ಪೆರಾಜೆ

ವಿಕಿಪೀಡಿಯ ಇಂದ
Jump to navigation Jump to search

ಪೆರಾಜೆ ಗ್ರಾಮ ಇದು ಕೊಡಗು ಜಿಲ್ಲೆಯ ಭಾಗವಾಗಿದ್ದರೂ ಪಶ್ಚಿಮಘಟ್ಟದ ಕೆಳಗಿನ ಭಾಗವಾಗಿದ್ದರಿಂದ ಸುಳ್ಯ ತಾಲೂಕಿನೊಳಗೆ ಬೆಸೆದುಕೊಂಡಿದೆ.

ಗ್ರಾಮದ ಪರಿಸರ[ಬದಲಾಯಿಸಿ]

ಹೆಚ್ಚಿನ ಜನರು ಸರಕಾರಿ ವ್ಯವಹಾರಗಳಿಗೆ ಸಂಪಾಜೆ ಘಾಟಿ ಏರಿ ಮಡಿಕೇರಿಗೆ ಹೋಗುತ್ತಾರೆ. ಮಂಗಳೂರು-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಕಾಲಿರಿಸಿಕೊಂಡ ಈ ಗ್ರಾಮ ದಕ್ಷಿಣಕ್ಕೆ ಹರಡಿಕೊಂಡು ಕೇರಳ, ಕರಿಕೆ ಗಡಿಯನ್ನು ಹೊಂದಿದೆ. ದಕ್ಷಿಣ ಭಾಗ ಕರಿಕೆ, ಕೋಳಿಕ್ಕಮಲೆ ಘಟ್ಟ ಪರ್ವತ ಶ್ರೇಣಿಗಳಿಂದಾಗಿ ಸಂಚಾರ ದುರ್ಗಮವಾಗಿದೆ. [೧] ಜನರು ತಮ್ಮ ಹಲವು ವ್ಯವಹಾರಗಳಿಗೆ ಪೆರಾಜೆಗೆ ಹೋಗುತ್ತಾರೆ. ಜ್ಯೋತಿ ಹೈಸ್ಕೂಲ್ ಎಂಬ ಖಾಸಗಿ ಹೈಸ್ಕೂಲ್ ಇದೆ. ಅಂಚೆ ಕಛೇರಿ ಗ್ರಾಮ ಪಂಚಾಯತ್ ಕಛೇರಿಗಳು ಗ್ರಾಮದೊಳಗಿವೆ. ಸಂಪಾಜೆ ಸಹಕಾರಿ ಸಂಘದ ಶಾಖೆಯೊಂದು ಇಲ್ಲಿದ್ದು ಹೆಚ್ಚಿನೆಲ್ಲಾ ವ್ಯವಹಾರಗಳಿಗೆ ಸಂಪಾಜೆಗೆ ಹೋಗಬೇಕು. ಅಡ್ಡವಾಗಿ ಹರಿಯುವ ಪಯಸ್ವಿನಿಗೆ ಸೇತುವೆ ಆಗಿರುವುದು ಊರಿಗೊಂದು ವರದಾನ.[೨]

ಬೈಲುಗಳು[ಬದಲಾಯಿಸಿ]

 • ದೊಡ್ಡಡ್ಕ
 • ಮೂಲೆಮಜಲು
 • ಕೋಡಿ
 • ಬಂಗಾರ್ಕೋಡಿ
 • ಅಮ್ಚೂರು
 • ಚಾಂಬಾಡಿ
 • ಕುಂಡಾಡು
 • ಕಾಪಿತೋಟ
 • ನಿಡ್ಯಮಲೆ
 • ಪೆರುಮುಂಡ
 • ಪುತ್ಯ
 • ಕರಂಟಡ್ಕ
 • ನೆಡ್ಚಿಲು
 • ಕುಂದಲ್ಪಾಡಿ
 • ಕೊಳಂಗಾಯ
 • ಮುಡ್ಕಾಜೆ
 • ಕುಂಬಳಚ್ಚೇರಿ
 • ಮಜಿಕೋಡಿ
 • ಹೊದ್ದೆಟ್ಟಿ

ದೈವಗಳು[ಬದಲಾಯಿಸಿ]

ಗ್ರಾಮದೊಳಗಿನ ಪ್ರಮುಖ ಬೈಲುಗಳು ಪೆರಾಜೆಯಲ್ಲಿ ಹದಿನೈದಕ್ಕೂ ಹೆಚ್ಚು ದೈವಗಳ ಆರಾಧನಾ ಕೇಂದ್ರಗಳಿರುವುದು ವಿಶೇಷ. ಅವುಗಳಲ್ಲಿ ಕೆಲವು:

 1. ವಿಷ್ಣುಮೂರ್ತಿ, ಉಳ್ಳಾಕುಳು, ದೂಮಾವತಿ ಪ್ರಮುಖವಾಗಿ ಆರಾಧಿಸಲ್ಪಡುವ ದೈವಗಳು.
 2. ಪೆರಾಜೆಯ ಭಗವತಿ ಕೇರಳದ ಪ್ರಭಾವ ಹೊಂದಿದೆ. ಪೆರ್ಜದ ದೊಡ್ಡಮುಡಿ ಇಲ್ಲಿಯ ಸಾಂಸ್ಕೃತಿಕ ವೈಶಿಷ್ಟ್ಯಗಳಲ್ಲೊಂದು.
 3. ಅಂತೆಯೇ ಕಂಭೂತ ಬಹಳ ಅಪರೂಪದ ದೈವವಾಗಿದ್ದು ಇಲ್ಲಿ ಆರಾಧಿಸಲ್ಪಡುತ್ತದೆ. ಇತ್ತ ಕೊಡಗು. ಅತ್ತ ಕೇರಳ ಮತ್ತು ಕರಾವಳಿ ಸಂಸ್ಕೃತಿಗಳ ಸಂಗಮ ಭೂಮಿ ಪೆರಾಜೆ.[೩]

ಉಲ್ಲೇಖಗಳು[ಬದಲಾಯಿಸಿ]

 1. ಸುದ್ದಿ ಮಾಹಿತಿ,ಸಂ.ಡಾ.ಯು.ಪಿ.ಶಿವಾನಂದ ಪುಟಸಂಖೈ ೭೦೪-೭೦೫
 2. http://www.onefivenine.com/india/villages/Dakshin-Kannad/Bantval/Peraje
 3. http://www.onefivenine.com/india/villages/Kodagu/Madikeri/Peraje
"https://kn.wikipedia.org/w/index.php?title=ಪೆರಾಜೆ&oldid=947235" ಇಂದ ಪಡೆಯಲ್ಪಟ್ಟಿದೆ