ವಿಷಯಕ್ಕೆ ಹೋಗು

ಎಚ್. ತಿಪ್ಪೇರುದ್ರಸ್ವಾಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೊನ್ನಾಳಿ ತಿಪ್ಪೇರುದ್ರಸ್ವಾಮಿ
ಎಚ್. ತಿಪ್ಪೇರುದ್ರಸ್ವಾಮಿ
ಜನನ(೧೯೨೮-೦೨-೦೩)೩ ಫೆಬ್ರವರಿ ೧೯೨೮
ಹಿರೇಗೋಣಿಗೆರೆ ಹೊನ್ನಾಳಿ, ದಾವಣಗೆರೆ,, ಕರ್ನಾಟಕ, ಭಾರತ
ಮರಣ೨೮ ಅಕ್ಟೋಬರ್ ೧೯೯೪ (ವಯಸ್ಸು ೬೬)
ಮೈಸೂರು, ಕರ್ನಾಟಕ, ಭಾರತ
ವೃತ್ತಿಕವಿ, ಲೇಖಕ, ಪ್ರಾಧ್ಯಾಪಕ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ

ಹೊನ್ನಾಳಿ ತಿಪ್ಪೇರುದ್ರಸ್ವಾಮಿ ಇವರು ಫೆಬ್ರುವರಿ ೩ ೧೯೨೮ರಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಜನಿಸಿದರು. ತಂದೆ ಚೆನ್ನಮಲ್ಲಯ್ಯ, ತಾಯಿ ಬಸಮ್ಮ. ಹೊನ್ನಾಳಿ, ಶಿರಾಳಕೊಪ್ಪ, ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಸಿದರು. ಬಿ.ಎ ಹಾಗು ಎಂ.ಎ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದರು.ಹಾಸನದ ಕಾಲೇಜಿನಲ್ಲಿ ಕನ್ನಡದ ಅಧ್ಯಾಪಕರಾಗಿ ವೃತ್ತಿ ಜೀವನ ಆರಂಭಿಸಿದರು. ೧೯೬೨ರಲ್ಲಿ 'ಶರಣರ ಅನುಭಾವ ಸಾಹಿತ್ಯ' ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದರು.[] ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಢೆಯಲ್ಲಿ ಅಧ್ಯಾಪಕರಾಗಿ. ನಿರ್ದೇಶಕರಾಗಿ ಬಿ. ಆರ್. ಪ್ರಾಜೆಕ್ಟ್‌ನ ಸ್ನಾತಕೋತ್ತರ ವಿಭಾಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಾಚೀನ ಕನ್ನಡ ಕಾವ್ಯ ಹಾಗೂ ಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದಾರೆ.[]

ಕೃತಿಗಳು

[ಬದಲಾಯಿಸಿ]

ಐತಿಹಾಸಿಕ ಕಾದಂಬರಿಗಳು

[ಬದಲಾಯಿಸಿ]

ಕವನ ಸಂಕಲನ

[ಬದಲಾಯಿಸಿ]
  • ತಪೋರಂಗ

ಕಥಾಸಂಕಲನ

[ಬದಲಾಯಿಸಿ]
  • ಸಾಹಿತ್ಯ ಚಿತ್ರಗಳು
  • ವಿಧಿಪಂಜರ

ವಿಮರ್ಶೆ/ವೈಚಾರಿಕ

[ಬದಲಾಯಿಸಿ]
  • ತೌಲನಿಕ ಕಾವ್ಯ ಮೀಮಾಂಸೆ[]
  • ಕುವೆಂಪು ಸಾಹಿತ್ಯದಲ್ಲಿ ವೈಚಾರಿಕತೆ
  • ಸಾಹಿತ್ಯ ವಿಮರ್ಶೆಯ ಮೂಲ ತತ್ವಗಳು
  • ಕರ್ನಾಟಕ ಸಂಸ್ಕೃತಿ ಸಮೀಕ್ಷೆ
  • ಸಾಹಿತ್ಯ ಮತ್ತು ಸಮಕಾಲೀನ ವಾಸ್ತವಿಕತೆ[]

ಪುರಸ್ಕಾರ

[ಬದಲಾಯಿಸಿ]

ಇವರ "ಕರ್ನಾಟಕ ಸಂಸ್ಕೃತಿ ಸಮೀಕ್ಷೆ" ಕೃತಿಗೆ ೧೯೬೯ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿದೆ.[]

ಎಚ್.ತಿಪ್ಪೇರುದ್ರಸ್ವಾಮಿಯವರು ೨೮ ಅಕ್ಟೋಬರ ೧೯೯೪ ರಲ್ಲಿ ನಿಧರಾದರು.

ಉಲ್ಲೇಖಗಳು

[ಬದಲಾಯಿಸಿ]
  1. "ಡಾ ತಿಪ್ಪೇರುದ್ರಸ್ವಾಮಿ ಎಂಬ ಒಂದು ಹಣತೆ". www.prajavani.net. Retrieved 20 January 2019.
  2. "Sahithya Lokada Meru Dr.H.Thipperudraswamy". www.chethanaonline.com,Author : Dr. H.T.Shylaja. Retrieved 20 January 2019.
  3. "ಉತ್ತಮ ಕೃತಿಕಾರ ತಿಪ್ಪೇರುದ್ರಸ್ವಾಮಿ". vijaykarnataka.indiatimes.com. Retrieved 20 January 2019.
  4. "THIPPERUDRASWAMY H., 1928-1994". www.shastriyakannada.org. Archived from the original on 20 ಜನವರಿ 2019. Retrieved 20 January 2019.
  5. "ತಿಪ್ಪೇರುದ್ರಸ್ವಾಮಿ ಎಚ್, Thipperudraswamy H (4)". www.navakarnatakaonline.com. Archived from the original on 20 ಜನವರಿ 2019. Retrieved 20 January 2019.
  6. "ಪ್ರೊ. ಎಚ್. ತಿಪ್ಪೆರುದ್ರ ಸ್ವಾಮಿ (Kannada)". kanaja.in. Archived from the original on 21 ಜನವರಿ 2019. Retrieved 20 January 2019.