ಭಾರತದ ಬ್ಯಾಂಕ್ ಠೇವಣಿಗಳು

ವಿಕಿಪೀಡಿಯ ಇಂದ
Jump to navigation Jump to search

ಭಾರತದ ಬ್ಯಾಂಕ್ ಠೇವಣಿಗಳು[ಬದಲಾಯಿಸಿ]

ಭಾರತದ ಅರ್ಥ ವ್ಯವಸ್ಥೆ

  • ಬ್ಯಾಂಕ್ ಠೇವಣಿಗಳ ಸಂಗ್ರಹ ,೨೦೧೪ ಮಾರ್ಚಿ ಆದಿ ವಾರದಲ್ಲಿ ರೂ. ೭೬. ೯೨ ಲಕ್ಷ ಕೋಟಿಗಳಿದ್ದು , ಹಿಂದಿನ ವರ್ಷಕ್ಕಿಂತ ೧೫.೫೫ ರಷ್ಟು ಹೆಚ್ಚಾಗಿದೆ. (ಆರ್.ಬಿ.ಐ.ವರದಿ)
  • ವಾಣಿಜ್ಯ ಬ್ಯಾಂಕುಗಳಲ್ಲಿ ಠೇವಣಿಗಳ ಸಂಗ್ರಹ ೬೬.೫೭ ಲಕ್ಷ ಕೋಟಿಯಷ್ಟಾಗಿದೆ.
  • ಸಾಲ ನೀಡಿಕೆಯ ಪ್ರಮಾಣವೂ ಶೇಕಡ ೧೪.೬೫ ವಾರ್ಷಿಕ ಹೆಚ್ಚಾಗಿದೆ.ಈ ವರ್ಷ (೨೦೧೪) ೫೯.೯೭ ಲಕ್ಷಕೋಟಿ ಸಾಲ ನೀಡಲಾಗಿದೆ. ೨೦೧೩ರಲ್ಲಿ ೫೧.೭೮ ಲಕ್ಷ ಕೋಟಿ ಸಾಲ ನೀಡಲಾಗಿತ್ತು .
  • ಒಟ್ಟಾರೆ ಈ ವರ್ಷ-೨೦೧೪ ಮಾರ್ಚಿ ಅಂತ್ಯಕ್ಕೆ ಠೇವನಿ ಸಂಗ್ರಹ ಶೇ.೧೪ ರಷ್ಟು ಮತ್ತು ಸಾಲ ನೀಡಿಕೆ ಶೇ. ೧೫ ರಷ್ಟು ಹೆಚ್ಚಬಹುದೆಂದು ಆರ್. ಬಿ. ಐ. ಹೇಳಿದೆ (ಮುಂಬಯಿ-ಪಿಟಿಐ- ಪ್ರಜಾವಾಣಿ ೨೦-೩-೨೦೧೪.)

ಅನಿವಾಸಿ ಠೇವಣಿಗಳು[ಬದಲಾಯಿಸಿ]

ಅನಿವಾಸಿ ಠೇವಣಿಗಳು ಎಂದರೆ ಭಾರತದಿಂದ ವಿದೇಶದಲ್ಲಿ ಹೋಗಿ ನೆಲೆಸಿ ಸಂಪಾದಿಸಿ ಅಲ್ಲಿಂದ ಭಾರತದ ತನ್ನಲ್ಲಿನ ಊರಿನ ಬ್ಯಾಂಕಿನ ಖಾತೆಗೆ ರವಾನಿಸುವ ಹಣವನ್ನು ಅನಿವಾಸಿ ಭಾರತೀಯರ ಠೇವಣಿ ಎನ್ನಬಹುದು. ಪ್ರತಿಯೊಬ್ಬ ಅನಿವಾಸಿ ಭಾರತೀಯನಿಗೆ ಬ್ಯಾಂಕಿನ ಖಾತೆಯು ಬಹುಮುಖ್ಯವಾದುದು. ಅದರಲ್ಲೂ ಬ್ಯಾಂಕಿನ ಖಾತೆಯು ರಾಷ್ಟ್ರೀಕೃತ ಬ್ಯಾಂಕು, ಬಹುರಾಷ್ಟ್ರೀಯ ಸಂಸ್ಥೆಗಳ ಬ್ಯಾಂಕು, ವಿದೇಶೀ ಬ್ಯಾಂಕು ಅಥವಾ ಇನ್ನ್ಯಾವುದೇ ದೊಡ್ಡ ಬ್ಯಾಂಕಾದರೆ ಉತ್ತಮ. ಯಾಕೆಂದರೆ ವಿದೇಶೀ ವ್ಯವಹಾರಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್‍ನ ಅನುಮತಿಯಿಲ್ಲದೆ ಭಾರತದಲ್ಲಿರುವ ಯಾವುದೇ ಬ್ಯಾಂಕು ವಿದೇಶೀ ವಿನಿಮಯ ವ್ಯವಹಾರವನ್ನು ನಡೆಸುವಂತಿಲ್ಲ.

ಯಾವುದೇ ವ್ಯಕ್ತಿ, ಸಂಸ್ಥೆಗೆ ಹಲವಾರು ಉದ್ದೇಶಗಳಿಗೆ ಹಣ ಬೇಕೇ ಬೇಕು. ಹಣ ಇದ್ದಷ್ಟೂ ವ್ಯವಹಾರದಲ್ಲಿ ದೃಢತೆ, ಆತ್ಮ ವಿಶ್ವಾಸವಿರುತ್ತದೆ. ಅದೇ ರೀತಿ ಸರ್ಕಾರಕ್ಕೂ ಹಣದ ಅವಶ್ಯಕತೆ ಇದೆ. ದೇಶೀಯ ಯೋಜನೆ, ವೆಚ್ಚ, ಸಹಾಯಗಳಿಗೆ ಹಾಗು ವಿದೇಶಿ ವ್ಯವಹಾರಗಳಿಗೆ ಹಣ ಬೇಕು. ದೇಶೀಯದಾದರೆ ರೂಪಾಯಿಯ ಚಲಾವಣೆ ಇದೆ. ವಿದೇಶದಲ್ಲಿ ನಮ್ಮ ರುಪಾಯಿ ವ್ಯವಹಾರಕ್ಕೆ ಚಲಾವಣೆಗೆ ಬರುವುದಿಲ್ಲ. ಅದಕ್ಕಾಗಿ ವಿದೇಶೀ ಹಣ ಬೇಕು. ಅದರಲ್ಲೂ ಜಗತ್ತಿನಲ್ಲಿ ಹೆಚ್ಚಿನ ಮಾನ್ಯತೆ ಪಡೆದಿರುವಂತಹ ಕರೆನ್ಸಿಗಳಾದರೆ ಜಗತ್ತಿನ ಮಾರುಕಟ್ಟೆಯಲ್ಲಿ ವ್ಯವಹಾರಕ್ಕೆ ಉತ್ತಮ. ಹೀಗಾಗಿ ನಮ್ಮ ದೇಶವು ವಿದೇಶೀ ಕರೆನ್ಸಿಯ ಸಂಪಾದನೆಗೆ ಹೆಚ್ಚು ಒತ್ತು ಕೊಟ್ಟಿದೆ. ದೇಶವು ವಿದೇಶಿ ಕರೆನ್ಸಿ ಎಷ್ಟು ಸಂಗ್ರಹಿಸಿದೆಯೋ ಅಷ್ಟು ಜಾಗತಿಕ ಮಾರುಕಟ್ಟೆಯಲ್ಲಿ ವ್ಯವಹಾರಗಳು, ಸಾಲಪಾವತಿ, ಮೊದಲಾದವುಗಳಿಗೆ ಸುಲಭ. ಇದನ್ನು ವಿದೇಶಿ ವಿನಿಮಯ ಮೀಸಲು ನಿಧಿ ಎನ್ನುತ್ತಾರೆ. ಅನಿವಾಸಿ ಭಾರತೀಯರಿಂದ ಹೀಗೆ ಹರಿದು ಬರುವ ಹಣವು ದೇಶದ ವಿದೇಶೀ ಹಣದ ಬಲವನ್ನು ಹೆಚ್ಚಿಸುತ್ತದೆ. ಹೀಗಾಗಿ ಅನಿವಾಸಿಗಳಿಗೆ ಹೆಚ್ಚಿನ ಪ್ರೋತ್ಸಾಹ, ರಿಯಾಯಿತಿ, ನೀಡಿ ಹೆಚ್ಚು ರವಾನಿಸಲು ಸರ್ಕಾರ ಪ್ರೇರೇಪಿಸುತ್ತದೆ. ಹೀಗಾಗಿ ಅನಿವಾಸಿ ಠೇವಣಿಗಳಿಗೆ ಹೆಚ್ಚಿನ ಆದ್ಯತೆ ಉಂಟು.


ನೋಡಿ[ಬದಲಾಯಿಸಿ]