ಭಾರತೀಯ ಸ್ಟೇಟ್ ಬ್ಯಾಂಕ್
Jump to navigation
Jump to search
ಚಿತ್ರ:State Bank of India logo.svg | |
ಪ್ರಕಾರ | ಸಾರ್ವಜನಿಕ (ಬಿಎಸ್ಇ, ಎನ್ಎಸ್ಇ: ಎಸ್‌ಬಿಐ) & (LSE: SBID) |
---|---|
ಸ್ಥಾಪನೆ | ಕೋಲ್ಕತಾ, ೧೮೦೬ (as Bank of Calcutta) |
ಮುಖ್ಯ ಕಾರ್ಯಾಲಯ | ಸ್ಟೇಟ್ ಬ್ಯಾಂಕ್ ಭವನ, ಎಂ.ಸಿ. ರಸ್ತೆ, ನಾರಿಮನ್ ಪಾಯಿಂಟ್, ಮುಂಬೈ, ಮಹಾರಾಷ್ಟ್ರ, ಭಾರತ |
ವ್ಯಾಪ್ತಿ ಪ್ರದೇಶ | ವಿಶ್ವಾದ್ಯಂತ |
ಪ್ರಮುಖ ವ್ಯಕ್ತಿ(ಗಳು) | ರಜನಿಶ್ ಕುಮಾರ್ (ಅಧ್ಯಕ್ಷರು) |
ಉದ್ಯಮ | ಬ್ಯಾಂಕ್ ಇನ್ಶೂರೆನ್ಸ್ ಕ್ಯಾಪಿಟಲ್ ಮಾರ್ಕೆಟ್ |
ಉತ್ಪನ | ಸಾಲ ಕ್ರೆಡಿಟ್ ಕಾರ್ಡ್‌ಗಳು, ಉಳಿತಾಯ ಖಾತೆ Investment vehicles ಎಸ್‌ಬಿಐ ಲೈಫ್ ಇನ್ಶುರೆನ್ಸ್ |
ಆದಾಯ | ![]() |
ಕಾರ್ಯಕಾರಿ ಆದಾಯ | ![]() |
ನಿವ್ವಳ ಆದಾಯ | ![]() |
ಒಟ್ಟು ಆಸ್ತಿ | ![]() |
ಉದ್ಯೋಗಿಗಳು | 205,896 |
ಅಂತರಜಾಲ ತಾಣ | bank |
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಭಾರತೀಯ ಬಹುರಾಷ್ಟ್ರೀಯ, ಸಾರ್ವಜನಿಕ ವಲಯದ ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳ ಶಾಸನಬದ್ಧ ಸಂಸ್ಥೆಯಾಗಿದೆ. ಇದು ಮಹಾರಾಷ್ಟ್ರದ ಮುಂಬೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸರ್ಕಾರಿ ನಿಗಮದ ಶಾಸನಬದ್ಧ ಸಂಸ್ಥೆಯಾಗಿದೆ. ೨೦೧೯ ರ ವಿಶ್ವದ ಅತಿದೊಡ್ಡ ಸಂಸ್ಥೆಗಳ ಫಾರ್ಚೂನ್ ಗ್ಲೋಬಲ್ ೫೦೦ ಪಟ್ಟಿಯಲ್ಲಿ ಎಸ್‌ಬಿಐ ೨೩೬ ನೇ ಸ್ಥಾನದಲ್ಲಿದೆ. ಇದು ಒಟ್ಟು ಸಾಲ ಮತ್ತು ಠೇವಣಿ ಮಾರುಕಟ್ಟೆಯ ನಾಲ್ಕನೇ ಒಂದು ಭಾಗದ ಜೊತೆಗೆ, ಆಸ್ತಿಯಲ್ಲಿ ೨೩% ಮಾರುಕಟ್ಟೆ ಪಾಲನ್ನು ಹೊಂದಿರುವ ಭಾರತದ ಅತಿದೊಡ್ಡ ಬ್ಯಾಂಕ್ ಆಗಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ[ಬದಲಾಯಿಸಿ]
- ಭಾರತೀಯ ಸ್ಟೇಟ್ ಬ್ಯಾಂಕ್ ಭಾರತದ ರಾಷ್ಟ್ರೀಕೃತ ಮತ್ತು ಖಾಸಗಿ ವಲಯದ ಬ್ಯಾಂಕ್ ಗಳ ಪೈಕಿ ಅತಿ ದೊಡ್ಡ ಬ್ಯಾಂಕ್ ಆಗಿದೆ. ೧೮೦೬ರಲ್ಲಿ ಸ್ಥಾಪಿತಗೊಂಡ ಈ ಬ್ಯಾಂಕ್ ನ್ನು 'ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ' ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.ಮುಂದೆ ೧೯೫೫ರಲ್ಲಿ ಭಾರತ ಸರ್ಕಾರ ಇದನ್ನು ರಾಷ್ಟ್ರೀಕೃತ ಬ್ಯಾಂಕ್ ಎಂದು ಘೋಷಿಸಿ 'ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ'ದ ಆಧೀನಕ್ಕೆ ಒಳಪಡಿಸಿತು.ಭಾರತದ ಹಳ್ಳಿಹಳ್ಳಿಗಳಲ್ಲಿಯೂ ತನ್ನ ಶಾಖೆಗಳನ್ನು ತೆರೆದಿರುವ ಸ್ಟೇಟ್ ಬ್ಯಾಂಕ್ ತನ್ನ ವಿಶ್ವಾಸದ ಪ್ರತೀಕವಾಗಿ ಜಗತ್ತಿನ ೩೨ ವಿವಿಧ ರಾಷ್ಟ್ರಗಳಲ್ಲಿ ಸುಮಾರು ೯೨ ಶಾಖೆಗಳನ್ನೂ ಕೂಡ ತೆರೆದಿದೆ.
ಇತರೆ ಸರ್ಕಾರಿಬ್ಯಾಂಕ್‍ಗಳು ಇದರಲ್ಲಿ ವಿಲೀನ[ಬದಲಾಯಿಸಿ]
- 2 Apr, 2017;
- ಐದು ಸಹವರ್ತಿ ಬ್ಯಾಂಕ್‌ಗಳು ಮತ್ತು ಭಾರತೀಯ ಮಹಿಳಾ ಬ್ಯಾಂಕ್ ಶನಿವಾರ ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ (ಎಸ್‌ಬಿಐ) ವಿಲೀನವಾಗಿವೆ. ದೇಶದಲ್ಲಿಯೇ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ, ಈ ವಿಲೀನ ಪ್ರಕ್ರಿಯೆ ನಂತರ ಆಸ್ತಿ ಮೌಲ್ಯದ ಆಧಾರದ ಮೇಲೆ ವಿಶ್ವದಲ್ಲಿರುವ ಪ್ರಮುಖ 50 ಬ್ಯಾಂಕ್‌ಗಳಲ್ಲಿ ಸ್ಥಾನ ಪಡೆದುಕೊಂಡಿದೆ.
- ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಆ್ಯಂಡ್ ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಟ್ರವಾಂಕೂರ್, ಎಸ್‌ಬಿಐನಲ್ಲಿ ವಿಲೀನಗೊಂಡಿವೆ. ವಿಲೀನಗೊಂಡಿರುವ ಬ್ಯಾಂಕ್‌ಗಳ ಷೇರುದಾರರನ್ನು ಸ್ವಾಗತಿಸಿರುವ ಎಸ್‌ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅವರು, ತ್ರೈಮಾಸಿಕದ ಒಳಗೆ ಮಹತ್ವದ ಬದಲಾವಣೆ ತರಲು ಬ್ಯಾಂಕ್ ಶ್ರಮಿಸಲಿದೆ ಎಂದು ಹೇಳಿದ್ದಾರೆ. ಈ ವಿಲೀನದಿಂದ ಬ್ಯಾಂಕ್ ಸಾಮರ್ಥ್ಯ ವಿಸ್ತರಣೆಯಾಗಲಿದೆ. ಕಾರ್ಯಾಚರಣೆ ಸಾಮರ್ಥ್ಯ ಹೆಚ್ಚಲಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.
ವಿಲೀನದ ನಂತರ ಎಸ್‌ಬಿಐ[ಬದಲಾಯಿಸಿ]
- 37ಕೋಟಿ ಗ್ರಾಹಕರ ಸಂಖ್ಯೆ
- 24ಸಾವಿರ ಒಟ್ಟು ಶಾಖೆಗಳು
- ರೂ.18.50 ಲಕ್ಷ ಕೋಟಿ- ವಿಲೀನವಾಗಿರುವ ಬ್ಯಾಂಕ್‌ಗಳ ಮುಂಗಡ
- 59ಸಾವಿರ ಎಟಿಎಂಗಳು [೧]
ನೇಮಕಾತಿ
ಭಾರತೀಯ ಸ್ಟೇಟ್ ಬ್ಯಾಂಕ್, ಯುವ ಪದವೀಧರ ಹಾಗು ಅನುಭವಿ ವೃತ್ತಿಪರರಿಗೆ ತಮ್ಮ ತಮ್ಮ ವೃತಿಜೀವನದ
ಬೆಳವಣಿಗೆಗಾಗಿ ಬಹಳ ಅವಕಾಶಗಳ್ಳನು ಒದಗಿಸುತದೆ. ದೇಶದ ಅತೀ ದೊಡ ಬ್ಯಾಂಕ್ ನಲ್ಲಿ ನಿಮ್ಮ ವೃತಿಜೀವನ ಆರಂಭಿಸಲು ಈ ಕೆಳಗಿನ ಅವಕಾಶಗಳ್ಳನು ನೋಡಿ.
ಉಲ್ಲೇಖ