ವಿಶ್ವನಾಥ ಬದಿಕಾನ
Jump to navigation
Jump to search
ವಿಶ್ವನಾಥ ಬದಿಕಾನ | |
---|---|
ವಿಶ್ವನಾಥ ಬದಿಕಾನ | |
ಜನನ | ಜುಲೈ 1, 1965 ಬದಿಕಾನ |
ವೃತ್ತಿ | ಪ್ರಾಧ್ಯಾಪಕ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಜನಪದ, ಅರೆಭಾಷೆ |
ವಿಷಯ | ಅರೆಭಾಷೆ ಮತ್ತು ತುಳು ಜನಪದ |
ಸಾಹಿತ್ಯ ಚಳುವಳಿ | ಸಮತಾವಾದ |
ಡಾ. ವಿಶ್ವನಾಥ ಬದಿಕಾನ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ಎಂಎ, ಪಿಎಚ್‌ಡಿ ಪದವಿ ಪಡೆದಿರುವ ಬದಿಕಾನ, ಸುಮಾರು ೨೧ ವರ್ಷಗಳಿಂದ ಅಧ್ಯಾಪಕ ವೃತ್ತಿ ಮಾಡಿದ್ದಾರೆ. 25ಕ್ಕಿಂತಲೂ ಹೆಚ್ಚು ಸಂಶೋಧನ ಲೇಖನಗಳು ಪ್ರಕಟಗೊಂಡಿದ್ದು, ತುಳು ಜನಪದ ಕತೆಗಳ ಸಂಗ್ರಹ ಮತ್ತು ಅರೆಭಾಷೆ ಜನಪದ ಕತೆಗಳ ಸಂಗ್ರಹವನ್ನೂ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪರಿಸರದಲ್ಲಿ ಗೌಡ ಜನಾಂಗದವರು ಮಾತನಾಡುವ ಅರೆಭಾಷೆ ಯಲ್ಲಿ ಪ್ರಚಲಿತವಿರುವ ಜನಪದ ಕತೆಗಳನ್ನು ಸಂಗ್ರಹಿಸಿ ಪ್ರಕಟಿಸುತ್ತಿದ್ದಾರೆ[೧]. ಪ್ರಸ್ತುತ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕೂಡ ಕಾರ್ಯನಿರ್ವಹಿಸುತ್ತಾರೆ.
ಕೃತಿಗಳು[ಬದಲಾಯಿಸಿ]
- ಗೌಡ ಕನ್ನಡದ ಜನಪದ ಕತೆಗಳು
- ಗೌಡ ಕನ್ನಡದ ಜನಪದ ಗಾದೆಗಳು
- ಎ.ಕೆ. ರಾಮನುಜನ್ ಬದುಕು ಬರಹಗಳು
- ತುಳುತ ಕತಾ ಸಂಸ್ಕೃತಿ (ತುಳು)
- ಅರೆಬಾಸೆನ ಅಜ್ಜಿಕತೆಗ(೨೦೧೬)