ಕೊಂಕಣ

ವಿಕಿಪೀಡಿಯ ಇಂದ
Jump to navigation Jump to search
ಕೊಂಕಣದ ಒಂದು ವಿಶಿಷ್ಟ ನೋಟ, ಇದು ಬಿಳಿ ಮರಳಿನ ದಡಗಳು ಹಾಗು ಪಾಮ್ ಮರಗಳನ್ನು ಒಳಗೊಂಡಿರುತ್ತವೆ(ಹೆಚ್ಚಾಗಿ ತೆಂಗಿನಮರ ಹಾಗು ಅಡಿಕೆ ಮರಗಳು).

ಕೊಂಕಣ ವನ್ನು (ಮರಾಠಿ: कोकण; ಕೊಂಕಣಿ:कोंकण; ತುಳು:ಕೊನ್ಕನ್, ಉರ್ದು:کوکن) ಕೊಂಕಣ ಕರಾವಳಿ ಅಥವಾ ಕರಾವಳಿ ಎಂದೂ ಸಹ ಕರೆಯಲಾಗುತ್ತದೆ, ಇದು ರಾಯಗಡದಿಂದ ಮಂಗಳೂರಿನವರೆಗೂ ಇರುವ ಭಾರತದ ಪಶ್ಚಿಮ ಕರಾವಳಿಯಲ್ಲಿ ಕಲ್ಲುಬಂಡೆಗಳಿಂದ ಕೂಡಿದ ಭಾಗವಾಗಿದೆ. ಸ್ಕಂದ ಪುರಾಣದಲ್ಲಿ ಉಲ್ಲೇಖಿತವಾದಂತೆ ಸಪ್ತ -ಕೊಂಕಣ ವು ಸ್ವಲ್ಪ ಮಟ್ಟಿಗೆ ದೊಡ್ಡ ಪ್ರದೇಶವಾಗಿದೆ.

ಕೊಂಕಣ ವಿಭಾಗವು, ಮಹಾರಾಷ್ಟ್ರ ರಾಜ್ಯದ ಆರು ಆಡಳಿತಾತ್ಮಕ ಉಪವಿಭಾಗಗಳಲ್ಲಿ ಒಂದಾಗಿರುವುದರ ಜೊತೆಗೆ ಅದರ ಕರಾವಳಿ ಜಿಲ್ಲೆಗಳನ್ನು ಒಳಗೊಂಡಿದೆ.

ಕೊಂಕಣದ ನಿವಾಸಿಗಳು ಹಾಗು ಅವರ ಸಂತತಿಯವರನ್ನು ಕೊಂಕಣಿಗಳು ಎಂದು ಕರೆಯಲಾಗುತ್ತದೆ. ಈ ಹೆಸರು ನಿರ್ದಿಷ್ಟವಾಗಿ ಕೊಂಕಣಿ ಜನರಿಗೂ ಸಹ ಸೂಚಿತವಾಗಬಹುದು, ಇವರು ಈ ಪ್ರದೇಶದ ಜನಾಂಗೀಯ ಗುಂಪು; ಇವರಲ್ಲಿ ಬಹುತೇಕರು ಕೊಂಕಣಿ ಭಾಷೆಯನ್ನು ಮಾತನಾಡುತ್ತಾರೆ. ಕೊಂಕಣಿಗರಲ್ಲದೆ ಈ ಪ್ರದೇಶದಲ್ಲಿರುವ ಇತರ ಪ್ರಮುಖ ಜನಾಂಗೀಯ ಗುಂಪೆಂದರೆ ತುಳುವರು, ಇವರು ಬಹುತೇಕವಾಗಿ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಗಳಲ್ಲಿ ವಾಸಿಸುತ್ತಾರೆ.

ಸಂಸ್ಕೃತ ಪದ ಕೊಂಕಣಸ್ಥ (कोंकणस्थ), ಎಂದರೆ "ಕೊಂಕಣದ ನಿವಾಸಿ"

ಗಡಿರೇಖೆಗಳು[ಬದಲಾಯಿಸಿ]

ಕೊಂಕಣದ ನಿಖರವಾದ ಗಡಿರೇಖೆಯು ಭಿನ್ನವಾಗಿದೆ, ಆದರೆ ಇದು ಮಹಾರಾಷ್ಟ್ರದ ರಾಯಗಡ, ಮುಂಬಯಿ, ಠಾಣೆ, ರತ್ನಗಿರಿ ಹಾಗು ಸಿಂಧುದುರ್ಗ ಜಿಲ್ಲೆಗಳ ಹೆಚ್ಚಿನ ಪ್ರದೇಶಗಳು, ಗೋವಾ ರಾಜ್ಯ, ಹಾಗು ಕರ್ನಾಟಕದ ಉತ್ತರ ಕನ್ನಡ, ಉಡುಪಿ ಹಾಗು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದೆ.

ಹಿಂದಿ/ಮರಾಠಿಯಲ್ಲಿ ಕೊಂಕಣದ ವಿವರವಾದ ಪ್ರವಾಸಿ ನಕ್ಷೆ(ಸಂಪೂರ್ಣ ವೀಕ್ಷಣೆಗಾಗಿ ಕ್ಲಿಕ್ ಮಾಡಿ)

ಸ್ಕಂದ ಪುರಾಣದಲ್ಲಿ ಉಲ್ಲೇಖಿತವಾಗಿರುವ ಸಪ್ತಕೊಂಕಣ ವು ಮಹಾರಾಷ್ಟ್ರದಿಂದ ಕರ್ನಾಟಕದವರೆಗೂ ವ್ಯಾಪಿಸಿದೆ. ಇದು ವಾಸ್ತವವಾಗಿ ತಾರ್ಕಿಕವಾಗಿದೆ ಏಕೆಂದರೆ ಇವರ ಆಹಾರ ಪದ್ಧತಿಯಲ್ಲಿ ಹೆಚ್ಚು ಸದೃಶತೆಗಳಿವೆ(ಅನ್ನ ಹಾಗು ಮೀನು), ಬೆಳೆಯಲಾಗುವ ಬೆಳೆಗಳು (ಭತ್ತ, ಮಾವಿನಹಣ್ಣು, ಗೋಡಂಬಿ ಹಾಗು ಹಲಸಿನಹಣ್ಣು) ಹಾಗು ಈ ಪ್ರದೇಶದಲ್ಲಿ ನೆಲೆಸಿರುವ ಜನರ ದೇಹರಚನೆಯಲ್ಲಿ ಸದೃಶತೆ (ಎತ್ತರ ಹಾಗು ದೃಢಕಾಯ).

ಕೊಂಕಣ ವಿಭಾಗ[ಬದಲಾಯಿಸಿ]

ಕೊಂಕಣ ವಿಭಾಗವು ಮಹಾರಾಷ್ಟ್ರದ ಆಡಳಿತಾತ್ಮಕ ಉಪವಿಭಾಗವಾಗಿರುವುದರ ಜೊತೆಗೆ ರಾಜ್ಯದ ಎಲ್ಲ ಕರಾವಳಿ ಜಿಲ್ಲೆಗಳನ್ನು ಒಳಗೊಂಡಿರುತ್ತದೆ.

ಭೂವಿವರಣೆ[ಬದಲಾಯಿಸಿ]

ಸಹ್ಯಾದ್ರಿ ಪರ್ವತ ಶ್ರೇಣಿಯು("ಪಶ್ಚಿಮ ಘಟ್ಟಗಳು"), ಕೊಂಕಣಕ್ಕೆ ಪೂರ್ವ ಗಡಿರೇಖೆಯನ್ನು ನಿರೂಪಿಸಿದರೆ ಅರೇಬಿಯನ್ ಸಮುದ್ರವು ಪಶ್ಚಿಮ ಗಡಿರೇಖೆಯನ್ನು ನಿರೂಪಿಸುತ್ತದೆ. ದಕ್ಷಿಣ ಗಡಿರೇಖೆಯೆಂದರೆ ಗಂಗಾವಳಿ ಸಮುದ್ರ. ಮಯೂರ ನದಿಯು ಉತ್ತರ ಗಡಿರೇಖೆಯನ್ನು ನಿರೂಪಿಸುತ್ತದೆ.

ಗಂಗಾವಳಿ ನದಿಯು ಇಂದಿನ "ಕರ್ನಾಟಕ ರಾಜ್ಯದ" ನಾರ್ತ್ ಕೆನರಾ ಜಿಲ್ಲೆಯಲ್ಲಿ ("ಉತ್ತರ ಕನ್ನಡ") ಹರಿಯುತ್ತದೆ; ಈ ಜಿಲ್ಲೆಯ ಈ ಪಕ್ಕದ ಗಂಗಾವಳಿ ಭಾಗವೇ (ಬಾಂಬೆಯಿಂದ ನೋಡಿದಲ್ಲಿ) ಕೊಂಕಣದ ದಕ್ಷಿಣತಮ ಭಾಗವಾಗಿದೆ. ಗೋಕರ್ಣ, ಗುಹಗರ್, ಹೊನ್ನಾವರ, ಹಾಗು ಕಾರವಾರ ಕೊಂಕಣ ಪ್ರದೇಶಕ್ಕೆ ಸೇರುತ್ತದೆ.

ಮಯೂರ ನದಿ, ಐತಿಹಾಸಿಕ ಕೊಂಕಣದ ಉತ್ತರ ಸೀಮೆಯ ನಿರ್ದಿಷ್ಟವಾದ ಗುರುತು ಅನಿರ್ಧಾರಿತವಾಗಿದೆ.

ಜನಾಂಗಶಾಸ್ತ್ರ[ಬದಲಾಯಿಸಿ]

ಮಹಾರಾಷ್ಟ್ರ ಕೊಂಕಣದ ಗಬಿಟ್ ಬುಡಕಟ್ಟಿನವರು ("ಮಹಾರಾಷ್ಟ್ರ ಜಿಲ್ಲೆಯ" ಸಿಂಧುದುರ್ಗ, ರತ್ನಗಿರಿ, ರಾಯಗಡ ಅಥವಾ ಅಲಿಬಾಗ್ ಅಥವಾ ಕೊಲಾಬಾ, ಮುಂಬಯಿ ನಗರಪ್ರದೇಶ, ಮುಂಬಯಿ ಉಪನಗರ ಹಾಗು ಠಾಣೆ) ಈ ಪ್ರದೇಶದ ಮೂಲ ನಿವಾಸಿಗಳು[ಸಾಕ್ಷ್ಯಾಧಾರ ಬೇಕಾಗಿದೆ].

ಕೊಂಕಣದ ಬುಡಕಟ್ಟು ಸಮುದಾಯಗಳಲ್ಲಿ ಕೊಂಕಣ, ವರ್ಲಿ ಹಾಗು ದಕ್ಷಿಣ ಗುಜರಾತ್ ನ ಕೊಲ್ಚ, ದಾದ್ರ ಹಾಗು ನಾಗರ್ಹಾವೇಲಿ ಹಾಗು ಮಹಾರಾಷ್ಟ್ರದ ಠಾಣೆ ಜಿಲ್ಲೆ. ಕಟ್ಕರಿಗಳು ರಾಯಗಡದಲ್ಲಿ ಬಹುತೇಕವಾಗಿ ಹಾಗು ರತ್ನಗಿರಿ ಜಿಲ್ಲೆಯ ಕೆಲವು ಭಾಗಗಲ್ಲಿಯೂ ಸಹ ಕಂಡುಬರುತ್ತಾರೆ.

ಕೊಂಕಣದ ಕರಾವಳಿ ತೀರದುದ್ದಕ್ಕೂ ಖಾವಿ೯ಸಮುದಾಯ ಬಹುತೇಕವಾಗಿ ಕಂಡುಬರುತ್ತದೆ. ಇವರು ಮೂಲತಃ ಯೋಧರ ಕುಟುಂಬದವರಾಗಿರುತ್ತಾರೆ.

ಅಲ್ಲದೆ ತಿಲೋರಿ ಅಥವಾ ತಿಲೋರಿ ಕುಂಬಿ ರಾಯಗಡ ಹಾಗು ರತ್ನಗಿರಿ ಜಿಲ್ಲೆಗಳ ಪ್ರಮುಖ ಸಮುದಾಯವಾಗಿದೆ. ಅಗರಿಗಳು ಠಾಣೆ ಹಾಗು ರಾಯಗಡ ಜಿಲ್ಲೆಯಲ್ಲಿ ಕಂಡುಬರುತ್ತಾರೆ.

ಕೊಂಕಣದ ಪ್ರಮುಖ ಬ್ರಾಹ್ಮಣ ಸಮುದಾಯಗಳೆಂದರೆ ಚಿತ್ಪಾವನರು, ಕರ್ಹಡೆ, ಪಡ್ಯೇ, ಸಮವೇದಿ, ಹವ್ಯಕ. ಇವರನ್ನು 'ಕೊಕನಾಸ್ಥ ಬ್ರಾಹ್ಮಣ'ರೆಂದು ಕರೆಯಲಾಗುತ್ತದೆ.

ಇವನ್ನೂ ನೋಡಿ[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]


ಉಲೇಖಗಳು[ಬದಲಾಯಿಸಿ]

[೧] [೨] [೩]

[೪]

  1. https://kn.wiktionary.org/wiki/%E0%B2%95%E0%B3%8A%E0%B2%82%E0%B2%95%E0%B2%A3
  2. https://vijaykarnataka.indiatimes.com/topics/%E0%B2%95%E0%B3%8A%E0%B2%82%E0%B2%95%E0%B2%A3-%E0%B2%B0%E0%B3%88%E0%B2%B2%E0%B3%81
  3. https://kannada.nativeplanet.com/travel-guide/locations-across-konkan-raily-route-000013.html
  4. https://www.thestate.news/tag?tag=%E0%B2%95%E0%B3%8A%E0%B2%82%E0%B2%95%E0%B2%A3%20%E0%B2%B0%E0%B3%88%E0%B2%B2%E0%B3%81%20%E0%B2%AF%E0%B3%8B%E0%B2%9C%E0%B2%A8%E0%B3%86
"https://kn.wikipedia.org/w/index.php?title=ಕೊಂಕಣ&oldid=952780" ಇಂದ ಪಡೆಯಲ್ಪಟ್ಟಿದೆ