ಸುಯೆಜ್ ಕಾಲುವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಯೆಜ್ ಕಾಲುವೆಯ ಎಲ್ ಬಾಲಾ ದಲ್ಲಿ ನಿಂತಿರುವ ಹಡಗುಗಳು

ಸುಯೆಜ್ ಕಾಲುವೆ, ಕೆಂಪು ಸಮುದ್ರದ ಸುಯೆಜ್ ಮತ್ತು ಮೆಡಿಟರೇನಿಯನ್ ಸಮುದ್ರದ ಸಯೀದ್ ಬಂದರಿನ ನಡುವೆ ಸಂಪರ್ಕ ಕಲ್ಪಿಸುವ ಒಂದು ಮಹಾಕಾಲುವೆ. ಇದು ಈಜಿಪ್ಟ್ ದೇಶದಲ್ಲಿದೆ - ಸೈನಾಯಿ ಜಂಬೂದ್ವೀಪದ ಪಶ್ಚಿಮಕ್ಕಿದ್ದು ೧೬೩ ಕಿಮೀ ಉದ್ದವಿದೆ. ಇದರ ಅಗಲ ಅತ್ಯಂತ ಕಡಿಮೆ ಇರುವ ಸ್ಥಳದಲ್ಲಿ ೩೦೦ ಮೀ ಅಗಲವಿದೆ.

ಈ ಕಾಲುವೆಯಿಂದ ಏಷ್ಯಾ ಮತ್ತು ಯೂರೋಪ್ ಖಂಡಗಳ ನಡುವೆ ಪಯಣಿಸುವ ಹಡಗುಗಳು ಆಫ್ರಿಕಾ ಖಂಡದ ಸುತ್ತ ಹೋಗಬೇಕಾಗದೆ ನೇರವಾಗಿ ಹೋಗುವ ಅವಕಾಶವನ್ನು ಪಡೆದಿವೆ. ೧೮೬೯ ರಲ್ಲಿ ಈ ಕಾಲುವೆಯನ್ನು ತೆರವು ಮಾಡಲಾಯಿತು. ಇದಕ್ಕೆ ಮೊದಲು ಹಡಗುಗಳು ಸುಯೆಜ್ ವರೆಗೂ ಸಾಮಾನುಗಳನ್ನು ತೆಗೆದುಕೊಂಡು ಹೋಗಿ ಅಲ್ಲಿಂದ ಸಾಮಾನುಗಳನ್ನು ಸಯೀದ್ ಬಂದರಿನ ವರೆಗೆ ಭೂಮಾರ್ಗದಲ್ಲಿ ತೆಗೆದುಕೊಂಡು ಹೋಗಿ ಬೇರೊಂದು ಹಡಗಿನಲ್ಲಿ ಯೂರೋಪಿಗೆ ಒಯ್ಯಲಾಗುತ್ತಿತ್ತು.

ಇತಿಹಾಸ[ಬದಲಾಯಿಸಿ]

ನೈಲ್-ಕೆಂಪು ಸಮುದ್ರದ ಕಾಲುವೆಗಳು ಆಧುನಿಕ ವೆಸ್ಟ್-ಈಸ್ಟ್ ಕಾಲುವೆಗಳನ್ನು ನೈಲ್ ನದಿ ಹಾಗು ಕೆಂಪು ಸಮುದ್ರದ ಮಧ್ಯ ದಾರಿ ಕಲ್ಪಿಸಲು ನಿರ್ಮಾಣ ಮಾಡಿದ್ದರು.

ಸುಯೆಜ್ ಕಾಲುವೆಯ ಕರಡು ಚಿತ್ರ