ವಿಷಯಕ್ಕೆ ಹೋಗು

ಭಾರತದಲ್ಲಿ ದ್ವಿದಳ ಧಾನ್ಯಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದಲ್ಲಿ ದ್ವಿದಳ ಧಾನ್ಯಗಳ ಕೃಷಿ ಮತ್ತು ಉತ್ಪಾದನೆ

[ಬದಲಾಯಿಸಿ]
  • ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ಉತ್ತರ ಪ್ರದೇಶ. ಕರ್ನಾಟಕ, ಮತ್ತು ಆಂಧ್ರಪ್ರದೇಶ ಈ ರಾಜ್ಯಗಳಲ್ಲಿ ದೇಶದಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ಬೆಳೆಯುವ ರಾಜ್ಯಗಳಾಗಿವೆ. ದೇಶದಲ್ಲಿ ಉತ್ಪಾದನೆ ಆಗುವ ಶೇಕಡ ೮೦(ಎಂಭತ್ತ)ರಷ್ಟನ್ನುಈಆರು ರಾಜ್ಯಗಳಲ್ಲಿಯೇ ಬೆಳೆಯಲಾಗುತ್ತದೆ.
  • ಸಧ್ಯ ಭಾರತದಲ್ಲಿ ೨೨೨.೩೦ ಕೋಟಿ ಹೆಕ್ಟೇರುಗಳಲ್ಲಿ ಬೇಳೆ ಕಾಳುಗಳ ಉತ್ಪನ್ನವಾಗುತ್ತಿದೆ. ಇದು ವಿಶ್ವದ ಶೇ. ೩೩ ರಷ್ಟು

ಬೇಳೆಕಾಳು ಬೆಳೆಯುವ ಪ್ರದೇಶ.ಒಟ್ಟು ದೇಶದಲ್ಲಿ ವಾರ್ಷಿಕ ೧೩೧.೯ ಕೋಟಿ ಟನ್ ಬೇಳೆಕಾಳುಗಳ ಉತ್ಪಾದನೆ ಆಗುತ್ತಿದೆ. ಇದು ವಿಶ್ವದ ಶೇ. ೨೪ ರಷ್ಟಿದೆ. (೨೦೧೩-೨೦೧೪)

  • ೨೦೧೪-೧೫ 'ಎಲ್ ನೈನೋ' ಹವಾಮಾನ ಮುನ್ಸೂಚನೆಯಂತೆ ಮಳೆಯ ಪ್ರಮಾಣ ಭಾರತದಲ್ಲಿ ಶೇ. ೫ರಷ್ಟು ಕಡಿಮೆಯಾಗುವ ಸಾಧ್ಯತೆ ಇದೆ. ಅದರಿಂದ ಬೇಳೆಕಾಳುಗಳ ಭೆಳೆಯಲ್ಲಿ ಕೊರತೆ ಆಗಬಹುದೆಂದು ಅಂದಾಜುಮಾಡಲಾಗಿದೆ.ಅಲ್ಲದೆ ವರ್ಷದಿಂದ ವರ್ಷಕ್ಕೆ ಈ ಧಾನ್ಯಗಳ ಉಪಯೋಗ ಹೆಚ್ಚಾಗುತ್ತಿದೆ. ಹಾಗಾದರೆ ಈ ಧಾನ್ಯಗಳ ಕೊರತೆ ಹೆಚ್ಚಾಗಿ ಧಾರಣೆ ಮಿತಿಮೀರಿ ಹೆಚ್ಚಾಗುವ ಸಾಧ್ಯತೆ ಇದೆ. ಇದು ಅಸೋಚಾಂ ವರದಿ.

ಬೇಳೆಕಾಳುಗಳ ಉತ್ಪಾದನೆ ಮತ್ತು ಅಮದು

[ಬದಲಾಯಿಸಿ]
  • 2015-16 ಉತ್ಪಾದನೆ 17.33 ದಶಲಕ್ಷ ಟನ್. ಅಮದು 5.5 ಲಕ್ಷ ಟನ್.
ಸಾಲುಉತ್ಪಾದನೆಅಮದುಒಟ್ಟು ಲಭ್ಯತೆ
ದಶಲಕ್ಷಟನ್'ಗಳಲ್ಲಿ
200912748303615784
201012827249315320
201115960290518965
201214954349418448
201316048338819436
201417308410821418

[]

೨೦೧೬-೨೦೧೭ ಬೇಳೆಕಾಳುಗಳು

[ಬದಲಾಯಿಸಿ]
  • ಪ್ರಸಕ್ತ ವರ್ಷ ಬೇಳೆಕಾಳುಗಳ ಉತ್ಪಾದನೆಯು ಸಮೃದ್ಧವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. ಬೇಳೆಕಾಳುಗಳ ಉತ್ಪಾದನೆಯು ಗರಿಷ್ಠ ಮಟ್ಟದಲ್ಲಿ ಇದ್ದರೂ, ದೇಶದಲ್ಲಿನ ಬೇಡಿಕೆ ಪೂರೈಸುವ ಮಟ್ಟದಲ್ಲಿ ಪೂರೈಕೆ ಇರುವುದಿಲ್ಲ. ಎರಡರಿಂದ ಮೂರು ವರ್ಷಗಳಲ್ಲಿ ಸ್ವಾವಲಂಬನೆ ಸಾಧ್ಯವಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
  • ಪೂರ್ವಭಾವಿ ಅಂದಾಜಿನ ಪ್ರಕಾರ, ಬೇಳೆಕಾಳುಗಳ ಉತ್ಪಾದನೆಯು 2.21 ಕೋಟಿ ಟನ್‌ಗಳಷ್ಟು ಇರಲಿದೆ. ಇದು ದೇಶದಲ್ಲಿನ ಬೇಡಿಕೆ ಪೂರೈಸಲು ಸಾಲುವುದಿಲ್ಲ. ಹೀಗಾಗಿ ಆಮದು ಮಾಡಿಕೊಳ್ಳಬೇಕಾಗುತ್ತದೆ’ ಎಂದು ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ.ಬೇಳೆಕಾಳು ಸಮೃದ್ಧ ಬೆಳೆ ನಿರೀಕ್ಷೆ: ಕೇಂದ್ರ;ಪಿಟಿಐ;25 Mar, 2017
  • (ವಾಣಿಜ್ಯೋದ್ಯಮ ಮಹಾಸಂಸ್ಥೆ- ಅಸೋಚಾಮ್ ವರದಿ-ಪ್ರಜಾವಾಣಿ೨೯-೪-೨೦೧೪)

ಉಲ್ಲೇಖಗಳು

[ಬದಲಾಯಿಸಿ]
  1. ಆಧಾರ:ಕೃಷಿ ಸಚಿವಾಲಯ ದೆಹಲಿ:13-6-2016:ಪ್ರಜಾವಾಣಿ