ಸಿಂಡಿಕೇಟ್ ಬ್ಯಾಂಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Syndicate
ಸಂಸ್ಥೆಯ ಪ್ರಕಾರಸಾರ್ವಜನಿಕ ಉದ್ಯಮ
ಸ್ಥಾಪನೆಉಡುಪಿ, ೧೯೨೫ (as Canara Industrial and Banking Syndicate Limited)
ಮುಖ್ಯ ಕಾರ್ಯಾಲಯಮಣಿಪಾಲ, ಕರ್ನಾಟಕ, ಭಾರತ
ಪ್ರಮುಖ ವ್ಯಕ್ತಿ(ಗಳು)Madhukant Girdharilal Sanghvi
(Chairman& MD)
ಉದ್ಯಮಬ್ಯಾಂಕಿಂಗ್
ಹಣಕಾಸು ಸೇವೆಗಳು
ಉತ್ಪನ್ನಹಣಕಾಸು ಮತ್ತು ವಿಮೆ
ಗ್ರಾಹಕ ಸೇವೆಗಳು
ಸಾಂಸ್ಥಿಕ ಸೇವೆಗಳು
Investment Banking
Investment Management
Private Equity
Mortgages
Credit Cards
ಆದಾಯ ೧೧,೦೦೦ ಕೋಟಿ (ಯುಎಸ್$೨.೪೪ ಶತಕೋಟಿ) (2010)
ಉದ್ಯೋಗಿಗಳು25,569 (2010)
ಜಾಲತಾಣSyndicatebank.in

ಸಿಂಡಿಕೇಟ್ ಬ್ಯಾಂಕ್ ಬಾರತದ ಹಳೇಯ ಬ್ಯಾಂಕ್ ಗಳಲ್ಲಿ ಒಂದು.

ಬ್ಯಾಂಕಿನ ಇತಿಹಾಸ[ಬದಲಾಯಿಸಿ]

ಈ ವಾಣಿಜ್ಯ ಬ್ಯಾಂಕ್ ಕ್ರಿ.ಶ. 1925 ರಲ್ಲಿ ಉಡುಪಿ ಜಿಲ್ಲೆಯ ಉಡುಪಿಯಲ್ಲಿ(ಅಂದು ಉಡುಪಿಯು ದಕ್ಷಿಣಕನ್ನಡ ಜಿಲ್ಲೆಗೆ ಸೇರಿದ ಪಟ್ಟಣವಾಗಿತ್ತು) ಪ್ರಾರಂಭವಾಯಿತು. ಮೊದಲಿಗೆ ಇದರ ಹೆಸರು `ಕೆನರಾ ಇಂಡಸ್ಟ್ರಿಯಲ್ ಮತ್ತು ಬ್ಯಾಂಕಿಂಗ್ ಸಿಂಡಿಕೇಟ್ ಎಂಬುದು. ದಿನಾಂಕ 20.10.1925ರಂದು ಈ ಸಂಸ್ಥೆಯನ್ನು ನೋಂದಾಯಿಸಲಾಯಿತು. 1964ನೇ ಇಸವಿಯಲ್ಲಿ ಈ ಸಂಸ್ಥೆಗೆ 'ಸಿಂಡಿಕೇಟ್ ಬ್ಯಾಂಕ್ ಎಂದು ಮರುನಾಮಕರಣ ಮಾಡಲಾಯಿತು. 1949ನೇ ಇಸವಿಯಲ್ಲಿ ಈ ಸಂಸ್ಥೆಯ ಆಡಳಿತ ಹಾಗೂ ಮುಖ್ಯ ಕಛೇರಿಯನ್ನು ಉಡುಪಿಯಿಂದ ಮಣಿಪಾಲದ "ಮುಕುಂದ ನಿವಾಸ" ಎಂಬ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಉಡುಪಿ ಮತ್ತು ಸುತ್ತಮುತ್ತಲಿನ ನೇಕಾರರು ಬಹಳ ಕಷ್ಟಗಳನ್ನು ಅನುಭವಿಸುತ್ತಿದ್ದರು. ಅದನ್ನು ಮನಗಂಡ ಅಲ್ಲಿನ ಒಬ್ಬರು ಉದ್ಯಮಿ ಈ ನೇಕಾರರಿಗೆ ತಮ್ಮ ಸಹಾಯ ಹಸ್ತವನ್ನು ಚಾಚಿ ಅವರ ಕಷ್ಟಗಳನ್ನು ದೂರಮಾಡಬೇಕೆಂದು ಪಣತೊಟ್ಟರು. ಅದರ ಫಲವೇ `ಕೆನರಾ ಇಂಡಸ್ಟ್ರಿಯಲ್ ಮತ್ತು ಬ್ಯಾಂಕಿಂಗ್ ಸಿಂಡಿಕೇಟ್ ಸಂಸ್ಥೆಯ ಉದಯ. ಇದೆ ಮೊದಲ ಸಂಸ್ಥಾಪಕ ಮಂಡಳಿಯ ಸದಸ್ಯರೆಂದರೆ ಉದ್ಯಮಿ ಶ್ರೀಯುತ ಉಪೇಂದ್ರ ಅನಂತ ಪೈ, ಇಂಜಿನಿಯರ್ ವಿ. ಎಸ್. ಕುಡುವಾ ಮತ್ತು ವೈದ್ಯ ಡಾ. ಟಿ. ಎಮ್. ಎ. ಪೈ ಅವರುಗಳು. ಈ ಸಂಸ್ಥೆಯ ಮೊದಲ ಅಧ್ಯಕ್ಷರು ಶ್ರೀಯುತ ಉಪೇಂದ್ರ ಅನಂತ ಪೈಗಳು.

ರಾಷ್ಟ್ರೀಕರಣದ ನಂತರದ ಬೆಳವಣಿಗೆ[ಬದಲಾಯಿಸಿ]

ಬ್ಯಾಂಕ್ 1966-1970ರ ಕಾಲದಲ್ಲಿ ಅನೇಕ ಪ್ರಮುಖ ಬೆಳವಣಿಗೆ ಯನ್ನು ಕಂಡಿತು. ಶ್ರೀಯುತ ಟಿ. ಎ.ಪೈಗಳು 1967ರಲ್ಲಿ ಸಂಸ್ಥೆಯ ಅಧ್ಯಕ್ಷರೂ ಹಾಗೂ ವ್ಯವಸ್ಥಾಫಕ ನಿರ್ದೇಶಕ ರಾದರು. . 1967ರಲ್ಲಿ ರೈತರ ನಡುವೆ ಪರಸ್ಪರ ಮಾಹಿತಿ ವಿನಿಮಯಕ್ಕಾಗಿ ಸಿಂಡಿಕೇಟ್ ಬ್ಯಾಂಕ್ ಕೃಷಿ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. ಸಮಾಜವಾದೀ ಅಲೆಯ ಕಾರಣ ಜುಲೈ 19, 1969 ಎಲ್ಲ ಪ್ರಮುಖ ಬ್ಯಾಂಕಿಂಗ್ ಸಂಸ್ಥೆಗಳನ್ನು ರಾಷ್ಟ್ರೀಕರಣ ಗೊಳಿಸಲಾಯಿತು. ಸಿಂಡಿಕೇಟ್ ಬ್ಯಾಂಕ್ ಸಹ ಈ ವೇಳೆಗೆ ಒಂದು ಪ್ರಮುಖ ಸಂಸ್ಥೆಯಾಗಿ ಬೆಳೆದದ್ದರಿಂದ ಇದನ್ನೂ (ಇತರ 13 ಬ್ಯಾಂಕ್‍ಗಳನ್ನು ರಾಷ್ಟ್ರೀಕರಣ ಗೊಳಿಸಿದಂತೆ) ರಾಷ್ಟ್ರೀಕರಣ ಗೊಳಿಸಲಾಯಿತು. ರಾಷ್ಟ್ರೀಕರಣದ ನಂತರ ಈ ಬ್ಯಾಂಕ್ ವೇಗವಾಗಿ ಬೆಳೆದು ತನ್ನ ಸರ್ವಾಂಗೀಣ ಬೆಳವಣಿಗೆಯನ್ನು ಸಾಧಿಸಿದೆ

ವೀಲಿನ[ಬದಲಾಯಿಸಿ]

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]