ಸಂತ ಅಲೋಶಿಯಸ್ ಕಾಲೇಜು

ವಿಕಿಪೀಡಿಯ ಇಂದ
Jump to navigation Jump to search
ಸಂತ ಅಲೋಶಿಯಸ್ ಕಾಲೇಜು
St. Aloysius College.jpg
Lucet et Ardet ಇದು ಹೊಳೆಯುತ್ತದೆ ಮತ್ತು ಇದು ಪ್ರಜ್ವಲಿಸುತ್ತದೆ (It shines and it burns)
Location
ಬಾವಟೆ ಗುಡ್ಡೆ, ಕೊಡಿಯಾಲ ಬೈಲ್ - ೫೭೫ ೦೦೩
ಮಂಗಳೂರು, ಕರ್ನಾಟಕ, ಭಾರತ
Information
ಬಗೆ ಸ್ವಾಯತ್ತ ಪದವಿ ಕಾಲೇಜು
ಸ್ಥಾಪನೆ ೧೮೮೦; ೧೩೬ ವರ್ಷಗಳ ಹಿಂದೆ
Principal ಸ್ವೀಬರ್ಟ್ ಡಿ'ಸಿಲ್ವಾ
Grades ನ್ಯಾಕ್ ಗ್ರೇಡ್ (೩.೬೨)
Enrollment ೧೯೭೧
Campus ಮಹಾನಗರ
Affiliation ಜೇಸುವಿಟ್, (ರೋಮನ್ ಕ್ಯಾಥೊಲಿಕ್)
Information 0824 244 9700
Website

ಸಂತ ಅಲೋಶಿಯಸ್ ಕಾಲೇಜು ಮಂಗಳೂರಿನ ಹೃದಯ ಭಾಗದಲ್ಲಿದೆ.

ಸಂತ ಅಲೋಶಿಯಸ್ ಕಾಲೇಜು(ಸ್ವಾಯತ್ತ)[ಬದಲಾಯಿಸಿ]

ಸಂತ ಅಲೋಶಿಯಸ್ ಕಾಲೇಜು ಕರ್ನಾಟಕದಕ್ಷಿಣ ಕನ್ನಡ ಜಿಲ್ಲೆಮಂಗಳೂರು ನಗರದ ಹೃದಯ ಭಾಗದಲ್ಲಿದೆ. ನಗರದ ಪ್ರತಿಷ್ಠಿತ ಕಾಲೇಜುಗಳಲ್ಲಿ ಈ ಕಾಲೇಜು ಪ್ರಮುಖವಾದುದು ಎಂದು ಗುರುತಿಸಿಕೊಂಡಿದೆ. ಇತ್ತೀಚೆಗೆ ನ್ಯಾಕ್ ೩.೬೨ ಅಂಕ ಪಡೆದು ಉತ್ತಮ ಶ್ರೇಣಿಯಲ್ಲಿ ಮಾನ್ಯತೆ ಪಡೆದು, ರಾಜ್ಯದ ಪ್ರಮುಖ ೫ ಸಂಸ್ಥೆಗಳಲ್ಲಿ ಒಂದೆಂದು ಗುರುತಿಸಿಕೊಂಡಿದೆ. ದೇಶದ ೧೦೦ ಕಾಲೇಜುಗಳಲ್ಲಿ ಸಂತ ಅಲೋಶಿಯಸ್ ಕಾಲೇಜು ಗುರುತಿಸಿಕೊಂಡಿದೆ. [೧]

ಸಂತ ಅಲೋಶಿಯಸ್ ಕಾಲೇಜು

ಕಾಲೇಜಿನ ಚರಿತ್ರೆ[ಬದಲಾಯಿಸಿ]

ಸಂತ ಅಲೋಶಿಯಸ್ ಕಾಲೇಜು 1880ರಲ್ಲಿ ಆರಂಭವಾಯಿತು. ಸಂತ ಅಲೋಶಿಯಸ್ ಕಾಲೇಜು ಎಂಬ ಹೆಸರಿನಲ್ಲಿ ಆರಂಭವಾದ ಈ ಸಂಸ್ಥೆಯು ಪ್ರಾಥಮಿಕ, ಮಾಧ್ಯಮಿಕ, ಪ್ರೌಢ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಹೀಗೆ ಹಲವು ಸಂಸ್ಥೆಗಳನ್ನು ಹೊಂದಿದೆ. ಈ ಕಾಲೇಜಿಗೆ ೧೩೬ ವರ್ಷಗಳ ಇತಿಹಾಸವಿದೆ. 2007ರಲ್ಲಿ ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ ಸಂಸ್ಥೆಯಾಗಿ ಬೆಳೆದು ನಿಂತಿದೆ. ಪ್ರಸ್ತುತ ಈ ಕಾಲೇಜಿನ ಪದವಿ ತರಗತಿಗಳಲ್ಲಿ ೪೦00ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

ಸಂತ ಅಲೋಶಿಯಸ್ ಕಾಲೇಜು ಈಜುಕೊಳ[ಬದಲಾಯಿಸಿ]

ಕಾಲೇಜಿನ ನಿಕಾಯಗಳು(Faculties)[ಬದಲಾಯಿಸಿ]

ಸಂತ ಅಲೋಶಿಯಸ್ ಪದವಿ ಕಾಲೇಜಿನಲ್ಲಿ ಒಟ್ಟು ಆರು ನಿಕಾಯಗಳಿವೆ.

 1. ಕಲಾ ಅಧ್ಯಯನ ನಿಕಾಯ
 2. ವಿಜ್ಞಾನ ಅಧ್ಯಯನ ನಿಕಾಯ
 3. ವಾಣಿಜ್ಯ ಅಧ್ಯಯನ ನಿಕಾಯ
 4. ವ್ಯವಹಾರ ಅಧ್ಯಯನ ನಿಕಾಯ
 5. ವಿದ್ಯುನ್ಮಾನ ಅಧ್ಯಯನ ನಿಕಾಯ
 6. ಸಮಾಜಕಾರ್ಯ ಅಧ್ಯಯನ ನಿಕಾಯ
 7. ಬಿಸಿಎ, ಗಣಕ ವಿಜ್ಞಾನ ಮತ್ತು ಅನಿಮೇಶನ್ ನಿಕಾಯ

ವಿಭಾಗಗಳು[ಬದಲಾಯಿಸಿ]

ಸಂತ ಅಲೋಶಿಯಸ್ ಕಾಲೇಜಿನ ಆರು ನಿಕಾಯಗಳಲ್ಲಿ ಒಟ್ಟು ೨೮ ವಿಭಾಗಗಳಿವೆ.

 1. ಕಲಾ ಅಧ್ಯಯನ ನಿಕಾಯದಲ್ಲಿ ೧೦ ವಿಭಾಗಗಳಿವೆ.[೨]
  1. ಕನ್ನಡ ಐಚ್ಛಿಕ
  2. ಇಂಗ್ಲಿಷ್ ಐಚ್ಛಿಕ
  3. ಸಂವಹನ ಇಂಗ್ಲಿಷ್
  4. ಇತಿಹಾಸ
  5. ಅರ್ಥಶಾಸ್ತ್ರ
  6. ರಾಜ್ಯಶಾಸ್ತ್ರ
  7. ಸಮಾಜಶಾಸ್ತ್ರ
  8. ಮನಶ್ಯಾಸ್ತ್ರ
  9. ಪತ್ರಿಕೋಧ್ಯಮ
  10. ಕಂಪ್ಯೂಟರ್ ಅನಿಮೇಶನ್
 2. ವಿಜ್ಞಾನ ನಿಕಾಯದಲ್ಲಿ ೧೧ ವಿಭಾಗಗಳಿವೆ.
  1. ಭೌತಶಾಸ್ತ್ರ
  2. ರಸಾಯನಶಾಸ್ತ್ರ
  3. ಲೆಕ್ಕಶಾಸ್ತ್ರ
  4. ಸಂಖ್ಯಾಶಾಸ್ತ್ರ
  5. ವಿದ್ಯುನ್ಮಾನ
  6. ಕಂಪ್ಯೂಟರ್ ವಿಜ್ಞಾನ
  7. ಮೈಕ್ರಾಬಯಾಲಜಿ
  8. ಬಯೋಕೆಮಿಸ್ಟ್ರಿ
  9. ಬಯೋಟೆಕ್ನಾಲಜಿ
  10. ಜೀವಶಾಸ್ತ್ರ
  11. ಸಸ್ಯಶಾಸ್ತ್ರ

ಇದನ್ನು ನೋಡಿ[ಬದಲಾಯಿಸಿ]

ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ

ಉಲ್ಲೇಖ[ಬದಲಾಯಿಸಿ]

 1. http://www.staloysius.edu.in/web/guest;jsessionid=73AD96591437BD8D01DE48B2908B3F3F
 2. http://www.staloysius.edu.in/web/guest/departments

,