ಚರ್ಚೆಪುಟ:ಕೋಡಿ ಕುಶಾಲಪ್ಪ ಗೌಡ

ವಿಕಿಪೀಡಿಯ ಇಂದ
Jump to navigation Jump to search

ಪ್ರೊ. ಕೋಡಿ ಕುಶಾಲಪ್ಪಗೌಡ: ಸುಳ್ಯ ತಾಲೂಕಿನ ಜಟ್ಟಿಪಳ್ಳದಲ್ಲಿ ನೆಲೆಸಿರುವ ಕುಶಾಲಪ್ಪ ಗೌಡ ಬಿಎ,ಎಂಎ, ಎಂಲಿಟ್, ಪಿಎಚ್‌ಡಿ ಪದವಿಧರ. ಪ್ರಾಧ್ಯಾಪಕ, ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಮದರಾಸು ಓರಿಯಂಟಲ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ನ ಗೌರವ ಕರೆಸ್ಪಾಂಡೆಂಟ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಒಟ್ಟು 16 ಕೃತಿಗಳನ್ನು ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಪ್ರಕಟಪಡಿಸಿರುವ ಇವರು, ಸುಮಾರು 53 ಸಂಶೋಧನಾತ್ಮಕ ಲೇಖನಗಳನ್ನು, 17 ಸಾಹಿತ್ಯ ವಿಮರ್ಶಾತ್ಮಕ ಪ್ರಬಂಧಗಳನ್ನು, ಅನುವಾದ ಲೇಖನಗಳನ್ನು, 14 ಕವಿತೆಗಳನ್ನು ಪ್ರಕಟಪಡಿಸಿದ್ದಾರೆ. ಸುಳ್ಯದಲ್ಲಿ 1994ರಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ]]ಸಾಹಿತ್ಯ]] ಸಮ್ಮೇಳನ ಹಾಗೂ ಮರಗೋಡಿನಲ್ಲಿ 2003ರಲ್ಲಿ ನಡೆದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ 2003ರ ಅಧ್ಯಕ್ಷರಾಗಿದ್ದರು.