ಭಾರತದ ಆರ್ಥಿಕ ವ್ಯವಸ್ಥೆ

ವಿಕಿಪೀಡಿಯ ಇಂದ
Jump to navigation Jump to search
ಭಾರತದ ಆರ್ಥಿಕ ವ್ಯವಸ್ಥೆ
ನಾಣ್ಯ ೧ ಭಾರತದ ರೂಪಾಯಿ (ಐ.ಎನ್.ಆರ್‍) (ರೂ.) = ೧೦೦ ಪೈಸೆ = ೦.೦೨೨೮೩ ಅಮೇರಿಕನ್ ಡಾಲರ್‍ = ೦.೦೧೮೯೭ ಯೂರೊ
ಆರ್ಥಿಕ ವರ್ಷ ಎಪ್ರಿಲ್ ೧—ಮಾರ್ಚ್ ೩೧
ಪ್ರಚಲಿತ ಆರ್ಥಿಕ ವರ್ಷ (೨೦೦೬—೦೬)
ಪ್ರಚಲಿತ ಪಂಚವಾರ್ಷಿಕ ಯೋಜನೆ ೧೦ನೆಯದು (೨೦೦೨—೨೦೦೭)
ಕೇಂದ್ರ ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್ (RBI)
ವಾಣಿಜ್ಯ ಸಂಸ್ಥೆಗಳು ಮತ್ತು ಒಪ್ಪಂದಗಳು ಸಾಫ್ಟಾ (ಎಸ್.ಎ.ಎಫ್.ಟಿ.ಎ), ಆಸಿಯಾನ್(ಎ.ಎಸ್.ಇ.ಎ.ಎನ್), ವಿಪೊ (ಡಬ್ಲ್ಯು.ಐ.ಪಿ.ಒ) ಮತ್ತು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯು.ಟಿ.ಒ)
ಕೇಂದ್ರ ಮುಂಗಡ ಪತ್ರ (ಬಜೆಟ್) $೬೭೩.೩ ಕೋಟಿ (ಆದಾಯ)
$೧೦೪ ಕೋಟಿ (ವೆಚ್ಚ)
ಹಣದುಬ್ಬರ (ಪ್ರತಿ ತಿಂಗಳ) ೩.೫೩% (ಸೆಪ್ಟೆಂಬರ್‍)
ಜನರು
ಪ್ರಧಾನ ಮಂತ್ರಿ
(ಯೋಜನಾ ಆಯೋಗದ ಅಧ್ಯಕ್ಷ)
ನರೇಂದ್ರ ಮೋದಿ
ಹಣಕಾಸು ಮಂತ್ರಿ ಅರುಣ್ ಜೇಟ್ಲಿ
ವಾಣಿಜ್ಯ ಮಂತ್ರಿ ಕಮಲ್ ನಾಥ್
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಾಘುರಾಮನ್ ಭಾರತೀಯ ಪ್ರತಿಭೂತಿ ಮತ್ತು ವಿನಿಮಯ ಮಂಡಳಿ(ಸೆಬಿ)(SEBI)ಅಧ್ಯಕ್ಷ ಸಿನ್ಹಾ
ಸ್ಥಾನ
ಭ್ರಷ್ಟಾಚಾರ ೯೦ ನೆಯ ಸ್ಥಾನ
ವಾಣಿಜ್ಯ ಹಾಗು ಆರ್ಥಿಕ ಸ್ವಾತಂತ್ರ ೧೧೮ ನೆಯ ಸ್ಥಾನ (ಹೆಚ್ಚು ಸ್ವಾತಂತ್ರವಿಲ್ಲಾ)
ಸಂಯುಕ್ತ ರಾಷ್ಟ್ರ ಸಂಸ್ಥೆ ಜನಾಭಿವೃದ್ಧಿ ಸೂಚಿ ೧೨೭ನೆ ಸ್ಥಾನ (೨೦೦೫)
Gross Domestic Product (GDP)
GDP at PPP $3,362,960 million(4th)
GDP at current exchange rates $691,876,300,000 million(10th)
GDP real growth rate (at PPP) 6.2% (43rd)
GDP per Capita $3,100 (155th)
GDP by sector agriculture (21.8%), industry (26.1%), services (52.2%)
ಸಾಮಾಜಿಕ ಅಂಕಿ ಅಂಶಗಳು
ಬಡತನ ರೇಖೆಯ ಕೆಳಗಿರುವ ಜನಸಂಖ್ಯೆ 25% (2002 est.)
ಕಾರ್ಮಿಕ ಬಲ 482.2 ಮಿಲಿಯನ್
ವೃತ್ತಿಯಾಧರಿಸಿದ ಕಾರ್ಮಿಕ ಬಲ (1999) agriculture (57%), industry (17%), services (23%) (2005-06)
ನಿರುದ್ಯೋಗದ ಗತಿ 7.32% (1999-2000)
ಉತ್ಪಾದನೆ
ಕೃಷಿ ಉತ್ಪನ್ನ ಅಕ್ಕಿ, ಗೋದಿ, ಎಣ್ಣೆಬೀಜ, ಹತ್ತಿ, ಸೆಣಬು, ಚಹ, ಕಬ್ಬು, ಆಲೂಗೆಡ್ಡೆ; ಹಸು, ಎಮ್ಮೆ, ಕುರಿ, ಮೇಕೆ, ಕೋಳಿ, ಮೀನು
ಮುಖ್ಯ ಕೈಗಾರಿಕೆಗಳು ಜವಳಿ, ರಾಸಾಯನ, ಆಹಾರ ಸಂಸ್ಕರಣೆ, ಉಕ್ಕು, ಸಾರಿಗೆ ಉಪಕರಣ, ಸಿಮೆಂಟ್, ಗಣಿಗಾರಿಕೆ, ಪೆಟ್ರೋಲಿಯಂ, ಯಂತ್ರೋಪಕರಣ, ತಂತ್ರಾಂಶ
ಹೊರ ವ್ಯಾಪಾರ
ಆಮದುಗಳ ಮೌಲ್ಯ (೨೦೦೩) $೮೯.೩೩ ಬಿಲಿಯನ್ (ಶತ ಕೋಟಿ) f.o.b (೨೫ ನೆಯದು)
ಪ್ರಮುಖ ಆಮದು ಮಾಡುವ ವಸ್ತುಗಳು ಕಚ್ಚಾ ತೈಲ, ಯಂತ್ರೋಪಕರಣ, ಹವಳ, ಗೊಬ್ಬರ, ರಾಸಾಯನ
ಪ್ರಮುಖ ಆಮದು ಮಾಡುವ ದೇಶಗಳು ಆಮೇರಿಕಾ ೭.೦%, ಬೆಲ್ಜಿಯಂ ೬.೧%, ಚೀನಾ ೫.೯%, ಸಿಂಗಾಪುರ ೪.೮%, ಯುನೈಟೆಡ್ ಕಿಂಗ್‍ಡಮ್ ೪.೬%, ಆಸ್ಟ್ರೆಲಿಯಾ ೪.೬%, ಜರ್ಮನಿ ೪.೫% (೨೦೦೪)
ರಫ್ತುಗಳ ಮೌಲ್ಯ $೬೯.೧೮ ಬಿಲಿಯನ್ (ಶತ ಕೋಟಿ) f.o.b (೩೫ ನೆಯದು)
ಪ್ರಮುಖ ರಫ್ತು ಮಾಡುವ ವಸ್ತುಗಳು ಜವಳಿ, ಹವಳ ಮತ್ತು ಆಭರಣ, ಯಂತ್ರಶಾಸ್ತ್ರ ಉತ್ಪನ್ನಗಳು, ರಾಸಾಯನ, ಚರ್ಮದ ಉತ್ಪನ್ನ
ಪ್ರಮುಖ ರಫ್ತು ಮಾಡುವ ದೇಶಗಳು (೨೦೦೩) ಆಮೇರಿಕಾ ೧೮.೪%, ಚೀನಾ ೭.೮%, ಯುನೈಟೆಡ್ ಅರಬ್ ಎಮಿರೆಟ್ಸ್ ೬.೭%, ಯುನೈಟೆಡ್ ಕಿಂಗ್‍ಡಮ್ ೪.೮%, ಹಾಂಗ್ ಕಾಂಗ್ ೪.೩%, ಜರ್ಮನಿ ೪.೦%
ಒಟ್ಟಾರೆ ಬಾಕಿ ಸಂದಾಯ(೨೦೦೩) $೩೧,೪೨೧
Note:
 1. ದತ್ತವು ಸೂಚಿಸದ ಸ್ಥಳಗಳಲ್ಲಿ ೨೦೦೪-೦೫ ಕ್ಕೆ ಸೇರಿದೆ.
 2. ಲಭ್ಯವಿದ್ದಲೆಲ್ಲ ಭಾರತದ ಶ್ರೇಯಾಂಕವನ್ನು ಅಧಾರ ಸಮೇತ ಆವರಣ ಚಿಹ್ನೆಗಳ ಮಧ್ಯೆ (ಕಂಸದಲ್ಲಿ) ನೀಡಲಾಗಿದೆ.
 3. ಉಳಿದ ದತ್ತ ಆಗಸ್ಟ್ ೨೦೦೫ ದಿನಾಂಕದ ದಿ ವರ್ಲ್ಡ್ ಫ್ಯಾಕ್ಟ್ ಬುಕ್‌ ಗ್ರಂಥದಿಂದ ಸಂಗ್ರಹಿಸಲಾಗಿದೆ

ಪಿ.ಪಿ.ಪಿ.ವುಳ್ಳ ಜಿ.ಡಿ.ಪಿ ಪ್ರಕಾರ $೩.೩೬೨೯ ಕೋಟಿ ಹೊಂದಿ, ವಿಶ್ವದಲ್ಲೇ ನಾಲ್ಕನೆಯ ಸ್ಥಾನದಲ್ಲಿದೆ ಮತ್ತು ಅಮೇರಿಕನ್ ಡಾಲರಿನಲ್ಲಿನ ಒಟ್ಟೂ ದೇಶಿಯ ಉತ್ಪನ್ನ(ಜಿ.ಡಿ.ಪಿ) ಪ್ರಕಾರ $೬೯೧.೮೭೬ ಕೋಟಿ ಹೊಂದಿ ವಿಶ್ವದಲ್ಲೇ ಆರನೆಯ ಸ್ಥಾನದಲ್ಲಿದೆ ಮತ್ತು ಪ್ರತಿ ವರ್ಷವು ೬.೨% ಪಿ.ಪಿ.ಪಿ ಯಲ್ಲಿ ಬೆಳೆಯುತ್ತಿದೆ. ಆದರೆ, ಅತಿ ದೊಡ್ಡ ಜನಸಂಖ್ಯೆಯಿಂದಾಗಿ ಭಾರತದ ಒಬ್ಬ ವ್ಯಕ್ತಿಯ ಸಂಬಳ ಕೇವಲ $3,100 (ಪಿ.ಪಿ.ಪಿ ಪ್ರಕಾರ). ದೇಶದ ಆರ್ಥಿಕ ವ್ಯವಸ್ಥೆಯು ವಿಭಿನ್ನವಾಗಿದೆ ಹಾಗು ಕೃಷಿ, ಕೈಗಾರಿಕೆ, ಉದ್ದಿಮ್ಮೆಗಾರಿಕೆ ಹಾಗು ಅನೈಕ ಸೇವಾಗಾರಿಕೆಗಳನ್ನು ಒಳಗೊಂಡಿದೆ. ಸೇವಾಗಾರಿಕಯು ಭಾರತದ ಆರ್ಥಿಕ ಬೆಳವಣಿಗೆಗೆ ಕಾರಣವಾದ ಮುಖ್ಯ ವಲಯವಾದರೂ, ಶೇಖಡ ೬೬% ರಷ್ಟು ಭಾರತೀಯರು ತಮ್ಮ ಜೀವನೋಪಾಯವನ್ನು, ಪ್ರತ್ಯಕ್ಷವಾಗಿ ಇಲ್ಲಾ ಪರೋಕ್ಶವಾಗಿ, ಕೃಷಿಗಾರಿಕೆಯಲ್ಲಿ ಸಂಪಾದಿಸುತ್ತಾರೆ. ಈಚೆಗೆ, ಭಾರತವು ತನ್ನ ಆಂಗ್ಲ ಭಾಷೆ ಬಲ್ಲ ವಿದ್ಯಾವಂತ ಉದ್ದಿಮೆಗಾರರನ್ನು ಹೊಂದಿರುವ ಕಾರಣದಿಂದಾಗಿ, ಬೇರೆ ದೇಶಕ್ಕೆ ಮಾಹಿತಿ ತಂತ್ರಾಂಶಗಳನ್ನು ರಫ್ತುಮಾಡುತ್ತಿದೆ ಹಾಗು ಆರ್ಥಿಕ ಸೇವೆಯನ್ನು ಮತ್ತು ಇಂಜಿನಿಯರ್ ರನ್ನು ಒದಗಿಸುತ್ತಿದೆ.

ಸ್ವತಂತ್ರ ಭಾರತದ ಹೆಚ್ಚಿನ ಇತಿಹಾಸದಲ್ಲಿ, ಸಮಾಜವಾಧಿ ತತ್ವಗಳಿಂದ ಪ್ರೇರಿತವಾದ ಆರ್ಥಿಕ ನೀತಿಯನ್ನು ಪಾಲಿಸಲಾಯಿತು. ಈ ಕಾರಣ, ಸರ್ಕಾರವು, ಖಾಸಗಿ ವಲಯದಲ್ಲಿ ಭಾಗವಹಿಸುವಿಕೆ, ವಿದೇಶಿ ವ್ಯಾಪಾರ ಹಾಗು ಬಂಡವಾಳಗಳ ಮೇಲೆ ಕಠಿಣ ಕಡಿವಾಣ ಮತ್ತು ಕಾಯದೆ ಹಾಕಿತ್ತು. ೧೯೯೦ ರಿಂದ, ಭಾರತವು ವಿದೇಶಿ ವ್ಯಾಪಾರ ಹಾಗು ಬಂಡವಾಳಗಳ ಮೇಲಿನ ಕಡಿವಾಣ ಹಾಗೂ ಕಾಯದೆಗಳನ್ನು ತೆಗೆದುಹಾಕಿ, ವಾಣಿಜ್ಯದ ಮೇಲಿನ ಸರ್ಕಾರದ ಹಿಡಿತವನ್ನು ಬಿಡಲಾಗಿದೆ. ಸರ್ಕಾರಿ ವಲಯದ ಉದ್ಧಿಮೆಗಳ ಮಾರಾಟವು ಹಾಗು ಸರ್ಕಾರಿ ವಲಯಗಳಲ್ಲಿ ಖಾಸಗಿ ಹಾಗು ವಿದೇಶಿ ವ್ಯಾಪಾರಿಗಳ ಪ್ರವೇಶವು, ಇವುಗಳ ಬಗ್ಗೆ ರಾಜಕೀಯ ಚರ್ಚೆ ಹಾಗು ಅಸಮಧಾನದ ಮಧ್ಯೆಯೇ ನಡೆಯುತ್ತಿದೆ.

ಭಾರತ ಎದುರಿಸುವ ಸಾಮಾಜಿಕ ಹಾಗು ಆರ್ಥಿಕ ಸಮಸ್ಯೆಗಳೆಂದರೆ ಹೆಚ್ಚುತ್ತಿರುವ ಜನಸಂಖ್ಯೆ, ನಿರುದ್ಯೋಗ ಬಡತನ, ಅಸಮಾನತೆ ಹಾಗು ಉತ್ತಮ ಗುಣಮಟ್ಟದ ಮೂಲಭೂತ ಸೌಕರ್ಯದ ಕೊರತೆ. ಭಾರತದಲ್ಲಿ ಬಡತನವು ೧೯೮೦ ರಿಂದ, ಕೇವಲ ಶೇಕಡ ೧೦% ರಷ್ಟು ಇಳಿದಿದೆ.

ಇತಿಹಾಸ[ಬದಲಾಯಿಸಿ]

ಭಾರತದ ಆರ್ಥಿಕ ಇತಿಹಾಸವನ್ನು ಸ್ಥೂಲವಾಗಿ ಮೂರು ಕಾಲಮಾನದಲ್ಲಿ ವಿಂಗಡಿಸಬಹುದು.

 1. ಬ್ರಿಟೀಷ್ ವಸಾಹತುಶಾಹಿ ಆಳ್ವಿಕೆ ಪೂರ್ವ ಕಾಲ (೧೭ ಶತಮಾನಕ್ಕಿಂತ ಮೊದಲಿನ ಕಾಲ)
 2. ಬ್ರಿಟೀಷ್ ವಸಾಹತುಶಾಹಿ ಆಳ್ವಿಕೆಯ ಕಾಲ(೧೭ನೆ ಶತಮಾನದಿಂದ ೧೯೪೭ರವರೆಗೆ)
 3. ಸ್ವಾತಂತ್ರ್ಯಾನಂತರ ಕಾಲ (೧೯೪೭ರಿಂದ ಪ್ರಸ್ತುತ ಕಾಲದವರೆಗೆ)

ವಸಾಹತುಶಾಹಿ ಆಳ್ವಿಕೆ ಪೂರ್ವ ಕಾಲ[ಬದಲಾಯಿಸಿ]

ಕ್ರಿ.ಪೂ. 2800 ರಿಂದ 1800 ರವರೆಗೆ ಮೆರೆದ ಸಿಂಧೂ ಕಣಿವೆಯ ನಾಗರೀಕತೆಯು ಬಹುತೇಕ ಪಟ್ಟಣ ಪ್ರದೇಶಗಳ ಪಕ್ಕಾ ಒಕ್ಕಲುಗಳನ್ನು ಒಳಗೊಂಡಿತ್ತು. ಇಲ್ಲಿಯ ಜನರು ಬೇಸಾಯ ಮತ್ತು ಪಶುಪಾಲನೆಯನ್ನು ರೂಢಿಸಿಕೊಂಡಿದ್ದರು, ಏಕ ರೀತಿಯ ತೂಕ ಮತ್ತು ಅಳತೆಗಳನ್ನು ಬಳಸುತ್ತಿದ್ದರು,ಆಯುಧೋಪಕರಣಗಳನ್ನು ತಯಾರಿಸುತ್ತಿದ್ದರು ಹಾಗೂ ಇತರ ಪಟ್ಟಣಗಳೋಂದಿಗೆ ವ್ಯಾಪಾರ ಸಂಬಂಧವನ್ನು ಇಟ್ಟುಕೊಂಡಿದ್ದರು. ಸುನಿಯೋಜಿತ ಬೀದಿಗಳು,ಚರಂಡಿ ಹಾಗೂ ನೀರು ಸರಬರಾಜು ವ್ಯವಸ್ಥೆ,ಇವೆಲ್ಲವುಗಳ ಕುರುಹು,ನಗರ ಯೋಜನೆಯಲ್ಲಿ ಇವರಿಗಿದ್ದ ಜ್ಞಾನವನ್ನು ತೋರಿಸುತ್ತದೆ.ಅಷ್ಟೇ ಅಲ್ಲ, ಜಗತ್ತಿನ ಮೊಟ್ಟ ಮೊದಲ ನಗರ ನೈರ್ಮಲ್ಯ ವ್ಯವಸ್ಥೆ ಹಾಗೂ ಸ್ಥಳೀಯ ಸರ್ಕಾರಗಳ ಕೀರ್ತಿಯು ಈ ನಾಗರೀಕತೆಗೆ ಸಲ್ಲುತ್ತದೆ.[೧]

ಈಗ ಭಾರತದ ಭಾಗವಾಗಿರುವ ಆ ಪ್ರದೇಶದ ಬಹುತೇಕ ಜನರು, ಗ್ರಾಮವಾಸಿಗಳಾಗಿದ್ದು,ಅವರ ಹಣಕಾಸು ವ್ಯವಸ್ಥೆಯು ಬಹಳವಾಗಿ ಪ್ರತ್ಯೇಕವಾಗಿದ್ದು, ಸ್ವಾವಲಂಬಿಯಾಗಿತ್ತು. ಬೇಸಾಯ ಮುಖ್ಯ ಉದ್ಯೋಗವಾಗಿತ್ತು.ಅವರ ಕೃಷಿಯು ಗ್ರಾಮದ ಆಹಾರದ ಅಗತ್ಯಗಳನ್ನಷ್ಟೇ ಅಲ್ಲದೆ, ಬಟ್ಟೆ,ಆಹಾರ ಸಂಸ್ಕರಣೆ, ಕರಕುಶಲ ವಸ್ತುಗಳು ಇತ್ಯಾದಿ ಗ್ರಾಮೀಣ ಕೈಗಾರಿಕೆಗಳ ಕಚ್ಚಾ ವಸ್ತುಗಳನ್ನೂ ಪೂರೈಸುತ್ತಿತ್ತು. ಅನೇಕ ರಾಜರುಗಳು ತಮ್ಮದೇ ಆದ ನಾಣ್ಯಗಳನ್ನು ಚಲಾವಣೆಯಲ್ಲಿಟ್ಟಿದ್ದರೂ, ವಸ್ತು ವಿನಿಮಯ ಕೂಡಾ ಬಹಳ ಕಡೆಗಳಲ್ಲಿ ಬಳಕೆಯಲ್ಲಿತ್ತು.ಗ್ರಾಮಸ್ಥರು ತಮ್ಮ ಬೆಳೆಯ ಒಂದು ಪಾಲನ್ನು ಕಂದಾಯವಾಗಿ ಸಲ್ಲಿಸುವುದೂ, ಕುಶಲ ಕಾರ್ಮಿಕರು ಸುಗ್ಗಿಯ ಕಾಲದಲ್ಲಿ ಬೆಳೆಯ ಒಂದು ಪಾಲನ್ನು ತಮ್ಮ ಸೇವೆಯ ಪ್ರತಿಫಲವಾಗಿ ಪಡೆದುಕೊಳ್ಳುವುದೂ ಚಾಲ್ತಿಯಲ್ಲಿತ್ತು.

ಧರ್ಮ, ಅದರಲ್ಲೂ ಮುಖ್ಯವಾಗಿ ಹಿಂದೂ ಧರ್ಮ,ಜಾತಿ ಮತ್ತು ಅವಿಭಕ್ತ ಕುಟುಂಬ ಪಧ್ಧತಿಗಳು ಗ್ರಾಮಗಳ ಆರ್ಥಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರುತ್ತಿದ್ದವು. ಜಾತಿ ಪಧ್ಧತಿಯು ಸಾಮಾಜಿಕ ನ್ಯೂನತೆಗಳಿಗೆ ಎಡೆ ಮಾಡಿ ಕೊಟ್ಟಿದ್ದರೂ, ಶ್ರಮ ವಿಭಜನೆ, ಹೊಸ ಕಾರ್ಮಿಕರ ತರಬೇತಿ , ಹಾಗೂ ಕೆಲ ಉತ್ಪಾದಕರು ವಿಶೇಷ ಕಾರ್ಯಕಾರಿ ಪಧ್ಧತಿಯನ್ನು ಉಪಯೋಗಿಸುವುದೇ ಇತ್ಯಾದಿಗಳಿಗೆ ಅನುವು ಮಾಡಿಕೊಟ್ಟು, ಮಧ್ಯಕಾಲದ ಯೂರೋಪಿನ ಗಿಲ್ಡ್ ಗಳಂತೆ ಕಾರ್ಯ ನಿರ್ವಹಿಸುತ್ತಿತ್ತು.ಉದಾಹರಣೆಗೆ, ಕೆಲ ಪ್ರದೇಶಗಳಲ್ಲಿ, ಬಟ್ಟೆಯ ಪ್ರತಿಯೊಂದು ಪ್ರಬೇಧವೂ, ಒಂದೊಂದು ಉಪಜಾತಿಯ ವೈಶಿಷ್ಟ್ಯವಾಗಿತ್ತು.

ಬ್ರಿಟಿಷ್ ಆಡಳಿತ ಬರುವ ಕಾಲದಲ್ಲಿ, ಭಾರತ ಬಹುತೇಕ , ಹೊಟ್ಟೆಪಾಡಿಗಾಗಿ, ಸರಳ ತಂತ್ರಜ್ಙಾನ ಬಳಸುತ್ತಿದ್ದ, ಸಾಂಪ್ರದಾಯಿಕ ಕೃಷಿ ಪ್ರಧಾನ ದೇಶವಾಗಿತ್ತು. ಪೈಪೋಟಿಯಂದ ಬೆಳೆಯುತ್ತಿದ್ದ ವಾಣಿಜ್ಯ, ಉದ್ಯಮ ಹಾಗೂ ಋಣ ವ್ಯವಸ್ಥೆಗಳೊಂದಿಗೆ ಇದು ಸಹ ಬಾಳ್ವೆ ಮಾಡುತ್ತಿತ್ತು.

ಗುಪ್ತ ವಂಶದ ಕುಮಾರ ಗುಪ್ತನ ಆಳ್ವಿಕೆಯ ಸಮಯದಲ್ಲಿ ಮುದ್ರಿಸಲಾದ ಬೆಳ್ಳಿ ನಾಣ್ಯ (ಕ್ರಿ.ಶ.೪೧೪–೪೫೫)

ವಸಾಹತುಶಾಹಿ ಆಳ್ವಿಕೆಯ ಕಾಲ[ಬದಲಾಯಿಸಿ]

ಭಾರತದ ಒಟ್ಟು ಆದಾಯ(1857 - 1900) ದಂತೆ 1948-1949 ಬೆಲೆ

ಬ್ರಿಟಿಷ್ ಆಡಳಿತ ಆಸ್ತಿ ಹಕ್ಕು, ಅನಿರ್ಬಂಧಿತ ವ್ಯಾಪಾರ, ಸ್ಥಿರ ವಿನಿಮಯ ದರ, ಏಕ ರೀತಿಯ ನಾಣ್ಯ ಪಧ್ಧತಿ ಹಾಗೂ ತೂಕ ಮತ್ತು ಅಳತೆ ಪದ್ಧತಿ, ಮುಕ್ತ ಸಟ್ಟಾ ಮಾರುಕಟ್ಟೆ ಇವೆಲ್ಲವುಗಳನ್ನೂ ಒಳಗೊಂಡ ಸಾಂಸ್ಥಿಕ ವಾತಾವರಣವನ್ನು ಸೃಷ್ಟಿಸಿತು.ಅಷ್ಟೇ ಅಲ್ಲ, ಚೆನ್ನಾಗಿ ಅಭಿವೃಧ್ಧಿಯಾದ ರೈಲು ಹಾಗೂ ಅಂಚೆ ತಂತಿ ವ್ಯವಸ್ಥೆ, ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿದ್ದ ಆಡಳಿತ ವ್ಯವಸ್ಥೆ, ಆಧುನಿಕ ಕಾನೂನು ವ್ಯವಸ್ಥೆ ಇವುಗಳನ್ನೂ ಬ್ರಿಟಿಷ್ ಆಡಳಿತ ಜಾರಿಗೆ ತಂದಿತು.

ಕಾಕತಾಳೀಯವಾಗಿ, ಇದೇ ಸಮಯದಲ್ಲಿ ಜಗತ್ತಿನ ಅರ್ಥಿಕ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳಾಗುತ್ತಿದ್ದವು -ಕೈಗಾರಿಕೀಕರಣ, ಉತ್ಪಾದನೆ ಹಾಗೂ ವಾಣಿಜ್ಯ ವಹಿವಾಟುಗಳಲ್ಲಿ ಹೆಚ್ಚಳ, ರಾಷ್ಟ್ರಗಳು ಅನುಸರಿಸುತ್ತಿದ್ದ ಅರ್ಥಿಕ ಧೋರಣೆಯಲ್ಲಿ ಹೊಸ ವಿಚಾರಗಳು ಇತ್ಯಾದಿ.ಅದರೂ ಬ್ರಿಟಿಷರು ಬಿಟ್ಟು ಹೋದಾಗ ಭಾರತ ಪ್ರಪಂಚದ ಅತಿ ಬಡ ರಾಷ್ಟ್ರಗಳಲ್ಲಿ ಒಂದಾಗಿತ್ತು. ಕೈಗಾರಿಕೆಗಳು ಇದ್ದಲ್ಲೇ ಇದ್ದು, ಅಭಿವೃಧ್ಧಿ ಸ್ಥಗಿತವಾಗಿತ್ತು. ಪದೇ ಪದೇ ಬಂದೆರಗುತ್ತಿದ್ದ ಕ್ಷಾಮದಿಂದ ಕಂಗಾಲಾಗಿದ್ದ ಭಾರತ ಹೆಚ್ಚುತ್ತಿದ್ದ ಜನಸಂಖ್ಯೆಯ ಹಸಿವನ್ನು ನೀಗಿಸಲು ಭಾರತೀಯ ಕೃಷಿ ಅಸಮರ್ಥವಾಗಿತ್ತು. ಈ ಕಾಲದಲ್ಲಿ ಭಾರತ ವಿಶ್ವದ ಅತಿ ಕಮ್ಮಿ ಆಯುಷ್ಯ ಪ್ರಮಾಣ ಹೊಂದಿರುವ ದೇಶವಾಗಿತ್ತು ಮತ್ತು ಅದರ ಜನಸಂಖ್ಯೆಯ ಬಹುಭಾಗ ಆಹಾರ ಪೋಷಣೆಯಿಂದ ವಂಚಿತ ಹಾಗು ಅನಕ್ಷರಸ್ಥವಾಗಿತ್ತು

ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಇತಿಹಾಸಕಾರ ಅಂಗಸ್ ಮ್ಯಾಡಿಸನ್ ರವರ ಅಂದಾಜಿನ ಪ್ರಕಾರ ಜಗತ್ತಿನ ಒಟ್ಟು ಉತ್ಪತ್ತಿಯಲ್ಲಿ ಭಾರತದ ಪಾಲು ೧೭೦೦ರಲ್ಲಿ ಶೇಕಡಾ ೨೨.೬(ಯುರೋಪ್ ಪಾಲು ೨೩.೩%) ಇದ್ದದ್ದು ೧೯೫೨ರಲ್ಲಿ ಕೇವಲ ಶೇಕಡಾ ೩.೮ಕ್ಕೆ ಇಳಿಯಿತು. ಈ ನಿರಾಶಾದಾಯಕ ಪರಿಸ್ಥಿತಿಗೆ, ಸ್ವಾತಂತ್ರ್ಯ ಹೋರಾಟ ಕಾಲದ ಭಾರತೀಯ ಮುಖಂಡರು ಹಾಗೂ "ಎಡ-ರಾಷ್ಟ್ರೀಯವಾದೀ" ಆರ್ಥಿಕ ಇತಿಹಾಸಕಾರರು ಬ್ರಿಟಿಷ್ ಆಳ್ವಿಕೆಯತ್ತ ಬೊಟ್ಟು ಮಾಡಿ ತೋರಿಸಿದರೂ,ವಸಾಹತುಶಾಹಿ ಆಳ್ವಿಕೆ ತಂದ ಬದಲಾವಣೆಗಳು ಹಾಗೂ ಕೈಗಾರಿಕೀಕರಣ ಮತ್ತು ಆರ್ಥಿಕ ಏಕೀಕರಣದತ್ತ ಸಾಗುತ್ತಿದ್ದ ಜಗತ್ತು , ಇವುಗಳ ಒಟ್ಟು ಪರಿಣಾಮದಿಂದ, ಭಾರತದ ಅರ್ಥ ವ್ಯವಸ್ಥೆಯ ಕೆಲವು ಅಂಗಗಳು ಬೆಳೆದಿರುವುದೂ, ಇನ್ನೂ ಕೆಲವು ಅಂಗಗಳು ಕುಂಠಿತವಾಗಿರುವುದೂ,ಆ ಕಾಲದ ಭಾರತೀಯ ಅರ್ಥ ವ್ಯವಸ್ಥೆಯ ಪಕ್ಷಿನೋಟದಲ್ಲಿ ಕಾಣಬರುತ್ತದೆ.

ಸ್ವಾತಂತ್ರ್ಯಾನಂತರ ಕಾಲ[ಬದಲಾಯಿಸಿ]

ಭಾರತದ ಒಟ್ಟು ಆದಾಯದ ಬೆಳವಣಿಗೆ

ಸ್ವಾತಂತ್ರ್ಯಾನಂತರ , ವಸಾಹತುಶಾಹಿ ಅನುಭವ ( ಭಾರತೀಯ ಮುಖಂಡರು ಇದನ್ನು ಶೋಷಣಾತ್ಮಕವಾಗಿ ಕಂಡಿದ್ದರು),ಫೇಬಿಯನ್ ಸಮಾಜವಾದದ ಪರಿಚಯ ಇವುಗಳ ಪ್ರಭಾವದಿಂದ ಭಾರತದ ಆರ್ಥಿಕ ಧೋರಣೆಯು (policy) ರಕ್ಷಣಾತ್ಮಕವಾಯಿತು (protectionist).ಆಮದು ವಸ್ತುಗಳ ಸ್ಡದೇಶೀಕರಣ,ಕೈಗಾರಿಕೀಕರಣ,ಶ್ರಮ (labour)ಹಾಗೂ ಹಣಕಾಸು ರಂಗಗಳಲ್ಲಿ ಸರಕಾರೀ ನಿಯಂತ್ರಣ , ಬೃಹತ್ ಸರಕಾರೀ ಉದ್ಯಮ ರಂಗ, ಖಾಸಗೀ ಉದ್ಯಮಕ್ಕೆ ಕಟ್ಟುಪಾಡುಗಳು , ಕೇಂದ್ರೀಕೃತ ಯೋಜನೆ ಇವೆಲ್ಲವೂ ಈ ಧೋರಣೆಯಲ್ಲಿ ಅಡಕವಾಗಿದ್ದವು.ಭಾರತದ ಮೊಟ್ಟಮೊದಲ ಪ್ರಧಾನ ಮಂತ್ರಿ ಜವಹರಲಾಲ್ ನೆಹರೂ , ಅಂಕಿಅಂಶಜ್ಞ ಪ್ರಶಾಂತ ಚಂದ್ರ ಮಹಲನೋಬಿಸ್‌ರೊಂದಿಗೆ ಈ ಸ್ವತಂತ್ರ ಭಾರತದ ಆರ್ಥಿಕ ಧೋರಣೆಯನ್ನು ಹುಟ್ಟುಹಾಕಿ, ಅದನ್ನು ಜಾರಿಗೆ ತರುವಲ್ಲಿ ಮೇಲ್ವಿಚಾರಣೆ ಮಾಡಿದರು. ಇದರಲ್ಲಿ ಸೋವಿಯತ್ ರಶಿಯಾದ ಕೇಂದ್ರೀಕೃತ ಅಧಿಕಾರ ವ್ಯವಸ್ಥೆಯಂತಲ್ಲದೆ, ಸರಕಾರೀ ಹಾಗೂ ಖಾಸಗೀ ರಂಗಗಳೆರಡಕ್ಕೂ ಅವಕಾಶಗಳಿತ್ತು; ಪ್ರತ್ಯಕ್ಷ ಹಾಗೂ ಪರೋಕ್ಷ ಸರಕಾರೀ ನಿಯಂತ್ರಣಗಳಿದ್ದವು. ಈ ಕಾರಣಗಳಿಂದಾಗಿ, ತಮ್ಮ ಈ ಧೋರಣೆಗೆ ಅವರು ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸಿದ್ದರು. ಬಂಡವಾಳ ಹಾಗೂ ತಾಂತ್ರಿಕತೆಯನ್ನು ಬೇಡುವ ಭಾರೀ ಕೈಗಾರಿಕೆಗಳೊಂದಿಗೆ , ಹೆಚ್ಚು ನಿಪುಣತೆಯ ಅಗತ್ಯವಿಲ್ಲದ , ಕೈಯಿಂದಲೇ ಮಾಡಬಹುದಾದ ಗುಡಿ ಕೈಗಾರಿಕೆಗಳ ಸರಕಾರೀ ಸಹಾಯಧನಕ್ಕೂ ಒತ್ತು ಕೊಟ್ಟ ಈ ಧೋರಣೆಯನ್ನು ಅರ್ಥ ಶಾಸ್ತ್ರಜ್ಞ ಮಿಲ್ಟನ್ ಫ್ರೀಡ್ಮನ್ನರು ಟೀಕಿಸಿ , ಈ ಧೊರಣೆಯಿಂದ ಬಂಡವಾಳ ಹಾಗೂ ಪರಿಶ್ರಮಗಳು ಪೋಲಾಗುವುದಷ್ಟೇ ಅಲ್ಲದೆ, ಸಣ್ಣ ಉದ್ಯಮಗಳ ಬೆಳವಣಿಗೆಯೂ ಕುಂಠಿತವಾಗಬಹುದೆಂದು ಅಭಿಪ್ರಾಯಪಟ್ಟರು.

ದಕ್ಷಿಣ ಏಷಿಯಾದ ಒಟ್ಟು ಆದಾಯ

ಎಂಬತ್ತರ ದಶಕದಲ್ಲಿ ಭಾರತದ ಆರ್ಥಿಕ ಅಭಿವೃಧ್ಧಿಯ ಸರಾಸರಿ ವೇಗವು, ಏಶಿಯಾದ ಕೆಲವು ಇತರ ದೇಶಗಳ( ಮುಖ್ಯವಾಗಿ ಪೂರ್ವ ಏಶಿಯಾದ ದೇಶಗಳ) ತೀವ್ರ ಗತಿಗೆ ವ್ಯತಿರಿಕ್ತವಾಗಿ, ಕಡಿಮೆಯಿದ್ದು,ಇದನ್ನು "ಹಿಂದೂ ಅಭಿವೃಧ್ಧಿಯ ವೇಗ" ಎಂದು ಕುಹಕವಾಡಲಾಗುತ್ತಿತ್ತು. ಎಂಭತ್ತರ ನಂತರ ದಾಪುಗಾಲು ಹಾಕತೊಡಗಿದ ಆರ್ಥಿಕ ಬೆಳವಣಿಗೆಗೆ ಎರಡು ಹಂತದ ಸುಧಾರಣೆಗಳು ಕಾರಣವಾದವು. ಒಂದು: ಇಂದಿರಾ ಗಾಂಧಿಯವರು ಶುರುಮಾಡಿ, ರಾಜೀವ ಗಾಂಧಿಯವರು ಮುಂದುವರಿಸಿದ ಖಾಸಗೀ ಉದ್ಯಮ ಪರವಾದ ಸುಧಾರಣೆಗಳು. ಈಗಾಗಲೇ ಕಾರ್ಯನಿರತವಾಗಿರುವ ಉದ್ಯಮಗಳ ಉತ್ಪತ್ತಿಯನ್ನು ವಿಸ್ತರಿಸಲು ವಿಧಿಸಲಾಗಿದ್ದ ಕಟ್ಟುಪಾಡುಗಳನ್ನು ಸಡಿಲಗೊಳಿಸಲಾಯಿತು. ಬೆಲೆ ನಿಯಂತ್ರಣಗಳನ್ನು ತೆಗೆದುಹಾಕಲಾಯಿತು ಹಾಗೂ ಉದ್ಯಮ ರಂಗದ ಮೇಲೆ ವಿಧಿಸಲಾಗಿದ್ದ ಕರವನ್ನು ಕಡಿಮೆ ಮಾಡಲಾಯಿತು. ಎರಡು: ೧೯೯೧ರಲ್ಲಿ ಆಗಿನ ಪ್ರಧಾನಿ ಪಿ.ವಿ. ನರಸಿಂಹರಾವ್ ಮತ್ತು ಅವರ ಹಣಕಾಸು ಮಂತ್ರಿ ಮನಮೋಹನ ಸಿಂಗ್, ಭಾರತ ಎದುರಿಸುತ್ತಿದ್ದ ತೀವ್ರ ಆರ್ಥಿಕ ಸಂಕಟಕ್ಕೆ ಪ್ರತಿಕ್ರಿಯೆಯಾಗಿ, ಪ್ರಾರಂಭಿಸಿದ ಆರ್ಥಿಕ ಉದಾರೀಕರಣ(liberalisation). ಹಣ ಹೂಡಿಕೆ, ಕೈಗಾರಿಕಾ ಹಾಗೂ ಆಮದು ಕ್ಷೇತ್ರಗಳಲ್ಲಿ ಲೈಸೆನ್ಸ್ ರಾಜ್ಯವನ್ನು ತೆಗೆದುಹಾಕಲಾಯಿತು. ಅನೇಕ ರಂಗಳಲ್ಲಿದ್ದ ಸರಕಾರೀ ಏಕಸ್ವಾಮ್ಯವನ್ನು ನಿರ್ಮೂಲಿಸಿ, ಪರದೇಶೀ ಹಣ ಹೂಡಿಕೆಗೆ ಬಹಳಷ್ಟು ಕ್ಷೇತ್ರಗಳಲ್ಲಿ ಪರವಾನಗಿಯನ್ನು ಸ್ವಯಂಚಾಲಿತವಾಗಿಸಲಾಯಿತು (automatic approval ). ಅಂದಿನಿಂದ ಇಲ್ಲಿಯವರೆಗೆ, ಕಾರ್ಮಿಕ ಸಂಘಟನೆಗಳು,ರೈತರು ಇತ್ಯಾದಿ ಪಟ್ಟಭದ್ರ ಶಕ್ತಿಗಳನ್ನೇ ಆಗಲೀ, ಅಥವಾ ಕಾರ್ಮಿಕ ಕ್ಷೇತ್ರದಲ್ಲಿ ಸುಧಾರಣೆಗಳು, ಕೃಷಿಕರ ಸಹಾಯಧನದಲ್ಲಿ ಕಡಿತ ಇತ್ಯಾದಿ ಸಮಸ್ಯಾತ್ಮಕ ಪ್ರಶ್ನೆಗಳನ್ನೇ ಆಗಲೀ, ಎದುರಿಸುವ ಪ್ರಯತ್ನವನ್ನು ಯಾವ ಪಕ್ಷವೂ ಮಾಡಿಲ್ಲದಿದ್ದರೂ ಕೂಡಾ, ಅಧಿಕಾರದಲ್ಲಿದ್ದದ್ದು ಯಾವುದೇ ಪಕ್ಷವಾಗಿರಲಿ, ಉದಾರೀಕರಣ ಸರಿಸುಮಾರಾಗಿ ಅದೇ ದಿಕ್ಕಿನಲ್ಲಿ ಮುಂದೆ ಸಾಗಿದೆ.

ಭಾರತದ ಆರ್ಥಿಕತೆ ೨೦೧೪ - ೨೦೧೮[ಬದಲಾಯಿಸಿ]

ಹಿಂದಿನ ಬೆಳವಣಿಗೆ:
GDP PPP 2014 ರಂತೆ
 • 2018ರಲ್ಲಿ ಭಾರತವು ವಿಶ್ವದಲ್ಲಿ 6ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿತು. ರೂ.176.59 ಲಕ್ಷ ಕೋಟಿಗಳಷ್ಟು ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) (2012ರಲ್ಲಿ 2ಲಕ್ಷ ಕೋಟಿ ಇತ್ತೆಂದು ವರದಿಯಾಗಿದೆ) ಹೊಂದಿರುವ ಭಾರತ, 2017ರಲ್ಲಿ ಫ್ರಾನ್ಸ್‌ ಅನ್ನು 7ನೇ ಸ್ಥಾನಕ್ಕೆ ಹಿಂದಿಕ್ಕಿದೆ ಎಂದು ವಿಶ್ವಬ್ಯಾಂಕ್‌ ಸಿದ್ಧಪಡಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಫ್ರಾನ್ಸ್‌ನ ‘ಜಿಡಿಪಿ’ಯು ರೂ. 175.57 ಲಕ್ಷ ಕೋಟಿಗಳಷ್ಟಿದೆ. ಈ ವರ್ಷದ ಮಾರ್ಚ್‌ ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ, ಆರ್ಥಿಕ ವೃದ್ಧಿ ದರವು ಶೇ 7.7ರಷ್ಟು ದಾಖಲಾಗಿದೆ. ಆದರೆ ದೇಶದ ತಲಾ ಆದಾಯವು 2018ರಲ್ಲಿಯೂ ಕಡಿಮೆ ಮಟ್ಟದಲ್ಲಿ ಇದೆ. ಭಾರತದ ತಲಾ ಆದಾಯ ಫ್ರಾನ್ಸ್‌ಗಿಂತ 20 ಪಟ್ಟು ಕಡಿಮೆ ಇದೆ ಎಂದು ರಾಜೀವ್‌ ಕುಮಾರ್, ನೀತಿ ಆಯೋಗದ ಉಪಾಧ್ಯಕ್ಷರು, ಹೇಳಿಕೆ ನೀಡಿದರು.[[೨]; ಆದಾಗ್ಯೂ, 2016-17 ಮತ್ತು 2017-18ರಲ್ಲಿ ಕ್ರಮವಾಗಿ 7.1% ಮತ್ತು 6.6% ಕ್ಕೆ, ಭಾಗಶಃ 2016 ರ ಭಾರತೀಯ ಬ್ಯಾಂಕ್ ನೋಟಿನ ರದ್ದು ಮತ್ತು ಗೂಡ್ಸ್ ಮತ್ತು ಸೇವಾ ತೆರಿಗೆ (ಭಾರತ) ದ ತೀವ್ರ ಬದಲಾವಣೆಯ ಪರಿಣಾಮದಿಂದಾಗಿ ಬೆಳವಣಿಗೆ ದರವು ತಗ್ಗಿಸಲ್ಪಟ್ಟಿತ್ತು.[೩]

ನೋಡಿ[ಬದಲಾಯಿಸಿ]

ಹೊರ ಸಂಪರ್ಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. http://kanaja.in/archives/108963
 2. https://www.prajavani.net/business/commerce-news/india-emerges-worlds-6th-556326.html ವಿಶ್ವದ 6ನೇ ಅತಿದೊಡ್ಡ ಆರ್ಥಿಕತೆ ಭಾರತ: 12 ಜುಲೈ 2018]
 3. [https: /www.hindustantimes.com/business-news/demonetisation-gst-impact-imf-lowers-india-s-2017-growth-forecast-to-6-7/story-UJJgfJKPJOvbzo5kRexDM.html Demonetisation, GST ಪ್ರಭಾವ: ಐಎಂಎಫ್ ಭಾರತದ 2017 ಬೆಳವಣಿಗೆ ಕಡಿಮೆಗೊಳಿಸುತ್ತದೆ 6.7%; ಅಕ್ಟೋಬರ್ 10, 2017]
 4. ಕಡಿಮೆ ಹೂಡಿ, ಹೆಚ್ಚು ಜನರಿಗೆ ದುಡಿಮೆಯ ಮಾರ್ಗ ತೋರುವ ಆರ್ಥಿಕತೆ ಬೇಕಾಗಿದೆ ರಾಕ್ಷಸ ಆರ್ಥಿಕತೆಯನ್ನು ಮಣಿಸಿರಿ;ಪ್ರಸನ್ನ;d: 10 ಸೆಪ್ಟೆಂಬರ್ 2019