ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು
ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು | |
---|---|
ಧ್ಯೇಯ | 'ಕೃಷಿತೋ ನಾಸ್ತಿ ದುರ್ಭಿಕ್ಷಂ ' |
ಸ್ಥಾಪನೆ | ೧೯೬೪ |
ಪ್ರಕಾರ | ಸಾರ್ವಜನಿಕ |
ಕುಲಪತಿಗಳು | 'ಡಾ. ಕೆ.ನಾರಾಯಣ ಗೌಡ ' |
ಆವರಣ | ಗ್ರಾಮಾಂತರ |
ಬೆಂಗಳೂರಿನಲ್ಲಿರುವ ಕೃಷಿ ವಿಶ್ವವಿದ್ಯಾನಿಲಯವು ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಆಗಿ ೧೯೬೪ರಲ್ಲಿ ಒಂದು ಶಾಸಕಾಂಗ ಕಾಯಿದೆಯಡಿ ಸ್ಥಾಪನೆಗೊಂಡಿತು.
ಇತಿಹಾಸ
[ಬದಲಾಯಿಸಿ]ಆರಂಭ
[ಬದಲಾಯಿಸಿ]ಕೃಷಿ ಶಿಕ್ಷಣ ಮತ್ತು ಸಂಶೋಧನೆಯಲ್ಲಿ ಭಾರತದ ಅತೀ ಪ್ರಮುಖ ಸಂಸ್ಥೆಗಳಲ್ಲಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯವು ಒಂದಾಗಿದೆ. ೧೮೯೯ರಲ್ಲಿ ಮಹಾರಾಣಿ ಕೆಂಪ ನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಿಯವರು ನೀಡಿದ ೩೦ ಎಕರೆ ಜಾಗದಲ್ಲಿ ಒಂದು ಸಣ್ಣ ಕೃಷಿ ಕ್ಷೇತ್ರವಾಗಿ ಈ ವಿಶ್ವವಿದ್ಯಾನಿಲಯವು ಆರಂಭಗೊಂಡಿತು. ಜರ್ಮನಿಯ ವಿಜ್ಞಾನಿ ಡಾ. ಲೆಹ್ಮಾನ್ ಅವರನ್ನು ನೇಮಕ ಮಾಡಿ, ನೀಡಿ ಮಣ್ಣಿನ ಮೇಲೆ ಬೆಳೆಯಿಂದ ಆಗುವ ಪರಿಣಾಮಗಳ ಬಗ್ಗೆ ಸಂಶೋಧನೆ ಆರಂಭಿಸಲು ಕೃಷಿ ನಿರ್ದೇಶನಾಲಯದಲ್ಲಿ ಅವರಿಗೆ ಒಂದು ಪ್ರಯೋಗ ಶಾಲೆಯನ್ನು ಕಟ್ಟಿಸಿ ಕೊಡಲಾಯಿತು. ೧೯೦೬ರಲ್ಲಿ, ಕೆನಡಾದ ಕೀಟ ತಜ್ಞರಾದ ಲೆಸ್ಲಿ ಕೋಲ್ಮನ್ ರವರು ಲೆಹ್ಮನ್ ರವರ ಹುದ್ದೆಯನ್ನು ಅಲಂಕರಿಸಿ ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿದರು
೩೦ ಎಕರೆ ಜಾಗದಲ್ಲಿ ಆರಂಭವಾದ ನಂತರ ೧೩೦೦ ಎಕರೆ (೫.೩ ಚ.ಕಿ.ಮಿ.)ಗೆ ವಿಸ್ತೀರ್ಣಗೊಂಡಿತು. ಮುಂದೆ, ಆಗಿನ ಮೈಸೂರು ದಿವಾನರಾದ ಸರ್ ಎಮ್ ವಿಶ್ವೇಶ್ವರಯ್ಯ ನವರ ನೇತೃತ್ವದಲ್ಲಿ ಮೈಸೂರು ಕೃಷಿ ಶಾಲೆಯನ್ನು ೧೯೧೩ರಲ್ಲಿ ಆರಂಭಿಸಲಾಯಿತು. ಈ ಕೃಷಿ ಶಾಲೆಯು ೧೯೨೦ ರಿಂದ ಕೃಷಿಯಲ್ಲಿ ಡಿಪ್ಲೋಮಾ ಪದವಿಯನ್ನು ನೀಡಲು ಆರಂಭಿಸಿತು.
ತನ್ನ ಆಧುನಿಕ ತರಬೇತಿಗಳಿಂದ ಮುಂದಿನ ದಿನಗಳಲ್ಲಿ ಹೆಚ್ಚ್ಚಿನ ಖ್ಯಾತಿಯನ್ನು ಪಡೆದಿದ್ದರಿಂದ ಈ ಸಂಶೋಧನಾ ಕೇಂದ್ರವನ್ನು ೧೯೪೬ರಲ್ಲಿ ಹೆಬ್ಬಾಳದಲ್ಲಿ ಮೈಸೂರು ಕೃಷಿ ಕಾಲೇಜು ಆಗಿ ಮಾರ್ಪಡಿಸಿ ಮೈಸೂರು ವಿಶ್ವವಿದ್ಯಾನಿಲಯದ ಸರಹದ್ದಿನಲ್ಲಿ ತರಲಾಯಿತು. ೧೯೪೭ರಲ್ಲಿ ಧಾರವಾಡದಲ್ಲೂ ಕೃಷಿ ಕಾಲೇಜನ್ನು ಸ್ಥಾಪಿಸಿ ಅದನ್ನು ಕರ್ನಾಟಕ ವಿ.ವಿ.ಯ ಸರಹದ್ದಿಗೆ ತರಲಾಯಿತು. ೧೯೫೮ ರಲ್ಲಿ ಹೆಬ್ಬಾಳದಲ್ಲಿ ಪಶು ವಿಜ್ಞಾನ ಕಾಲೇಜು ಸ್ಥಾಪನೆಯೊಂದಿಗೆ ಪಶು ವಿಜ್ಞಾನವನ್ನು ಸಹ ಒಂದು ವಿಭಾಗವಾಗಿ ಬೋಧಿಸಲು ಆರಂಭಿಸಲಾಯಿತು.
ರಚನೆ
[ಬದಲಾಯಿಸಿ]೧೯೪೬ರಿಂದ ಹೆಬ್ಬಾಳದ ಕಾಲೇಜಿನಲ್ಲಿ ನಾಲ್ಕು ವರ್ಷದ ಕೃಷಿ ಪದವಿ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕೃಷಿ ರಂಗದ ಬೆಳವಣಿಗೆಗೆ ಭಾರತ ಸರ್ಕಾರ ನೀಡುತ್ತಿರುವ ಪ್ರಚೋದನೆಯನ್ನು ಮನಗಂಡ ಅಂದಿನ ಮೈಸೂರು ಸರ್ಕಾರವು ಶ್ರೀ ಎಸ್. ನಿಜಲಿಂಗಪ್ಪನವರ ನೇತೃತ್ವದಲ್ಲಿ ಕೃಷಿ ವಿಶ್ವವಿದ್ಯಾನಿಲಯವನ್ನು ಯು.ಎಸ.ಎ.ಯ Land Grant College ವ್ಯವಸ್ಥೆಯ ಮಾಧರಿಯಲ್ಲಿ ಆರಂಭಿಸಿತು ಮತ್ತು University of Agricultural Sciences Act (ಕೃಷಿ ವಿಶ್ವವಿದ್ಯಾನಿಲಯ ಕಾಯ್ದೆ) ೨೨ನ್ನು ವಿಧಾನ ಸಭೆಯು ೧೯೬೩ರಲ್ಲಿ ಅಂಗೀಕರಿಸಿತು.
ಹೀಗೆ ಅಸ್ತಿತ್ವಕ್ಕೆ ಬಂದ ಕೃ.ವಿ.ವಿಯ ಕಾರ್ಯಾಚರಣೆ ವ್ಯಾಪ್ತಿಯು ಅಖಂಡ ಕರ್ನಾಟಕ ರಾಜ್ಯವಾಗಿತ್ತು. ಭಾರತದ ಅಂದಿನ ಉಪ ರಾಷ್ಟ್ರಪತಿಗಳಾದ ಡಾ|| ಜಾಕಿರ್ ಹುಸ್ಸೈನ್ ರವರು ೨೧ನೆ ಆಗಸ್ಟ್ ೧೯೬೪ರಂದು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರುನ್ನು ವಿದ್ಯುಕ್ತವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಮೆರಿಕಾದ ಭಾರತ ರಾಯಭಾರಿಯಾದ ಚೆಸ್ಟರ್ ಬೋವ್ಲ್ಸ್ ಮತ್ತು ಕರ್ನಾಟಕದ ಮುಖ್ಯ ಮಂತ್ರಿಗಳಾದ ಶ್ರೀ ಎಸ್. ನಿಜಲಿಂಗಪ್ಪ ನವರೂ ಸಹ ಉಪಸ್ಥಿತರಿದ್ದರು. ಭಾರತದ ಅಂದಿನ ಪ್ರಧಾನ ಮಂತ್ರಿಗಳಾದ ಶ್ರೀಮತಿ. ಇಂದಿರಾಗಾಂಧಿ ಯವರು ೧೯೬೯ರ ಜುಲೈ ೧೨ ರಂದು GKVK ಆವರಣವನ್ನು ಉದ್ಘಾಟಿಸಿದರು.
ಹೆಬ್ಬಾಳ ಹಾಗು ಧಾರವಾಡದ ಕೃಷಿ ಕಾಲೇಜು, ಹೆಬ್ಬಾಳದ ಪಶು ವಿಜ್ಞಾನ ಕಾಲೇಜು, ರಾಜ್ಯದ ವಿವಿಧ ಮೂಲೆಯಲ್ಲಿನ ೩೫ ಸಂಶೋಧನಾ ಕೇಂದ್ರಗಳು ಹಾಗೂ ರಾಜ್ಯದ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಪಶು ಸಂಗೋಪನಾ ಇಲಾಖೆ ಮತ್ತು ಮೀನುಗಾರಿಕಾ ಇಲಾಖೆಯ ಬಳಿಯಿದ್ದ ಭಾರತೀಯ ಕೃಷಿ ಅನುಸಂಧಾನ ಪರಿಷತ್ ನ ೪೫ ವಿವಿಧ ಯೋಜನೆಗಳನ್ನು ಕೃಷಿ ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ತರಲಾಯಿತು.
ಆವರಣಗಳು
[ಬದಲಾಯಿಸಿ]- ಕೃಷಿ ಮಹಾವಿದ್ಯಾಲಯ, ಜಿ.ಕೆ.ವಿ.ಕೆ. ಬೆಂಗಳೂರು
- ಕೃಷಿ ಮಹಾವಿದ್ಯಾಲಯ, ಮಂಡ್ಯ
- ಕೃಷಿ ಮಹಾವಿದ್ಯಾಲಯ, ಹಾಸನ
- ರೇಷ್ಮೆ ಮಹಾವಿದ್ಯಾಲಯ, ಚಿಂತಾಮಣಿ
ಶೀಘ್ರದಲ್ಲೇ ಮುಂದುವರೆಯಲಿದೆ
-
ಕೃಷಿ ವಿಶ್ವವಿದ್ಯಾನಿಲಯದ ಗ್ರಂಥಾಲಯ
-
ಕೃ ವಿ ವಿ ಯ ನಾಯಕ ಭವನ
-
ಕೃ ವಿ ವಿ ಯ ಮುಖ್ಯ ಆವರಣ, GKVKಯ ಮುಂಭಾಗ
-
ಸಸ್ಯ ಅಂಗಾಂಶ ಕೃಷಿ ಪ್ರಯೋಗ ಶಾಲೆ
-
ಪಶುವೈದ್ಯಕೀಯ ಕಾಲೇಜು ಹೆಬ್ಬಾಳ
-
ಕೃಷಿ ಕಾಲೇಜಿನ ದಕ್ಷಿಣ ವಿಭಾಗ
-
ಕೃಷಿ ಕಾಲೇಜಿನ ಉತ್ತರ ವಿಭಾಗ
-
ಕೃಷಿ ಕಾಲೇಜಿನ ಉತ್ತರ ವಿಭಾಗದ ಇನ್ನೊಂದು ನೋಟ
-
ನಾಯಕ ಭವನ
-
ನಾಯಕ ಭವನ
-
ಮಂಡ್ಯದ ಕೃಷಿ ಮಹಾವಿದ್ಯಾಲಯ
-
ಗ್ರಂಥಾಲಯ
-
ಅಂತರರಾಷ್ಟ್ರೀಯ ವಸತಿ ನಿಲಯ
-
ಅಂತರರಾಷ್ಟ್ರೀಯ ವಸತಿ ನಿಲಯ
-
೪೭ನೇ ಘಟಿಕೋತ್ಸವ
ಉಲ್ಲೇಖಗಳು
[ಬದಲಾಯಿಸಿ]