ನಿರುದ್ಯೋಗ
ಒಬ್ಬ ವ್ಯಕ್ತಿ ಕೆಲಸ ಮಾಡಲು ಲಭ್ಯನಿದ್ದು, ಕೆಲಸಮಾಡುವ ಇಚ್ಚೆಯನ್ನೂ ಹೊಂದಿದ್ದು, ಆದರೆ ಸಧ್ಯಕ್ಕೆ ಆತನಿಗೆ ಮಾಡಲು ಕೆಲಸವಿಲ್ಲದೇ ಇದ್ದಾಗ ನಿರುದ್ಯೋಗ ವು ಉದ್ಭವಿಸುತ್ತದೆ.[೧] ಸಾಮಾನ್ಯವಾಗಿ ನಿರುದ್ಯೋಗ ವರ್ಗದ ಸಮೂಹವನ್ನು ಒಟ್ಟು ನಿರುದ್ಯೋಗ ದರವನ್ನು ಬಳಸಿಕೊಂಡು ಮಾಪನಮಾಡುತ್ತಾರೆ. ಇದನ್ನು ಒಟ್ಟೂ ಶ್ರಮ ಶಕ್ತಿಯಲ್ಲಿರುವ ಶೇಕಡಾವಾರು ನಿರುದ್ಯೋಗಿಗಳ ಮೂಲಕ ವ್ಯಾಖ್ಯಾನಿಸಲಾಗುತ್ತದೆ. ವಿಶಾಲಾತ್ಮಕ ಅರ್ಥಶಾಸ್ತ್ರದ ಸ್ಥಿತಿಯ ಮಾನದಂಡವಾಗಿ ಬಳಸಲ್ಪಡುವ ಯುನೈಟೆಡ್ ಸ್ಟೇಟ್ಸ್‌ನ ಕಾನ್ಫರೆನ್ಸ್ ಬೋರ್ಡ್‌ಗಳ ಮುಂದುವರಿದ ವಿಷಯ ಸೂಚಿಯ ರೀತಿಯಲ್ಲಿ ನಿರುದ್ಯೋಗ ದರವನ್ನು ಆರ್ಥಿಕ ಅಧ್ಯಯನದಲ್ಲಿ ಮತ್ತು ಅರ್ಥಶಾಸ್ತ್ರ ವಿಷಯಸೂಚಿಗಳಲ್ಲಿ ಕೂಡ ಬಳಸಲಾಗುತ್ತದೆ
ಆರ್ಥಿಕತೆಯಲ್ಲಿ ಸರಕು ಮತ್ತು ಸೇವೆಗಳ ಮೇಲಿನ ಅಸಮರ್ಪಕ ಪರಿಣಾಮಕಾರಿ ಬೇಡಿಕೆಯ ಕೊರತೆಯ ಪರಿಣಾಮವಾಗಿ ನಿರುದ್ಯೋಗವು ಸಂಭವಿದುತ್ತದೆ ಎಂದು ಕೀನ್ಸ್‌ನ ಅರ್ಥಶಾಸ್ತ್ರವು ಒತ್ತಿ ಹೇಳುತ್ತದೆ (ಆವರ್ತಕ ನಿರುದ್ಯೋಗ). ಇತರ ದೃಷ್ಟಿಕೋನದಲ್ಲಿ, ಕೆಲವೊಮ್ಮೆ ಅಡ್ಡಿಪಡಿಸುವ ತಂತ್ರಜ್ಞಾನಗಳಿಂದ ಅಥವಾ ಜಾಗತೀಕರಣದಿಂದ ಪ್ರೇರೇಪಿತವಾಗಿ, ರಚನಾತ್ಮಕ ನಿರುದ್ಯೋಗವು ಅಗತ್ಯ ವೃತ್ತಿ ಕೌಶಲ್ಯದೊಂದಿಗೆ ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆಯ ನಡುವೆ ಅಸಮರ್ಪಕ ಹೊಂದಾಣಿಕೆಯನ್ನು ಹೊಂದಿರುವುದು ಕೂಲಿ ಕಾರ್ಮಿಕರ ಮಾರುಕಟ್ಟೆಗಳಲ್ಲಿನ ರಚನಾತ್ಮಕ ಸಮಸ್ಯೆಗಳು ಹಾಗೂ ಅಸಮರ್ಥತೆಯ ಮೂಲ ಸ್ವರೂಪವಾಗಿದೆ. ಸಾಂಪ್ರದಾಯಿಕ ಅಥವಾ ನವಸಾಂಪ್ರದಾಯಿಕ ಅರ್ಥಶಾಸ್ತ್ರವು ಈ ಹೇಳಿಕೆಗಳನ್ನು ತೆಳ್ಳಿಹಾಕಿದೆ ಮತ್ತು ಕಾರ್ಮಿಕರ ಒಕ್ಕೂಟ, ಕನಿಷ್ಠ ಕೂಲಿಯ ಹಕ್ಕು, ತೆರಿಗೆಗಳು ಮತ್ತು ಕೆಲಸಗಾರರನ್ನು ಕೂಲಿಗೆ ಗೊತ್ತುಮಾಡಿಕೊಳ್ಳುವಿಕೆಯನ್ನು ತಗ್ಗಿಸುವಂತಹ ಇತರ ನಿಬಂಧನೆಗಳ ಮೂಲಕ ಶ್ರಮ ಮಾರುಕಟ್ಟೆಯ ಮೇಲೆ ಹೊರಗಿನಿಂದ ವಿಧಿಸಿರುವ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಗಮನವನ್ನು ಕೇಂದ್ರೀಕರಿಸುತ್ತಿದೆ (ಸಾಂಪ್ರದಾಯಿಕ ನಿರುದ್ಯೋಗದ). ಇನ್ನೂ ಹಲವರ ದೃಷ್ಠಿಯಲ್ಲಿ ಹೇಳುವದಾದರೆ, ನಿರುದ್ಯೋಗಿಗಳ ಸ್ವಯಂಪ್ರೇರಿತ ಆಯ್ಕೆಗಳಿಂದ ಮತ್ತು ಹೊಸ ಉದ್ಯೋಗವನ್ನು ಹುಡುಕಿಕೊಳ್ಳುವ ನಡುವಿನ ಸಮಯದ ಕಾರಣದಿಂದಾಗಿ ನಿರುದ್ಯೋಗವು ವ್ಯಾಪಕವಾಗಿ ಬೆಳೆದಿದೆ (ಘರ್ಷಣಾತ್ಮಕ ನಿರುದ್ಯೋಗ). ವರ್ತನೀಯ ಅರ್ಥಶಾಸ್ತ್ರವುಜಿಗುಟು ವೇತನ ಮತ್ತುಸಾಮರ್ಥ್ಯ ವೇತನ ಇವುಗಳ ಮುಖ್ಯಸಂಗತಿಗಳನ್ನು ಬಿಂಬಿಸಿದೆ.
ನಿಖರವಾಗಿ ನಿರುದ್ಯೋಗವನ್ನು ಹೇಗೆ ಅಳೆಯುವುದು ಎನ್ನುವುದರಲ್ಲಿಯೂ ಭಿನ್ನಾಭಿಪ್ರಾಯಗಳಿವೆ. ವಿವಿಧ ರಾಷ್ಟ್ರಗಳು ವಿವಿಧ ಹಂತದ ನಿರುದ್ಯೋಗವನ್ನು ಅನುಭವಿಸುತ್ತಿವೆ; ಸಾಂಪ್ರದಾಯಿಕವಾಗಿ ಯುನೈಟೆಡ್ ಸ್ಟೇಟ್ಸ್ ಇದು ಯೂರೂಪಿಯನ್ ಒಕ್ಕೂಟ[೨][೨] ರಾಷ್ಟ್ರಗಳಿಗಿಂತ ಕೆಳ ಮಟ್ಟದ ನಿರುದ್ಯೋಗವನ್ನು ಹೊಂದಿದೆ, ಆದರೂ ಇಲ್ಲಿ ಭಿನ್ನತೆಯಿದೆ, ಯು.ಕೆ ಮತ್ತು ಡೆನ್ಮಾರ್ಕ್ ದೇಶಗಳು ಉನ್ನತ ಶ್ರೇಣಿಯಲ್ಲಿ ಇಟಲಿ ಮತ್ತು ಫ್ರಾನ್ಸ್ ದೇಶಗಳಿಗಿಂತ ಹೆಚ್ಚು ಕಾರ್ಯನಿರ್ವಹಿಸುತ್ತಿವೆ, ಮತ್ತು ಇವು ಕಾಲಕ್ಕೆ ತಕ್ಕಂತೆ ಇಡೀ ಆರ್ಥಿಕ ಆವರ್ತಗಳಲ್ಲಿ ಬದಲಾಣೆಗಳನ್ನು ಕಾಣುತ್ತಿವೆ (ಉದಾಹರಣೆಗೆ,ಮಹಾ ಆರ್ಥಿಕ ಮುಗ್ಗಟ್ಟು).
ಅನೈಚ್ಛಿಕ ನಿರುದ್ಯೋಗ
[ಬದಲಾಯಿಸಿ]ನವಸಾಂಪ್ರದಾಯಿಕ ಅರ್ಥಶಾಸ್ತ್ರದ ಸಿದ್ದಾಂತವು, ಮುಗ್ಗಟ್ಟಿನ(ಷೇರು ಪೇಟೆ ಇಳಿಮುಖವಾಗಿರುವ ಸಮಯ)ಸಂದರ್ಭದಲ್ಲಿ ಅನ್ವಯಿಸುವುದಿಲ್ಲ ಏಕೆಂದರೆ ಮುಗ್ಗಟ್ಟಿಗೆ ಹೆದರಿ ಖಾಸಗಿ ಹೂಡಿಕದಾರರು ಹಣವನ್ನು ಹೂಡುವುದಿಲ್ಲ ಮತ್ತು ಅತಿಯಾದ ಉಳಿತಾಯ ಮಾಡಲು ಮುಂದಾಗುತ್ತಾರೆ ಎಂದು ಕೀನ್ಸ್ ತಮ್ಮ ಸಾಮಾನ್ಯ ಸಿದ್ದಾಂತದಲ್ಲಿ ವಾದಿಸಿದ್ದಾರೆ. ಇದರ ಪರಿಣಾಮ ಜನರು ಅನೈಚಿಕವಾಗಿ ತಮ ಕೆಲಸದಿಂದ ಹೊರದೂಡಲ್ಪದಬಹುದು ಮತ್ತು ಅವರಿಗೆ ಒಪ್ಪಿಗೆಯಾಗುವಂತಹ ಹೊಸ ಕೆಲಸವನ್ನು ಹುಡುಕಿಕೊಳ್ಳುವುದೂ ಅವರಿಂದ ಸಾಧ್ಯವಿರುವುದಿಲ್ಲ.
ಈ ನವಸಾಂಪ್ರದಾಯಿಕ ಮತ್ತು ಕೀನ್ಸ್‌ನ ಸಿದ್ದಾಂತಗಳ ನಡುವಿನ ಸಂಘರ್ಷಗಳು ಸರ್ಕಾರದ ನಿಯಮಗಳ ಮೇಲೆ ಬಲವಾದ ಪ್ರಭಾವವನ್ನು ಭೀರಿವೆ. ಸರ್ಕಾರದ ಪ್ರವೃತ್ತಿಯೆಂದರೆ ಸರಕಾರಿ ಉದ್ಯೋಗಗಳನ್ನು ಮತ್ತು ಸವಲತ್ತುಗಳನ್ನು ಹೆಚ್ಚಿಸುವುದರ ಮೂಲಕ ಮತ್ತು ಉದ್ಯೋಗ ಅರಸುವವರಿಗೆ ಹೊಸ ವೃತ್ತಿಜೀವನ ಮತ್ತು ಹೊಸದೊಂದು ನಗರಕ್ಕೆ ಸ್ಥಳಾಂತರಗೊಳಿಸುವ ಮೂಲಕ ನಿರುದ್ಯೋಗವನ್ನು ಮೊಟಕು ಗೊಳಿಸಿ ಅದನ್ನು ಸಂಪೂರ್ಣವಾಗಿ ತೆಗೆದುಹಾಕುವದಾಗಿದೆ.
ಅನೈಚ್ಛಿಕ ನಿರುದ್ಯೋಗವು ರೈತಾಪಿ ಸಮಾಜದಲ್ಲಿ ಅಸ್ತಿತ್ವದಲ್ಲಿಲ್ಲ ಮತ್ತು ಸಂಪ್ರದಾಯಾನುಸಾರ ಅಂಗೀಕೃತವಾಗಿ ಅಭಿವೃದ್ಧಿ ಹೊಂದದಿರುವ ಸಮಾಜ ಅಂದರೆ ಆಫ್ರಿಕಾ ಮತ್ತು ಭಾರತ/ಪಾಕಿಸ್ತಾನಗಳಂತಹ ಮಹಾ ನಗರಗಳಲ್ಲಿಯೂ ಇಲ್ಲ. ಇಂತಹ ಸಮಾಜಗಳಲ್ಲಿ ಅನಿರೀಕ್ಷಿತವಾಗಿ ನಿರುದ್ಯೋಗಿಯಾದ ಒಬ್ಬ ವ್ಯಕ್ತಿ ತನ್ನ ಉಳಿವಿಗಾಗಿ ಯಾವುದೇ ಬೆಲೆಯ ಸಂಬಳ ಸಿಗುವ ಒಂದು ಹೊಸ ಕೆಲಸವನ್ನು ಪಡೆಯುವುದರ ಮೂಲಕ, ಒಬ್ಬ ಸಾಹಸೋದ್ಧಿಮೆದಾರನಾಗುವ ಮೂಲಕ ಅಥವಾ ಮೋಸದ ಅತೀ ಕೀಳುಮಟ್ಟದ ಆರ್ಥಿಕತೆಯನ್ನು ಸೆರಿಕೊಳ್ಳುವುದರ ಮೂಲಕ ತನ್ನ ನಿತ್ಯದ ಬದುಕಿನ ಅಗತ್ಯತೆಗಳನ್ನು (ಅವಶ್ಯಕತೆಗಳನ್ನು) ಪೂರೈಸಿಕೊಳ್ಳಲೇಬೇಕು.[೩]
ಅನೈಚ್ಛಿಕ ನಿರುದ್ಯೋಗವು ಎರೆನ್‌ರೀಚ್‌ರವರ ಕಥಾ ನಿರೂಪಣೆಯ ದೃಷ್ಟಿಕೋನದಲ್ಲಿ, ಅದೇ ರೀತಿ ಬೋರ್ಡಿಯುರವರ ಸಮಾಜ ಶಾಸ್ತ್ರದ ನಿರೂಪಣೆಯಲ್ಲಿ ಮತ್ತು ಜಾನ್ ಸ್ಟೇನ್‌ಬೇಕ್ ರವರ ದಿ ಗ್ರೇಪ್ಸ್ ಆಫ್ ವ್ರ್ಯಾಥ್ ನಂತಹ ಸಾಮಾಜಿಕ ಕಳಕಳಿ ಕಾದಂಬರಿಗಳ ಮೂಲಕ ಚರ್ಚಿಸಲ್ಪಟ್ಟಿದೆ.
ಪರಿಹಾರಗಳು
[ಬದಲಾಯಿಸಿ]ಎಷ್ಟು ಸಾಧ್ಯವೋ ಅಷ್ಟು ಜನರನ್ನು ಕೆಲಸಕ್ಕೆ ಸೇರಬೇಕೆನ್ನುವ ನಿಟ್ಟಿನಲ್ಲಿ ಸಮಾಜವು ವಿವಿಧ ರೀತಿಯ ಮಾನದಂಡಗಳನ್ನು ಪ್ರಯತ್ನ ಮಾಡುತ್ತಿದೆ. ಹಾಗಿದ್ದರೂ, [[ಸ್ವಾಭಾವಿಕ ನಿರುದ್ಯೋಗದವರನ್ನು ಮೀರಿ ನಿರುದ್ಯೋಗದ ಪ್ರಮಾಣವನ್ನು ಕಡಿಮೆ ಮಾಡುವ ಪ್ರಯತ್ನಗಳು ಸಹಜವಾಗಿ ವಿಫಲವಾಗಿವೆ, ಇವು ಕೇವಲ ಕಡಿಮೆ ಉತ್ಪನ್ನ ಮತ್ತು ಹೆಚ್ಚು ಹಣದುಬ್ಬರದ ಸನ್ನಿವೇಶಗಳಲ್ಲಿ ಮಾತ್ರ ಪರಿಣಾಮಕಾರಿಯಾಗಿವೆ.
ಬೇಡಿಕೆಯ ಪರ
[ಬದಲಾಯಿಸಿ]ಸಾಂಪ್ರದಾಯಿಕ ಅರ್ಥಶಾಸ್ತ್ರ ಸಿದ್ಧಾಂತದ ಪ್ರಕಾರ, ಪೂರೈಕೆಯು ಬೇಡಿಕೆಗೆ ಸಮನಾದಾಗ ಮಾತ್ರ ಮಾರುಕಟ್ಟೆಯು ಸಮತೋಲನವನ್ನು ಮುಟ್ಟುತ್ತದೆ; ಪ್ರತಿಯೊಬ್ಬರು ಮಾರುಕಟ್ಟೆ ಬೆಲೆಯಲ್ಲಿಯೇ ಮಾರಾಟಮಾಡಲು ಇಚ್ಚಿಸಬಹುದು. ಯಾರು ಈ ಮಾರುಕಟ್ಟೆ ಬೆಲೆಯಲ್ಲಿ ಮಾರಾಟ ಮಾಡಲು ಇಚ್ಚಿಸುವುದಿಲ್ಲವೂ; ಇದನ್ನು ಶ್ರಮ ಮಾರುಕಟ್ಟೆಯಲ್ಲಿ ಸಾಂಪ್ರದಾಯಿಕ ನಿರುದ್ಯೋಗ ಎಂದು ಕರೆಯಲಾಗುತ್ತದೆ. ಕೂಲಿ ಕಾರ್ಮಿಕನ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಕೂಲಿ ಕಾರ್ಮಿಕನು ಸಹ ಬೇಡಿಕೆಯ ರೇಖೆಯೊಂದಿಗೆ ಆರ್ಥಿಕತೆಯತ್ತ ನಡೆಯುತ್ತಾನೆ, ನಂತರ ವೇತನ ಮತ್ತು ಉದ್ಯೋಗದ ಪ್ರಮಾನವೂ ಹೇಚ್ಚಾಗುತ್ತದೆ. ವಸ್ತುಗಳ ಸಾಗಣೆ ಅಥವಾ ವಿನಿಮಯ ಸೇವೆಗಳಿಗೆ ಕೂಲಿಕಾರ್ಮಿಕನ ಬೇಡಿಕೆ ಇರುವುದರಿಂದ ಆರ್ಥಿಕ ಸ್ವರೂಪದಲ್ಲಿ ಕೂಲಿಕಾರ್ಮಿಕನು ಹೆಚ್ಚು ಬೇಡಿಕೆ ಪಡೆಯುತ್ತಿದ್ದಾನೆ. ಇದರಂತೆ ಆರ್ಥಿಕ ಸ್ವರೂಪದಲ್ಲಿ, ವಸ್ತುಗಳ ಸಾಗಣೆ ಅಥವಾ ವಿನಿಮಯ ಸೇವೆಗಳಿಗೆ ಬೇಡಿಕೆ ಹೆಚ್ಚಾದಂತೆ, ಕೂಲಿ ಕಾರ್ಮಿಕನ ಬೇಡಿಕೆಯೂ ಹೆಚ್ಚಾಗುತ್ತದೆ, ಹಾಗೂ ಇದರಿಂದ ಉದ್ಯೋಗ ಮತ್ತು ವೇತನವು ಸಹ ಹೆಚ್ಚಾಗುತ್ತಾ ಹೋಗುತ್ತದೆ. ಆರ್ಥಿಕ ನೀತಿ ಮತ್ತು ರಾಜ್ಯಾದಾಯ ನೀತಿ ಇವೆರಡನ್ನು ಬಳಸಿ ಆರ್ಥಿಕ ಸ್ವರೂಪದಲ್ಲಿ ಅಲ್ಪಾವಧಿಯ ಬೆಳವಣಿಗೆಯನ್ನು ವೃದ್ಧಿಸಬಹುದಾಗಿದೆ, ಹಾಗೆ ಕೂಲಿಕಾರ್ಮಿಕನ ಬೇಡಿಕೆಯನ್ನು ವೃದ್ಧಿಸುತ್ತಾ ನಿರುದ್ಯೋಗವನ್ನು ಕಡಿತಗೊಳಿಸಬಹುದು.
ಪೂರೈಕೆಯ ಪರ
[ಬದಲಾಯಿಸಿ]ಆದಾಗ್ಯೂ, ಕಾರ್ಮಿಕರ ಮಾರುಕಟ್ಟೆ ಸಮರ್ಥವಾಗಿಲ್ಲ:ಇದು ಸ್ಪಷ್ಟವಾಗಿಲ್ಲ. ಕನಿಷ್ಠ ವೇತನ ಮತ್ತು ಒಕ್ಕೂಟದ ಚಟುವಟಿಕೆಗಳು ನಿರಂತರವಾಗಿ ವೇತನವನ್ನು ಕಡಿಮೆಮಾಡುತ್ತಲೆ ಇದೆ, ಇದರ ಅರ್ಥ ತಮ್ಮಲ್ಲಿರುವ ಕೂಲಿ ಕಾರ್ಮಿಕರನ್ನು ಚಾಲ್ತಿ ಬೆಲೆಗೆ ಮಾರಾಟ ಮಾಡುವುದು ತುಂಬಾ ಜನರ ಇಚ್ಚೆ, ಆದರೆ ಅದು ಸಾಧ್ಯವಾಗುವುದಿಲ್ಲ. ಪೂರೈಕೆಯ ಪರ ನಿಯಮಗಳಿಂದ, ಕಾರ್ಮಿಕರ ಮಾರಕಟ್ಟೆಯನ್ನು ಹೆಚ್ಚು ಹೊಂದಿಕೊಳ್ಳುವಂತೆ ಮಾಡಿ ಈ ಸಮಸ್ಯೆಯನ್ನು ವಿಧಹರಿಸಬಹುದಾಗಿದೆ. ಇದು ಕನಿಷ್ಠ ವೇತನನ್ನು ತೆಗೆದುಹಾಕುವುದು ಮತ್ತು ಒಕ್ಕೂಟದ ಶಕ್ತಿಯನ್ನು ಕಡಿಮೆ ಮಾಡುವುದನ್ನು ಒಳಗೊಂಡಿದೆ. ಶಿಕ್ಷಣವನ್ನು ಒಳಗೊಂಡಂತ ಬೇರೆ ಪೂರೈಕೆಯ ಪರ ನಿಯಮಗಳು, ಕೆಲಸಗಾರರನ್ನು ಕೆಲಸ ನೀಡುವ ಸಂಸ್ಥೆಯ ಕಡೆಗೆ ಹೆಚ್ಚು ಆಕರ್ಷಿಸುವಂತೆ ಮಾಡಿದೆ.
ಪೂರೈಕೆ ಪರ ಸುಧಾರಣೆಗಳು ದೀರ್ಘಾವದಿಯ ಬೆಳವಣಿಗೆಯನ್ನು ಹೆಚ್ಚಿಸುತ್ತಿದೆ. ಈಗ ಹೆಚ್ಚಾಗಿರುವ ಸರಕು ಮತ್ತು ಸೇವೆಗಳ ಪೂರೈಕೆಗೆ ಹೆಚ್ಚು ಕೆಲಸಗಾರರು ಬೇಕಾಗಿರುವುದರಿಂದ, ಉದ್ಯೋಗಗಳು ಹೆಚ್ಚುತ್ತಿವೆ. ಇದು ಪೂರೈಕೆ ಪರ ನಿಯಮಗಳು, ವ್ಯಾಪಾರಗಳ ಮೇಲಿನ ಕಡಿತ ತೆರಿಗಳು ಒಳಗೊಂಡಂತೆ ವಿಧೆಯಕಗಳನ್ನು ಕಡಿಮೆಗೊಳಿಸಿ, ಉದ್ಯೋಗಗಳನ್ನು ಸೃಷ್ಠಿಸಿ, ನಿರುದ್ಯೋಗದ ಮಟ್ಟವನ್ನು ತಗ್ಗಿಸಬೇಕೆಂದು ಪ್ರತಿಪಾದಿಸಿದೆ.
ನಿರುದ್ಯೋಗದ ವಿಧಗಳು
[ಬದಲಾಯಿಸಿ]ಅರ್ಥಶಾಸ್ತ್ರಜ್ಞರು ನಿರುದ್ಯೋಗವನ್ನು ಹಲವು ವಿಧಗಳಲ್ಲಿ ಪ್ರತ್ಯೇಕಿಸಿದ್ದಾರೆ, ಅವುಗಳೆಂದರೆ ಆವರ್ತಕ ನಿರುದ್ಯೋಗ ಒಳಗೊಂಡಂತೆ, ಘರ್ಷಣಾತ್ಮಕ ನಿರುದ್ಯೋಗ, ರಚನಾತ್ಮಕ ನಿರುದ್ಯೋಗ ಮತ್ತು ಸಾಂಪ್ರದಾಯಿಕ ನಿರುದ್ಯೋಗ.[೪] ಒಮ್ಮೊಮ್ಮೆ ಸಂದರ್ಭಾನುಸಾರವಾಗಿ ಉಲ್ಲೇಖಿಸಲ್ಪಟ್ಟಿರುವ, ಕೆಲವು ಹೆಚ್ಚುವರಿ ವಿಧದ ನಿರುದ್ಯೋಗಗಳೆಂದರೆ ಋತುಮಾನದ ನಿರುದ್ಯೋಗ, ನೇರ ನಿರುದ್ಯೋಗ ಮತ್ತು ಮರೆಮಾಚಿದ ನಿರುದ್ಯೋಗ. ನೈಜ ಜಗತ್ತಿನ ನಿರುದ್ಯೋಗವು ವಿವಿಧ ವಿಧಗಳಿಂದ ಸಂಜೋಜಿತಗೊಂಡಿರಬಹುದು. ಇಂತಹ ಬೃಹತ್ ಸಮಸ್ಯೆಗಳನ್ನು ಪ್ರತಿಯೊಂದರಂತೆ ಬಿಡಿಬಿಡಿಯಾಗಿ ಅಳೆಯುವುದು ಬಹಳ ಕಷ್ಟ ಏಕೆಂದರೆ ಅವು ಒಂದಕ್ಕೊಂದು ಪಸರಿಸಿಕೊಂಡಿವೆ.
ಆದರೂ, ಅವುಗಳು ಅರ್ಥಶಾಸ್ತ್ರ ಸಾಹಿತ್ಯದಲ್ಲಿ ಹಲವು ಐಚ್ಛಿಕ ಮತ್ತು ಅನೈಚ್ಛಿಕ ನಿರುದ್ಯೋಗ ವ್ಯಾಖ್ಯಾನಗಳನ್ನು ಹೊಂದಿವೆ, ಆದರೆ ಇದರಲ್ಲಿ ಒಂದು ಸರಳ ಭಿನ್ನತೆಯು ಪದೇ ಪದೇ ಅನ್ವಯಿಕೆಯಾಗುತ್ತಿರುತ್ತದೆ. ನೈಚ್ಛಿಕ ನಿರುದ್ಯೋಗವು ವೈಯುಕ್ತಿಕ ನಿರ್ಧಾರಗಳಿಗೆ ಬದ್ದವಾಗಿರುವಂತಹ ಗುಣವನ್ನು ಹೊಂದಿದೆ. ಆದರೆ ಅನೈಚ್ಚಿಕ ನಿರುದ್ಯೋಗವು ಸಾಮಾಜಿಕ ಅರ್ಥಿಕತೆಗೆ ಬದ್ದವಾಗಿದೆ (ಮಾರುಕಟ್ಟೆಯ ರಚನೆಯನ್ನೊಳಗೊಂಡ ಸರ್ಕಾರದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಹ ಮತ್ತು ಬೇಡಿಕೆಯ ಓಟ್ಟು ಮೊತ್ತದ ಮಟ್ಟವನ್ನು ಕೇಳುವಷ್ಟು ಬದ್ದವಾಗಿದೆ) ಇದರಲ್ಲಿ ವೈಯುಕ್ತವಾಗಿ ಉದ್ದೇಶ ಸಾಧನೆ ಮಾಡಿಕೊಳ್ಳಬಹುದಾಗಿದೆ. ಈ ಅವಧಿಗಳಲ್ಲಿ ಹೆಚ್ಚಾಗಿ ಘರ್ಷಣಾತ್ಮಕ ನಿರುದ್ಯೋಗವೇ ಐಚ್ಚಿಕವಾಗಿದೆ, ಏಕೆಂದರೆ ಇದು ವೈಯುಕ್ತಿಕ ನಡತೆಯನ್ನು ಹುಡುಕುವಂತೆ ಪ್ರತಿಫಲಿಸುತ್ತದೆ.
ಮತ್ತೊಂದೆಡೆಗೆ ನಿಯತಕಾಲಿಕ ನಿರುದ್ಯೋಗ, ರಚನಾತ್ಮಕ ನಿರುದ್ಯೋಗ ಮತ್ತು ಸಾಂಪ್ರದಾಯಿಕ ನಿರುದ್ಯೋಗಗಳು ಪ್ರಕೃತಿಯಲ್ಲಿ ದೊಡ್ಡ ಅನೈಚ್ಚಿಕಗಳಾಗಿವೆ. ಆದರೂ, ಈಗಿರುವ ರಚನಾತ್ಮಕ ನಿರುದ್ಯೋಗವು ಈ ಮೊದಲು ನಿರುದ್ಯೋಗ ವ್ಯವಸ್ಥೆ ಮಾಡಿದ್ದ ಆಯ್ಕೆಗಳಿಗೆ ಪ್ರತಿಫಲಿಸಬಹುದು, ಅಷ್ಟರಲ್ಲಿ ಸಾಂಪ್ರದಾಯಿಕ (ಸ್ವಾಭವಿಕ) ನಿರುದ್ಯೋಗವು ಕಾರ್ಮಿಕರ ಒಕ್ಕೂಟ ಅಥವಾ ರಾಜಕೀಯ ಪಕ್ಷಗಳಿಂದ ಮಾಡಲ್ಪಟ್ಟ ಶಾಸನ ಮತ್ತು ಆರ್ಥಿಕ ಆಯ್ಕೆಗಳಿಂದ ಪರಿಣಮಿಸಬಹುದು. ಮೂಲತಃ ನೈಚ್ಚಿಕ ಮತ್ತು ಅನೈಚ್ಚಿಕ ನಿರುದ್ಯೋಗಳ ನಡುವಿನ ವ್ಯತ್ಯಾಸವನ್ನು ಪ್ರತ್ಯೇಕಿಸುವುದು ಬಹಳ ಕಠಿಣವಾಗಿದೆ. ಸ್ಪಷ್ಟವಾಗಿ ಗೂಚರಿಸುತ್ತಿರುವಂತಹ ಅನೈಚ್ಛಿಕ ನಿರುದ್ಯೋಗದ ಪ್ರಕರಣಗಳು ಕೆಲವು, ಅವುಗಳಲ್ಲಿ ಖಾಲಿ ಹುದ್ದೆಗಳಿರುವುದು ಕಡಿಮೆಯಾದರೂ ಸಹ ನಿರುದ್ಯೋಗಸ್ಥ ಕೆಲಸಗಾರರಿಗೆ ವೇತನಗಳನ್ನು ಹೊಂದಿಸಿಕೊಡುವ ಸಮ್ಮತಿ ಇರುವುದರಿಂದ ಎಲ್ಲಾ ಖಾಲಿ ಹುದ್ದೆಗಳು ಭರ್ತಿಯಾಗುತ್ತವೆ, ಆದರೂ ಸಹ ಇನ್ನೂ ನಿರುದ್ಯೋಗಸ್ಥ ಕೆಲಸಗಾರರಿರುತ್ತಾರೆ. ಈ ನಿಯತಕಾಲಿಕ ನಿರುದ್ಯೋಗದ ನಿದರ್ಶನವನ್ನು ವಿಶಾಲ ಆರ್ಥಿಕ ಬಲವು ಸೂಕ್ಷ್ಮ ಆರ್ಥಿಕತೆಯ ನಿರುದ್ಯೋಗವನ್ನು ಮುನ್ನಡೆಸುತ್ತದೆ.
ಘರ್ಷಣಾತ್ಮಕ ನಿರುದ್ಯೋಗ
[ಬದಲಾಯಿಸಿ]ಒಬ್ಬ ಕೆಲಸಗಾರ ತಾನು ಪ್ರಸ್ತುತ ಮಾಡುತ್ತಿರುವ ಕೆಲಸವನ್ನು ಬಿಟ್ಟು ಮತ್ತೊಂದು ಕೆಲಸದೆಡೆಗೆ ಹೋದಾಗ ಘರ್ಷಣಾತ್ಮಕ ನಿರುದ್ಯೋಗ ಉಂಟಾಗುತ್ತದೆ. ಆತ ಬೇರೊಂದು ಕೆಲಸ ಹುಡುಕುವ ಸಂದರ್ಭದಲ್ಲಿ ಘರ್ಷಣಾತ್ಮಕ ನಿರುದ್ಯೋಗದ ಅನುಭವವನ್ನು ಪಡೆಯುತ್ತಾನೆ. ಇದು ಕೆಲಸವನ್ನು ಹುಡುಕುತ್ತಿರುವ ಉದಯೊನ್ಮುಖ ಪದವೀದರರಿಗೂ ಸಹ ಅನ್ವಯಿಸುತ್ತದೆ. ಕೆಲಸಗಾರರ ದೀರ್ಘಾವದಿ ಕಲ್ಯಾಣ ನಿಧಿ ಮತ್ತು ಆರ್ಥಿಕ ಸಾಮರ್ಥ್ಯ ಇವೆರಡನ್ನು ಹೆಚ್ಚಿಸುವುದು ಸಹ ಒಂದು ರೀತಿಯ ಐಚ್ಚಿಕ ನಿರುದ್ಯೋಗವೇ ಆಗಿದೆ, ಇದು ಅಧಿಕ ಉತ್ಪಾದನೆಯ ಸಾಮರ್ಥ್ಯವುಳ್ಳ ಆರ್ಥಿಕತೆಯ ಒಂದು ಭಾಗದ ಉದಾಹರಣೆ. ಇದು ಕಾರ್ಮಿಕ ಮಾರುಕಟ್ಟೆಯಿಂದ ಬಂದಿರುವ ಅಪೂರ್ಣ ಮಾಹಿತಿಯಿಂದ ಉಂಟಾಗಿದೆ, ಏಕೆಂದರೆ ಕೆಲಸ ಹುಡುಕುವವರಿಗೂ ಗೊತ್ತು, ಯಾವುದಾದರೂ ಖಾಲಿಯಾಗಿರುವ ಒಂದು ನಿರ್ದಿಷ್ಟ ಕೆಲಸಕ್ಕೆ ಸೇರಿಕೊಳ್ಳುತ್ತೇವೆಂದು, ಆದುದ್ದರಿಂದ ಇವರು ಹೊಸ ಕೆಲಸ ಗಳಿಸುವುದಕ್ಕೆ ಹೆಚ್ಚು ಸಮಯವನ್ನು ವ್ಯಯಮಾಡುವುದಿಲ್ಲ, ಇದರಿಂದ ನಿರುದ್ಯೋಗವನ್ನು ಸುಲಭವಾಗಿ ತೆಗೆದುಹಾಕಬಹುದು.
ಘರ್ಷಣಾತ್ಮಕ ನಿರುದ್ಯೋಗವು ನಿರಂತರವಾಗಿ ಆರ್ಥಿಕ ವ್ಯವಸ್ಥೆಯಲ್ಲಿರುತ್ತದೆ, ಆದ್ದರಿಂದ ಅನೈಚ್ಚಿಕ ನಿರುದ್ಯೋಗದ ಮಟ್ಟವೆಂದರೆ ನೈಜವಾದ ನಿರುದ್ಯೋಗದ ದರದಿಂದ ಘರ್ಷಣಾತ್ಮಕ ನಿರುದ್ಯೋಗದ ದರವನ್ನು ಕಳೆಯುವುದಾಗಿದೆ, ಇದರ ಅರ್ಥ ನಿರುದ್ಯೋಗ ದರದಲ್ಲಿನ ಏರಿಕೆ ಅಥವಾ ಇಳಿಕೆಯಾಗುವುದನ್ನು ಸಾಧಾರಣವಾಗಿ ಕೆಳಗಿನ ಸರಳ ಅಂಕಿ ಅಂಶಗಳಲ್ಲಿ ನಿರೂಪಿಸಲಾಗಿರುತ್ತದೆ.[೫]
ಸಾಂಪ್ರದಾಯಿಕ ನಿರುದ್ಯೋಗ
[ಬದಲಾಯಿಸಿ]ಮಾರುಕಟ್ಟೆಯ ಸ್ಪಷ್ಟೀಕರಣ ಮಟ್ಟದ ಮೇಲೆ ಕೆಲಸಕ್ಕೆ ನೈಜ ವೇತನವನ್ನು ಗೊತ್ತುಪಡಿಸಿದ ನಂತರ ಹಲವು ಉದ್ಯೋಗಾನ್ವೇಷಕರು ಖಾಲಿಹುದ್ದೆಗಳನ್ನು ಅತಿಕ್ರಮಿಸಿಲು ಮುಂದಾಗುವುದರಿಂದ ಸಾಂಪ್ರದಾಯಿಕ ನಿರುದ್ಯೋಗ ಉದ್ಬವಿಸುತ್ತದೆ.
ಆರ್ಥಿಕ ಸ್ವರೂಪದಲ್ಲಿ ಸರ್ಕಾರವು ಮಧ್ಯ ಪ್ರವೇಶಿಸಿ ಕೆಲಸದಲ್ಲಿರುವವರ ಸ್ಥಿತಿಗತಿಗಳನ್ನು ಸುಧಾರಿಸುವುದರಿಂದ ನಿರುದ್ಯೋಗ ಸಮಸ್ಯೆ ಇನ್ನೂ ಹೆಚ್ಚಾಗುವುದೆಂದು ಎಫ್.ಎ.ಹಯೆಕ್‌ರಂತಹ ಸ್ವಾತಂತ್ರ್ಯವಾದಿ ಅರ್ಥಶಾಸ್ತ್ರಜ್ಞರು ಆರೋಪಿಸಿದ್ದಾರೆ. ಉದಾಹರಣೆಗೆ, ಮಾರುಕಟ್ಟೆಯ ಸಾತೋಲನವನ್ನು ಎತ್ತರಿಸುವ ಕಾರಣದಿಂದ ಕಾರ್ಮಿಕರ ಕಡಿಮೆ ಕೌಶಲ್ಯದೊಂದಿಗೆ ಕನಿಷ್ಠ ವೇತನದ ಶಾಸನಗಳು ಕಾರ್ಮಿಕರ ಬೆಲೆಯನ್ನು ಹೆಚ್ಚಿಸುತ್ತವೆ, ಇದರಂತೆ ಯಾರು ಪ್ರಸ್ತುತ ಚಾಲ್ತಿ ಬೆಲೆಗೆ ಕೆಲಸ ಮಾಡಲು ಇಚ್ಚಿಸುತ್ತಾರೋ ಅಂಥವರು ಕೆಲಸ ಮಾಡಬಹುದು, ಆದರೆ ಅವರ ವೇತನದ ಒತ್ತಾಯವು ಮಾತ್ರ ಅವರ ಬೆಲೆಗಿಂತ ಹೆಚ್ಚಾಗಿರುವುದರಿಂದ ಕೆಲಸಗಾರರು ನಿರುದ್ಯೋಗಿಗಳಾಗುತ್ತಿದ್ದಾರೆ.[೬][೭] ಶಾಸನಗಳು ಕೆಲಸಗಾರರನ್ನು ಕಡಿಮೆ ವ್ಯಾಪಾರವನ್ನು ಮಾಡುವಂತೆ ಮಾಡುತ್ತದೆ ಎಂದು ಅವರು ನಂಬುತ್ತಾರೆ. ಇದರಿಂದ ಬಾಡಿಗೆ ಅಥವಾ ಕೂಲಿಯು ಮೂದಲಸ್ಥಾನ ಪಡೆಯಬಹುದು, ಗುತ್ತಿಗೆ ಯಿಂದ ಅಥವಾ ಈ ರೀತಿಯ ಪದ್ದತಿಯಿಂದ ಹೆಚ್ಚು ಸಮಸ್ಯೆ ಉಂಟಾಗುತ್ತಿದ್ದು, ಹಲವು ಯುವಜನರು ಕೆಲಸ ಹುಡುಕಲಾಗದೆ ನಿರುದ್ಯೋಗಿಗಳಾಗಿದ್ದಾರೆ.[೬]
ಮಾರುಕಟ್ಟೆಯ ಸ್ಪಷ್ಟೀಕರಣ ಮಟ್ಟಕ್ಕೆ ಬೀಳುತ್ತಿರುವ ವೇತನವನ್ನು ಸಾಮಾಜಿಕ ನಿಷೇಧ ಹೇರುವುದರಿಂದ ಮಾರುಕಟ್ಟೆಯ ಸ್ಪಷ್ಟೀಕರಣ ಮಟ್ಟಕ್ಕೆ ಬೀಳುತ್ತಿರುವ ವೇತನವನ್ನು ತಡೆಯಬಹುದು ಎಂದು ಮರ್ರೆ ರೊಥ್‌ಬರ್ಡ್[೮] ಪ್ರಸ್ತಾಪಿಸಿದ್ದಾರೆ.
ವೇತನದ ನಮ್ಯತೆಯನ್ನು ಹೆಚ್ಚಿಸುತ್ತಾ ಇಂತಹ ನಿರುದ್ಯೋಗವನ್ನು ಕಡಿಮೆಗೊಳಿಸಬಹುದು ಎಂದು ಕೆಲವು ಅರ್ಥಶಾಸ್ತ್ರಜ್ಞರು ತಮ್ಮ ಸಿದ್ದಾಂತಗಳಲ್ಲಿ ಪ್ರಸ್ತಾಪಿಸಿದ್ದಾರೆ. (ಉದಾಹರಣೆಗೆ, ಕನಿಷ್ಠ ವೇತನ ಅಥವಾ ಕಾರ್ಮಿಕರ ರಕ್ಷಣಾನಿಧಿಯನ್ನು ನಿರ್ಮೂಲನಗೂಳಿಸಿ), ಕಾರ್ಮಿಕರ ಮಾರುಕಟ್ಟೆಯನ್ನು ವರಮಾನದ ಮಾರುಕಟ್ಟೆಯನ್ನಾಗಿ ಮಾಡುವುದುದು.[ಸಾಕ್ಷ್ಯಾಧಾರ ಬೇಕಾಗಿದೆ]
ಆವರ್ತಕ ಅಥವಾ ಕೀನ್ಸ್‌ನ ನಿರುದ್ಯೋಗ
[ಬದಲಾಯಿಸಿ]ಆವರ್ತಕ ಅಥವಾ ಕೀನ್ಸ್‌ನ ನಿರುದ್ಯೋಗವನ್ನು ಅಪೂರ್ಣ ಬೇಡಿಕೆ ನಿರುದ್ಯೋಗ ಎಂದು ಸಹ ಕರೆಯುತ್ತಾರೆ, ಇದು ಆರ್ಥಿಕ ಸ್ವರೂಪದಲ್ಲಿ ಸಾಕಷ್ಟು ಮೊತ್ತದ ಬೇಡಿಕೆಯಿಲ್ಲದಿದ್ದಾಗ ಉಂಟಾಗುತ್ತದೆ. ವ್ಯಾಪಾರ ಚಕ್ರಗಳೊಂದಿಗೆ ಬದಲಾಗುತ್ತಿರುವ ಕಾರಣ ಇದು ತನ್ನ ಹೆಸರನ್ನು ಪಡೆಯುತ್ತದೆ , ಆದರೆ 1930ರ ಮಹಾ ಆರ್ಥಿಕ ಮುಗ್ಗಟ್ಟಿನ ಸಮಯದ ಹಾಗೆ ಇದೂ ಕೂಡ ನಿರಂತರವಾಗಿರಬಹುದು. ವ್ಯಾಪಾರ ಚಕ್ರದ ಹಿಂಜರಿತ ಮತ್ತು ವೇತನವು ಸಮತಲ ಸ್ಥಿತಿಯ ಮಟ್ಟಕ್ಕೆ ಬೀಳದೆ ಇದ್ದುದು ಇದಕ್ಕೆ ಕಾರಣ. ಆರ್ಥಿಕ ಕುಸಿತದಿಂದ ಆವರ್ತಕ ನಿರುದ್ಯೋಗ ಹೆಚ್ಚಾಗುತ್ತದೆ ಮತ್ತು ಆರ್ಥಿಕ ಸ್ವರೂಪ ಚೇತರಿಸಿಕೊಳ್ಳುತ್ತಿದ್ದಂತೆ, ಆವರ್ತಕ ನಿರುದ್ಯೋಗದ ಮಟ್ಟ ಕುಸಿಯುತ್ತದೆ. ನಿರೀಕ್ಷಿತ ಪರಿಣಾಮ ತೋರುವಂತಹ ಬೇಡಿಕೆಯ ಮೊತ್ತ ಸಾಕಷ್ಟಿಲ್ಲದ ಕಾರಣದಿಂದಾಗಿ ಈ ರೀತಿಯ ನಿರುದ್ಯೋಗ ಕಂಡುಬರುತ್ತಿದೆ ಎಂದು ಕೀನ್ಸ್‌ನ ಅನುಯಾಯಿಗಳು ಆರೋಪಿಸಿದ್ದಾರೆ. ಹಲವಾರು ಸರಕು ಮತ್ತು ಸೇವೆಗಳ ಬೇಡಿಕೆಗಳು ಕುಸಿಯುವಾಗ, ಕಡಿಮೆ ಉತ್ಪಾದನೆ ಅಗತ್ಯವಾದಾಗ ಮತ್ತು ಅದಕ್ಕಾಗಿ ಅಲ್ಪ ಕೆಲಸಗಾರರು ಬೇಕಾದಾಗ, ವೇತನಗಳು ಸಮತಲಸ್ಥಿಯ ಮಟ್ಟಕ್ಕೆ ಇಳಿಯದಿದ್ದಾಗ ಈ ಸಾಮೂಹಿಕ ನಿರುದ್ಯೋಗ ಸ್ಥಿತಿ ಉಂಟಾಗುತ್ತದೆ.
ಕೆಲವರು ಇಂತಹ ರೀತಿಯ ನಿರುದ್ಯೋಗವನ್ನು ಒಂದು ರೀತಿಯ ಘರ್ಷಣಾತ್ಮಕ ನಿರುದ್ಯೋಗವೆಂದು ಪರಿಗಣಿಸಿದ್ದಾರೆ, ಇದರಲ್ಲಿನ ಅಂಶಗಳು ಘರ್ಷಣೆಯನ್ನುಂಟುಮಾಡುತ್ತವೆ ಅಥವಾ ಪರ್ಯಾಯವಾಗಿ ಕೆಲವು ನಿಯತಕಾಲಿಕ ಮಾರ್ಪಾಡುಗಳನ್ನು ಮಾಡುತ್ತವೆ. ಉದಾಹರಣೆಗೆ, ಹಣದ ಪೂರೈಕೆಯಲ್ಲಿನ ಆಶ್ಚರ್ಯಕರ ಕುಸಿತವು ಸಮಾಜದ ಪಾಲುದಾರರಿಗೆ ಗಾಬರಿ ಹುಟ್ಟಿಸಬಹುದು.
ಈ ಸಂಗತಿಯಲ್ಲಿ, ಹೆಚ್ಚಿನ ನಿರುದ್ಯೋಗಿ ಕೆಲಸಗಾರರ ಸಂಖ್ಯೆಯ ಕಲಿ ಹುದ್ದೆಯ ಸಂಖ್ಯೆಯನ್ನು ಹೆಚ್ಚಿಸುತ್ತದೆ, ಆದ್ದರಿಂದ ಒಂದು ವೇಳೆ ಎಲ್ಲಾ ಉದ್ಯೋಗಗಳನ್ನು ತುಂಬಿದರೂ ಕೆಲವು ಕೆಲಸಗಾರರು ಹಾಗೆಯೇ ನಿರುದ್ಯೋಗಿಗಳಾಗಿ ಉಳಿಯುತ್ತಾರೆ. ಈ ರೀತಿಯ ನಿರುದ್ಯೋಗವು ಬಳಕೆಯಾಗದ ಕೈಗಾರಿಕಾ ಸಾಮರ್ಥ್ಯದೊಂದಿಗೆ ತಾಳೆ ಹೊಂದುತ್ತದೆ (ಬಳಕೆಯಾಗದ ಬಂಡವಾಳ ಸರಕುಗಳು). ಬಡ್ಡಿದರವನ್ನು ಕಡಿಮೆ ಮಾಡುವುದರ ಮೂಲಕ ಸರಕಾರೇತರ ವೆಚ್ಚವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಕೀನ್ಸ್‌ನ ಅರ್ಥಶಾಸ್ತ್ರಜ್ಞರು ಸರ್ಕಾರದ ಕೊರತೆಯ ವೆಚ್ಚ ಅಥವಾ ಹಣಕಾಸಿನ ನೀತಿಯ ವಿಸ್ತರಣೆಯ ಮೂಲಕ ಇದನ್ನು ಪರ್ಹರಿಸಬಹುದೆಂಬ ಸಾಧ್ಯತೆಯನ್ನು ಕಂಡಿದ್ದರು.
ಒಂದು ವ್ಯತ್ಯಾಸದಲ್ಲಿ, ಸರಕಾರದ ವೆಚ್ಚ ಮತ್ತು ನೀತಿಗಳು ಆರ್ತಿಕ ಆವರ್ತಗಳಿಗೆ ಮತ್ತು ಆವರ್ತಕ ನಿರುದ್ಯೋಗಗಳಿಗೆ ಮತ್ತು ತೆಗೆದು ಹಾಕಲು ಅಥವಾ ಸುಧಾರಣೆ ಮಾಡಲು ಮೂಲ ಕಾರಣವಾಗಿದೆ ಎಂದು ಆಸ್ಟ್ರೇಲಿಯಾದ ಅರ್ಥಶಾಸ್ತ್ರಜ್ಞರು ವಾದಿಸುತ್ತಾರೆ.
ಸಂಪನ್ಮೂಲಗಳ ಪೂರ್ಣೋದ್ಯೋಗದ ಸಾಧನೆಯನ್ನು ಮತ್ತು ಸಾಮಾನ್ಯ ಸ್ಥಿತಿಯ ಸಂಗತಿಯನ್ನು ಸಂಭಾವ್ಯ ಉತ್ಪನ್ನವಾಗಿ ನೋಡುತ್ತ ಸಾಂಪ್ರದಾಯಿಕ ಅರ್ಥಶಾಸ್ತ್ರವು ಆವರ್ತಕ ನಿರುದ್ಯೋಗದ ಕಲ್ಪನೆಯನ್ನು ತಳ್ಳಿಹಾಕುತ್ತದೆ.[ಸಾಕ್ಷ್ಯಾಧಾರ ಬೇಕಾಗಿದೆ]
ರಚನಾತ್ಮಕ ನಿರುದ್ಯೋಗ
[ಬದಲಾಯಿಸಿ]ನೌಕರರು ನೀಡಿದ ಉದ್ಯೋಗ ಮತ್ತು ಸಮರ್ಥ ಕೆಲಸಗಾರರ ನಡುವಿನ ವಿಷಮ ಸಂಬಂಧವೇ ರಚನೆಯ ನಿರುದ್ಯೋಗ. ಇದು ಭೌಗೋಳಿಕ ನೆಲೆ, ಕುಶಲತೆಯ ವ್ಯತ್ಯಾಸ,ಮತ್ತು ಇನ್ನಿತರ ಅಂಶಗಳಿಗೆ ಸಹ ಅನ್ವಯಿಸುತ್ತದೆ. ಖಾಲಿ ಹುದ್ದೆಗಳು ನಿರುದ್ಯೋಗದ ಸಂಖ್ಯೆಗೆ ಸಮವಾಗಿದ್ದರೂ, ನಿರುದ್ಯೋಗಿ ಕೆಲಸಗಾರರಲ್ಲಿ ಹುದ್ದೆಗಳಿಗೆ ಬೇಕಾದ ನೈಪುಣ್ಯತೆಯ ಕೊರತೆ ಇರಬಹುದು- ಅಥವಾ ಉದ್ಯೋಗವನ್ನು ಒಪ್ಪಿಕೊಳ್ಳಲು ಸೂಕ್ತವಲ್ಲದ ಜಾಗ ಅಥವಾ ದೇಶದಲ್ಲಿ ಖಾಲಿ ಹುದ್ದೆ ಇರಬಹುದು. ಇಂತಹ ವಿಷಮ ಸಂಬಂಧ ಉಂಟಾದಾಗ ಘರ್ಷಣಾ ನಿರುದ್ಯೋಗ ಉಂಟಾಗುವ ಸಾಧ್ಯತೆ ಸಹ ಇರುತ್ತದೆ. ಉದಾಹರಣೆಗೆ, 1990 ರಲ್ಲಿ ಕಂಪ್ಯೂಟರ್ ತಜ್ಞರಿಗೆ ಬೇಡಿಕೆ ಸೃಷ್ಟಿಸಲು ತಾಂತ್ರಿಕ ವದಂತಿಗಳು ಹರಡಿದ್ದವು. 2000-2001 ರಲ್ಲಿ ಈ ವದಂತಿ ಇಲ್ಲವಾಯಿತು. ಸ್ಥಿರಾಸ್ತಿಗಳ ಕೆಲಸಗಾರರ ಮೇಲಿನ ಬೇಡಿಕೆಯನ್ನು ಸೃಷ್ಟಿಸಲು ನಿವೇಶನಗಳ ವಿಧಗಿನ ವದಂತಿಗಳು ಶೀಘ್ರದಲ್ಲೇ ಪ್ರಾರಂಭವಾದವು, ಹಾಗು ಕಂಪ್ಯೂಟರ್ ತಜ್ಞರು ಮತ್ತೆ ಹೊಸ ಕೆಲಸವನ್ನು ಹುಡುಕಲು ಪ್ರಾರಂಭಿಸಿದರು. ಮತ್ತೊಂದು ಉದಾಹರಣೆಯಲ್ಲಿ ಮುಂದುವರಿದ ದೇಶಗಳು ಸಧ್ಯದಲ್ಲಿ ದಾದಿಯರ ಕೊರತೆ ಇದ್ದು ಅದರ ಜೊತೆಗೆ ಮಾಹಿತಿ ತಂತ್ರಜ್ಞಾನದ ತಜ್ಞರ ಪೂರೈಕೆ ಹೆಚ್ಚಾಗಿದೆ. ನಿರುದ್ಯೋಗಿ ತಂತ್ರಜ್ಞರು ಸುಲಭವಾಗಿ ದಾದಿಯರಾಗಲು ಸಾಧ್ಯವಿಲ್ಲ, ಏಕೆಂದರೆ ಇದಕ್ಕಾಗಿ ಬೇಕಾದ ವಿಶೇಷ ಶಿಕ್ಷಣ, ಬೇರೆ ಮೂಲದ ಬದಲಾದ ಕೆಲಸಕ್ಕೆ ಸೇರಿಕೊಳ್ಳುವ ಮನಸ್ಸು, ಮತ್ತು ಇಂತಹ ಕೆಲಸಗಳಿಗೆ ಬೇಕಾದ ಕಾನೂನಿನ ಮಾನ್ಯತೆಯು ಅವಶ್ಯಕವಾಗಿರುತ್ತವೆ.
ರಚನಾತ್ಮಕ ನಿರುದ್ಯೋಗವು ಶ್ರಮ ಮಾರುಕಟ್ಟೆಯ ಕ್ರಿಯಾಶೀಲತೆಯ ಫಲಿತಾಂಶವಾಗಿದ್ದು ಸತ್ಯಸಂಗತಿಯೆಂದರೆ ಇವು ಎಂದಿಗೂ ಆಯ ವ್ಯಯದ ಮಾರುಕಟ್ಟೆಯಂತೆ ಸುಲಭವಾಗಿ ಬದಲಾಗುವ ಮಾರುಕಟ್ಟೆ ಅಲ್ಲ. ಕೆಲಸಗಾರರು ಹಿಂದುಳಿಯಲು ಕಾರಣವಾದ ಅಂಶಗಳೆಂದರೆ ತರಬೇತಿಯ ಮತ್ತು ಸ್ಥಳ ಬದಲಾವಣೆಯ ಖರ್ಚು(ಉದಾಹರಣೆಗೆ ಕುಗ್ಗಿದ ಸ್ಥಳೀಯ ಅರ್ಥಿಕ ಸ್ಥಿತಿಯಲ್ಲಿ ಒಬ್ಬರ ಮನೆಯನ್ನು ಮಾರುವ ಬೆಲೆ) , ಜೊತೆಗೆ ಶ್ರಮ ಮಾರುಕಟ್ಟೆಯ ಅಸಮರ್ಥತೆ ಉದಾಹರಣೆಗೆ ತಾರತಮ್ಯ ಅಥವಾ ಅಧಿಕಾರದ ಏಕಸಾಮ್ಯ.
ಇದು ಬಹಳ ದಿನ ಇರುವುದನ್ನು ಹೊರತುಪಡಿಸಿ ರಚನಾತ್ಮಕ ನಿರುದ್ಯೋಗವನ್ನು ಪ್ರಾಯೋಗಿಕವಾಗಿ ಘರ್ಷಣೆಯ ನಿರುದ್ಯೋಗದಿಂದ ಬೇರ್ಪಡಿಸುವುದು ಕಷ್ಟ. ಘರ್ಷಣಾ ನಿರುದ್ಯೋಗದಲ್ಲಿ ಸಾಧಾರಣವಾಗಿ ಬೇಡಿಕೆಗಳಿಗೆ ಉತ್ತೇಜನ ನೀಡಿದರೆ ಈ ರೀತಿಯ ನಿರುದ್ಯೋಗವನ್ನು ಇಲ್ಲವಾಗಿಸುವುದು ಅಸಾಧ್ಯ.
ನಿರಂತರ ಆವರ್ತನೀಯ ನಿರುದ್ಯೋಗವು ರಚನಾತ್ಮಕ ನಿರುದ್ಯೋಗ ಹುಟ್ಟಲು ಪ್ರೋತ್ಸಾಹಿಸಬಹುದಾಗಿದೆ:ಒಂದು ಆರ್ಥಿಕತೆಯು ದೀರ್ಘಕಾಲೀನ ಕನಿಷ್ಟ ಮೊತ್ತದ ಬೇಡಿಕೆಯಿಂದ ಬಳಲುತಿದ್ದರೆ, ಅನೇಕ ನಿರುದ್ಯೋಗಿಗಳ ಭರವಸೆ ಭಗ್ನಗೊಳ್ಳುತ್ತವೆ(ಅವರ ಕೆಲಸ ಹುಡುಕುವ ಕೌಶಲ್ಯವೂ ಸೇರಿದಂತೆ)ಅವರ ಕೌಶಲ್ಯಗಳೂ ಕಮರಿಹೋಗುತ್ತವೆ. ಸಾಲದ ತೊಂದರೆಗಳು ವಸತಿರಹಿತ ಮತ್ತು ಕ್ರೂರ ಬಡತನದ ಬೇಗೆಗೆ ತಳ್ಳಬಹುದು. ಇದರರ್ಥ ಆರ್ಥಿಕತೆ ಸುಧಾರಣೆಯಾದ ನಂತರದಲ್ಲಿ ಸೃಷ್ಟಿಸಲಾದ ಉದ್ಯೋಗಗಳಿಗೆ ಅವರು ಯೋಗ್ಯ್ವವಾಗದಿರಬಹುದು. ಆರ್ಥಿಕ ತಜ್ಞರು ಈ ರೀತಿಯ ಘಟನಾವಳಿಯನ್ನು 1970 ಮತ್ತು 1980 ರಲ್ಲಿ ಬ್ರಿಟಿಷ್ ಪ್ರಧಾನಿ ಮಾರ್ಗರೆಟ್ ತಾಷೆರ್ ನ ಕಾಲದಲ್ಲಿ ಸಂಭವಿಸಿದ್ದನ್ನು ಕಂಡಿದ್ದರು. ಎಡಬಿಡದ ಅಧಿಕ ಬೇಡಿಕೆಯು ರಚನಾತ್ಮಕ ನಿರುದ್ಯೋಗವನ್ನು ಕಡಿತ ಗೊಳಿಸಬಹುದೆಂಬುದನ್ನು ಇದು ಸೂಚಿಸುತ್ತದೆ. "ರಚನಾತ್ಮಕ ನಿರುದ್ಯೋಗದಲ್ಲಿನ ಈ ನಿರಂತತೆಯ ಸ್ವಾತಂತ್ರ್ಯದ ಸಿದ್ದಾಂತ ಪಥ ಅಥವಾ ಹಿಸ್ಟೆರಿಸಿಸ್ ಗೆ ಉದಾಹರಣೆಯೆಂದು ಉಲ್ಲೇಖಿಸಲಾಗುತ್ತಿದೆ.
ತಾಂತ್ರಿಕ ನಿರುದ್ಯೋಗದ ಹೆಚ್ಚಳವು ( ಉದಾಹರಣೆಗೆ :ಕಾರ್ಮಿಕರ ಉಪಯೋಗದ ಬದಲು ಯಂತ್ರಗಳ ಉಪಯೋಗ )ರಚನಾತ್ಮಕ ನಿರುದ್ಯೋಗವಾಗಿ ಪರಿಗಣಿಸಲ್ಪಡುತ್ತದೆ. ಇನ್ನೊಂದು ರೀತಿಯಲ್ಲಿ ತಾಂತ್ರಿಕ ನಿರುದ್ಯೋಗವು ಏನನ್ನು ಸೂಚಿಸುತ್ತದೆ ಎಂದರೆ ಕಾರ್ಮಿಕರ ಉತ್ಪಾದಕತೆಯಲ್ಲಿ ಒಂದೇ ತೆರನಾದ ಹೆಚ್ಚಳವಿರಬೇಕು ಇದರರ್ಥ ಕಡಿಮೆ ಸಂಖ್ಯೆಯ ಕಾರ್ಮಿಕರು ಒಂದೇ ಪ್ರಮಾಣದ ಉತ್ಪಾದನೆಯನ್ನು ಪ್ರತೀ ವರ್ಷ ನೀಡಬೇಕು. ನಿಜವಾದ ಅರ್ಥದಲ್ಲಿ ಈ ನಿರುದ್ಯೋಗವು ಪುನರಾವರ್ತನೆ ಹೊಂದುತ್ತಿದ್ದು ಇದನ್ನು ಸರಿಪಡಿಸಲು ಬೇಡಿಕೆಯ ಒಟ್ಟು ಮೊತ್ತ ಹೆಚ್ಚಾಗಬೇಕು. ಒಕುನ್‌ನ ನಿಯಮ ಅವರ ಹೇಳಿಕೆಯ ಪ್ರಕಾರ ಬೇಡಿಕೆಯ ಪರ ಬೆಳೆಯುತ್ತಿರುವ ಕಾರ್ಮಿಕ ಶಕ್ತಿಯನ್ನಷ್ಟೇ ಅಲ್ಲ ಅವರು ತಯಾರಿಸುವ ಬಹು ಪ್ರಮಾಣದ ಉತ್ಪನ್ನಗಳನ್ನು ಸಹ ಹೀರುವಂತೆ ಸಾಕಷ್ಟು ಶೀಘ್ರವಾಗಿ ಬೆಳೆಯಬೇಕು. ಇಲ್ಲದಿದ್ದರೆ, ಯುನೈಟೆಡ್ ಸ್ಟೇಟ್ಸ್ ನಲ್ಲಿ 1990ನೇ ಮತ್ತು 2000ನೇ ಇಸವಿಯ ಪ್ರಾರಂಭದಲ್ಲಿ ಕಂಡುಬಂದಂತೆ ನಿರುದ್ಯೋಗದ ಚೇತರಿಕೆ ಯಾದಂತೆ ಕಂಡುಬರುತ್ತದೆ.
ಋತುಮಾನದ ನಿರುದ್ಯೋಗವು ಒಂದು ರೀತಿಯ ರಚನಾತ್ಮಕ ನಿರುದ್ಯೋಗದಂತೆ ಕಾಣಿಸುತ್ತದೆ, ಆದ್ದರಿಂದ ಇದು ಅನೇಕ ವಿಧದ (ಉದ್ಯೋಗಗಳ) www.hvacrjob.comಗಳಿಗೆ ಹೊಂದಿಕೊಂಡಿರುವ ಒಂದು ಬಗೆಯ ನಿರುದ್ಯೋಗವಾಗಿದೆ (ಕಟ್ಟಡದ ಕೆಲಸ, ವಲಸೆ ಹೋಗಿ ಕೃಷಿ ಮಾಡುವ ಕೆಲಸ). "ಋತುಮಾನದ ಹೊಂದಾಣಿಕೆ"ಯ ತಂತ್ರಜ್ಞಾನದ ಬಳಕೆಯಿಂದ ಸಂಖ್ಯಾಶಾತ್ರದಿಂದ ಈ ವಿಧಾನದ ನಿರುದ್ಯೋಗವನ್ನು ಹೆಚ್ಚು-ಪ್ರಮಾಣಿತ ಸರಕಾರಿ ನಿರುದ್ಯೋಗ ಮಾನದಂಡಗಳು ಅಳಿಸಿಹಾಕಬಹುದು.
ಆಂಡ್ರೆ ಗೊರ್ಜ್ ಅವರ ನಂಬಿಕೆಯ ಪ್ರಕಾರ ರಚನಾತ್ಮಕ ನಿರುದ್ಯೋಗವು ಆಧುನಿಕ ಜಗತ್ತಿನಲ್ಲಿ ಶಾಶ್ವತವಾದದ್ದು, ಮೈಕ್ರೋ ಚಿಪ್ ನ ಆವಿಷ್ಕಾರ ಮತ್ತು ಕಂಪ್ಯೂಟರ್ ವಿಜ್ಞಾನದ ವಿಸ್ಪೋಟದಂತಹ ಮುಂದುವರಿಕೆ ಮತ್ತು ಕೈಗಾರಿಕೋದ್ಯಮದಲ್ಲಿ ಕಡಿಮೆ ಮುಂದುವರಿದ ರಾಷ್ಟ್ರಗಳಲ್ಲೂ ಸಹ ರೋಬೋಟ್ ಗಳ ಬಳಕೆಯಿಂದ ಉತ್ಪಾದನೆಯನ್ನು ಹೆಚ್ಚುಮಾಡಿಕೊಳ್ಳುವಿಕೆ ಇದಕ್ಕೆ ಕಾರಣವಾಗಿದೆ.
ಅರ್ಥಶಾಸ್ತ್ರದಲ್ಲಿ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ಗಳಿಸಿದ ಪೌಲ್ ಕ್ರುಗ್ಮೆನ್ ಅವರು, "ಬಂಡವಾಳಶಾಹಿ ಎಂಬ ಒಂದು ಸಮಸ್ಯೆ....ತನ್ನ ಒಳ್ಳೆಯದಕ್ಕೆ ಹೆಚ್ಚು ಉತ್ಪನ್ನದಾಯಕವಾಗಿದೆ" ಎಂದು ತಮ್ಮ ವಾದವನ್ನು ಮಂಡಿಸುತ್ತ ಈ ದೃಷ್ಟಿಕೋನದ ಮೇಲೆ ಆಕ್ರಮಣವನ್ನು ಮಾಡಿದ್ದಾರೆ.[೯]
“ | Productivity gains in steel may reduce the number of jobs in steel, but they create jobs elsewhere (if only by lowering the price of steel, and therefore releasing money to be spent on other things); advanced countries may lose garment industry jobs to developing-country exports, but they gain other jobs producing the goods that those countries buy with their new export income. To observe that productivity growth in a particular industry reduces employment in that same industry tells us nothing about whether productivity growth in the economy as a whole reduces employment in the economy as a whole.[೧೦] | ” |
ದೀರ್ಘ-ಕಾಲದ ನಿರುದ್ಯೋಗ
[ಬದಲಾಯಿಸಿ]ಸಾಮಾನ್ಯ ಅರ್ಥದಲ್ಲಿ ಲೆಕ್ಕಾಚಾರದ ನಿದರ್ಶನದ ಸಹಿತ ಇದನ್ನು ವಿವರಿಸುವುದಾದರೆ ಯುರೋಪಿಯನ್ ಯೂನಿಯನ್‌ನಲ್ಲಿ ನಿರುದ್ಯೋಗವು ಒಂದು ವರ್ಷಕ್ಕೂ ಹೆಚ್ಚು ಕಾಲ ಇತ್ತು. ಇದೊಂದು ಸಾಮಾಜಿಕ ಬಹಿಷ್ಕಾರದ ಮುಖ್ಯ ಸೂಚಕವಾಗಿದೆ.
ಮರೆಮಾಚಿದ ನಿರುದ್ಯೋಗ
[ಬದಲಾಯಿಸಿ]ಮರೆಮಾಚಿದ ಅಥವಾ ಮುಸುಕಿನ ನಿರುದ್ಯೋಗವು, ದಕ್ಷ ಕಾರ್ಮಿಕರ ನಿರುದ್ಯೋಗವಾಗಿದ್ದು ಲೆಕ್ಕಾಚಾರ ತೆಗೆದುಕೊಳ್ಳುವ ರೀತಿಯಿಂದಾಗಿ ಇದು ಅಧಿಕೃತ ನಿರುದ್ಯೋಗದ ಲೆಕ್ಕಾಚಾರದಲ್ಲಿ ಕಾಣಿಸಿಕೊಂಡಿಲ್ಲ, ಬಹಳಷ್ಟು ರಾಷ್ಟ್ರಗಳಲ್ಲಿ ಯಾರಿಗೆ ಕೆಲಸವಿಲ್ಲವೋ ಆದರೆ ಸಕ್ರಿಯವಾಗಿ ಕೆಲಸ ಹುಡುಕುತ್ತಿದ್ದಾರೋ (ಮತ್ತು/ಅಥವಾ ಸಾಮಾಜಿಕ ಭದ್ರತೆ ಮತ್ತು ಲಾಭಕ್ಕೆ ಅರ್ಹತೆ ಉಳ್ಳವರು) ಅಂಥವರನ್ನು ನಿರುದ್ಯೋಗಿಗಳ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಕೆಲಸ ಹುಡುಕುವುದನ್ನು ನಿಲ್ಲಿಸಿದವರು (ಕೆಲವು ಸಾರಿ ಸರ್ಕಾರಿ "ಮರುತರಬೇತಿ" ಕಾರ್ಯಕ್ರಮದಲ್ಲಿರುವವರು) ಕೆಲಸದಲ್ಲಿ ಇಲ್ಲದಿದ್ದರೂ ಸಹ ಅಧಿಕೃತ ನಿರುದ್ಯೋಗಿಗಳ ಪಟ್ಟಿಯಲ್ಲಿ ಸೇರುವುದಿಲ್ಲ. ಇದುಕೆಲಸ ಮಾಡಲು ಇಷ್ಟವಿದ್ದರೂ ಸಹ ಕೆಲಸದಿಂದ ತೆಗೆದು ಹಾಕುವುದನ್ನು ತಪ್ಪಿಸಿಕೊಳ್ಳಲು ಮುಂಚಿತವಾಗಿ ನಿವೃತ್ತಿ ಪಡೆದವರಿಗೂ ಸಹ ಅನ್ವಯಿಸುತ್ತದೆ. ಅಪೂರ್ಣ ಉದ್ಯೋಗದಲ್ಲಿರುವವರನ್ನೂ ಸಹ ಈ ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ- ಪೂರ್ಣ ಸಮಯ ಕೆಲಸದಲ್ಲಿ ಇರಬಹುದು ಆದರೆ ಸಹ ಅರ್ಧ ಸಮಯ ಅಥವಾ ಕಾಲಿಕ ಕೆಲಸದಲ್ಲಿರುವವರು. ಏಕೆಂದರೆ ಮರೆಮಾಚಿದ ನಿರುದ್ಯೋಗದಿಂದಾಗಿ ಅಧಿಕೃತ ಲೆಕ್ಕಾಚಾರದಲ್ಲಿ ಪದೇ ಪದೇ ನಿರುದ್ಯೋಗದ ಪ್ರಮಾಣವನ್ನು ಕಡಿಮೆ ಅಂದಾಜು ಮಾಡಲಾಗುತ್ತದೆ.
ಸಂಪೂರ್ಣ ಉದ್ಯೋಗ
[ಬದಲಾಯಿಸಿ]ನಿಯಮದಂತೆ, ಉತ್ಪನ್ನಗಳ ಮತ್ತು ಕೆಲಸಗಾರರ ಬೇಡಿಕೆಯ ಒಟ್ಟೂ ಮೊತ್ತವನ್ನು ಹೆಚ್ಚಿಸುವುದರಿಂದ ಆವರ್ತಕ ನಿರುದ್ಯೋಗವನ್ನು ನೀಗಿಸಲು ಸಾಧ್ಯವಿದೆ. ಅದರ ಪರಿಣಾಮವಾಗಿ, ಆರ್ಥಿಕ ಸ್ಥಿತಿಯು ಉಳಿದ ನಾಲ್ಕು ವಿಧದ (ಪೂರೈಕೆ ವಿಭಾಗ) ನಿರುದ್ಯೋಗವನ್ನು ಅದು ಇರುವ ವ್ಯಾಪ್ತಿಯನ್ನು ತಲುಪುವುದರ ಮೂಲಕ "ಹಣದುಬ್ಬರ ತಡೆ" ಹೊಂದಬಹುದು.
ಹಲವು ಆರ್ಥಿಕ ತಜ್ಞರು ಹಣದುಬ್ಬರ ತಡೆಯನ್ನು ಸಾಮಾನ್ಯ ನಿರುದ್ಯೋಗ ಪ್ರಮಾಣಕ್ಕೆ ಸದೃಶವಾಗಿ ನೋಡುತ್ತಾರೆ. ಸಾಮಾನ್ಯ ಪ್ರಮಾಣದ ನಿರುದ್ಯೋಗವು, ಯಾವಾಗ ಕಾರ್ಮಿಕರ ಮಾರುಕಟ್ಟೆಯು ಸಮತೋಲನದಲ್ಲಿದ್ದು ಮತ್ತು ಹಣದುಬ್ಬರದ ಪ್ರಮಾಣ ಹೆಚ್ಚಾಗುವ ಇಲ್ಲವೇ ಕೆಳಗೆ ಬೀಳುವ ಪ್ರಮಾಣದ ಒತ್ತಡ ಇರುವುದೋ ಅಲ್ಲಿ ನಿರುದ್ಯೋಗದ ಪ್ರಮಾಣವೂ ಇರುವುದೆಂದು ವ್ಯಾಖ್ಯಾನ್ನಿಸಲ್ಪಡುತ್ತದೆ. ಹೆಚ್ಚು ವೈಜ್ಞಾನಿಕವಾಗಿ ಈ ಪ್ರಮಾಣವು ಕೆಲವೊಮ್ಮೆ NAIRU ಅಥವಾ ನಾನ್ ಎಕ್ಸಲರೇಟಿಂಗ್ ಇನ್ಪ್ಲೆಷನ್ ರೇಟ್ ಆಫ್ ಎಂಪ್ಲಾಯ್ ಮೆಂಟ್ (ನಿರುದ್ಯೋಗ ಪ್ರಮಾಣದಲ್ಲಿ ಹಣದುಬ್ಬರದ ವೇಗ ತಗ್ಗಿಸುವ) ಎಂದು ಕರೆಯಲ್ಪಡುತ್ತದೆ.
ಇದರ ಹೆಸರು ಏನೆಂಬುದು ವಿಷಯಕ್ಕೆ ಸಂಬಂಧಿಸುವುದಿಲ್ಲ,ಇದರರ್ಥ ಏನೆಂದರೆ ಒಂದು ವೇಳೆ ನಿರುದ್ಯೋಗದ ಪ್ರಮಾಣ "ಅತೀ ಕಡಿಮೆ" ಆದಲ್ಲಿ,ಮೌಲ್ಯದ ಹಿಡಿತ(ಉತ್ಪತ್ತಿಯ ಧೋರಣೆ) ಹಾಗೂ ವೇತನದ ಕೊರತೆಯಲ್ಲಿ ಹಣದುಬ್ಬರವು ಅತೀ ಕೆಟ್ಟಕ್ಕಿಂತ ಕೆಟ್ಟ ಸ್ಥಿಯನ್ನು(ಚುರುಕಾಗಿ) ತಲುಪುತ್ತದೆ. ಇತರರು ಸುಲಭವಾಗಿ ನಿರುದ್ಯೋಗ ಪ್ರಮಾಣ ಬೀಳುವಂತೆ ಹಣದುಬ್ಬರ ಹೆಚ್ಚಾಗುವ ಸಾಧ್ಯತೆಯನ್ನು ನೋಡುತ್ತಾರೆ. ಇದು ಜನಪ್ರಿಯ ಫಿಲಿಪ್ ವಕ್ರರೇಖೆ.
ಎನ್ NAIRU ನಿಯಮದ ಸಮಸ್ಯೆಗಳಲ್ಲಿ ಪ್ರಮುಖವೆಂದರೆ NAIRUವನ್ನು ಕರಾರುವಕ್ಕಾಗಿ ಯಾರೊಬ್ಬರೂ ತಿಳಿದಿಲ್ಲ (ಸಮಯಕ್ಕನುಸಾರವಾಗಿ ಇದು ಸುಲಭವಾಗಿ ಬದಲಾಗುವುದು). ನಿಜವಾದ ನಿರುದ್ಯೋಗ ಪ್ರಮಾಣಕ್ಕಿಂತ ದೋಷದ ಅಂತರ ಸ್ವಲ್ಪ ಮಟ್ಟಿಗೆ ಹೆಚ್ಚಿರಬಹುದು, ನಿಯಮ ರಚಿಸುವಾಗ NAIRU ಬಳಸಲು ಕ್ಲಿಷ್ಟವಾಗುವಂತೆ ರಚಿಸಲಾಗಿದೆ.
ಸಂಪೂರ್ಣ ಉದ್ಯೋಗದ ಮತ್ತೊಂದು ಪ್ರಮಾಣಕ ವ್ಯಾಖ್ಯಾನ್ನ ಮಾದರಿ ನಿರುದ್ಯೋಗ ಪ್ರಮಾಣ ಎಂದೂ ಆಗಿದೆ. ಇದು ಎಲ್ಲ ರೀತಿಯ ನಿರುದ್ಯೋಗವನ್ನು ಹೊರಗಿಟ್ಟು ಅಧಕ್ಷತೆಯ ಪ್ರಕಾರವನ್ನು ಪ್ರತಿಬಿಂಬಿಸುತ್ತದೆ. ಈ ವಿಧದ "ಸಂಪೂರ್ಣ ಉದ್ಯೋಗ" ನಿರುದ್ಯೋಗವು, ಸಂಘರ್ಷಣೆಯ ನಿರುದ್ಯೋಗಕ್ಕೆ ಮಾತ್ರ ಹೊಂದಿಕೆಯಾಗುವುದು (ಉತ್ತೇಜಿಸಲ್ಪಡುವ ಮೆಕ್ ಜಾಬ್ಸ್ ಮ್ಯಾನೇಜ್ ಮೆಂಟ್ ಸ್ಟ್ರ್ಯಾಟಜಿ ಭಾಗವನ್ನು ಹೊರತುಪಡಿಸಿ) ಮತ್ತು ಹೀಗೆಯೇ ಕೆಳಮಟ್ಟದ್ದಾಗಿರುವುದು. ಹಾಗಿದ್ದರೂ, ಕೀನ್ಸ್‌ನ ನಿಯಮ ಉತ್ತೇಜಿಸುವಂತೆ ಕೇವಲ ಬೇಡಿಕೆಯ ಭಾಗವನ್ನು ಬಳಸಿಕೊಂಡು NAIRU ಗಿಂತ ಕೆಳಗೆ ಮತ್ತು ಹಣದುಬ್ಬರದ ಅತೀ ವೇಗದಿಂದ ಕಷ್ಟಪಡದೆ (ಆದಾಯ ನಿಯಮದ ಗೈರಿನಲ್ಲಿ) ಈ ಸಂಪೂರ್ಣ ಉದ್ಯೋಗದ ಗುರಿಯನ್ನು ತಲುಪುವುದು ಅಸಾಧ್ಯವಾದದ್ದು. ಇಲ್ಲಿ ರಚನಾತ್ಮಕ ನಿರುದ್ಯೋಗದ ವಿರುದ್ಧ ಹೋರಾಡುವ ಗುರಿ ಹೊಂದಿರುವ ತರಬೇತಿ ಕೇಂದ್ರಗಳು ಸಹಾಯ ಮಾಡಬಹುದು.
ಒಂದು ವ್ಯಾಪ್ತಿಯವರೆಗೆ ಈ ಮುಚ್ಚಿಟ್ಟ ನಿರುದ್ಯೋಗವು ಅಸ್ತಿತ್ವದಲ್ಲಿರುವುದು,ಇದು ಅಧಿಕೃತ ನಿರುದ್ಯೋಗ ಅಂಕೆಯು, ನಿರುದ್ಯೋಗ ಪ್ರಮಾಣವು "ಸಂಪೂರ್ಣ ಉದ್ಯೋಗ"ದೊಂದಿಗೆ ಸಮನಾಗಿರುವ ಒಂದು ಕೆಳ ಮಟ್ಟದ ಮಾರ್ಗವನ್ನು ಸೂಚಿಸುವುದು.
ನಿರುದ್ಯೋಗದಿಂದಾಗುವ ನಷ್ಟ
[ಬದಲಾಯಿಸಿ]ವೈಯಕ್ತಿಕ
[ಬದಲಾಯಿಸಿ]ನಿರುದ್ಯೋಗ ವ್ಯಕ್ತಿಗಳು ಹಣ ಗಳಿಸಿ ತಮ್ಮ ಆರ್ಥಿಕ ಕರ್ತವ್ಯವನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಒತ್ತೆ ಇಟ್ಟ ವಸ್ತುಗಳಿಗೆ ಹಣ ಪಾವತಿಸಲು ಅಥವಾ ಮನೆಯ ಬಾಡಿಗೆ ನೀಡಲು ವಿಫಲರಾಗುತ್ತಾರೆ,ಇದು ಸ್ವಹಕ್ಕು ರದ್ದುಪಡಿಸಿ ಅಥವಾ ಉಚ್ಛಾಟಿಸಿವಸತಿಇಲ್ಲದಂತೆ ಮಾಡುತ್ತದೆ. ನಿರುದ್ಯೋಗವು ಅಪೌಷ್ಟಿಕತೆ,ಅನಾರೋಗ್ಯ,ಮಾನಸಿಕ ಒತ್ತಡಗಳನ್ನು ಹೆಚ್ಚಿಸುತ್ತದೆ ಮತ್ತು ಆತ್ಮ ಗೌರವ ಕಡಿಮೆಗೊಳಿಸಿ, ಖಿನ್ನತೆಯನ್ನು ವೃದ್ಧಿಸುತ್ತದೆ. ಸೋಶಿಯಲ್ ಇಂಡಿಕೇಟರ್ ರೀಸರ್ಚ್ ಅದರ ಅಧ್ಯಯನ ಪ್ರಕಾರ, ಯಾರು ಆಶಾವಾದಿಗಳಾಗಿರುತ್ತಾರೊ ಅಂಥವರೂ ಕೂಡ ನಿರುದ್ಯೋಗ ಸಮಯದಲ್ಲಿ ಉತ್ತಮವಾಗಿ ಯೋಚಿಸುವುದು ಕಷ್ಟವೆಂದೆಣಿಸುತ್ತಾರೆ. 16 ರಿಂದ 94ರ ವಯಸ್ಸಿನ ಜರ್ಮನಿಯವರನ್ನು ಸಂದರ್ಶಿಸಿದಾಗ ಮತ್ತು ಅವರ ಮಾಹಿತಿಯ ಪ್ರಕಾರ ಸಂಶೋಧಕರು ತಿಳಿದಿದ್ದೆಂದರೆ ನಿಜ ಜೀವನದಲ್ಲಿ ವ್ಯಕ್ತಿಗಳು ಎದುರಿಸಿದ ಒತ್ತಡ ಮತ್ತು ಕೇವಲ ವಿದ್ಯಾರ್ಥಿ ಸಮೂಹವಷ್ಟೇ ಅಲ್ಲದೆ ಆಶಾವಾದಿಗಳು ಕೂಡ ನಿರುದ್ಯೋಗ[೧೧] ದಲ್ಲಿ ತೀವ್ರ ಪ್ರಯಾಸಪಟ್ಟರೆಂದು.
1979 ರಲ್ಲಿ ಡಾ.ಎಮ್.ಬ್ರೆನ್ನರ್ ಅವರು"ಮನಸ್ಸಿನ ಮೇಲೆ ಸಾಮಾಜಿಕ ಪರಿಸರದ ಪ್ರಭಾವ" ಎಂಬ ವಿಷಯದ ಬಗ್ಗೆ ಅಧ್ಯಯನ ನಡೆಸಿದರು. ಇದರಿಂದ ಬ್ರೆನ್ನರ್ ಕಂಡುಕೊಂಡದ್ದೆಂದರೆ ಪ್ರತೀ 10%ನಿರುದ್ಯೋಗ ಹೆಚ್ಚಾದಂತೆ ಒಟ್ಟೂ ಸಾವಿನ ಸಂಖ್ಯೆಯಲ್ಲಿ 1.2% ಹೆಚ್ಚಾಗುವುದು,1.7% ಹೃದಯ ರೋಗಕ್ಕೆ ತುತ್ತಾಗುವರು,1.3% ಕುಡಿತದಿಂದಾಗಿ ಯಕೃತ್ತಿನ ತೊಂದರೆಗೆ ಒಳಪಡುವರು,1.7% ಆತ್ಮ ಹತ್ಯೆ ಮಾಡಿಕೊಳ್ಳುವರು,4.0% ಬಂಧನಕ್ಕೊಳಗಾಗುವರು,0.8% ಆಕ್ರಮಣ ಮಾಡಿ ಪೋಲೀಸರಲ್ಲಿ [೧೨] ದೂರಿಗೆ ಒಳಪಡುವರು. ಕ್ರಿಸ್ಟೋಪರ್ ರುಹ್ಮ್[೧೩] ಅವರ ಆರ್ಥಿಕ ಕುಸಿತದಲ್ಲಿ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಇತ್ತೀಚಿನ ಅಧ್ಯಯನದ ಪ್ರಕಾರ ಈ ಸಮಯದಲ್ಲಿ ಹಲವರ ಆರೋಗ್ಯವು ಸುಧಾರಣೆಯಾಗಿದೆ ಎಂದು ವರದಿಯಾಗಿದೆ. ಆರ್ಥಿಕ ಹಿಂಜರಿತದ ಪ್ರಭಾವದಿಂದಾಗಿ, ಮಹಾ ಖಿನ್ನತೆಯ ಸಮಯದಲ್ಲಿ ಅಪರಾಧಗಳ ಪ್ರಮಾಣ ಕಡಿಮೆ ಆಗುವುದಿಲ್ಲ. ಕಾರಣ ಯು.ಎಸ್. ನಿರುದ್ಯೋಗಿ ವಿಮೆ, ಒಬ್ಬರಿಗೆ ತಮ್ಮ ಕೆಲಸದಲ್ಲಿ ಗಳಿಸಿದ ಆದಾಯದ 50% ಭಾಗವನ್ನು ಹಿಂದಿರುಗಿಸುವುದಿಲ್ಲ (ಮತ್ತು ಅವರು ಯಾವಾಗಲೂ ಪಡೆಯಲು ಸಾಧ್ಯವಿಲ್ಲ) ಇದು ಆಹಾರ ಸ್ಟ್ಯಾಂಪುಗಳು ಅಥವಾ ಸಾಲ ಹಿಂದಿರುಗಿಸುವಂಥಹ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಆಗಾಗ ಉಪಯೋಗಿಸಲ್ಪಡುತ್ತದೆ. ಸರ್ಕಾರ ಸಮಾಜ ಸೇವೆಯ ರೂಪದಲ್ಲಿ ಆಹಾರ ಸ್ಟ್ಯಾಂಪುಗಳನ್ನು ವರ್ಗಾಯಿಸುವುದು ಹೆಚ್ಚಾದಂತೆ ಉತ್ಪಾದಕ ಸರಕುಗಳ ಮೇಲೆ ಮಾಡುವ ಖರ್ಚು ಕಡಿಮೆಯಾಗುವುದು, ಜಿಡಿಪಿ ತಗ್ಗುವುದು.[ಸೂಕ್ತ ಉಲ್ಲೇಖನ ಬೇಕು]
ಕೆಲವರು ಹೇಳುವಂತೆ, ಕಡಿಮೆ ಆದಾಯದ ಉದ್ಯೋಗವು ನಿಜವಾಗಿ ನಿರುದ್ಯೋಗಕ್ಕಿಂತ ಒಳ್ಳೆಯ ಸೌಖ್ಯ ಸ್ಥಿತಿಯ ಆಯ್ಕೆಯಾಗಿರುವುದಿಲ್ಲ (ಇದರ ನಿರುದ್ಯೋಗ ವಿಮಾ ಯೋಜನದ ಜೊತೆಗೆ). ನಿರುದ್ಯೋಗ ವಿಮಾ ಪ್ರಯೋಜನ ಪಡೆಯುವುದು ಕಷ್ಟವಾಗಿದ್ದು, ಪಡೆಯಲು ಸಾಧ್ಯವಾಗದಿದ್ದರೂ ಅದನ್ನು ಪಡೆಯದೆ ಕೆಲಸ ಮಾಡಿದ್ದರೂ, ಈ ಉದ್ಯೋಗ ಹಾಗೂ ನಿರುದ್ಯೋಗವು ಬದಲಿಗಿಂತ ಹೆಚ್ಚಾಗಿ ಅಗತ್ಯತೆಯನ್ನು ಪೂರೈಸುವುದಾಗಿದೆ. (ಹೆಚ್ಚಾಗಿ ಈ ಉದ್ಯೋಗವು ಕಡಿಮೆ ಅವಧಿಯದಾಗಿರುತ್ತದೆ, ವಿದ್ಯಾರ್ಥಿಗಳು ಇಲ್ಲವೆ ಯಾರು ಅನುಭವದ ಲಾಭವನ್ನು ಪಡೆಯಲು ಪ್ರಯತ್ನಿಸುವರೋ; ಅಂಥವರು ಕಡಿಮೆ ಸಂಬಳದ ಉದ್ಯೋಗಲ್ಲಿರುವ ಹೆಚ್ಚು ಸಾದ್ಯತೆಗಳಿವೆ) ನಿರುದ್ಯೋಗ ವಿಮೆಯು ಕಡಿಮೆ ಸಂಬಳದ ಉದ್ಯೊಗಕ್ಕೆ ಜನರ ಪೂರೈಕೆ ಮಾಡುವುದು, ಆಗ ಅಧಿಕಾರಿಯು ನಿರುದ್ಯೋಗ ವಿಮೆಯನ್ನು ಮನಸ್ಸಿನಲ್ಲಿಟ್ಟು ಆಡಳಿತ ಮಂಡಳಿಯ ಸೂತ್ರ (ಕಡಿಮೆ ಸಂಬಳ ಮತ್ತು ಪ್ರಯೋಜನಗಳು, ಮುಂದುವರಿಯಲು ಅತ್ಯಲ್ಪ ಅವಕಾಶ) ಉಪಯೋಗಿಸಿ ಇವರನ್ನು ಆಯ್ದುಕೊಳ್ಳುವರು. ಈ ಸಂಯೋಗವು ಒಂದು ರೀತಿಯ ಸಂಘರ್ಷಣಾ ನಿರುದ್ಯೋಗದ ಇರುವಿಕೆಯನ್ನು ಬೆಂಬಲಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು]
ನಿರುದ್ಯೋಗದ ಮತ್ತೊಂದು ಹಾನಿಯೆಂದರೆ, ಆರ್ಥಿಕ ಸಂಪನ್ಮೂಲದ ಕೊರತೆ ಮತ್ತು ಸಾಮಾಜಿಕ ಜವಾಬ್ದಾರಿ ಇವುಗಳ ಸಮ್ಮಿಶ್ರಣದಿಂದಾಗಿ ನಿರುದ್ಯೋಗಿ ಕೆಲಸಗಾರರು ತಮಗೆ ನೈಪುಣ್ಯತೆ ಇಲ್ಲದ ಕೆಲಸದಲ್ಲಿ ಅಥವಾ ಅವರ ಪ್ರತಿಭೆ ತೋರಿಸಲು ಅಸಮರ್ಥವಾದ ಕೆಲಸದಲ್ಲಿ ದುಡಿಯುವಂತೆ ಮಾಡುತ್ತದೆ. ನಿರುದ್ಯೋಗವು ಕಡಿಮೆ ಉದ್ಯೋಗಕ್ಕೆ ಕಾರಣವಾಗಬಹುದು ಮತ್ತು ಕೆಲಸ ಕಳೆದುಕೊಳ್ಳುವ ಭಯದ ಜೊತೆ ಮಾನಸಿಕ ಕಳವಳಕ್ಕೂ ನಾಂದಿಯಾಗಬಹುದು.
ಸಾಮಾಜಿಕ
[ಬದಲಾಯಿಸಿ]ಅಧಿಕ ನಿರುದ್ಯೋಗದ ಆರ್ಥಿಕತೆಯು ಅದಕ್ಕೆ ದೊರಕುವ ಎಲ್ಲ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದಿಲ್ಲ, ಉದಾಹರಣೆಗೆ ಅದಕ್ಕಾಗಿಯೇ ಲಭ್ಯವಿರುವ ಕಾರ್ಮಿಕರು. ತರುವಾಯ ಉತ್ಪಾದನಾ ಸಾಧ್ಯತೆಯು ಮಿತಿಗಿಂತ ಕಡಿಮೆ ಕೆಲಸ ನಿರ್ವಹಿಸುತ್ತಿದ್ದು, ಎಲ್ಲ ಉದ್ಯೋಗಿಗಳನ್ನು ಚೆನ್ನಾಗಿ ಬಳಸಿಕೊಂಡಿದ್ದಲ್ಲಿ ಇನ್ನೂ ಹೆಚ್ಚಿನ ಉತ್ಪಾದನೆಯನ್ನು ತೋರಿಸಬಹುದಿತ್ತು. ಆದಾಗ್ಯೂ, ಅಲ್ಲಿ ಆರ್ಥಿಕ ದಕ್ಷತೆ ಮತ್ತು ನಿರುದ್ಯೋಗದ ಮಧ್ಯೆ ವಾಣೀಜ್ಯಕ ಅಂತರವಿದೆ, ಒಂದು ವೇಳೆ ನಿರುದ್ಯೋಗಿಯು ಅವರಲ್ಲಿ ಪ್ರಸ್ತಾಪಿಸಿದ ಮೊದಲ ಕೆಲಸವನ್ನು ಒಪ್ಪಿಕೊಂಡಲ್ಲಿ ಅದು ಅವರ ಸಾಮರ್ಥ್ಯಕ್ಕಿಂತ ಕಡಿಮೆ ಮಟ್ಟದ್ದಾಗಿದ್ದಲ್ಲಿ ಆರ್ಥಿಕ ದಕ್ಷತೆಯನ್ನು ಕಡಿಮೆಗೊಳಿಸುತ್ತದೆ.[೧೪]
ಒಂದು ಅಂದಾಜಿನ ಪ್ರಕಾರ, ಕಡಿಮೆ ಕೂಲಿಯಿಂದಾಗಿ, ಮಹಾ ಆರ್ಥಿಕ ಕುಸಿತದ ಕಷ್ಟಕರ ನಿರುದ್ಯೋಗ ಸಮಯದಲ್ಲಿ ಯು.ಎಸ್‌ನ ಆರ್ಥಿಕತೆಯು $4 ಟ್ರಿಲಿಯನ್ ನಷ್ಟವನ್ನನುಭವಿಸಿತು. ಏಕ ಸ್ವಾಮ್ಯತ್ವದ ಸಂಸ್ಥೆಗಳ ಮಧ್ಯದ ಒಡಂಬಡಿಕೆ ಮತ್ತು ತೆರಿಗೆಗಳ ಕಾರಣದಿಂದ ಉಂಟಾದ ನಷ್ಟಕ್ಕಿಂತಲೂ ಇದು ಎಷ್ಟೋ ಪಟ್ಟು ಹೆಚ್ಚಿನದಾಗಿತ್ತು.[ಸೂಕ್ತ ಉಲ್ಲೇಖನ ಬೇಕು]
ಹೆಚ್ಚು ಅವಧಿಯ ನಿರುದ್ಯೋಗದಿಂದಾಗಿ ಕೆಲಸಗಾರ ತನ್ನ ನಿಪುಣತೆಯನ್ನು ಕಳೆದುಕೊಳ್ಳಬಹುದು, ಕಾರಣ ಮಾನವ ಸಂಪನ್ಮೂಲದ ಹಾನಿಯಾಗುವುದು. ನಿರುದ್ಯೋಗಿಯಾಗಿರುವುದು ಕೆಲಸಗಾರನ ಜೀವನ ಮಟ್ಟವನ್ನು 7 ವರ್ಷಗಳಷ್ಟು ಕಡಿಮೆಮಾಡಬಹುದು.
ಅತಿ ಹೆಚ್ಚಿನ ನಿರುದ್ಯೋಗವು ಕಾರ್ಮಿಕರು, ವಿದೇಶಿಯರು ತಮ್ಮ ಕೆಲಸವನ್ನು ಕಸಿದುಕೊಳ್ಳುತ್ತಿದ್ದಾರೆ ಎಂಬ ಭಾವನೆ ಹೊಂದಿ ಪರದ್ವೇಷವನ್ನು ಮತ್ತು ತಮ್ಮನ್ನು ಕಾಪಾಡಿಕೊಳ್ಳುವ ಸೂತ್ರ ರಚನೆಯನ್ನೂ ಪ್ರೊತ್ಸಾಹಿಸುವುದು. ದೇಶೀಯ ಮತ್ತು ಸ್ಥಳೀಯ ಕೆಲಸಗಾರರ ಸದ್ಯದ ಕೆಲಸವನ್ನು ಕಾಪಾಡಿಕೊಳ್ಳಲು, ಹೊರಗಿನವರು ಯಾರು ಕೆಲಸವನ್ನು ಬಯಸುತ್ತಾರೋ ಅವರ ವಿರುದ್ಧ ಕಾನೂನು ತಡೆ(ಲೀಗಲ್ ಬ್ಯಾರಿಯರ್)ಯನ್ನು ವಿಧಿಸಲಾಗಿದೆ, ವಲಸೆ ಬರುವವರಿಗೆ ನಿರ್ಬಂಧ ಅಥವಾ ತೆರಿಗೆ ಹೇರುವುದು, ಅಂತೆಯೇ ವಿದೇಶೀ ಪೈಪೋಟಿಗಾರರ ವಿರುದ್ಧ ವ್ಯಾಪಾರೀ ತಡೆ.
ಕೊನೆಯಲ್ಲಿ,ಕೆಲಸ ಕೊಡುವ ಯಜಮಾನರು ಕೆಲಸದ ಅವಕಾಶಕ್ಕಾಗಿ ಕೆಲಸಗಾರರ ಮಧ್ಯೆ ಹೆಚ್ಚು ಸ್ಫರ್ಧೆ ಏರ್ಪಡುವಂತೆ ಮಾಡಿ, ನಿರುದ್ಯೋಗವು ಯಜಮಾನರ ಒಲಿಗೊಪ್ಸೊನಿ ಶಕ್ತಿಯ (ಮಾರುಕಟ್ಟೆಯಲ್ಲಿ ಕೊಳ್ಳುವವರಿಗಿಂತ ಮಾರುವವರ ಪ್ರಮಾಣ ಹೆಚ್ಚಾಗುವುದು) ಕಡೆ ಗಮನ ಕೇಂದ್ರೀಕರಿಸುತ್ತದೆ.
ಐತಿಹಾಸಿಕ ಮತ್ತು ಸಮಕಾಲೀನ ನಿರುದ್ಯೋಗ
[ಬದಲಾಯಿಸಿ]This section is suspect and may represent a minority view. |
ಮುಂಚಿನ ಸಾಕ್ಷರ ಸಮೂದಾಯಗಳು ತಮ್ಮ ಸದಸ್ಯರನ್ನು ಅವರ ವಿಸ್ತೃತ ಕುಟುಂಬದ ಭಾಗವೆಂದು ಭಾವಿಸುತ್ತಾರೆ ಅತ್ತು ಈ ಮೂಲಕವಾಗಿ ನಿರುದ್ಯೋಗಕ್ಕೆ ಅವಕಾಶವನ್ನು ಕೊಡುವುದಿಲ್ಲ.[ಸೂಕ್ತ ಉಲ್ಲೇಖನ ಬೇಕು] ಯುರೋಪಿನ ಊಳಿಗಮಾನ್ಯ ಪದ್ದತಿ, ಜೀತದಾಳುಗಳು ಮುಂತಾದ ಐತಿಹಾಸಿಕ ಸಮಾಜಗಳು ಯಾವಾಗಲೂ ನಿರುದ್ಯೋಗಿಗಳಾಗಿರಲಿಲ್ಲ, ಯಾಕೆ೦ದರೆ ಅವರು ಭೂಮಿಯನ್ನು ನೇರವಾಗಿ ಬಳಸಿಕೊಳ್ಳುತ್ತಿದ್ದರು ಮತ್ತು ಅದಕ್ಕೆ ಬೇಕಾದ ಸಲಕರಣೆಗಳನ್ನು ಹೊಂದಿದ್ದರು, ಹೀಗಾಗಿ ಅದು ಬೆಳೆಯ ಉತ್ಪಾದನೆಗೆ ಸಹಾಯಕವಾಗಿತ್ತು. ಹತ್ತೊ೦ಬತ್ತನೇ ಶತಮಾನದಲ್ಲಿ ಅಮೇರಿಕದ ಗಡಿಯಲ್ಲಿ ಕಾರ್ಮಿಕರು ಮತ್ತು ಬಡ ರೈತರು ಇದ್ದ ಕಾಲವಿತ್ತು, ಅವರ ಸ್ಥಿತಿಯು ಈಗ ಸಮಾಜದಲ್ಲಿ ನಿರುದ್ಯೋಗಿಗಳಿಗೆ ಇರುವ ಸ್ಥಾನಮಾನವನ್ನೇ ಹೋಲುತ್ತಿತ್ತು. ಆದರೆ ಅವರು ನೈಜವಾಗಿ ನಿರುದ್ಯೋಗಿಗಳಾಗಿರಲಿಲ್ಲ, ಕೆಲಸವನ್ನು ಹುಡುಕಿಕೊಳ್ಳುವುದು ಮತ್ತು ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಅವರಿಗೆ ಸಾದ್ಯವಿತ್ತು.[ಸೂಕ್ತ ಉಲ್ಲೇಖನ ಬೇಕು]
1930ರ ದಶಕದಲ್ಲಿ ಅಮೇರಿಕಾ ಮತ್ತು ಇತರ ಅನೇಕ ದೇಶಗಳು ತೀವ್ರ ಆರ್ಥಿಕ ಮುಗ್ಗಟ್ಟು ಕಂಡುಬಂದಿತು. 1929ರಲ್ಲಿ ಅಮೇರಿಕಾದ ನಿರುದ್ಯೋಗದ ಮಟ್ಟ ಶೇಕಡಾ 3ನ್ನು ತಲುಪಿತ್ತು.[೧೫] 1933ರಲ್ಲಿ ಅಮೇರಿಕಾದ ಎಲ್ಲ ಕಾರ್ಮಿಕರು ಹಾಗೂ ಶೇಕಡಾ 37 ರಷ್ಟು ಭೂರಹಿತ ಕೆಲಸಗಾರರು ನಿರುದ್ಯೋಗಿಗಳಾದರು,[೧೬] ವ್ಯವಹಾರ ಸ೦ಸ್ಥೆಗಳು ಕಾರ್ಮಿಕರನ್ನು ನೇಮಿಸಿಕೊಳ್ಳಲು ಅಸಮರ್ಥವಾದವು ಮತ್ತು ಹೆಚ್ಚಿನ ವೇತನದ ಬೇಡಿಕೆಯಿ೦ದ ಹುಟ್ಟುವಳಿ ಕಡಿಮೆಯಾಯಿತು.[೧೭] ಕ್ಲೀವ್‌ಲ್ಯಾ೦ಡ್, ಓಹಿಯೋಗಳಲ್ಲಿ ನಿರುದ್ಯೋಗ ಮಟ್ಟವು ಶೇಕಡಾ 60 ರಷ್ಟಿತ್ತು, ಟೊಲೆಡೋ ಮತ್ತು ಓಹಿಯೋ ಗಳಲ್ಲಿ ಶೇಕಡಾ 80 ರಷ್ಟಿತ್ತು.[೧೮] ಕೆನಡಾದಲ್ಲಿ ನಿರುದ್ಯೋಗ ಮಟ್ಟವು ಶೇಕಡಾ 27 ನ್ನು ತಲುಪಿತು ಹಾಗೂ 1933ರಲ್ಲಿ ತೀವ್ರ ಮುಗ್ಗಟ್ಟನ್ನು ತಲುಪಿತ್ತು.[೧೯] ಇ೦ಗ್ಲೆ೦ಡಿನ ಈಶಾನ್ಯ ಭಾಗದ ಕೆಲವು ನಗರ ಮತ್ತು ಪಟ್ಟಣಗಳಲ್ಲಿ ನಿರುದ್ಯೋಗವು ಅತ್ಯಂತ ಹೆಚ್ಚಿನದಾದ ಶೇಕಡಾ 70ರಷ್ಟನ್ನು ತಲುಪಿದವು. 1932 ರಲ್ಲಿ ಜರ್ಮನಿಯಲ್ಲಿ ನಿರುದ್ಯೋಗ ಮಟ್ಟವು ಶೇಕಡಾ 25ರಷ್ಟನ್ನು ತಲುಪಿತು.[೨೦] ನ್ಯೂಯಾರ್ಕ್ ನಲ್ಲಿನ ಒಂದು ಸೋವಿಯತ್ ವಾಣಿಜ್ಯ ಒಕ್ಕೂಟಕ್ಕೆ ಸೋವಿಯತ್ ಒಕ್ಕೂಟದಲ್ಲಿ ಉದ್ಯೋಗ ಬಯಸುತ್ತಿರುವ ಅಮೇರಿಕನ್ನರಿ೦ದ ಒಂದು ದಿನಕ್ಕೆ 350 ಅರ್ಜಿಗಳು ಬ೦ದಿದ್ದವು.[೨೧] ಎರಡು ದಶಲಕ್ಷ ನಿರಾಶ್ರಿತರು ಅಮೇರಿಕದಿ೦ದ ವಲಸೆ ಹೋಗುತ್ತಿದ್ದರು. ಅಮೇರಿಕದ ಒಬ್ಬ ವ್ಯಕ್ತಿ ಕೆಲಸ ಹುಡುಕಿಕೊ೦ಡು 900 ಮೈಲುಗಳಷ್ಟು ದೂರ ಕ್ರಮಿಸಿದ್ದ.[೧೮]
ಜೀತ-ಕಾರ್ಮಿಕವ್ಯವಸ್ಥೆಯ ಅಡಿಯಲ್ಲಿ ಜೀತ-ಮಾಲಿಕರು ಎ೦ದಿಗೂ ಅವರ ಜಮೀನನ್ನು ಬಹಳ ದಿನಗಳ ಕಾಲ ಖಾಲಿ ಬಿಡುತ್ತಿರಲಿಲ್ಲ. (ಹಾಗಾದ ಪಕ್ಷದಲ್ಲಿ ಅವರು ಅನಗತ್ಯ ಕಾರ್ಮಿಕರನ್ನು ಮಾರಾಟ ಮಾಡುತ್ತಿದ್ದರು.) ಹಳೆಯ ಸೋವಿಯತ್ ಯೂನಿಯನ್ ಅಥವಾ ಇಂದಿನ ಕ್ಯೂಬಾದಂತಹ ಯೋಜನಾಬದ್ದ ಆರ್ಥಿಕತೆಗಳು ಅಗತ್ಯವಿದ್ದಲ್ಲಿ ಗಣನೀಯ ಪ್ರಮಾಣದ ಅಧಿಕ ಪ್ರಮಾಣದ ನೌಕರ ವರ್ಗವನ್ನು ಬಳಸಿಕೊಳ್ಳುವುದರ ಮೂಲಕ ಲಾಕ್ಷಣಿಕವಾಗಿ ಎಲ್ಲರಿಗೂ ಉದ್ಯೋಗವನ್ನು ಒದಗಿಸುತ್ತದವೆ. (ಇದನ್ನು "ಮರೆಮಾಚಿದ ನಿರುದ್ಯೋಗ" ಎಂದು ಕರೆಯಲಾಗುತ್ತದೆ, ಇದು ಕೆಲೆವೊಮ್ಮೆ ಒಂದು ವಿಧದ ಅಪೂರ್ಣ ನಿರುದ್ಯೋಗವಾಗಿ ಕಂಡುಬರುತ್ತಿತ್ತು)[ಸೂಕ್ತ ಉಲ್ಲೇಖನ ಬೇಕು] ಕಾರ್ಮಿಕರ ಸಹಕಾರ ಸಂಸ್ಥೆಗಳು-ಯು.ಎಸ್‌ನ ವಾಯುವ್ಯ ಫೆಸಿಪಿಕ್‌ನಲ್ಲಿ ಮರದ ಹಲಗೆಗಳನ್ನು ತಯಾರಿಸುತ್ತಿದ್ದಂತಹ-ಒಂದು ವೇಳೆ ಈ ಸಹಕಾರವು ದಿವಾಳಿಯಾಗದೇ ಇದ್ದರೆ ತಮ್ಮ ಸದಸ್ಯರನ್ನು ನಿರುದ್ಯೋಗಿಗಳಾಗಲು ಬಿಡುತ್ತಿರಲಿಲ್ಲ.[ಸೂಕ್ತ ಉಲ್ಲೇಖನ ಬೇಕು]
ಇನ್ನು ಬೃಹತ್ತಾದ ಬಂಡವಾಳಶಾಹಿ ಆರ್ಥಿಕ ವ್ಯವಸ್ಥೆಯಲ್ಲಿಯೂ ಕೂಡ ನಿರುದ್ಯೋಗದ ದರವು ಅರ್ಥದರ್ಭಿತವಾಗಿ ಬದಲಾಗಬಹುದು. ತುಲನಾತ್ಮಕವಾಗಿ, ಅಮೇರಿಕಾ, ಯು.ಕೆ, ಅಥವಾ ಡೆನ್ಮಾರ್ಕ್‌ನಂತಹ ಹಗುರವಾಗಿ ನಿಯಂತ್ರಿತಗೊಂಡ ಕಾರ್ಮಿಕ ಮಾರುಕಟ್ಟೆಗಳು ಕಡಿಮೆ ಮಟ್ಟದ ಅನೈಚ್ಛಿಕ ನಿರುದ್ಯೋಗವನ್ನು ಹೊಂದಿರುವ ಹಾಗೆ ಕಾಣಿಸುತ್ತದೆ, ಅದ್ದರಿಂದ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಅವುಗಳ ನಿರುದ್ಯೋಗದ ದರ ಅತ್ಯಂತ ವೇಗವಾಗಿ ಏರಿಕೆಯಾಗಬಹುದು, ಯಾಕೆಂದರೆ ಸಂಸ್ಥೆಗಳು ಕಾರ್ಮಿಕರನ್ನು ಸುಲಭವಾಗಿ ಕೆಲಸದಿಂದ ತೆಗೆದುಹಾಕುವುದನ್ನು ಕಂಡುಕೊಂಡಿದ್ದಾರೆ. ಫ್ರಾನ್ಸ್, ಜರ್ಮನಿ ಮತ್ತು ಇಟಲಿಗಳು ಅತ್ಯಂತ ಹೆಚ್ಚು ನಿಯಂತ್ರಣದೊಂದಿಗೆ ಮತ್ತು ಸಂಘಟನೆಗಳೊಂದಿಗೆ ಅತಿಯಾದ ಅನೈಚ್ಛಿಕ ನಿರುದ್ಯೋಗವನ್ನು ಹೊಂದಿರುವುದು ಕಂಡುಬರುತ್ತದೆ, ಆದ್ದರಿಂದ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ಏರಿಕೆಯ ಪ್ರಮಾಣವು ಕಡಿಮೆ ಇರುತ್ತದೆ, ಯಾಕೆಂದರೆ ಸಂಸ್ಥೆಗಳು ಕಾರ್ಮಿಕರನ್ನು ಸುಲಭವಾಗಿ ಕೆಲಸದಿಂದ ತೆಗೆದುಹಾಕುವುದು ಸಾದ್ಯವಿಲ್ಲ ಎಂಬುದನ್ನು ಕಂಡುಕೊಂಡಿದ್ದಾರೆ. ಸ್ಪೇಯಿನ್‌ನಂತಹ ಕೆಲವು ರಾಷ್ಟ್ರಗಳು ಅಧಿಕ ಸಾಮಾನ್ಯ ನಿರುದ್ಯೋಗ ಮತ್ತು ತೀಕ್ಷ್ಣವಾದ ಏರಿಕೆ ಎರಡರಿಂದಲೂ ತೊಂದರೆಯನ್ನು ಅನುಭವಿಸುತ್ತಿವೆ.[೨೨]
ಮಾಪನ
[ಬದಲಾಯಿಸಿ]ಬಹಳಷ್ಟು ಜನರು ನಿರುದ್ಯೋಗಿಗಳ ಸಂಖ್ಯೆಯ ಬಗ್ಗೆ ಕಾಳಜಿ ತೋರಿಸಿದರೂ, ಅರ್ಥಶಾಸ್ತ್ರಜ್ಞರು ವಿಶೇಷವಾಗಿ ನಿರುದ್ಯೋಗದ ಮೇಲೆ ದೃಷ್ಟಿ ಹರಿಸಿದ್ದಾರೆ. ಸಹಜವಾಗಿ ಜನಸಂಖ್ಯೆಯ ಹೆಚ್ಚಳದಿಂದ ಉದ್ಯೋಗ ಹೊಂದಿದ ಜನರ ಸಂಖ್ಯೆಯನ್ನು ಮತ್ತು ಜನಸಂಖ್ಯೆಯ ಹೆಚ್ಚಳದಿಂದ ಉಂಟಾದ ಕಾರ್ಮಿಕ ಬಲದ ಹೆಚ್ಚಳವನ್ನು ಇದು ಸರಿದೂಗಿಸುತ್ತದೆ. ನಿರುದ್ಯೋಗದ ಪ್ರಮಾಣವು ಶೇಕಡವಾರು ಪ್ರಮಾಣದಲ್ಲಿ ತೋರಿಸಲ್ಪಡುತ್ತದೆ, ಮತ್ತು ಈ ಕೆಳಗೆ ಕಾಣಿಸಿದಂತೆ ಲೆಕ್ಕ ಹಾಕಲ್ಪಡುತ್ತದೆ:
ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಹೇಳಿಕೆಯ ಪ್ರಕಾರ "ಯಾರು ಸಧ್ಯದಲ್ಲಿ ಕೆಲಸವಿಲ್ಲದೇ ಇರುವರೋ ಆದರೆ ಹಣಕ್ಕಾಗಿ ಕೆಲಸ ಮಾಡುವ ಆಸಕ್ತಿ ಮತ್ತು ಸಾಮರ್ಥ್ಯ ಹೊಂದಿರುವರೋ ಮತ್ತು ಸಧ್ಯ ಕೆಲಸ ಮಾಡಲು ಸಿಗುವವರು, ಮತ್ತು ಸಕ್ರಿಯವಾಗಿ ಕೆಲಸಕ್ಕಾಗಿ ಹುಡುಕಿದವರನ್ನು ನಿರುದ್ಯೋಗಿ ಕಾರ್ಮಿಕರೆಂದು ಕರೆಯಲಾಗಿದೆ. ಎಲ್ಲ ನಿರುದ್ಯೋಗಗಳು "ಬಹಿರಂಗವಾಗಿ" ಇಲ್ಲದಿರುವುದರಿಂದ ಮತ್ತು ಸರ್ಕಾರಿ ಕಾರ್ಯಾಲಯದಿಂದ ಗಣನೆಗೆ ಒಳಪಡದಿರುವುದರಿಂದ, ನಿರುದ್ಯೋಗದ ಅಧಿಕೃತ ಲೆಕ್ಕಾಚಾರವು ಖಚಿತವಾಗಿರುವುದಿಲ್ಲ.
ILO ನಿರುದ್ಯೋಗದ ಪ್ರಮಾಣವನ್ನು ಲೆಕ್ಕಾಚಾರ ಮಾಡುವ 4 ವಿಧಾನಗಳನ್ನು ವಿವರಿಸಿದೆ:
- ಲೇಬರ್ ಪೋರ್ಸ್ ಸ್ಯಾಂಪಲ್ ಸರ್ವೆ ಗಳು ನಿರುದ್ಯೋಗ ದರವನ್ನು ಅಳತೆಮಾಡುವ ಅತ್ಯಂತ ಪ್ರಮುಖವಾದ ಅಂಗೀಕೃತ ವಿಧಾನಗಳಾಗಿವೆ, ಆದ್ದರಿಂದ ಅವು ಅತ್ಯಂತ ವಿಸ್ತೃತವಾದ ಪರಿಣಾಮಗಳನ್ನು ಕೊಡುತ್ತಿವೆ ಮತ್ತು ಜಾತಿ ಮತ್ತು ಲಿಂಗಕ್ಕೆ ಸಂಬಂಧಿಸಿದಂತಹ ವಿವಿಧ ಗುಂಪಿನ ವರ್ಗಗಳ ಮೂಲಕ ನಿರುದ್ಯೋಗವನ್ನು ಮಾಪನ ಮಾಡಲು ಅನುವುಮಾಡಿಕೊಡುತ್ತಿವೆ. ಇವು ಅಂತರಾಷ್ಟ್ರೀಯ ಮಟ್ಟಕ್ಕೆ ಹೋಲಿಕೆಯಾಗಬಹುದಾದ ವಿಧಾನವಾಗಿವೆ.
- ಅಧೀಕೃತ ಅಂದಾಜು ಗಳು, ಇವು ಇತರ ಮೂರು ವಿಧಾನಗಳ ಒಂದು ಅಥವಾ ಹೆಚ್ಚು ಮಾಹಿತಿಗಳ ಸಂಯೋಜನೆಯೊಂದ ನಿರ್ಧರಿಸಲ್ಪಡುತ್ತದೆ. ಈ ವಿಧಾನಗಳ ಬಳಕೆಯು ಕಾರ್ಮಿಕ ಸಮೀಕ್ಷೆಯ ಪರವಾಗಿ ಇಳಿಮುಖವಾಗುತ್ತಿದೆ.
- ಸಾಮಾಜಿಕ ವಿಮಾ ಸಂಖ್ಯಾಶಾಸ್ತ್ರ , ಒಟ್ಟೂ ಕಾರ್ಮಿಕ ಸಂಖ್ಯೆಯಲ್ಲಿ ವಿಮೆಯನ್ನು ಹೊಂದಿರುವ ವ್ಯಕ್ತಿಗಳ ಸಂಖ್ಯೆ ಮತ್ತು ವಿಮೆಯ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿರುವ ವ್ಯಕ್ತಿಗಳ ಆದಾರದ ಮೇಲೆ ನಿರುದ್ಯೋಗ ಪ್ರಯೋಜನಗಳಂತವುಗಳನ್ನು ಮಾಪನ ಮಾಡಲಾಗುತ್ತದೆ. ಈ ವಿಧಾನವು ಕೆಲಸವನ್ನು ಕಂಡುಕೊಳ್ಳದೇ ಇರುವುದರಿಂದ ಪ್ರಯೋಜನಗಳ ಅವಧಿ ಮುಗಿದು ಹೋಗುತ್ತಿರುವ ಕಾರಣಕ್ಕಾಗಿ ಅತ್ಯಂತ ವ್ಯಾಪಕವಾಗಿ ವಿಮರ್ಶೆಗೊಳಪಟ್ಟಿದೆ.
- ಉದ್ಯೋಗ ಕಚೇರಿಯ ಸಂಖ್ಯಾಶಾಸ್ತ್ರ , ಇದು ಅತ್ಯಂತ ಕಡಿಮೆ ಪರಿಣಾಮಕಾರಿಯಾದ ವಿಧಾನವಾಗಿದ್ದು, ಕೇವಲ ಉದ್ಯೋಗ ಕಚೇರಿಗೆ ಬೇಟಿ ನಿಡೀದ ವ್ಯಕ್ತಿಗಳ ಮಾಸಿಕ ತುಲನೆಯನ್ನು ಮಾತ್ರ ಒಳಗೊಂಡಿದೆ. ಈ ವಿಧಾನವು ಕೂಡ ILO ವ್ಯಾಖ್ಯೆಯ ಪ್ರಕಾರ ಉದ್ಯೋಗ ಪಡೆಯದ ನಿರುದ್ಯೋಗಿಗಳನ್ನು ಒಳಗೊಂಡಿದೆ.
ಯೂರೋಪಿನ ಸಂಘಟನೆ (ಯೂರೋಸ್ಟ್ಯಾಟ್)
[ಬದಲಾಯಿಸಿ]ಯೂರೋಸ್ಟ್ಯಾಟ್, ಇದು ಯೂರೋಪಿನ ಸಂಘಟನೆಯ ಸಂಖ್ಯಾಶಾಸ್ತ್ರ ಕಚೇರಿ, ಇದು ಯಾವ ವ್ಯಕ್ತಿಯ ವಯಸ್ಸು 15ರಿಂದ 74ರಷ್ಟಾಗಿದೆಯೋ ಮತ್ತು ಯಾರು ಸದ್ಯದಲ್ಲಿ ಕೆಲಸವನ್ನು ಮಾಡುತ್ತಿಲ್ಲವೋ, ಮತ್ತು ಕೆಲಸಕ್ಕಾಗಿ ಹಿಂದಿನ ನಾಲ್ಕು ವಾರಗಳಿಂದ ಹುಡುಕುತ್ತಿದ್ದು ಮುಂದಿನ ಎರಡು ವಾರದಲ್ಲಿ ಕೆಲಸವನ್ನು ಮಾಡಲು ತಯಾರಿರುವವರನ್ನು ನಿರುದ್ಯೋಗಿಗಳು ಎಂದು ವ್ಯಾಖ್ಯಾನಿಸಿದೆ, ಇದು ILO ದರ್ಜೆಗೆ ಒಳಪಟ್ಟಿದೆ. ನೈಜ ಗಣನೆ ಮತ್ತು ನಿರುದ್ಯೋಗದ ದರಗಳೆರಡೂ ವರದಿಯಾಗಿವೆ. ಸಂಖ್ಯಾಶಾಸ್ತ್ರೀಯ ದತ್ತಾಂಶಗಳು, ಯೂರೋ ಕ್ಷೆತ್ರ (EA16) ಮತ್ತು ಯೂರೋಪಿಯನ್ ಸಂಘಟನೆಯ (EU27) ಸಂಪೂರ್ಣ ಸದಸ್ಯ ರಾಷ್ಟ್ರಗಳಲ್ಲಿ ಲಭ್ಯವಿದೆ. ಯೂರೋಸ್ಟ್ಯಾಟ್ ಕೂಡ ದೀರ್ಘಾವದಿಯ ನಿರುದ್ಯೋಗ ದರವನ್ನು ಒಳಗೊಂಡಿದೆ. ಇದನ್ನು ನಿರುದ್ಯೋಗದ ಭಾಗವಾಗಿ ಯಾರು 1 ವರ್ಷಗಳವರೆಗೆ ನಿರುದ್ಯೋಗಿಯಾಗಿ ಇರುವರೋ ಅವರನ್ನು ನಿರುದ್ಯೋಗಿಗಳು ಎಂದು ವ್ಯಾಖ್ಯಾನಿಸುತ್ತದೆ.
ಬಳಸಲ್ಪಟ್ಟ ಮುಖ್ಯ ಮೂಲವೆಂದರೆ ಯೂರೋಪಿಯನ್ ಯೂನಿಯನ್ ಲೇಬರ್ ಪೋರ್ಸ್ ಸರ್ವೆ (EU-LFS). EU-LFS ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲಾ ಸದಸ್ಯ ರಾಷ್ಟ್ರಗಳಿಂದ ದತ್ತಾಂಶಗಳನ್ನು ಸಂಗ್ರಹಿಸುತ್ತದೆ. ಮಾಸಿಕ ಮಾಪನಕ್ಕಾಗಿ ಉದ್ಯೋಗ ಕಚೇರಿಯ ರಾಷ್ಟ್ರೀಯ ಸಮೀಕ್ಷೆ ಅಥವಾ ರಾಷ್ಟ್ರೀಯ ನೋಂದಣಿ ಕಚೇರಿಗಳು ತ್ರೈಮಾಸಿಕ EU-LFS ದತ್ತಾಂಶದೊಂದಿಗೆ ಜೊತೆಯಾಗಿ ಕಾರ್ಯನಿರ್ವಹಿಸುತ್ತವೆ. ವಯಕ್ತಿಕ ರಾಷ್ಟ್ರಗಳ ಸರಿಯಾದ ಮಾಪನವು ಮಾಸಿಕ ದತ್ತಾಂಶಗಳ ಸಾಂಗತ್ಯದಲ್ಲಿ ಪರಿಣಮಿಸಬೇಕೆಂದರೆ ಅದು ಲಭ್ಯವಿರುವ ದತ್ತಾಂಶಗಳ ಮೇಲೆ ಅವಲಂಬಿಸಿರುತ್ತದೆ.[೨೩]
ಯುನೈಟೆಡ್ ಸ್ಟೇಟ್ಸ್‌ನ ಕಾರ್ಮಿಕ ಅಂಕಿ ಅಂಶಗಳ ಕಛೇರಿ
[ಬದಲಾಯಿಸಿ]ಯುನೈಟೆಡ್ ಸ್ಟೇಟ್ಸ್‌ನ ಕಾರ್ಮಿಕ ಅಂಕಿ ಅಂಶಗಳ ಕಛೇರಿ (ಯುನೈಟೆಡ್ ಸ್ಟೇಟ್ಸ್‌ನ ವಾಣಿಜ್ಯ ಇಲಾಖೆ ಅಡಿಯಲ್ಲಿ) ವತಿಯಿಂದ ಕಾರ್ಮಿಕ ಅಂಕಿಅಂಶಗಳ ಕಛೇರಿಯು ಎರಡು ವಿಭಿನ್ನ ಕಾರ್ಮಿಕ ಬಲದ ಸಮೀಕ್ಷೆಗಳನ್ನು[೨೫] ಬಳಸಿಕೊಂಡು ಉದ್ಯೋಗ ಮತ್ತು ನಿರುದ್ಯೋಗವನ್ನು (15 ವರ್ಷಕ್ಕಿಂತ ಮೇಲ್ಪಟ್ಟವರು) ಅಳತೆ ಮಾಡಲಾಗಿತ್ತು, ಮತ್ತು/ಅಥವಾ ಕಾರ್ಮಿಕ ಅಂಕಿ ಅಂಶಗಳ ಕಛೇರಿಯು (ಯುನೈಟೆಡ್ ಸ್ಟೇಟ್ಸ್‌ನ ಕಾರ್ಮಿಕ ಅಂಕಿಅಂಶಗಳ ಕಛೇರಿ ಅಡಿಯಲ್ಲಿ) ಪ್ರತಿ ತಿಂಗಳು ಉದ್ಯೋಗ ಅಂಕಿಸಂಖ್ಯೆಗಳನ್ನು ನೀಡುತ್ತದೆ.
ಪ್ರಸ್ತುತ ಜನಸಂಖ್ಯಾ ಸಮೀಕ್ಷೆ (CPS) ಅಥವಾ "ವಸತಿ ಸಮೀಕ್ಷೆ" 60,000 ಮನೆಗಳ ಮಾದರಿಯನ್ನು ಆಧರಿಸಿ ಸಮೀಕ್ಷೆ ನಡೆಸುತ್ತದೆ. ಈ ಸಮೀಕ್ಷೆಯು ILO ವಿವರಣೆಯನ್ನು ಆಧರಿಸಿ ನಿರುದ್ಯೋಗವನ್ನು ಅಳತೆ ಮಾಡುತ್ತದೆ.[೨೬] ದತ್ತಾಂಶವು U1 ರಿಂದ U6 ರವರೆಗೆ ನೀಡಿರುವ ವಿಭಿನ್ನ ವಿವರಣೆಗಳನ್ನು ಆಧರಿಸಿ ಶೇಕಡಾವಾರು ಕಾರ್ಮಿಕ ಬಲದಂತೆ ನಿರುದ್ಯೋಗದ 5 ಪರ್ಯಾಯ ಮಾಪನಗಳನ್ನು ಅಳೆಯಲು ಬಳಸಲಾಗುತ್ತದೆ.[೨೭]
- U1: 15 ವಾರಗಳು ಅಥವಾ ಅದಕ್ಕಿಂತ ಮೇಲ್ಪಟ್ಟ ನಿರುದ್ಯೋಗಿ ಕಾರ್ಮಿಕ ಬಲದ ಶೇಕಡಾವಾರು.
- U2: ಕೆಲಸ ಕಳೆದುಕೊಂಡವರು ಅಥವಾ ತಾತ್ಕಾಲಿಕ ಕೆಲಸ ಮಾಡಿದಂತಹ ಕಾರ್ಮಿಕ ಬಲದ ಶೇಕಡಾವಾರು.
- U3: ILO ವಿವರಣೆಯಂತೆ ಅಧಿಕೃತ ನಿರುದ್ಯೋಗ ದರ.
- U4: U3 + "ಪ್ರೋತ್ಸಾಹವಂಚಿತ ಕೆಲಸಗಾರರು", ಅಥವಾ ಆರ್ಥಿಕ ಪರಿಸ್ಥಿತಿಯ ಕಾರಣದಿಂದ ತಮಗೆ ಕೆಲಸ ದೊರಕುವುದಿಲ್ಲ ಎಂದುಕೊಂಡು ಕೆಲಸ ಹುಡುಕುವುದನ್ನೇ ಬಿಟ್ಟಿರುವವರು.
- U5: U4 + "ಅಲ್ಪಪ್ರಮಾಣದ ಹೊಂದಿಕೊಂಡ ಕೆಲಸಗಾರರು", ಅಥವಾ "ಸಡಿಲವಾಗಿ ಹೊಂದಿಕೊಂಡ ಕೆಲಸಗಾರರು", ಅಥವಾ ಕೆಲಸ ಮಾಡಲು ಆಸಕ್ತಿ ಇದ್ದರೂ ಕೆಲಸವನ್ನು ಹುಡುಕದೆ ಇರುವವರು.
- U6: U5 +ಪೂರ್ಣ ಅವಧಿ ಕೆಲಸ ಇಚ್ಛಿಸಿದರೂ, ಆರ್ಥಿಕ ಸ್ಥಿತಿಗತಿಗಳಿಂದ ಕೆಲಸ ಮಾಡಲು ಸಾಧ್ಯವಾಗದ ಅರೆಕಾಲಿಕ ಕೆಲಸಗಾರರು.
ಟಿಪ್ಪಣಿ: "ಅಲ್ಪಪ್ರಮಾಣದ ಹೊಂದಿಕೊಂಡ ಕೆಲಸಗಾರರನ್ನು" U4, U5, ಮತ್ತು U6ನ ನಿರುದ್ಯೋಗ ದರ ಲೆಕ್ಕಾಚಾರಕ್ಕಾಗಿ ಒಟ್ಟಾರೆ ಕಾರ್ಮಿಕ ಬಲಕ್ಕೆ ಸೇರಿಸಲಾಗಿದೆ. BLS 1994ರಲ್ಲಿ CPSಅನ್ನು ಪರಿಷ್ಕರಿಸಿತು ಮತ್ತು ಆ ಬದಲಾವಣೆಗಳಲ್ಲಿ ಅಧಿಕೃತ ನಿರುದ್ಯೋಗ ದರವನ್ನು ಅಳತೆ ಮಾಡುವ ಮಾಪನಕ್ಕೆ U5 ಬದಲಾಗಿ U3 ಎಂದು ಮರುಹೆಸರಿಸಲಾಯಿತು.[೨೮]
ಜೈಲಿನಲ್ಲಿರುವ ಕೈದಿಗಳನ್ನು ಪರಿಗಣಿಸಿದರೆ U.S. ನಿರುದ್ಯೋಗ ದರ 2%ರಷ್ಟು ಹೆಚ್ಚಾಗುತ್ತದೆ ಎಂದು ಅಧ್ಯಯನಗಳು ಹೇಳಿವೆ ಎಂಬುದನ್ನು ಸಹ ಇದು ತಿಳಿಸುತ್ತದೆ.[೨೯][೩೦]
ಪ್ರಸ್ತುತ ಉದ್ಯೋಗ ಅಂಕಿಅಂಶಗಳ ಸಮೀಕ್ಷೆ(CES) ಅಥವಾ "ವೇತನದಾರರ ಪಟ್ಟಿ ಸಮೀಕ್ಷೆ"ಯು ವ್ಯವಹಾರ ಮತ್ತು ಸರ್ಕಾರಿ ಏಜೆನ್ಸಿಗಳ 160,000 ಮಾದರಿಯನ್ನು ಆಧರಿಸಿ ಸಮೀಕ್ಷೆ ನಡೆಸಿತ್ತು, ಅದು 400,000 ಸ್ವಯಂ ಉದ್ಯೋಗಿಗಳನ್ನು ಪ್ರತಿನಿಧಿಸಿತ್ತು.[೩೧] ಈ ಸಮೀಕ್ಷೆಯು ಕೃಷಿಯೇತರ ಮತ್ತು ಮೇಲ್ವಿಚಾರಕರಲ್ಲದ ಉದ್ಯೋಗಿಯನ್ನು ಮಾತ್ರ ಅಳತೆ ಮಾಡುತ್ತದೆ; ಆದರೆ ಇದು ನಿರುದ್ಯೋಗ ದರವನ್ನು ಲೆಕ್ಕಾಚಾರ ಮಾಡುವುದಿಲ್ಲ ಮತ್ತು ILO ನಿರುದ್ಯೋಗ ದರ ವಿವರಣೆಗಿಂತ ಭಿನ್ನವಾಗಿದೆ. ಈ ಎರಡು ಮೂಲಗಳು ವಿಭಿನ್ನ ವರ್ಗೀಕರಣ ಮಾನದಂಡವಾಗಿದ್ದು, ಸಾಮಾನ್ಯವಾಗಿ ವಿಭಿನ್ನ ಫಲಿತಾಂಶಗಳನ್ನು ಕೊಡುತ್ತವೆ. ಸರ್ಕಾರದಿಂದ ಸೇರ್ಪಡೆಯಾದ ದತ್ತಾಂಶವು, U.S. ಡಿಪಾರ್ಟ್‌ಮೆಂಟ್ ಆಫ್ ಲೇಬರ್ ಎಂಪ್ಲಾಯ್‌ಮೆಂಟ್ & ಟ್ರೈನಿಂಗ್ ಅಡ್ಮಿನಿಸ್ಟ್ರೇಷನ್ ಅಡಿಯಲ್ಲಿ ಬರುವ ಕಾರ್ಮಿಕ ಭದ್ರತಾ ಕಛೇರಿ ಪ್ರತಿವಾರ ವರದಿ ಮಾಡುವ ನಿರುದ್ಯೋಗ ಪರಿಹಾರ ಕ್ರಮವನ್ನೂ ಒಳಗೊಂಡಿದೆ.[೩೨]
U.S. ಆರ್ಥಿಕತೆಯ ಈ ಅಂಕಿಅಂಶಗಳು ಸಂಪೂರ್ಣವಾಗಿ ಗುಂಪುಗಳಲ್ಲಿರುವ ಏರುಪೇರುಗಳನ್ನು ಮರೆಮಾಚುತ್ತವೆ. ಜನವರಿ 2008ರ U.S. ನಿರುದ್ಯೋಗ ದರಗಳು 4.4% ವಯಸ್ಕ ಪುರುಷರು,4.2% ವಯಸ್ಕ ಮಹಿಳೆಯರು, 4.4% ಶ್ವೇತ ವರ್ಣಿಯರು, 6.3% ಹಿಸ್‌ಪ್ಯಾನಿಕ್ ಜನರು ಅಥವಾ ಲ್ಯಾಟಿನ್ ಜನರು (ಎಲ್ಲಾ ಜನಾಂಗದವರು), 9.2% ಆಫ್ರಿಕಾದಲ್ಲಿರುವ ಅಮೇರಿಕನ್ನರು, ಏಷಿಯಾದಲ್ಲಿರುವ ಅಮೇರಿಕನ್ನರು ಮತ್ತು 18.0% ಹದಿಹರೆಯದವರು ಎಂದು ಸೂಚಿಸಿವೆ.[೩೧]
ಈ ಶೇಕಡಾವಾರು ಅಂಶಗಳು ಈ ವಿಭಿನ್ನ ಗುಂಪುಗಳ ನಿರುದ್ಯೋಗ ದರದ ದರ್ಜೆಯನ್ನು ಅಂದಾಜಿನಲ್ಲಿ ಪ್ರತಿನಿಧಿಸುತ್ತವೆ. ಈ ಅಂಕಿ ಸಂಖ್ಯೆಗಳು ವ್ಯವಹಾರ ಚಕ್ರದ ಜೊತೆಗೆ ಅಧಿಕ ಸಮಯವನ್ನು ಬದಲಾವಣೆ ಮಾಡುತ್ತದೆ.[೩೩]
ಕಾರ್ಮಿಕ ಅಂಕಿಅಂಶಗಳ ಕಛೇರಿಯು ಪಿ.ಡಿ.ಎಪ್ ಕೊಂಡಿಯನ್ನೊಳಗೊಂಡಿರುವ here ಮೂಲಕ ಅಂಕಿಸಂಖ್ಯೆಗಳನ್ನು ಒದಗಿಸುತ್ತದೆ. ಕಾರ್ಮಿಕ ಅಂಕಿಅಂಶಗಳ ಕಛೇರಿಯು ಸಹ ಪ್ರಸ್ತುತ ಉದ್ಯೋಗ ಸಾರಾಂಶವನ್ನು ಮಾಸಿಕವಾಗಿ ಅಪ್‌ಲೋಡ್ ಮಾಡುವ ಮೂಲಕ ಓದುವುದಕ್ಕೆ ಸೀಮಿತವಾಗಿ ಒದಗಿಸುತ್ತದೆ.[೩೪]
ಟಿಪ್ಪಣಿಗಳು: 1940–2009ರ ದತ್ತಗಳು ಕಾರ್ಮಿಕ ಅಂಕಿಅಂಶಗಳ ಕಛೇರಿಯಿಂದ ಲಭ್ಯವಿವೆ.[೩೫]. http://www.bls.gov/cps/eetech_methods.pdf.ರಲ್ಲಿ ವಿವರಣಾತ್ಮಕ ಟಿಪ್ಪಣಿಗಳ ವಸತಿ ದತ್ತ ವಿಭಾಗದ ಅಡಿಯಲ್ಲಿ ಬರುವ "ಐತಿಹಾಸಿಕ ಹೋಲಿಕೆಸಾಮರ್ಥ್ಯ"ವನ್ನು ಸಹ ಗಮನಿಸಿ. 1890–1930 ರ ದತ್ತವು ರೊಮರ್‌ನದಾಗಿವೆ.[೩೬] 1930–1940 ದತ್ತವು ಕೊಹನ್‌ದಾಗಿವೆ.[೩೭] 1948ರ ಮುಂಚಿನ ದತ್ತಾಂಶ 14 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರನ್ನು ಹೊಂದಿದೆ. 1948ರ ಆರಂಭದಲ್ಲಿನ ದತ್ತಾಂಶವು 16 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರನ್ನು ಹೊಂದಿದೆ. ಸಂಪೂರ್ಣ ದತ್ತಾಂಶಕ್ಕಾಗಿ ಚಿತ್ರ ಮಾಹಿತಿಯನ್ನು ನೋಡಿ.
ನಿರುದ್ಯೋಗ ವಿವರಣೆಯ ಮಿತಿಗಳು
[ಬದಲಾಯಿಸಿ]ನಿರುದ್ಯೋಗ ದರವು ಜನರ ಮೇಲಿನ ಆರ್ಥಿಕ ಪ್ರಭಾವದಿಂದ ವಿಭಿನ್ನವಾರಬಹುದು. ಸಂಬಳಕ್ಕೋಸ್ಕರ ಯಾರು ಕೆಲಸ ಮಾಡುವುದಿಲ್ಲ, ಆದರೆ ಸಂಬಳಕ್ಕಾಗಿ ಉದ್ಯೋಗವನ್ನು ಹುಡುಕುತ್ತಿರುತ್ತಾರೆ (ಕಲಿಯುವುದಕ್ಕೋಸ್ಕರ ಉದ್ಯೋಗಿಯಾಗಿರುತ್ತಾರೆ) ಎಂದು ನಿರುದ್ಯೋಗ ಚಿತ್ರಣ ಸೂಚಿಸುತ್ತದೆ. ಇದು ಪರೋಕ್ಷವಾಗಿ ಸಂಬಳವಿಲ್ಲದೇ ಕೆಲಸ ಮಾಡುವವರ ಸಂಖ್ಯೆಯನ್ನು ಸಂಪರ್ಕಿಸುತ್ತದೆ. ಆದ್ದರಿಂದ ವಿಮರ್ಶಕರು ಸದ್ಯದಲ್ಲಿರುವ ನಿರುದ್ಯೋಗ ದರದ ಅಳತೆಗೋಲುಗಳು ಜನರ ಮೇಲಿನ ನಿರುದ್ಯೋಗ ಪ್ರಭಾವವನ್ನು ಅಳತೆ ಮಾಡುವಲ್ಲಿ ಸರಿಯಾಗಿಲ್ಲ ಎಂದಿದ್ದಾರೆ, ಈ ವಿಧಾನಗಳು ಸೆರೆಯಾಗಿದ್ದ U.S. ಕೈದಿಗಳ(ಬಂಧಿಯಾಗಿ ಕೆಲಸ ಮಾಡುವವರು ಅಥವಾ ಮಾಡದೇ ಇರುವವರು) ಕೆಲಸ ಮಾಡುವ ಜನಸಂಖ್ಯೆ 1.5% ಲೆಕ್ಕಾಚಾರವನ್ನು ತೆಗೆದುಕೊಳ್ಳುವುದಿಲ್ಲ, ಕೆಲಸ ಕಳೆದುಕೊಂಡವರು ತಮ್ಮ ಪೂರ್ತಿ ಸಮಯವನ್ನು ಕೆಲಸ ಹುಡುಕುವುದರಲ್ಲಿ ಕಳೆಯುತ್ತಾರೆ, ಆದರೆ ಅವರು ಪ್ರೋತ್ಸಾಹ ವಂಚಿತರಾಗಿರುತ್ತಾರೆ, ವ್ಯಾಪಾರಿಗಳು ಅಥವಾ ಕಟ್ಟಡ ಗುತ್ತಿಗೆದಾರರು ಅಥವಾ ಐಟಿ ಸಲಹೆಗಾರರಂತಹ ಸ್ವ-ಉದ್ಯೋಗಿಗಳಾಗಿರುವವರು ಅಥವಾ ಸ್ವಯಂ-ಉದ್ಯೋಗಿಗಳಾಗಲು ಬಯಸುತ್ತಿರುವವರು, ಅಧಿಕೃತ ನಿವೃತ್ತಿ ಹೊಂದುವ ವಯಸ್ಸಿಗಿಂತ ಮೊದಲೇ ನಿವೃತ್ತಿ ಹೊಂದಿರುತ್ತಾರಾದರೂ, ಈಗಲೂ ಅವರು ಕೆಲಸ ಮಾಡಲು ಇಚ್ಛಿಸುತ್ತಾರೆ, ಪಿಂಚಣಿ ಪಡೆಯುತ್ತಿರುವ ದೈಹಿಕ ಅಂಗವಿಕಲರು ಸಹ ತಮ್ಮ ದೇಹಸ್ಥಿತಿಗೆ ಅನುಗುಣವಾಗಿ ಕೆಲಸ ಮಾಡುವುದಕ್ಕೆ ಇಷ್ಟಪಡುತ್ತಾರೆ. ಒಂದು ಗಂಟೆ ಅಥವಾ ಒಂದು ವಾರದ ಲೆಕ್ಕದಲ್ಲಿ ಕೆಲಸ ಮಾಡುವವರು ಸಹ ನಿರಂತರ-ಉದ್ಯೋಗವನ್ನು ಮಾಡಲು ಇಷ್ಟಪಡುತ್ತಾರೆ. ಇವರು "ಅನೈಚ್ಛಿಕ ಅರೆಕಾಲಿಕ" ಕೆಲಸಗಾರರಾಗಿದ್ದು, ನಿರುದ್ಯೋಗಿಗಳಾಗಿರುತ್ತಾರೆ. ಉದಾ:ಚಿಲ್ಲರೆ ವ್ಯಾಪಾರದ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಕಂಪ್ಯೂಟರ್ ಪ್ರೊಗ್ರಾಮರ್ ಶಾಶ್ವತ ಕೆಲಸ ಸಿಗೋವರೆಗೂ ಅಲ್ಲಿ ಕೆಲಸ ಮಾಡುತ್ತಿರುತ್ತಾನೆ. ಮನೆಗಳಲ್ಲಿರುವ ತಾಯಂದಿರೂ ಸಹ ಶಾಶ್ವತ ಕೆಲಸ ಮಾಡೋದಕ್ಕೆ ಇಷ್ಟಪಡುತ್ತಾರೆ. ತಮ್ಮ ಬ್ಯಾಚುಲರ್ ಪದವಿಗಳಂತಹ ಪದವಿಗಳನ್ನು ಪೂರೈಸಿದ ನಂತರ ಪದವೀಧರರು ಮತ್ತು ವೃತ್ತಿಪರ ವಿದ್ಯಾರ್ಥಿಗಳು ಸಹ ತಮ್ಮ ಕೆಲಸಗಳನ್ನು ಹುಡುಕಲು ಅಸಮರ್ಥರಾಗಿರುತ್ತಾರೆ.
ಇನ್ನೊಂದು ರೀತಿಯಲ್ಲಿ ಉದ್ಯೋಗ ಮತ್ತು ನಿರುದ್ಯೋಗದ ಮಾಪನವು ಅತಿ ಹೆಚ್ಚಾಗಬಹುದು. ಕೆಲವು ದೇಶಗಳಲ್ಲಿ ನಿರುದ್ಯೋಗ ಸವಲತ್ತುಗಳ ಲಭ್ಯತೆಯು ಅಂಕಿಅಂಶಗಳನ್ನು ಏರಿಸುವುದರಿಂದ ಅವು ನಿರುದ್ಯೋಗ ಭತ್ಯೆಯನ್ನು ಕೊಡುತ್ತವೆ. ನಿಜವಾಗಿಯೂ ಕೆಲಸ ಮಾಡದವವರು ಸವಲತ್ತುಗಳನ್ನು ಪಡೆಯಲು ತಾನಾಗಿಯೇ ನಿರುದ್ಯೋಗಿ ಎಂದು ಘೋಷಿಸಿಕೊಳ್ಳುವರು: ಘೋಷಣೆ ಮಾಡಿಕೊಳ್ಳದೆ ಸಂಬಳ ಪಡೆಯುವ ಜನರು ತಮ್ಮ ಕೆಲಸದಿಂದ ಸಂಪಾದಿಸುತ್ತಿದ್ದ ಹಣದ ಜೊತೆಗೆ ನಿರುದ್ಯೋಗ ಸವಲತ್ತುಗಳನ್ನು ಪಡೆಯಲು ಪ್ರಯತ್ನಿಸಬಹುದು. ವ್ಯತಿರಿಕ್ತವಾಗಿ ಸುಸ್ಪಷ್ಟವಾದ ಸವಲತ್ತಿನ ಅನುಪಸ್ಥಿತಿಯು ನಿರುದ್ಯೋಗಿ ಎಂದು ನೋಂದಾಯಿಸಿಕೊಂಡಿರುವ ಜನರನ್ನು ಪ್ರೋತ್ಸಾಹಿಸುವುದಿಲ್ಲ.
ಆದರೆ, ಯುನೈಟೆಡ್ ಸ್ಟೇಟ್ಸ್, ಕೆನಡಾ, ಮೆಕ್ಸಿಕೋ, ಆಸ್ಟ್ರೇಲಿಯಾ, ಜಪಾನ್ ಮತ್ತು ಯುರೋಪಿಯನ್ ಯೂನಿಯನ್-ನಂತಹ ದೇಶಗಳಲ್ಲಿ ನಿರುದ್ಯೋಗವನ್ನು ಮಾದರಿ ಸಮೀಕ್ಷೆಯನ್ನು (ಗಾಲ್‌ಅಪ್ ಪೋಲ್‌ಗೆ ಸಂಬಂಧಿಸಿದಂತೆ) ಬಳಸಿಕೊಂಡು ಅಳೆಯಲಾಗುತ್ತದೆ. BLS ಪ್ರಕಾರ, ಅನೇಕ ಪೂರ್ವಾರ್ಧ ಯುರೋಪಿಯನ್ ರಾಷ್ಟ್ರಗಳು ಕಾರ್ಮಿಕ ಬಲದ ಸಮೀಕ್ಷೆಗಳನ್ನು ಚೆನ್ನಾಗಿಯೇ ಸಂಘಟಿಸಿವೆ. ಮಾದರಿ ಸಮೀಕ್ಷೆಯು ತನ್ನ ಸ್ವಂತ ಸಮಸ್ಯೆಗಳನ್ನು ಹೊಂದಿದೆ ಯಾಕೆಂದರೆ ಆರ್ಥಿಕತೆಯಲ್ಲಿರುವ ಕೆಲಸಗಾರರ ಒಟ್ಟಾರೆ ಸಂಖ್ಯೆಯನ್ನು ಜನಗಣತಿಯಿಂದಲ್ಲದೆ ಬದಲಾಗಿ ಮಾದರಿಯನ್ನು ಆಧರಿಸಿ ಲೆಕ್ಕಾಚಾರ ಮಾಡಲಾಗುತ್ತದೆ.
ILO ವಿವರಣೆಗಳಿಂದ ಇದು ಉದ್ಯೋಗಿಳಲ್ಲದವರು ಅಥವಾ ನಿರುದ್ಯೋಗಿಗಳಲ್ಲದವರಿಗೂ ಸಾಧ್ಯವಾಗಬಹುದು. ಉದಾ:-"ಕಾರ್ಮಿಕ ಬಲ"ದಿಂದ ಹೊರಗಿರುವವರು. ಈ ಜನರಿಗೆ ಯಾವುದೇ ಕೆಲಸ ಇರುವುದಿಲ್ಲ ಅಥವಾ ಅವರು ಯಾವುದೊಂದು ಕೆಲಸವನ್ನೂ ಹುಡುಕುವುದಿಲ್ಲ. ಇದರಲ್ಲಿ ಅನೇಕರು ಶಾಲೆಗೆ ಹೋಗುವವರು ಅಥವಾ ನಿವೃತ್ತಿ ಹೊಂದಿದವರಾಗಿರುತ್ತಾರೆ. ಕೌಟುಂಬಿಕ ಜವಾಬ್ದಾರಿ ಹೊಂದಿರುವವರು ಕಾರ್ಮಿಕ ಬಲದ ಹೊರಗೆ ಇರುತ್ತಾರೆ. ಪ್ರಸ್ತುತ ಅನೇಕರು ಕಾರ್ಮಿಕ ಬಲದ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದು ತಮ್ಮ ದೈಹಿಕ ಅಥವಾ ಮಾನಸಿಕ ಅಸಮರ್ಥತೆಯನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಮತ್ತು ಕೆಲವರು ಸುಮ್ಮನೆ ಕೆಲಸ ಮಾಡದೆ ಇದ್ದರೂ ಜೀವನ ನಡೆಸುವುದಕ್ಕಾಗಿ ಬೇರೆಯವರನ್ನು ಅವಲಂಭಿಸಿರುತ್ತಾರೆ.
ವಿಶಿಷ್ಟವಾಗಿ ಹಣ ಸಂಪಾದನೆ ಮಾಡುವುದಕ್ಕೆ ಮಾತ್ರ ಉದ್ಯೋಗ ಮತ್ತು ಕಾರ್ಮಿಕ ಬಲ ಕೆಲಸ ಮಾಡುತ್ತದೆ, ಆದುದರಿಂದ ಗೃಹಿಣಿಯರು ಕಾರ್ಮಿಕ ಬಲದ ಭಾಗವಾಗಿಲ್ಲದಿದ್ದರೂ ನಿರುದ್ಯೋಗಿಯಾಗಿರುವುದಿಲ್ಲ. ಪೂರ್ಣಾವಧಿ ವಿದ್ಯಾರ್ಥಿಗಳಲ್ಲದವರು, ಕೈದಿಗಳಲ್ಲದವರು ಕಾರ್ಮಿಕ ಬಲದ ಭಾಗವಾಗಿ ಅಥವಾ ನಿರುದ್ಯೋಗಿಗಳೆಂದು ಪರಿಗಣಿಸಲ್ಪಡುತ್ತಾರೆ. ಇತ್ತೀಚೆಗೆ ಇದು ಪ್ರಮುಖವಾಗಿದೆ. 1985 ರಿಂದ 1990 ರ ನಡುವೆ ಯುನೈಟೆಡ್ ಸ್ಟೇಟ್ಸ್‌ಗಳಲ್ಲಿ 0.17%ರಷ್ಟು ಬಂಧನದಲ್ಲಿದ್ದ ಕಡಿಮೆ ಅಳತೆ ಮಾಡಲ್ಪಟ್ಟ ನಿರುದ್ಯೋಗ ಹೆಚ್ಚಾಗಿತ್ತು ಎಂದು 1999ರಲ್ಲಿ ಅರ್ಥಶಾಸ್ತ್ರಜ್ಞರಾದ ಲಾರೆನ್ಸ್ ಎಫ್. ಕಾಟ್ಜ್ ಮತ್ತು ಆಯ್‌ಲಾನ್ ಬಿ. ಕ್ರುಯೆಜರ್ ಅಂದಾಜಿಸಿದ್ದಾರೆ. ನಿರ್ದಿಷ್ಟವಾಗಿ 2005ರಲ್ಲಿ 0.7%ರಷ್ಟು U.S. ಜನಸಂಖ್ಯೆ ಕಾರಾಗೃಹವಾಸದಲ್ಲಿದ್ದರು.(1.5%ರಷ್ಟು ಲಭ್ಯವಾದ ಕೆಲಸ ಮಾಡುತ್ತಿದ್ದ ಜನಸಂಖ್ಯೆ)
ನ್ಯೂನತೆಯಿರುವ ಮಕ್ಕಳು, ವಯಸ್ಕರು ಮತ್ತು ಕೆಲವು ವ್ಯಕ್ತಿಗಳು ಕಾರ್ಮಿಕ ಬಲದಲ್ಲಿ ಗುರುತಿಸಲ್ಪಡುವುದಿಲ್ಲ, ಅದರ ಪ್ರಕಾರವಾಗಿ ಅವರು ನಿರುದ್ಯೋಗ ಅಂಕಿಅಂಶಗಳಲ್ಲೂ ಅವರು ಸೇರುವುದಿಲ್ಲ. ಹೀಗಾಗಿ ಕೆಲವು ವಯಸ್ಕರು ಮತ್ತು ನ್ಯೂನತೆಯಿರುವ ವ್ಯಕ್ತಿಗಳು ಕಾರ್ಮಿಕ ಮಾರುಕಟ್ಟೆಯಲ್ಲಿ ಕ್ರಿಯಾಶೀಲರಾಗಿರುತ್ತಾರೆ.
ಆರ್ಥಿಕ ಉತ್ಕರ್ಷದ ಆರಂಭಿಕ ಹಂತಗಳಲ್ಲಿ ನಿರುದ್ಯೋಗ ಪದೇ ಪದೇ ಹೆಚ್ಚಾಗುತ್ತದೆ. ಇದರಿಂದ ಉದ್ಯೋಗ ಮಾರುಕಟ್ಟೆ ಸುಧಾರಿಸುವ ಸಲುವಾಗಿ ಜನರು ಕಾರ್ಮಿಕ ಮಾರುಕಟ್ಟೆಗೆ ಸೇರುತ್ತಾರೆ, ಆದರೆ ಅವರೊಂದು ನಿರ್ದಿಷ್ಟ ಸ್ಥಿತಿ ತಲುಪುವವರೆಗೂ ಅವರನ್ನು ನಿರುದ್ಯೋಗಿ ಎಂದೇ ಗುರುತಿಸಸಲಾಗುತ್ತದೆ. ಸಾದೃಶ್ಯವಾಗಿ, ಆರ್ಥಿಕ ಕುಸಿತದ ಅವಧಿಯಲ್ಲಿ ನಿರುದ್ಯೋಗ ದರವು ಹೆಚ್ಚಾಗಿ ಕಾರ್ಮಿಕ ಬಲವನ್ನು ಸೇರದಿರುವ ಜನರಿಂದ ಅಥವಾ ಕಾರ್ಮಿಕ ಬಲದಲ್ಲಿ ಪರಿಗಣಿಸದೇ ಇರುವವರಿಂದ ಕಡಿಮೆಯಾಗುತ್ತದೆ, ಅವರು ಸ್ವ-ಉದ್ಯೋಗಿಗಳಾಗಿರುತ್ತಾರೆ.
OECDರ 2004ರ ನಾಲ್ಕನೇ ತ್ರೈಮಾಸಿಕದ ಪ್ರಕಾರ (ಮೂಲ ಎಂಪ್ಲಾಯ್‌ಮೆಂಟ್ ಔಟ್‌ಲುಕ್ 2005 ISBN 92-64-01045-9) ಯುಎಸ್‌ನಲ್ಲಿ 25 ರಿಂದ 54 ವರೆಗಿನ ಪುರುಷರ ನಿರುದ್ಯೋಗದ ಪ್ರಮಾಣ 4.6% ಮತ್ತು ಫ್ರಾನ್ಸ್‌ನಲ್ಲಿ 7.4% ಆಗಿತ್ತು. ಅದೇ ಸಮಯದಲ್ಲಿ ಅಷ್ಟೇ ಜನಸಂಖ್ಯೆಯ ಉದ್ಯೋಗ ದರ ಜನಸಂಖ್ಯೆಯಲ್ಲಿ ವಿಭಾಗಿಸಿದ ಉದ್ಯೋಗಿಗಳು U.S. ನಲ್ಲಿ 86.3% ಮತ್ತು ಫ್ರಾನ್ಸ್‌ನಲ್ಲಿ 86.7% ಆಗಿತ್ತು.
ಈ ಉದಾಹರಣೆಯು, U.S. ಗಿಂತ ಫ್ರಾನ್ಸ್‌ನಲ್ಲಿ 60% ಕ್ಕಿಂತ ಹೆಚ್ಚು ನಿರುದ್ಯೋಗ ದರವನ್ನು ತೋರಿಸುತ್ತದೆ, ಆದರೆ ಈ ಜನಸಂಖ್ಯೆ ಅಧ್ಯಯನದಲ್ಲಿ ಹೆಚ್ಚಿನ ಜನರು U.S. ಗಿಂತ ಹೆಚ್ಚಾಗಿ ಫ್ರಾನ್ಸ್‌ನಲ್ಲಿ ಕೆಲಸ ಮಾಡುತ್ತಿರುತ್ತಾರೆ, ನಿರುದ್ಯೋಗ ದರ ಕಾರ್ಮಿಕ ಮಾರುಕಟ್ಟೆಯ ಆರೋಗ್ಯ ಸ್ಥಿತಿಯನ್ನು ಪ್ರಭಾವಿಸುತ್ತದೆ ಎಂದು ನಿರೀಕ್ಷಿಸಿದ್ದರೆ ಅದು ಗಣನೆಗೆ ಸಹಜವಾಗಿಯೇ ಲಬ್ಯವಾಗಿರುತ್ತದೆ.[೩೮][೩೯].
ಈ ನ್ಯೂನತೆಗಳ ಕಾರಣದಿಂದ ಅನೇಕ ಕಾರ್ಮಿಕ ಮರುಕಟ್ಟೆಗಳ ಅರ್ಥಶಾಸ್ತ್ರಜ್ಞರು ಕಾರ್ಮಿಕ ಮಾರುಕಟ್ಟೆ ಭಾಗವಹಿಸುವಿಕೆ ದರ, ಪ್ರಸ್ತುತ ಉದ್ಯೋಗಿಯಾಗಿರುವ ಅಥವಾ ಕೆಲಸ ಹುಡುಕುತ್ತಿರುವ 15 ರಿಂದ 64 ವರ್ಷದ ನಡುವಿನ ವ್ಯಕ್ತಿಗಳ ಶೇಕಡಾವಾರು, ಆರ್ಥಿಕತೆಯಲ್ಲಿ ಪೂರ್ಣಾ-ಅವಧಿ ಕೆಲಸಗಳ ಒಟ್ಟು ಸಂಖ್ಯೆ, ಶೇಕಡಾ ಪ್ರಮಾಣದಲ್ಲಿರದೆ ಮೂಲ ಅಂಕಿಸಂಖ್ಯೆಗಳಂತೆ ಕೆಲಸ ಹುಡುಕುತ್ತಿರುವ ಜನರು ಮತ್ತು ಒಂದು ತಿಂಗಳಲ್ಲಿ ಗಂಟೆಗಳ ಪ್ರಕಾರ ಕೆಲಸ ಮಾಡುವ ಜನರ ಒಟ್ಟು ಸಂಖ್ಯೆಯನ್ನು ಗಂಟೆಗಳ ಪ್ರಕಾರ ಕೆಲಸ ಮಾಡಲು ಇಚ್ಛಿಸುವ ಜನರ ಒಟ್ಟು ಸಂಖ್ಯೆಗೆ ಹೋಲಿಕೆ ಮಾಡಲಾಗುವಂತಹ ಆರ್ಥಿಕ ಅಂಕಿಅಂಶಗಳ ಪ್ರಮಾಣವನ್ನು ಗಮನಿಸಲು ಇಚ್ಛಿಸುತ್ತಾರೆ. ನಿರ್ದಿಷ್ಟವಾಗಿ NBER ನಿರುದ್ಯೋಗ ದರವನ್ನು ಬಳಸುವುದಿಲ್ಲ, ಆದರೆ ವಿವಿಧ ಉದ್ಯೋಗ ದರಗಳ ಆರ್ಥಿಕ ಕುಸಿತವನ್ನು ಗಣನೆ ಮಾಡಲು ಇಚ್ಛಿಸುತ್ತದೆ.[೪೦]
ನಿರುದ್ಯೋಗಿಗೆ ನೆರವಾಗುವಿಕೆ
[ಬದಲಾಯಿಸಿ]ಅನೇಕ ದೇಶಗಳು ಸಾಮಾಜ ಕಲ್ಯಾಣದ ಭಾಗವಾಗಿ ನಿರುದ್ಯೋಗಿಗಳಿಗೆ ಸಹಾಯ ಮಾಡುತ್ತವೆ. ಈ ನಿರುದ್ಯೋಗ ಸವಲತ್ತುಗಳು ನಿರುದ್ಯೋಗ ವಿಮೆ, ಧನಸಹಾಯ, ನಿರುದ್ಯೋಗ ಪರಿಹಾರ ಕ್ರಮ ಮತ್ತು ಮರುತರಭೇತಿಗೆ ನೆರವಾಗುವ ಸಬ್ಸಿಡಿಗಳನ್ನು ಒಳಗೊಂಡಿವೆ. ಈ ಕಾರ್ಯಕ್ರಮಗಳ ಮುಖ್ಯಗುರಿಯು ಕಡಿಮೆ ಅವಧಿ ಹೆಚ್ಚಿನ ಕೆಲಸಗಳನ್ನು ಕಡಿತಗೊಳಿಸಿ, ಕೆಲಸಗಾರರು ಅಧಿಕ ಸಮಯದ ಕೆಲಸವನ್ನು ಹುಡುಕಿಕೊಳ್ಳುವಂತೆ ಮಾಡುವುದಾಗಿದೆ.
U.S. ನಲ್ಲಿನ ನಿರುದ್ಯೋಗ ಭತ್ಯೆ ವಿನಾಯಿತಿಯನ್ನು ಒಬ್ಬ ತನ್ನ ಮುಂಚಿನ ಆದಾಯವನ್ನು ಆಧರಿಸಿ ಮಾತ್ರ ಪಡೆಯುತ್ತಾನೆ (ಸಮಯವನ್ನಿಟ್ಟುಕೊಂಡು ಕೆಲಸ ಮಾಡದವರು, ಕೌಟುಂಭಿಕ ಗಾತ್ರ, ಇತ್ಯಾದಿ) ಮತ್ತು ಸಾಮಾನ್ಯವಾಗಿ ಒಬ್ಬನ ಮುಂಚಿನ ಆದಾಯದ ಮೂರನೇ ಒಂದರಷ್ಟು ಪರಿಹಾರ ನೀಡಲಾಗುತ್ತದೆ. ಇದರನ್ವಯ ಅವರು ತಮ್ಮ ರಾಷ್ಟ್ರದಲ್ಲಿ ಕೊನೇ ಪಕ್ಷ ಒಂದು ವರ್ಷವಾದರೂ ಕೆಲಸ ಮಾಡಿರಬೇಕು. 1935ರ ಸಾಮಾಜಿಕ ಭದ್ರತಾ ಕಾಯ್ದೆಯಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಪತ್ರಿಕೆಗಳಲ್ಲಿ ಸುಮಾರು 90% ನಾಗರೀಕರು ಒಳಗೊಂಡಿದ್ದರೂ, ಕೇವಲ 40% ಮಾತ್ರ ಸವಲತ್ತುಗಳನ್ನು ಪಡೆಯುತ್ತಾರೆ.[ಸೂಕ್ತ ಉಲ್ಲೇಖನ ಬೇಕು] ಅತ್ಯಂತ ಸಾಂದರ್ಭಿಕ ಕೈಗಾರಿಕೆಗಳಲ್ಲಿ ಈ ವ್ಯವಸ್ಥೆಯು ರಜೆ ಅವಧಿಯಲ್ಲೂ ಕೆಲಸಗಾರರಿಗೆ ಸಂಬಳವನ್ನು ನೀಡಲಾಗುತ್ತದೆ, ಹೀಗೆ ಅವರನ್ನು ಪ್ರೋತ್ಸಾಹಿಸುತ್ತಾ ಕೈಗಾರಿಕೆ ಹೊಂದಿಕೊಂಡು ಹೋಗುವಂತೆ ಮಾಡಲಾಗುತ್ತದೆ.
1,000ರಲ್ಲಿ ಮಾಸಿಕ ಸರಾಸರಿವರ್ಷ | 1936 | 1937 | 1938 | 1939 | 1940 | 1941 |
---|---|---|---|---|---|---|
ಉದ್ಯೋಗಿ ಕೆಲಸಗಾರರು | ||||||
WPA | 1,995 | 2,227 | 1,932 | 2,911 | 1,971 | 1,638 |
CCC and NYA | 712 | 801 | 643 | 793 | 877 | 919 |
ಇನ್ನಿತರ ಒಕ್ಕೂಟ ಕೆಲಸದ ಯೋಜನೆಗಳು | 554 | 663 | 452 | 488 | 468 | 681 |
Public assistance cases | ||||||
ಸಾಮಾಜಿಕ ಭದ್ರತಾ ಕಾರ್ಯಕ್ರಮಗಳು | 602 | 1,306 | 1,852 | 2,132 | 2,308 | 2,517 |
ಸಾಮಾನ್ಯ ನೆಮ್ಮದಿ | 2,946 | 1,484 | 1,611 | 1,647 | 1,570 | 1,206 |
ಸಹಾಯ ಪಡೆದುಕೊಂಡ ಒಟ್ಟೂ ಕುಟುಂಬಗಳು | 5,886 | 5,660 | 5,474 | 6,751 | 5,860 | 5,167 |
ನಿರುದ್ಯೋಗಗೊಂಡ ಕಾರ್ಮಿಕರು (Bur Lab Stat) | 9,030 | 7,700 | 10,390 | 9,480 | 8,120 | 5,560 |
ವ್ಯಾಪ್ತಿ (ಘಟನೆಗಳು/ನಿರುದ್ಯೋಗಿಗಳು) | 65% | 74% | 53% | 71% | 72% | 93% |
ಮೂಲ: ಡೋನಾಲ್ಡ್ ಎಸ್. ಹಾವರ್ಡ್, WPA ಮತ್ತು ಫೆಡರಲ್ ನೆಮ್ಮದಿ ನೀತಿ. 1943 p 34.
ವರ್ಷ | ನಿರುದ್ಯೋಗ (% ಶ್ರಮ ಶಕ್ತಿ) |
---|---|
1933 | 24.9 |
1934 | 21.7 |
1935 | 20.1 |
1936 | 16.9 |
1937 | 14.3 |
1938 | 19.0 |
1939 | 17.2 |
1940 | 14.6 |
1941 | 9.9 |
1942 | 4.7 |
1943 | 1.9 |
1944 | 1-2 |
1945 | 1.9 |
ಮೂಲ: ಯು.ಎಸ್‌ನ ಐತಿಹಾಸಿಕ ಸಂಖ್ಯಾಶಾಸ್ತ್ರ (1976) ಸರಣಿ D-86
ಇದನ್ನೂ ನೋಡಿಯೋಗಕ್ಷೇಮ ಮತ್ತು ತರಬೇತಿ.
ಅನುಕೂಲಗಳು
[ಬದಲಾಯಿಸಿ]ಸಂಪೂರ್ಣ ಆರ್ಥಿಕತೆಯಲ್ಲಿ ನಿರುದ್ಯೋಗದಿಂದ ಅನುಕೂಲತೆ ಹಾಗೂ ಅನಾನುಕೂಲತೆಗಳೆರಡೂ ಕೂಡ ಇರಬಹುದು. ಗಮನೀಯವಾಗಿ, ಹತೋಟಿ ಮೀರಿದ ಹಣದುಬ್ಬರವನ್ನು ವಿಮುಖಗೊಳಿಸಲು ಇದು ಸಹಾಯ ಮಾಡಬಹುದು, ಈ ಹಣದುಬ್ಬರ ಪರಿಣಮಿಸಿದ ಆರ್ಥಿಕತೆಯಲ್ಲಿ ಭಾಗಶಃ ಎಲ್ಲರು ನಕಾರಾತ್ಮಕವಾದ ಪರಿಣಾಮ ಅನುಭವಿಸುತ್ತಿದ್ದಾರೆ ಹಾಗೂ ಇದರ ಗಂಭೀರ ದೂರ-ಅವಧಿಯ ಆರ್ಥಿಕ ವೆಚ್ಚಗಳಿವೆ. ಹೇಗಿದ್ದರೂ ಪೂರ್ಣ ಸ್ಥಳೀಯ ಉದ್ಯೋಗತೆಯು ನೇರವಾಗಿ ಸ್ಥಳೀಯ ಹಣದುಬ್ಬರಕ್ಕೆ ದಾರಿ ಮಾಡಬೇಕೆಂಬ ಐತಿಹಾಸಿಕ ಊಹೆ ಈಗ ಕೃಶಗೊಂಡಿದೆ, ಸ್ಥಳೀಯ ಉದ್ಯೋಗತೆಯ ಪ್ರಮಾಣವು ಪೂರ್ಣ ಉದ್ಯೋಗತೆಯ ಹತ್ತಿರಕ್ಕೆ ಏರಿದ ಹಾಗೆ ಇತ್ತೀಚಿನ ವಿಸ್ತರಿಸಿದ ಅಂತರಾಷ್ಟ್ರೀಯ ವ್ಯಾಪಾರವು ಕಡಿಮೆ-ದರಗಳಲ್ಲಿ ಸರಕುಗಳನ್ನು ಒದಗಿಸುವ ಸಾಮರ್ಥ್ಯವನ್ನು ತೋರಿಸಿದೆ.
ಸಂಪೂರ್ಣ ಆರ್ಥಿಕತೆ ಯ ಮೇಲೆ ಹಣದುಬ್ಬರದ ವಿರುದ್ಧ ಕದನದ ಲಾಭಗಳು ಏರುತ್ತಿದೆ, ಇದಕ್ಕೆ ಕಾರಣ ನಿರುದ್ಯೋಗತೆಯ ಅತ್ಯುತ್ತಮ ಮಟ್ಟದ ಊಹೆಯ ಅತಿಶಯ ಅಧ್ಯಯನ. ವಿಶ್ವ ವ್ಯಾಪಾರದ ಪ್ರಸ್ತುತ ಮಟ್ಟಗಳು ಆಭಿವೃದ್ಧಿಗೊಳ್ಳುವ ಮುನ್ನ, ನಿರುದ್ಯೋಗವು ಹಣದುಬ್ಬರವನ್ನು ಕಡಿಮೆಗೊಳಿಸವುದೆಂದು ತೋರಿಸಲಾಗಿತ್ತು್, ಫಿಲಿಪ್ಸ್ ರೇಖೆ ಅಥವಾ ಹಣದುಬ್ಬರವನ್ನು ನಿಧಾನಗೊಳಿಸುವ ಕ್ರಿಯೆಯನ್ನು ಅನುಸರಿಸಿ ಇದನ್ನು ಪಡೆಯಲು ಪ್ರಯತ್ನಿಸಿದರು್, NAIRU/ನೈಜ್ಯ ನಿರುದ್ಯೋಗ ಗತಿಯ ಸಿದ್ಧಾಂತವನ್ನು ಅನುಸರಣೆಯ ಕಾರಣದಿಂದ ಪ್ರಸ್ತುತ ಕೈಯಲ್ಲಿ ಒಂದು ಉದ್ಯೋಗವನ್ನಿಟ್ಟುಕೊಂಡು ಹೊಸ ಉದ್ಯೋಗ ಹುಡುಕುವುದು ತುಲನಾತ್ಮಕವಾಗಿ ಸುಲಭ. ಮತ್ತು, ಕಡಿಮೆ ಕಾರ್ಮಿಕರಿಗೆ ಹೆಚ್ಚು ಉದ್ಯೋಗಗಳು ಲಭ್ಯವಿದ್ದಲ್ಲಿ (ನಿರುದ್ಯೋಗದ ಇಳಿಕೆ), ಅದು ಕಾರ್ಮಿಕರಿಗೆ ತಮ್ಮ ಅಭಿರುಚಿ, ಪ್ರತಿಭೆ ಹಾಗೂ ಬೇಡಿಕೆಗಳನ್ನು ಉತ್ತಮ ಮಟ್ಟದಲ್ಲಿ ಪುರೈಸುವಂತಹ ಉದೋಗಗಳನ್ನು ಹುಡುಕಲು ಅನುಮತಿಸುತ್ತದೆ.
ಮಾರ್ಕ್ಸ್‌ನ ನಿರುದ್ಯೋಗದ ಸಿದ್ಧಾಂತದ ಅನುಸಾರ, ವಿಶೇಷ ಆಸಕ್ತಿಗಳು ಕೂಡ ಲಾಭಗಳಿಸಬಹುದು; ಕೆಲವು ಉದ್ಯೋಗದಾತರು ಉದ್ಯೋಗ ಕಳೆದುಕೊಳ್ಳುವ ಭಯವಿಲ್ಲದ ಕಾರ್ಮಿಕರು ಪ್ರಯಾಸಪಟ್ಟು ಕೆಲಸ ಮಾಡುವುದಿಲ್ಲ, ಅಥವಾ ಹೆಚ್ಚು ವೇತನ ಹಾಗೂ ಲಾಭಗಳನ್ನು ಕೋರಬಹುದು ಎಂದು ನಿರೀಕ್ಷಿಸಬಹುದು. ಈ ಸಿದ್ಧಾಂತದ ಅನುಸಾರ, ಉದ್ಯೋಗದಾತನ ಶಕ್ತಿ ಹಾಗೂ ಲಾಭಗಳಂತಹ ಮೊನೊಪ್ಸೋನಿಯನ್ನು (ಕೊಳ್ಳುವವನು ಒಬ್ಬ, ಮಾರುವವರು ಹಲವರು) ಹೆಚ್ಚಿಸುವುದರಿಂದ ನಿರುದ್ಯೋಗ ಸಾಮಾನ್ಯ ಕಾರ್ಮಿಕ ಉತ್ಪಾದನಾ ಸಾಧ್ಯತೆಯನ್ನು ಹಾಗೂ ಲಾಭ ಸಾಮರ್ಥತೆಯನ್ನು ಪ್ರಚಲಿಸಬಹುದು.
ಸತತವಾದ ಏರಿಕೆಯಾಗುತ್ತಿರುವ GDP ಬೆಳವಣಿಗೆಯನ್ನು ತಡೆಯಲು ಪರಿಸರದ ಸಲಕರಣೆಯಂತೆ ಅತ್ಯುತ್ತಮ ನಿರುದ್ಯೋಗತೆಯನ್ನು ಭದ್ರಗೊಳಿಸಲಾಗಿದೆ, ಇದು ಸಂಪನ್ಮೂಲ ನಿರ್ಬಂಧಗಳ ಹಾಗೂ ಪರಿಸರದ ಮಹತ್ತರ ಪರಿಣಾಮದ ಸಂಬಂಧವಾಗಿ ಸುಸ್ಥಿರವಾದ ಮಟ್ಟದಲ್ಲಿಡಲು ಪ್ರಯತ್ನಿಸುತ್ತಿದೆ. ಹೇಗಿದ್ದರು ಸಂಪನ್ಮೂಲಗಳನ್ನು ಹಾಗೂ ಪರಿಸರವನ್ನು ಸಂರಕ್ಷಿಸಲು, ಆಸಕ್ತ ಕಾರ್ಮಿಕರಿಗೆ ಉದ್ಯೋಗಗಳನ್ನು ನಿರಾಕರಿಸುವ ಸಲಕರಣೆಯು ಒಂದು ಮೊಂಡಾದ ಉಪಕರಣದಂತೆ ತೋರುತ್ತದೆ, ಹಾಗೂ ಇದು ನಿರುದ್ಯೋಗದ ಬಳಕೆಯನ್ನು ರಿ ಅಲ್ಪಾವಧಿಗೆ ಮಾತ್ರ ಕಡಿಮೆಗೊಳಿಸುತ್ತದೆ. ನಿರುದ್ಯೋಗ ಕಾರ್ಯಶಕ್ತಿಯ ಪೂರ್ಣ ಉದ್ಯೋಗತೆ, ಎಲ್ಲರೂ ಕೇಂದ್ರೀಕೃತವಾಗಿ ಪರಿಸರದ ದಕ್ಷ ಪದ್ಧತಿಗಳು ಹೆಚ್ಚು ಉತ್ಪಾದನೆ ಹಾಗೂ ಬಳಕೆಯನ್ನು ಅಭಿವೃದ್ಧಿಸುವ ಗುರಿಯನ್ನು ಹೊಂದಿದಲ್ಲಿ, ಹೆಚ್ಚು ಸಾರ್ಥಕವಾದ ಹಾಗೂ ಒಟ್ಟುಗೂಡಿದ ಪರಿಸರದ ಲಾಭವನ್ನು ಮತ್ತು ಕಡಿಮೆ ಸಂಪನ್ಮೂಲಗಳ ಬಳಕೆಯನ್ನು ಪಡೆಯಬಹುದು.[೪೧] ಹೀಗಾದಲ್ಲಿ ಭವಿಷ್ಯದ ಆರ್ಥಿಕತೆ ಮತ್ತು ಕಾರ್ಯಶಕ್ತಿ, ಸಂಘಟಿತ ರಚನೆಯ GDPಯ ಸುಸ್ಥಿರವಾದ ಏರಿಕೆಯಿಂದ ಲಾಭ ಪಡೆಯುವುದು.
"ವೃತ್ತಿ ಸಂಸ್ಕೃತಿ"ಯ ಕೆಲವು ವಿಮರ್ಶಕರಲ್ಲಿ ಒಬ್ಬರಾದ ಹಾಗೂ ಕಾನೂನನ್ನು ಲಕ್ಷಿಸದ ಬೊಬ್ ಬ್ಲ್ಯಾಕ್‌ರು ಆಧುನಿಕ ದೇಶಗಳಲ್ಲಿ ಉದ್ಯೋಗವನ್ನು ಸಾಂಸ್ಕೃತಿಕವಾಗಿ ಅತಿಒತ್ತಾಯದಿಂದ ಹೇರಲಾದ ವಿಷಯ ಎಂದು ಗುರುತಿದುತ್ತಾರೆ. ಇಂತಹ ವಿಮರ್ಶಕರು ಹಲವು ಬಾರಿ ಸಾಧ್ಯವಾದಾಗ ಉದ್ಯೋಗವನ್ನು ತೊರೆಯುವ, ಕಡಿಮೆ ಕೆಲಸ ಮಾಡುವ, ಬದುಕಲು ಬೇಕಾಗುವ ಕ್ರಯದ ಮರುಮೌಲ್ಯಮಾಪನ ಇದರ ಕೊನೆಯಲ್ಲಿ ಮಾಡುವ, "ಕೆಲಸ"ದ ವಿರುದ್ಧ "ಉಲ್ಲಾಸ" ನೀಡುವ ಉದ್ಯೋಗಗಳನ್ನು ಸೃಷ್ಟಿಸುವ ಹಾಗೂ ಕೆಲಸ ಅನಾರೋಗ್ಯಕರ ಅನಿಸಿದಲ್ಲಿ ಸಂಪ್ರದಾಯದ-ನಡವಳಿಕೆಗಳನ್ನು ಸೃಷ್ಟಿಸುವ ಪ್ರಸ್ತಾಪವನ್ನು ಮಾಡುತ್ತಾರೆ. ಇಂತಹ ಜನರು ಜೀವನದ ನೈತಿಕತೆಯಲ್ಲಿ "ಕೆಲಸದ ವಿರುದ್ಧ"ದ ವಕಾಲತ್ತನ್ನು ವಹಿಸುತ್ತಾರೆ.[ಸೂಕ್ತ ಉಲ್ಲೇಖನ ಬೇಕು]
ನಿರುದ್ಯೋಗದಿಂದ ಲಾಭಗಳಿರಬಹುದು ಎಂದು ಆಧ್ಯಾತ್ಮಿಕ ದೃಷ್ಟಿಕೋನದಿಂದ ಡಾ. ಜೆನಿಫರ್ ಹೊವಾರ್ಡ್‌ರ ನಂಬಿಕೆ. "ಆರಂಭದ ಭಯ ಕಳೆದ ಮೇಲೆ, ಉದ್ಯೋಗದ ಕಳೆತ ನಮಗೆ ಇನ್ನು ಉತ್ತಮವಾಗಿ ಹೊಂದಿಕೆಯಾಗುವಂತೆ ಬೆಳೆಯಲು ಒಂದು ಅವಕಾಶ ಎಂದು ಅನಿಸಬಹುದು ಹಾಗೂ ಜೀವನದಲ್ಲಿ ನಮ್ಮನ್ನು ನಾವು ಹೆಚ್ಚು ಯಶಸ್ವಿಯಾಗಿ ಭಾವಿಸಲು ನೆರವಾಗಬಹುದು ಎಂಬುವುದು ಒಳ್ಳೆಯ ವಿಚಾರ. ಮುಖ್ಯ ವಿಷಯವೆಂದರೆ ಸರಿಯಾದ ಆಹಾರ ಸೇವನೆಯಿಂದ ಹಾಗೂ ಒಳ್ಳೆಯ ನಿದ್ದೆಯಿಂದ, ವ್ಯಾಯಾಮದಿಂದ, ದಿನಚರಿಯಿಂದ ಮತ್ತು ನಮ್ಮೊಳಗಿನ ಹಲವು ಹೆಚ್ಚು ಚಿಂತನೆಗಳ ಹಾಗೂ ಸಂವೇದನಗಳ ಚೇತನವನ್ನು ಪ್ರತಿಬಿಂಬಿಸಲು ಸಮಯ ಮಾಡಿಕೊಳ್ಳುವುದರಿಂದ ನಮ್ಮ ಮೇಲೆ ನಾವು ಅನುಕಂಪ ತೋರಿಸಬೇಕು. ಈಗ ನಮಗೆ ಸಮಯ ಕೊಡಲ್ಪಟ್ಟಿರುವಾಗ, ನಾವು ಯಾವುದು ಹೆಚ್ಚು ಮುಖ್ಯ ಎಂದು ಹತ್ತಿರದಿಂದ ನಿರೀಕ್ಷಿಸುವ ಲಾಭವನ್ನು ಪಡೆಯಬಹುದು. ನೆನಪಿಡಿ, ಯಾವುದೇ ಸಮಸ್ಯೆಯು ಉತ್ತಮ ಚಿಕಿತ್ಸೆಗೆ ಒಂದು ಅವಕಾಶವೆಂದು ತೆಗೆದುಕೊಳ್ಳಬಹುದು. ಜೀವನವನ್ನು ಬಂದಂತೆ ಎದುರಿಸಿ ನಮ್ಮಲಿರುವುದರಲ್ಲಿಯೇ ಉತ್ಪಾದಕವಾಗಿ ಮತ್ತು ಪಕ್ವವಾಗಿ ರೂಪಿಸಿಕೊಳ್ಳುವುದನ್ನು ಕಲಿಯುವುದರಿಂದ ಜೀವನ ಸಂತೋಷದ ಒಂದು ಬಾಗವಾಗುವುದು. ಹೊವಾರ್ಡ್, ಡಾ. ಜೆನಿಫರ್. "ವೈಯುಕ್ತಿಕ ಬೆಳವಣಿಗೆ ಎಂದರೇನು." ನಿಮ್ಮ ಉದ್ಯೋಗದ ಕಳೆತದ ಜೊತೆ ವ್ಯವಹರಿಸುವುದು (2009) Web.23 ಜೂನ್ 2009.
ಇವನ್ನೂ ಗಮನಿಸಿ
[ಬದಲಾಯಿಸಿ]- ಸಂಪೂರ್ಣವಾದ ಉದ್ಯೋಗ
- ಬೀವರಿಜ್ ರೇಖೆ
- ಪರಿಣಾಮಕಾರಿ ನಿರುದ್ಯೋಗ ದರ
- ಉದ್ಯೋಗದ ಅಂತರ
- ಉದ್ಯೋಗ ಸಂರಕ್ಷಣಾ ಶಾಸನ
- ಉದ್ಯೋಗ ದರ
- ಉದ್ಯೋಗ ಭರವಸೆ
- ಪದವೀಧರರ ನಿರುದ್ಯೋಗ
- ಕಾರ್ಮಿಕ ಮಾರುಕಟ್ಟೆ
- ನಿರುದ್ಯೋಗದ ದರದ ಅನುಸಾರ ದೇಶಗಳ ಪಟ್ಟಿ
- ನಿರುದ್ಯೋಗದ ದರದ ಅನುಸಾರ U.S.ನ ರಾಜ್ಯಗಳ ಪಟ್ಟಿ
- ಬಡತನ
- ಕಡಿಮೆ ಉದ್ಯೋಗತೆ
- ನಿರುದ್ಯೋಗದ ಲಾಭ
- ಐಚ್ಚಿಕ ಉದ್ಯೋಗ
- ಕಾರ್ಯ ಶುಲ್ಕ
- ಯುವಜನರ ಪ್ರತ್ಯೇಕಗೊಳಿಸುವಿಕೆ
ಆಕರಗಳು
[ಬದಲಾಯಿಸಿ]- ↑ "International Labour Organization: Resolution concerning statistics of the economically active population, employment, unemployment and underemployment, adopted by the Thirteenth International Conference of Labour Statisticians (October 1982); see page 4; accessed November 26, 2007" (PDF).
- ↑ ೨.೦ ೨.೧ http://www.cepr.net/documents/publications/US-EU-UR-2009-05.pdf
- ↑ Bourdieu, Pierre. THE WEIGHT OF THE WORLD: Social Suffering in Contemporary Society.
- ↑ Sullivan, arthur (2003). Economics: Principles in action. Upper Saddle River, New Jersey 07458: Prentice Hall. p. 330. ISBN 0-13-063085-3. Archived from the original on 2016-12-20. Retrieved 2021-02-24.
{{cite book}}
: Unknown parameter|coauthors=
ignored (|author=
suggested) (help)CS1 maint: location (link) - ↑ http://econlog.econlib.org/archives/2009/05/quiggan_takes_m.html
- ↑ ೬.೦ ೬.೧ ಅಲೈನ್ ಅಂಡರ್ಸನ್, ಎಕಾನಾಮಿಕ್ಸ್. ನಾಲ್ಕನೇ ಆವೃತ್ತಿ, 2006
- ↑ ಎಫ್.ಎ. ಹಯೆಕ್, ದ ಕಾನ್ಸ್‌ಟಿಟ್ಯೂಷನ್ ಆಫ್ ಲಿಬರ್ಟಿ
- ↑ ಅಮೇರಿಕಾದ ಮಹಾ ಮುಗ್ಗಟ್ಟು p. 45
- ↑ "ಆರ್ಕೈವ್ ನಕಲು". Archived from the original on 2009-03-02. Retrieved 2010-02-10.
- ↑ "IS CAPITALISM TOO PRODUCTIVE?". Archived from the original on 2009-03-02. Retrieved 2009-05-27.
- ↑ ಈವನ್ ಆಪ್ಟಿಮಿಸ್ಟ್ಸ್ ಗೆಟ್ ದ ಬ್ಲ್ಯೂಸ್ ವೆನ್ ಪಿಂಕ್-ಸ್ಲಿಪ್ಡ್ ನ್ಯೂಸ್‌ವೈಸ್, ಅಕ್ಟೋಬರ್ 27, 2008ರಂದು ಮರುಸಂಪಾದಿಸಲಾಗಿದೆ.
- ↑ Richard Ashley (2007). "Fact sheet on the impact of unemployment" (PDF). Virginia Tech, Department of Economics. Archived from the original (PDF) on 2007-10-25. Retrieved 2007-10-11.
- ↑ ಕ್ರಿಸ್ಟೋಫರ್ ರಮ್, "ಆರ್ ರೆಸೆಷನ್ಸ್ ಗುಡ್ ಫಾರ್ ಯುವರ್ ಹೆಲ್ತ್?", ಕ್ವಾರ್ಟರ್ಲೀ ಜರ್ನಲ್ ಆಫ್ ಎಕಾನಾಮಿಕ್ಸ್ 2000, 115(2): 617–650
- ↑ PThy_Edn_1_Chap_23.rtf
- ↑ ಎಕಾನಾಮಿಕ್ ರಿಕವರಿ ಇನ್ ದ ಗ್ರೇಟ್ ಡಿಪ್ರೆಷನ್ Archived 2013-09-28 ವೇಬ್ಯಾಕ್ ಮೆಷಿನ್ ನಲ್ಲಿ., ಫ್ರಾಂಕ್ ಜಿ. ಸ್ಟೈನ್ಡ್ಲ್, ಒಕ್ಲಾಹೊಮಾ ಸ್ಟೇಟ್ ಯೂನಿವರ್ಸಿಟಿ
- ↑ ಮಹಾ ಮುಗ್ಗಟ್ಟು, ದ ಕನ್‌ಸೈಸ್ ಎನ್‌ಸೈಕ್ಲೊಪೀಡಿಯಾ ಆಫ್ ಎಕಾನಾಮಿಕ್ಸ್
- ↑ http://www.gmu.edu/departments/economics/bcaplan/e311/mac10.htm
- ↑ ೧೮.೦ ೧೮.೧ ಓವರ್‌ಪ್ರೊಡಕ್ಷನ್ ಆಫ್ ಗೂಡ್ಸ್, ಅನ್‌ಇಕ್ವಲ್ ಡಿಸ್ಟ್ರಿಬ್ಯುಷನ್ ಆಫ್ ವೆಲ್ತ್, ಹೈ ಅನ್‌ಎಂಪ್ಲಾಯ್‌ಮೆಂಟ್ ಆಯ್೦ಡ್ ಮ್ಯಾಸಿವ್ ಪಾವರ್ಟಿ Archived 2009-02-05 ವೇಬ್ಯಾಕ್ ಮೆಷಿನ್ ನಲ್ಲಿ., ಪ್ರೆಸಿಡೆಂಟ್ಸ್ ಎಕಾನಾಮಿಕ್ ಕೌನ್ಸಿಲ್‌ನಿಂದ.
- ↑ 1929–1939 – ದ ಗ್ರೇಟ್ ಡಿಪ್ರೆಷನ್ Archived 2009-01-27 ವೇಬ್ಯಾಕ್ ಮೆಷಿನ್ ನಲ್ಲಿ., ಮೂಲ: ಬ್ಯಾಂಕ್ ಆಫ್ ಕೆನಡಾ
- ↑ ಅಬೌಟ್ ಆಫ್ ಗ್ರೇಟ್ ಡಿಪ್ರೆಷನ್ Archived 2008-12-20 ವೇಬ್ಯಾಕ್ ಮೆಷಿನ್ ನಲ್ಲಿ., ಯೂನಿವರ್ಸಿಟಿ ಆಫ್ ಇಲಿನೊಯಿಸ್
- ↑ ಎ ರೇನ್ ಆಫ್ ರುರಲ್ ಟೆರಾರ್, ಎ ವರ್ಲ್ಡ್ ಅವೇ, ಯು.ಎಸ್.ನ್ಯೂಸ್, ಜೂನ್ 22, 2003
- ↑ http://econlog.econlib.org/archives/2009/05/the_nuances_of.html
- ↑ "European Commission, Eurostat". Archived from the original on ನವೆಂಬರ್ 26, 2009. Retrieved November 5, 2009.
- ↑ [53]
- ↑ ಯುನೈಟೆಡ್ ಸ್ಟೇಟ್ಸ್‌ನ ಕಾರ್ಮಿಕ ಅಂಕಿಅಂಶಗಳ ಕಛೇರಿ,[೧], ಜುಲೈ 23, 2007ರಂದು ಮರುಸಂಪಾದಿಸಲಾಗಿದೆ.
- ↑ ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಲೇಬರ್‌ನ ಕಾರ್ಮಿಕ ಅಂಕಿಅಂಶಗಳ ಕಛೇರಿ, ಕರೆಂಟ್ ಪಾಪುಲೇಷನ್ ಸರ್ವೇ ಓವರ್‌ವಿವ್ಯೂ, ಮೇ 25, 2007ರಂದು ಮರುಸಂಪಾದಿಸಲಾಗಿದೆ.
- ↑ ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಲೇಬರ್‌ನ ಕಾರ್ಮಿಕ ಅಂಕಿಅಂಶಗಳ ಕಛೇರಿ, [೨], ಆಗಸ್ಟ್ 22, 2007ರಂದು ಮರುಸಂಪಾದಿಸಲಾಗಿದೆ.
- ↑ ಜಾನ್ ಇ. ಬ್ರೆಗ್ಗರ್ ಮತ್ತು ಸ್ಟೀವನ್ ಇ.ಹಗನ್ (1995). "BLS ಇಂಟ್ರುಡ್ಯುಸಸ್ ನ್ಯೂ ರೇಂಜ್ ಆಫ್ ಆಲ್ಟರ್ನೇಟಿವ್ ಅನ್‌ಎಂಪ್ಲಾಯ್‌ಮೆಂಟ್ ಮೇಸರ್ಸ್" ಮಂಥ್‌ಲೀ ಲೇಬರ್ ರಿವ್ಯೂ, ಅಕ್ಟೋಬರ್: 19–29. [೩], ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಲೇಬರ್‌ನ ಕಾರ್ಮಿಕ ಅಂಕಿಅಂಶಗಳ ಕಛೇರಿ, ಮಾರ್ಚ್ 6, 2009ರಂದು ಮರುಸಂಪಾದಿಸಲಾಗಿದೆ.
- ↑ http://www.justicepolicy.org/images/upload/00-05_REP_PunishingDecade_AC.pdf
- ↑ ಬೆಕೆಟ್, ಕೆಥೆರಿನ್ ಮತ್ತು ಬ್ರುಸಿ ವೆಸ್ಟರ್ನ್. (1997) ಹೌ ಅನ್‌ರೆಗ್ಯುಲೇಟೆಡ್ ಈಸ್ ದ ಯು.ಎಸ್. ಲೇಬರ್ ಮಾರ್ಕೆಟ್?: ದ ಪೆನಾಲ್ ಸಿಸ್ಟಮ್ ಆಯ್‌ಸ್ ಎ ಲೇಬರ್ ಮಾರ್ಕೆಟ್ ಇನ್ಸ್‌ಟಿಟ್ಯೂಷನ್. ಟೊರಂಟೊ: 1997 ಅಮೇರಿಕನ್ ಸೊಷಿಯಾಲಾಜಿಕಲ್ ಅಸೋಸಿಯೇಷನ್ ಕಾನ್ಫೆರೆನ್ಸ್.
- ↑ ೩೧.೦ ೩೧.೧ ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಲೇಬರ್‌ನ ಕಾರ್ಮಿಕ ಅಂಕಿಅಂಶಗಳ ಕಛೇರಿ, "ದ ಎಂಪ್ಲಾಯ್‌ಮೆಂಟ್ ಸಿಚ್ಯುಯೇಷನ್: ಜನವರಿ 2008", ಜನವರಿ 2008
- ↑ ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಲೇಬರ್‌ನ, ಉದ್ಯೋಗ & ತರಬೇತಿ ಅಧಿಕಾರ ನಿರ್ವಹಣೆ, ಕಾರ್ಮಿಕ ಭದ್ರತಾ ಕಛೇರಿ, UI ವೀಕ್ಲೀ ಕ್ಲೈಮ್ಸ್
- ↑ "ಹಿಸ್ಟಾರಿಕಲ್ ಕಂಪೇರಾಬಿಲಿಟಿ" (2006). ಎಂಪ್ಲಾಯ್‌ಮೆಂಟ್ ಆಯ್೦ಡ್ ಅರ್ನಿಂಗ್ಸ್. ಹೌಸ್‌ಹೋಲ್ಡ್ ಡೇಟಾ ಎಕ್ಸ್‌ಪ್ಲಾನೇಟರಿ ನೋಟ್ಸ್, ಫೆಬ್ರುವರಿ 2006 http://www.bls.gov/cps/eetech_methods.pdf.
- ↑ ಉದ್ಯೋಗ ಸ್ಥಿತಿ ಸಾರಾಂಶ
- ↑ ಕಾರ್ಮಿಕ ಅಂಕಿಅಂಶಗಳ ಕಛೇರಿ, ಎಂಪ್ಲಾಯ್‍ಮೆಂಟ್ ಸ್ಟೇಟಸ್ ಆಫ್ ದ ಸಿವಿಲಿಯನ್ ನಾನ್‌ಇನ್ಸ್‌ಟಿಟ್ಯೂಟನಲ್ ಪಾಪುಲೇಷನ್, 1940 ಟು ಡೇಟ್[೪], ಮಾರ್ಚ್ 6, 2009ರಂದು ಮರುಸಂಪಾದಿಸಲಾಗಿದೆ. 1940ರವರೆಗೆ ನಾಗರೀಕ ಸಾಂಸ್ಥಿಕವಲ್ಲದ ಜನಸಂಖ್ಯೆಯ ಉದ್ಯೋಗ ಸ್ಥಾನಮಾನ.
- ↑ ಕ್ರಿಸ್ಟಿನಾ ರೊಮರ್ (1986). "ಸ್ಪೂರಿಯಸ್ ವೊಲಾಟಿಲಿಟಿ ಇನ್ ಹಿಸ್ಟಾರಿಕಲ್ ಅನ್‌ಎಂಪ್ಲಾಯ್‌ಮೆಂಟ್ ಡೇಟಾ", ದ ಜರ್ನಲ್ ಆ, 94 (1): 1–37.
- ↑ ರಾಬರ್ಟ್ ಎಮ್. ಕೊಹನ್ (1973). "ಲೇಬರ್ ಪೊರ್ಸ್ ಆಯ್೦ಡ್ ಅನ್‌ಎಂಪ್ಲಾಯ್‌ಮೆಂಟ್ ಇನ್ ದ 1920'ಸ್ ಆಯ್೦ಡ್ 1930'ಸ್: ಎ ರಿ-ಎಕ್ಸಾಮಿನೇಷನ್ ಬೇಸ್ಡ್ ಆನ್ ಪೊಸ್ಟ್‌ವಾರ್ ಎಕ್ಸ್‌ಪೀರಿಯನ್ಸ್", ದ ರಿವಿವ್ಯೂ ಆಫ್ ಎಕನಾಮಿಕ್ಸ್ ಆಯ್೦ಡ್ ಸ್ಟ್ಯಾಟಿಸ್ಟಿಕ್ಸ್, 55 (1): 46–55.
- ↑ "Dean Baker, Center for Economic and Policy Research". Archived from the original on 2007-09-30. Retrieved 2010-02-10.
- ↑ ರೇಮಂಡ್ ಟೊರೆಸ್, OECD ಹೆಡ್ ಆಫ್ ಎಂಪ್ಲಾಯ್‌ಮೆಂಟ್ ಅನಾಲಿಸಿಸ್, ಲಿ ಮಾಂಡೇ , 30 ಮೈ 2007 : ಅನ್‌ಎಂಪ್ಲಾಯ್‍ಮೆಂಟ್ ಮೆಸರ್ಸ್ ಈಸ್ ಲೆಸ್ ಆಯ್೦ಡ್ ಲೆಸ್ ಮೀನಿಂಗ್‌ಫುಲ್ ಟು ಮೆಸರ್ಸ್ ಲೇಬರ್ ಮಾರ್ಕೆಟ್ ಎಫಿಷಿಯೆನ್ಸಿ.
- ↑ "ಡಿಟರ್ಮಿನೇಷನ್ ಆಫ್ ದ ಡಿಸೆಂಬರ್ 2007 ಪೀಕ್ ಇನ್ ಎಕನಾಮಿಕ್ ಆಕ್ಟಿವಿಟಿ , ನವೆಂಬರ್ 28, 2008". Archived from the original on 2013-09-05. Retrieved 2010-02-10.
- ↑ http://treehugger.com/files/2008/02/4_reasons_recession_bad_environment.php Archived 2008-02-09 ವೇಬ್ಯಾಕ್ ಮೆಷಿನ್ ನಲ್ಲಿ. ಕೌಂಟರ್-ಪಾಯಿಂಟ್: ಏಕೆ ಆರ್ಥಿಕ ಹಿಂಜರಿತವು ಪರಿಸರಕ್ಕೆ ಕೆಟ್ಟದ್ದಾಗಿದೆ ಎಂಬುದಕ್ಕೆ 4 ಕಾರಣಗಳು. ಮೈಕೆಲ್ ಗ್ರಹಮ್ ರಿಚರ್ಡ್ ಅವರಿಂದ, Gatineau, ಕೆನಡಾ 02. 6.08ರಂದು. ವ್ಯವಹಾರ ಮತ್ತು ರಾಜಕೀಯ
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಎಕಾನಾಮಿಕ್ ಪಾಲಿಸಿ ಇನ್ಸ್ಟಿಟ್ಯೂಟ್ Archived 2005-12-23 ವೇಬ್ಯಾಕ್ ಮೆಷಿನ್ ನಲ್ಲಿ.
- ಐತಿಹಾಸಿಕ ದತ್ತಾಂಶ
- ಯು.ಎಸ್‌ನ ನಿರುದ್ಯೋಗ ದರ Archived 2012-02-16 ವೇಬ್ಯಾಕ್ ಮೆಷಿನ್ ನಲ್ಲಿ. – ಯು.ಎಸ್ನಲ್ಲಿನ ನಿರುದ್ಯೋಗ ದರ,1976ರ ವಾರ್ಷಿಕ ದತ್ತ.
- ಐತಿಹಾಸಿಕ ಯು.ಎಸ್‌ನ ನಿರುದ್ಯೋಗ ದರ Archived 2009-04-25 ವೇಬ್ಯಾಕ್ ಮೆಷಿನ್ ನಲ್ಲಿ. – 1948ರ ಮಾಸಿಕ ದತ್ತಾಂಶ.
- ಯುನೈಟೆಡ್ ಸ್ಟೇಟ್ಸ್ನಲ್ಲಿನ ನಿರುದ್ಯೋಗ ದರ Archived 2008-09-20 ವೇಬ್ಯಾಕ್ ಮೆಷಿನ್ ನಲ್ಲಿ. – ಯು.ಎಸ್ನಲ್ಲಿನ ನಿರುದ್ಯೋಗ ದರ. ಜನವರಿ 1948ರ ಮಾಸಿಕ ದತ್ತಾಂಶ.
- ಕಾರ್ಮಿಕ ಅಂಕಿಅಂಶಗಳ ಅಧಿಕೃತ ಕಛೇರಿಯ ನಕ್ಷೆ ಯು.ಎಸ್‌ನ ನಿರುದ್ಯೋಗ ದರ ಮತ್ತು ಕೆಲವು ಇನ್ನಿತರ ಅಂಕಿಅಂಶಗಳು,1940ರ ವಾರ್ಷಿಕ ದತ್ತಾಂಶ.
- ಪ್ರಸ್ತುತ ದತ್ತಾಂಶ
- Pages using the JsonConfig extension
- CS1 errors: unsupported parameter
- CS1 maint: location
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಉಲ್ಲೇಖಗಳ ಅಗತ್ಯ ಇರುವ ಲೇಖನಗಳು
- Articles with hatnote templates targeting a nonexistent page
- Articles with unsourced statements from October 2007
- Articles with unsourced statements from April 2008
- Articles with unsourced statements from February 2008
- Articles with unsourced statements from December 2007
- Articles with unsourced statements from November 2008
- Commons category link is on Wikidata
- ನಿರುದ್ಯೋಗ
- ಆರ್ಥಿಕ ಸಮಸ್ಯೆಗಳು
- ಕಾರ್ಮಿಕ ಆರ್ಥಿಕತೆ
- ವೈಯುಕ್ತಿಕ ಹಣಕಾಸಿನ ಸಮಸ್ಯೆಗಳು
- ಅರ್ಥಶಾಸ್ತ್ರ