ್ನಡ ಮ್ಯೂಸಿಯಂ[ಬದಲಾಯಿಸಿ]

  • ಕರಾವಳಿಯ ಸಾಂಸ್ಕ್ರತಿಕ ಮಹತ್ವವನ್ನು ಸಾರುವ ಅಪೂರ್ವ ವಸ್ತುಗಳ ಸಂಗ್ರಹಾಲಯ.ಕೃಷಿ, ಭೂತಾರಾಧನೆಭೂತಾರಾಧನೆ,ಕೌಟಂಬಿಕ,ದಾರ್ಮಿಕ,ನಿತ್ಯ ಬಳಕೆಯ ವಸ್ತುಗಳು,ಕಾಷ್ಠಶಿಲ್ಪ ಮೊದಲಾದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಅಪೂರ್ವ ವಸ್ತುಗಳ ಸಂಗ್ರಹ.

ವಿವಿಧ ಸಂಶೋಧನಾ ಯೋಜನೆಗಳು[ಬದಲಾಯಿಸಿ]

  • ಪಶ್ಚಿಮ ಘಟ್ಟಗಳ ಸಸ್ಯ ಜಾನಪದ.
  • ಸಾಹಿತ್ಯ ವಿಮರ್ಶೆಯ ಸಿದ್ಧಾಂತಗಳು
  • ಕನ್ನಡ ಭಾಷಾಭೀವೃದ್ಧಿ ಯೋಜನೆ(ದಕ್ಷಿಣ ಕನ್ನಡ,ಉಡುಪಿ ಮತ್ತು ಕೊಡಗು ಜಿಲ್ಲೆಗಳ ಸಾಹಿತ್ಯ ಸಂಸ್ಕ್ರತಿ ಮತ್ತು ಸಾಮಾಜಕ ಅಧ್ಯಯನ).
  • ಪಿ.ಎಚ್.ಡಿ.ಸಂಶೋಧನೆ ಕನ್ನಡ ಆಧ್ಯಯನ,ತುಳುವ ಅಧ್ಯಯನ,ಜಾನಪದಜಾನಪದ ಅಧ್ಯಯನ,ಮಹಿಳಾ ಅಧ್ಯಯನ ಮತ್ತು ಸಾಂಸ್ಕ್ರತಿಕ ಅಧ್ಯಯನಕ್ಕೆ ಅವಕಾಶ.

ಕನ್ನಡ ವಿಭಾಗದಿಂದ ಹೊರಬಂದ ಪುಸ್ತಕಗಳು[ಬದಲಾಯಿಸಿ]

  1. ಡಾ.ಬಿ.ಪುರುಷೋತ್ತಮ-ಕರಾವಳಿ ಜಾನಪದ-೧೯೯೯೦
  2. ಡಾ.ಕೆ.ಚಿನ್ನಪ್ಪ ಗೌಡ-ಭೂತಾರಾಧನೆ ಜನಪದೀಯ ಅಧ್ಯಯನ-೧೯೯೦
  3. ಸಂ-ಡಾ.ಬಿ.ಎ.ವಿವೇಕ ರೈ- ಕಡೆಂಗೋಡ್ಲು ಸಾಹಿತ್ಯ-೧೯೮೮
  4. ಡಾ.ಬಿ.ಎ.ವಿವೇಕ ರೈ-ಕನ್ನಡ ಕಾದಂಬರಿಯ ಮೊದಲ ಹೆಜ್ಜೆಗಳು-೧೯೮೮

ಉಲ್ಲೇಖ[ಬದಲಾಯಿಸಿ]

  1. . P S Yadapadithaya in new vice-chancellor of Mangalore University - Times of India https://timesofindia.indiatimes.com/home/education/news/p-s-yadapadithaya-in-new-vice-chancellor-of-mangalore-university/articleshow/69638813.cms
  2. "ಆರ್ಕೈವ್ ನಕಲು". Archived from the original on 2023-11-22. Retrieved 2015-09-03.