ಹಣಕಾಸು ಸೇವೆಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಹಣಕಾಸು ಸೇವೆ ಗಳು ಹಣಕಾಸು ಉದ್ಯಮವು ಒದಗಿಸುವ ಸೇವೆಗಳಾಗಿವೆ. ಹಣಕಾಸು ಉದ್ಯಮವು ಹಣದ ನಿರ್ವಹಣೆಯಲ್ಲಿ ವ್ಯವಹರಿಸುವ ವಿಶಾಲ ವ್ಯಾಪ್ತಿಯ ಸಂಸ್ಥೆಗಳನ್ನು ಒಳಗೊಂಡಿದೆ. ಬ್ಯಾಂಕ್‌ಗಳು, ಕ್ರೆಡಿಟ್‌ ಕಾರ್ಡ್‌ ಸಂಸ್ಥೆಗಳು, ವಿಮಾ ಸಂಸ್ಥೆಗಳು, ಗ್ರಾಹಕ ಹಣಕಾಸು ಸಂಸ್ಥೆಗಳು, ಷೇರು ದಲ್ಲಾಳಿಸಂಸ್ಥೆಗಳು, ಬಂಡವಾಳ ಹೂಡಿಕೆ ನಿಧಿಗಳು ಮತ್ತು ಕೆಲವು ಸರಕಾರಿ ಪ್ರಾಯೋಜಕತ್ವದ ಉದ್ಯಮಗಳ ಹಣಕಾಸು ಸೇವೆಗಳನ್ನು ಒದಗಿಸುತ್ತವೆ. 2004ರ ಅಂಕಿಅಂಶದ ಪ್ರಕಾರ, ಹಣಕಾಸು ಸೇವಾ ಉದ್ಯಮವು ಅಮೆರಿಕಾದಲ್ಲಿ S&P 500ಮಾರುಕಟ್ಟೆ ಬಂಡವಾಳದ 20%ರಷ್ಟನ್ನು ಪ್ರತಿನಿಧಿಸುತ್ತಿದೆ.[೧]

ಹಣಕಾಸು ಸೇವೆಗಳ ಇತಿಹಾಸ[ಬದಲಾಯಿಸಿ]

ಅಮೆರಿಕಾದಲ್ಲಿ[ಬದಲಾಯಿಸಿ]

1990ರ ಕೊನೆಯ ಅವಧಿಯಲ್ಲಿ ಪರಿಚಯಿಸಿದ ಗ್ರಾಮ್‌-ಲೀಚ್‌-ಬಿಲಿಲೆ ಕಾಯಿದೆಯಿಂದಾಗಿ, ಅಮೆರಿಕಾದಲ್ಲಿ "ಹಣಕಾಸು ಸೇವೆಗಳು" ಇನ್ನಷ್ಟು ಪ್ರಚಲಿತಕ್ಕೆ ಬಂದವು. ಈ ಕಾಯಿದೆಯಿಂದಾಗಿ ಆ ಸಮಯದಲ್ಲಿ U.S. ಹಣಕಾಸು ಸೇವಾ ಉದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಸ್ಥೆಗಳು ವಿಲೀನವಾಗಲು ಸಾಧ್ಯವಾಯಿತು.[ಸಾಕ್ಷ್ಯಾಧಾರ ಬೇಕಾಗಿದೆ] ಸಂಸ್ಥೆಗಳು ಹೆಚ್ಚಾಗಿ ಈ ಹೊಸ ಪ್ರಕಾರದ ವ್ಯವಹಾರಕ್ಕೆ ಎರಡು ರೀತಿಯ ವಿಧಾನಗಳನ್ನು ಹೊಂದಿದ್ದವು. ಒಂದನೇ ವಿಧಾನದಂತೆ ಬ್ಯಾಂಕುಗಳು ವಿಮಾ ಸಂಸ್ಥೆ ಅಥವಾ ಬಂಡವಾಳ ಹೂಡಿಕೆ ಬ್ಯಾಂಕ್‌ ಅನ್ನು ಖರೀದಿಸುವುದು, ಅವುಗಳ ಮೂಲ ಬ್ರ್ಯಾಂಡ್‌ಗಳನ್ನು ತನ್ನಲ್ಲಿರಿಸಿಕೊಳ್ಳುವುದು ಮತ್ತು ತನ್ನ ಗಳಿಕೆಗಳನ್ನು ವೈವಿಧ್ಯಗೊಳಿಸಲು ತನ್ನ ಹಿಡುವಳಿ ಸಂಸ್ಥೆಗೆ ಸ್ವಾಧೀನವನ್ನು ಸೇರಿಸುವುದು. U.S. ಹೊರಗೆ (ಉದಾ.,ಜಪಾನ್‌ನಲ್ಲಿ) ಹಣಕಾಸೇತರ ಸೇವಾ ಸಂಸ್ಥೆಗಳಿಗೆ ಹಿಡುವಳಿ ಸಂಸ್ಥೆಯೊಳಗೆ ಸೇರಲು ಅನುಮತಿಸಲಾಗುತ್ತದೆ. ಈ ಸಂದರ್ಭದಲ್ಲಿ, ಪ್ರತಿಯೊಂದು ಸಂಸ್ಥೆಯು ಸ್ವತಂತ್ರವಾಗಿರುವಂತೆ ಮತ್ತು ತನ್ನದೇ ಆದ ಗ್ರಾಹಕರನ್ನು ಹೊಂದಿರುವಂತೆ ಕಾಣುವುದು. ಇನ್ನೊಂದು ರೀತಿಯಲ್ಲಿ ಬ್ಯಾಂಕ್‌ ತನ್ನ ಸ್ವಂತ ದಲ್ಲಾಳಿ ಮತ್ತು ವಿಮೆ ವಿಭಾಗವನ್ನು ರಚಿಸಿ, ಒಂದೇ ಕಂಪೆನಿಯೊಂದಿಗೆ ಎಲ್ಲ ವಸ್ತುಗಳನ್ನು ವಿಲೀನ ಮಾಡಿದ್ದಕ್ಕಾಗಿ ಪ್ರೋತ್ಸಾಹಕಗಳೊಂದಿಗೆ, ತನ್ನ ಪ್ರಸಕ್ತ ಗ್ರಾಹಕರಿಗೆ ಎಲ್ಲ ಉತ್ಪನ್ನಗಳನ್ನು ಮಾರಲು ಪ್ರಯತ್ನಿಸುತ್ತದೆ.

ಬ್ಯಾಂಕ್‌ಗಳು[ಬದಲಾಯಿಸಿ]

Main article: Bank

"ವಾಣಿಜ್ಯ ಬ್ಯಾಂಕ್‌ಗಳನ್ನು" ಸಾಮಾನ್ಯವಾಗಿ "ಬ್ಯಾಂಕ್‌" ಎಂದು ಕರೆಯಲಾಗುತ್ತದೆ. "ಬಂಡವಾಳ ಹೂಡಿಕೆ ಬ್ಯಾಂಕಿನಿಂದ" ಈ ಪ್ರಕಾರದ ಬ್ಯಾಂಕುಗಳನ್ನು ಪ್ರತ್ಯೇಕಿಸುವುದಕ್ಕಾಗಿ, "ವಾಣಿಜ್ಯ" ಎಂಬ ಪದವನ್ನು ಬಳಸಲಾಗುತ್ತಿದೆ. ಇವುಗಳು ಹಣಕಾಸು ಸೇವೆಗಳನ್ನು ಒದಗಿಸುವ ಸಂಸ್ಥೆಯಾಗಿದ್ದು,ವ್ಯಾಪಾರಕ್ಕೆ ನೇರವಾಗಿ ಹಣವನ್ನು ಸಾಲವಾಗಿ ನೀಡುವ ಬದಲಿಗೆ ಸಾಲಪತ್ರಗಳು (ಬಾಂಡುಗಳು) ಅಥವಾ ಷೇರು (ಷೇರು ಬಂಡವಾಳ) ಮೂಲಕ ಉದ್ಯಮಗಳು ಇತರೆ ಸಂಸ್ಥೆಗಳಿಂದ ಬಂಡವಾಳವನ್ನು ಶೇಖರಿಸಲು ಸಹಾಯವನ್ನು ಮಾಡುತ್ತವೆ.

ಬ್ಯಾಂಕಿಂಗ್‌ ಸೇವೆಗಳು[ಬದಲಾಯಿಸಿ]

ಬ್ಯಾಂಕುಗಳ ಪ್ರಾಥಮಿಕ ಕಾರ್ಯಚರಣೆಗಳೆಂದರೆ:

 • ಹಣವನ್ನು ಸುರಕ್ಷಿತವಾಗಿರಿಸಿ, ಬೇಕಾದಾಗ ಹಿಂತೆಗೆದುಕೊಳ್ಳುವ ಸೌಲಭ್ಯವನ್ನು ಒದಗಿಸುವುದು
 • ಚೆಕ್‌ ಪುಸ್ತಕಗಳ ವಿತರಣೆ. ಇದರಿಂದಾಗಿ ಬಿಲ್ಲುಗಳನ್ನು ಪಾವತಿಸಬಹುದು, ಅಲ್ಲದೆ ಇತರ ಪ್ರಕಾರದ ಪಾವತಿಗಳನ್ನು ಅಂಚೆಯ ಮೂಲಕ ರವಾನಿಸಬಹುದು.
 • ವೈಯಕ್ತಕ ಸಾಲಗಳು, ವಾಣಿಜ್ಯ ಸಾಲಗಳು, ಮತ್ತು ಅಡಮಾನ ಸಾಲಗಳನ್ನು (ಮನೆ, ಆಸ್ತಿ ಅಥವಾ ವ್ಯವಹಾರವನ್ನು ಖರೀದಿಸಲು) ಒದಗಿಸುವುದು
 • ಕ್ರೆಡಿಟ್‌ ಕಾರ್ಡ್‌ಗಳ ವಿತರಣೆ ಮತ್ತು ಕ್ರೆಡಿಟ್‌ ಕಾರ್ಡ್‌ ವ್ಯವಹಾರಗಳು ಮತ್ತು ಬಿಲ್ಲಿಂಗ್‌ನ ಪ್ರಕ್ರಿಯೆ
 • ಚೆಕ್‌ಗಳಿಗೆ ಬದಲಿಯಾಗಿ ಬಳಸಲು ಡೆಬಿಟ್‌ ಕಾರ್ಡ್‌ಗಳ ವಿತರಣೆ
 • ಶಾಖೆಗಳಲ್ಲಿ ಅಥವಾ ಆಟೋಮೇಟಿಕ್‌ ಟೆಲ್ಲರ್‌ ಯಂತ್ರ ಗಳನ್ನು (ATMs) ಬಳಸುವ ಮೂಲಕ ಹಣಕಾಸು ವ್ಯವಹಾರಗಳ ಸೌಲಭ್ಯ ಒದಗಿಸುವುದು
 • ಬ್ಯಾಂಕುಗಳ ನಡುವೆ ನಿಧಿಗಳ ತಂತಿ ವರ್ಗಾವಣೆ ಮತ್ತು ವಿದ್ಯುನ್ಮಾನ ನಿಧಿ ವರ್ಗಾವಣೆ ಸೌಲಭ್ಯವನ್ನು ಒದಗಿಸುವುದು
 • ಕಾಯಂ ಆದೇಶಗಳು ಮತ್ತು ನೇರ ಡೆಬಿಟ್‌ಗಳ ಸೌಲಭ್ಯಗಳನ್ನು ಒದಗಿಸುವುದು. ಹೀಗಾಗಿ ಬಿಲ್ಲುಗಳಿಗೆ ಪಾವತಿಯನ್ನು ಸ್ವಯಂಚಾಲಿತವಾಗಿ ಮಾಡಬಹುದಾಗಿದೆ.
 • ಗ್ರಾಹಕರ ಚಾಲ್ತಿ ಖಾತೆಯ ಮಾಸಿಕ ಖರ್ಚಿನ ಬದ್ಧತೆಗಳನ್ನು ಭರಿಸಲು, ಬ್ಯಾಂಕ್‌ ತನ್ನ ಹಣದೊಂದಿಗೆ ತಾತ್ಕಾಲಿಕ ಮುಂಗಡವಾಗಿ ಒವರ್‌ಡ್ರ್ಯಾಫ್ಟ್‌ ಒಪ್ಪಂದಗಳ ಸೌಲಭ್ಯವನ್ನು ಒದಗಿಸುವುದು.
 • ಮಾಸಿಕವಾಗಿ ಸಾಲವನ್ನು ಮರುಪಾವತಿಸಲು ಬಯಸುವ ಗ್ರಾಹಕರಿಗೆ ಬ್ಯಾಂಕ್‌ಗಳು ತಮ್ಮದೆ ಹಣದಿಂದ ಚಾರ್ಚ್‌ ಕಾರ್ಡ್‌ ಮುಂಗಡಗಳನ್ನು ಒದಗಿಸುವುದು.
 • ಬ್ಯಾಂಕ್‌ ಸ್ವತಃ ಖಾತರಿಪಡಿಸಿದ ಮತ್ತು ಗ್ರಾಹಕರು ಪೂರ್ವಭಾವಿಯಾಗಿ ನೀಡುವ ಕ್ಯಾಷಿಯರ್‌ ಚೆಕ್‌ ಅಥವಾ ಪ್ರಮಾಣಿತ ಚೆಕ್‌ಗಳನ್ನು ಒದಗಿಸುವುದು.
 • ಹಣಕಾಸು ಮತ್ತು ಇತರ ದಾಖಲೆಗಳಿಗಾಗಿ ನೋಟರಿ ಸೇವೆ

ಬ್ಯಾಂಕು ಸೇವೆಗಳ ಇತರ ಪ್ರಕಾರಗಳು[ಬದಲಾಯಿಸಿ]

 • ಖಾಸಗಿ ಬ್ಯಾಂಕಿಂಗ್‌ - ಖಾಸಗಿ ಬ್ಯಾಂಕ್‌ಗಳು ವಿಶೇಷವಾಗಿಮೇಲ್ಮಟ್ಟದ ನಿವ್ವಳ ಅರ್ಹತೆಯ ವ್ಯಕ್ತಿಗಳಿಗೆ ಪ್ರತ್ಯೇಕವಾಗಿ ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸುವುದು. ಹಲವು ಹಣಕಾಸು ಸೇವಾ ಸಂಸ್ಥೆಗಳಿಂದ ಖಾಸಗಿ ಬ್ಯಾಂಕಿಂಗ್‌ ಸೇವೆಗಳಿಗೆ ಅರ್ಹತೆ ಹೊಂದಲು ವ್ಯಕ್ತಿ ಅಥವಾ ಕುಟುಂಬವು ಕೆಲವು ಕನಿಷ್ಟ ನಿವ್ವಳ ಆರ್ಥಿಕ ಅರ್ಹತೆಯನ್ನು ಹೊಂದಿರಬೇಕು.[೨] ಸಾಮಾನ್ಯ ಚಿಲ್ಲರೆ ಬ್ಯಾಂಕುಗಳಿಗಿಂತ ಖಾಸಗಿ ಬ್ಯಾಂಕ್‌ಗಳು ಸಂಪತ್ತಿನ ನಿರ್ವಹಣೆ ಮತ್ತು ತೆರಿಗೆ ಯೋಜನೆಯಂತಹ ಹೆಚ್ಚು ವೈಯಕ್ತಿಕ ಸೇವೆಗಳನ್ನು ಒದಗಿಸುವುದು.[೩]
 • ಬಂಡವಾಳ ಮಾರುಕಟ್ಟೆ ಬ್ಯಾಂಕ್‌ - ಸಾಲಪತ್ರಗಳು ಮತ್ತು ಷೇರು ಖರೀದಿ ಒಪ್ಪಂದದಾರ ಬ್ಯಾಂಕ್‌ ಆಗಿದೆ. ಇದು ಕಂಪನಿಯ ವ್ಯವಹಾರಗಳಿಗೆ (ಸಲಹಾ ಸೇವೆಗಳು, ಖಾತರಿ ಮತ್ತು ಸಲಹಾ ಶುಲ್ಕಗಳು) ಸಹಾಯವನ್ನು ಮಾಡುವುದು ಮತ್ತು ವ್ಯವಸ್ಥಿತ ಹಣಕಾಸಿನ ಉತ್ಪನ್ನಗಳಲ್ಲಿ ಸಾಲವನ್ನು ಪುನರ್ರಚಿಸುವುದು.
 • ಕ್ರೆಡಿಟ್‌ ಕಾರ್ಡ್‌ಗಳು ಮತ್ತು ಡೆಬಿಟ್‌ ಕಾರ್ಡ್‌ಗಳು ಸೇರಿದಂತೆ ಬ್ಯಾಂಕ್‌ ಕಾರ್ಡ್‌ಗಳು. ಬ್ಯಾಂಕ್‌ ಆಫ್‌ ಅಮೆರಿಕಾವು ಅತಿ ಹೆಚ್ಚು ಬ್ಯಾಂಕ್‌ ಕಾರ್ಡ್‌ಗಳನ್ನು ವಿತರಿಸಿದ ಬ್ಯಾಂಕ್‌ ಆಗಿದೆ.[ಸಾಕ್ಷ್ಯಾಧಾರ ಬೇಕಾಗಿದೆ]
 • ಕ್ರೆಡಿಟ್‌ ಕಾರ್ಡ್‌ ಯಂತ್ರ ಸೇವೆಗಳು ಮತ್ತು ಜಾಲಗಳು - ಕ್ರೆಡಿಟ್‌ ಕಾರ್ಡ್‌ ಯಂತ್ರ ಒದಗಿಸುವ ಮತ್ತು ಪಾವತಿ ಜಾಲಗಳನ್ನು ಹೊಂದಿರುವ ಸಂಸ್ಥೆಗಳನ್ನು "ವ್ಯಾಪಾರಿ ಕಾರ್ಡ್‌ ಒದಗಿಸುವವರು" ಎಂದು ಕರೆಯುವರು.

ವಿದೇಶಿ ವಿನಿಮಯ ಸೇವೆಗಳು[ಬದಲಾಯಿಸಿ]

ಜಗತ್ತಿನ ಹೆಚ್ಚಿನ ಬ್ಯಾಂಕ್‍‌‌ಗಳು ವಿದೇಶಿ ವಿನಿಮಯ ಸೇವೆಗಳನ್ನು ಒದಗಿಸುತ್ತವೆ. ವಿದೇಶಿ ವಿನಿಮಯ ಸೇವೆಗಳು ಈ ಕೆಳಗಿನವುಗಳನ್ನು ಒಳಗೊಂಡಿದೆ:

 • ಕರೆನ್ಸಿ ವಿನಿಮಯ - ಗ್ರಾಹಕರು ವಿದೇಶಿ ಕರೆನ್ಸಿಯನ್ನು ಖರೀದಿಸಬಹುದು ಮತ್ತು ಮಾರಾಟ ಮಾಡಬಹುದು.
 • ತಂತಿಯ ಮೂಲಕ ಹಣದ ವರ್ಗಾವಣೆ - ಗ್ರಾಹಕನು ವಿದೇಶದಲ್ಲಿರುವ ಅಂತಾರಾಷ್ಟ್ರೀಯ ಬ್ಯಾಂಕುಗಳಿಗೆ ನಿಧಿಗಳನ್ನು ಕಳುಹಿಸಬಹುದು.
 • ವಿದೇಶಿ ಕರೆನ್ಸಿ ಬ್ಯಾಂಕಿಂಗ್‌ - ವಿದೇಶಿ ಕರೆನ್ಸಿಯಿಂದ ಬ್ಯಾಂಕಿಂಗ್‌ ವ್ಯವಹಾರಗಳನ್ನು ಮಾಡುವುದು

ಬಂಡವಾಳ ಹೂಡಿಕೆ ಸೇವೆಗಳು[ಬದಲಾಯಿಸಿ]

 • ಆಸ್ತಿ ನಿರ್ವಹಣೆ - ಸಂಚಿತ ಬಂಡವಾಳ ಹೂಡಿಕೆ ನಿಧಿಗಳನ್ನು ನಿರ್ವಹಿಸುವ ಸಂಸ್ಥೆಗಳನ್ನು ವಿವರಿಸಲು ಬಳಸುವ ಪದವಾಗಿದೆ.
 • ಭದ್ರತಾ ನಿಧಿ ನಿರ್ವಹಣೆ - ಪ್ರಮುಖ ಬಂಡವಾಳ ಹೂಡಿಕೆ ಬ್ಯಾಂಕುಗಳಲ್ಲಿ ಅವರ ವ್ಯವಹಾರವನ್ನು ಕಾರ್ಯಗತಗೊಳಿಸಲು "ಪ್ರಮುಖ ದಲ್ಲಾಳಿ" ವಿಭಾಗಗಳ ಸೇವೆಗಳನ್ನು ಭದ್ರತಾ ನಿಧಿ ಆಗಾಗ್ಗೆ ಬಳಸಿಕೊಳ್ಳುತ್ತದೆ.
 • ಸುರಕ್ಷತೆಯ ಸೇವೆಗಳು - ವಿಶ್ವದ ಸಾಲಪತ್ರಗಳ ವ್ಯಾಪಾರಗಳನ್ನು ಸುರಕ್ಷಿತವಾಗಿ ಇಡುವುದು ಹಾಗೂ ಪ್ರಕ್ರಿಯೆಗೊಳಿಸುವುದು ಮತ್ತು ಸಂಬಂಧಿಸಿದ ಪೋರ್ಟ್‌ಪೋಲಿಯೊಗಳಿಗೆ ಸೇವೆಗಳನ್ನು ನೀಡುವುದು. ವಿಶ್ವದ ರಕ್ಷಣೆಯಡಿಯಲ್ಲಿರುವ ಆಸ್ತಿಗಳ ಮೌಲ್ಯವನ್ನು $100 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.[೪]

ವಿಮೆ[ಬದಲಾಯಿಸಿ]

 • ವಿಮಾ ದಲ್ಲಾಳಿ - ವಿಮಾ ದಲ್ಲಾಳಿಗಳು ಗ್ರಾಹಕರ ಪರವಾಗಿ ವಿಮೆಗಳ ವ್ಯವಹಾರ (ಸಾಮಾನ್ಯವಾಗಿ ಸಂಸ್ಥೆಯ ಆಸ್ತಿ ಮತ್ತು ಅಪಘಾತ ವಿಮೆ) ನಡೆಸುತ್ತಾರೆ. ಇತ್ತೀಚೆಗೆ ಹಲವಾರು ವೆಬ್‌ಸೈಟ್‌ಗಳು ವಿಮೆಯಂತಹ ಸೇವೆಗಳಿಗೆ ಮೂಲ ಬೆಲೆ ಹೋಲಿಕೆಗಳ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿರುವುದರಿಂದ, ಉದ್ಯಮದಲ್ಲಿ ವಿವಾದವನ್ನು ಸೃಷ್ಟಿಸಿದೆ.[೫]
 • ವಿಮಾ ಖರೀದಿ ಒಳಒಪ್ಪಂದ - ವೈಯಕ್ತಿಕ ವಿಮಾ ಒಳಒಪ್ಪಂದದಾರರು ವಾಸ್ತವವಾಗಿ ಒಬ್ಬ ವ್ಯಕ್ತಿಗೆ ವಿಮೆಯನ್ನು ಖರೀದಿಸುವ ಒಪ್ಪಂದ ಮಾಡಿಕೊಳ್ಳುತ್ತಾರೆ. ಮುಖ್ಯವಾಗಿ ಏಜಂಟರು ವಿಮಾ ದಲ್ಲಾಳಿಗಳು ಮತ್ತು ಷೇರು ದಲ್ಲಾಳಿಗಳ ಮೂಲಕ ಈ ಸೇವೆಯನ್ನು ಇಂದಿಗೂ ನೀಡಲಾಗುತ್ತಿದೆ. ವಿಮಾ ಖರೀದಿ ಒಪ್ಪಂದದಾರರು ಉದ್ಯಮಗಳಿಗೆ ಇದೇ ತರಹದ ವಾಣಿಜ್ಯ ಮಾದರಿಗಳಲ್ಲಿ ವಿಮೆರಕ್ಷಣೆಯನ್ನು ಕೂಡ ನೀಡುತ್ತಾರೆ. ಇವುಗಳ ಚಟುವಟಿಕೆಗಳಲ್ಲಿ ವಿಮೆ ಮತ್ತು ವರ್ಷಾಶನ, ಜೀವ ವಿಮೆ, ನಿವೃತ್ತಿ ವಿಮೆ, ಆರೋಗ್ಯ ವಿಮೆ, ಮತ್ತು ಆಸ್ತಿ ಮತ್ತು ಅಪಘಾತ ವಿಮೆ ಸೇರಿವೆ.
 • ಮರುವಿಮೆ - ಮರುವಿಮೆ ಎಂದರೆ ದೊಡ್ಡ ಪ್ರಮಾಣದ ನಷ್ಟದಿಂದ ರಕ್ಷಿಸಿಕೊಳ್ಳಲು ವಿಮಾದಾರರಿಗೆ ಮಾರಾಟ ಮಾಡಿದ ವಿಮೆಯಾಗಿದೆ.

ಇತರ ಹಣಕಾಸು ಸೇವೆಗಳು[ಬದಲಾಯಿಸಿ]

 • ಮಧ್ಯಸ್ಥಿಕೆ ಅಥವಾ ಸಲಹೆಯ ಸೇವೆಗಳು - ಈ ಸೇವೆಗಳು ಷೇರು ದಲ್ಲಾಳಿಗಳು (ಖಾಸಗಿ ಗ್ರಾಹಕ ಸೇವೆಗಳು) ಮತ್ತು ರಿಯಾಯಿತಿ ದಲ್ಲಾಳಿಗಳ ಸೇವೆಗಳನ್ನು ಒಳಗೊಂಡಿದೆ. ಷೇರು ದಲ್ಲಾಳಿಗಳು ಹೂಡಿಕೆದಾರರಿಗೆ ಷೇರುಗಳನ್ನು ಖರೀದಿಸುವಲ್ಲಿ ಮತ್ತು ಮಾರುವಲ್ಲಿ ಸಹಾಯವನ್ನು ಮಾಡುತ್ತಾರೆ. ಮುಖ್ಯವಾಗಿ ಅಂತರ್ಜಾಲ ಆಧಾರಿತ ಸಂಸ್ಥೆಗಳನ್ನು ರಿಯಾಯಿತಿ ದಲ್ಲಾಳಿಗಳೆಂದು ಸಾಮಾನ್ಯವಾಗಿ ಉಲ್ಲೇಖಿಸಲಾಗಿದೆ. ಆದರೂ ಹೆಚ್ಚಿನವು ತಮ್ಮ ಗ್ರಾಹಕರಿಗೆ ಸಲಹೆಯನ್ನು ನೀಡಲು ಶಾಖೆಗಳನ್ನು ಹೊಂದಿವೆ. ಈ ದಳ್ಳಾಳಿಗಳು ಮುಖ್ಯವಾಗಿ ವೈಯಕ್ತಿಕ ಹೂಡಿಕೆದಾರರನ್ನು ಗುರಿಯಿರಿಸುತ್ತವೆ. ದೊಡ್ಡ ಕಂಪೆನಿಗಳು,ಶ್ರೀಮಂತ ವ್ಯಕ್ತಿಗಳು ಮತ್ತು ಬಂಡವಾಳ ನಿರ್ವಹಣೆ ನಿಧಿಗಳು ಮುಂತಾದ ಸಂಪೂರ್ಣ ಸೇವೆ ಮತ್ತು ಖಾಸಗಿ ಗ್ರಾಹಕ ಸಂಸ್ಥೆಗಳು ಮುಖ್ಯವಾಗಿ ಹೂಡಿಕೆಗೆ ದೊಡ್ಡ ಪ್ರಮಾಣಗಳ ಬಂಡವಾಳದೊಂದಿಗೆ ಗ್ರಾಹಕರಿಗೆ ವ್ಯಾಪಾರಗಳನ್ನು ನಿರ್ವಹಿಸಲು ನೆರವಾಗುತ್ತವೆ.
 • ಖಾಸಗಿ ಷೇರು - ಖಾಸಗಿ ಷೇರು ನಿಧಿಗಳು ಸೀಮಿತ ವ್ಯಾಪ್ತಿಯ ನಿಧಿಗಳಾಗಿವೆ. ಇವುಗಳು ಸಾಮಾನ್ಯವಾಗಿ ಉದ್ಯಮಗಳಲ್ಲಿ ಖಾಸಗಿ ಅಥವಾ ಸ್ವಾಧೀನಪಡಿಸಿಕೊಂಡ ನಂತರದ ಖಾಸಗಿ ಷೇರುಗಳನ್ನು ನಿಯಂತ್ರಿಸುತ್ತವೆ. ಖಾಸಗಿ ಷೇರು ನಿಧಿಗಳು ಹೆಚ್ಚಾಗಿ ಅವುಗಳು ಹೂಡಿಕೆ ಮಾಡುವ ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳುವುದಕ್ಕಾಗಿ, ಹತೋಟಿ ಖರೀದಿಸುವಿಕೆಯನ್ನು (LBOs) ಸಾಮಾನ್ಯವಾಗಿ ಬಳಸಿಕೊಳ್ಳುತ್ತವೆ. ಅತ್ಯಂತ ಯಶಸ್ವಿ ಖಾಸಗಿ ಷೇರು ನಿಧಿಗಳು ಷೇರು ಮಾರುಕಟ್ಟೆಗಳು ಒದಗಿಸುವ ಪ್ರತಿಫಲಕ್ಕಿಂತ ಹೆಚ್ಚಿನ ಪ್ರತಿಫಲವನ್ನು ಗಳಿಸಬಲ್ಲದು.
 • ಸಾಹಸೋದ್ಯಮ ಬಂಡವಾಳವು ಖಾಸಗಿ ಷೇರು ಬಂಡವಾಳದ ಪ್ರಕಾರವಾಗಿದೆ. ಇದನ್ನು ವೃತ್ತಿಪರ, ಹೊರಗಿನ ಹೂಡಿಕೆದಾರರು ಹೊಸ, ಅತಿ ಹೆಚ್ಚು ಅಭಿವೃದ್ಧಿ ಕಾಣುತ್ತಿರುವ ಸಂಸ್ಥೆಗಳಿಗೆ, IPOಗೆ ಕಂಪೆನಿಯನ್ನು ತೆಗೆದುಕೊಳ್ಳುವ ಅಥವಾ ವ್ಯವಹಾರವನ್ನು ಸ್ವಾಧೀನಪಡಿಸುವ, ವಿಲೀನಗೊಳಿಸುವ ಹಿತಾಸಕ್ತಿ ದೃಷ್ಟಿಯಿಂದ ಕೈಗೊಳ್ಳಲಾಗುತ್ತದೆ.
 • ಏಂಜೆಲ್‌ ಬಂಡವಾಳ ಹೂಡಿಕೆ - ಏಂಜೆಲ್‌ ಹೂಡಿಕೆದಾರ ಅಥವಾ ಏಂಜೆಲ್‌ಗಳೆಂದರೆ (ವ್ಯವಹಾರದ ಏಂಜೆಲ್‌ ಅಥವಾ ಯುರೋಪಿನಲ್ಲಿ ಅನೌಪಚಾರಿಕ ಹೂಡಿಕೆದಾರರು ಎಂದು ಪರಿಚಿತರಾಗಿರುವ) ಒಂದು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಪರಿವರ್ತಿಸಬಹುದಾದ ಸಾಲಪತ್ರ ಅಥವಾ ಮಾಲೀಕತ್ವದ ಷೇರುಗಳಿಗೆ ಪ್ರತಿಯಾಗಿ ಬಂಡವಾಳವನ್ನು ಒದಗಿಸುವ ಶ್ರೀಮಂತ ವ್ಯಕ್ತಿ. ಚಿಕ್ಕ ಪ್ರಮಾಣದಲ್ಲಿದ್ದರೂ, ಏರಿಕೆಯನ್ನು ಕಾಣುತ್ತಿರುವ ಏಂಜಲ್ ಹೂಡಿಕೆದಾರರು ಏಂಜೆಲ್‌ ಸಮೂಹಗಳು ಅಥವಾ ಏಂಜೆಲ್‌ ಜಾಲಗಳಂತೆ ಸಂಘಟಿತರಾಗಿ ಸಂಶೋಧನೆಯನ್ನು ಹಂಚಿಕೊಂಡು ಹೂಡಿಕೆ ಬಂಡವಾಳವನ್ನು ಸಂಚಯಿಸುತ್ತಾರೆ.
 • ವಾಣಿಜ್ಯ ಒಕ್ಕೂಟಗಳು - ಹಣಕಾಸು ಸೇವಾ ಒಕ್ಕೂಟವು ಹಣಕಾಸು ಸೇವೆಗಳ ಸಂಸ್ಥೆಯಾಗಿದ್ದು, ಇದು ಹಣಕಾಸು ಸೇವೆಗಳ ಮಾರುಕಟ್ಟೆಯ ಒಂದಕ್ಕಿಂತ ಹೆಚ್ಚಿನ ವಲಯಗಳಲ್ಲಿ ಸಕ್ರಿಯವಾಗಿರುವುದು. ಉದಾ. ಜೀವ ವಿಮೆ, ಸಾಮಾನ್ಯ ವಿಮೆ, ಆರೋಗ್ಯ ವಿಮೆ, ಆಸ್ತಿ ನಿರ್ವಹಣೆ, ಚಿಲ್ಲರೆ ಬ್ಯಾಂಕಿಂಗ್‌, ಸಗಟು ಬ್ಯಾಂಕಿಂಗ್‌, ಬಂಡವಾಳ ಹೂಡಿಕೆ ಬ್ಯಾಂಕಿಂಗ್‌, ಇತ್ಯಾದಿ. ವಿವಿಧ ಪ್ರಕಾರದ ವ್ಯವಹಾರಗಳು ಒಟ್ಟುಗೂಡಿದಾಗ ಸಂಭವಿಸುವ ವೈವಿಧ್ಯೀಕರಣ ಅನುಕೂಲತೆಗಳು ಅಂತಹ ವ್ಯವಹಾರಗಳ ಅಸ್ಥಿತ್ವಕ್ಕಿರುವ ಪ್ರಮುಖ ತರ್ಕಾಧಾರವಾಗಿದೆ. ಅಂದರೆ ಒಂದೇ ಸಂದರ್ಭದಲ್ಲಿ ಕೆಟ್ಟ ಘಟನೆಗಳು ಸಂಭವಿಸುವುದಿಲ್ಲ. ಇದರ ಪರಿಣಾಮದಿಂದಾಗಿ, ಈ ವಾಣಿಜ್ಯ ಒಕ್ಕೂಟಕ್ಕೆ ಬೇಕಾಗುವ ಆರ್ಥಿಕ ಬಂಡವಾಳವು ಸಾಮಾನ್ಯವಾಗಿ ಅದರ ಭಾಗಗಳ ಒಟ್ಟುಮೊತ್ತಕ್ಕೆ ಬೇಕಾಗುವ ಆರ್ಥಿಕ ಬಂಡವಾಳಕ್ಕಿಂತ ಗಣನೀಯವಾಗಿ ಕಡಿಮೆಯಿರುವುದು.

ಹಣಕಾಸು ಅಪರಾಧ[ಬದಲಾಯಿಸಿ]

UK[ಬದಲಾಯಿಸಿ]

UKಯ ಹಣಕಾಸು ಉದ್ಯಮದಲ್ಲಿ ವಂಚನೆಯಿಂದ ವರ್ಷಕ್ಕೆ £14 ಶತಕೋಟಿಯಷ್ಟು ಬೆಲೆತೆರುತ್ತಿದೆ. ಅಲ್ಲದೆ ಬ್ರಿಟಿಷ್‌ ಸಂಸ್ಥೆಗಳು £25 ಶತಕೋಟಿಯಷ್ಟು ಅಕ್ರಮ ಮೂಲದ ಹಣ ಕ್ರಮಬದ್ಧಗೊಳಿಸುತ್ತವೆಂದು ನಂಬಲಾಗಿದೆ.[೬]

ಮಾರುಕಟ್ಟೆ ಪಾಲು[ಬದಲಾಯಿಸಿ]

ಗಳಿಕೆಗಳು ಮತ್ತು ಷೇರು ಮಾರುಕಟ್ಟೆ ಬಂಡವಾಳದ ದೃಷ್ಟಿಯಲ್ಲಿ ನೋಡಿದರೆ, ಹಣಕಾಸು ಸೇವೆಗಳ ಉದ್ಯಮವು ವಿಶ್ವದಲ್ಲಿ ಅತಿ ದೊಡ್ಡ ಸಂಸ್ಥೆಗಳ ಸಮೂಹವನ್ನು ಒಳಗೊಂಡಿದೆ. ಆದರೂ ಈ ಉದ್ಯಮವು ಆದಾಯ ಮತ್ತು ಉದ್ಯೋಗಿಗಳ ಸಂಖ್ಯೆಯಲ್ಲಿ ಅತಿ ದೊಡ್ಡ ವಲಯವಲ್ಲ. ದೊಡ್ಡ ಕಂಪನಿ (ಸಿಟಿಗ್ರೂಪ್‌) 3 % ರಷ್ಟು US ಮಾರುಕಟ್ಟೆ ಪಾಲನ್ನು ಹೊಂದಿರುವುದು ಬಿಟ್ಟರೆ, ಇದು ಅತ್ಯಂತ ಮಂದಗತಿಯ ಬೆಳವಣಿಗೆಯನ್ನು ಹೊಂದಿರುವ ಮತ್ತು ತೀವ್ರವಾಗಿ ಛಿದ್ರಗೊಂಡಿರುವ ಉದ್ಯಮವಾಗಿದೆ.[೭] ಇದಕ್ಕೆ ಪ್ರತಿಯಾಗಿ, USನಲ್ಲಿ ಅತಿ ದೊಡ್ಡ ಗೃಹೋಪಕರಣ ಸುಧಾರಣೆ ಮಳಿಗೆಯಾದ ಹೋಮ್‌ ಡಿಪೋ 30 %ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಅಲ್ಲದೆ ಅತಿ ದೊಡ್ಡ ಕಾಫಿಗೃಹವಾದ ಸ್ಟಾರ್‌ಬಕ್ಸ್‌ 32%ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ.

ಇವನ್ನೂ ಗಮನಿಸಿ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. http://www.globalcustody.net/no_cookie/custody_assets_worldwide/ GlobalCustody.net Asset Table
 5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. ದಿ ಅಪಾರ್ಚುನಿಟಿ: ಸ್ಮಾಲ್‌ ಗ್ಲೋಬಲ್‌ ಮಾರ್ಕೆಟ್‌ ಶೇರ್‌, ಪುಟ 11ಸ್ಯಾನ್‌ಫೋರ್ಡ್‌ ಸಿ. ಬೆರ್ನ್‌ಸ್ಟೇನ್‌ ಆಂಡ್‌ ಕಂ. ಸ್ಟ್ರಾಟೆಜಿಕ್‌ ಡಿಸಿಶನ್ಸ್ ಕಾನ್ಫರೆನ್ಸ್‌ - 6/02/04
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 • Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).