ಕೋಡಿ ಕುಶಾಲಪ್ಪ ಗೌಡ

ವಿಕಿಪೀಡಿಯ ಇಂದ
Jump to navigation Jump to search

ಪ್ರೊ. ಕೋಡಿ ಕುಶಾಲಪ್ಪಗೌಡ: ಸುಳ್ಯ ತಾಲೂಕಿನ ಜಟ್ಟಿಪಳ್ಳದಲ್ಲಿ ನೆಲೆಸಿರುವ ಕುಶಾಲಪ್ಪ ಗೌಡ ಬಿಎ, ಎಂಎ, ಎಂಲಿಟ್, ಪಿಎಚ್‌ಡಿ ಪದವಿಧರರಾಗಿದ್ದಾರೆ. ಪ್ರಾಧ್ಯಾಪಕ, ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಮದರಾಸು ಓರಿಯಂಟಲ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ನ ಗೌರವ ಕರೆಸ್ಪಾಂಡೆಂಟ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಒಟ್ಟು ೧೬ ಕೃತಿಗಳನ್ನು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಪ್ರಕಟಪಡಿಸಿರುವ ಇವರು, ಸುಮಾರು ೫೩ ಸಂಶೋಧನಾತ್ಮಕ ಲೇಖನಗಳನ್ನು, ೧೭ ಸಾಹಿತ್ಯ ವಿಮರ್ಶಾತ್ಮಕ ಪ್ರಬಂಧಗಳನ್ನು, ಅನುವಾದ ಲೇಖನಗಳನ್ನು, ೧೪ ಕವಿತೆಗಳನ್ನು ಪ್ರಕಟಪಡಿಸಿದ್ದಾರೆ. ಸುಳ್ಯದಲ್ಲಿ ೧೯೯೪ರಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಮರಗೋಡಿನಲ್ಲಿ ೨೦೦೩ರಲ್ಲಿ ನಡೆದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ೨೦೦೩ರ ಅಧ್ಯಕ್ಷರಾಗಿದ್ದರು.

ಕೋಡಿ ಕುಶಾಲಪ್ಪಗೌಡರು ಮಡಿಕೇರಿ, ಕೊಡಗು ಪ್ರಾಂತ್ಯದ ಬಳಿ ಕೋಡಿ ಗ್ರಾಮದಲ್ಲಿ ೧೯೩೧ ರಲ್ಲಿ ಜನಿಸಿದರು. ಗೌಡರು ೧೯೫೫ ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಕನ್ನಡ ಪದವಿ ಹಾಗೂ ೧೯೫೬ ರಲ್ಲಿ ಅದೇ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪಡೆದರು. ೧೯೬೩ ರಲ್ಲಿ ಅವರು ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದರು. ಇವರು ಕನ್ನಡದ ವಿದ್ವಾಂಸ, ಬರಹಗಾರ, ದ್ರಾವಿಡಾಲೊಜಿಸ್ಟ್ ಮತ್ತು ಭಾಷಾತಜ್ಞ. ಕನ್ನಡ ಮತ್ತು ಇಂಗ್ಲೀಷ್ ಭಾಷಾಶಾಸ್ತ್ರಜ್ಞರ ೧೨ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.