ವಿಷಯಕ್ಕೆ ಹೋಗು

ಮೂಲಸೌಕರ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆದ್ದಾರಿ 401, ಉತ್ತರ ಅಮೆರಿಕದಲ್ಲಿರುವ ಅತ್ಯಂತ ವಾಹನ ದಟ್ಟಣೆಯ ಹೆದ್ದಾರಿ

ಮೂಲಸೌಕರ್ಯ ವು ಸಮಾಜ ಅಥವಾ ಉದ್ಯಮದ ಕಾರ್ಯಾಚರಣೆಗೆ ಅಗತ್ಯವಾದ ಮೂಲಭೂತ ಭೌತಿಕ ಮತ್ತು ಸಾಂಸ್ಥಿಕ ರಚನೆಗಳಾಗಿವೆ.[] ಅಥವಾ ಆರ್ಥಿಕತೆಯ ನಿರ್ವಹಣೆಗೆ ಅಗತ್ಯವಾದ ಸೇವೆಗಳನ್ನು ಮತ್ತು ಸೌಲಭ್ಯಗಳನ್ನು ಒಳಗೊಂಡಿರುತ್ತದೆ.[] ಈ ಪದವು ಸಾಮಾನ್ಯವಾಗಿ ಸಮಾಜಕ್ಕೆ ಪೂರಕವಾದ ತಾಂತ್ರಿಕ ರಚನೆಗಳನ್ನು ಉಲ್ಲೇಖಿಸುತ್ತದೆ. ಉದಾಹರಣೆಗೆ ರಸ್ತೆಗಳು, ಜಲಪೂರೈಕೆ, ಒಳಚರಂಡಿಗಳು, ವಿದ್ಯುತ್ ಜಾಲಗಳು, ದೂರಸಂಪರ್ಕಗಳು ಇತರೆ. ಕ್ರಿಯಾತ್ಮಕವಾಗಿ ಗಮನಿಸಿದಾಗ, ಮೂಲಸೌಕರ್ಯವು ಸರಕುಗಳ ಉತ್ಪನ್ನ ಮತ್ತು ಸೇವೆಗಳನ್ನು ಸುಗಮಗೊಳಿಸುತ್ತದೆ. ಉದಾಹರಣೆಗೆ, ರಸ್ತೆಗಳಿಂದ ಕಚ್ಚಾವಸ್ತುಗಳನ್ನು ಕಾರ್ಖಾನೆಗೆ ಸಾಗಿಸಲು ಸಾಧ್ಯವಾಗುತ್ತದೆ ಮತ್ತು ತಯಾರಾದ ಉತ್ಪನ್ನಗಳನ್ನು ಮಾರುಕಟ್ಟೆಗೆ ವಿತರಿಸಲು ನೆರವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಈ ಪದವು ಮೂಲಭೂತ ಸಾಮಾಜಿಕ ಸೇವೆಗಳಾದ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ಒಳಗೊಂಡಿರುತ್ತದೆ.[] ಮಿಲಿಟರಿ ರೂಢಿ ಮಾತಿನಲ್ಲಿ ಈ ಪದವು ಮಿಲಿಟರಿ ಪಡೆಗಳ ಬೆಂಬಲ, ಮರುನಿಯೋಜನೆ ಮತ್ತು ಕಾರ್ಯಾಚರಣೆಗೆ ಅಗತ್ಯವಾದ ಕಟ್ಟಡಗಳು ಮತ್ತು ಕಾಯಂ ಅಳವಡಿಕೆಗಳನ್ನು ಉಲ್ಲೇಖಿಸುತ್ತದೆ.[]

ಪದದ ಇತಿಹಾಸ

[ಬದಲಾಯಿಸಿ]

ಆನ್‌ಲೈನ್ ವ್ಯುತ್ಪತ್ತಿ ಪ್ರಕಾರ,[] ಮೂಲ ಸೌಕರ್ಯ ಪದವು 1972 ರಿಂದ ಇಂಗ್ಲೀಷ್‌ನಲ್ಲಿ ಬಳಸಲಾಗಿದ್ದು, ಅದರ ಅರ್ಥ,ಯಾವುದೇ ಕಾರ್ಯಾಚರಣೆ ಅಥವಾ ವ್ಯವಸ್ಥೆಗೆ ತಳಹದಿಯಾಗಿರುವ ಅಳವಡಿಕೆಗಳು.[] ಆಕ್ಸ್‌ಫರ್ಡ್ ಇಂಗ್ಲೀಷ್ ನಿಘಂಟು ಮುಂತಾದ ಇತರೆ ಮೂಲಗಳು ಪದದ ಮೂಲಗಳನ್ನು ಹಿಂದಿನ ಬಳಕೆಯಲ್ಲಿ ಪತ್ತೆ ಮಾಡಿದ್ದಾರೆ. ಮೂಲತಃ ಇದನ್ನು ಮಿಲಿಟರಿ ಅರ್ಥದಲ್ಲಿ ಬಳಸಲಾಗುತ್ತದೆ.

ಈ ಪದವನ್ನು ಫ್ರೆಂಚ್‌ನಿಂದ ಆಮದು ಮಾಡಿಕೊಳ್ಳಲಾಗಿದ್ದು, ಅಲ್ಲಿ ಇದರ ಅರ್ಥ ಸಬ್‌ಗ್ರೇಡ್. ನಿರ್ಮಾಣವಾದ ಕಲ್ಲುಹಾಸು ಅಥವಾ ರೈಲ್ವೆಯ ಕೆಳಗೆ ಬಳಸಿದ ಸ್ಥಳೀಯ ಸಾಮಗ್ರಿ.ಪದವು ಲ್ಯಾಟಿನ್ ಪೂರ್ವಪ್ರತ್ಯಯ "ಇನ್ಫ್ರಾ"ದ ಸಂಯೋಜನೆಯಾಗಿದ್ದು, "ಕೆಳಗೆ" ಮತ್ತು "ರಚನೆ"ಎಂಬ ಅರ್ಥ ನೀಡುತ್ತದೆ. ಪದದ ಮಿಲಿಟರಿ ಬಳಕೆಯು 1940ರ ದಶಕದಲ್ಲಿ NATO ರಚನೆಯಾದ ನಂತರ ಅಮೆರಿಕದಲ್ಲಿ ಚಲಾವಣೆಗೆ ಬಂತು.

ನಂತರ 1970ರ ದಶಕದಲ್ಲಿ ನಗರ ಯೋಜಕರು ಆಧುನಿಕ ನಾಗರಿಕ ಅರ್ಥದಲ್ಲಿ ಆ ಪದವನ್ನು ಅಳವಡಿಸಿಕೊಂಡರು.[]

ಈ ಪದವು ಅಮೆರಿಕ ಇನ್ ರೂನ್ಸ್ (ಚೊಯೇಟ್ ಮತ್ತು ವಾಲ್ಟರ್,1981 )[೧] ಪ್ರಕಟಣೆ ನಂತರ ರಾಷ್ಟ್ರ ದ "ಮೂಲಸೌಕರ್ಯ ಬಿಕ್ಕಟ್ಟಿನ" ಕುರಿತು ಸಾರ್ವಜನಿಕ-ನೀತಿ ಚರ್ಚೆ ಆರಂಭವಾದಾಗ 1980ರಲ್ಲಿ ಪ್ರಾಮುಖ್ಯತೆ ಗಳಿಸಿತು. ದಶಕಗಳ ಕಾಲ ಅಸಮರ್ಪಕ ಬಂಡವಾಳ ಮತ್ತು ಜನೋಪಯೋಗಿ ಕೆಲಸಗಳ ಕಳಪೆ ನಿರ್ವಹಣೆ ಕಾರಣದಿಂದ ಈ ಬಿಕ್ಕಟ್ಟು ಉಂಟಾಗಿದೆಯೆಂದು ಅಭಿಪ್ರಾಯ ವ್ಯಕ್ತವಾಗಿತ್ತು.

ಮೂಲಸೌಕರ್ಯಕ್ಕೆ ನಿಖರ ವ್ಯಾಖ್ಯಾನದ ಕೊರತೆಯಿಂದ ಸಾರ್ವಜನಿಕ-ನೀತಿ ಚರ್ಚೆಗೆ ಅಡ್ಡಿಯಾಯಿತು. U.S. ರಾಷ್ಟ್ರೀಯ ಸಂಶೋಧನೆ ಮಂಡಳಿಯ ಸಮಿತಿಯು ಪರಿಸ್ಥಿತಿಯನ್ನು ಸ್ಪಷ್ಟಪಡಿಸಲು "ಜನೋಪಯೋಗಿ ಕೆಲಸಗಳ ಮೂಲಸೌಕರ್ಯ" ಪದವನ್ನು ಅಳವಡಿಸಿ,ಉಲ್ಲೇಖಿಸುತ್ತಾ:

"...ಎರಡೂ ನಿರ್ದಿಷ್ಟ ಕ್ರಿಯಾತ್ಮಕ ಮಾರ್ಗಗಳು-ಹೆದ್ದಾರಿಗಳು, ಬೀದಿಗಳು, ರಸ್ತೆಗಳು ಮತ್ತು ಸೇತುವೆಗಳು; ಸಮೂಹ ಸಾರಿಗೆ; ವಿಮಾನ ನಿಲ್ದಾಣ ಗಳು ಮತ್ತು ವಾಯುಮಾರ್ಗ; ಜಲ ಪೂರೈಕೆ ಮತ್ತು ಜನಸಂಪನ್ಮೂಲಗಳು; ತ್ಯಾಜ್ಯನೀರು ನಿರ್ವಹಣೆ; ಘನ ತ್ಯಾಜ್ಯ ಸಂಸ್ಕರಣೆಮತ್ತು ವಿಲೇವಾರಿ; ವಿದ್ಯುಚ್ಛಕ್ತಿ ಉತ್ಪಾದನೆ ಮತ್ತು ಸಾಗಣೆ ಒಳಗೊಂಡಿದೆ; ದೂರಸಂಪರ್ಕಗಳು; ಮತ್ತು ಅಪಾಯಕಾರಿ ತ್ಯಾಜ್ಯನಿರ್ವಹಣೆ- ಮತ್ತು ಈ ವಿಧಾನದ ಅಂಶಗಳನ್ನು ಒಳಗೊಂಡ ಮಿಶ್ರಿತ ವ್ಯವಸ್ಥೆ. ಮೂಲ ಸೌಕರ್ಯದ ಗ್ರಹಿಕೆಯು ಈ ಜನೋಪಯೋಗಿ ಸೇವಾ ಕಾರ್ಯಗಳ ಸೌಲಭ್ಯಗಳನ್ನು ವ್ಯಾಪಿಸಿದೆಯಲ್ಲದೇ, ನಿರ್ವಹಣೆ ವಿಧಿ ವಿಧಾನಗಳು, ವ್ಯವಸ್ಥಾಪನೆ ಪದ್ಧತಿಗಳು ಮತ್ತು ಸಮಾಜದ ಬೇಡಿಕೆಯೊಂದಿಗೆ ಪರಸ್ಪರ ಕಾರ್ಯನಿರ್ವಹಿಸುವ ಅಭಿವೃದ್ಧಿ ನೀತಿಗಳು, ಜನರು ಮತ್ತು ಸರಕುಗಳ ಸಾಗಣೆ ಸುಗಮಗೊಳಿಸುವ ಬೌತಿಕ ಪ್ರಪಂಚ, ಕುಡಿಯಲು ಮತ್ತು ಇತರೆ ವೈವಿಧ್ಯದ ಬಳಕೆಗಳಿಗೆ ನೀರಿನ ಅವಕಾಶ, ಸಮಾಜದ ತ್ಯಾಜ್ಯ ವಸ್ತುಗಳ ಸುರಕ್ಷಿತ ವಿಲೇವಾರಿ, ಎಲ್ಲಿ ಅಗತ್ಯವಿದೆಯೇ ಅಲ್ಲಿ ಇಂಧನದ ಅವಕಾಶ ಮತ್ತು ಸಮುದಾಯದೊಳಕ್ಕೆ ಮತ್ತು ನಡುವೆ ಮಾಹಿತಿಯ ಸಾಗಣೆ"[]

ಕೇನ್ಸೀಯ ಅರ್ಥಶಾಸ್ತ್ರದಲ್ಲಿ ಮೂಲಸೌಕರ್ಯ ಪದವು ಉತ್ಪಾದನೆ ಸುಗಮಗೊಳಿಸುವ ಸಾರ್ವಜನಿಕ ಆಸ್ತಿಗಳನ್ನು ವಿವರಿಸಲು ವಿಶೇಷವಾಗಿ ಬಳಸಲಾಗುತ್ತದೆ. ಆದರೆ ಇದೇ ಉದ್ದೇಶದ ಖಾಸಗಿ ಆಸ್ತಿಗಳನ್ನಲ್ಲ. ಕೇನ್ಸನ ನಂತರದ ಕಾಲದಲ್ಲಿ, ಆದಾಗ್ಯೂ, ಈ ಪದವು ಜನಪ್ರಿಯವಾಗಿ ಬೆಳೆಯಿತು. ಯಾವುದೇ ಉದ್ಯಮ ಸಂಸ್ಥೆ ಅಥವಾ ತಾಂತ್ರಿಕ ವ್ಯವಸ್ಥೆಯಲ್ಲಿ ಗುರುತಿಸಬಹುದಾದ ಆಂತರಿಕ ಚೌಕಟ್ಟನ್ನು ಸೂಚಿಸಲು ಹೆಚ್ಚು ಸಾಮಾನ್ಯವಾಗಿ ಇದನ್ನು ಬಳಸಲಾಯಿತು.

"ಕಠಿಣ" ವಿರುದ್ಧ "ಮೃದು" ಮೂಲ ಸೌಕರ್ಯ

[ಬದಲಾಯಿಸಿ]

ಈ ಲೇಖನದಲ್ಲಿ "ಕಠಿಣ" ಮೂಲ ಸೌಕರ್ಯವು ಆಧುನಿಕ ಕೈಗಾರಿಕೆ ರಾಷ್ಟ್ರದ ಕಾರ್ಯಚಟುವಟಿಕೆಗೆ ಅಗತ್ಯವಾದ ದೊಡ್ಡ ಬೌತಿಕ ಜಾಲಗಳನ್ನು ಉಲ್ಲೇಖಿಸುತ್ತದೆ. ಆದರೆ "ಮೃದು" ಮೂಲ ಸೌಕರ್ಯವು ರಾಷ್ಟ್ರದ ಆರ್ಥಿಕ,ಆರೋಗ್ಯ, ಸಾಂಸ್ಕೃತಿಕ/ಸಾಮಾಜಿಕ ಗುಣಮಟ್ಟಗಳನ್ನು ನಿರ್ವಹಿಸಲು ಅಗತ್ಯವಾದ ಎಲ್ಲ ಸಂಸ್ಥೆಗಳನ್ನು ಉಲ್ಲೇಖಿಸುತ್ತದೆ. ಉದಾಹರಣೆಗೆ ಹಣಕಾಸು ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ, ಆರೋಗ್ಯ ಸೇವೆ ವ್ಯವಸ್ಥೆ, ಸರ್ಕಾರ ಮತ್ತು ಕಾನೂನು ಜಾರಿ ವ್ಯವಸ್ಥೆ ಮತ್ತು ತುರ್ತು ಸೇವೆಗಳು.[][][೧೦]

"ಕಠಿಣ" ಮೂಲಸೌಕರ್ಯದ ವಿಧಗಳು

[ಬದಲಾಯಿಸಿ]
ಚಿಕಾಗೊ ಟ್ರಾನ್ಸಿಟ್ ಅಥೋರಿಟಿ ನಿಯಂತ್ರಣ ಗೋಪುರ 18, ಎತ್ತರಿಸಿದ ಚಿಕಾಗೊ 'L' ಉತ್ತರ ಮತ್ತು ದಕ್ಷಿಣಾಭಿಮುಖ ಪರ್ಪಲ್ ಮತ್ತು ಬ್ರೌನ್ ಲೈನ್‌‌ಗಳು ಪೂರ್ವ ಮತ್ತು ಪಶ್ಚಿಮಾಭಿಮುಖ ಪಿಂಕ್ ಮತ್ತು ಗ್ರೀನ್ ಮಾರ್ಗಗಳ ಜತೆ ಛೇದನವನ್ನು ಮತ್ತು ಲೂಪಿಂಗ್ ಆರೇಂಜ್ ಲೈನ್ ಲೂಪ್‌ನಲ್ಲಿ ವೆಲ್ಸ್ ಮತ್ತು ಲೇಕ್ ಸ್ಟ್ರೀಟ್ ಮೇಲೆ ಛೇದನವನ್ನ ನಿರ್ದೇಶಿಸುತ್ತದೆ.

ಕೆಳಗಿನ ಪಟ್ಟಿಯು ಬಂಡವಾಳ ಆಸ್ತಿಗಳಿಗೆ ಮಾತ್ರ ಸೀಮಿತವಾಗಿದೆ. ಅದು ಸಾಗಣೆಯ ಕ್ರಿಯೆಯನ್ನು ನಿರ್ವಹಿಸುತ್ತದೆ ಅಥವಾ ಜನರು, ವಾಹನಗಳು, ದ್ರವಗಳು, ಇಂಧನ ಅಥವಾ ಮಾಹಿತಿಯ ಚಲನೆಗೆ ಅವಕಾಶ ನೀಡುತ್ತದೆ. ಇದು ಜಾಲದ ಸ್ವರೂಪವನ್ನು ಅಥವಾ ವಾಹನಗಳು ಬಳಸುವ ನಿರ್ಣಾಯಕ ವಿವಿಧ ಮಾರ್ಗಗಳು ಕೂಡುವ ಸಂಪರ್ಕ ಬಿಂದು(ನೋಡ್) ಸ್ವರೂಪವನ್ನು ಪಡೆದುಕೊಳ್ಳುತ್ತದೆ ಅಥವಾ ವಿದ್ಯುತ್‌ಕಾಂತೀಯ ತರಂಗಗಳ ಸಾಗಣೆಗೆ ಬಳಸಲಾಗುತ್ತದೆ.

ಮೂಲಸೌಕರ್ಯ ವ್ಯವಸ್ಥೆಗಳು ಸ್ಥಿರ ಆಸ್ತಿಗಳು ಮತ್ತು ನಿಯಂತ್ರಣ ವ್ಯವಸ್ಥೆಗಳನ್ನು ಒಳಗೊಂಡಿರುತ್ತದೆ ಮತ್ತು ಆ ವ್ಯವಸ್ಥೆಗಳನ್ನು ಚಾಲನೆ ಮಾಡುವ, ನಿರ್ವಹಿಸುವ ಮತ್ತು ನಿಗಾವಹಿಸಲು ಅಗತ್ಯವಾದ ತಂತ್ರಾಂಶ ಹೊಂದಿರುತ್ತದೆ ಮತ್ತು ವ್ಯವಸ್ಥೆಯ ಅಗತ್ಯ ಭಾಗವಾದ ಯಾವುದೇ ಉಪಕಟ್ಟಡಗಳು,ಘಟಕಗಳು ಅಥವಾ ವಾಹನಗಳನ್ನು ಒಳಗೊಂಡಿದೆ. ಸಾರ್ವಜನಿಕ ಸಾಗಣೆಯ ಬಸ್ಸುಗಳು, ಕಸಸಂಗ್ರಹ ವಾಹನಗಳು ಮುಂತಾದ ವೇಳಾಪಟ್ಟಿಗಳ ಪ್ರಕಾರ ಕಾರ್ಯನಿರ್ವಹಿಸುವ ವಾಹನಗಳ ಸಮೂಹ ಮತ್ತು ಬೌತಿಕ ಜಾಲ(ತೈಲ ಸ್ಥಾವರಗಳು, ರೇಡಿಯೊ ಮತ್ತು ಟಿವಿ ಪ್ರಸಾರ ಸೌಲಭ್ಯಗಳು)ದ ಭಾಗವಾಗಿರದ ಮೂಲಭೂತ ಇಂಧನ ಅಥವಾ ಸಂಪರ್ಕ ಸೌಕರ್ಯಗಳು ಕೂಡ ಒಳಗೊಂಡಿವೆ.

ಸಾರಿಗೆ ಮೂಲ ಸೌಕರ್ಯ

[ಬದಲಾಯಿಸಿ]
  • ರಸ್ತೆ ಮತ್ತು ಹೆದ್ದಾರಿ ಜಾಲಗಳು, ಸೇರಿದಂತೆ (ಸೇತುವೆಗಳು,ಸುರಂಗಗಳು, ಸುರಂಗಕಾಲುವೆಗಳು, ಆಸರೆ ಗೋಡೆಗಳು), ಚಿಹ್ನೆಗಳು ಮತ್ತು ಗುರುತುಗಳು ವಿದ್ಯುತ್ ವ್ಯವಸ್ಥೆ ಗಳು(ಬೀದಿ ದೀಪ ಮತ್ತು ಸಂಚಾರ ದೀಪಗಳು, ಅಂಚುಕಲಾತ್ಮಕ ನಿರ್ವಹಣೆ(ಎಡ್ಜ್ ಟ್ರೀಟ್‌ಮೆಂಟ್ಸ್)(ಅಂಚುಗಲ್ಲುಗಳು,ಕಾಲುದಾರಿಗಳು,ಭೂದೃಶ್ಯ ವಿನ್ಯಾಸಗಳು) ರಸ್ತೆ ನಿರ್ವಹಣೆ ಡಿಪೊಗಳು ಮತ್ತು ವಿಶ್ರಾಂತಿ ಪ್ರದೇಶಗಳು ಮುಂತಾದ ವಿಶೇಷ ಸೌಲಭ್ಯಗಳು.
  • ರೈಲ್ವೆಗಳು, ರಚನೆಗಳು ಸೇರಿದಂತೆ, ನಿಲ್ದಾಣ ಸೌಕರ್ಯಗಳು (ರೈಲ್ವೆ ಯಾರ್ಡ್‌ಗಳು, ರೈಲ್ವೆ ನಿಲ್ದಾಣಗಳು), ಲೆವೆಲ್ ಕ್ರಾಸಿಂಗ್‌ಗಳು, ಸಿಗ್ನಲಿಂಗ್ ಮತ್ತು ಸಂಪರ್ಕ ವ್ಯವಸ್ಥೆಗಳು'
  • ನಿರಂತರ ನಿರ್ವಹಣೆ ಅಗತ್ಯವಾದ ಕಾಲುವೆಗಳು ಮತ್ತು ಸಂಚಾರಯೋಗ್ಯ ಜಲಮಾರ್ಗಗಳು (ಹೂಳೆತ್ತುವುದು, ಇತರೆ.)
  • ಬಂದರುಗಳು ಮತ್ತು ದೀಪಗೃಹಗಳು ಮತ್ತು ನದಿಯನ್ನು ಹಾಯುವ ದೋಣಿ ವ್ಯವಸ್ಥೆಗಳು
  • ವಿಮಾನ ನಿಲ್ದಾಣಗಳು, ಸೇರಿದಂತೆ ವಾಯು ಯಾನ ವ್ಯವಸ್ಥೆಗಳು
  • ಸಮೂಹ ಸಾರಿಗೆ ವ್ಯವಸ್ಥೆಗಳು (ಪ್ರಯಾಣಿಕ ರೈಲು ವ್ಯವಸ್ಥೆಗಳು, ಸುರಂಗಮಾರ್ಗಗಳು, ಟ್ರಾಮ್‌ಮಾರ್ಗಗಳು, ಟ್ರಾಲಿಗಳು ಮತ್ತು ಬಸ್ ಸಾರಿಗೆ)
  • ಬೈಸಿಕಲ್ ದಾರಿಗಳು ಮತ್ತು ಪಾದಚಾರಿ ಮಾರ್ಗಗಳು;

ಕಾಲುವೆಗಳು, ರೈಲುಮಾರ್ಗಗಳು, ಹೆದ್ದಾರಿಗಳು, ವಾಯುಮಾರ್ಗಗಳು ಮತ್ತು ಕೊಳವೆಮಾರ್ಗಗಳು ನೋಡಿ ಗ್ರಬ್ಲರ್(1990 )(ಉಲ್ಲೇಖದ ಶೀರ್ಷಿಕೆ ಕೊಂಡಿಯ ನೋಟ)ಈ ಮೂಲಸೌಕರ್ಯಗಳ ಇತಿಹಾಸ ಮತ್ತು ಪ್ರಾಮುಖ್ಯತೆ ಬಗ್ಗೆ ವಿವರವಾದ ಚರ್ಚೆಯನ್ನು ಒದಗಿಸುತ್ತದೆ.[೧೧]

ಇಂಧನ ಮೂಲ ಸೌಕರ್ಯ

[ಬದಲಾಯಿಸಿ]
  • ಉತ್ಪಾದನೆ ಘಟಕಗಳು, ವಿದ್ಯುತ್ ಗ್ರಿಡ್, ಉಪಕೇಂದ್ರಗಳು ಮತ್ತು ಸ್ಥಳೀಯ ವಿತರಣೆ ಸೇರಿದಂತೆ ವಿದ್ಯುತ್ ಇಂಧನ ಜಾಲ;
  • ನೈಸರ್ಗಿಕ ಅನಿಲ ಕೊಳವೆ ಮಾರ್ಗಗಳು,ಸಂಗ್ರಹ ಮತ್ತು ವಿತರಣೆ ಕೇಂದ್ರಗಳು ಮತ್ತು ಸ್ಥಳೀಯ ವಿತರಣೆ ಜಾಲ. ಕೆಲವು ಅರ್ಥನಿರೂಪಣೆಗಳಲ್ಲಿ ಅನಿಲ ಬಾವಿಗಳು ಮತ್ತು ಹಡಗು ಗಳ ಸಮೂಹ ಮತ್ತು ದ್ರವೀಕೃತ ಅನಿಲವನ್ನು ಸಾಗಿಸುವ ಟ್ರಕ್‌ಗಳು ಸೇರಿವೆ.
  • ಪೆಟ್ರೋಲಿಯಂ ಕೊಳವೆಮಾರ್ಗಗಳು ಸೇರಿದಂತೆ ಸಂಬಂಧಿತ ಸಂಗ್ರಹಾಗಾರ ಮತ್ತು ವಿತರಣೆ ಕೇಂದ್ರಗಳು. ಕೆಲವು ಅರ್ಥನಿರೂಪಣೆಗಳಲ್ಲಿ ತೈಲ ಬಾವಿಗಳು,ಸ್ಥಾವರಗಳು ಮತ್ತು ಟ್ಯಾಂಕರ್ ಹಡಗುಗಳು ಮತ್ತು ಟ್ರಕ್‌ಗಳ ಸಮೂಹಗಳು ಸೇರಿವೆ;
  • ಕಲ್ಲಿದ್ದಲು ಗಣಿಗಳು,ಮತ್ತು ಚೊಕ್ಕಟಗೊಳಿಸುವವಿಶೇಷ ಸೌಕರ್ಯಗಳು

,ಕಲ್ಲಿದ್ದಲಿನ ಸಂಗ್ರಹ ಮತ್ತುಸಾಗಣೆ;

  • ತಾಪಕ ವಿತರಣೆ ವ್ಯವಸ್ಥೆಗಳಿಗೆ ಆವಿ ಅಥವಾ ಬಿಸಿ ನೀರು ಉತ್ಪಾದನೆ ಮತ್ತು ವಿತರಣೆ ಜಾಲಗಳು
  • ವಿದ್ಯುತ್ ವಾಹನ ಜಾಲಗಳು ವಿದ್ಯುತ್ ವಾಹನಗಳಿಗೆ ವಿದ್ಯುತ್ ಪೂರೈಕೆ ಮಾಡುವುದು.

ನೀರಿನ ನಿರ್ವಹಣೆ ಮೂಲಸೌಕರ್ಯ

[ಬದಲಾಯಿಸಿ]
  • ಕೊಳವೆಗಳ ವ್ಯವಸ್ಥೆ,ನೀರು ಸಂಗ್ರಹ ಜಲಾಶಯಗಳು, ಪಂಪ್‌ಗಳು,ವಾಲ್ವ್‌ಗಳು,ಸೋಸುವಿಕೆ ಮತ್ತು ಸಂಸ್ಕರಣೆ ಸಾಮಗ್ರಿ ಮತ್ತು ಮೀಟರ್ ಸೇರಿದಂತೆಕುಡಿಯುವ ನೀರಿನ ಸರಬ ರಾಜು ಹಾಗು ಕುಡಿಯುವ ನೀರಿನ ವಿತರಣೆ ಮತ್ತು ಸಂಸ್ಕರಣೆ,ಸಂಗ್ರಹಕ್ಕೆ ಬಳಸುವ ಸಾಮಗ್ರಿಗಳನ್ನು ಇರಿಸುವ ಕಟ್ಟಡಗಳು ಮತ್ತು ರಚನೆಗಳೂ ಒಳಗೊಂಡಿವೆ.
  • ತ್ಯಾಜ್ಯವಸ್ತುಸಂಗ್ರಹ ಮತ್ತು ತ್ಯಾಜ್ಯ ನೀರಿನವಿಲೇವಾರಿ
  • ಒಳಚರಂಡಿ ವ್ಯವಸ್ಥೆಗಳು (ಮಳೆನೀರಿನ ಮೋರಿ,ಕಂದಕಗಳು, ಇತರೆ..)
  • ಪ್ರಮುಖ ನೀರಾವರಿ ವ್ಯವಸ್ಥೆಗಳು(ಜಲಾಶಯಗಳು, ನೀರಾವರಿ ಕಾಲುವೆಗಳು)
  • ಪ್ರಮುಖ ಪ್ರವಾಹ ನಿಯಂತ್ರಣ ವ್ಯವಸ್ಥೆಗಳು (ಅಡ್ಡಗಟ್ಟೆಗಳು, ಒಡ್ಡುಗಳು,ಪ್ರಮುಖ ಪಂಪಿಂಗ್ ಕೇಂದ್ರಗಳು ಮತ್ತು ನೆರೆತೂಬುಗಳು)
  • ದೊಡ್ಡ ಪ್ರಮಾಣದ ಹಿಮ ತೆಗೆಯುವುದು,ಜತೆಗೆ ಉಪ್ಪು ಹರಡುವ ಉಪಕರಣಗಳ ಸಮೂಹ, ವಾಹನಗಳಿಂದ ಹಿಮವನ್ನು ತೆಗೆಯುವ ಉಪಕರಣ, ಸ್ನೋಬ್ಲೋಯರ್ಸ್(ರಸ್ತೆಗಳು,ಹಳಿಗಳಿಂದ ಹಿಮ ತೆಗೆಯುವ ಉಪಕರಣ), ಡಂಪ್‌ಟ್ರಕ್‌ಗಳು, ಕಾಲುದಾರಿಯ ನೇಗಿಲುಗಳು, ಈ ಸಮೂಹಗಳಿಗೆ ರವಾನೆ ಮತ್ತು ಮಾರ್ಗ ವ್ಯವಸ್ಥೆಗಳನ್ನು ಕಲ್ಪಿಸುವುದು ಮತ್ತು ಸ್ಥಿರ ಸೊತ್ತುಗಳಾದ ಸ್ನೊ ಡಂಪ್‌ಗಳು, ಸ್ನೊ ಚ್ಯೂಟ್‌ಗಳು(ಮೇಲ್ಛಾವಣಿಯಿಂದ ಹಿಮ ತೆಗೆಯುವ ಉಪಕರಣ) ಮತ್ತು ಸ್ನೊ ಮೆಲ್ಟರ್ಸ್.

ಸಂಪರ್ಕ ಮೂಲಸೌಕರ್ಯ

[ಬದಲಾಯಿಸಿ]
  • ಅಂಚೆ ಸೇವೆ,ವಿತರಣೆ ಸೌಕರ್ಯಗಳು ಸೇರಿದಂತೆ.
  • ಸ್ವಿಚಿಂಗ್ ವ್ಯವಸ್ಥೆಗಳು ಸೇರಿದಂತೆ ದೂರವಾಣಿ ಜಾಲಗಳು(ಸ್ಥಿರ ದೂರವಾಣಿ ಮಾರ್ಗಗಳು)
  • ಮೊಬೈಲ್ ಫೋನ್ ಜಾಲಗಳು
  • ಪ್ರಸಾರವನ್ನು ನಿರ್ವಹಿಸುವ ನಿಯಂತ್ರಣಗಳು ಮತ್ತು ಪ್ರಮಾಣಕಗಳು ಸೇರಿದಂತೆ ಟೆಲಿವಿಷನ್ ಮತ್ತು ರೇಡಿಯೊ ಪ್ರಸಾರ ಕೇಂದ್ರಗಳು.
  • ಸ್ವೀಕರಿಸುವ ಕೇಂದ್ರಗಳು ಮತ್ತು ಕೇಬಲ್ ವಿತರಣೆ ಜಾಲಗಳು ಸೇರಿದಂತೆ ಕೇಬಲ್ ಟೆಲಿವಿಷನ್ ಬೌತಿಕ ಜಾಲಗಳು. (CNN ಅಥವಾ MTV ಮುಂತಾದ ವಿಶೇಷ ಚಾನೆಲ್ ಅರ್ಥ ದಲ್ಲಿ ಬಳಸಿದ ಕಂಟೆಂಟ್(ವಿಷಯ) ಒದಗಿಸುವವರು ಅಥವಾ ಜಾಲಗಳು ಇದರಲ್ಲಿ ಸೇರಿಲ್ಲ).
  • ಅಂತರಜಾಲ, ಜತೆಗೆ ಇಂಟರ್‌ನೆಟ್ ಬ್ಯಾಕ್‌ಬೋನ್(ಮುಖ್ಯ ದತ್ತಾಂಶ ಮಾರ್ಗಗಳು) ಕೋರ್ ರೂಟರ್‌ಗಳು ಮತ್ತು ಸರ್ವರ್ ಫಾರ್ಮ್‌(ಕಂಪ್ಯೂಟರ್‌ಗಳ ಸಂಗ್ರಹ) ಸ್ಥಳೀಯ ಅಂತರಜಾಲ ಸೇವೆ ಮತ್ತು ಶಿಷ್ಟಾಚಾರಗಳು ಹಾಗು ವ್ಯವಸ್ಥೆ ಕಾರ್ಯನಿರ್ವಹಿಸಲು ಅಗತ್ಯವಾದ ಇತರೆ ಮೂಲ ತಂತ್ರಾಂಶ. (ನಿರ್ದಿಷ್ಟ ಅಂತರಜಾಲತಾಣವನ್ನು ಒಳಗೊಳ್ಳುವುದಿಲ್ಲ, ಆದರೂ ವ್ಯಾಪಕವಾಗಿ ಬಳಸಲಾದ ಕೆಲವು ವೆಬ್ ಮೂಲದ ಸೇವೆಗಳು, ಉದಾಹರಣೆಗೆ ಸಾಮಾಜಿಕ ಜಾಲ ಸೇವೆಗಳು ಮತ್ತು ವೆಬ್ ಶೋಧ ಎಂಜಿನ್‌ಗಳು).
  • ಸಂಪರ್ಕ ಉಪಗ್ರಹಗಳು
  • ಸಮುದ್ರಗರ್ಭದ ಕೇಬಲ್‌ಗಳು
  • ಪ್ರಮುಖ ಮೂಲಸೌಕರ್ಯ ಕಂಪೆನಿಗಳು, ಸರ್ಕಾರಗಳು, ಮಿಲಿಟರಿ ಅಥವಾ ತುರ್ತು ಸೇವೆಗಳು ಹಾಗು ರಾಷ್ಟ್ರೀಯ ಸಂಶೋಧನೆ ಮತ್ತು ಶಿಕ್ಷಣ ಜಾಲಗಳು, ಅಂತರ ಸಂಪರ್ಕ ಮತ್ತು ಮೇಲ್ವಿಚಾರಣೆಗೆ ಬಳಸುವ ಪ್ರಮುಖ ಖಾಸಗಿ, ಸರ್ಕಾರ ಅಥವಾ ನಿಷ್ಠ ದೂರಸಂಪರ್ಕ ಜಾಲಗಳು .
  • ನ್ಯೂಮ್ಯಾಟಿಕ್ ಟ್ಯೂಬ್ ಮೇಲ್ ವಿತರಣೆ ಜಾಲಗಳು

ಘನ ತ್ಯಾಜ್ಯ ನಿರ್ವಹಣೆ

[ಬದಲಾಯಿಸಿ]
  • ಸ್ಥಳೀಯ ಸಂಸ್ಥೆಯಿಂದ ಕಸ ಮತ್ತು ಮರುಬಳಕೆ ವಸ್ತುಗಳ ಸಂಗ್ರಹ ;
  • ಘನತ್ಯಾಜ್ಯ ಎಸೆಯುವ ಸ್ಥಳಗಳು
  • ಘನ ತ್ಯಾಜ್ಯ ದಹನ ಯಂತ್ರಗಳು ಮತ್ತು ಪ್ಲಾಸ್ಮಾ ಅನಿಲೀಕರಣ ಸೌಲಭ್ಯಗಳು.
  • ವಸ್ತುಗಳ ಮರುಬಳಕೆ ಸೌಲಭ್ಯಗಳು
  • ಅಪಾಯಕಾರಿ ತ್ಯಾಜ್ಯ ವಿಲೇವಾರಿ ಸೌಲಭ್ಯಗಳು;

ಭೂ ನಿಗಾ ಮತ್ತು ಮಾಪನ ಜಾಲಗಳು

[ಬದಲಾಯಿಸಿ]
  • ಹವಾಮಾನ ನಿಗಾ ಜಾಲಗಳು
  • ಉಬ್ಬರವಿಳಿತ ನಿಗಾ ಜಾಲಗಳು
  • ಪ್ರವಾಹ ಮಾಪನ ಅಥವಾ ಫ್ಲುಯಿಯೊಮೆಟ್ರಿಕ್ [೨] ನಿಗಾ ಜಾಲಗಳು
  • ಸೈಸ್ಮೊಮೀಟರ್(ಭೂಕಂಪದ ಅಲೆಗಳ ಮಾಪನ) ಜಾಲಗಳು.
  • ಭೂ ಅವಲೋಕನ ಉಪಗ್ರಹಗಳು
  • ಭೂಮಿತೀಯ ಮಾನದಂಡಗಳು
  • ವಿಶ್ವವ್ಯಾಪಿ ಸ್ಥಾನೀಕರಣ ವ್ಯವಸ್ಥೆ
  • ಸ್ಥಳ ದತ್ತಾಂಶ ಮೂಲಸೌಕರ್ಯ

"ಮೃದು" ಮೂಲಸೌಕರ್ಯ

[ಬದಲಾಯಿಸಿ]

"ಮೃದು" ಮೂಲಸೌಕರ್ಯವು ಭೌತ ಆಸ್ತಿಗಳಾದ ಅತ್ಯಂತ ವಿಶೇಷ ಕಟ್ಟಡಗಳು ಮತ್ತು ಸಾಮಗ್ರಿಗಳು, ಮತ್ತು ಅಬೌತ "ವ್ಯವಸ್ಥೆಗಳಾದ" ವಿವಿಧ ವ್ಯವಸ್ಥೆಗಳನ್ನು ನಿರ್ವಹಿಸುವ ನಿಯಮಗಳು ಮತ್ತು ನಿಬಂಧನೆಗಳು, ಈ ವ್ಯವಸ್ಥೆಗಳಿಗೆ ಹಣಕಾಸು ವ್ಯವಸ್ಥೆ, ಅತ್ಯಂತ ಪರಿಣತ ಮತ್ತು ವಿಶೇಷ ಪರಿಣತ ವೃತ್ತಿಪರರು ತರಬೇತಿ ಪಡೆಯುವ, ಅನುಭವವನ್ನು ಸಂಪಾದಿಸುವ ಮೂಲಕ ವೃತ್ತಿಜೀವನದಲ್ಲಿ ಮುನ್ನಡೆ ಮತ್ತು (ಅಗತ್ಯಬಿದ್ದರೆ) ವೃತ್ತಿಪರ ಸಂಸ್ಥೆಗಳಿಂದ ತರಬೇತಿ ಪಡೆಯುವ(ವೃತ್ತಿಪರ ತರಬೇತಿ, ಮಾನ್ಯತೆ ಮತ್ತು ಶಿಕ್ಷಣವಿಷಯ)ವ್ಯವಸ್ಥೆಗಳು ಮತ್ತು ಸಂಸ್ಥೆಗಳು.

ಸಾಂಸ್ಥಿಕ ಮೂಲಸೌಕರ್ಯ

[ಬದಲಾಯಿಸಿ]
  • ಬ್ಯಾಂಕಿಂಗ್ ವ್ಯವಸ್ಥೆ, ಹಣಕಾಸು ಸಂಸ್ಥೆಗಳು, ಪಾವತಿ ವ್ಯವಸ್ಥೆ, ವಿನಿಮಯ ಕೇಂದ್ರಗಳು, ಹಣ ಪೂರೈಕೆ, ಹಣಕಾಸು ನಿಯಂತ್ರಣ ಮತ್ತು ಲೆಕ್ಕಶಾಸ್ತ್ರದ ಪ್ರಮಾಣಕಗಳು ಮತ್ತು ನಿಬಂಧನೆಗಳು ಸೇರಿದಂತೆ ಹಣಕಾಸು ವ್ಯವಸ್ಥೆ.
  • ರಾಜಕೀಯ,ಶಾಸಕಾಂಗ, ಕಾನೂನು ಜಾರಿ ವ್ಯವಸ್ಥೆಗಳು, ನ್ಯಾಯ ಮತ್ತು ದಂಡನೆ ವ್ಯವಸ್ಥೆಗಳು ಸೇರಿದಂತೆ ಸರ್ಕಾರದ ವ್ಯವಸ್ಥೆ ಮತ್ತು ಕಾನೂನು ಜಾರಿ, ವಿಶೇಷ ಸೌಕರ್ಯಗಳು(ಸರ್ಕಾರಿ ಕಚೇರಿಗಳು, ಕೋರ್ಟ್‌ಗಳು, ಬಂಧೀಖಾನೆಗಳು ಇತರೆ) ಹಾಗು ದತ್ತಾಂಶ, ಕಾನೂನುಗಳು ಮತ್ತು ನಿಬಂಧನೆಯನ್ನು ಸಂಗ್ರಹಿಸುವ, ದಾಸ್ತಾನಿಡುವ ಮತ್ತು ಪ್ರಸಾರ ಮಾಡುವ ಪರಿಣತ ವ್ಯವಸ್ಥೆಗಳು.
  • ವಿಶಿಷ್ಟ ವಾಹನಗಳು, ಕಟ್ಟಡಗಳು, ಸಂಪರ್ಕಗಳು ಮತ್ತು ರವಾನೆ ವ್ಯವಸ್ಥೆಗಳು ಸೇರಿದಂತೆ ಪೊಲೀಸ್, ಅಗ್ನಿಶಾಮಕ, ಆಂಬ್ಯುಲೆನ್ಸ್ ಮುಂತಾದ ತುರ್ತು ಸೇವೆಗಳು.

ಕೈಗಾರಿಕೆ ಮೂಲ ಸೌಕರ್ಯ

[ಬದಲಾಯಿಸಿ]
  • ಕೈಗಾರಿಕೆ ಪಾರ್ಕ್‌ಗಳು ಮತ್ತು ವಿಶೇಷ ಆರ್ಥಿಕ ವಲಯಗಳು ಸೇರಿದಂತೆ ಉತ್ಪಾದನೆ ಮೂಲಸೌಕರ್ಯ, ಕೈಗಾರಿಕೆಯಲ್ಲಿ ಕಚ್ಚಾವಸ್ತುವಾಗಿ ಬಳಸುವ ಮೂಲ ಸಾಮಗ್ರಿಗಳಿಗೆ ಗಣಿಗಳು ಮತ್ತು ಸಂಸ್ಕರಣೆ ಘಟಕಗಳು, ವಿಶೇಷ ನಿರ್ವಹಣೆಗೆ ಅಭಿವೃದ್ಧಿಗೊಳಿಸಿದ ಇಂಧನ, ಕೈಗಾರಿಕೆ ಬಳಸುವ ಸಾರಿಗೆ ಮತ್ತು ಜಲ ಮೂಲಸೌಕರ್ಯ, ಜತೆಗೆ ಸಾರ್ವಜನಿಕ ಸುರಕ್ಷತೆ, ವಲಯ ರಚನೆ, ಕೈಗಾರಿಕೆ ಚಟುವಟಿಕೆಯನ್ನು ಮತ್ತು ಪ್ರಮಾಣಕ ಸಂಸ್ಥೆಗೆಳನ್ನು ನಿರ್ವಹಿಸುವ ಮತ್ತು ಸೀಮಿತಗೊಳಿಸುವ ಪರಿಸರ ನಿಯಮಗಳು ಮತ್ತು ನಿಬಂಧನೆಗಳು.
  • ವಿಶೇಷ ಆಹಾರ ಮತ್ತು ಜಾನುವಾರು ಸಾಗಣೆ ಮತ್ತು ದಾಸ್ತಾನು ಸೌಕರ್ಯಗಳು ಸೇರಿದಂತೆ ಕೃಷಿ, ಅರಣ್ಯ ಮತ್ತು ಮೀನುಗಾರಿಕೆ ಮೂಲಸೌಕರ್ಯ,

ಪ್ರಮುಖ ಗೋಮಾಳಗಳು, ಕೃಷಿ ದರ ಬೆಂಬಲ ವ್ಯವಸ್ಥೆಗಳು (ಕೃಷಿ ವಿಮೆ ಸೇರಿದಂತೆ), ಕೃಷಿ ಆರೋಗ್ಯ ಪ್ರಮಾಣಕಗಳು, ಆಹಾರ ತಪಾಸಣೆ, ಪ್ರಾಯೋಗಿಕ ಕೃಷಿಗಳು ಮತ್ತು ಕೃಷಿ ಸಂಶೋಧನೆ ಕೇಂದ್ರಗಳು ಮತ್ತು ಶಾಲೆಗಳು,ಪರವಾನಗಿ ಮತ್ತು ಕೋಟಾ ನಿರ್ವಹಣೆ ವ್ಯವಸ್ಥೆ, ಕಳ್ಳಬೇಟೆ ವಿರುದ್ಧ ಕಾನೂನು ಜಾರಿ ವ್ಯವಸ್ಥೆಗಳು, ಅರಣ್ಯ ವಾರ್ಡನ್‌‌ಗಳು ಮತ್ತು ಅಗ್ನಿಶಾಮಕ.

ಸಾಮಾಜಿಕ ಮೂಲ ಸೌಕರ್ಯ

[ಬದಲಾಯಿಸಿ]
  • ಆಸ್ಪತ್ರೆಗಳು ಸೇರಿದಂತೆ ಆರೋಗ್ಯ ಸೇವೆ ವ್ಯವಸ್ಥೆ, ಆರೋಗ್ಯ ವಿಮೆ ಸೇರಿದಂತೆ ಆರೋಗ್ಯ ಸೇವೆಗೆ ಆರ್ಥಿಕ ನೆರವು, ವೈದ್ಯಕೀಯ ಚಿಕಿತ್ಸೆ ಮತ್ತು ವೈದ್ಯಕೀಯ ವಿಧಾನಗಳ ನಿಯಂತ್ರಣ ಮತ್ತು ಪರೀಕ್ಷೆಯ ವ್ಯವಸ್ಥೆಗಳು, ತರಬೇತಿ ಮತ್ತು ತಪಾಸಣೆ ವ್ಯವಸ್ಥೆ, ವೈದ್ಯರು ಮತ್ತು ಇತರೆ ವೈದ್ಯಕೀಯ ವೃತ್ತಿಪರರ ವೃತ್ತಿಪರ ಶಿಸ್ತು, ಸಾರ್ವಜನಿಕ ಆರೋಗ್ಯ ತಪಾಸಣೆ ಮತ್ತು ನಿಯಂತ್ರಣಗಳು, ಸಾಂಕ್ರಾಮಿಕಗಳು ಮುಂತಾದ ಸಾರ್ವಜನಿಕ ಆರೋಗ್ಯ ತುರ್ತುಸಂದರ್ಭಗಳಲ್ಲಿ ಕೈಗೊಳ್ಳುವ ಕ್ರಮಗಳ ಹೊಂದಾಣಿಕೆ.
  • ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು, ವಿಶ್ವವಿದ್ಯಾನಿಲಯಗಳು, ವಿಶೇಷ ತಜ್ಞತೆಯ ಕಾಲೇಜುಗಳು, ಸಂಶೋಧನೆ ಸಂಸ್ಥೆಗಳು ಸೇರಿದಂತೆ ಶಿಕ್ಷಣ ಮತ್ತು ಸಂಶೋಧನೆ ವ್ಯವಸ್ಥೆ. ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ನೆರವು ಮತ್ತು ಮಾನ್ಯತೆ ನೀಡುವ ವ್ಯವಸ್ಥೆಗಳು.
  • ಸರ್ಕಾರದ ಬೆಂಬಲ ಮತ್ತು ಸಂಕಷ್ಟದ ಮತ್ತು ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಜನರಿಗೆ ಖಾಸಗಿ ಧರ್ಮದತ್ತಿ ಸೇರಿದಂತೆ ಸಾಮಾಜಿಕ ಕಲ್ಯಾಣ ವ್ಯವಸ್ಥೆಗಳು,

ಸಾಂಸ್ಕೃತಿಕ, ಕ್ರೀಡೆಗಳು ಮತ್ತು ಮನರಂಜನೆ ಮೂಲಸೌಕರ್ಯಗಳು

[ಬದಲಾಯಿಸಿ]
  • ಉದ್ಯಾನವನಗಳು ಮತ್ತು ಕ್ರೀಡಾ ಸೌಲಭ್ಯಗಳು, ಕ್ರೀಡಾ ಲೀಗ್‌ಗಳು ಮತ್ತು ಸಂಸ್ಥೆಗಳು ಮುಂತಾದ ಕ್ರೀಡೆಗಳು ಮತ್ತು ಮನರಂಜನೆ ಮೂಲಸೌಕರ್ಯ.
  • ಸಂಗೀತಗೋಷ್ಠಿ ಭವನಗಳು, ವಸ್ತುಪ್ರದರ್ಶನಾಲಯಗಳು, ಗ್ರಂಥಾಲಯಗಳು, ನಾಟಕಮಂದಿರಗಳು, ಸ್ಟುಡಿಯೊಗಳು ಮತ್ತು ವಿಶೇಷ ತರಬೇತಿ ಸೌಲಭ್ಯಗಳು ಮುಂತಾದ ಸಾಂಸ್ಕೃತಿಕ ಮೂಲಸೌಕರ್ಯಗಳು.
  • ಮಾನವ ನಿರ್ಮಿತ ಮತ್ತು ನೈಸರ್ಗಿಕ ಆಕರ್ಷಣೆಗಳು ಸೇರಿದಂತೆ ಉದ್ಯಮ ಪ್ರವಾಸ ಮತ್ತು ಪ್ರವಾಸೋದ್ಯಮ ಮೂಲಸೌಕರ್ಯ, ಸಮಾವೇಶ ಕೇಂದ್ರಗಳು, ಹೊಟೆಲ್‌‌ಗಳು, ಪ್ರವಾಸಿಗಳಿಗೆ ಮತ್ತು ಉದ್ಯಮ ಪ್ರಯಾಣಗಳಿಗೆ ಮುಖ್ಯವಾಗಿ ಅನುಕೂಲವಾಗುವ ರೆಸ್ಟೊರೆಂಟ್‌ಗಳು ಮತ್ತು ಇತರ ಸೇವೆಗಳು ಮತ್ತು ಪ್ರವಾಸಿಗಳಿಗೆ ಮಾಹಿತಿ ನೀಡುವ ಮತ್ತು ಆಕರ್ಷಿಸುವ ವ್ಯವಸ್ಥೆಗಳು ಮತ್ತು ಪ್ರವಾಸಿ ವಿಮೆ ಮುಂತಾದವು.

ಪದದ ಬಳಕೆಗಳು

[ಬದಲಾಯಿಸಿ]

ಎಂಜಿನಿಯರಿಂಗ್ ಮತ್ತು ನಿರ್ಮಾಣ

[ಬದಲಾಯಿಸಿ]

ಎಂಜಿನಿಯರುಗಳು ಸಾಮಾನ್ಯವಾಗಿ ಮೂಲಸೌಕರ್ಯ ಪದದ ಬಳಕೆಯನ್ನು ಸ್ಥಿರ ಆಸ್ತಿಗಳನ್ನು ವಿವರಿಸಲು ಸೀಮಿತಗೊಳಿಸಿದ್ದಾರೆ. ಅದು ದೊಡ್ಡ ಜಾಲದ ಸ್ವರೂಪದಲ್ಲಿರುತ್ತದೆ. ಇನ್ನೊಂದು ಅರ್ಥದಲ್ಲಿ "ಕಠಿಣ" ಮೂಲಸೌಕರ್ಯ. ಮೂಲಸೌಕರ್ಯದ ಹೆಚ್ಚು ಸಾಮಾನ್ಯ ಅರ್ಥನಿರೂಪಣೆಗಳನ್ನು ನಿರ್ಮಿಸುವ ಇತ್ತೀಚಿನ ಪ್ರಯತ್ನಗಳು ಅನೇಕ ರಚನೆಗಳ ಜಾಲದ ಅಂಶಗಳನ್ನು ಮತ್ತು ಆಸ್ತಿಗಳ ರೂಪದಲ್ಲಿ ಜಾಲಗಳಲ್ಲಿ ಹೂಡಿಕೆ ಮಾಡಿದ ಬಂಡವಾಳಗಳ ಸಂಗ್ರಹಿತ ಮೌಲ್ಯವನ್ನು ಉಲ್ಲೇಖಿಸುತ್ತದೆ.

ಇಂತಹ ಒಂದು ಪ್ರಯತ್ನವು ಮೂಲಸೌಕರ್ಯವನ್ನು ಆಸ್ತಿಗಳ ಜಾಲವೆಂದು ವ್ಯಾಖ್ಯಾನಿಸುತ್ತದೆ. ಇಡೀ ವ್ಯವಸ್ಥೆಯನ್ನು ನಮೂದಿತ ಸೇವೆಯ ಗುಣಮಟ್ಟದಲ್ಲಿ ಅನಿರ್ದಿಷ್ಟವಾಗಿ ನಿರ್ವಹಿಸಲು ಇಚ್ಛಿಸುತ್ತದೆ. ವ್ಯವಸ್ಥೆಯ ಭಾಗಗಳ ಸತತ ಬದಲಾವಣೆ ಮತ್ತು ನವೀಕರಣದ ಮೂಲಕ ಇದು ಸಾಧ್ಯವಾಗುತ್ತದೆ.[೧೨]

ನಾಗರಿಕ ರಕ್ಷಣೆ ಮತ್ತು ಆರ್ಥಿಕ ಅಭಿವೃದ್ಧಿ

[ಬದಲಾಯಿಸಿ]

ನಾಗರಿಕ ರಕ್ಷಣೆ ಯೋಜನೆಕಾರರು ಮತ್ತು ಅಭಿವೃದ್ಧಿ ಅರ್ಥಶಾಸ್ತ್ರಜ್ಞರು ಸಾಮಾನ್ಯವಾಗಿ "ಕಠಿಣ" ಮತ್ತು "ಮೃದು" ಮೂಲಸೌಕರ್ಯ ಎರಡನ್ನೂ ಉಲ್ಲೇಖಿಸುತ್ತಾರೆ. ಇವುಗಳಲ್ಲಿ ಶಾಲೆಗಳು ಮತ್ತು ಆಸ್ಪತ್ರೆಗಳು, ಪೊಲೀಸ್ ಮತ್ತು ಅಗ್ನಿಶಾಮಕ ಮುಂತಾದ ತುರ್ತು ಸೇವೆಗಳು ಮೂಲ ಹಣಕಾಸು ಸೇವೆಗಳುಮುಂತಾದ ಸಾರ್ವ ಜನಿಕ ಸೇವೆಗಳು ಸೇರಿವೆ.

ಮಿಲಿಟರಿ

[ಬದಲಾಯಿಸಿ]

ಮಿಲಿಟರಿ ಪಡೆಗಳಿಗೆ ಸಹಾಯವಾಗಲು ಅವಶ್ಯಕವಾದ ಎಲ್ಲ ಕಟ್ಟಡ ಮತ್ತು ಕಾಯಂ ಅಳವಡಿಕೆಗಳನ್ನು ಉಲ್ಲೇಖಿಸಲು ಮಿಲಿಟರಿ ಯುದ್ಧಕಲಾ ನಿಪುಣರು ಮೂಲಸೌಕರ್ಯ ಪದ ವನ್ನು ಬಳಸುತ್ತಾರೆ. ಅವುಗಳು ನೆಲೆಗಳಲ್ಲಿ ಸ್ಥಾಪಿತವಾದ,ಕಾರ್ಯಾಚರಣೆಗಳಲ್ಲಿ ನಿಯೋಜಿತವಾದ ಅಥವಾ ಒಳಗೊಂಡಿರುವ ತುಕಡಿಗಳು, ಮುಖ್ಯ ಕಾರ್ಯಾಲಯ, ವಾಯು ನೆಲೆಗಳು, ಸಂಪರ್ಕ ನೌಕರ್ಯಗಳು, ಮಿಲಿಟರಿ ಸಾಮಗ್ರಿಯ ಕೋಠಿ, ಬಂದರು ಅಳವಡಿಕೆಗಳು ಮತ್ತು ನಿರ್ವಹಣೆ ಕೇಂದ್ರಗಳು ಸೇರಿವೆ.[೧೩]

ನಿರ್ಣಾಯಕ ಮೂಲಸೌಕರ್ಯ

[ಬದಲಾಯಿಸಿ]

ನಿರ್ಣಾಯಕ ಮೂಲಸೌಕರ್ಯ ಪದವು ಮೂಲಸೌಕರ್ಯ ಅಂಶಗಳ(ಕಠಿಣ ಮತ್ತು ಮೃದು ಎರಡೂ) ವ್ಯತ್ಯಾಸ ತಿಳಿಯಲು ವ್ಯಾಪಕವಾಗಿ ಅಳವಡಿಸಲಾಗಿದೆ. ಇವು ಗಮನಾರ್ಹವಾಗಿ ಹಾನಿಯಾದರೆ ಅಥವಾ ನಾಶವಾದರೆ, ಅವಲಂಬಿತ ವ್ಯವಸ್ಥೆ ಅಥವಾ ಸಂಸ್ಥೆಗೆ ಗಂಭೀರ ಅಡ್ಡಿಯನ್ನು ಉಂಟುಮಾಡುತ್ತದೆ. ಚಂಡಮಾರುತ, ಪ್ರವಾಹ ಅಥವಾ ಭೂಕಂಪದ ಹಾನಿಯಿಂದ ನಗರದಲ್ಲಿ ಕೆಲವು ಸಾರಿಗೆ ಮಾರ್ಗಗಳ ನಷ್ಟಕ್ಕೆ ದಾರಿಕಲ್ಪಿಸುತ್ತದೆ(ಉದಾಹರಣೆಗೆ, ನದಿಯನ್ನು ಹಾದುಹೋಗುವ ಸೇತುವೆ),

ಇದರಿಂದ ಜನರನ್ನು ತೆರವು ಮಾಡಲು ಮತ್ತು ತುರ್ತು ಸೇವೆ ಕಾರ್ಯನಿರ್ವಹಿಸಲು ಅಸಾಧ್ಯವಾಗುತ್ತದೆ. ಈ ಮಾರ್ಗಗಳನ್ನು ನಿರ್ಣಾಯಕ ಮೂಲಸೌಕರ್ಯವೆನ್ನುತ್ತಾರೆ. ಇದೇ ರೀತಿ ಏರ್‌ಲೈನ್ ಸಂಸ್ಥೆಗೆ ಆನ್‌ಲೈನ್ ಸೀಟು ಕಾದಿರಿಸುವ ವ್ಯವಸ್ಥೆಯು ನಿರ್ಣಾಯಕ ಮೂಲಸೌಕರ್ಯವಾಗಿರಬಹುದು.

ನಗರ ಮೂಲಸೌಕರ್ಯ

[ಬದಲಾಯಿಸಿ]

ನಗರ ಅಥವಾ ಪುರಸಭೆಯ ಮೂಲಸೌಕರ್ಯ ವು "ಕಠಿಣ" ಮೂಲಸೌಕರ್ಯ ವ್ಯವಸ್ಥೆಗಳನ್ನು ಉಲ್ಲೇಖಿಸುತ್ತದೆ. ಇವು ಬೀದಿಗಳು ನೀರು ಸರಬರಾಜು ಮತ್ತು ಒಳಚರಂಡಿಗಳಾಗಿದ್ದು, ಸಾಮಾನ್ಯವಾಗಿ ಪುರಸಭೆಗಳ ಮಾಲೀಕತ್ವ ಮತ್ತು ನಿರ್ವಹಣೆ ಒಳಗೊಂಡಿರುತ್ತದೆ. ಇವುಗಳಲ್ಲಿ ಮೃದು ಮೂಲಸೌಕರ್ಯಕ್ಕೆ ಸಂಬಂಧಿಸಿದ ಉದ್ಯಾನವನಗಳು, ಸಾರ್ವಜನಿಕ ಈಜುಕೊಳಗಳು ಮತ್ತು ಗ್ರಂಥಾಲಯಗಳು ಒಳಗೊಂಡಿರುತ್ತದೆ.

ಹಸಿರು ಮೂಲಸೌಕರ್ಯ

[ಬದಲಾಯಿಸಿ]

ಹಸಿರು ಮೂಲಸೌಕರ್ಯ ವು ಭೂ ಬಳಕೆ ಯೋಜನೆ ಕುರಿತ ನಿರ್ಧಾರಗಳಲ್ಲಿ ನೈಸರ್ಗಿಕ ಪರಿಸರದ ಪ್ರಾಮುಖ್ಯತೆ ಬಗ್ಗೆ ಗಮನಸೆಳೆಯುವ ಪರಿಕಲ್ಪನೆಯಾಗಿದೆ.[೧೪][೧೫] ವಿಶೇಷವಾಗಿ ಸಹಜ ಪರಿಸರವ್ಯವಸ್ಥೆಯ ಜಾಲ ಒದಗಿಸಿದ ಜೀವರಕ್ಷಕ ಕಾರ್ಯಚಟುವಟಿಕೆಗಳಿಗೆ ಮಹತ್ವ ನೀಡಲಾಗಿದೆ. ಸುದೀರ್ಘಾವಧಿಯ ಪುಷ್ಟಿಕರ ಲಕ್ಷಣ ಬೆಂಬಲಿಸಲು ಅಂತರಸಂಪರ್ಕಕ್ಕೆ ಪ್ರಾಧಾನ್ಯ ನೀಡಲಾಗುತ್ತದೆ.

ಉದಾಹರಣೆಗಳು ಸ್ವಚ್ಛ ನೀರು ಮತ್ತು ಆರೋಗ್ಯಕರ ಮಣ್ಣುಗಳು ಮತ್ತು ಮನರಂಜನೆ ಮುಂತಾದ ಹೆಚ್ಚು ಮಾನವಕೇಂದ್ರಿತ ಕಾರ್ಯಚಟುವಟಿಕೆಗಳು ಮತ್ತು ಪಟ್ಟಣಗಳು ಮತ್ತು ನಗರಗಳ ಸುತ್ತ ನೆರಳು ಮತ್ತು ಆಶ್ರಯ ಒದಗಿಸುವುದು. ನೈಸರ್ಗಿಕ ವ್ಯವಸ್ಥೆಗಳ ಬಳಕೆಯ ಮೂಲಕ ಸ್ಥಳೀಯ ಮಟ್ಟದಲ್ಲಿ ಚರಂಡಿನೀರು ಹರಿವಿನ ನಿರ್ವಹಣೆಗೆ ಬಳಸಲು ಈ ಪರಿಕಲ್ಪನೆಯನ್ನು ವಿಸ್ತರಿಸಲಾಗಿದೆ ಅಥವಾ ಮಾಲಿನ್ಯಯುಕ್ತ ಹರಿವನ್ನು ಸಂಸ್ಕರಿಸಲು ನೈಸರ್ಗಿಕ ವ್ಯವಸ್ಥೆಗಳನ್ನು ಅನುಕರಿಸುವ ತಾಂತ್ರಿಕವ್ಯವಸ್ಥೆಗಳು.[೧೬][೧೭]

ಮಾರ್ಕ್ಸ್‌ವಾದ

[ಬದಲಾಯಿಸಿ]

ಮಾರ್ಕ್ಸ್‌ವಾದದಲ್ಲಿ ಮೂಲಸೌಕರ್ಯ ಪದವು ಕೆಲವು ಬಾರಿ ವಾದವಿವಾದದ ಜೋಡಿ ಪದ ಬೇಸ್(ನೆಲಗಟ್ಟು)(ಉತ್ಪಾದನೆಯ ಸಂಬಂಧಗಳು) ಮತ್ತು ಸೂಪರ್‌ಸ್ಟ್ರಕ್ಚರ್‌( ಸಮಾಜದ ಮೇಲುರಚನೆ) ನಲ್ಲಿ ಬೇಸ್‌ ಪದಕ್ಕೆ ಸಮಾನಾರ್ಥಕವಾಗಿದೆ. ಆದಾಗ್ಯೂ,ನೆಲಗಟ್ಟಿನ ಮಾರ್ಕ್ಸ್‌ವಾದ ಪರಿಕಲ್ಪನೆಯು ಮೂಲಸೌಕರ್ಯ ಪದದ ಮಾರ್ಕ್ಸೇತ ರವಾದದ ಬಳಕೆಗಿಂತ ವಿಶಾಲವಾಗಿದೆ. ಕೆಲವು ಮೃದು ಮೂಲಸೌಕರ್ಯಗಳಾದ ಕಾನೂನುಗಳು, ಆಡಳಿತ, ನಿಬಂಧನೆಗಳು ಮತ್ತು ಪ್ರಮಾಣಕಗಳನ್ನು ಮಾರ್ಕ್ಸ್‌ವಾದಿಗಳು ಮೇಲುರಚನೆಯ ಭಾಗವೆಂದು ಪರಿಗಣಿಸಿದ್ದಾರೆ. ಆದರೆ ನೆಲಗಟ್ಟನ್ನಲ್ಲ.[೧೮]

ಇತರೆ ಉಪಯೋಗಗಳು

[ಬದಲಾಯಿಸಿ]

ಇತರೆ ಬಳಕೆಗಳಲ್ಲಿ ಮೂಲಸೌಕರ್ಯ ಪದವು ಮಾಹಿತಿ ತಂತ್ರಜ್ಞಾನ, ಸಂವಹನದ ಅನೌಪಚಾರಿಕ ಮತ್ತು ಔಪಚಾರಿಕ ಮಾರ್ಗಗಳು, ತಂತ್ರಾಂಶ ಅಭಿವೃದ್ಧಿ ಸಾಧನಗಳು, ರಾಜಕೀಯ ಮತ್ತು ಸಾಮಾಜಿಕ ಜಾಲಗಳು ಅಥವಾ ನಿರ್ದಿಷ್ಟ ಗುಂಪುಗಳ ಸದಸ್ಯರು ಹೊಂದಿರುವ ನಂಬಿಕೆಗಳಾಗಿವೆ.

ಮೂಲಸೌಕರ್ಯವು ಅದು ಸೇವೆ ನೀಡುವ ವ್ಯವಸ್ಥೆ ಅಥವಾ ಸಂಸ್ಥೆಗೆ ಸಾಂಸ್ಥಿಕ ರಚನೆ ಮತ್ತು ಬೆಂಬಲ ಒದಗಿಸುತ್ತದೆಂಬ ಕಲ್ಪನೆಯು ಈ ಹೆಚ್ಚು ಅಮೂರ್ತ ಬಳಕೆಗಳಿಗೆ ಮೂಲಾಧಾರವಾಗಿದೆ. ಅದುನಗರ, ಒಂದು ರಾಷ್ಟ್ರ,ಒಂದು ನಿಗಮ, ಅಥವಾ ಸಮಾನ ಹಿತಾಸಕ್ತಿಯ ಜನರ ಗುಂಪಾಗಿರಬಹುದು. ಉದಾಹರಣೆಗೆ IT ಮೂಲಸೌಕರ್ಯ , ಸಂಶೋಧನೆ ಮೂಲಸೌಕರ್ಯ , ಭಯೋತ್ಪಾದನೆ ಮೂಲಸೌಕರ್ಯ , ಪ್ರವಾಸೋದ್ಯಮ ಮೂಲಸೌಕರ್ಯ .

ಸಂಬಂಧಿಸಿದ ಪರಿಕಲ್ಪನೆಗಳು

[ಬದಲಾಯಿಸಿ]

ಮೂಲಸೌಕರ್ಯ ಪದವನ್ನು ಸಾಮಾನ್ಯವಾಗಿ ಕೆಳಗಿನ ವ್ಯಾಪಿಸಿದ ಅಥವಾ ಸಂಬಂಧಿಸಿದ ಪರಿಕಲ್ಪನೆಗಳಿಂದ ತಪ್ಪಾಗಿ ಗ್ರಹಿಸಲಾಗುತ್ತದೆ.

ಭೂ ಸುಧಾರಣೆ ಮತ್ತು ಭೂ ಅಭಿವೃದ್ಧಿ

[ಬದಲಾಯಿಸಿ]

ಭೂ ಸುಧಾರಣೆ ಮತ್ತು ಭೂ ಅಭಿವೃದ್ಧಿ ಪದಗಳು ಸಾಮಾನ್ಯ ಪದಗಳಾಗಿದ್ದು, ಕೆಲವು ಸಂದರ್ಭಗಳಲ್ಲಿ ಮೂಲಸೌಕರ್ಯವನ್ನು ಒಳಗೊಂಡಿರಬಹುದು. ಆದರೆ ಮೂಲಸೌಕರ್ಯವನ್ನು ಚರ್ಚಿಸುವ ಸಂದರ್ಭದಲ್ಲಿ ಮೂಲಸೌಕರ್ಯದಲ್ಲಿ ಒಳಗೊಂಡಿರದ ಸಣ್ಣ ಪ್ರಮಾಣದ ವ್ಯವಸ್ಥೆಗಳು ಅಥವಾ ಕಾಮಗಾರಿಗಳಿಗೆ ಮಾತ್ರ ಉಲ್ಲೇಖಿತವಾಗುತ್ತದೆ. ಏಕೆಂದರೆ ಅವು ಒಂದು ಸ್ಥಿರಾಸ್ತಿಗೆ ಮಾತ್ರ ಸೀಮಿತವಾಗಿದೆ ಮತ್ತು ಭೂಮಾಲೀಕನ ಮಾಲೀಕತ್ವ ಮತ್ತು ನಿರ್ವಹಣೆ ಹೊಂದಿರುತ್ತದೆ.

ಉದಾಹರಣೆಗೆ, ಪ್ರದೇಶ ಅಥವಾ ಜಿಲ್ಲೆಯಲ್ಲಿ ಸೇವೆ ನೀಡುವ ನೀರಾವರಿ ಕಾಲುವೆಯು ಮೂಲಸೌಕರ್ಯದಲ್ಲಿ ಸೇರಿದೆ. ಆದರೆ ವ್ಯಕ್ತಿಯ ಸ್ಥಿರಾಸ್ತಿಯಲ್ಲಿ ಖಾಸಗಿ ನೀರಾವರಿ ವ್ಯವಸ್ಥೆಯನ್ನು ಭೂ ಸುಧಾರಣೆಗಳು ಎಂದು ಪರಿಗಣಿಸಲಾಗುತ್ತದೆ. ಆದರೆ ಮೂಲಸೌಕರ್ಯವಲ್ಲ. ಪೌರಸೇವೆ ಮತ್ತು ಸಾರ್ವಜನಿಕ ಬಳಕೆಯ ಜಾಲಗಳಿಗೆ ಸೇವಾ ಸಂಪರ್ಕಗಳನ್ನು ಭೂ ಸುಧಾರಣೆಗಳು ಎಂದು ಪರಿಗಣಿಸಲಾಗುತ್ತದೆ, ಆದರೆ ಮೂಲಸೌಕರ್ಯವಲ್ಲ.[೧೯][೨೦]

ಜನೋಪಯೋಗಿ ಕಾರ್ಯಗಳು ಮತ್ತು ಸಾರ್ವಜನಿಕ ಸೇವೆಗಳು

[ಬದಲಾಯಿಸಿ]

ಜನೋಪಯೋಗಿ ಕಾರ್ಯ ಗಳು ಸರಕಾರಿ ಮಾಲೀಕತ್ವದ ಮತ್ತು ನಿರ್ವಹಣೆಯ ಮೂಲಸೌಕರ್ಯವಾಗಿದೆ ಮತ್ತು ಶಾಲೆಗಳು ಮತ್ತು ಕೋರ್ಟ್‌ ಕಟ್ಟಡಗಳು ಮುಂತಾದ ಸಾರ್ವಜನಿಕ ಕಟ್ಟಡಗಳು. ಜನೋಪಯೋಗಿ ಕಾರ್ಯ ಗಳು ಪದವು ಸಾಮಾನ್ಯವಾಗಿ ಸಾರ್ವಜನಿಕ ಸೇವೆ ಗಳನ್ನು ನೀಡಲು ಅಗತ್ಯವಾದ ಬೌತಿಕ ಆಸ್ತಿಗಳಾಗಿವೆ. ಸಾರ್ವಜನಿಕ ಸೇವೆಗಳು ಮೂಲಸೌಕರ್ಯ ಮತ್ತು ಸಾಮಾನ್ಯವಾಗಿ ಸರ್ಕಾರ ಒದಗಿಸುವ ಸೇವೆಗಳಲ್ಲಿ ಸೇರಿವೆ.

ಸಾಮಾನ್ಯ ಲಕ್ಷಣಗಳು

[ಬದಲಾಯಿಸಿ]

"ಕಠಿಣ" ಮೂಲಸೌಕರ್ಯ ಸಾಮಾನ್ಯವಾಗಿ ಕೆಳಗಿನ ಲಕ್ಷಣಗಳನ್ನು ಹೊಂದಿದೆ.

ಸೇವೆಗಳನ್ನು ಒದಗಿಸುವ ಬಂಡವಾಳ ಆಸ್ತಿಗಳು

[ಬದಲಾಯಿಸಿ]
  • ಅವು ಸೇವೆಗಳನ್ನು ಒದಗಿಸುವ ಬೌತಿಕ ಆಸ್ತಿಗಳು.
  • ಕಠಿಣ ಮೂಲಸೌಕರ್ಯ ಸೇವೆಯಲ್ಲಿ ನೇಮಕವಾಗಿರುವ ಜನರು ಸಾಮಾನ್ಯವಾಗಿ ಆಸ್ತಿಗಳ ಕಾಯ್ದುಕೊಳ್ಳುವಿಕೆ, ಉಸ್ತುವಾರಿ ಮತ್ತು ನಿರ್ವಹಣೆಯನ್ನು ವಹಿಸುತ್ತಾರೆ. ಆದರೆ ಗ್ರಾಹಕರಿಗೆ ಅಥವಾ ಮೂಲಸೌಕರ್ಯದ ಬಳಕೆದಾರರಿಗೆ ಸೇವೆಗಳನ್ನು ನೀಡುವುದಿಲ್ಲ. ಕಾರ್ಮಿಕರು ಮತ್ತು ಗ್ರಾಹಕರ ನಡುವೆ ಪರಸ್ಪರ ಸಂಪರ್ಕಗಳು ಸೇವೆಗಳ ಆದೇಶ, ವೇಳಾಪಟ್ಟಿ ನಿಗದಿ ಮತ್ತು ಬಿಲ್ಲಿಂಗ್ ಮುಂತಾದ ಆಡಳಿತಾತ್ಮಕ ಕೆಲಸಗಳಿಗೆ ಸೀಮಿತವಾಗಿವೆ.

ದೊಡ್ಡ ಜಾಲಗಳು

[ಬದಲಾಯಿಸಿ]
  • ಅವು ದೊಡ್ಡ ಜಾಲಗಳಾಗಿದ್ದು, ತಲೆಮಾರುಗಳ ಕಾಲಾವಧಿಯವರೆಗೆ ನಿರ್ಮಿಸಲಾಗುತ್ತದೆ ಮತ್ತು ಇಡೀ ವ್ಯವಸ್ಥೆಯಾಗಿ ಸಾಮಾನ್ಯವಾಗಿ ಬದಲಿಸಲಾಗುವುದಿಲ್ಲ.
  • ಬೌಗೋಳಿಕ ವ್ಯಾಖ್ಯಾನದ ಪ್ರದೇಶಕ್ಕೆ ಜಾಲವು ಸೇವೆ ಸಲ್ಲಿಸುತ್ತದೆ.
  • ವ್ಯವಸ್ಥೆ ಅಥವಾ ಜಾಲವು ಸುದೀರ್ಘ ಜೀವಿತಾವಧಿ ಹೊಂದಿರುತ್ತದೆ. ಏಕೆಂದರೆ ಅದರ ಸೇವಾ ಸಾಮರ್ಥ್ಯವನ್ನು ಅದರ ಬಿಡಿಭಾಗಗಳು ಸವೆದುಹೋದರೆ ಸತತ ಬದಲಾವಣೆ ಅಥವಾ ಮರುಸ್ಥಾಪನೆ ಮೂಲಕ ಕಾಯ್ದುಕೊಳ್ಳಲಾಗುತ್ತದೆ.

ಐತಿಹಾಸಿಕತೆ ಮತ್ತು ಪರಸ್ಪರ ಅವಲಂಬನೆ

[ಬದಲಾಯಿಸಿ]
  • ವ್ಯವಸ್ಥೆ ಅಥವಾ ಜಾಲವು ಸತತವಾಗಿ ಪರಿಷ್ಕರಣೆ,ಸುಧಾರಣೆ ಮತ್ತು ದೊಡ್ಡದಾಗುವುದರಿಂದ ಕಾಲಾವಧಿಯಲ್ಲಿ ವಿಕಾಸಗೊಳ್ಳುತ್ತದೆ. ವಿವಿಧ ಭಾಗಗಳನ್ನು ಪುನರ್‌ ನಿರ್ಮಿಸ ಲಾಗುತ್ತದೆ, ಕಾರ್ಯಾಚರಣೆಯಿಂದ ತೆಗೆಯಲಾಗುತ್ತದೆ ಅಥವಾ ಇತರೆ ಬಳಕೆಗಳಿಗೆ ಅಳವಡಿಸಲಾಗುತ್ತದೆ.
  • ವ್ಯವಸ್ಥೆಯ ಬಿಡಿಭಾಗಗಳು ಪರಸ್ಪರ ಅವಲಂಬಿಯಾಗಿದ್ದು, ಉಪವಿಭಜನೆ ಅಥವಾ ಪ್ರತ್ಯೇಕ ವಿಲೇವಾರಿಗೆ ಸಮರ್ಥವಾಗುವುದಿಲ್ಲ ಮತ್ತು ತರುವಾಯ ವಾಣಿಜ್ಯ ಮಾರುಕಟ್ಟೆ ಸ್ಥಳ ದಲ್ಲಿ ಸುಗಮವಾಗಿ ವಿಲೇವಾರಿ ಮಾಡಲಾಗುವುದಿಲ್ಲ.
  • ವ್ಯವಸ್ಥೆಯ ಪರಸ್ಪರ ಅವಲಂಬನೆಯು ಬಿಡಿಭಾಗದ ಜೀವಿತಾವಧಿಯನ್ನು ಸ್ವಯಂ ಬಿಡಿಭಾಗದ ನಿರೀಕ್ಷಿತ ಅವಧಿಗಿಂತ ಕಡಿಮೆ ಅವಧಿಗೆ ಸೀಮಿತಗೊಳಿಸಬಹುದು.

ಸ್ವಾಭಾವಿಕ ಏಕಸ್ವಾಮ್ಯ

[ಬದಲಾಯಿಸಿ]
  • ವಿಸ್ತರಣೆಯಿಂದ ವೆಚ್ಚ ಕಡಿಮೆಯಾಗುವ ತನಕ ವ್ಯವಸ್ಥೆಗಳು ಸ್ವಾಭಾವಿಕ ಏಕಸ್ವಾಮ್ಯದಿಂದ ಕೂಡಿರುತ್ತದೆ. ಅದರ ಅರ್ಥವೇನೆಂದರೆ ಸೇವೆ ನೀಡುವ ಬಹು ಸಂಸ್ಥೆಗಳು ಏಕ ಸಂಸ್ಥೆಗಿಂತ ಕಡಿಮೆ ದಕ್ಷತೆಯಿಂದ ಕೂಡಿರುತ್ತದೆ.
  • ಆಸ್ತಿಗಳು ಅಧಿಕ ಆರಂಭಿಕ ವೆಚ್ಚ ಮತ್ತು ಮೌಲ್ಯ ಹೊಂದಿದ್ದು, ಅದನ್ನು ನಿರ್ಧರಿಸಲು ಕಷ್ಟವಾಗುತ್ತದೆ.
  • ಒಂದೊಮ್ಮೆ ಬಹುತೇಕ ವ್ಯವಸ್ಥೆ ನಿರ್ಮಾಣವಾದ ನಂತರ, ಹೆಚ್ಚುವರಿ ಗ್ರಾಹಕರು ಅಥವಾ ಬಳಕೆದಾರರ ಸೇವೆಗೆ ಒಟ್ಟು ವೆಚ್ಚದ ಅಂತರವು ದುಬಾರಿಯಾಗಿರುವುದಿಲ್ಲ ಮತ್ತು ಜಾಲದ ಗರಿಷ್ಠ ಸಾಮರ್ಥ್ಯ ಮತ್ತು ಬೌಗೋಳಿಕ ವ್ಯಾಪ್ತಿ ಹೆಚ್ಚಿಸುವ ಅಗತ್ಯವಿಲ್ಲದಿದ್ದರೆ ಅದು ಅತ್ಯಲ್ಪವಾಗಿರುತ್ತದೆ.

ಅರ್ಥಶಾಸ್ತ್ರ, ವ್ಯವಸ್ಥಾಪನೆ, ಎಂಜಿನಿಯರಿಂಗ್ ಮತ್ತು ಪರಿಣಾಮಗಳು

[ಬದಲಾಯಿಸಿ]

ಕೆಳಗಿನವು "ಕಠಿಣ" ಮೂಲಸೌಕರ್ಯಕ್ಕೆ ಮತ್ತು "ಮೃದು" ಮೂಲಸೌಕರ್ಯಕ್ಕೆ ಬಳಸುವ ವಿಶೇಷ ಸೌಲಭ್ಯಗಳಿಗೆ ಮುಖ್ಯವಾಗಿ ಸಂಬಂಧಿಸಿದೆ.

ಒಡೆತನ ಮತ್ತು ಹಣಕಾಸು

[ಬದಲಾಯಿಸಿ]

ಮೂಲಸೌಕರ್ಯವನ್ನು ಸರ್ಕಾರಗಳು ಅಥವಾ ಸಾರ್ವಜನಿಕ ಸೇವೆ ಅಥವಾ ರೈಲ್ವೆ ಕಂಪೆನಿಗಳು ಮಾಲೀಕತ್ವ ಮತ್ತು ಆಡಳಿತ ವಹಿಸಿಕೊಳ್ಳಬಹುದು. ಸಾಮಾನ್ಯ ವಾಗಿ ಬಹುತೇಕ ರಸ್ತೆಗಳು, ಪ್ರಮುಖ ಬಂದರುಗಳು ಮತ್ತು ವಿಮಾನನಿಲ್ದಾಣಗಳು, ಜಲಪೂರೈಕೆ ವ್ಯವಸ್ಥೆಗಳು, ಒಳಚರಂಡಿ ಜಾಲಗಳು ಸಾರ್ವಜನಿಕ ಸ್ವಾಮ್ಯದ್ದಾಗಿದ್ದು, ಅನೇಕ ಇಂಧನ ಮತ್ತು ದೂರಸಂಪರ್ಕ ಜಾಲಗಳು ಖಾಸಗಿ ಸ್ವಾಮ್ಯದ್ದಾಗಿವೆ.

ಸಾರ್ವಜನಿಕ ಸ್ವಾಮ್ಯದ ಮೂಲಸೌಕರ್ಯಕ್ಕೆ ತೆರಿಗೆಗಳು, ಸುಂಕಗಳು ಅಥವಾ ಮೀಟರಿನ ಬಳಕೆ ಶುಲ್ಕದ ಮೂಲಕ ಪಾವತಿ ಮಾಡಬಹುದು. ಖಾಸಗಿ ಮೂಲಸೌಕರ್ಯಕ್ಕೆ ಮೀಟರಿ ಬಳಕೆ ಶುಲ್ಕದ ಮೂಲಕ ಸಾಮಾನ್ಯವಾಗಿ ಹಣ ಪಾವತಿ ಮಾಡಲಾಗುತ್ತದೆ. ಪ್ರಮುಖ ಬಂಡವಾಳ ಯೋಜನೆಗಳಿಗೆ ಸುದೀರ್ಘಾವಧಿಯ ಬಾಂಡ್‌(ಸಾಲಪತ್ರ)ಗಳನ್ನು ವಿತರಣೆ ಮಾಡುವ ಮೂಲಕ ಆರ್ಥಿಕ ನೆರವು ಪಡೆಯಲಾಗುತ್ತದೆ.

ಸರ್ಕಾರಿ ಸ್ವಾಮ್ಯ ಮತ್ತು ನಿರ್ವಹಣೆಯ ಮೂಲಸೌಕರ್ಯವನ್ನು ಖಾಸಗಿ ವಲಯದಲ್ಲಿ ಕೂಡ ಅಭಿವೃದ್ಧಿಪಡಿಸಿ ನಿರ್ವಹಿಸಬಹುದು. ಅಥವಾ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸಾರ್ವಜನಿಕ ವಲಯದ ಜತೆಯಲ್ಲಿ ನಿರ್ವಹಿಸಬಹುದು. ಅಮೆರಿಕದಲ್ಲಿ ಮೂಲಸೌಕರ್ಯದ ಮೇಲೆ ಸಾರ್ವಜನಿಕ ವೆಚ್ಚವು 1950ರಿಂದೀಚೆಗೆ GDP ಯ 2.3% ರಿಂದ 3.6%ರ ನಡುವೆ ವ್ಯತ್ಯಾಸ ಹೊಂದಿತ್ತು.[೨೧] ಅನೇಕ ಹಣಕಾಸು ಸಂಸ್ಥೆಗಳು ಮೂಲಸೌಕರ್ಯದಲ್ಲಿ ಬಂಡವಾಳ ಹೂಡುತ್ತವೆ. ನೋಡಿ ಮೂಲಸೌಕರ್ಯದಲ್ಲಿ ಬಂಡವಾಳ ಹೂಡಿರುವ ಹಣಕಾಸು ಸಂಸ್ಥೆಗಳು.

2007 ನೇ ರಾಷ್ಟ್ರೀಯ ಮೂಲಸೌಕರ್ಯ ಬ್ಯಾಂಕ್ ಕಾಯ್ದೆ

[ಬದಲಾಯಿಸಿ]

2007ರಲ್ಲಿ ಸೆನೆಟ್ ಸದಸ್ಯ ಕನೆಕ್ಟಿಕಟ್‌ನ ಕ್ರಿಸ್ಟೋಫರ್ ಡಾಡ್ ಮತ್ತು ನೆಬ್ರಾಸ್ಕಾದ ಸೆನೆಟ್ ಸದಸ್ಯ ಚಾರ್ಲ್ಸ್ ಹೇಗಲ್ 2007ನೇ ರಾಷ್ಟ್ರೀಯ ಮೂಲಸೌಕರ್ಯ ಬ್ಯಾಂಕ್ ಕಾಯ್ದೆಯನ್ನು ಮಂಡಿಸಿದರು. ಈ ಮಸೂದೆಯು ಅಮೆರಿಕದಲ್ಲಿ ದೊಡ್ಡ ಮೂಲಸೌಕರ್ಯ ಯೋಜನೆಗಳಿಗೆ ಹಣ ಪಾವತಿ ಮಾಡಲು ರಾಷ್ಟ್ರೀಯ ನಿಧಿಯ ಸ್ಥಾಪನೆಗೆ ಅವಕಾಶ ಒದಗಿಸಿತು.

ಯೋಜನೆ ಮತ್ತು ನಿರ್ವಹಣೆ

[ಬದಲಾಯಿಸಿ]

ಮೂಲಸೌಕರ್ಯ ಆಸ್ತಿ ನಿರ್ವಹಣೆಯ ವಿಧಾನವು ಗುಣಮಟ್ಟದ ಸೇವೆಯ ವ್ಯಾಖ್ಯಾನವನ್ನು ಆಧರಿಸಿದೆ. ವಸ್ತುನಿಷ್ಠ ಮತ್ತು ಅಳೆಯಬಹುದಾದ ಪದಗಳಲ್ಲಿ ಆಸ್ತಿಯು ಹೇಗೆ ಕಾರ್ಯ ನಿರ್ವಹಿಸುತ್ತದೆಂದು ಅದು ವಿವರಿಸುತ್ತದೆ. SoSಮಿನಿಮಮ್ ಕಂಡೀಷನ್ ಗ್ರೇಡ್ (ಮೂಲಸೌಕರ್ಯ ಆಸ್ತಿ ನಿರ್ವಹಣೆ)ವ್ಯಾಖ್ಯಾನವನ್ನು ಒಳಗೊಂಡಿರುತ್ತದೆ. ಮೂಲಸೌಲಭ್ಯ ಆಸ್ತಿಯ ವೈಫಲ್ಯದ ಪರಿಣಾಮಗಳನ್ನು ಪರಿಗಣಿಸುವ ಮೂಲಕ ಅದು ಸ್ಥಾಪಿತವಾಗುತ್ತದೆ.

ಮೂಲಸೌಕರ್ಯ ಆಸ್ತಿ ನಿರ್ವಹಣೆಯ ಮುಖ್ಯ ಭಾಗಗಳು:

  • ಸೇವೆಯ ಗುಣಮಟ್ಟವ್ಯಾಖ್ಯಾನ
    • ಆಸ್ತಿಯು ಹೇಗೆ ಕಾರ್ಯನಿರ್ವಹಿಸುತ್ತೆಂದು ಅಳೆಯಬಹುದಾದ ತಪಶೀಲುಗಳನ್ನು ಸ್ಥಾಪಿಸುವುದು.
    • ಮೂಲಸೌಕರ್ಯ ಆಸ್ತಿ ನಿರ್ವಹಣೆಯ ಸ್ಥಾಪನೆ
  • ಆಸ್ತಿ ನಿರ್ವಹಣೆಗೆ ಮಾಲೀಕತ್ವದ ಒಟ್ಟು ವೆಚ್ಚದ ಮಾರ್ಗದ ಸ್ಥಾಪನೆ
  • ಆಸ್ತಿ ನಿರ್ವಹಣೆ ಯೋಜನೆಯ ವಿವರಣೆ

ಅಮೆರಿಕನ್ ಸೊಸೈಟಿ ಆಫ್ ಸಿವಿಲ್ ಎಂಜಿನಿಯರ್ಸ್ [೩] Archived 2009-02-24 ವೇಬ್ಯಾಕ್ ಮೆಷಿನ್ ನಲ್ಲಿ. ತಯಾರಿಸಿದ 2009ನೇ ವರದಿ ಪತ್ರವು ಅಮೆರಿಕದ ಮೂಲಸೌಕರ್ಯಕ್ಕೆ "D" ಗ್ರೇಡ್ ನೀಡಿದೆ.

ಎಂಜಿನಿಯರಿಂಗ್‌ ಕ್ಷೇತ್ರ

[ಬದಲಾಯಿಸಿ]

ಬಹು ಮಟ್ಟಿನ ಮೂಲಸೌಕರ್ಯವು ಎಂಜಿನಿಯರ್‌, ನಗರಶಾಸ್ತ್ರಜ್ಞರು ವಾಸ್ತುಶಿಲ್ಪಿಗಳಿಂದ ವಿನ್ಯಾಸವಾಗಿದೆ. ಸಾಮಾನ್ಯವಾಗಿ ರಸ್ತೆ ಮತ್ತು ರೈಲು ಸಾರಿಗೆ ಜಾಲಗಳು ಹಾಗು ನೀರು ಮತ್ತು ತ್ಯಾಜ್ಯ ನಿರ್ವಹಣೆ ಮೂಲಸೌಕರ್ಯವನ್ನು ಸಿವಿಲ್ ಎಂಜಿನಿಯರುಗಳು ವಿನ್ಯಾಸಗೊಳಿಸುತ್ತಾರೆ. ವಿದ್ಯುತ್ ಶಕ್ತಿ ಮತ್ತು ಬೆಳಕಿನ ಜಾಲಗಳನ್ನು ಪವರ್ ಎಂಜಿನಿಯರುಗಳು ಮತ್ತು ವಿದ್ಯುತ್ ಎಂಜಿನಿಯರ್‌ಗಳು ವಿನ್ಯಾಸಗೊಳಿಸುತ್ತಾರೆ. ದೂರಸಂಪರ್ಕಗಳು, ಕಂಪ್ಯೂಟಿಂಗ್ ಮತ್ತು ಉಸ್ತುವಾರಿ ಜಾಲಗಳನ್ನು ಸಿಸ್ಟಮ್ಸ್ ಎಂಜಿನಿಯರ್‌ಗಳು ವಿನ್ಯಾಸಗೊಳಿಸುತ್ತಾರೆ.

ನಗರ ಮೂಲಸೌಲಭ್ಯದ ಪ್ರಕರಣದಲ್ಲಿ ರಸ್ತೆಗಳು, ಕಾಲುದಾರಿಗಳು ಮತ್ತು ಸಾರ್ವಜನಿಕ ಸ್ಥಳಗಳ ವಿನ್ಯಾಸವನ್ನು ಕೆಲವು ಬಾರಿ ನಗರಶಾಸ್ತ್ರಜ್ಞರು ಅಥವಾ ವಾಸ್ತುಶಿಲ್ಪಿಗಳು ರೂಪಿಸುತ್ತಾರೆ. ಆದರೂ ವಿವರವಾದ ವಿನ್ಯಾಸವನ್ನು ಸಿವಿಲ್ ಎಂಜಿನಿಯರ್ ನಿರ್ವಹಿಸುತ್ತಾರೆ. ಕಟ್ಟಡವೊಂದು ಅಗತ್ಯವಿದ್ದರೆ, ಅದನ್ನು ವಾಸ್ತುಶಿಲ್ಪಿ ವಿನ್ಯಾಸಗೊಳಿಸುತ್ತಾರೆ. ಕೈಗಾರಿಕೆ ಅಥವಾ ಸಂಸ್ಕರಣ ಘಟಕ ಅಗತ್ಯವಿದ್ದರೆ ಅದನ್ನು ಕೈಗಾರಿಕೆ ಎಂಜಿನಿಯರ್ ಅಥವಾ ಸಂಸ್ಕರಣೆ (ಪ್ರೋಸೆಸ್)ಎಂಜಿನಿಯರ್ ವಿನ್ಯಾಸಗೊಳಿಸುತ್ತಾರೆ.ಎಂಜಿನಿಯರಿಂಗ್ ಕಾರ್ಯಗಳಿಗೆ ಸಂಬಂಧಿಸಿದಂತೆ, ವಿನ್ಯಾಸ ಮತ್ತು ನಿರ್ಮಾಣ ನಿರ್ವಹಣೆ ಪ್ರಕ್ರಿಯೆಯು ಸಾಮಾನ್ಯವಾಗಿ ಈ ಹೆಜ್ಜೆಗಳನ್ನು ಅನುಸರಿಸುತ್ತದೆ:

  • ಆರಂಭಿಕ ಅಧ್ಯಯನಗಳು :
    • ಪ್ರಸಕ್ತ ಮತ್ತು ಭವಿಷ್ಯದ ಸಂಚಾರ ದಟ್ಟಣೆಗಳನ್ನು ನಿರ್ಧರಿಸುವುದು, ಪ್ರಸಕ್ತ ಸಾಮರ್ಥ್ಯವನ್ನು ನಿರ್ಧರಿಸುವುದು ಮತ್ತು ಪ್ರಸಕ್ತ ಹಾಗೂ ಭವಿಷ್ಯದ ಸೇವೆಯ ಗುಣಮಟ್ಟವನ್ನು ಅಂದಾಜು ಮಾಡುವುದು.
    • ಆರಂಭಿಕ ಸಮೀಕ್ಷೆ ನಡೆಸುವುದು ಮತ್ತು ಪ್ರಸಕ್ತ ವೈಮಾನಿಕ ಚಿತ್ರಗಳು, ನಕ್ಷೆಗಳು ಮತ್ತು ಯೋಜನೆಗಳ ಮಾಹಿತಿ ಪಡೆಯುವುದು.
    • ಇತರೆ ಆಸ್ತಿಗಳ ಜತೆ ಸಂಭಾವ್ಯ ಸಂಘರ್ಷಗಳು ಅಥವಾ ಮೇಲ್ಮೈ ಲಕ್ಷಣಗಳನ್ನು ಗುರುತಿಸುವುದು.
    • ಪರಿಸರ ಪರಿಣಾಮ ಅಧ್ಯಯನಗಳನ್ನು ನಿರ್ವಹಿಸುವುದು:
      • ಮಾನವ ಪರಿಸರದ ಮೇಲೆ ಪರಿಣಾಮವನ್ನು ಮೌಲ್ಯಮಾಪನ ಮಾಡುವುದು(ಶಬ್ದ ಮಾಲಿನ್ಯ,ವಾಸನೆಗಳು, ವಿದ್ಯುತ್‌ಕಾಂತೀಯ ವ್ಯತಿಕರಣ ಮುಂತಾದವು);
      • ನೈಸರ್ಗಿಕ ಪರಿಸರದ ಮೇಲೆ ಅದರ ಪರಿಣಾಮವನ್ನು ಅಂದಾಜು ಮಾಡುವುದು.)ನೈಸರ್ಗಿಕ ಪರಿಸರ ವ್ಯವಸ್ಥೆಗೆ ಭಂಗ)
      • ಮಾಲಿನ್ಯಕಾರಕ ಮಣ್ಣುಗಳ ಉಪಸ್ಥಿತಿ ಬಗ್ಗೆ ಮೌಲ್ಯಮಾಪನ ಮಾಡುವುದು.
    • ವಿವಿಧ ಕಾಲ ವ್ಯಾಪ್ತಿಗಳು,ಸೇವೆಯ ಗುಣಮಟ್ಟ, ಪರಿಸರ ಪರಿಣಾಮಗಳು ಮತ್ತುಪ್ರಸಕ್ತ ರಚನೆಗಳು ಅಥವಾ ಪ್ರದೇಶದೊಂದಿಗೆ ಸಂಘರ್ಷಗಳನ್ನು ನೀಡಿರುವಾಗ, ವಿವಿಧ ಆರಂಭಿಕ ವಿನ್ಯಾಸಗಳನ್ನು ಮಂಡಿಸುವುದು.
    • ವಿವಿಧ ವಿನ್ಯಾಸಗಳ ವೆಚ್ಚಗಳನ್ನು ಅಂದಾಜು ಮಾಡುವುದು ಮತ್ತು ಶಿಫಾರಸುಗಳನ್ನು ಮಾಡುವುದು.
  • ವಿವರವಾದ ಸಮೀಕ್ಷೆ :
    • ನಿರ್ಮಾಣ ಸ್ಥಳದ ವಿಸ್ತೃತ ಸಮೀಕ್ಷೆ ನಡೆಸುವುದು.
    • ಪ್ರಸಕ್ತ ಮೂಲಸೌಕರ್ಯದ ಅಂತಿಮ ನಿರ್ಮಾಣದ ನಕ್ಷೆಗಳನ್ನು ಪಡೆಯವುದು.
    • ಭೂಗರ್ಭದ ಮೂಲಸೌಕರ್ಯ ಸಮೀಕ್ಷೆ ನಡೆಸಲು ಅಗತ್ಯವಿರುವ ಕಡೆ ಶೋಧನೆಯ ಗುಂಡಿಗಳನ್ನು ಅಗೆಯುವುದು.
    • ಮಣ್ಣುಗಳು ಮತ್ತು ಕಲ್ಲಿನ ತಾಳಿಕೊಳ್ಳುವ ಸಾಮರ್ಥ್ಯ ನಿರ್ಧರಿಸಲು ಭೂತಾಂತ್ರಿಕ ಸಮೀಕ್ಷೆ ನಡೆಸುವುದು.
    • ಮಣ್ಣಿನ ಮಾದರಿಯ ಆಯ್ಕೆ ಮತ್ತು ಪರೀಕ್ಷೆಯನ್ನು ಮಣ್ಣಿನ ಮಾಲಿನ್ಯದ ಪ್ರಮಾಣ, ಸ್ವಭಾವವವನ್ನು ಅಂದಾಜು ಮಾಡುವ ಮೂಲಕ ನಿರ್ವಹಿಸುವುದು.
  • ವಿಸ್ತೃತ ಎಂಜಿನಿಯರಿಂಗ್ :
    • ವಿಸ್ತೃತವಾದ ಯೋಜನೆಗಳನ್ನು ಮತ್ತು ತಾಂತ್ರಿಕ ವಿವರಣೆಗಳನ್ನು ಸಿದ್ಧಪಡಿಸುವುದು.
    • ವಿಸ್ತೃತ ಸಾಮಗ್ರಿಗಳ ಬಿಲ್ ಸಿದ್ಧಪಡಿಸುವುದು;
    • ವಿಸ್ತೃತ ವೆಚ್ಚದ ಅಂದಾಜುಸಿದ್ಧಪಡಿಸುವುದು;
    • ಸಾಮಾನ್ಯ ಕೆಲಸದ ವೇಳಾಪಟ್ಟಿಯನ್ನು ಸ್ಥಾಪಿಸುವುದು;
  • ಮಂಜೂರಾತಿ :
    • ಪರಿಸರ ಮತ್ತು ಇತರೆ ನಿಯಂತ್ರಣ ಸಂಸ್ಥೆಗಳಿಂದ ಮಂಜೂರಾತಿ ಪಡೆಯುವುದು;
    • ಕೆಲಸದಿಂದ ಪರಿಣಾಮ ಉಂಟಾಗುವ ಯಾವುದೇ ಮಾಲೀಕರಿಂದ ಮತ್ತು ಆಸ್ತಿಗಳ ನಿರ್ವಾಹಕರಿಂದ ಮಂಜೂರಾತಿ ಪಡೆಯವುದು
    • ತುರ್ತು ಸೇವೆಗಳಿಗೆ ಮಾಹಿತಿ ನೀಡುವುದು ಮತ್ತು ತುರ್ತಿನ ಸಂದರ್ಭಗಳಲ್ಲಿ ಆಕಸ್ಮಿಕ ಯೋಜನೆಗಳನ್ನು ಸಿದ್ಧಪಡಿಸುವುದು.
  • ಟೆಂಡರ್ ಕರೆಯುವುದು :
    • ಆಡಳಿತಾತ್ಮಕ ಅಧಿನಿಯಮಗಳನ್ನು ಮತ್ತು ಇತರೆ ಟೆಂಡರಿನ ದಾಖಲೆಗಳನ್ನು ಸಿದ್ಧಪಡಿಸುವುದು;
    • ಟೆಂಡರುಗಳಿಗೆ ಕರೆಯನ್ನು ಸಂಘಟಿಸುವುದು ಮತ್ತು ಪ್ರಕಟಿಸುವುದು;
    • ಗುತ್ತಿಗೆದಾರನ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಟೆಂಡರಿಂಗ್ ಪ್ರಕ್ರಿಯೆಯಲ್ಲಿ ಪಠ್ಯದ ವಿಷಯವನ್ನು ಬಿಡುಗಡೆ ಮಾಡುವುದು.
    • ಟೆಂಡರ್‌ಗಳನ್ನು ಸ್ವೀಕರಿಸುವುದು ಮತ್ತು ವಿಶ್ಲೇಷಿಸುವುದು ಮತ್ತು ಮಾಲೀಕರಿಗೆ ಶಿಫಾರಸು ಮಾಡುವುದು;
  • ನಿರ್ಮಾಣ ಮೇಲ್ವಿಚಾರಣೆ :
    • ಒಂದೊಮ್ಮೆ ನಿರ್ಮಾಣ ಗುತ್ತಿಗೆಗೆ ಮಾಲೀಕ ಮತ್ತು ಸಾಮಾನ್ಯ ಗುತ್ತಿಗೆದಾರ ಸಹಿ ಹಾಕಿದ ನಂತರ, ಎಲ್ಲ ಮಂಜೂರಾತಿಗಳನ್ನು ಪಡೆದ ನಂತರ, ಸಾಮಾನ್ಯ ಗುತ್ತಿಗೆದಾರನಿಂದ ಒಂದೊಮ್ಮೆ ಎಲ್ಲ ನಿರ್ಮಾಣ ಪೂರ್ವ ಸಲ್ಲಿಕೆಗಳನ್ನು ಸ್ವೀಕರಿಸಿದ ನಂತರ, ನಿರ್ಮಾಣ ಮೇಲ್ವಿಚಾರಕ ನಿರ್ಮಾಣಕ್ಕೆ ಆದೇಶ ನೀಡುತ್ತಾರೆ.
    • ನಿಯಮಿತವಾಗಿ ಸಭೆಗಳನ್ನು ನಡೆಸಿ ಸಾಮಾನ್ಯ ಗುತ್ತಿಗೆದಾರ(GC) ಮತ್ತು ಎಲ್ಲ ಹಿತಾಸಕ್ತ ಜನರಿಂದ ಸಂಪರ್ಕ ಮಾಹಿತಿಯನ್ನು ಪಡೆಯುವುದು.
    • ವಿಸ್ತೃತ ಕೆಲಸದ ವೇಳಾಪಟ್ಟಿ ಮತ್ತು GCಯ ಉಪಗುತ್ತಿಗೆದಾರರ ಪಟ್ಟಿಯನ್ನು ಪಡೆಯುವುದು.
    • GC ಯಿಂದ ವಿಸ್ತೃತ ಸಂಚಾರ ಬದಲಾವಣೆ ಮತ್ತು ತುರ್ತು ಯೋಜನೆಗಳನ್ನು ಪಡೆಯುವುದು;
    • ಪ್ರಮಾಣೀಕರಣ, ವಿಮೆ ಮತ್ತು ಸಾಲಪತ್ರಗಳ ರುಜುವಾತು ಪಡೆಯವುದು.
    • GCಸಲ್ಲಿಸಿದ ಅಂಗಡಿ ನಕ್ಷೆಗಳ ಪರಿಶೀಲನೆ.
    • ಸಾಮಗ್ರಿಗಳ ಗುಣಮಟ್ಟ ನಿಯಂತ್ರಣ ಪ್ರಯೋಗಾಲಯದಿಂದ ವರದಿಗಳನ್ನು ಸ್ವೀಕರಿಸುವುದು.
    • ಅಗತ್ಯಬಿದ್ದಾಗ, GCಯಿಂದ ಬದಲಾವಣೆ ಮನವಿಯನ್ನು ಪುನರ್ಪರಿಶೀಲನೆ ಮಾಡುವುದು, ನಿರ್ಮಾಣ ನಿರ್ದೇಶನಗಳನ್ನು ನೀಡುವುದು ಮತ್ತು ಬದಲಾವಣೆ ಆದೇಶಗಳನ್ನು ನೀಡುವುದು;
    • ಕೆಲಸದ ಪ್ರಗತಿಯ ಪರಿಶೀಲನೆ ಮತ್ತು ಆಂಶಿಕ ಪಾವತಿಗಳಿಗೆ ಮಂಜೂರಾತಿ ನೀಡುವುದು;
    • ಕಾಮಗಾರಿ ಗಣನೀಯವಾಗಿ ಮುಗಿದ ನಂತರ, ಕೆಲಸವನ್ನು ಪರಿಶೀಲಿಸುವುದು ಮತ್ತು ಕೊರತೆಗಳ ಪಟ್ಟಿಯನ್ನು ಸಿದ್ಧಪಡಿಸುವುದು;
    • ಪರೀಕ್ಷೆ ಮತ್ತುನಿಯೋಜನೆಯ ಮೇಲ್ವಿಚಾರಣೆ;
    • ಎಲ್ಲ ಕಾರ್ಯಾಚರಣೆ ಮತ್ತು ನಿರ್ವಹಣೆ ಕೈಪಿಡಿಗಳು ಮತ್ತು ವಾರಂಟಿಗಳು ಪೂರ್ಣವಾಗಿರುವುದನ್ನು ಪರಿಶೀಲಿಸುವುದು;
    • ನಿರ್ಮಾಣದ ನಂತರದ ಅಂತಿಮ ನಕ್ಷೆಯನ್ನು ಸಿದ್ಧಪಡಿಸುವುದು.
    • ಅಂತಿಮ ತಪಾಸಣೆ ನಡೆಸಿ, ಅಂತಿಮ ಪೂರ್ಣಗೊಳಿಸುವಿಕೆಗೆ ಪ್ರಮಾಣಪತ್ರ ನೀಡುವುದು ಮತ್ತು ಅಂತಿಮ ಪಾವತಿಗೆ ಮಂಜೂರಾತಿ ನೀಡುವುದು.

ಆರ್ಥಿಕ ಅಭಿವೃದ್ಧಿಯ ಮೇಲೆ ಪರಿಣಾಮ

[ಬದಲಾಯಿಸಿ]

ಮೂಲಸೌಕರ್ಯದಲ್ಲಿ ಬಂಡವಾಳವು ಆರ್ಥಿಕ ಅಭಿವೃದ್ಧಿಗೆ ಅಗತ್ಯವಾದ ಮೂಲಸೌಕರ್ಯ ಬಂಡವಾಳದ ಭಾಗವಾಗಿದೆ.[ಸೂಕ್ತ ಉಲ್ಲೇಖನ ಬೇಕು]

ಆರ್ಥಿಕ ಉತ್ತೇಜನವಾಗಿ ಬಳಕೆ

[ಬದಲಾಯಿಸಿ]

1930ರ ದಶಕದ ಮಹಾ ಹಿಂಜರಿತದ ಸಂದರ್ಭದಲ್ಲಿ, ಅನೇಕ ಸರ್ಕಾರಗಳು ಜನೋಪಯೋಗಿ ಕಾಮಗಾರಿ ಯೋಜನೆಗಳನ್ನು ಉದ್ಯೋಗಗಳ ಸೃಷ್ಟಿಗೆ ಮತ್ತು ಆರ್ಥಿಕ ಉತ್ತೇಜನಕ್ಕೆ ಕೈಗೊಂಡವು. ಅರ್ಥಶಾಸ್ತ್ರಜ್ಞ ಜಾನ್ ಮೇನಾರ್ಡ್ ಕೀನ್ಸ್ 1936ರಲ್ಲಿ ಪ್ರಕಟವಾದ ದಿ ಜನರಲ್ ಥಿಯರಿ ಆಫ್ ಎಂಪ್ಲಾಯ್‌ಮೆಂಟ್, ಇಂಟರೆಸ್ಟ್ ಎಂಡ್ ಮನಿಯಲ್ಲಿ ಈ ನೀತಿಗೆ ಸೈದ್ಧಾಂತಿಕ ಸಮರ್ಥನೆಯನ್ನು ಒದಗಿಸಿದರು.[೨೨] 2008-2009ರ ಜಾಗತಿಕ ಹಣಕಾಸು ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಕೆಲವರು ಅರ್ಥಶಾಸ್ತ್ರವನ್ನು ಉತ್ತೇಜಿಸುವ ಮಾರ್ಗವಾಗಿ ಮೂಲಸೌಕರ್ಯದಲ್ಲಿ ಬಂಡವಾಳ ಹೂಡುವ ಬಗ್ಗೆ ಪ್ರಸ್ತಾಪಿಸಿದರು.(ನೋಡಿ ಅಮೆರಿಕನ್ ರಿಕವರಿ ಎಂಡ್ ರಿಇನ್‌ವೆಸ್ಟ್‌ಮೆಂಟ್ ಆಕ್ಟ್ ಆಫ್ 2009 )

ಪರಿಸರದ ಮೇಲಿನ ಪರಿಣಾಮಗಳು

[ಬದಲಾಯಿಸಿ]

(ಇದು ಸಣ್ಣದಾಗಿದ್ದು, ಕೆಳಗಿನ ಹೇಳಿಕೆಗೆ ವಿಸ್ತೃತ ವಿವರಣೆ ಅಗತ್ಯವಿದೆ)"ಮೂಲಸೌಕರ್ಯಗಳು ಪರಿಸರರಚನೆ ಮೇಲೆ ಹಾನಿಕರ, ಸುದೀರ್ಘ ಮತ್ತು ಸಂಭಾವ್ಯ ಸರಿಪಡಿಸಲಾಗದ ಪರಿಣಾಮಗಳನ್ನು ಉಂಟುಮಾಡುತ್ತದೆ."

ಇತಿಹಾಸ

[ಬದಲಾಯಿಸಿ]

ಕೆಳಗಿನವು ಮುಖ್ಯವಾಗಿ "ಕಠಿಣ" ಮೂಲಸೌಕರ್ಯಕ್ಕೆ ಸಂಬಂಧಿಸಿದೆ.

1700 ಕ್ಕಿಂತ ಮೊದಲು

[ಬದಲಾಯಿಸಿ]

ಮೂಲ ಸೌಕರ್ಯವು 1700ಕ್ಕಿಂತ ಮುಂಚೆ ಮುಖ್ಯವಾಗಿ ರಸ್ತೆಗಳು ಮತ್ತು ಕಾಲುವೆಗಳನ್ನು ಹೊಂದಿದೆ. ಕಾಲುವೆಗಳನ್ನು ಸಾರಿಗೆ ಅಥವಾ ನೀರಾವರಿಗೆ ಬಳಸಲಾಗುತ್ತದೆ. ಸಮುದ್ರ ಯಾನವು ಬಂದರುಗಳು ಮತ್ತು ದೀಪಗೃಹದ ನೆರವು ಪಡೆಯುತ್ತದೆ. ಕೆಲವು ಮುಂದುವರಿದ ನಗರಗಳು ಸಾರ್ವಜನಿಕ ನೀರಿನ ಚಿಲುಮೆಗಳು ಮತ್ತು ಸ್ನಾನದಮನೆಗಳಿಗೆ ಸೇವೆ ನೀಡುವ ಕಾಲುವೆಗಳನ್ನು ಹೊಂದಿದ್ದು, ಕೆಲವು ಚರಂಡಿಗಳನ್ನು ಕೂಡ ಒಳಗೊಂಡಿರುತ್ತದೆ.

ರಸ್ತೆಗಳು ಪ್ರಥಮ ರಸ್ತೆಗಳು ಕಾಲುಹಾದಿಗಳಾಗಿದ್ದು, ನ್ಯಾಚೆಜ್ ಟ್ರೇಸ್ ಮುಂತಾದ ಆಹಾರಕ್ಕಾಗಿ ಹುಡುಕುವ ಪ್ರಾಣಿಗಳ ಹೆಜ್ಜೆಗುರುತುಗಳನ್ನು ಅನುಸರಿಸಿದೆ.[೨೩] ಪ್ರಥಮ ನೆಲಗಟ್ಟಿನ ಬೀದಿಗಳನ್ನು 4000ನೇ BCE ಯಲ್ಲಿ ಅರ್‌(Ur )ನಲ್ಲಿ ನಿರ್ಮಿಸಲಾಯಿತು.

ದಿಮ್ಮಿರಸ್ತೆಗಳನ್ನು 3300ನೇ BCEನಲ್ಲಿ ಇಂಗ್ಲೆಂಡ್‌ನ ಗ್ಲಾಸ್ಟೋನ್‌ಬರಿಯಲ್ಲಿ ನಿರ್ಮಿಸಲಾಯಿತು[೨೪] ಮತ್ತು ಇಟ್ಟಿಗೆ ನೆಲಗಟ್ಟಿನ ರಸ್ತೆಗಳನ್ನು ಭಾರತದ ಉಪಖಂಡದಲ್ಲಿ ಸರಿಸುಮಾರು ಅದೇ ಸಮಯದಲ್ಲಿ ಸಿಂಧು ನದಿ ಕಣಿವೆಯ ನಾಗರೀಕತೆಯಲ್ಲಿ ನಿರ್ಮಿಸಲಾಯಿತು. 500 BCE, ಡೇರಿಯಸ್ I ದಿ ಗ್ರೇಟ್ ರಾಯಲ್ ರಸ್ತೆ ಸೇರಿದಂತೆ ಪರ್ಶಿಯ (ಇರಾನ್)ಗೆ ವಿಸ್ತಾರವಾದ ರಸ್ತೆ ವ್ಯವಸ್ಥೆಯನ್ನು ಆರಂಭಿಸಿದರು.

ರೋಮನ್ ಸಾಮ್ರಾಜ್ಯದ ಆಗಮನದೊಂದಿಗೆ, ರೋಮನ್ನರು ರಸ್ತೆಗಳನ್ನು ನಿರ್ಮಿಸಿದರು. ರಸ್ತೆಗಳು ಪುಡಿಮಾಡಿದ ಕಲ್ಲಿನ ಆಳವಾದ ಅಡಿಪಾಯ ವನ್ನು ಕೆಳಗಿನ ಪದರವಾಗಿ ಅವು ಒಣಗಿದ ಸ್ಥಿತಿಯಲ್ಲಿ ಇರುವುದನ್ನು ಖಾತರಿಪಡಿಸುವುದಕ್ಕೆ ಬಳಸಿದರು. ಅತೀ ಹೆಚ್ಚು ಪ್ರಯಾಣಿಸುವ ಮಾರ್ಗಗಳಲ್ಲಿ ಹೆಚ್ಚುವರಿ ಪದರಗಳನ್ನು ಹೊಂದಿದ್ದು, ಅವು 6 ಬದಿಗಳ ಮೇಲುಕಲ್ಲುಗಳು ಅಥವಾ ನೆಲಗಟ್ಟುಗಳನ್ನು ಒಳಗೊಂಡಿರುತ್ತದೆ. ಅದು ಧೂಳನ್ನು ತಗ್ಗಿಸುತ್ತದೆ ಮತ್ತು ಚಕ್ರಗಳ ಎಳೆತವನ್ನು ಕಡಿಮೆಮಾಡುತ್ತದೆ.

ಮಧ್ಯಕಾಲೀನ ಇಸ್ಲಾಂ ಜಗತ್ತಿನಲ್ಲಿ ಅನೇಕ ರಸ್ತೆಗಳು ಅರಬ್ ಸಾಮ್ರಾಜ್ಯದಾದ್ಯಂತ ನಿರ್ಮಿಸಲಾಗಿತ್ತು. ಬಹುಮಟ್ಟಿನ ಅತ್ಯಾಧುನಿಕ ರಸ್ತೆಗಳು ಬಾಗ್ದಾದ್, ಇರಾಕ್‌ಗೆ ಸೇರಿದ್ದಾಗಿದ್ದು, ಅವನ್ನು 8ನೇ ಶತಮಾನದಲ್ಲಿ ಟಾರ್‌ನೊಂದಿಗೆ ನೆಲಗಟ್ಟು ಹಾಕಲಾಗುತ್ತಿತ್ತು.[೨೫]

ಕಾಲುವೆಗಳು ಮತ್ತು ನೀರಾವರಿ ವ್ಯವಸ್ಥೆಗಳು: ಅತ್ಯಂತ ಪ್ರಾಚೀನವೆಂದು ತಿಳಿದುಬಂದಿರುವ ಕಾಲುವೆಗಳನ್ನು ಮೆಸೊಪೊಟೇಮಿಯದಲ್ಲಿ ಸುಮಾರು 4000 BCEನಲ್ಲಿ ನಿರ್ಮಿಸಲಾಯಿತು. ಅವು ಈಗಿನ ಆಧುನಿಕ ದಿನದ ಇರಾಕ್ ಮತ್ತು ಸಿರಿಯದಲ್ಲಿ ನೆಲೆಗೊಂಡಿವೆ. ಭಾರತ ಮತ್ತು ಪಾಕಿಸ್ತಾನದ ಸಿಂಧು ಕಣಿವೆಯ ನಾಗರೀಕತೆ(ಸುಮಾರು 3300 BCEಯಿಂದ )ಅತ್ಯಾಧುನಿಕ ಕಾಲುವೆ ನೀರಾವರಿ ಪದ್ಧತಿಯನ್ನು ಒಳಗೊಂಡಿತ್ತು.[೨೬] ಈಜಿಪ್ಟ್‌ನಲ್ಲಿ ಕಾಲುವೆಗಳು 2300BCE ಕಾಲಕ್ಕೆ ಸೇರಿದ್ದಾಗಿದ್ದು, ಆಸ್ವಾನ್ ಬಳಿಯ ನೈಲ್‌ನಲ್ಲಿ ಆಳವಿಲ್ಲದ ನೀರಿನ ವ್ಯಾಪ್ತಿಗೆ ಉಪಮಾರ್ಗ ಕಲ್ಪಿಸುವುದಕ್ಕಾಗಿ ಕಾಲುವೆಯೊಂದನ್ನು ನಿರ್ಮಿಸಲಾಯಿತು.[೨೭]

ಪ್ರಾಚೀನ ಚೀನಾದಲ್ಲಿ ನದಿಯಲ್ಲಿ ಸಾಗಣೆಗೆ ದೊಡ್ಡ ಕಾಲುವೆಗಳನ್ನು ವಾರಿಂಗ್ ಸ್ಟೇಟ್ಸ್(481-221 BCE)ಕಾಲದಿಂದ ನಿರ್ಮಿಸಲಾಯಿತು.[೨೮] ಇಲ್ಲಿಯವರೆಗೆ ಅತೀ ಉದ್ದದ ಕಾಲುವೆಯು ಗ್ರಾಂಡ್ ಕೆನಾಲ್ ಆಫ್ ಚೀನಾ ಆಗಿದ್ದು, ಅದು ಇಂದು ಉದ್ದದಲ್ಲಿ ವಿಶ್ವದಲ್ಲೇ ಅತೀ ಉದ್ದದ ಕಾಲುವೆಯಾಗಿ ಉಳಿದಿದ್ದು, 609ರಲ್ಲಿ ಅದರ ನಿರ್ಮಾಣಕಾರ್ಯ ಮುಗಿದಿತ್ತು.

ಯುರೋಪ್‌ನಲ್ಲಿ ಕಾಲುವೆ ನಿರ್ಮಾಣವು 12ನೇ ಶತಮಾನದ CE ನಿಂದ ವಾಣಿಜ್ಯ ವಿಸ್ತರಣೆ ಕಾರಣದಿಂದ ಮಧ್ಯಕಾಲೀನ ಯುಗದಲ್ಲಿ ಆರಂಭವಾಯಿತು. ಹೆಸರಾಂತ ಕಾಲುವೆಗಳು 1398ರಲ್ಲಿ ನಿರ್ಮಾಣವಾದ ಜರ್ಮನಿಯ ಸ್ಟೆಕ್‌ನಿಜ್ ಕಾಲುವೆ ,ಫ್ರಾನ್ಸ್‌‌ನಲ್ಲಿ(1642) ಲಾಯಿರ್ ಮತ್ತು ಸಿನೆಯನ್ನು ಸಂಪರ್ಕಿಸುವ ಬ್ರಿಯಾರೆ ಕಾಲುವೆ ಹಿಂದೆಯೇ ಮೆಡಿಟರೇನಿಯನ್‌ಗೆ ಅಟ್ಲಾಂಟಿಕ್ ಸಾಗರವನ್ನು ಸಂಪರ್ಕಿಸುವ ಕೆನಾಲ್ ಡು ಮಿಡಿ(1683). ಕಾಲುವೆ ನಿರ್ಮಾಣವು 17ನೇ ಮತ್ತು 18ನೇ ಶತಮಾನಗಳಲ್ಲಿ ಸ್ಥಿರವಾದ ಪ್ರಗತಿ ಕಂಡಿತು. ಮಹಾನದಿಗಳಾದ ಎಲ್ಬೆ, ಓಡರ್ ಮತ್ತು ವೆಸೆರ್‌ಗಳನ್ನು ಕಾಲುವೆಗಳ ಮೂಲಕ ಸಂಪರ್ಕಿಸಲಾಯಿತು.

1700 ರಿಂದ 1870

[ಬದಲಾಯಿಸಿ]

ರಸ್ತೆಗಳು ಇಂಗ್ಲೆಂಡ್‌ನಲ್ಲಿ ಸಂಚಾರ ಪ್ರಮಾಣಗಳು ಹೆಚ್ಚಾಗಿ ರಸ್ತೆಗಳು ಕೆಟ್ಟುಹೋದಾಗ, ಟರ್ನ್‌ಪೈಕ್ ಟ್ರಸ್ಟ್‌ (ಸುಂಕದಕಟ್ಟೆ ಟ್ರಸ್ಟ್‌)ಗಳ ಮೂಲಕ 1730 -1770ರ ನಡುವೆ ಸುಂಕ ತೆರುವ ರಸ್ತೆಗಳನ್ನು ನಿರ್ಮಿಸಲಾಯಿತು. ಟರ್ನ್‌ಪೈಕ್‌ಗಳನ್ನು ನಂತರ ಅಮೆರಿಕದಲ್ಲಿ ಕೂಡ ನಿರ್ಮಿಸಲಾಯಿತು. ಅವುಗಳನ್ನು ಸಾಮಾನ್ಯವಾಗಿ ಸರ್ಕಾರದ ಫ್ರಾಂಚಸಿ(ಅಧಿಕಾರ) ನೇತೃತ್ವದಲ್ಲಿ ಖಾಸಗಿ ಕಂಪೆನಿಗಳು ನಿರ್ಮಿಸುತ್ತವೆ.

ನದಿಗಳು ಮತ್ತು ಕಾಲುವೆಗಳಲ್ಲಿ ಜಲಸಾರಿಗೆಯ ಮೂಲಕ U.S.ಗಡಿಯಿಂದ(ಅಪ್ಪಲಚಿಯನ್ ಪರ್ವತಗಳು ಮತ್ತು ಮಿಸ್ಸಿಸಿಪ್ಪಿ ನದಿ ನಡುವೆ)19ನೇ ಶತಮಾನದ ಆರಂಭದಲ್ಲಿ ಅನೇಕ ಕೃಷಿ ಉತ್ಪಾದನೆ ಸರಕುಗಳನ್ನು ಸಾಗಿಸಲಾಯಿತು. ಆದರೆ ಪರ್ವತಗಳಲ್ಲಿ ಕಿರುದಾರಿಗಳು ಅನುಕೂಲವನ್ನು ಹೊಂದಿತ್ತು.

ಫ್ರಾನ್ಸ್‌ನಲ್ಲಿ ಪೀರೇ-ಮೇರಿ-ಜೆರೋಂ ಟ್ರೆಸಗುಯೆಟ್ ಅವರು 1764ನೇ ವರ್ಷದಲ್ಲಿ ರಸ್ತೆ ನಿರ್ಮಾಣಕ್ಕೆ ಪ್ರಥಮ ವೈಜ್ಞಾನಿಕ ವಿಧಾನವನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಇದು ದೊಡ್ಡ ಕಲ್ಲುಗಳ ಪದರವನ್ನು ಒಳಗೊಂಡಿದ್ದು, ಅದು ಸಣ್ಣ ಕಲ್ಲಿನ ಹರಳುಗಳಿಂದ ಮುಚ್ಚಿರುತ್ತದೆ. ಜಾನ್ ಲೌಡನ್ ಮೆಕಾಡಮ್ (1756–1836) ಪ್ರಥಮ ಆಧುನಿಕ ಹೆದ್ದಾರಿಗಳನ್ನು ವಿನ್ಯಾಸಗೊಳಿಸಿದರು ಮತ್ತು ಮಣ್ಣು ಮತ್ತು ಕಲ್ಲು ಒಟ್ಟುಗೂಡಿದ ದುಬಾರಿಯಲ್ಲದ ನೆಲೆಗಟ್ಟು ವಸ್ತುವನ್ನು ಅಭಿವೃದ್ಧಿಪಡಿಸಿದರು.(ಅದು ಮೆಕಾಡಮ್ ಎಂದು ಹೆಸರಾಗಿದೆ)[೨೪]

ಕಾಲುವೆಗಳು ಯುರೋಪ್‌ನಲ್ಲಿ ವಿಶೇಷವಾಗಿ ಬ್ರಿಟನ್ ಮತ್ತು ಐರ್ಲೆಂಡ್‌ನಲ್ಲಿ, ನಂತರ ನವ ಅಮೆರಿಕ ಮತ್ತು ಕೆನಡಾದ ವಸಾಹತುಗಳಲ್ಲಿ, ಕೈಗಾರಿಕೆ ಕ್ರಾಂತಿಯ ಆರಂಭದ ಹಂತದ ಸಂದರ್ಭದಲ್ಲಿ ರೈಲುಮಾರ್ಗಗಳ ಅಭಿವೃದ್ಧಿಗೆ ಮುಂಚಿತವಾಗಿ ಒಳನಾಡಿನ ಕಾಲುವೆಗಳನ್ನು ನಿರ್ಮಿಸಲಾಯಿತು. ಬ್ರಿಟನ್‌ನಲ್ಲಿ 17760 ಮತ್ತು 1820ರ ನಡುವೆ ಸುಮಾರು 100ಕ್ಕಿಂತ ಹೆಚ್ಚು ಕಾಲುವೆಗಳನ್ನು ನಿರ್ಮಿಸಲಾಯಿತು. ಅಮೆರಿಕದಲ್ಲಿ, ಸಂಚಾರಯೋಗ್ಯ ಕಾಲುವೆಗಳು ಪ್ರತ್ಯೇಕ ಪ್ರದೇಶಗಳಿಗೆ ತಲುಪಿ ಜಗತ್ತಿನ ಆಚೆಗಿನ ಪ್ರದೇಶ ದೊಂದಿಗೆ ಸಂಪರ್ಕ ಕಲ್ಪಿಸಿತು.

1825ರಲ್ಲಿ ಎರೀ ಕಾಲುವೆ82 ನೀರು ಏರಿಳಿಕೆ ಕಟ್ಟೆಗಳ ಉದ್ದದೊಂದಿಗೆ, ಜನಭರಿತ ಈಶಾನ್ಯದಿಂದ ಫಲವತ್ತಾದ ಗ್ರೇಟ್ ಪ್ಲೇನ್ಸ್‌(ಮಹಾ ಪ್ರಸ್ಥಭೂಮಿ)ವರೆಗೆ ಸಂಪರ್ಕವನ್ನು ತೆರೆಯಿತು. 19ನೇ ಶತಮಾನದಲ್ಲಿ ಕಾಲುವೆಗಳ ಉದ್ದವುನಿಂದ 4000ಕ್ಕಿಂತ ಹೆಚ್ಚು ಬೆಳೆಯಿತು. ಕೆನಡಾದ ಜತೆಗೂಡಿ ಜಟಿಲವಾದ ಜಾಲವು ಮಹಾ ಸರೋವರಗಳನ್ನು ಸಂಚಾರಯೋಗ್ಯವನ್ನಾಗಿಸಿತು. ಆದರೂ ಕೆಲವು ಕಾಲುವೆಗಳು ನಂತರ ಒಣಗಿ ಸಾರಿಗೆಗೆ ಕಾನೂನುಬದ್ಧ ಅನುಮತಿ ರೈಲುಮಾರ್ಗವಾಗಿ ಬಳಸಲಾಯಿತು.

ರೈಲುಮಾರ್ಗ ಆರಂಭದ ರೈಲ್ವೆಗಳನ್ನು ಗಣಿಗಳಲ್ಲಿ ಅಥವಾ ಜಲಪಾತಗಳಿಗೆ ಉಪಮಾರ್ಗ ಕಲ್ಪಿಸಲು ಬಳಸಲಾಗುತ್ತಿತ್ತು ಮತ್ತು ಅವುಗಳನ್ನು ಕುದುರೆಗಳು ಅಥವಾ ಜನರು ಎಳೆಯುತ್ತಿದ್ದರು. 1811ರಲ್ಲಿ ಜಾನ್ ಬ್ಲೆಂಕಿನ್‌ಸಾಪ್ ಪ್ರಥಮ ಯಶಸ್ವಿ ಮತ್ತು ಪ್ರಾಯೋಗಿಕ ರೈಲ್ವೆ ಎಂಜಿನ್ ವಿನ್ಯಾಸಗೊಳಿಸಿದರು[೨೯] ಮತ್ತು ಮಿಡ್ಡಲ್‌ಟೌನ್ ಕೊಲೈರಿಯಿಂದ ಲೀಡ್ಸ್‌‍ವರೆಗೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ನಿರ್ಮಿಸಿದರು. ಲಿವರ್‌ಪೂಲ್ ಮತ್ತು ಮ್ಯಾಂಚೆಸ್ಟರ್ ರೈಲ್ವೆ 1826ರಲ್ಲಿ ಆರಂಭವಾದ ವಿಶ್ವದ ಪ್ರಥಮ "ಅಂತರನಗರ"ಮಾರ್ಗವಾಗಿದೆ.[೩೦] ನಂತರದ ವರ್ಷಗಳಲ್ಲಿ, ರೈಲ್ವೆ ಯುನೈಟೆಡ್ ಕಿಂಗ್ಡಮ್(ಬ್ರಿಟನ್)ದಾದ್ಯಂತ ವಿಸ್ತರಣೆಯಾಯಿತು ಮತ್ತು ಸರಿಸುಮಾರು ಒಂದು ಶತಮಾನದವರೆಗೆ ನೆಲ ಸಾರಿಗೆಯ ಪ್ರಧಾನ ಮಾರ್ಗವಾಯಿತು.

ಅಮೆರಿಕದಲ್ಲಿ 1826ರಲ್ಲಿ ಮಸಾಚುಸೆಟ್ಸ್‌ನ ಗ್ರಾನೈಟ್ ರೈಲ್ವೆ ಪ್ರಥಮ ವಾಣಿಜ್ಯ ರೈಲುಮಾರ್ಗವಾಗಿದ್ದು,ಸತತ ಕಾರ್ಯಾಚರಣೆಗಳ ಮೂಲಕ ಸಾರ್ವಜನಿಕ ಸಾರಿಗೆಯಾಗಿ ವಿಕಾಸ ಗೊಂಡಿತು. ಬಾಲ್ಟಿಮೋರ್ ಮತ್ತು ಓಹಿಯೊ 1830ರಲ್ಲಿ ಆರಂಭವಾಯಿತು ಮತ್ತು ಪ್ರಮುಖ ವ್ಯವಸ್ಥೆಯಾಗಿ ವಿಕಾಸಗೊಂಡ ಪ್ರಥಮ ಸಾರಿಗೆಯಾಗಿದೆ. 1869ರಲ್ಲಿ, ಸಾಂಕೇತಿಕ ವಾಗಿ ಮುಖ್ಯವಾದ ಅಂತರಖಂಡೀಯ ರೈಲುಮಾರ್ಗವನ್ನು ಅಮೆರಿಕದ ಉಟಾದ ಪ್ರೊಮಂಟರಿಯಲ್ಲಿ ಚಿನ್ನದ ಹೆಮ್ಮೊಳೆಯನ್ನು ಬಿಗಿಯುವ ಮೂಲಕ ಪೂರ್ತಿಗೊಳಿಸಲಾಯಿತು.[೩೧]

ಟೆಲಿಗ್ರಾಫ್(ತಂತಿ ಸಮಾಚಾರ ವ್ಯವಸ್ಥೆ) ಸೇವೆ : ಪ್ರಥಮ ವಾಣಿಜ್ಯ ವಿದ್ಯುತ್ ಟೆಲಿಗ್ರಾಫ್ ಮೊದಲಬಾರಿಗೆ ಯಶಸ್ವಿಯಾಗಿ ಲಂಡನ್‌ನ ಯೂಸ್ಟನ್ ಮತ್ತು ಕ್ಯಾಮ್ಡೆನ್ ಟೌನ್‌‍ನಲ್ಲಿ 1837ರ ಜುಲೈ 25ರಂದು ಯಶಸ್ವಿಯಾಗಿ ಪ್ರದರ್ಶಿಸಲಾಯಿತು.[೩೨]

ಇದು ಗ್ರೇಟ್ ವೆಸ್ಟರ್ನ್ ರೈಲ್ವೆಯಲ್ಲಿ 1839ರ ಏಪ್ರಿಲ್ 9ರಂದು ಪ್ಯಾಡಿಂಗ್‌ಟನ್ ನಿಲ್ದಾಣದಿಂದ ವೆಸ್ಟ್ ಡ್ರೇಟನ್‌ವರೆಗೆ ದೂರದವರೆಗೆ ವಾಣಿಜ್ಯಕ ಬಳಕೆಗೆ ಪ್ರವೇಶಿಸಿತು. ಅಮೆರಿಕ ದಲ್ಲಿ, ಟೆಲಿಗ್ರಾಫ್ ವ್ಯವಸ್ಥೆಯನ್ನು ಸ್ಯಾಮ್ಯುಯಲ್ ಮಾರ್ಸ್ ಮತ್ತು ಆಲ್ಫ್ರೆಡ್ ವೈಲ್ ಅಭಿವೃದ್ಧಿಪಡಿಸಿದರು. 1844ರ ಮೇ 24ರಂದು, ತಮ್ಮ ಟೆಲಿಗ್ರಾಫ್‌ನ ಪ್ರಥಮ ಸಾರ್ವಜನಿಕ ಪ್ರದರ್ಶನವನ್ನು ವಾಷಿಂಗ್‌ಟನ್,D.C.ಯ U.S.ಕ್ಯಾಪಿಟಲ್‌ನಲ್ಲಿರುವ ಸುಪ್ರೀಂಕೋರ್ಟ್ ಚೇಂಬರ್‌ನಿಂದ ಬಾಲ್ಟಿಮೋರ್‌ನ B&O ರೈಲುಮಾರ್ಗದ ಹೊರ ಡಿಪೊ(ಈಗ B&O ರೈಲು ಮಾರ್ಗದ ಮ್ಯೂಸಿಯಂ)ಗೆ ಸಂದೇಶ ಕಳಿಸುವ ಮೂಲಕ ಮಾಡಿದರು.

ನಂತರದ ಎರಡು ದಶಕಗಳಲ್ಲಿ ಮಾರ್ಸ್/ವೈಲ್ ಟೆಲಿಗ್ರಾಫ್ ವ್ಯವಸ್ಥೆಯನ್ನು ಶೀಘ್ರದಲ್ಲಿ ಅಳವಡಿಸಲಾಯಿತು. 1861ರ ಅಕ್ಟೋಬರ್ 24ರಂದು, ಪ್ರಥಮ ಅಂತರಖಂಡೀಯ ಟೆಲಿಗ್ರಾಫ್‌ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಪ್ರಥಮ ಯಶಸ್ವಿ ಅಂತರ ಅಟ್ಲಾಂಟಿಕ್ ಟೆಲಿಗ್ರಾಫ್ ಕೇಬಲ್ 1866ರ ಜುಲೈ 27ರಂದು ಪೂರ್ತಿಗೊಳಿಸಲಾಯಿತು ಮತ್ತು ಇದರಿಂದ ಅಂತರ ಅಟ್ಲಾಂಟಿಕ್ ಟೆಲಿಗ್ರಾಫ್ ಸಂಪರ್ಕಕ್ಕೆ ಮೊದಲ ಬಾರಿಗೆ ಅವಕಾಶ ಸಿಕ್ಕಿತು. ಯೂಸ್ಟನ್ ನಿಲ್ದಾಣದಲ್ಲಿ ಅದರ ಪ್ರಥಮ ಅಳವಡಿಕೆಯ 29 ವರ್ಷದೊಳಗೆ ಟೆಲಿಗ್ರಾಫ್ ಜಾಲವು ಸಾಗರಗಳನ್ನು ದಾಟಿ ಅಂಟಾರ್ಟಿಕ ಹೊರತು ಪಡಿಸಿ ಎಲ್ಲ ಖಂಡಗಳನ್ನು ದಾಟಿತು ಮತ್ತು ತಕ್ಷಣದ ಜಾಗತಿಕ ಸಂಪರ್ಕವನ್ನು ಪ್ರಥಮ ಬಾರಿಗೆ ಸಾಧ್ಯವಾಗಿಸಿತು.

1870 ರಿಂದ 1920

[ಬದಲಾಯಿಸಿ]

ರಸ್ತೆಗಳು ಟಾರ್‌ನಿಂದ ಕೂಡಿದ ಮೆಕಾಡಮ್(ಟಾರ್ಮ್ಯಾಕ್-ಟಾರು ಜಲ್ಲಿ ಭಾಗ)ನ್ನು ಪ್ಯಾರಿಸ್ ಮುಂತಾದ ನಗರಗಳಲ್ಲಿ 19ನೇ ಶತಮಾನದ ಕೊನೆಯಲ್ಲಿ ಮೆಕಾಡಮ್ ರಸ್ತೆಗಳಿಗೆ ಅಳವಡಿಸಲಾಯಿತು. 20ನೇ ಶತಮಾನದ ಪೂರ್ವದಲ್ಲಿ ಟಾರ್‌ಮ್ಯಾಕ್ ಮತ್ತು ಕಾಂಕ್ರೀಟ್ ನೆಲಗಟ್ಟಿನ ರಸ್ತೆಗಳನ್ನು ಹಳ್ಳಿಗಾಡಿನ ಪ್ರದೇಶಕ್ಕೆ ವಿಸ್ತರಿಸಲಾಯಿತು.

ಕಾಲುವೆಗಳು ಈ ಅವಧಿಯಲ್ಲಿ ಅನೇಕ ಗಮನಾರ್ಹ ಸಮುದ್ರ ಕಾಲುವೆಗಳ ಕಾಮಗಾರಿಗಳನ್ನು ಪೂರ್ತಿಗೊಳಿಸಲಾಯಿತು. ಸೂಯೆಜ್ ಕಾಲುವೆ(1869);ಕಿಯೆಲ್ ಕಾಲುವೆ(1897)-ಇತರೆ ಕಾಲುವೆಗಳಿಗಿಂತ ಹಡಗುಗಳಲ್ಲಿ ಹೆಚ್ಚು ಸರಕನ್ನು ಸಾಗಿಸುತ್ತಿತ್ತು ಮತ್ತು ಪನಾಮಾ ಕಾಲುವೆಯು 1914ರಲ್ಲಿ ಆರಂಭವಾಯಿತು.

ದೂರವಾಣಿ ಸೇವೆ : 1876ರಲ್ಲಿ ಅಲೆಕ್ಸಾಂಡರ್ ಗ್ರಹಾಂ ಬೆಲ್‌ ಸ್ಪಷ್ಟ ಸಂಭಾಷಣೆಯ ಪ್ರಥಮ ಯಶಸ್ವಿ ಟೆಲಿಫೋನ್ ಸಂಪರ್ಕವನ್ನು ಸಾಧಿಸಿದರು. ಪ್ರಥಮ ದೂರವಾಣಿಗಳು ಜಾಲವನ್ನು ಹೊಂದಿ ರಲಿಲ್ಲ. ಆದರೆ ಖಾಸಗಿ ಬಳಕೆಯಲ್ಲಿದ್ದು,ಜೋಡಿಗಳಲ್ಲಿ ವೈರ್‌ಗಳ ಮೂಲಕ ಸಂಪರ್ಕ ಕಲ್ಪಿಸಲಾಗಿತ್ತು. ವಿವಿಧ ಜನರೊಂದಿಗೆ ಮಾತನಾಡಲು ಬಯಸುವ ಬಳಕೆದಾರರು ಈ ಉದ್ದೇಶಕ್ಕಾಗಿ ಅಗತ್ಯವಿದ್ದಷ್ಟು ದೂರವಾಣಿಗಳನ್ನು ಹೊಂದಿದ್ದರು. ಮಾತನಾಡಲು ಬಯಸುವ ಬಳಕೆದಾರ,ಇನ್ನೊಬ್ಬ ಬಳಕೆದಾರ ಆಲಿಸುವ ತನಕ ಸಂವಾಹಕ ಯಂತ್ರಕ್ಕೆ ಸಿಳ್ಳೆ ಸದ್ದು ಮಾಡುತ್ತಾರೆ.

ಆದಾಗ್ಯೂ,ಶೀಘ್ರದಲ್ಲೇ ಸಿಗ್ನಲಿಂಗ್(ಸಂಕೇತ) ವ್ಯವಸ್ಥೆಗಾಗಿ ಗಂಟೆಯೊಂದನ್ನು ಸೇರಿಸಲಾಯಿತು ಮತ್ತು ನಂತರ ಸ್ವಿಚ್‌ಹುಕ್ ಸೇರಿಸಲಾಯಿತು. ದೂರವಾಣಿಗಳು ಈಗಾಗಲೇ ಟೆಲಿಗ್ರಾಫ್(ತಂತಿ ಸಮಾಚಾರ ವ್ಯವಸ್ಥೆ)ಜಾಲಗಳಲ್ಲಿ ಬಳಸಿದ ವಿನಿಮಯ ತತ್ವದ ಅನುಕೂಲವನ್ನು ಪಡೆದವು. ಪ್ರತಿಯೊಂದು ದೂರವಾಣಿಯನ್ನು ಸ್ಥಳೀಯ ದೂರವಾಣಿ ವಿನಿಮಯ ಕೇಂದ್ರಕ್ಕೆ ವೈರ್ ಮೂಲಕ ಸಂಪರ್ಕ ಕಲ್ಪಿಸಲಾಯಿತು ಮತ್ತು ದೂರವಾಣಿ ವಿನಿಮಯ ಕೇಂದ್ರಗಳಿಗೆ ಟ್ರಂಕ್‌ಗಳ(ಎರಡು ಮುಖ್ಯ ಕಚೇರಿಗಳ ನಡುವಿನ ಸಂಪರ್ಕ) ಜತೆ ವೈರ್ ಸಂಪರ್ಕ ಕಲ್ಪಿಸಲಾಯಿತು. ಜಾಲಗಳನ್ನು ಶ್ರೇಣಿ ವ್ಯವಸ್ಥೆಯ ರೀತಿಯಲ್ಲಿ ನಗರಗಳು, ರಾಷ್ಟ್ರಗಳು,ಖಂಡಗಳು ಮತ್ತು ಸಾಗರಗಳ ವ್ಯಾಪ್ತಿವರೆಗೆ ಒಟ್ಟಿಗೆ ಜೋಡಿಸಲಾಯಿತು.

ವಿದ್ಯುಚ್ಛಕ್ತಿ 1878ರ ಪ್ಯಾರಿಸ್ ಪ್ರದರ್ಶನದಲ್ಲಿ ವಿದ್ಯುತ್ ಆರ್ಕ್ ದೀಪ್‌ವ್ಯವಸ್ಥೆಯನ್ನು ಅವೆನ್ಯೂ ಡಿ ಲೊಪೇರಾದಿಂದ ಪ್ಲೇಸ್ ಡಿ ಲೊಪೇರಾದವರೆಗೆ ವಿದ್ಯುತ್ ಯಾಬೋಲ್ಚ್‌ಕೋವ್ ಆರ್ಕ್ ದೀಪಗಳನ್ನು ಬಳಸಿ ಅಳವಡಿಸಲಾಯಿತು. ಇದಕ್ಕೆ ಜೆನೋಬ್ ಗ್ರಾಂ ಪರ್ಯಾಯ ವಿದ್ಯುತ್ ಪ್ರವಾಹದ ಡೈನಮೊಗಳಿಂದ ವಿದ್ಯುಚ್ಛಕ್ತಿ ಒದಗಿಸಲಾಯಿತು.[೩೩][೩೪] ಯಾಬ್ಲೋಚ್‌ ಕೋವ್ ದೀಪಗಳಿಗೆ ಅಧಿಕ ವೋಲ್ಟೇಜ್ ಅಗತ್ಯವಿದ್ದು, ಆರ್ಕ್ ದೀಪಗಳಿಗೆ 7ಮೈಲು ಸರ್ಕ್ಯೂಟ್‌(ಮಂಡಲ)ನಲ್ಲಿ ವಿದ್ಯುಚ್ಛಕ್ತಿ ಒದಗಿಸಬಹುದು ಎಂದು ಪ್ರಯೋಗ ಪರೀಕ್ಷ ಕರು ವರದಿ ಮಾಡಿದ್ದರು.[೩೫]

ದಶಕದೊಳಗೆ ಅನೇಕ ನಗರಗಳು ಕೇಂದ್ರ ವಿದ್ಯುತ್ ಘಟಕ ಬಳಸಿಕೊಂಡು ದೀಪದ ವ್ಯವಸ್ಥೆಗಳನ್ನು ಹೊಂದಿದವು. ಇದು ವಿದ್ಯುತ್ ಸಂವಹನ ಮಾರ್ಗಗಳ ಮೂಲಕ ಬಹು ಗ್ರಾಹಕರಿಗೆ ವಿದ್ಯುಚ್ಛಕ್ತಿಯನ್ನು ಒದಗಿಸಿತು.ಈ ವ್ಯವಸ್ಥೆಗಳು ಆ ಕಾಲದ ಪ್ರಧಾನ ಅನಿಲದೀಪ ಬಳಕೆಗಳೊಂದಿಗೆ ನೇರ ಪೈಪೋಟಿಯಲ್ಲಿತ್ತು. ಪ್ರಜ್ವಲಿಸುವ ಬೆಳಕುಗಳನ್ನು ಸರಬರಾಜು ಮಾಡುವ ಪ್ರಥಮ ವಿದ್ಯುತ್ ವ್ಯವಸ್ಥೆಯನ್ನು ಎಡಿಸನ್ ಇಲ್ಯುಮಿನೇಟಿಂಗ್ ಕಂಪೆನಿಯು ಲೋಯರ್ ಮ್ಯಾನ್‌ಹಟ್ಟನ್‌ನಲ್ಲಿ ನಿರ್ಮಿಸಿತು. ಪರ್ಲ್ ಸ್ಟ್ರೀಟ್ ಕೇಂದ್ರದಲ್ಲಿರುವ 6 "ಬೃಹತ್ ಡೈನಾಮೊ "ಗಳು ಕಟ್ಟಕಡೆಗೆ ಒಂದು ಚದರ ಮೈಲಿನವರೆಗೆ ಸೇವೆ ಸಲ್ಲಿಸಿತು.

ಅಧಿಕ ವೋಲ್ಟೇಜ್ ಬಳಸಿಕೊಂಡ ಮೂರು ಹಂತದ ಪರ್ಯಾಯ ವಿದ್ಯುತ್ ಪ್ರವಾಹದ ಪ್ರಥಮ ಸಂವಹನವು ಫ್ರಾಂಕ್‌ಫರ್ಟ್‌ನಲ್ಲಿ ಅಂತಾರಾಷ್ಟ್ರೀಯ ವಿದ್ಯುತ್ ಪ್ರದರ್ಶನದ ಸಂದರ್ಭದಲ್ಲಿ 1891ರಲ್ಲಿ ನಡೆಯಿತು. ಅಂದಾಜು 175 ಕಿಲೋಮೀಟರ್ ಉದ್ದದ 25 kVಸಂಹವನ ಮಾರ್ಗ(ವಾಹಕ)ವು ನೆಕಾರ್‌ ನದಿ ದಂಡೆಯ ಲಾಫೆನ್ ಮತ್ತು ಫ್ರಾಂಕ್‌ಫರ್ಟ್ ನಡುವೆ ಸಂಪರ್ಕ ಕಲ್ಪಿಸಿತು.

ವಿದ್ಯುಚ್ಛಕ್ತಿ ಸಂವಹನಕ್ಕೆ ಬಳಸುವ ವೋಲ್ಟೇಜ್‌ಗಳನ್ನು 20ನೇ ಶತಮಾನದುದ್ದಕ್ಕೂ ಹೆಚ್ಚಿಸಲಾಯಿತು. 1914ರಷ್ಟರಲ್ಲಿ 70,000 Vಗಿಂತ ಹೆಚ್ಚು ನಿರ್ವಹಿಸುವ 55 ಸಂವಹನ ವ್ಯವಸ್ಥೆಗಳು ಸೇವೆಯಲ್ಲಿದ್ದು, ಆಗ ಬಳಸಿದ ಅತ್ಯಧಿಕ ವೋಲ್ಟೇಜ್ 150,000ವೋಲ್ಟ್‌ಗಳಾಗಿತ್ತು.[೩೬]

ನೀರಿನ ವಿತರಣೆ ಮತ್ತು ಚರಂಡಿಗಳು: 19ನೇ ಶತಮಾನದಲ್ಲಿ ಪ್ರಮುಖ ಸಂಸ್ಕರಣೆ ಕಾಮಗಾರಿಗಳನ್ನು ಕಾಲರಾ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಲಂಡನ್‌ನಲ್ಲಿ ನಿರ್ಮಿಸಲಾಯಿತು. ಮೆಟ್ರೋಪೊಲಿಸ್ ವಾಟರ್ ಆಕ್ಟ್ 1852ನ್ನು ಜಾರಿಗೆ ತರಲಾಯಿತು. "ಈ ಕಾಯ್ದೆಯ ಅನ್ವಯ ಯಾವುದೇ ನೀರಿನ ಕಂಪೆನಿಯು ಸ್ಥಳೀಯ ಬಳಕೆಗಿರುವ ನೀರನ್ನು 1855ರ ಆಗಸ್ಟ್ 31ರ ನಂತರ ಥೇಮ್ಸ್ ನದಿಯ ಉಬ್ಬರ ವಿಳಿತದ ವ್ಯಾಪ್ತಿಯ ಪ್ರದೇಶದಿಂದ ಸಂಗ್ರಹಿಸುವುದು ಕಾನೂನುಬಾಹಿರವಾಯಿತು.

1855ರ ಡಿಸೆಂಬರ್ 31ರಿಂದ ಇಂತಹ ಎಲ್ಲ ನೀರನ್ನು ಪರಿಣಾಮಕಾರಿಯಾಗಿ ಶೋಧಿಸುವುದು ಅಗತ್ಯವಾಗಿತ್ತು.[15] ಚರಂಡಿಗಳ ಮೆಟ್ರೊಪಾಲಿಟನ್ ಆಯೋಗವನ್ನು ರಚಿಸ ಲಾಯಿತು ಮತ್ತು ನೀರಿನ ಶೋಧಕವನ್ನು ಕಡ್ಡಾಯಗೊಳಿಸಲಾಯಿತು. ಟೆಡ್ಡಿಂಗ್‌ಟನ್ ಲಾಕ್‌ಗಿಂತ ಮೇಲೆ ಥೇಮ್ಸ್‌ನ ಒಳಬರುವ ನೀರಿನ ಪ್ರಮಾಣವನ್ನು ದೃಢಪಡಿಸಲಾಯಿತು.

ಸಂಕುಚಿತ ದ್ರವೀಕೃತ ಕ್ಲೋರಿನ್ ಅನಿಲದ ಬಳಕೆಯಿಂದ ಕುಡಿಯುವ ನೀರಿನ ಶುದ್ಧೀಕರಣ ತಂತ್ರವನ್ನು 1910ರಲ್ಲಿ U.S. ಆರ್ಮಿ ಮೇಜರ್(ನಂತರ ಬ್ರಿಗೇಡಿಯರ್ ಜನರಲ್), ಸೇನಾ ವೈದ್ಯಕೀಯ ಶಾಲೆಯ ರಸಾಯನಶಾಸ್ತ್ರ ಪ್ರಾಧ್ಯಾಪಕ ಕಾರ್ಲ್ ರೋಜರ್ಸ್ ಡಾರ್ನಾಲ್ (1867–1941) ಅಭಿವೃದ್ಧಿಪಡಿಸಿದರು. ಡಾರ್ನಾಲ್ ಅವರ ಕೆಲಸವು ಪೌರಸಂಸ್ಥೆಯ ನೀರಿನ ಶುದ್ಧೀಕರಣದ ಪ್ರಸಕ್ತ ದಿನದ ವ್ಯವಸ್ಥೆಗಳಿಗೆ ಆಧಾರವಾಯಿತು.

ಸುರಂಗ ಮಾರ್ಗಗಳು : 1863ರಲ್ಲಿ ಲಂಡನ್ ಸುರಂಗ ಮಾರ್ಗ ರೈಲು ನಿರ್ಮಾಣವಾಯಿತು. 1890ರಲ್ಲಿ ಅದು ವಿದ್ಯುತ್ ರೈಲುಗಳು ಮತ್ತು ಆಳದ ಸುರಂಗಗಳನ್ನು ಬಳಸಲು ಆರಂಭಿಸಿತು. ನಂತರ ಶೀಘ್ರದಲ್ಲೇ ಬುಡಾಪೆಸ್ಟ್ ಮತ್ತು ಇನ್ನೂ ಅನೇಕ ಇತರೆ ನಗರಗಳು ನ್ಯೂಯಾರ್ಕ್ ಸೇರಿದಂತೆ ಸುರಂಗಮಾರ್ಗ ವ್ಯವಸ್ಥೆಗಳ ಬಳಕೆಯನ್ನು ಆರಂಭಿಸಿತು. 1940ರಲ್ಲಿ 19 ಸುರಂಗಮಾರ್ಗ ವ್ಯವಸ್ಥೆಗಳು ಬಳಕೆಯಲ್ಲಿದ್ದವು.

2000 ರಿಂದ

[ಬದಲಾಯಿಸಿ]

ರಸ್ತೆಗಳು 1925ರಲ್ಲಿ ಇಟಲಿ ರಸ್ತೆಯಂತಿರುವ ಮುಕ್ತಮಾರ್ಗವನ್ನು ನಿರ್ಮಿಸಿದ ಪ್ರಥಮ ರಾಷ್ಟ್ರವೆನಿಸಿತು. ಆ ರಸ್ತೆಯು ಮಿಲಾನ್‌ನನ್ನು ಲೇಕ್ ಕೊಮೊಗೆ ಕೊಂಡಿ ಕಲ್ಪಿಸಿತು.[೩೭] ಇಟಲಿಯಲ್ಲಿ ಇದು ಆಟೋಸ್ಟ್ರೇಡಾ ಡೈ ಲಾಘಿ.ಎಂದು ಹೆಸರಾಗಿದೆ.

ಜರ್ಮನಿಯಲ್ಲಿ ಆಟೊಬಾಹನ್ಸ್ ಪ್ರಥಮ ಸೀಮಿತ-ಪ್ರವೇಶದ ಅತೀ ವೇಗದ ರಸ್ತೆ ಜಾಲವನ್ನು ವಿಶ್ವದಲ್ಲಿ ರಚಿಸಿತು. ಮೊದಲನೆ ವಿಭಾಗವು ಫ್ರಾಂಕ್‌ಫರ್ಟ್ ಆಮ್ ಮೇನ್‌ನಿಂದ ಡಾರ್ಮ್‌ಸ್ಟಾಡ್ ಓಪನಿಂಗ್‌ವರೆಗೆ 1935ರಲ್ಲಿ ರಚನೆಯಾಯಿತು. ಅಮೆರಿಕದಲ್ಲಿ ಪ್ರಥಮ ದೂರದ‌ ಗ್ರಾಮೀಣ ಮುಕ್ತಸಂಚಾರ ಮಾರ್ಗವನ್ನು ಸಾಮಾನ್ಯವಾಗಿ ಪೆನ್ಸಿಲ್ವೇನಿಯ ಸುಂಕದ ರಸ್ತೆ ಎಂದು ಪರಿಗಣಿಸಲಾಗಿದೆ.

ಇದು 1940ರ ಅಕ್ಟೋಬರ್ 1ರಂದು ಸಂಚಾರಕ್ಕೆ ಮುಕ್ತವಾಯಿತು.[೩೮] ಅಮೆರಿಕದಲ್ಲಿ ಅಂತರರಾಜ್ಯ ಹೆದ್ದಾರಿ ವ್ಯವಸ್ಥೆಯನ್ನು ಫೆಡರಲ್ ನೆರವಿನ ಹೆದ್ದಾರಿ ಕಾಯ್ದೆ,1956 ಮಂಜೂರಾತಿ ನೀಡಿದೆ.[೩೯] ಬಹುತೇರ ವ್ಯವಸ್ಥೆಯನ್ನು 1960 ಮತ್ತು 1990ರ ನಡುವೆ ಪೂರ್ತಿಮಾಡಲಾಯಿತು.

ಬಹುಹಾದಿ, ಬಹು ವಾಹನ ರಸ್ತೆ ಮುಕ್ತಮಾರ್ಗ

ಗ್ರಾಮೀಣ ವಿದ್ಯುದೀಕರಣ: ಇದು ಮೊಟಕಾದ ಬೆಳವಣಿಗೆ

ದೂರಸಂಪರ್ಕ: ಇದು ಮೊಟಕಾದ ಬೆಳವಣಿಗೆ

ಇವನ್ನೂ ನೋಡಿ

[ಬದಲಾಯಿಸಿ]
  • ವಿಮಾನನಿಲ್ದಾಣ ಮೂಲಸೌಕರ್ಯ
  • ಆಸ್ತಿ ನಿರ್ವಹಣೆ ಯೋಜನೆ
  • ನಿರ್ಣಾಯಕ ಮೂಲಸೌಕರ್ಯ
  • ಹಸಿರು ಮೂಲಸೌಕರ್ಯ
  • ಮೂಲಸೌಕರ್ಯ ಬಂಡವಾಳ
  • ಮೂಲಸೌಕರ್ಯ ಭದ್ರತೆ


  • ಭೂ ಸುಧಾರಣೆ
  • ಮೆಗಾಯೋಜನೆ
  • ಮಹಾಯೋಜನೆಗಳು ಮತ್ತು ಅಪಾಯ
  • ಸಾರ್ವಜನಿಕ ಸೇವೆಗಳು
  • ಜನೋಪಯೋಗಿ ಕೆಲಸಗಳು
  • ಹುಸಿ-ನಗರೀಕರಣ
  • ವ್ಯವಸ್ಥಾಪನ ಉದ್ಯಮ (ಸಾಮಾನು ಸರಂಜಾಮುಗಳನ್ನು ಸ್ಥಳದಿಂದ ಸ್ಥಳಕ್ಕೆ ಸಾಗಿಸುವ ವ್ಯವಸ್ಥೆ)

ಉಲ್ಲೇಖಗಳು

[ಬದಲಾಯಿಸಿ]
  1. ಮೂಲಸೌಕರ್ಯ, ಆನ್‌ಲೈನ್ ಕ್ಯಾಂಪ್ಯಾಕ್ಟ್ ಆಕ್ಸ್‌ಫರ್ಡ್ ಇಂಗ್ಲೀಷ್ ಡಿಕ್ಷನರಿ, http://www.askoxford.com/concise_oed/infrastructure Archived 2020-11-01 ವೇಬ್ಯಾಕ್ ಮೆಷಿನ್ ನಲ್ಲಿ. (ಜನವರಿ 17, ೨೦೦೯ ಮರುಸಂಪಾದಿಸಲಾಗಿದೆ)
  2. Sullivan, arthur (2003). Economics: Principles in action. Upper Saddle River, New Jersey 07458: Prentice Hall. p. 474. ISBN 0-13-063085-3. Archived from the original on 2016-12-20. Retrieved 2021-02-24. {{cite book}}: Unknown parameter |coauthors= ignored (|author= suggested) (help)CS1 maint: location (link)
  3. ಮೂಲಸೌಕರ್ಯ , American Heritage Dictionary of the English Language, https://education.yahoo.com/reference/dictionary/entry/ಮೂಲಸೌಕರ್ಯ Archived 2013-03-14 ವೇಬ್ಯಾಕ್ ಮೆಷಿನ್ ನಲ್ಲಿ. (accessed January 17, 2009)
  4. ಮೂಲಸೌಕರ್ಯ , JP1-02, ಡಿಪಾರ್ಟ್‌ಮೆಂಟ್ ಆಫ್ ಡಿಫೆನ್ಸ್ ಡಿಕ್ಷನರಿ ಆಫ್ ಮಿಲಿಟರಿ ಎಂಡ್ ಅಸೋಸಿಯೇಟೆಡ್ ಟರ್ಮ್ಸ್, p. 260, 12 ಏಪ್ರಿಲ್ 2001 (rev. 31 ಆಗಸ್ಟ್ 2005) http://www.dtic.mil/cgi-bin/GetTRDoc?AD=ADA439918&Location=U2&doc=GetTRDoc.pdf(accessed Archived 2020-11-18 ವೇಬ್ಯಾಕ್ ಮೆಷಿನ್ ನಲ್ಲಿ. January 17, 2009)
  5. ^ ಆನ್‌ಲೈನ್‌ ಎಟಿಮಾಲಜಿ ಡಿಕ್ಷ್‌‌ನರಿ. ಡೌಗ್ಲಾಸ್ ಹಾರ್ಪರ್, ಇತಿಹಾಸಜ್ಞ http://dictionary Archived 2013-07-12 ವೇಬ್ಯಾಕ್ ಮೆಷಿನ್ ನಲ್ಲಿ.. reference. com/browse/infrastructure (ಮರು ಸಂಪಾದನೆ: ಏಪ್ರಿಲ್ 24, 2008)
  6. ೬.೦ ೬.೧ http://www. opendb.net/element/19099.php
  7. ದಿ ಎಟಿಮೋಲಜಿ ಆಫ್ ಇನ್‌ಫ್ರಾಸ್ಟ್ರಕ್ಚರ್ ಎಂಡ್ ದಿ ಇನ್‌ಫ್ರಾಸ್ಟ್ರಕ್ಚರ್ ಆಫ್ ದಿ ಇಂಟರ್‌ನೆಟ್ , ಸ್ಟೀಫನ್ ಲೆವಿಸ್ ತಮ್ಮ ಬ್ಲಾಗ್Hag Pak Sak , ಸೆಪ್ಟೆಂಬರ್ 22, 2008ರಂದು ಪ್ರಕಟಿಸಲಾಗಿದೆ http://hakpaksak.wordpress.com/2008/09/22/the-etymology-of-infrastructure-and-the-infrastructure-of-the-internet/ (ಮರುಸಂಪಾದನೆ: ಜನವರಿ 17, 2008)
  8. ಇನ್‌ಫ್ರಾಸ್ಟ್ರಕ್ಚರ್ ಫಾರ್ ದಿ 21 ಸೆಂಚುರಿ , ವಾಷಿಂಗ್ಟನ್ , D.C.: ನ್ಯಾಷನಲ್ ಅಕಾಡೆಮಿ ಪ್ರೆಸ್, 1987.
  9. https://web.archive.org/web/20110703034727/http://129.3.20.41/eps/urb/papers/0506/0506002.pdf
  10. "ಆರ್ಕೈವ್ ನಕಲು" (PDF). Archived from the original (PDF) on 2004-05-04. Retrieved 2011-01-31.
  11. Grübler, Arnulf (1990). The Rise and Fall of Infrastructures: Dynamics of Evolution and Technological Change in Transport (PDF). Heidelberg and New York: Physica-Verlag. Archived from the original (PDF) on 2012-03-01. Retrieved 2011-01-31.
  12. ಅಸೋಸಿಯೇಷನ್ ಆಫ್ ಲೋಕಲ್ ಗವರ್ನ್‌ಮೆಂಟ್ ಎಂಜಿನಿಯರ್ಸ್ ನ್ಯೂಜಿಲೆಂಡ್: "", ಇನ್‌ಫ್ರಾಸ್ಟ್ರಕ್ಚರ್ ಅಸೆಟ ಮ್ಯಾನೇಜ್‌ಮೆಂಟ್ ಮ್ಯಾನ್ಯುಯೆಲ್ ಜೂನ್ 1998 - ಆವೃತ್ತಿ 1.1
  13. D.O.D. ಡಿಕ್ಷನರಿ ಆಫ್ ಮಿಲಿಟರಿ ಎಂಡ್ ಅಸೋಸಿಯೇಟೆಡ್ ಟರ್ಮ್ಸ್ 2001 (rev. 2005)
  14. ದಿ ಕನ್ಸರ್ವೇಷನ್ ಫಂಡ್, ಆರ್ಲಿಂಗ್‌ಟನ್ VA." Archived 2013-01-17 ವೇಬ್ಯಾಕ್ ಮೆಷಿನ್ ನಲ್ಲಿ.ಗ್ರೀನ್ ಇನ್‌ಫ್ರಾಸ್ಟ್ರಕ್ಚರ್." Archived 2013-01-17 ವೇಬ್ಯಾಕ್ ಮೆಷಿನ್ ನಲ್ಲಿ. ಮರುಸಂಪಾದಿಸಲಾಗಿದೆ 2009-10-06.
  15. ಮೆರಿಲ್ಯಾಂಡ್ ಡಿಪಾರ್ಟ್ಮೆಂಟ್ ಆಫ್ ನ್ಯಾಚುರಲ್ ರಿಸೋರ್ಸೆಸ್, ಅನ್ನಪೋಲಿಸ್, MD. ಮೆರಿಲ್ಯಾಂಡ್ಸ್ ಗ್ರೀನ್ ಇನ್‌ಫ್ರಾಸ್ಟ್ರಕ್ಚರ್ ಅಸ್ಸೆಸ್‌ಮೆಂಟ್: ಎ ಕಾಂಪ್ರೆಹೆನ್ಸಿವ್ ಸ್ಟ್ರಾಟಜಿ ಫಾರ್ ಲ್ಯಾಂಡ್ ಕನ್ಸರ್ವೇಷನ್ ಅಂಡ್ ರಿಸ್ಟೋರೇಷನ್. Archived 2008-03-09 ವೇಬ್ಯಾಕ್ ಮೆಷಿನ್ ನಲ್ಲಿ. ಮೇ 2003
  16. U.S. ಎನ್‌ವೈರಾನ್‌ಮೆಂಟಲ್ ಪ್ರೊಟೆಕ್ಷನ್ ಏಜೆನ್ಸಿ (EPA), ವಾಷಿಂಗ್ಟನ್, D.C., et al., ಗ್ರೀನ್ ಇನ್‌ಫ್ರಾಸ್ಟ್ರಕ್ಚರ್ ಸ್ಟೇಟ್‌ಮೆಂಟ್ ಆಫ್ ಇಂಟೆಂಟ್ 2007-04-19.
  17. EPA et al. "ಮ್ಯಾನೇಜಿಂಗ್ ವೆಟ್ ವೆದರ್ ವಿತ್ ಗ್ರೀನ್ ಇನ್‌ಫ್ರಾಸ್ಟ್ರಕ್ಚರ್: ಆಕ್ಷನ್ ಸ್ಟ್ರಾಟಜಿ 2008." ಜನವರಿ, 2008
  18. http://www.anthrobase.com/Dic/eng/pers/marx_karl.htm (ಸಂಪಾದಿಸಲಾಗಿದೆ ಜನವರಿ 9, 2011)
  19. ಲ್ಯಾಂಡ್ ಇಂಪ್ರೂವ್‌ಮೆಂಟ್ , Online BusinessDictionary.com, http://www.businessdictionary.com/definition/land-development.html Archived 2010-05-26 ವೇಬ್ಯಾಕ್ ಮೆಷಿನ್ ನಲ್ಲಿ. (ಸಂಪಾದಿಸಲಾಗಿದೆ ಜನವರಿ 31, 2009)
  20. ಲ್ಯಾಂಡ್ ಡೆವಲಪ್‌ಮೆಂಟ್ , Online BusinessDictionary.com, http://www.businessdictionary.com/definition/land-development.html Archived 2010-05-26 ವೇಬ್ಯಾಕ್ ಮೆಷಿನ್ ನಲ್ಲಿ. (ಸಂಪಾದಿಸಲಾಗಿದೆ ಜನವರಿ 31, 2009)
  21. "ಮನಿ ಫಾರ್ ಪಬ್ಲಿಕ್ ಪ್ರಾಜೆಕ್ಟ್ಸ್" ದಿ ನ್ಯೂಯಾರ್ಕ್ ಟೈಮ್ಸ್ ನವೆಂಬರ್ 19,2008 http://www.nytimes Archived 2013-07-11 ವೇಬ್ಯಾಕ್ ಮೆಷಿನ್ ನಲ್ಲಿ.. com/imagepages/2008/11/19/business/economy/19leonhardt_graphic.ready.html (ಸಂಪಾದಿಸಲಾಗಿದೆ ಜನವರಿ 26, 2009)
  22. ಕೀನ್ಸ್, ಜಾನ್ ಮೇನಾರ್ಡ್ (2007) [1936]. ದಿ ಜನರಲ್ ಥಿಯರಿ ಆಫ್ ಎಂಪ್ಲಾಯ್‌ಮೆಂಟ್, ಇಂಟರೆಸ್ಟ್ ಎಂಡ್ ಮನಿ ಬಾಸಿಂಗ್‌ಸ್ಟೋಕ್, ಹ್ಯಾಂಪ್‌ಶೈರ್: ಪಾಲ್‌ಗ್ರೇವ್ ಮೆಕ್‌ಮಿಲನ್ ISBN 0230004768 http://cepa.newschool.edu/het/essays/keynes/keynescont.htm Archived 2009-03-16 ವೇಬ್ಯಾಕ್ ಮೆಷಿನ್ ನಲ್ಲಿ..
  23. ಲೇ, M G (1992 ). ವೇಸ್ ಆಫ್ ದಿ ವರ್ಲ್ಡ್ ಸಿಡ್ನಿ: ಪ್ರೈಮಾವೆರಾ ಪ್ರೆಸ್. pp. 401. ಐಎಸ್‌ಬಿಎನ್‌ 1-55709-471-3
  24. ೨೪.೦ ೨೪.೧ ಲೇ (1992)
  25. Dr. Kasem Ajram (1992). The Miracle of Islam Science (2nd ed.). Knowledge House Publishers. ISBN 0-911119-43-4.
  26. Rodda 2004, p. 161.
  27. Hadfield 1986, p. 16.
  28. Needham 1971, p. 269.
  29. britanni ca .com/eb/article-9001800 "John Blenkinsop". Encyclopedia Brittanica. Retrieved 2007-09-10. {{cite web}}: Check |url= value (help)
  30. schoolnet.co. uk/RAliverpool.htm "Liverpool and Manchester". Retrieved 2007-09-19. {{cite web}}: Check |url= value (help)
  31. Ambrose, Stephen E. (2000). Nothing Like It In The World; The men who built the Transcontinental Railroad 1863–1869. Simon & Schuster. ISBN 0-684-84609-8.
  32. ದಿ ಎಲೆಕ್ಟ್ರಿಕ್ ಟೆಲಿಗ್ರಾಪ್, ಫೋರ್‌ರನ್ನರ್ ಆಫ್ ದಿ ಇಂಟರ್‌ನೆಟ್, ಸೆಲಿಬ್ರೇಟ್ಸ್ 170 ಇಯರ್ಸ್ BT ಗ್ರೂಪ್ ಕನೆಕ್ಟೆಡ್ ಅರ್ಥ್ ಆನ್‌ಲೈನ್ ಮ್ಯೂಸಿಯಂ ಮರುಸಂಪಾದಿಸಲಾಗಿದೆ. ಜುಲೈ 2008
  33. David Oakes Woodbury (1949). txt A Measure for Greatness: A Short Biography of Edward Weston. McGraw-Hill. p. 83. Retrieved 2009-01-04. {{cite book}}: Check |url= value (help)
  34. John Patrick Barrett (1894). Electricity at the Columbian Exposition. R. R. Donnelley & sons company. p. 1. Retrieved 2009-01-04.
  35. Engineers, Institution of Electrical (1880-03-24). "Notes on the Jablochkoff System of Electric Lighting". Journal of the Society of Telegraph Engineers. IX (32): 143. Retrieved 2009-01-07.
  36. ಬ್ಯೂರೊ ಆಫ್ ಸೆನ್ಸಸ್ ಡಾಟಾ ರಿಪ್ರೆಂಟೆಡ್ ಇನ್ ಹಗೆಸ್, pp. 282–283
  37. ಪಾಲ್ ಹಾಫ್‌ಮನ್, "ಟೇಕಿಂಗ್ ಟು ದಿ ಹೈವೇ ಇನ್ ಇಟಲಿ", ನ್ಯೂ ಯಾರ್ಕ್ ಟೈಮ್ಸ್ , 26 ಏಪ್ರಿಲ್ 1987, 23.
  38. ಫಿಲ್ ಪ್ಯಾಟ್ಟನ್, ದಿ ಓಪನ್ ರೋಡ್: ಎ ಸೆಲಿಬ್ರೇಷನ್ ಆಫ್ ಅಮೆರಿಕನ್ ಹೈವೇ (ನ್ಯೂಯಾರ್ಕ್:ಸೈಮನ್ & ಸ್ಕಸ್ಟರ್, 1986), 77.
  39. "The cracks are showing". The Economist. 2008-06-26. Retrieved 2008-10-23. {{cite news}}: Italic or bold markup not allowed in: |publisher= (help)


ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Infrastructure