ವಿಷಯಕ್ಕೆ ಹೋಗು

ಕಿಂಗ್‌ಫಿಷರ್ ಏರ್‌‍ಲೈನ್ಸ್ ವಿಮಾನಯಾನ ಸಂಸ್ಥೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Expression error: Unexpected < operator.

Kingfisher Airlines
ಚಿತ್ರ:Kingfisher Airlines logo.png
IATA
IT
ICAO
KFR
Callsign
KINGFISHER
ಸ್ಥಾಪನೆ 2003
Commenced operations 9 May 2005
Hubs Bengaluru International Airport
Secondary hubs
Focus cities
Frequent-flyer program King Club
Airport lounge Kingfisher Lounge
Alliance Oneworld (future)
Subsidiaries Kingfisher Xpress
Fleet size 66 (+130 orders)
Destinations 71[]
Company slogan Fly The Good Times
Parent company United Breweries Group
Headquarters Kingfisher House, ಮುಂಬೈ, ಮಹಾರಾಷ್ಟ್ರ[]
Key people
Website flykingfisher.com

ಕಿಂಗ್‌ಫಿಷರ್ ಏರ್‌‍ಲೈನ್ಸ್ ಕಂಪೆನಿಯು ಭಾರತ ಮೂಲದ ವಿಮಾನಯಾನ ಉದ್ಯಮ ಸಮೂಹವಾಗಿದೆ. ಇದರ ಪ್ರಧಾನ ಕಚೇರಿಯು ಮುಂಬಯಿ ಮಹಾನಗರದ ವಿಲೆ ಪಾರ್ಲೆ(ಪಶ್ಚಿಮ) ಬಡಾವಣೆಯಲ್ಲಿರುವ ಕಿಂಗ್‌ಫಿಷರ್ ಹೌಸ್‌‌ನಲ್ಲಿದೆ.[][] ಕಿಂಗ್‌ಫಿಷರ್ ಏರ್‌‍ಲೈನ್ಸ್ ಕಂಪೆನಿಯು ತನ್ನ ಮೂಲ ಸಂಸ್ಥೆ ಯುನೈಟೆಡ್‌‌ ಬ್ರೂವರೀಸ್‌ ಉದ್ಯಮ ಸಮೂಹದ ಮೂಲಕ, ಅಲ್ಪ-ವೆಚ್ಚದ ಸರಕು ಸಾಗಣೆ ವಿಮಾನ ಕಂಪೆನಿ ಕಿಂಗ್‌ಫಿಷರ್ ರೆಡ್‌‌ನಲ್ಲಿ 50% ಷೇರುಗಳ ಸ್ವಾಮ್ಯವನ್ನು ಹೊಂದಿದೆ.

ಕಿಂಗ್‌ಫಿಷರ್ ಏರ್‌‍ಲೈನ್ಸ್ ಖಾಸಗಿ ಸಮೀಕ್ಷಾ ಸಲಹಾಕಾರ ಸಂಸ್ಥೆ ಸ್ಕೈಟ್ರಾಕ್ಸ್‌‌ನಿಂದ 5-ತಾರಾ ವಿಮಾನಯಾನ ಸಂಸ್ಥೆ ಎಂಬ ಶ್ರೇಯಾಂಕವನ್ನು ಪಡೆದಿದ್ದ ಏಳು ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗಿದೆ.[] ಕಿಂಗ್‌ಫಿಷರ್ ಸಂಸ್ಥೆಯು ಪ್ರಾಂತೀಯ ಹಾಗೂ ದೂರ-ಪ್ರಯಾಣದ ಅಂತರರಾಷ್ಟ್ರೀಯ ವಿಮಾನಯಾನ ಸೇವೆಗಳೊಂದಿಗೆ 71 ಗಮ್ಯಸ್ಥಳಗಳಿಗೆ, 375ಕ್ಕೂ ಹೆಚ್ಚಿನ ದೈನಿಕ ಹಾರಾಟಗಳನ್ನು ನಡೆಸುತ್ತದೆ.[] ಮೇ 2009ರ ಸಾಲಿನಲ್ಲಿ, ಕಿಂಗ್‌ಫಿಷರ್ ಏರ್‌‍ಲೈನ್ಸ್ ಸಂಸ್ಥೆಯು ಒಂದು ದಶಲಕ್ಷಕ್ಕೂ ಹೆಚ್ಚಿನ ಪ್ರಯಾಣಿಕರಿಗೆ ಸಾರಿಗೆ ಸೇವೆ ನೀಡಿದ್ದು, ಭಾರತದಲ್ಲಿನ ವಿಮಾನಯಾನ ಸಂಸ್ಥೆಗಳಲ್ಲೇ ಅತಿ ಹೆಚ್ಚಿನ ಮಾರುಕಟ್ಟೆ ಷೇರುಗಳನ್ನು ಹೊಂದಿರುವ ಸಂಸ್ಥೆಯನ್ನಾಗಿಸಿತು.[]

ಕಿಂಗ್‌ಫಿಷರ್ ಏರ್‌‍ಲೈನ್ಸ್ ಸಂಸ್ಥೆಯು ವಿಜಯ್‌ ಮಲ್ಯ ಕೂಡಾ ಮಾಲೀಕತ್ವ ಹೊಂದಿರುವ F1 ಕಾರು ಓಡಿಸುವ ಪಂದ್ಯದ ಸಜ್ಜುಗೊಳಿಕೆಯಾದ ಫೋರ್ಸ್‌‌ ಇಂಡಿಯಾದ ಪ್ರಾಯೋಜಕತ್ವವನ್ನು ಕೂಡಾ ಕೈಗೊಂಡಿದೆ.[ಸೂಕ್ತ ಉಲ್ಲೇಖನ ಬೇಕು]

ಇತಿಹಾಸ

[ಬದಲಾಯಿಸಿ]

ಕಿಂಗ್‌ಫಿಷರ್ ಏರ್‌‍ಲೈನ್ಸ್ ಕಂಪೆನಿಯನ್ನು 2003ರಲ್ಲಿ ಸ್ಥಾಪಿಸಲಾಯಿತು. ಬೆಂಗಳೂರು ಮೂಲದ ಯುನೈಟೆಡ್‌‌ ಬ್ರೂವರೀಸ್‌ ಉದ್ಯಮ ಸಮೂಹವು ಇದರ ಮಾಲೀಕತ್ವವನ್ನು ಹೊಂದಿದೆ. ಸದರಿ ವಿಮಾನಯಾನ ಸಂಸ್ಥೆಯು 9 ಮೇ 2005ರಂದು ನಾಲ್ಕು ಹೊಸದಾದ ಏರ್‌ಬಸ್‌‌ A320-200 ವಿಮಾನಗಳ ಪಡೆಯೊಂದಿಗೆ ಮುಂಬಯಿ ಮಹಾನಗರದಿಂದ ದೆಹಲಿಗೆ[] ಹೋಗುವ ವಿಮಾನಯಾನದ ಮೂಲಕ ವಾಣಿಜ್ಯ ಕಾರ್ಯಾಚರಣೆಯನ್ನು ಆರಂಭಿಸಿತು. 3 ಸೆಪ್ಟೆಂಬರ್‌‌ 2008ರಂದು ಸಂಸ್ಥೆಯು ತನ್ನ ಬೆಂಗಳೂರು ನಗರದಿಂದ ಲಂಡನ್‌‌ಗೆ ಹೋಗುವ ನೇರ ವಿಮಾನದೊಂದಿಗೆ ಅಂತರರಾಷ್ಟ್ರೀಯ ಕಾರ್ಯಾಚರಣೆಯನ್ನು ಆರಂಭಿಸಿತು.

Kingfisher Airlines Limited
ಸಂಸ್ಥೆಯ ಪ್ರಕಾರPublic (ಬಿಎಸ್‌ಇ: KFA)
ಸ್ಥಾಪನೆ2003
ಮುಖ್ಯ ಕಾರ್ಯಾಲಯಮುಂಬೈ, ಮಹಾರಾಷ್ಟ್ರ
ವ್ಯಾಪ್ತಿ ಪ್ರದೇಶAsia, Europe
ಪ್ರಮುಖ ವ್ಯಕ್ತಿ(ಗಳು)
ಉದ್ಯಮTransportation
ಸೇವೆಗಳುAirline catering & foodservice, aircraft ground handling and passenger transport
ಆದಾಯ೫,೨೭೧.೦೪ ಕೋಟಿ (ಯುಎಸ್$೧.೧೭ ಶತಕೋಟಿ) (2009-10) []
ಉಪಸಂಸ್ಥೆಗಳುKingfisher Xpress
ಜಾಲತಾಣflykingfisher.com

ಔಪಚಾರಿಕ ಸದಸ್ಯತ್ವ ಒಪ್ಪಂದಕ್ಕೆ 7 ಜೂನ್‌‌ 2010ರಂದು ಸಹಿ ಮಾಡುವ ಮೂಲಕ ಕಿಂಗ್‌ಫಿಷರ್ ಸಂಸ್ಥೆಯು ಒನ್‌ವರ್ಲ್ಡ್‌‌ ವಿಮಾನಯಾನ ಸಂಸ್ಥೆಗಳ ಮೈತ್ರಿಕೂಟದ ಚುನಾಯಿತ ಸದಸ್ಯ ಸಂಸ್ಥೆಯಾಯಿತು. ಮೈತ್ರಿಕೂಟವನ್ನು ಸೇರಲು ನಿರ್ದಿಷ್ಟ ದಿನವನ್ನು ಅದಕ್ಕೆ ಬೇಕಾದ ಅಗತ್ಯ ವಿಧಿವಿಧಾನಗಳನ್ನು ಸಂಪೂರ್ಣವಾಗಿ ಪೂರೈಸಿದ ನಂತರ ಘೋಷಿಸಲಾಗುವುದು, ಬಹುಶಃ ಅದು 18ರಿಂದ 24 ತಿಂಗಳುಗಳಷ್ಟು ಸಮಯ ತೆಗೆದುಕೊಳ್ಳಬಹುದು.[][೧೦].

ಕಾರ್ಯಾಚರಣೆಯ ಸಾಧನೆ

[ಬದಲಾಯಿಸಿ]
ಕಿಂಗ್‌ಫಿಷರ್ ಏರ್‌‍ಲೈನ್ಸ್ ಸಂಸ್ಥೆಯ ಅಂಕಿಅಂಶಗಳು
[೧೧]
ಪ್ರಯಾಣಿಸಿದ ಜನರ ಸಂಖ್ಯೆ % ಬದಲಾವಣೆ ಸರಾಸರಿ ಪ್ರಯಾಣಿಕರ ಪ್ರಮಾಣ (%)
ಏಪ್ರಿಲ್‌‌ 2007 – ಮಾರ್ಚ್‌ 2008 12,414,336 - 61%
ಏಪ್ರಿಲ್‌‌ 2008 – ಮಾರ್ಚ್‌ 2009 10,850,359 Decrease12.6% 60%
ಏಪ್ರಿಲ್‌‌ 2009 – ಜೂನ್‌‌ 2009 2,851,360 - 69%

ಗಮ್ಯಸ್ಥಳಗಳು

[ಬದಲಾಯಿಸಿ]

63 ದೇಶೀಯ ಗಮ್ಯಸ್ಥಳಗಳು ಮತ್ತು ಏಷ್ಯಾ ಮತ್ತು ಯೂರೋಪ್‌‌ ಖಂಡಗಳಾದ್ಯಂತ 8 ರಾಷ್ಟ್ರಗಳಲ್ಲಿರುವ 8 ಅಂತರರಾಷ್ಟ್ರೀಯ ಗಮ್ಯಸ್ಥಳಗಳಿಗೆ ವಿಮಾನಯಾನ ಸೇವೆಯನ್ನು ಕಿಂಗ್‌ಫಿಷರ್ ಏರ್‌‍ಲೈನ್ಸ್ ಸಂಸ್ಥೆಯು ನೀಡುತ್ತದೆ. ಕಿಂಗ್‌ಫಿಷರ್'ನ ಅಲ್ಪ ದೂರ/ಅಂತರದ ಮಾರ್ಗಗಳಲ್ಲಿ ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಪಶ್ಚಿಮ ಏಷ್ಯಾದ ಕೆಲ ರಾಷ್ಟ್ರಗಳ ಮಹಾನಗರಗಳನ್ನು ಹೊರತುಪಡಿಸಿದರೆ ಬಹುತೇಕವು ದೇಶೀಯ ಯಾನಮಾರ್ಗಗಳಾಗಿವೆ. ಎಲ್ಲಾ ಅಲ್ಪ ದೂರ/ಅಂತರದ ಮಾರ್ಗಗಳಲ್ಲಿ A320 ಸರಣಿಯ ಏರ್‌ಬಸ್‌‌ ವಿಮಾನಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತದೆ. ATR 42 ವಿಮಾನಗಳು ಮತ್ತು ATR 72 ವಿಮಾನಗಳನ್ನು ಪ್ರಮುಖವಾಗಿ ದೇಶೀಯ ನಗರಗಳಿಗೆ ಪ್ರಾಂತೀಯ ಮಾರ್ಗಗಳಲ್ಲಿ ಬಳಸಲಾಗುತ್ತದೆ. ಕಿಂಗ್‌ಫಿಷರ್ ಸಂಸ್ಥೆಯು ತನ್ನ ಮಧ್ಯಮ ಹಾಗೂ ಬಹುದೂರದ ಗಮ್ಯಸ್ಥಳ ಯಾನಗಳನ್ನು ಪೂರ್ವ ಏಷ್ಯಾ, ಆಗ್ನೇಯ ಏಷ್ಯಾ, ಮತ್ತು ಯೂರೋಪ್‌‌ಗಳಲ್ಲಿ ಹೊಂದಿದೆ. ಸೆಪ್ಟೆಂಬರ್‌‌ 2008ರಲ್ಲಿ ಪ್ರಾರಂಭಿಸಿದ್ದ ಈ ಸಂಸ್ಥೆಯ ಪ್ರಪ್ರಥಮ ಬಹುದೂರದ ಯಾನದ ಗಮ್ಯಸ್ಥಳವು ಯುನೈಟೆಡ್‌ ಕಿಂಗ್‌ಡಮ್‌ನ ಲಂಡನ್‌‌ ಮಹಾನಗರವಾಗಿತ್ತು. ಹೊಸದಾಗಿ ಖರೀದಿಸಿದ ವಿಮಾನಗಳು ಬಂದ ಕೂಡಲೇ ಆಫ್ರಿಕಾ, ಏಷ್ಯಾ, ಯೂರೋಪ್‌‌, ಉತ್ತರ ಅಮೇರಿಕಾ ಮತ್ತು ಓಷನಿಯಾಗಳಲ್ಲಿರುವ ಮಹಾನಗರಗಳಿಗೆ ಬಹುದೂರದ ವಿಮಾನಯಾನಗಳನ್ನು ಆರಂಭಿಸುವ ಯೋಜನೆಯನ್ನು ಸಂಸ್ಥೆಯು ಹಾಕಿಕೊಂಡಿದೆ. ಎಲ್ಲಾ ಬಹುದೂರದ ವಿಮಾನಯಾನ ಮಾರ್ಗಗಳಲ್ಲಿ ಏರ್‌ಬಸ್‌‌ A330-200 ವಿಮಾನಗಳ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತದೆ.

ವಿಮಾನಯಾನ ಹಂಚಿಕೆಯ ಒಪ್ಪಂದ

[ಬದಲಾಯಿಸಿ]

ಕಿಂಗ್‌ಫಿಷರ್ ಕಂಪೆನಿಯು ಕೆಳಕಂಡ ಕಂಪೆನಿಗಳೊಂದಿಗೆ ವಿಮಾನಯಾನ ಹಂಚಿಕೆಯ‌ ಒಪ್ಪಂದಗಳನ್ನು ಮಾಡಿಕೊಂಡಿದೆ:

  • ಅಮೇರಿಕನ್‌ ಏರ್‌ಲೈನ್ಸ್‌ ಸಂಸ್ಥೆ (ಒನ್‌ವರ್ಲ್ಡ್‌‌)[೧೨]
  • ಬ್ರಿಟಿಷ್‌ ಏರ್‌ವೇಸ್‌ (ಒನ್‌ವರ್ಲ್ಡ್‌‌)[೧೩]

ವಿಮಾನಶ್ರೇಣಿಯ ಪಡೆ

[ಬದಲಾಯಿಸಿ]

ಪ್ರಸಕ್ತ

[ಬದಲಾಯಿಸಿ]
ಏರ್‌ಬಸ್‌ A319 ವಿಮಾನ
ATR 72-500 ವಿಮಾನ
ಏರ್‌ಬಸ್‌‌ A320-200 ವಿಮಾನಗಳು
ಏರ್‌ಬಸ್‌‌ A330-200 ವಿಮಾನಗಳು

ಕಿಂಗ್‌ಫಿಷರ್ ಏರ್‌‍ಲೈನ್ಸ್' ಸಂಸ್ಥೆಯ ವಿಮಾನಗಳ ಪಡೆಯು ಪ್ರಸ್ತುತ ದೇಶೀಯ ಮತ್ತು ಅಲ್ಪ ದೂರದ/ಅಂತರದ ಕಾರ್ಯಾಚರಣೆಗಳಿಗೆ ಬಳಸುವ ATR 42, ATR 72 ಮತ್ತು ಏರ್‌ಬಸ್‌‌ A320 ಸರಣಿಯ ವಿಮಾನಗಳನ್ನು ಮತ್ತು ಅಂತರರಾಷ್ಟ್ರೀಯ ಬಹು-ಅಂತರದ ಕಾರ್ಯಾಚರಣೆಗಳಿಗೆ ಬಳಸುವ ಏರ್‌ಬಸ್‌‌ A330-200 ವಿಮಾನಗಳನ್ನು ಹೊಂದಿದೆ. ಜನವರಿ 2009ರ ವೇಳೆಗೆ ಇದರ ವಿಮಾನಪಡೆಯ ಸರಾಸರಿ ಸೇವಾವಧಿಯು 2.3 ವರ್ಷಗಳಾಗಿವೆ. ಎಲ್ಲಾ ATR ವಿಮಾನಗಳು ಮತ್ತು A320 ಸರಣಿಯ ಕೆಲ ವಿಮಾನಗಳನ್ನು ಕಿಂಗ್‌ಫಿಷರ್ ರೆಡ್‌‌ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ.

ಕಿಂಗ್‌ಫಿಷರ್ ಸಂಸ್ಥೆಯ ವಿಮಾನಪಡೆಯು 15 ಆಗಸ್ಟ್‌ 2010ರ ವೇಳೆಗೆ ಕೆಳಕಂಡ ವಿಮಾನಗಳನ್ನು ಹೊಂದಿದೆ:

ಕಿಂಗ್‌ಫಿಷರ್ ಏರ್‌‍ಲೈನ್ಸ್ ವಿಮಾನಪಡೆ[೧೪]
ವಿಮಾನ ಒಟ್ಟು ಬೇಡಿಕೆಗಳು ಆಯ್ಕೆಗಳು ಪ್ರಯಾಣಿಕರು ಟಿಪ್ಪಣಿಗಳು
P Y ಒಟ್ಟು
ಏರ್‌ಬಸ್‌ A319-100 ‌ ವಿಮಾನಗಳು 3 0 144 144 ಎಲ್ಲಾ 3 ವಿಮಾನಗಳೂ ಡ್ರೈ-ಲೀಸ್‌‌‌ ಗುತ್ತಿಗೆ ತೆಗೆದುಕೊಂಡವು
ಏರ್‌ಬಸ್‌‌ A320-200 ‌ವಿಮಾನಗಳು 10 67 20 114 134 11 ವಿಮಾನಗಳು ಡ್ರೈ-ಲೀಸ್‌‌‌ ಗುತ್ತಿಗೆ ತೆಗೆದುಕೊಂಡವು.
2016ರವರೆಗೆ ಕಾರ್ಯಾಚರಣೆ ನಡೆಸಲಿವೆ
3 0 174 174
10 0 180 180
ಏರ್‌ಬಸ್‌‌ A321-200 ವಿಮಾನಗಳು 6 32 119 151 ಎರಡು ವಿಮಾನಗಳು ಡ್ರೈ-ಲೀಸ್‌‌ ಗುತ್ತಿಗೆ ತೆಗೆದುಕೊಂಡವು.
2 0 199 199
ಏರ್‌ಬಸ್‌‌ A330-200 ವಿಮಾನಗಳು 5 15 30 187 217 2015ರವರೆಗೆ ಕಾರ್ಯಾಚರಣೆ ನಡೆಸಲಿವೆ
ಏರ್‌ಬಸ್‌‌ A350-800 ವಿಮಾನಗಳು 5 colspan="3" class="unsortable" TBD 2015ರಿಂದ ಕಾರ್ಯಾಚರಣೆ ಆರಂಭಿಸಲಿವೆ
ಏರ್‌ಬಸ್‌‌ A380-800 ವಿಮಾನಗಳು 5 5 colspan="3" class="unsortable" TBD 2014ರಿಂದ ಕಾರ್ಯಾಚರಣೆ ಆರಂಭಿಸಲಿವೆ
ATR 42-500 ವಿಮಾನಗಳು 2 0 48 48 ಎರಡು ವಿಮಾನಗಳೂ ಡ್ರೈ-ಲೀಸ್‌‌ ಗುತ್ತಿಗೆ ತೆಗೆದುಕೊಂಡವು
ATR 72-500 ವಿಮಾನಗಳು 17 38 20 0 66 66 15 ಹೊಸ ವಿಮಾನಗಳನ್ನು ಡ್ರೈ-ಲೀಸ್‌‌‌ ಗುತ್ತಿಗೆ ತೆಗೆದುಕೊಳ್ಳಬೇಕಿದೆ
8 0 72 72
ಒಟ್ಟು 66 130 25 colspan="3" class="unsortable"

ನವೀನ ವಿಮಾನಗಳನ್ನು ಕೊಳ್ಳಲು ನೀಡಿರುವ ಬೇಡಿಕೆ ಆದೇಶಗಳು ಮತ್ತು ಅವುಗಳ ಸರಬರಾಜಿನ ವಿವರಗಳು

[ಬದಲಾಯಿಸಿ]

ಸಂಸ್ಥೆಯು 21 ಜುಲೈ 2004ರಂದು, ಏರ್‌ಬಸ್‌‌ ವಿಮಾನಯಾನ ಸಂಸ್ಥೆಯೊಂದಿಗೆ ಇನ್ನೂ ಎಂಟು ವಿಮಾನಗಳನ್ನು ಕೊಳ್ಳಲು ಅವಕಾಶವಿರುವ ಹಾಗೆ MoU ಒಪ್ಪಂದಕ್ಕೆ ಸಹಿ ಮಾಡಿ ನಾಲ್ಕು A320-200 ವಿಮಾನಗಳಿಗೆ ಬೇಡಿಕೆಯ ಆದೇಶ ನೀಡಿತು.[೧೫] ಮೊದಲ ನಾಲ್ಕು A320-200 ವಿಮಾನಗಳನ್ನು ಡೆಬಿಸ್‌ ಏರ್‌‌ಫೈನಾನ್ಸ್‌‌ ಸಂಸ್ಥೆಯಿಂದ ಗುತ್ತಿಗೆಗೆ ಪಡೆದುಕೊಳ್ಳಲಾಗಿತ್ತು.

ಸಂಸ್ಥೆಯು 23 ಫೆಬ್ರವರಿ 2005ರಂದು, ಏರ್‌ಬಸ್‌‌ ವಿಮಾನಯಾನ ಸಂಸ್ಥೆಯೊಂದಿಗೆ ಮೂರು ಏರ್‌ಬಸ್‌‌ A319-100 ವಿಮಾನಗಳನ್ನು ಕೊಂಡುಕೊಳ್ಳಲು ಒಪ್ಪಂದವೊಂದಕ್ಕೆ ಸಹಿ ಹಾಕಿತಲ್ಲದೇ ಮತ್ತೂ ಇಪ್ಪತ್ತು ವಿಮಾನಗಳಿಗೆ ಅವಕಾಶ ಇರುವ ಹಾಗೆ ಹತ್ತು A320-200 ವಿಮಾನಗಳನ್ನು ಕೊಳ್ಳಲು ಬೇಡಿಕೆಯಿಟ್ಟಿತು.[೧೬] ಸಂಸ್ಥೆಯು 25 ಏಪ್ರಿಲ್‌‌ 2005ರಂದು, ತನ್ನ ಪ್ರಥಮ ಏರ್‌ಬಸ್‌‌ A320-200 ವಿಮಾನವನ್ನು[೧೭] ಸ್ವೀಕರಿಸಿತು, ನಂತರ ಅದರ ಕಾರ್ಯಾಚರಣೆಯನ್ನು 9 ಮೇ 2005ರಿಂದ ಆರಂಭಿಸಲಾಯಿತು.

ಸಂಸ್ಥೆಯು 15 ಜೂನ್‌‌ 2005ರಂದು, ಏರ್‌ಬಸ್‌‌ A330 ವಿಮಾನಗಳು, ಏರ್‌ಬಸ್‌‌ A350 ವಿಮಾನಗಳು ಮತ್ತು ಏರ್‌ಬಸ್‌‌ A380 ವಿಮಾನಗಳಿಗೆ ಬೇಡಿಕೆ ಆದೇಶ ನೀಡಿ ಹಾಗೆ ನೀಡಿದ ಪ್ರಪ್ರಥಮ ಭಾರತೀಯ ವಿಮಾನಯಾನ ಸಂಸ್ಥೆ ಎಂಬ ಇತಿಹಾಸವನ್ನು ನಿರ್ಮಿಸಿತು. ಈ ಬೇಡಿಕೆ ಆದೇಶವು ಐದು A330-200 ವಿಮಾನಗಳು, ಐದು A350-800 ವಿಮಾನಗಳು ಮತ್ತು ಐದು A380-800 ವಿಮಾನಗಳಿಗೆ ಬೇಡಿಕೆಯನ್ನಿಟ್ಟಿತ್ತು.[೧೮]

ಸಂಸ್ಥೆಯು 21 ನವೆಂಬರ್‌‌ 2005ರಂದು, ಮೂವತ್ತು ಏರ್‌ಬಸ್‌‌ A320 ಸರಣಿಯ ವಿಮಾನಗಳಿಗೆ ಮತ್ತೊಂದು ಬೇಡಿಕೆ ಆದೇಶವನ್ನು ನೀಡಿತು.[೧೯]

ಸಂಸ್ಥೆಯು 24 ಏಪ್ರಿಲ್‌‌ 2006ರಂದು ಹ್ಯಾನೋವರ್‌‌ನಲ್ಲಿ, ಮತ್ತೊಮ್ಮೆ ಏರ್‌ಬಸ್‌‌ A340 ವಿಮಾನಗಳಿಗೆ ಬೇಡಿಕೆ ಆದೇಶ ನೀಡಿದ ಪ್ರಥಮ ಭಾರತೀಯ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಬೇಡಿಕೆ ಆದೇಶದಲ್ಲಿ ಐದು A340-500 ವಿಮಾನಗಳಿಗೆ ಬೇಡಿಕೆ ಇಡಲಾಗಿತ್ತು.[೨೦] ಆದರೆ, ನಂತರ ಈ A340-500 ವಿಮಾನಗಳಿಗೆ ನೀಡಿದ ಬೇಡಿಕೆ ಆದೇಶಗಳನ್ನು ಜುಲೈ 2008ರಲ್ಲಿ ವಿಶ್ವದಾದ್ಯಂತ ಉಂಟಾದ ಆರ್ಥಿಕ ಹಿಂಜರಿತವು ತೀವ್ರಮಟ್ಟದ ಪೆಟ್ರೋಲಿಯಮ್‌ ಉತ್ಪನ್ನಗಳ ದರ ಏರಿಕೆಯನ್ನು ವಿಶ್ವದಾದ್ಯಂತ ಉಂಟುಮಾಡಿತಾದ್ದುದರಿಂದ 2008ರಲ್ಲಿ ರದ್ದು ಮಾಡಲಾಯಿತು.

ಸಂಸ್ಥೆಯು 20 ಜೂನ್‌‌ 2007ರಂದು 2007ರ ಪ್ಯಾರಿಸ್‌‌ ವೈಮಾನಿಕ ಪ್ರದರ್ಶನದಲ್ಲಿ, ಏರ್‌ಬಸ್‌‌ ವಿಮಾನಯಾನ ಸಂಸ್ಥೆಯೊಂದಿಗೆ MoU ಒಪ್ಪಂದಕ್ಕೆ ಸಹಿ ಮಾಡಿ ಇಪ್ಪತ್ತು ಏರ್‌ಬಸ್‌‌ A320 ಸರಣಿಯ ವಿಮಾನಗಳು, ಹತ್ತು ಏರ್‌ಬಸ್‌‌ A330-200 ವಿಮಾನಗಳು, ಐದು ಏರ್‌ಬಸ್‌‌ A340-500 ವಿಮಾನಗಳು ಮತ್ತು ಹದಿನೈದು‌ ಏರ್‌ಬಸ್‌‌ A350-800 ವಿಮಾನಗಳಿಗೆ ಬೇಡಿಕೆ ಆದೇಶ ನೀಡಿತು.[೨೧] ಏಪ್ರಿಲ್‌‌ 2006ರಲ್ಲಿ ಹ್ಯಾನೋವರ್‌‌ನಲ್ಲಿ ಈ ಮೊದಲು ನೀಡಿದ್ದ ಐದು A340-500 ವಿಮಾನಗಳ ಆದೇಶವನ್ನು ರದ್ದು ಮಾಡಿದ್ದ ಕಾರಣ ಐದು A340-500 ವಿಮಾನಗಳನ್ನು ಕೊಳ್ಳಲು ನೀಡಿದ್ದ ಆದೇಶವನ್ನು 2008ರಲ್ಲಿ A330-200 ವಿಮಾನಗಳಿಗೆ ಪರಿವರ್ತಿಸಲಾಗಿತ್ತು.

ಸಂಸ್ಥೆಯು 14 ಜುಲೈ 2008ರಂದು, ಕಿಂಗ್‌ಫಿಷರ್ ತನ್ನ ಅದುವರೆಗಿನ ಪ್ರಪ್ರಥಮ ವಿಶಾಲ-ಕಾಯದ ವಿಮಾನವಾದ ಏರ್‌ಬಸ್‌‌ A330-200 ವಿಮಾನವನ್ನು (VT-VJL ಎಂದು ನೊಂದಾಯಿತವಾಗಿದ್ದ) ಜುಲೈ 2008ರಲ್ಲಿ ನಡೆದ 46ನೇ ಫಾರ್ನ್‌ಬರೋ ವೈಮಾನಿಕ ಪ್ರದರ್ಶನದಲ್ಲಿ ಪ್ರದರ್ಶಿಸಿತು. ಕಿಂಗ್‌ಫಿಷರ್ ಸಂಸ್ಥೆಯ ಪ್ರಪ್ರಥಮ ಏರ್‌ಬಸ್‌‌ A330-200 ವಿಮಾನವನ್ನು (ಸದರಿ ವಿಮಾನಯಾನ ಸಂಸ್ಥೆಯ ಪತ್ರಿಕಾ ಹೇಳಿಕೆಯ ಪ್ರಕಾರ) ಏರ್‌ಬಸ್‌‌ ವಿಮಾನಯಾನ ಸಂಸ್ಥೆಯು ಅದುವರೆಗೆ ನಿರ್ಮಿಸಿದ ಎಲ್ಲಾ A330-200 ವಿಮಾನಗಳಲ್ಲೇ ಅತ್ಯುತ್ತಮ ವಿಮಾನವಾಗಿದೆ ಎಂದು ವ್ಯಾಪಕವಾಗಿ ಪ್ರಶಂಸೆ ಕೇಳಿಬಂತು.[೨೨]

ಕಿಂಗ್‌ಫಿಷರ್ ಏರ್‌‍ಲೈನ್ಸ್ ನವೀನ ವಿಮಾನಗಳ ಸರಬರಾಜು ವೇಳಾಪಟ್ಟಿ [೨೩]
ವಿಮಾನ 2012 2013 2014 2015 2016 ಒಟ್ಟು
ಏರ್‌ಬಸ್‌‌ A320 ಸರಣಿಯ ವಿಮಾನಗಳು 6 9 7 8 12 42
ಏರ್‌ಬಸ್‌‌ A330-200 ವಿಮಾನಗಳು 4 3 4 4 15
ಏರ್‌ಬಸ್‌‌ A350-800/A380-800 ವಿಮಾನಗಳು 2 6 2 10
ಒಟ್ಟು 10 12 13 18 14 67

ಸೇವೆಗಳು

[ಬದಲಾಯಿಸಿ]

ವಿವಿಧ ದರ್ಜೆಗಳ ಕೋಣೆ/ಕ್ಯಾಬಿನ್‌‌‌ಗಳು

[ಬದಲಾಯಿಸಿ]

ದೇಶೀಯ

[ಬದಲಾಯಿಸಿ]
ಕಿಂಗ್‌ಫಿಷರ್ ಫಸ್ಟ್‌‌
[ಬದಲಾಯಿಸಿ]

ದೇಶೀಯ ಕಿಂಗ್‌ಫಿಷರ್ ಫಸ್ಟ್‌‌ ಕೋಣೆಗಳ ಆಸನಗಳು 48 ಅಂಗುಲದಷ್ಟು ದಪ್ಪವಾದ ಪೀಠವನ್ನು ಹೊಂದಿದ್ದು 126 ಡಿಗ್ರಿಗಳಷ್ಟು ಓರೆಯಾಗಿರುತ್ತದೆ. ಪ್ರತಿ ಆಸನದ ಸಮೀಪ ಲ್ಯಾಪ್‌ಟಾಪ್‌ ಹಾಗೂ ಸಂಚಾರಿ ದೂರವಾಣಿಗಳನ್ನು ಚಾರ್ಜ್‌ ಮಾಡಲು ಬಳಸುವ ಚಾರ್ಜರ್‌ಗಳಿರುತ್ತವೆ. ಪ್ರಯಾಣಿಕರು ಇತ್ತೀಚಿನ ಅಂತರರಾಷ್ಟ್ರೀಯ ವೃತ್ತಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಕೇಳಿ ಪಡೆದುಕೊಳ್ಳಬಹುದಾಗಿರುತ್ತದೆ. ಕಿಂಗ್‌ಫಿಷರ್ ಫಸ್ಟ್‌‌ ಕೋಣೆಗಳಲ್ಲಿ ಆವಿಚಾಲಿತ ಇಸ್ತ್ರಿ ಮಾಡಿಸಿಕೊಳ್ಳುವ ಸೇವೆಯೂ ಲಭ್ಯವಿರುತ್ತದೆ. ಪ್ರತಿ ಆಸನಕ್ಕೂ ಹಾಲಿವುಡ್‌‌ ಮತ್ತು ಬಾಲಿವುಡ್‌ ಚಲನಚಿತ್ರಗಳು, ಆಂಗ್ಲ ಮತ್ತು ಹಿಂದಿ TV ಕಾರ್ಯಕ್ರಮಗಳು, 16 ಲೈವ್‌ TV ವಾಹಿನಿಗಳು ಮತ್ತು ಕಿಂಗ್‌ಫಿಷರ್ ರೇಡಿಯೋದ 10 ವಾಹಿನಿಗಳಿರುವ AVOD ಸೌಲಭ್ಯದೊಂದಿಗಿನ ಪ್ರತ್ಯೇಕವಾದ IFE ಸಜ್ಜುಗೊಳಿಕೆ ಲಗತ್ತಿಸಲಾಗಿರುತ್ತದೆ. ಪ್ರಯಾಣಿಕರಿಗೆ BOSE ಗದ್ದಲಮುಕ್ತ ಹೆಡ್‌ಫೋನ್‌‌ಗಳನ್ನೂ ನೀಡಲಾಗಿರುತ್ತದೆ.

ದೇಶೀಯ ಕಿಂಗ್‌ಫಿಷರ್ ಫಸ್ಟ್‌‌ ಕೋಣೆಯ ಸೌಲಭ್ಯವು ಕೇವಲ ಆಯ್ದ ಏರ್‌ಬಸ್‌‌ A320 ಸರಣಿಯ ವಿಮಾನಗಳಲ್ಲಿ ಮಾತ್ರ ಲಭ್ಯವಿರುತ್ತದೆ.

ಕಿಂಗ್‌ಫಿಷರ್ ವರ್ಗ/ಕ್ಲಾಸ್‌‌
[ಬದಲಾಯಿಸಿ]

ದೇಶೀಯ ಕಿಂಗ್‌ಫಿಷರ್ ವರ್ಗ/ಕ್ಲಾಸ್‌‌ ಕೋಣೆಗಳು 32-34 ಅಂಗುಲಗಳಷ್ಟು ದಪ್ಪವಾದ ಪೀಠವನ್ನು ಹೊಂದಿರುತ್ತವೆ.

ಏರ್‌ಬಸ್‌‌ A320 ಸರಣಿಯ ವಿಮಾನಗಳಲ್ಲಿನ ಪ್ರತಿ ಆಸನವು AVOD ಸೌಲಭ್ಯದೊಂದಿಗಿನ ಪ್ರತ್ಯೇಕವಾದ IFE ಸಜ್ಜುಗೊಳಿಕೆಯನ್ನು ಲಗತ್ತಾಗಿಸಿಕೊಂಡಿರುತ್ತದೆ. ಕಿಂಗ್‌ಫಿಷರ್ ಫಸ್ಟ್‌‌ ಕೋಣೆಗಳಲ್ಲಿಯಂತೆಯೇ ಪ್ರಯಾಣಿಕರು ಚಲನಚಿತ್ರಗಳು, ಆಂಗ್ಲ ಮತ್ತು ಹಿಂದಿ TV ಕಾರ್ಯಕ್ರಮಗಳು, DishTVಯು ಪ್ರಸ್ತುತಪಡಿಸುವ ಕೆಲ ಲೈವ್‌ TV ವಾಹಿನಿಗಳು ಮತ್ತು ಕಿಂಗ್‌ಫಿಷರ್ ರೇಡಿಯೋಗಳನ್ನು ಆನಂದಿಸಬಹುದಾಗಿರುತ್ತದೆ. ಇದರ ಪರದೆಯನ್ನು ಆಸನದ ಕೈಚಾಚಿನಲ್ಲಿರುವ ನಿಯಂತ್ರಕ ಕನ್ಸೋಲ್‌ನಿಂದ ನಿಯಂತ್ರಿಸಬಹುದಾಗಿರುತ್ತದೆ. ಕಿವಿಗೆ ಅವಚಿಕೊಳ್ಳುವಂತಹಾ ಹೆಡ್‌ಫೋನ್‌ಗಳನ್ನು ಉಚಿತವಾಗಿ ಎಲ್ಲಾ ಪ್ರಯಾಣಿಕರಿಗೂ ನೀಡಲಾಗುತ್ತದೆ. ರೂಢ ವಾಹಿನಿಯು ನಿರ್ದಿಷ್ಟ ಸೆಕೆಂಡುಗಳ ಅಂತರದಲ್ಲಿ ವಿಮಾನದ ಓಡುವ/ಹಾರಾಟದ ವೇಗ, ಹೊರಗಡೆಯ ತಾಪಮಾನ, ಎತ್ತರ, ಗಮ್ಯಸ್ಥಳವಿರುವ ದೂರ ಮತ್ತು ಅದಕ್ಕೆ ತಗಲುವ ಸಮಯ; ಸಚಿತ್ರ ಭೂಪಟದಲ್ಲಿ ವಿಮಾನವಿರುವ ಸ್ಥಾನ ಹಾಗೂ ಒಂದು ಅಥವಾ ಹೆಚ್ಚಿನ ಜಾಹಿರಾತುಗಳನ್ನು ಪ್ರದರ್ಶಿಸುತ್ತಿರುತ್ತದೆ.

ಬಹುತೇಕ ಯಾನಗಳಲ್ಲಿ ಪ್ರಯಾಣಿಕರಿಗೆ ಊಟವನ್ನು ಸರಬರಾಜು ಮಾಡಲಾಗುತ್ತದೆ. ವಿಮಾನವು ಟೇಕ್‌-ಆಫ್‌‌ ಆಗುವುದಕ್ಕೆ ಕೆಲ ಸಮಯದ ಮುಂಚೆ, ಪ್ರಯಾಣಿಕರಿಗೆ ಶೀಶೆಯಲ್ಲಿ ತುಂಬಿರುವ ನಿಂಬೆ ಪಾನಕವನ್ನು ಸರಬರಾಜು ಮಾಡಲಾಗುತ್ತದೆ.

ATR 72-500 ವಿಮಾನಗಳ ಒಳಭಾಗದಲ್ಲಿ ಕೋಣೆಯ ಮೇಲ್ಭಾಗದಲ್ಲಿ ಸೂಚನೆ/ನಿರ್ದೇಶನಗಳನ್ನು ಕೇಳಿಸಲು ಧ್ವನಿವರ್ಧಕಗಳ ಜೊತೆಗೆ ಒಟ್ಟು 17 ವರ್ಣದ ಇಳಿಬಿಟ್ಟ LCD ಪರದೆಗಳಿರುತ್ತದೆ, ಅವುಗಳ ಮೇಲ್ಭಾಗದಲ್ಲಿ CDಗಳು ಮತ್ತು DVDಗಳನ್ನು ಹಾಕುವ/ತೆಗೆಯುವ ಘಟಕ ಮತ್ತು ಸಿಬ್ಬಂದಿಗಳಿಗೆಂದು ನಿಯಂತ್ರಣ ಫಲಕವೂ ಇರುತ್ತದೆ. ಪ್ರತಿಯೊಂದು ಪರದೆಯೂ 12.7 cm ಅಗಲ ಮತ್ತು 9.3 cm ಎತ್ತರವಿದ್ದು 0.2 kg ತೂಗುತ್ತವಲ್ಲದೇ ಪ್ರತಿ ಎರಡು ಅಥವಾ ಮೂರು ಆಸನದ ಸಾಲುಗಳಿಗೆ ಹೊಂದುವಂತೆ ಕೋಣೆಯ ಎರಡೂ ಬದಿಗಳಲ್ಲಿ ಅವುಗಳನ್ನು ಅಳವಡಿಸಲಾಗಿರುತ್ತದೆ.

ಕಿಂಗ್‌ಫಿಷರ್ ಏರ್‌‍ಲೈನ್ಸ್ ದೇಶೀಯ ವಿಮಾನ ಯಾನದಲ್ಲಿ ವಿಮಾನದೊಳಗೆ ನೀಡಲಾಗುತ್ತಿರುವ ಅಲ್ಪವೆಚ್ಚ ದರ್ಜೆಯ ಊಟ
ಕಿಂಗ್‌ಫಿಶರ್‌‌‌ ರೆಡ್‌
[ಬದಲಾಯಿಸಿ]
ಚಿತ್ರ:Kingfisher Red Logo.png

ಏರ್‌ ಡೆಕ್ಕನ್‌‌ ವಿಮಾನಯಾನ ಸಂಸ್ಥೆಯನ್ನು ಕಿಂಗ್‌ಫಿಷರ್ ಏರ್‌‍ಲೈನ್ಸ್ ಸ್ವಾಧೀನಪಡಿಸಿಕೊಂಡ ನಂತರ ಅದರ ಹೆಸರನ್ನು ಸಿಂಪ್ಲಿಫೈ ಡೆಕ್ಕನ್‌ ಎಂದು ಬದಲಾಯಿಸಲಾಗಿತ್ತು ಮತ್ತು ಕೆಲ ಕಾಲಾನಂತರ ಕಿಂಗ್‌ಫಿಷರ್ ರೆಡ್‌‌ ಎಂದು ಬದಲಾಯಿಸಲಾಗಿತ್ತು. ಕಿಂಗ್‌ಫಿಷರ್ ರೆಡ್‌‌ ಯಾನಗಳು ಕಿಂಗ್‌ಫಿಷರ್ ವಿಮಾನಯಾನ ಸಂಸ್ಥೆಯ ದೇಶೀಯ ಮಾರ್ಗಗಳಲ್ಲಿನ ಅಲ್ಪ-ವೆಚ್ಚದ ದರ್ಜೆಯದ್ದಾಗಿವೆ. ಪ್ರಯಾಣಿಕರಿಗೆ ವಿಮಾನದೊಳಗೆಯೇ ಉಚಿತ ಊಟ ಮತ್ತು ಶೀಶೆಯಲ್ಲಿನ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ. ಸಿನೆ ಬ್ಲಿಟ್ಜ್ ‌ ನಿಯತಕಾಲಿಕೆಯ ವಿಶೇಷ ಆವೃತ್ತಿಯೊಂದು ಮಾತ್ರವೇ ಇದರಲ್ಲಿ ನೀಡಲಾಗುವ ಏಕೈಕ ಓದುವ ಪತ್ರಿಕೆ.

ಕಿಂಗ್‌ಫಿಷರ್ ಏರ್‌‍ಲೈನ್ಸ್ ಸಂಸ್ಥೆಯು ತನ್ನ ಕಿಂಗ್‌ ಕ್ಲಬ್‌ ಎಂಬ ಹೆಸರಿನ ವಾಡಿಕೆಯ ವಿಮಾನಪ್ರಯಾಣಿಕ ಯೋಜನೆಯನ್ನು ತನ್ನ ಅಲ್ಪ-ವೆಚ್ಚದ ಸರಕು ಸಾಗಣೆ ವಿಮಾನಗಳಿಗೂ ವಿಸ್ತರಿಸಿರುವ ಭಾರತದಲ್ಲಿಯೇ ಪ್ರಪ್ರಥಮ ವಿಮಾನಯಾನ ಸಂಸ್ಥೆಯೆಂಬ ಹೆಗ್ಗಳಿಕೆಯನ್ನು ಹೊಂದಿದೆ. ಕಿಂಗ್‌ಫಿಷರ್ ಏರ್‌‍ಲೈನ್ಸ್ ಅಥವಾ ಅದರ ಭಾಗೀದಾರ ವಿಮಾನಯಾನ ಸಂಸ್ಥೆಗಳ ಯಾನಗಳಲ್ಲಿ ಪ್ರಯಾಣಿಸಲು ಉಚಿತ ಟಿಕೆಟ್‌ಗಳನ್ನು ಪಡೆಯಲು ಬಳಸಬಹುದಾದ ಕಿಂಗ್‌ ಮೈಲ್ಸ್‌ ಎಂಬ ತಮ್ಮ ಅಂಕಗಳಿಕೆಗಳನ್ನು ಸಂಸ್ಥೆಯ ಪ್ರಯಾಣಿಕರು ಕಿಂಗ್‌ಫಿಷರ್ ರೆಡ್‌‌ ವಿಮಾನಗಳಲ್ಲಿ ಪ್ರಯಾಣಿಸಿದಾಗಲೂ ಪಡೆಯಬಹುದಾಗಿರುತ್ತದೆ.

ಅಂತರ‌ರಾಷ್ಟ್ರೀಯ

[ಬದಲಾಯಿಸಿ]
ಕಿಂಗ್‌ಫಿಷರ್ ಫಸ್ಟ್‌‌
[ಬದಲಾಯಿಸಿ]

ಅಂತರರಾಷ್ಟ್ರೀಯ ಕಿಂಗ್‌ಫಿಷರ್ ಫಸ್ಟ್‌‌ ಕೋಣೆಯು 78 ಅಂಗುಲಗಳಷ್ಟು ದಪ್ಪವಿರುವ ಹಾಗೂ 20-24.54 ಅಂಗುಲಗಳಷ್ಟು ಅಗಲವಿರುವ 180 ಡಿಗ್ರಿಗಳಷ್ಟು ಓರೆಯಾಗಿರುವ ಸಂಪೂರ್ಣವಾಗಿ ಚಪ್ಪಟೆಯಾದ ಆಸನಗಳನ್ನು ಹೊಂದಿರುತ್ತದೆ.[೨೪] ಪ್ರಯಾಣಿಕರಿಗೆ ಮೆರಿನೋ ಉಣ್ಣೆಯ ಹೊದ್ದಿಕೆಗಳು, ಸಲ್ವಾಟೋರ್‌ ಫೆರ್ರಾಗಾಮೋ ಪ್ರಸಾಧನ ಸಾಮಗ್ರಿ ಕಿಟ್‌ಪೆಟ್ಟಿಗೆ, ಬದಲಾಯಿಸಲು ಒಂದು ಪೈಜಾಮ, ಐದು-ವರಸೆಗಳ ಊಟ ಹಾಗೂ ಮದ್ಯ ಇನ್ನಿತರ ಪೇಯಗಳನ್ನು ನೀಡಲಾಗುತ್ತದೆ. ಇಷ್ಟೇ ಅಲ್ಲದೇ ಆಸನದಲ್ಲೇ ಅಳವಡಿಸಿಕೊಳ್ಳಬಹುದಾದ ಅಂಗಮರ್ದಕಗಳು, ಚಾರ್ಜರ್‌ಗಳು ಮತ್ತು USB ಕನೆಕ್ಟರ್‌ಗಳು ಕೂಡಾ ಲಭ್ಯವಿರುತ್ತದೆ.

ಪ್ರತಿ ಕಿಂಗ್‌ಫಿಷರ್ ಫಸ್ಟ್‌‌ ಕೋಣೆಯ ಆಸನವು AVOD ಸ್ಪರ್ಶಗ್ರಾಹಿ ನಿಯಂತ್ರಕಗಳಿರುವ 17 ಅಂಗುಲಗಳ ಅಗಲಪರದೆಯ ಪ್ರತ್ಯೇಕ ಕಿರುತೆರೆ/ಟೆಲಿವಿಷನ್‌ ಸಾಧನವನ್ನು ಹೊಂದಿದ್ದು ಅವುಗಳು ಪ್ರಯಾಣಿಕರು ತಮ್ಮ ಅಚ್ಚುಮೆಚ್ಚಿನ TV ಕಾರ್ಯಕ್ರಮಗಳನ್ನು ಲೈವ್‌‌ ಆಗಿ ನೋಡಲು ಅನುವಾಗುವಂತೆ ಲೈವ್‌ TVಯ 16 ವಾಹಿನಿಗಳೊಂದಿಗೆ ಹಾಲಿವುಡ್‌‌ ಮತ್ತು ಬಾಲಿವುಡ್‌ ಚಲನಚಿತ್ರಗಳು 36 ವಾಹಿನಿಗಳಲ್ಲಿ ಹಂಚಿ ಹೋಗಿರುವ 357 ಗಂಟೆಗಳಿಗೂ ಹೆಚ್ಚಿನ ಕಾರ್ಯಕ್ರಮಗಳನ್ನು ಇವು ಹೊಂದಿರುತ್ತವೆ. ಇಷ್ಟೇ ಅಲ್ಲದೇ ಇಂಟರ್‌ಆಕ್ಟೀವ್‌ ಆಟಗಳ ಸಂಗ್ರಹ, ಗ್ರಾಹಕೀಕರಿಸಬಲ್ಲ ಹಾಡುಪಟ್ಟಿಯ ಸೌಲಭ್ಯ ಹೊಂದಿರುವ ಗೀತಮಾಲಿಕೆ ಮತ್ತು ಕಿಂಗ್‌ಫಿಷರ್ ರೇಡಿಯೋ ಕೂಡಾ ಲಭ್ಯವಿರುತ್ತದೆ. ಪ್ರಯಾಣಿಕರಿಗೆ BOSE ಗದ್ದಲಮುಕ್ತ ಹೆಡ್‌ಫೋನ್‌‌ಗಳನ್ನೂ ನೀಡಲಾಗಿರುತ್ತದೆ.

ಕಿಂಗ್‌ಫಿಷರ್ ಫಸ್ಟ್‌‌ ಕೋಣೆಗಳಲ್ಲಿ ಲಭ್ಯವಿರುವ ಸೇವೆಗಳಲ್ಲಿ ಸಾಮಾಜಿಕ ಭೇಟಿ ಸ್ಥಳ, ಸಂಪೂರ್ಣ-ಸೌಲಭ್ಯಗಳನ್ನು ಹೊಂದಿರುವ ಪಾನಗೃಹ ಪರಿಚಾರಕನೊಬ್ಬನಿರುವ ಮದ್ಯಪಾನಗೃಹ ಬಾರ್‌‌, ಎರಡು ಸುಖಾಸನಗಳು ಮತ್ತು ಅಡ್ಡಮಣೆಗಳನ್ನು ಹೊಂದಿರುವ ವಿಶ್ರಾಮ ವಲಯ, ವಿಮಾನದ ಒಳಗೆಯೇ ಯಾವುದೇ ಸಮಯದಲ್ಲಿ ಆಹಾರ ಸೌಲಭ್ಯದೊಂದಿಗೆ ಸುಸಜ್ಜಿತ ಬಾಣಸಿಗನ ಸೇವೆಗಳೂ ಸೇರಿವೆ. ಕುಳಿತ ಆಸನವನ್ನು ಸುಸಜ್ಜಿತ ಹಾಸಿಗೆಯನ್ನಾಗಿ ಪರಿವರ್ತಿಸುವ ಹಾಗೂ ಪ್ರಯಾಣಿಕರು ಮಲಗಲು ಸಿದ್ಧರಾದಾಗ ಅವರಿಗೆ ಹಾಸಿಗೆಯನ್ನು ಸಿದ್ಧಗೊಳಿಸುವ ಟರ್ನ್‌‌‌-ಡೌನ್‌‌‌‌ ಸೇವೆ ಕೂಡಾ ಲಭ್ಯವಿರುತ್ತದೆ.

ಏರ್‌ಬಸ್‌‌ A330-200 ವಿಮಾನಗಳಲ್ಲಿ ಕಿಂಗ್‌ಫಿಷರ್ ಫಸ್ಟ್‌‌ ಮತ್ತು ಕಿಂಗ್‌ಫಿಷರ್ ಕ್ಲಾಸ್‌/ವರ್ಗ ಎರಡೂ ರೀತಿಯ ಕೋಣೆಗಳು ಆಯಾ ಸಮಯ ಹಾಗೂ ವಿಮಾನವಿರುವ ಸ್ಥಳಕ್ಕೆ ತಕ್ಕ ಹಾಗೆ ಬೆಳಕು ಸ್ವಯಂ ಬದಲಾಗುವ ಬೆಳಕಿನ ಸ್ಥಾಯಿ ವ್ಯವಸ್ಥೆಯನ್ನು ಹೊಂದಿರುತ್ತದೆ.

ಕಿಂಗ್‌ಫಿಷರ್ ಕ್ಲಾಸ್‌/ವರ್ಗ
[ಬದಲಾಯಿಸಿ]

ಅಂತರರಾಷ್ಟ್ರೀಯ ಕಿಂಗ್‌ಫಿಷರ್ ಕ್ಲಾಸ್‌/ವರ್ಗ ಕೋಣೆಗಳಲ್ಲಿನ ಆಸನಗಳು 34 ಅಂಗುಲಗಳ ದಪ್ಪವಾಗಿದ್ದು, 18 ಅಂಗುಲಗಳಷ್ಟು ಅಗಲವಾಗಿದ್ದು 25 ಡಿಗ್ರಿಗಳಷ್ಟು ಓರೆಯಾಗಿರುತ್ತವೆ (6 ಅಂಗುಲಗಳು). ಪ್ರಯಾಣಿಕರಿಗೆ ಪೂರ್ಣ ಗಾತ್ರದ ಮೋಡಾಕ್ರಲಿಕ್‌ ಕಂಬಳಿಗಳು, ಪೂರ್ಣ ಗಾತ್ರದ ತಲೆದಿಂಬುಗಳು ಮತ್ತು ಉತ್ತಮ/ಉದ್ಯಮ ದರ್ಜೆಯ ಊಟವನ್ನು ನೀಡಲಾಗುತ್ತದೆ.

ಪ್ರತಿ ಕಿಂಗ್‌ಫಿಷರ್ ಕ್ಲಾಸ್‌/ವರ್ಗ ಆಸನವು AVOD ಸ್ಪರ್ಶಗ್ರಾಹಿ ನಿಯಂತ್ರಕಗಳಿರುವ 10.6 ಅಂಗುಲಗಳ ಅಗಲಪರದೆಯ ಪ್ರತ್ಯೇಕ ಕಿರುತೆರೆ/ಟೆಲಿವಿಷನ್‌ ಸಾಧನವನ್ನು ಹೊಂದಿರುತ್ತದೆ. IFE ಸೌಲಭ್ಯವು ಅಂತರರಾಷ್ಟ್ರೀಯ ಕಿಂಗ್‌ಫಿಷರ್ ಫಸ್ಟ್‌‌ ಶ್ರೇಣಿಯಲ್ಲಿ ಲಭ್ಯವಿರುವ ಸೌಲಭ್ಯಗಳನ್ನೇ ಹೊಂದಿರುತ್ತದೆ. ಅದನ್ನು ಆಸನದ ತೋಳುಪಟ್ಟಿಯಲ್ಲಿರುವ ಪ್ರತ್ಯೇಕಿಸಬಲ್ಲ ದೂರನಿಯಂತ್ರಕ ಕನ್ಸೋಲ್‌ ಮೂಲಕ ಕೂಡಾ ನಿಯಂತ್ರಿಸಬಹುದಾಗಿರುತ್ತದೆ. ಈ ಸಾಧನವನ್ನು IFE ಸಾಧನವನ್ನು, ಓದಲು ಸಹಾಯಕವಾಗುವ ದೀಪಗಳನ್ನು ನಿಯಂತ್ರಿಸಲು ಬಳಸಬಹುದಾಗಿರುತ್ತದಲ್ಲದೇ, ಆಟ ಆಡಲೂ ಬಳಸಬಹುದಾಗಿರುತ್ತದಲ್ಲದೇ ಹಾಗೂ ಸಾಧನವು ಕಿಂಗ್‌ಫಿಷರ್‌‌‌ನ 'ಏರ್‌ ಬೊಟಿಕ್‌' ಎಂಬ ಪ್ರಸಾಧನ ಸಾಮಗ್ರಿ ಸೌಲಭ್ಯದಂಗಡಿಯಲ್ಲಿ ಸಾಮಗ್ರಿ ಕೊಳ್ಳಲು ಕ್ರೆಡಿಟ್‌ ಕಾರ್ಡ್‌ಗಳನ್ನು ಹಾಯಿಸಲಾಗುವ ಕಿಂಡಿಯನ್ನು ಕೂಡಾ ಹೊಂದಿರುತ್ತದೆ. ಕಿಂಗ್‌ಫಿಷರ್ ಸಂಸ್ಥೆಯು ಲಭ್ಯ ಮಾಡದಿದ್ದರೂ ಈ ಸಾಧನವು ಪಠ್ಯಸಂದೇಶಗಳನ್ನು ಕಳುಹಿಸುವ ಸೌಲಭ್ಯವನ್ನು ಕೂಡಾ ಹೊಂದಿರುತ್ತದೆ.

ವಿಮಾನದ ಒಳಾಂಗಣ/ಆಂತರಿಕ ಮನೋರಂಜನೆ

[ಬದಲಾಯಿಸಿ]

ಕಿಂಗ್‌ಫಿಷರ್ ವಿಮಾನಗಳಲ್ಲಿರುವ IFE ಸಜ್ಜಿಕೆಗಳು ಏರ್‌ಬಸ್‌‌ A320 ಸರಣಿಯ ವಿಮಾನಗಳಲ್ಲಿ ಥೇಲ್ಸ್‌ ಟಾಪ್‌ಸೀರೀಸ್‌/ಅಗ್ರಸರಣಿ i3000/i4000 ಸಾಧನಗಳನ್ನು ಹೊಂದಿದ್ದರೆ, ಏರ್‌ಬಸ್‌‌ A330 ಸರಣಿಯ ವಿಮಾನಗಳಲ್ಲಿ ಥೇಲ್ಸ್‌ ಟಾಪ್‌ಸೀರೀಸ್‌/ಅಗ್ರಸರಣಿ i5000 ಸಾಧನಗಳನ್ನು ಹೊಂದಿದ್ದು ಇವುಗಳನ್ನು ಫ್ರಾನ್ಸ್‌‌‌‌-ಮೂಲದ ಥೇಲ್ಸ್‌ ಸಮೂಹವು[೨೫] ನಿರ್ಮಿಸಿರುತ್ತದೆ.

ಕಿಂಗ್‌ಫಿಷರ್ ಸಂಸ್ಥೆಯು ದೇಶೀಯ ವಿಮಾನಯಾನಗಳಲ್ಲಿ ಕೂಡಾ ಪ್ರತಿ ಆಸನಕ್ಕೆ ವಿಮಾನದ ಒಳಗೆ ಆಂತರಿಕ ಮನರಂಜನಾ (IFE) ಸಜ್ಜಿಕೆಗಳನ್ನು ಹೊಂದಿರುವ ಪ್ರಥಮ ಭಾರತೀಯ ವಿಮಾನಯಾನ ಸಂಸ್ಥೆಯಾಗಿದೆ ಕೂಡಾ. ಪ್ರಯಾಣಿಕರೆಲ್ಲರಿಗೂ ಲೇಖನಿ/ಪೆನ್ನು, ಮುಖ ಒರೆಸಲು ಬಳಸುವ ಟಿಶ್ಯೂ ಪೇಪರ್‌ ಮತ್ತು IFE ಸಜ್ಜಿಕೆಯೊಂದಿಗೆ ಬಳಸಲೆಂದು ಹೆಡ್‌ಫೋನ್‌ಗಳಂತಹಾ ಉಪಯುಕ್ತ ಸಾಮಗ್ರಿಗಳನ್ನು ಹೊಂದಿರುವ "ಸ್ವಾಗತ ಕಿಟ್‌ಪೆಟ್ಟಿಗೆ"ಯನ್ನು ನೀಡಲಾಗುತ್ತದೆ. ಪ್ರಸ್ತುತ, ಕಿಂಗ್‌ಫಿಷರ್ ಕ್ಲಾಸ್‌/ವರ್ಗ ದರ್ಜೆಯ ಪ್ರಯಾಣಿಕರಿಗೆ "ಸ್ವಾಗತ ಕಿಟ್‌ಪೆಟ್ಟಿಗೆ"ಗಳನ್ನು ಕೊಡಲಾಗುತ್ತಿಲ್ಲವಾದರೂ, ಈ ಹಿಂದೆ ಹೇಳಿದಂತೆ ಉಚಿತವಾದ ನಿಂಬೆ ಪಾನಕದ ಶೀಶೆ ಹಾಗೂ IFE ಸಜ್ಜಿಕೆಯೊಂದಿಗೆ ಬಳಸಲು ಇಯರ್‌ಫೋನ್‌ಗಳನ್ನು ಈಗಲೂ ನೀಡಲಾಗುತ್ತಿದೆ‌. ಸೇವೆಯ ಆರಂಭದ ವೇಳೆಯಲ್ಲಿ, ಪ್ರಯಾಣಿಕರಿಗೆ IFE ಸಜ್ಜಿಕೆಯಲ್ಲಿ ಕೇವಲ ರೆಕಾರ್ಡ್‌‌ ಮಾಡಿಡಲಾಗಿದ್ದ TV ಕಾರ್ಯಕ್ರಮಗಳನ್ನು ಮಾತ್ರ ನೋಡಲು ಸಾಧ್ಯವಾಗುತ್ತಿತ್ತು, ಆದರೆ ನಂತರ ಡಿಶ್‌‌ TV ಸಂಸ್ಥೆಯೊಡನೆ ವ್ಯಾವಹಾರಿಕ ಮೈತ್ರಿ ರಚಿಸಿಕೊಂಡು ವಿಮಾನದೊಳಗೆ ಲೈವ್‌ TV ಸೇವೆಯನ್ನು ನೀಡಲಾಯಿತು.[೨೬] ಅಷ್ಟೇ ಅಲ್ಲದೇ ಸಿದ್ಧ ಸಂಪ್ರದಾಯಕ್ಕೆ ವಿರುದ್ಧವಾಗಿ ಗಮನ ಸೆಳೆಯುವಂತೆ IFE ಸಜ್ಜಿಕೆಗಳ ಮುಖಾಂತರ ಪರದೆಯ ಮೇಲೆಯೇ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲು ಕಿಂಗ್‌ಫಿಷರ್ ಏರ್‌‍ಲೈನ್ಸ್ ಸಂಸ್ಥೆಯು ನಿರ್ಧರಿಸಿತಾದರೂ, ಈಗಲೂ ಅನೇಕ ವಿಮಾನಯಾನಗಳಲ್ಲಿ ಸಂಪ್ರದಾಯ ಬದ್ಧವಾದ ಸುರಕ್ಷತಾ ಕ್ರಮಗಳ ಬಗೆಗಿನ ನಿರ್ದೇಶನ ಪ್ರಾತ್ಯಕ್ಷಿಕೆಯನ್ನು ವಿಮಾನದ ಸಿಬ್ಬಂದಿಗಳಿಂದಲೇ ಮಾಡಿಸುವ ವ್ಯವಸ್ಥೆಯು ಈಗಲೂ ಚಾಲ್ತಿಯಲ್ಲಿದೆ.

ಕಿಂಗ್‌ ಕ್ಲಬ್‌‌

[ಬದಲಾಯಿಸಿ]
ಚಿತ್ರ:King Club Logo.png

ಕಿಂಗ್‌ಫಿಷರ್ ಏರ್‌‍ಲೈನ್ಸ್ ಸಂಸ್ಥೆಯ ವಾಡಿಕೆಯ ವಿಮಾನ ಪ್ರಯಾಣಿಕ ಯೋಜನೆಯನ್ನು ಕಿಂಗ್‌ ಕ್ಲಬ್ ‌ ಎಂದು ಕರೆಯಲಾಗುತ್ತದೆ, ಈ ಯೋಜನೆಯ ಸದಸ್ಯರು ಪ್ರಕಾರ ಕಿಂಗ್‌ಫಿಷರ್ ಅಥವಾ ಅದರ ಭಾಗೀದಾರ ವಿಮಾನಯಾನ ಸಂಸ್ಥೆಗಳ ಮೂಲಕ ಪ್ರಯಾಣಿಸಿದಾಗ, ಹೋಟೆಲ್‌ಗಳಿಗೆ ಭೇಟಿ ನೀಡಿದಾಗ, ಕಾರುಗಳನ್ನು ಬಾಡಿಗೆಗೆ ತೆಗೆದುಕೊಂಡಾಗ, ಹಣಕಾಸು ಮತ್ತು ಜೀವನಶೈಲಿ ಉದ್ಯಮಗಳಲ್ಲಿ ವ್ಯವಹರಿಸಿದಾಗ ಪ್ರತಿ ಬಾರಿಯೂ ಕಿಂಗ್‌ ಮೈಲ್ಸ್ ‌ ಎಂಬ ಅಂಕಗಳನ್ನು ಗಳಿಸಬಹುದಾಗಿರುತ್ತದೆ. ಈ ಯೋಜನೆಯಲ್ಲಿ ಕೆಂಪು/ರೆಡ್‌‌, ಬೆಳ್ಳಿ/ಸಿಲ್ವರ್‌‌, ಚಿನ್ನ/ಗೋಲ್ಡ್‌‌ ಮತ್ತು ಪ್ಲಾಟಿನಮ್‌ ಎಂಬ ಒಟ್ಟು ನಾಲ್ಕು ದರ್ಜೆಗಳಿವೆ. ಸದಸ್ಯರು ತಾವು ಹೀಗೆ ಗಳಿಸಿದ ಅಂಕಗಳನ್ನು ಅನೇಕ ವಿಧವಾದ ಯೋಜನೆಗಳಲ್ಲಿ ಬಳಸಿಕೊಂಡು ಅನುಕೂಲ ಪಡೆದುಕೊಳ್ಳಬಹುದಾಗಿರುತ್ತದೆ. ಪ್ಲಾಟಿನಮ್‌, ಚಿನ್ನ/ಗೋಲ್ಡ್‌ ಮತ್ತು ಬೆಳ್ಳಿ/ಸಿಲ್ವರ್‌‌ ದರ್ಜೆಯ ಸದಸ್ಯರು ಕಿಂಗ್‌ಫಿಷರ್ ಲೌಂಜ್‌‌ ಸೇವೆ ಗೆ ಪ್ರವೇಶವನ್ನು ಹೊಂದಿರುತ್ತಾರಲ್ಲದೇ, ಆದ್ಯತೆಯ ಚೆಕ್‌-ಇನ್‌‌, ಹೆಚ್ಚುವರಿ ಸರಕು ಸೌಲಭ್ಯ, ಬೋನಸ್‌ ಮೈಲ್‌‌ಗಳನ್ನು ಪಡೆಯುತ್ತಾರಲ್ಲದೇ, ಚಿನ್ನ/ಗೋಲ್ಡ್‌ ಸದಸ್ಯತ್ವವನ್ನು ಹೊಂದಿದವರಿಗೆ ಮತ್ತು 3 ಕಿಂಗ್‌ಫಿಷರ್ ಫಸ್ಟ್‌‌ ದರ್ಜೆ ಬಡ್ತಿ ವೋಚರ್‌ಗಳನ್ನು ಕೂಡಾ ನೀಡಲಾಗುತ್ತದೆ. ಪ್ಲಾಟಿನಮ್ ಸದಸ್ಯರು 5 ದರ್ಜೆ ಬಡ್ತಿ ವೋಚರ್‌ಗಳನ್ನು ಪಡೆಯುತ್ತಾರೆ.

ಕಿಂಗ್‌ಫಿಷರ್ ಲೌಂಜ್‌‌/ವಿಶ್ರಾಂತಿಗೃಹ

[ಬದಲಾಯಿಸಿ]

ಕಿಂಗ್‌‌ ಕ್ಲಬ್‌ ಬೆಳ್ಳಿ/ಸಿಲ್ವರ್‌ ‌ ಮತ್ತು ಕಿಂಗ್‌‌ ಕ್ಲಬ್‌ ಚಿನ್ನ/ಗೋಲ್ಡ್‌ ಸದಸ್ಯರುಗಳ ಜೊತೆಗೆ ಕಿಂಗ್‌ಫಿಷರ್ ಫಸ್ಟ್‌‌ ದರ್ಜೆ ಯ ಪ್ರಯಾಣಿಕರಿಗೆ ಕೂಡಾ ಕಿಂಗ್‌ಫಿಷರ್ ಲೌಂಜ್‌‌/ವಿಶ್ರಾಂತಿಗೃಹಗಳ ಸೇವೆಯನ್ನು ನೀಡಲಾಗುತ್ತದೆ. ವಿಶ್ರಾಂತಿ ಗೃಹಗಳು ಕೆಳಕಂಡ ಸ್ಥಳಗಳಲ್ಲಿವೆ:

  • ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ
  • ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
  • ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ (ಮುಂಬಯಿ ಮಹಾನಗರ)
  • ಕೊಚ್ಚಿ/ಕೊಚಿನ್‌‌‌ ಅಂತರರಾಷ್ಟ್ರೀಯ ವಿಮಾನನಿಲ್ದಾಣ (ಕೊಚ್ಚಿ/ಕೊಚಿನ್‌ ನಗರ)
  • ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ (ದೆಹಲಿ)
  • ಲಂಡನ್‌ನ ಹೀಥ್ರೂ ವಿಮಾನ ನಿಲ್ದಾಣ
  • ನೇತಾಜಿ ಸುಭಾಷ್‌‌ಚಂದ್ರ ಬೋಸ್‌ ಅಂತರರಾಷ್ಟ್ರೀಯ ವಿಮಾನನಿಲ್ದಾಣ (ಕೋಲ್ಕತಾ)
  • ರಾಜೀವ್‌‌ ಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ (ಹೈದರಾಬಾದ್‌‌)

ಪ್ರಶಸ್ತಿಗಳು ಮತ್ತು ಸಾಧನೆಗಳು

[ಬದಲಾಯಿಸಿ]
ಮಲೇಷ್ಯನ್‌ GPನಲ್ಲಿ ಆಡ್ರಿಯನ್‌‌‌ ಸುಟಿಲ್‌ರು ಲ್ಯೂಯಿಸ್‌‌‌/ಲೆವಿಸ್‌ ಹ್ಯಾಮಿಲ್ಟನ್‌ರನ್ನು ಬೆನ್ನಟ್ಟುತ್ತಿರುವುದು. ಕಿಂಗ್‌ಫಿಷರ್ ಸಂಸ್ಥೆಯು ಫೋರ್ಸ್‌‌ ಇಂಡಿಯಾದ ಓರ್ವ ಪ್ರಾಯೋಜಕ ಸಂಸ್ಥೆಯಾಗಿದೆ
  • ಕಿಂಗ್‌ಫಿಷರ್ ಏರ್‌‍ಲೈನ್ಸ್ ಸಂಸ್ಥೆಯ ವಾಡಿಕೆಯ ವಿಮಾನ ಪ್ರಯಾಣಿಕ ಯೋಜನೆಯಾದ, ಕಿಂಗ್‌‌ ಕ್ಲಬ್‌ ಯೋಜನೆಯು ಜಪಾನ್‌‌, ಪೆಸಿಫಿಕ್‌‌, ಏಷ್ಯಾ ಮತ್ತು ಆಸ್ಟ್ರೇಲಿಯಾ ವಲಯಗಳಲ್ಲಿನ ಸೇವೆಗೆ 21ನೇ ವಾರ್ಷಿಕ ಫ್ರೆಡ್ಡೀ ಪಾರಿತೋಷಕ/ಅವಾರ್ಡ್ಸ್‌‌ ಸಮಾರಂಭದಲ್ಲಿ ಅಗ್ರ ಮನ್ನಣೆಯನ್ನು ಗೆದ್ದಿತ್ತು.
    • ಕಿಂಗ್‌‌ ಕ್ಲಬ್‌ ಯೋಜನೆಯು 2008ರ ಸಾಲಿನ ಫ್ರೆಡ್ಡೀ ಪಾರಿತೋಷಕ/ಅವಾರ್ಡ್ಸ್‌‌ ಪಟ್ಟಿಯಲ್ಲಿ ಕೆಳಕಂಡ ವರ್ಗಗಳಲ್ಲಿ ಪಾರಿತೋಷಕ ಗೆದ್ದಿದೆ:
      • ಅತ್ಯುತ್ತಮ ಬೋನಸ್‌ ಉತ್ತೇಜನೆ
      • ಅತ್ಯುತ್ತಮ ಗ್ರಾಹಕ ಸ್ನೇಹಿ ಸೇವೆ
      • ಅತ್ಯುತ್ತಮ ಸದಸ್ಯರ ಸಂವಹನ ವ್ಯವಸ್ಥೆ (ಪ್ರಥಮ ರನ್ನರ್‌‌-ಅಪ್‌‌)
      • ಅತ್ಯುತ್ತಮ ಪ್ರಶಸ್ತಿ ಮರುಖರೀದಿ ವ್ಯವಸ್ಥೆ (ಪ್ರಥಮ ರನ್ನರ್‌‌-ಅಪ್‌‌)
      • ಅತ್ಯುತ್ತಮ ಗಣ್ಯ ದರ್ಜೆ (ದ್ವಿತೀಯ ರನ್ನರ್‌‌-ಅಪ್‌‌)
      • ಅತ್ಯುತ್ತಮ ಜಾಲತಾಣ (ದ್ವಿತೀಯ ರನ್ನರ್‌‌-ಅಪ್‌‌)
      • ವರ್ಷದ ವಿಶೇಷ ಯೋಜನೆ (ದ್ವಿತೀಯ ರನ್ನರ್‌‌-ಅಪ್‌‌)
  • ಕಿಂಗ್‌ಫಿಷರ್ ಏರ್‌‍ಲೈನ್ಸ್ ಸಂಸ್ಥೆಯು ಸ್ಕೈಟ್ರಾಕ್ಸ್‌‌ ವಿಶ್ವ ವಿಮಾನಯಾನ ಸಂಸ್ಥೆಗಳ ಪ್ರಶಸ್ತಿಗಳು 2010ರಲ್ಲಿ ಮೂರು ಜಾಗತಿಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ
    • ಭಾರತ/ಮಧ್ಯ ಏಷ್ಯಾ ವಲಯದ ಅತ್ಯುತ್ತಮ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆ ; ಅತ್ಯುತ್ತಮ ವಿಮಾನಸಿಬ್ಬಂದಿ – ಮಧ್ಯ ಏಷ್ಯಾ ವಲಯ.
    • ಕಿಂಗ್‌ಫಿಷರ್ ರೆಡ್‌‌ ಸಂಸ್ಥೆಯನ್ನು ಭಾರತ/ಮಧ್ಯ ಏಷ್ಯಾ ವಲಯದಲ್ಲಿನ ಅತ್ಯುತ್ತಮ ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಎಂಬ ಮನ್ನಣೆ ದೊರಕಿತು.
  • NDTV ವಿಮಾನಯಾನ ಕ್ಷೇತ್ರದಲ್ಲಿ ನೀಡುವ ಲಾಭದಾಯಕ ಉದ್ದಿಮೆ ನಾಯಕತ್ವ ಕ್ಕೆ ನೀಡುವ ಪ್ರಶಸ್ತಿ.
  • ಸ್ಕೈಟ್ರಾಕ್ಸ್‌‌ ಸಂಸ್ಥೆಯಿಂದ ಭಾರತದ ಏಕೈಕ 5 ತಾರಾ ವಿಮಾನಯಾನ ಸಂಸ್ಥೆ , ಹಾಗೂ ವಿಶ್ವದ 6ನೇ ವಿಮಾನಯಾನ ಸಂಸ್ಥೆ ಎಂಬ ಶ್ರೇಯಾಂಕ ನೀಡಿಕೆ.
  • ದ ಬ್ರಾಂಡ್‌ ರಿಪೋರ್ಟರ್‌ ಸಂಸ್ಥೆಯ ಪ್ರಕಾರ 2008ರ ಸಾಲಿಗೆ ಭಾರತದ ದ್ವಿತೀಯ ಬಹು ಗಮನಸೆಳೆವ ಬ್ರಾಂಡ್ ‌ ಎಂಬ ಅಗ್ಗಳಿಕೆ.
  • ಪಿಚ್‌ ನಿಯತಕಾಲಿಕೆಯ ಪ್ರಕಾರ 2008ರ ಸಾಲಿನ ಭಾರತದ ಅಗ್ರ ಸೇವಾಸಂಸ್ಥೆಗಳ ಬ್ರಾಂಡ್‌ಗಳ ಲ್ಲಿ ಒಂದಾಗಿ ಪರಿಗಣನೆ.
  • ಭಾರತದ ಅಚ್ಚುಮೆಚ್ಚಿನ ವಿಮಾನಯಾನ ಸಂಸ್ಥೆ ಎಂದು ಚುನಾಯಿತಗೊಂಡಿತ್ತು.
  • ಏಷ್ಯಾ ಪೆಸಿಫಿಕ್‌ ವಲಯದ ಅಗ್ರ ವಿಮಾನಯಾನ ಸಂಸ್ಥೆ ಬ್ರಾಂಡ್‌ ಎಂಬ ಅಗ್ಗಳಿಕೆ.
  • ಬ್ರಾಂಡ್‌ ನಾಯಕತ್ವ/ಲೀಡರ್‌ಷಿಪ್‌ ಪ್ರಶಸ್ತಿ .
  • ತ್ವರಿತ ಗ್ರಾಹಕಸೇವೆಯಲ್ಲಿ ಸಾಧಿಸಿದ ಇಕನಾಮಿಕ್‌ ಟೈಮ್ಸ್‌ ನೀಡುವ 2006ರ ಸಾಲಿನ ಅತ್ಯುನ್ನತಿಗಾಗಿ ಅವಾಯ ಪ್ರಶಸ್ತಿ ಗಳಿಕೆ.
  • ಬಿಜಿನೆಸ್‌ ವರ್ಲ್ಡ್‌‌ ನಿಯತಕಾಲಿಕೆ ಸಮೀಕ್ಷೆಯ ಪ್ರಕಾರ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುವ ಭಾರತದ No. 1 ವಿಮಾನಯಾನ ಸಂಸ್ಥೆ .
  • ಬಿಜಿನೆಸ್‌ ವರ್ಲ್ಡ್‌‌ ನಿಯತಕಾಲಿಕೆ ಸಮೀಕ್ಷೆಯ ಪ್ರಕಾರ ಭಾರತದ ಗೌರವಾನ್ವಿತ ಕಂಪೆನಿಗಳಲ್ಲಿ ಒಂದಾಗಿ ಪರಿಗಣನೆ .
  • 2006ರ ಸಾಲಿನಲ್ಲಿ ಪ್ಲಾನ್‌ಮನ್‌ ಮೀಡಿಯಾ ಸಂಸ್ಥೆಯ ಸಮೀಕ್ಷೆಯಲ್ಲಿ ಭಾರತದ 25 ನಾವೀನ್ಯತೆಯನ್ನು ಹೊಂದಿರುವ ಕಂಪೆನಿಗಳಲ್ಲಿ ಒಂದಾಗಿ ಪರಿಗಣನೆ .
  • ಟೈಮ್ಸ್‌ ಆಫ್‌ ಇಂಡಿಯಾ ಪತ್ರಿಕೆಗಾಗಿ IMB ನಡೆಸಿದ ಸಮೀಕ್ಷೆಯಲ್ಲಿ ಅತ್ಯುತ್ತಮ ವಿಮಾನಯಾನ ಸಂಸ್ಥೆ" ಮತ್ತು "ಭಾರತದ ಅಚ್ಚುಮೆಚ್ಚಿನ ಸರಕು ಸಾಗಣೆ ವಿಮಾನ ಸೇವೆ' ಎಂಬ ಪರಿಗಣನೆ.
  • ಪೆಸಿಫಿಕ್‌‌ ಏರಿಯಾ ಟ್ರಾವೆಲ್‌ ರೈಟರ್ಸ್‌ ಅಸೋಸಿಯೇಷನ್‌ (PATWA) ಸಂಸ್ಥೆಯಿಂದ ಅತ್ಯುತ್ತಮ ಸೇವೆಗಳು ಮತ್ತು ಆಹಾರಪದ್ಧತಿಗಳಿಗೆ ನೀಡುವ ಅತ್ಯುತ್ತಮ ನವೀನ ದೇಶೀಯ ವಿಮಾನಯಾನ ಸಂಸ್ಥೆ ಎಂಬ ಮನ್ನಣೆ .
  • ಸ್ಕೈಟ್ರಾಕ್ಸ್‌‌ನಿಂದ 2005-2006ರ ಸಾಲಿನಲ್ಲಿ ನವೀನ ವಿಮಾನಯಾನ ಸಂಸ್ಥೆಗಳ ಉತ್ಕೃಷ್ಟ ಸೇವೆಗೆ ನೀಡುವ ಮನ್ನಣೆ ಗೆ ಪಾತ್ರ.
  • ಬಿಜಿನೆಸ್‌ ಸ್ಟ್ಯಾಂಡರ್ಡ್‌‌ ಸಂಸ್ಥೆಯು ನಡೆಸಿದ ಬ್ರಾಂಡ್‌ ಡರ್ಬಿ ಸಮೀಕ್ಷೆಯಲ್ಲಿ 2005ರ ಸಾಲಿನ ಭಾರತದ ಬಹು ಯಶಸ್ವಿ ಬ್ರಾಂಡ್‌ ಉಪಕ್ರಮ ಕ್ಕೆ ಮೂರನೇ ಶ್ರೇಯಾಂಕ.
  • ದ ಬ್ರಾಂಡ್‌ ರಿಪೋರ್ಟರ್‌ ಸಂಸ್ಥೆ ಹಾಗೂ ಏಜೆನ್ಸಿಎಫ್‌ಎಕ್ಯೂಸ್‌ಗಳು ನಡೆಸಿದ ಸಮೀಕ್ಷೆಯ ಪ್ರಕಾರ 2005ರ ಸಾಲಿನ ಗಮನ ಸೆಳೆದ ಬ್ರಾಂಡ್‌ಗಳು .
  • Yahooನ ಪ್ರಕಾರ ಅಗ್ರ ಹತ್ತು ಅಂತರಜಾಲ ಜಾಹೀರಾತುದಾರರಲ್ಲಿ ಒಂದು ಸಂಸ್ಥೆಯಾಗಿ ಮಾನ್ಯತೆ.
  • NDTVಯು ನಡೆಸಿದ ಸಮೀಕ್ಷೆಯಲ್ಲಿ ಅಗ್ರ ಹತ್ತು ಅತ್ಯುತ್ತಮ ಕಿರುತೆರೆ ಜಾಹೀರಾತು ಸಂಗೀತಗಳ ಲ್ಲಿ ಒಂದು ಸಂಸ್ಥೆಯಾಗಿ ಮಾನ್ಯತೆ.
  • ಸೆಂಟರ್‌ ಫಾರ್‌ ಏಷ್ಯಾ ಪೆಸಿಫಿಕ್‌ ಏವಿಯೇಷನ್‌ (CAPA) ಪ್ರಶಸ್ತಿ ಸಂಸ್ಥೆಯಿಂದ 2005ರ ಸಾಲಿನ ವರ್ಷದ ಅತ್ಯುತ್ತಮ ನವೀನ ವಿಮಾನಯಾನ ಸಂಸ್ಥೆ ಪ್ರಶಸ್ತಿಯನ್ನು ಏಷ್ಯಾ-ಪೆಸಿಫಿಕ್‌ ಮತ್ತು ಮಧ್ಯ ಪೂರ್ವ ವಲಯಗಳಿಗೆ ಅನ್ವಯಿಸುವಂತೆ ನೀಡಿತ್ತು.

ಕಿಂಗ್‌ಫಿಷರ್‌‌ ಸಂಸ್ಥೆಯ ಪ್ರಕಾರ [೨೭]

ಅಪಘಾತಗಳು ಮತ್ತು ಘಟನೆಗಳು

[ಬದಲಾಯಿಸಿ]
  • 10 ನವೆಂಬರ್‌‌ 2009ರಂದು, ATR 72-212A VT-KAC ವಿಮಾನದ ಮೂಲಕ ಕಾರ್ಯಾಚರಿಸಿದ 4124 ಸಂಖ್ಯೆಯ ಯಾನವು, ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಲ್ಯಾಂಡಿಂಗ್‌ ಮಾಡಿದ ನಂತರ ರನ್‌ವೇ ಮೇಲೆ ಜಾರಿ ಓಡಿತ್ತು. ವಿಮಾನಕ್ಕೆ ಗಮನಾರ್ಹ ಪ್ರಮಾಣದಲ್ಲಿ ಹಾನಿಯಾದರೂ ಎಲ್ಲಾ 46 ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿ ಸಣ್ಣ ಗಾಯವೂ ಇಲ್ಲದೇ ಪಾರಾಗಿದ್ದರು[೨೮]. ನಾಗರಿಕ ವಿಮಾನಯಾನದ ಪ್ರಧಾನ ನಿಯಂತ್ರಕ ಕಛೇರಿಯು ಈ ಅಪಘಾತದ ಅಂತಿಮ ವರದಿಯನ್ನು ನವೆಂಬರ್‌‌ 2010ರಲ್ಲಿ ಬಿಡುಗಡೆಗೊಳಿಸಿತ್ತು. ಅದರ ಪ್ರಕಾರ ಇದು ಪೈಲಟ್‌ ಮಾಡಿದ ಪ್ರಮಾದದಿಂದಾಗಿ ಸಂಭವಿಸಿದ್ದು, ರನ್‌ವೇ 14/32ಅನ್ನು ನಿರ್ವಹಣೆಗಾಗಿ ಮುಚ್ಚಿದ ಕಾರಣ, ಕಡಿಮೆ ದೂರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ರನ್‌ವೇ 27A ಎಂದು ಹೆಸರಿಸಲಾಗಿದ್ದ ರನ್‌ವೇ 27ರಲ್ಲಿ ತೀರ ಕೆಳಗಿನ ತನಕ ಅತಿವೇಗದ ಲ್ಯಾಂಡಿಂಗ್‌ ಮಾಡಿದ್ದು ಅಪಘಾತಕ್ಕೆ ಕಾರಣವಾಗಿತ್ತು.[೨೯]

ಇವನ್ನೂ ನೋಡಿ

[ಬದಲಾಯಿಸಿ]

ಟೆಂಪ್ಲೇಟು:Portal box

  • ವಿಜಯ್‌ ಮಲ್ಯ
  • ಕಿಂಗ್‌ಫಿಶರ್‌‌‌ ರೆಡ್‌
  • ಭಾರತದ ವಿಮಾನಯಾನ ಸಂಸ್ಥೆಗಳ ಪಟ್ಟಿ
  • ಭಾರತದಲ್ಲಿರುವ ವಿಮಾನನಿಲ್ದಾಣಗಳ ಪಟ್ಟಿ
  • ಭಾರತದ ಕಂಪೆನಿಗಳ ಪಟ್ಟಿ
  • ಭಾರತದಲ್ಲಿನ ಸಾರಿಗೆ-ಸಂಪರ್ಕ ವ್ಯವಸ್ಥೆ.
  • ಯುನೈಟೆಡ್‌ ಬ್ರೂವರೀಸ್‌ ಉದ್ಯಮ ಸಮೂಹ

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Kingfisher Airlines Launches Flights on the New Delhi - London Route". Flykingfisher.com. Archived from the original on 2010-04-01. Retrieved 2010-08-30.
  2. "Airline Membership". IATA. Archived from the original on 2015-07-11. Retrieved 2011-01-23.
  3. "ನಮ್ಮನ್ನು ಸಂಪರ್ಕಿಸಿ Archived 2013-05-12 ವೇಬ್ಯಾಕ್ ಮೆಷಿನ್ ನಲ್ಲಿ." ಕಿಂಗ್‌ಫಿಷರ್ ಏರ್‌‍ಲೈನ್ಸ್ 2009ರ ಆಗಸ್ಟ್ 25ರಂದು ಮರುಸಂಪಾದಿಸಲಾಯಿತು.
  4. ENS ಇಕನಾಮಿಕ್‌ ಬ್ಯೂರೋ. "ಜೆಟ್‌‌, ಕಿಂಗ್‌ಫಿಷರ್ ಸಂಸ್ಥೆಗಳು ವ್ಯೂಹ ರಚನೆಯ ಯಾನಗಳನ್ನು ನಡೆಸಲು ಪ್ರಯತ್ನಿಸುತ್ತಿವೆ." ಇಂಡಿಯನ್‌ ಎಕ್ಸ್‌ಪ್ರೆಸ್‌. ಮಂಗಳವಾರ 14 ಅಕ್ಟೋಬರ್‌‌ 2008. 2009ರ ಆಗಸ್ಟ್ 25ರಂದು ಮರುಸಂಪಾದಿಸಲಾಯಿತು.
  5. "The World's Official 5-Star Airlines™". Airlinequality.com. Archived from the original on 17 ಜುಲೈ 2012. Retrieved 23 ಜನವರಿ 2011. {{cite web}}: Unknown parameter |accessdaye= ignored (help)
  6. "Domestic Passengers carried by Indian Scheduled Airlines in the Month of May, 2009". Pib.nic.in. Retrieved 2010-08-30.
  7. "Kingfisher Airlines to take wings on May 9". Dancewithshadows.com. 2005-05-09. Archived from the original on 2016-03-03. Retrieved 2010-08-30.
  8. "ಆರ್ಕೈವ್ ನಕಲು". Archived from the original on 2010-08-21. Retrieved 2011-01-23.
  9. "oneworld invites Kingfisher Airlines on board". Oneworld.com. 2010-06-07. Archived from the original on 2011-09-15. Retrieved 2010-08-30.
  10. "Kingfisher Airlines joins 'oneworld alliance'". The Jakarta Post. Archived from the original on 2010-06-11. Retrieved 2010-07-16.
  11. "ವಾಯುಯಾನ ಸಂಮರ್ದ ಅಂಕಿಅಂಶಗಳು". Archived from the original on 2009-04-20. Retrieved 2011-01-23.
  12. "Kingfisher Airlines and American Airlines enter into Codeshare Agreement". Kingfisher Airlines official website. 2010-11-23. Retrieved 2010-11-23.
  13. "News". oneworld. 2010-06-07. Archived from the original on 2011-09-15. Retrieved 2010-07-16.
  14. "Kingfisher Airlines Fleet". Flykingfisher.com. 2010-08-15. Archived from the original on 2014-10-10. Retrieved 2010-08-30.
  15. ಕಿಂಗ್‌ಫಿಷರ್ ಏರ್‌‍ಲೈನ್ಸ್ ಸಂಸ್ಥೆಯು ಏರ್‌ಬಸ್‌‌ A320S ವಿಮಾನಗಳ ಸೇವೆಯನ್ನು ಆರಂಭಿಸಲಿದೆ
  16. "Kingfisher Airlines to add A319s to A320 fleet" (Press release). Airbus. 2005-02-23. Archived from the original on 2010-12-04. Retrieved 1 November 2010.
  17. "Kingfisher Airlines celebrates delivery of first Airbus A320" (Press release). Airbus. 2005-04-25. Archived from the original on 2010-12-04. Retrieved 1 November 2010.
  18. "Kingfisher becomes first Indian customer for A380, A350, & A330" (Press release). Airbus. 2005-06-15. Retrieved 1 November 2010.
  19. "Kingfisher to acquire 30 more Airbus A320s" (Press release). Airbus. 2005-11-21. Retrieved 1 November 2010.
  20. "Kingfisher grows its Airbus fleet with purchase of five A340-500" (Press release). Airbus. 2006-04-24. Archived from the original on 2010-12-03. Retrieved 1 November 2010.
  21. "Kingfisher agrees to buy 50 Airbus widebody and single aisle aircraft" (Press release). Airbus. 2007-06-20. Archived from the original on 2010-11-14. Retrieved 2 November 2010.
  22. "Kingfisher Airlines Unveils Its First Wide Body Aircraft". Flykingfisher.com. Archived from the original on 2011-07-11. Retrieved 2010-08-30.
  23. "Microsoft PowerPoint - KFA Investor_Presentation Final_March 2010 For upload.ppt [Compatibility Mode]" (PDF). Archived from the original (PDF) on 2011-07-25. Retrieved 2010-08-30.
  24. Skytrax News. "Kingfisher Airlines unveil new Airbus A330-200 designed to take the customer experience to the highest quality level". Airlinequality.com. Retrieved 2010-08-30.
  25. Ravi Teja Sharma / New Delhi October 05, 2006 (2006-10-05). "Airborne again: IFE systems". Business-standard.com. Retrieved 2010-08-30.{{cite web}}: CS1 maint: numeric names: authors list (link)
  26. "Kingfisher partners with Dish TV". Techtree.com. 2006-12-09. Archived from the original on 2008-11-20. Retrieved 2010-08-30.
  27. "Acievements and Awards". Flykingfisher.com. Archived from the original on 2010-07-24. Retrieved 2010-08-30.
  28. "Accident description". Aviation Safety Network. Archived from the original on 13 ನವೆಂಬರ್ 2009. Retrieved 11 November 2009.
  29. "Report on Serious Incidents to M/S Kingfisher Airlines ATR-72 Aircrft VT-KAC at Mumbai on 10.11.2009" (PDF). Directorate General of Civil Aviaton. Archived from the original (PDF) on 16 ಜುಲೈ 2011. Retrieved 25 November 2010.


ಬಾಹ್ಯ ಕೊಂಡಿಗಳು

[ಬದಲಾಯಿಸಿ]