ಅರೆಭಾಷೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
 1. ದಕ್ಷಿಣ ಕನ್ನಡ ಜಿಲ್ಲೆಸುಳ್ಯ,ಪುತ್ತೂರು ಮತ್ತು ಬೆಳ್ತಂಗಡಿ ಪರಿಸರದಲ್ಲಿ ಮತ್ತು ಕೊಡಗಿನ ಮಡಿಕೇರಿ, ಸೋಮವಾರಪೇಟೆ, ಭಾಗಮಂಡಲ ಪರಿಸರದಲ್ಲಿ ಮತ್ತು ಕಾಸರಗೋಡಿನ ಬಂದಡ್ಕ ಪ್ರದೇಶಗಳಲ್ಲಿ ಪ್ರಚಲಿತದಲ್ಲಿರುವ ಅರೆ ಭಾಷೆಯು ಕನ್ನಡದ ಒಂದು ಸಾಮಾಜಿಕ ಉಪ ಭಾಷೆಯೆಂಬುದನ್ನು ವಿದ್ವಾಂಸರು ಈಗಾಗಲೇ ಖಚಿತಪಡಿಸಿದ್ದಾರೆ. ಈ ಭಾಷೆಯಲ್ಲಿ ಇಂದಿಗೂ ಕಾಣಸಿಗುವ ಕೆಲವು ವಿಶಿಷ್ಟ ಪದಗಳು ಸಾವಿರ ವರ್ಷಗಳಿಗೂ ಹಳೆಯವು ಹೌದಾದರೂ, ಅವು ಅರೆ ಭಾಷೆಯ ರೂಪದಲ್ಲಿ ಕಾಣಿಸಿಕೊಂಡು ಹೆಚ್ಚೆಂದರೆ 500 ವರ್ಷಗಳನ್ನು ಮೀರಿರಲಾರದು. ಏಕೆಂದರೆ ಅ ೆಭಾಷೆಯನ್ನು ಪ್ರಧಾನವಾಗಿ ಮಾತಾಡುವ ಸುಳ್ಯ ಪರಿಸರದ ಗೌಡ ಸಮುದಾಯದ ಜನರು, ಮೇಲೆ ಹೇಳಿದ ಭೌಗೋಳಿಕ ಪರಿಸರದ ಮೂಲ ನಿವಾಸಿಗಳೇನೂ ಅಲ್ಲ. ಅವರು ಈಗಣ ಹಾಸನ ಪರಿಸರದಲ್ಲಿರುವ ಐಗೂರು ಪ್ರಾಂತ್ಯದಿಂದ ಕರಾವಳಿಯ ಕಡೆಗೆ ವಲಸೆ ಹೋದವರು. ಈ ವಲಸೆಗೆ ನಿರ್ದಿಷ್ಟ ಕಾರಣಗಳೇನು? ಈ ವಲಸೆ ಯಾವಾಗ ನಡೆಯಿತು ಎಂದೆಲ್ಲಾ ಹೇಳಲು ಲಿಖಿತ ಆಧಾರಗಳೇನೂ ಇಲ್ಲ. ಮೌಖಿಕ ಆಧಾರಗಳ ಸಹಾಯದಿಂದ ಇದು 15-16ನೇ ಶತಮಾನದಲ್ಲಿ ನಡೆದಿರಬಹುದಾದ ಘಟನೆ ಎಂದು ಊಹಿಸಬಹುದು.ಅಂದಿನಂತೆ ಇಂದಿಗೂ ಹಾಸನ ಪರಿಸರದಲ್ಲಿ ಅರೆ ಭಾಷೆ ಪ್ರಚಲಿತದಲ್ಲಿ ಇಲ್ಲ. ಇದು ಹೌದಾದರೆ ಅರೆ ಭಾಷೆಗೆ ಹೆಚ್ಚೆಂದರೆ 400ರಿಂದ 500 ವರ್ಷಗಳ ಇತಿಹಾಸವಿದೆ. ಅರೆ ಭಾಷೆಯಲ್ಲಿರುವ ಅನೇಕ ಪದಗಳು ಮೂಲ ದ್ರಾವಿಡದ ಕಾಲಕ್ಕೆ ಹೋಗಬಹುದು, ಆದರೆ ಅದರ ಆ ಭಾಷೆಯ ಈಗಿನ ಸ್ವರೂಪ ಅಷ್ಟು ಹಳೆಯದಲ್ಲ.
 2. ಈ ಅರೆ ಭಾಷಿಕ ಗೌಡರು ಇತರ ಸಮುದಾಯದ ಜನರೊಂದಿಗೆ ಸೇರಿಕೊಂಡು ಕೊಡಗಿನಿಂದ ಬ್ರಿಟಿಷರನ್ನು ಪದಚ್ಯುತಗೊಳಿಸಲು ಸುಮಾರು 5 ವರ್ಷಗಳ ಕಾಲ (1832-37) ಹೋರಾಡಿದ್ದು ಇದೀಗ 'ಕಲ್ಯಾಣಪ್ಪನ ಕಾಟಕಾಯಿ' ಎಂದು ಪ್ರಸಿದ್ಧವಾಗಿದೆ. ಈ ಹೋರಾಟದಿಂದ ಬ್ರಿಟಿಷರ ಅವಕಪೆಗೆ ಒಳಗಾದ ಸುಳ್ಯ ಪರಿಸರವು ಅಭಿವದ್ಧಿಯಾಗದೆ ಹಿಂದೆ ಬಿತ್ತು. 1970-80ರ ದಶಕದಲ್ಲಿ ಅಡಿಕೆಗೆ ಒಳ್ಳೆಯ ಮಾರುಕಟ್ಟೆ ದೊರಕಿದ ಆನಂತರ ಸುಳ್ಯವು ಅಭಿವದ್ಧಿಯಾಯಿತು. ಇಂಥ ಬೆಳವಣಿಗೆಗೆಳ ಜತೆಗೆ ಅರೆ ಭಾಷೆ- ಸಾಹಿತ್ಯಗಳ ಬಗೆಗೂ ನಿಧಾನವಾಗಿ ಜನರಲ್ಲಿ ತಿಳಿವಳಿಕೆ ಹೆಚ್ಚತೊಡಗಿತು. ಅಣ್ಣಾಮಲೈನಲ್ಲಿ ಇದ್ದು, ಮುಂದೆ ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಸಿದ್ಧ ಭಾಷಾ ವಿಜ್ಞಾನಿ ಪ್ರೊ.ಕೋಡಿ ಕುಶಾಲಪ್ಪಗೌಡರು ಅರೆ ಭಾಷೆಯನ್ನು 'ಗೌಡ ಕನ್ನಡ'ವೆಂದು ಕರೆದು, ಇಂಗ್ಲಿಷಿನಲ್ಲಿ ಪುಸ್ತಕ ಪ್ರಕಟಿಸಿದ ಮೊದಲ ಮಹನೀಯರು. ಆದರೆ ಸುಳ್ಯ ಪರಿಸರದಲ್ಲಿ ಗೌಡೇತರರೂ ಈ ಭಾಷೆಯನ್ನು ಆಡುವುದರಿಂದ 'ಅರೆ ಭಾಷೆ'ಯೆಂಬ ಪದ ಬಳಕೆಯಲ್ಲಿ ಉಳಿಯಿತು. ಈ ಭಾಷೆಯಲ್ಲಿ ಕನ್ನಡವು ಅರ್ಧರೂಪದಲ್ಲಿ ಉಳಿದಿರುವುದರಿಂದ ಅದನ್ನು ಯಾರೋ ಅರೆ ಭಾಷೆಯೆಂದು ಕರೆದಿರಬೇಕು. ಉದಾಹರಣೆಗೆ 'ಹೋಗುತ್ತೇನೆ' ಎಂಬ ಕನ್ನಡ ಪದವು ಅರೆಭಾಷೆಯಲ್ಲಿ 'ಹೋನೆ'; 'ಬರುತ್ತೇನೆ-ಬನ್ನೆ'; 'ತಿನ್ನುತ್ತೇನೆ' ಎಂಬುದು 'ತಿಂದನೆ' ಎಂದೆಲ್ಲಾ ಆಗುತ್ತದೆ. ಕನ್ನಡದಿಂದ ಇದೀಗ ಮರೆಯಾಗುತ್ತಿರುವ ಙ, ಞ, ಗಳೆಲ್ಲ ಈ ಭಾಷೆಯಲ್ಲಿ ಈಗಲೂ ಉಳಿದಿದೆ. ಕನ್ನಡಿಗರಿದ್ದಾರೆ.
 3. ಅರೆಭಾಷೆ ಅಥವಾ ಗೌಡ ಕನ್ನಡ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಗೌಡ ಜನರು ಉಪಯೋಗಿಸುವ ಕನ್ನಡ ಭಾಷೆಯ ಒಂದು ವಿಧ.

ಅರೆಭಾಷೆ ಕನ್ನಡಿಗರು[ಬದಲಾಯಿಸಿ]

 1. ಅರೆಭಾಷೆ ಗೌಡರು [ಸುಳ್ಯ ತಾಲೂಕು] [1] ಅಥವಾ ಕೊಡಗು ಗೌಡರು [ಮಡಿಕೇರಿಮತ್ತು ಸೋಮವಾರ ಪೇಟೆ] ಮತ್ತು ತುಳು ಗೌಡರು ದಕ್ಷಿಣಕನ್ನಡಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ವಿಟ್ಲ, ಮಂಗಳೂರು,ಕಡಬ ಭಾಗಗಳಲ್ಲಿ ಒಂದು ಪ್ರಮುಖ ಜನಾಂಗದ ಗುಂಪಾಗಿದ್ದಾರೆ. ಆದ್ದರಿಂದ, ಕೆಲವು ಬಾರಿ ಕೊಡಗು (ಕೂರ್ಗ್) ಭಾಗವಾದ ಸುಳ್ಯದಲ್ಲಿ ಬದುಕುತ್ತಿರುವ ತುಳುವರು ಮತ್ತು ದಕ್ಷಿಣ ಕನ್ನಡ ಗೌಡರನ್ನು ಕೊಡಗು ಮತ್ತು ದಕ್ಷಿಣಕನ್ನಡದ ಗೌಡರು ಎಂದು ಕರೆಯಲಾಗುತ್ತದೆ.

ಅರೆಭಾಷೆ ಅಜ್ಜಿಕತೆಗಳು[ಬದಲಾಯಿಸಿ]

 1. ಸುಳ್ಯ ಪರಿಸರದಲ್ಲಿ ಮಾತನಾಡುವ ಗೌಡಕನ್ನಡ/ಅರೆಭಾಷೆ ಯಲ್ಲಿ ನೂರಾರು ಕತೆಗಳಿವೆಯೆಂದು ಡಾ. ವಿಶ್ವನಾಥ ಬದಿಕಾನ ಅವರ (ಎಂ.ಪೀಲ್.ಪ್ರೌಡ ಪ್ರಬಂಧ) "ಗೌಡಕನ್ನಡದ ಜನಪದ ಕತೆಗಳು" ಕೃತಿಯಿಂದ ತಿಳಿದು ಬರುದತ್ತದೆ. ಅವುಗಳಲ್ಲಿ ಕೆಲವು ಕತೆಗಳನ್ನು ಅರೆಭಾಷೆಯಲ್ಲೇ ಓದುವ ಪ್ರಯತ್ನವನ್ನು ಮಾಡಬಹುದು.

ಅರೆಭಾಷಿಗರ ಮದುವೆ ಸಂಸ್ಕೃತಿ[ಬದಲಾಯಿಸಿ]

 1. ಅರೆಬಾಸೆ ಗೌಡರು( ಅರೆಭಾಷೆ ) ಹಾಗೂ ತುಳು ಗೌಡರು ದಕ್ಷಿಣ ಕರ್ನಾಟಕದ ವಿವಿಧ ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ವ್ಯಾಪಕವಾಗಿ ಇದ್ದಾರೆ, [ 1 ] ಪ್ರಮುಖವಾಗಿ ಸುಳ್ಯ , ಮಂಗಳೂರು, ಮೈಸೂರು, ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
 2. ಆದಿಸ್ವರೂಪದಲ್ಲಿ " ಹತ್ತು ಕುಟುಂಬ - ಹದಿನೆಂಟು (ಬಳಿ) ಗೋತ್ರಗಳಿದ್ದವು. ಅವು ಪ್ರತ್ಯೇಕಗೊಂಡು ಇಂದು 100ಕ್ಕೂ ಹೆಚ್ಚು ಕುಟುಂಬಗಳು ಆಗಿವೆ. ಗೌಡರು ಮೂಲತಃ ಕೃಷಿಕರು ಮತ್ತು ಬೇಟೆಗಾರರು.
 3. ಗೌಡರ ಮನೆದೇವರು ತಿರುಪತಿ ತಿಮ್ಮಪ ಅಥವಾ ವೆಂಕಟರಮಣ ಪೂಜೆ. ಮಹಾಲಕ್ಷ್ಮಿ. ಗೌಡರ ಕುಟುಂಬದ ಮನೆಗಳಲಿ ತಿರುಪತಿ ತಿಮ್ಮಪ್ಪ ದೇವರ ಹುಂಡಿ ಮುಡಿಪು ಇದೆ. ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ಮುಡಿಪು ಶುದ್ಧ ಕ್ರಮವನ್ನು ಆಚರಿಸುತ್ತಾರೆ. ಗೌಡರ ಮನೆ ದೇವತೆ ಸಬ್ಬಮ್ಮ , ಶೃಂಗೇರಿ ಶ್ರೀ ಶಾರದಾ ದೇವಿ ಮಠ ದಕ್ಷಿಣಕನ್ನಡದ ಗೌಡರ ಆದಿಮಠಅಥವಾ ಗುರುಮಠ.

ನಾಟಿವೈದ್ಯರು[ಬದಲಾಯಿಸಿ]

 1. ಜನಪದ ವೈದ್ಯರು, ನಾಟಿವೈದ್ಯರು ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಗಿಡಮೂಲಿಕೆಗಳನ್ನು ಔಷಧಿಯಾಗಿ ನೀಡುವವರು ಪ್ರತೀ ನಾಡಿನಲ್ಲೂ ಇದ್ದಾರೆ. ಪ್ರಸ್ತುತ ಸುಳ್ಯ ತಾಲೂಕಿನಲ್ಲಿ ನಾಡಿವೈದ್ಯರಾಗಿ ಗುರುತಿಸಿಕೊಳ್ಳುವವರನ್ನು ಪರಿಚಯಿಸಿಕೊಳ್ಳಬಹುದು.
 2. ಪದ್ಮಯ್ಯಗೌಡ
 1. ದಿ|.ಕೃಷ್ಣಪ್ಪ ಗೌಡ ಕುಡೆಕಲ್ಲು
 2. ಗುಡ್ಡಪ್ಪ ಗೌಡ ಕೋಲ್ಚಾರು
 3. ಮಾದವ ಗೌಡ ಸುಳ್ಯಕೋಡಿ
 4. ದಿ. ಕಾಟೂರು ಗುಡ್ಡಪ್ಪ ಗೌಡ

ಅರೆಭಾಷೆ ಬರಹಗಾರರು[ಬದಲಾಯಿಸಿ]

 • ಯಶವಂತ ಕುಡೆಕಲ್ಲು- ಅರೆಭಾಷೆಯ ಕೃತಿಗಳು- ತೊಂಬರ,ಜೇನೆರಿ (ಪೊದ್ಯ ಪುಸ್ತಕ)
 • ತೇಜಕುಮಾರ ಬಡ್ಡಡ್ಕ(ಕುಡೆಕಲ್ಲು)-
 • ವಿದ್ಯಾಧರ ಬಡ್ಡಡ್ಕ(ಕುಡೆಕಲ್ಲು)-ಕೆದಂಬಾಡಿ ರಾಮ ಗೌಡ(ನಾಟಕ)

ಗೌಡರು ಆಚರಿಸುವ ಹಬ್ಬಗಳು.[ಬದಲಾಯಿಸಿ]

ದೀಪಾವಳಿ,ಹೊಸ್ತು,

ಅರೆಭಾಷಾ ಅಧ್ಯಯನ[ಬದಲಾಯಿಸಿ]

 • ಕೋಡಿ ಕುಶಾಲಪ್ಪ ಗೌಡರು ಅರೆಭಾಷೆಯಲ್ಲಿ ರಾಮಾಯಣ ಕೃತಿಯನ್ನು ಬರೆದರು.
 • ಕೆ.ಆರ್.ಗಂಗಾದರರು-ಶಬ್ಧಕೋಶವನ್ನು ಸಂಪಾದಿಸಿದ್ದಾರೆ.

ಕನ್ನಡ,ತುಳು ದಕ್ಷಿಣಕನ್ನಡದಲ್ಲಿ ಬಹುಸಂಖ್ಯಾತರು ಮಾತನಾಡುವ ಕನ್ನಡ ಭಾಷೆಯ ಉಪಭಾಷೆ. ಅರೆಭಾಷೆ ಕೊಡಗು ಮತ್ತು ಸುಳ್ಯದ ಗೌಡರ ಮುಖ್ಯ ಭಾಷೆ ಆಗಿದೆ. ಸುಳ್ಯ ಭಾಗಗಳಲ್ಲಿ ತುಳು ಮತ್ತು ಮಡಿಕೇರಿ,ಭಾಗಮಂಡಲ, ಕುಶಾಲನಗರ ಪ್ರದೇಶಗಳಲ್ಲಿ ಕೊಡವ ಭಾಷೆ ಮಾತನಾಡುತ್ತಾರೆ.

ಐನ್ ಮನೆಗಳು[ಬದಲಾಯಿಸಿ]

 1. ಕುಂಚಡ್ಕ.
 2. ಕುಡೆಕಲ್ಲು.
 3. ಕೋಲ್ಚಾರು.
 4. ನಡುಬೆಟ್ಟು.
 5. ಸೋಣಂಗೇರಿ ನಡುಮನೆ.
 6. ಬಲ್ನಾಡು.

ಅರೆಭಾಷೆ ಜಾನಪದ ಅಧ್ಯಯನ[ಬದಲಾಯಿಸಿ]

 1. ಸುಳ್ಯ ತಾಲೂಕಿನಲ್ಲಿ ಜಾನಪದ ಅಧ್ಯಯನಕ್ಕೆ ತೊಡಗಿಸಿಕೊಂಡ ಹಲವರನ್ನು ಈ ಲೇಖನದಲ್ಲಿ ಪರಿಚಯಿಸಲಾಗಿದೆ. ಪುರುಷೋತ್ತಮ ಬಿಳಿಮಲೆ, ವಿಶ್ವನಾಥ ಬದಿಕಾನ, ಪೂವಪ್ಪ ಕಣಿಯೂರು, ಮುಂತಾದವರು ಸಂಶೋಧನೆಗೆ ಅರೆಭಾಷೆಯನ್ನು ಒಳಪಡಿಸಿದ್ದಾರೆ.

ಅರೆಭಾಷೆ - ಭಾಷಾ ಬಳಕೆ[ಬದಲಾಯಿಸಿ]

ಅರೆಭಾಷೆ ಮಡಿಕೇರಿ ಪಟ್ಟಣದಲ್ಲಿ ಮತ್ತು ದಕ್ಷಿಣ ಕನ್ನಡದ ಸುಳ್ಯ ಗೌಡರ ಮುಖ್ಯ ಭಾಷೆ, ಪುತ್ತೂರು , ಮಂಗಳೂರು ಪದ್ಧತಿಯು ತುಳುಗೌಡರಿಗೆ ಪ್ರಭಾವ ಬೀರಿದೆ. ಮಡಿಕೇರಿ ಆಕಾಶವಾಣಿಯಲ್ಲಿ ಅರೆಭಾಷೆ ಸುದ್ದಿ : ಸುದ್ದಿ ಯಾಗಿ ಅರೆಭಾಷೆಯನ್ನು ಮಡಿಕೇರಿ ಆಕಾಶವಾಣಿಯ ದೈನಂದಿನ 7:45 ಕ್ಕೆ, ಸುಳ್ಯ ಮತ್ತು ಕೊಡಗು ಪ್ರದೇಶದಲ್ಲಿ ನಡೆದ ವಿವಿಧ ಗೌಡ ಚಟುವಟಿಕೆಗಳನ್ನು ಸ್ಥಳೀಯ ಸುದ್ದಿ ಒಳಗೊಂಡು ಪ್ರಸಾರ ಮಾಡುತ್ತಿದೆ.

"https://kn.wikipedia.org/w/index.php?title=ಅರೆಭಾಷೆ&oldid=657906" ಇಂದ ಪಡೆಯಲ್ಪಟ್ಟಿದೆ