ಆಕಾಶವಾಣಿ
ಗೋಚರ
- ರೇಡಿಯೋ ಲೇಖನಕ್ಕಾಗಿ ಇಲ್ಲಿ ನೋಡಿ.
ಆಕಾಶವಾಣಿ ಸಂಸ್ಕೃತ ಮೂಲದ ಒಂದು ಶಬ್ದ. ಇದರರ್ಥ "ಆಕಾಶದಿಂದ ಬರುವ ಘೋಷಣೆ" ಅಥವಾ "ಸ್ವರ್ಗದಿಂದ ಬರುವ ಧ್ವನಿ".[೧]
ರೇಡಿಯೋದ ವಿಷಯದಲ್ಲಿ "ಆಕಾಶವಾಣಿ" ಶಬ್ದವನ್ನು ಎಮ್.ವಿ. ಗೋಪಾಲಸ್ವಾಮಿ ಮೊದಲು ಬಳಸಿದರು. ೧೯೩೬ರಲ್ಲಿ, ತಮ್ಮ ನಿವಾಸದಲ್ಲಿ ರಾಷ್ಟ್ರದ ಮೊದಲ ಖಾಸಗಿ ರೇಡಿಯೋ ಕೇಂದ್ರವನ್ನು ಸ್ಥಾಪಿಸಿದ ನಂತರ ಅವರು ಈ ಶಬ್ದವನ್ನು ಬಳಸಿದರು.[೨] ಭಾರತದ ಸಾರ್ವಜನಿಕ ರೇಡಿಯೋ ಪ್ರಸಾರ ಕೇಂದ್ರವಾದ ಅಖಿಲ ಭಾರತ ಬಾನುಲಿ ಕೇಂದ್ರವು ೧೯೫೬ರಲ್ಲಿ ತನ್ನ ಪ್ರಸಾರ ಹೆಸರನ್ನು ಆಕಾಶವಾಣಿ ಎಂದು ಅಳವಡಿಸಿಕೊಂಡಿತು. ಒಂದು ಪ್ರಸಾರ ಕೇಂದ್ರಕ್ಕೆ ಈ ಪದ ಹೆಚ್ಚು ಸೂಕ್ತವೆಂದು ಅನಿಸಿತು.