ವಿಷಯಕ್ಕೆ ಹೋಗು

ಅತ್ತಾವರ ಬಾಲಕೃಷ್ಣ ಶೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅತ್ತಾವರ ಬಾಲಕೃಷ್ಣ ಶೆಟ್ಟಿ
Known forವಿಜಯ ಬ್ಯಾಂಕ್‍ನ ಸ್ಥಾಪಕ

ಅತ್ತಾವರ ಬಾಲಕೃಷ್ಣ ಶೆಟ್ಟಿ(1883–1960)ಎ.ಬಿ.ಶೆಟ್ಟಿಯೆಂದೇ[] ಹೆಚ್ಚು ಪರಿಚಿತರಾಗಿದ್ದ ಅತ್ತಾವರ ಬಾಲಕೃಷ್ಣ ಶೆಟ್ಟಿಯವರು ಮಂಗಳೂರಿನ್ಗ ರಾಜಕಾರಣಿ,ದಾನಿ,ಉದ್ಯಮಿ ಮತ್ತು ವಿಜಯಾ ಬ್ಯಾಂಕಿನಸ್ಥಾಪಕ.[]


ಬಾಲ್ಯ

[ಬದಲಾಯಿಸಿ]

ತುಳುನಾಡಿನ ಪ್ರಖ್ಯಾತ ಬಂಟ ಮನೆತನವಾದ ಅಮ್ಮುಂಜೆ ಗುತ್ತು ಅಚ್ಚಣ್ಣ ಶೆಟ್ಟರ ಹಿರಿಯ ಮಗನಾಗಿ ಜನಿಸಿದ ಇವರು ಬೆಳೆದಿದ್ದು ತಮ್ಮ ಅಜ್ಜ "ತುಳುವಾಲ ಅಮ್ಮುಂಜೆ ಗುತ್ತು ಶಿನಪ್ಪ ಹೆಗ್ದೆಯವರ " ನೆರಳಲ್ಲಿ. ತುಳುವಾಲ ಅಮ್ಮುಂಜೆ ಗುತ್ತು ಶಿನಪ್ಪ ಹೆಗ್ದೆಯವರು ತುಳುನಾಡಿನ ಭಾಷ್ಯ ಬರೆದ ಪ್ರಮುಖರಲ್ಲಿ ಒಬ್ಬರು. ಅಪ್ರತಿಮ ಸಾಹಿತಿ, ಸ್ವಾತಂತ್ರ್ಯ ಹೊರಾಟಗಾರ, ತುಳು ಚಳುವಳಿಯ ಸಕ್ರಿಯವಾಗಿ ಭಾಗವಹಿಸಿದವರು. ಇಂತಹ ಅಜ್ಜನ ನೆರಳಲ್ಲಿ ಬೆಳೆದ ಎಳೆಯ ವಯ್ಯಸ್ಸಿನ ಮೊಮ್ಮಗನ ಮನದ ಮೇಲೆ ಅಜ್ಜನ ಪ್ರಭಾವ ಆದರ್ಶ ಸಾಂಸ್ಕ್ರತಿಕ ಸಾಹಿತ್ಯಿಕ ಸಾಮಾಜಿಕ ಸೇವೆಗಳ ಪ್ರಭಾವ ಅವರನ್ನು ಅದೇ ದಾರಿಯಲ್ಲಿ ಮುಂದುವರಿಯುವಂತೆ ಪ್ರೇರೇಪಣೆಯಯಿತು. ಪೊಳಲಿಯ ಬಳಿಯ ಗುರುಪುರ ಶಾಲೆಯಲ್ಲಿ ಎಂಟನೆ ತರಗತಿಯವರೆಗೆ ಒದಿದ ಅವರಿಗೆ ಮಂದಾರ ಕೇಶವ ಭಟ್ಟರು ಕೆಲ ಸಮಯದವರೆಗೆ ಗುರುಗಳಾಗಿದ್ದರು. ಅಲ್ಲಿಂದ ಮುಂದೆ ಉಜಿರೆಯ ಧರ್ಮಸ್ಹಳ ಕರ್ನಾಟಕ ವಿದ್ಯಾಲಯದಲ್ಲಿ ಮಾಧ್ಯಮಿಕ ಶಿಕ್ಷಣ ಪಡೆದರು. ಅಲ್ಲಿ ಸಿಕ್ಕಿದ ಪ್ರೊತ್ಸಾಹ, ಗುರು ಆರ್ ಎನ್ ಭಿಡೆಯವರ ಮಾರ್ಗದರ್ಶನ ಬೆಳೆಯುತಿರುವ ಬಾಲಕೃಷ್ಣನ ಬೆಳವಣಿಗೆಗೆ ಉತ್ಸಾಹವನ್ನು ತುಂಬಿಸಿತು.

ಉಲ್ಲೇಖಗಳು

[ಬದಲಾಯಿಸಿ]
  1. "Bring rural populace to mainstream: Mahe VC - Deccan Herald". Archived from the original on 2011-10-07. Retrieved 2015-08-26.
  2. "Vijaya Bank". Archived from the original on 2012-03-17. Retrieved 2015-08-26.