ವಿಜಯ ಬ್ಯಾಂಕ್
ಗೋಚರ
(ವಿಜಯಾ ಬ್ಯಾಂಕ್ ಇಂದ ಪುನರ್ನಿರ್ದೇಶಿತ)
ಸಂಸ್ಥೆಯ ಪ್ರಕಾರ | ಸಾರ್ವಜನಿಕ ಬಿಎಸ್‌ಇ: 532401 |
---|---|
ಸ್ಥಾಪನೆ | ೧೯೩೧ ಮಂಗಳೂರು, ಭಾರತ |
ನಿಷ್ಕ್ರಿಯ | 1 ಏಪ್ರಿಲ್ 2019 |
ಮುಖ್ಯ ಕಾರ್ಯಾಲಯ | ಬೆಂಗಳೂರು, ಭಾರತ |
ಪ್ರಮುಖ ವ್ಯಕ್ತಿ(ಗಳು) | ಆಲ್ಬರ್ಟ್ ಟೌರೊ, ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ |
ಉದ್ಯಮ | ಆರ್ಥಿಕ ವಾಣಿಜ್ಯ ಬ್ಯಾಂಕುಗಳು |
ಉದ್ಯೋಗಿಗಳು | 11,528 (2007-08) |
ಜಾಲತಾಣ | www.vijayabank.com |
ವಿಜಯಾ ಬ್ಯಾಂಕ್ ಮಂಗಳೂರಿನಲ್ಲಿ ಸ್ಥಾಪನೆಯಾದ ಹಲವಾರು ಬ್ಯಾಂಕುಗಳಲ್ಲಿ ಒಂದು.
ಚರಿತ್ರೆ
[ಬದಲಾಯಿಸಿ]ಇದನ್ನು ಅತ್ತಾವರ ಬಾಲಕೃಷ್ಣ ಶೆಟ್ಟಿ ಅಕ್ಟೋಬರ್ ೨೩,೧೯೩೧ ರಂದು ಸ್ಥಾಪಿಸಿದರು.[೧]ಇದನ್ನು ವಿಜಯದಶಮಿಯ ದಿನ ಸ್ಥಾಪನೆ ಮಾಡಿದುದರಿಂದ ಇದಕ್ಕೆ ವಿಜಯಾ ಬ್ಯಾಂಕ್ ಎಂದು ಹೆಸರಾಯಿತು.[೨] ಇದನ್ನು ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ರೈತರಲ್ಲಿ ಬ್ಯಾಂಕಿಂಗ್ ಹವ್ಯಾಸ,ಉದ್ಯಮಶೀಲತೆ ಬೆಳಸಲು ಮತ್ತು ಅವರ ಆವಶ್ಯಕತೆಗಳಿಗೆ ಸುಲಭ ಹಣಕಾಸಿನ ಒದಗಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಸ್ಥಾಪನೆ ಮಾಡಲಾಯಿತು.೧೯೫೮ರಲ್ಲಿ ಇದು ಶೆಡ್ಯೂಲ್ಡ್ ಬ್ಯಾಂಕ್ ಆಗಿ ಪರಿವರ್ತನೆಯಾದರೆ,ಎಪ್ರಿಲ್ ೧೫,೧೯೮೦ರಂದು ರಾಷ್ಟ್ರೀಕರಣಗೊಂಡಿತು.೧೯೬೦-೧೯೬ರ ಅವಧಿಯಲ್ಲಿ ಇದು ಒಂಬತ್ತು ಸಣ್ಣ ಬ್ಯಾಂಕ್‍ಗಳನ್ನು ತನ್ನೊಳಗೆ ವಿಲೀನ ಮಾಡಿಕೊಂಡು ಅಖಿಲ ಭಾರತ ಮಟ್ಟದ ಬ್ಯಾಂಕಾಗಿ ಬೆಳೆಯಿತು. ಇದರ ಹಿಂದಿನ ಚಾಲಕಶಕ್ತಿಯಾಗಿದ್ದವರು ಅಂದಿನ ಅಧ್ಯಕ್ಷರಾದ ಮುಲ್ಕಿ ಸುಂದರರಾಮ ಶೆಟ್ಟಿಯವರು.
ಉಲ್ಲೇಖಗಳು
[ಬದಲಾಯಿಸಿ]- ↑ http://www.deccanherald.com/content/141131/a-banker-erased-memory.html
- ↑ "Vijaya Bank - Inception". Archived from the original on 2008-09-08. Retrieved 2015-08-26.