ಹಣದುಬ್ಬರ
ಅರ್ಥ ಶಾಸ್ತ್ರದಲ್ಲಿ, ಹಣದುಬ್ಬರ ವೆಂದರೆ ಆರ್ಥಿಕತೆಯ ಕಾಲಾವಧಿಯಲ್ಲಿ ಸರಕುಗಳ ಹಾಗೂ ಸೇವೆಗಳ ಸಾಮಾನ್ಯ ಬೆಲೆಗಳ ಮಟ್ಟದ ಏರಿಕೆ.[೧]
ಬೆಲೆ ಏರಿಕೆಯಾದಾಗ, ಚಲಾವಣೆಯ ಪ್ರತಿ ಘಟಕವೂ ಕಡಿಮೆ ಪ್ರಮಾಣದಲ್ಲಿ ಸರಕುಗಳನ್ನು-ಸೇವೆಗಳನ್ನು ಕೊಂಡುಕೊಳ್ಳುತ್ತದೆ; ಹಾಗಾಗಿ ಹಣದುಬ್ಬರವೆಂದರೆ ಹಣದ ಕೊಂಡುಕೊಳ್ಳುವ ಸಾಮರ್ಥ್ಯದಲ್ಲಿನ ಕೊರೆತಯೂ ಹೌದು - ವಿನಿಮಯ ಮತ್ತು ಆರ್ಥಿಕತೆಯ ಲೆಕ್ಕದ ಘಟಕದ ಆಂತರಿಕ ಮಾಧ್ಯಮದಲ್ಲಿ ನೈಜ ಮೌಲ್ಯದ ನಷ್ಟವೂ ಆಗುತ್ತದೆ.[೨][೩] ಹಣದುಬ್ಬರದ ಪ್ರಮಾಣವೇ ಬೆಲೆ ಏರಿಕೆಯ ಮುಖ್ಯ ಪ್ರಮಾಣವಾಗಿದ್ದು, ಕಾಲಾವಧಿಯಲ್ಲಿ ಹಣದುಬ್ಬರದ ದರ, ಸಾಮಾನ್ಯ ಬೆಲೆಯ ಸೂಚ್ಯಂಕಲ್ಲಿ ವಾರ್ಷಿಕ ಶೇಕಡಾವಾರು ಬದಲಾವಣೆ (ಗ್ರಾಹಕ ಬೆಲೆ ಸೂಚ್ಯಂಕ ಎಂದೂ ಹೇಳಲಾಗಿದೆ).[೪]
ಹಣದುಬ್ಬರವು ಆರ್ಥಿಕತೆಯ ಮೇಲೆ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳನ್ನು ಬೀರಬಹುದು. ಹಣದುಬ್ಬರದ ನಕಾರಾತ್ಮಕ ಪರಿಣಾಮಗಳಲ್ಲಿ ಕೆಲವು ಹೀಗಿವೆ: ಕಾಲಾವಧಿಯಲ್ಲಿ ಹಣದ ನೈಜ ಮೌಲ್ಯದಲ್ಲಿ ಮತ್ತು ಇತರೆ ಹಣಕಾಸಿನ ಅಂಶಗಳಲ್ಲಿ ಅಸ್ಥಿರತೆ; ಭವಿಷ್ಯದಲ್ಲಿ ಹಣದುಬ್ಬರದ ಬಗೆಗಿನ ಅನಿಶ್ಚಿತತೆಯ ಕಾರಣ, ಹೂಡಿಕೆ ಮತ್ತು ಉಳಿತಾಯಗಳನ್ನು ಮಾಡದಿರುವುದು; ಮತ್ತು ತೀವ್ರ ಹಣದುಬ್ಬದ ಕಾರಣದಿಂದಾಗಿ, ಭವಿಷ್ಯದಲ್ಲಿ ಬೆಲೆಗಳು ಇನ್ನಷ್ಟೂ ಏರಬಹುದೆಂದು ಗ್ರಾಹಕರು ಕೂಡಿಟ್ಟಕೊಂಡು ಅವಶ್ಯ ಸರಕುಗಳ ಕೊರತೆಗೆ ಕಾರಣರಾಗುತ್ತಾರೆ.ಸಕಾರಾತ್ಮಕ ಪರಿಣಾಮಗಳಲ್ಲಿ ಅರ್ಥಿಕ ಕುಸಿತಗಳ ಉಪಶಮನ [೫] ಮತ್ತು ನೈಜ ಸಾಲದ ಮಟ್ಟವನ್ನು ಕಡಿಮೆಗೊಳಿಸುವುದರ ಮೂಲಕ ಸಾಲ ಮುಕ್ತ.
ಹಣದ ಪೂರೈಕೆಯಲ್ಲಾದ ಅತಿ ಬೆಳವಣಿಗೆಯ ಕಾರಣ ಹಣದುಬ್ಬರದ ಪ್ರಮಾಣ ಹೆಚ್ಚಿದೆ ಮತ್ತು ಅತಿ-ಹಣದುಬ್ಬರಕ್ಕೆ ಕಾರಣವಾಗಿವೆ ಎಂದು ಆರ್ಥಿಕ ತಜ್ಞರು ಒಟ್ಟಾರೆ ಒಪ್ಪಿಕೊಂಡಿದ್ದಾರೆ.[೬] ಕಡಿಮೆ ಹಾಗೂ ಮಧ್ಯಮ ಪ್ರಮಾಣದ ಹಣದುಬ್ಬರದ ದರಗಳನ್ನು ನಿರ್ಧರಿಸುವ ಸಂಗತಿಗಳ ಬಗೆ ವಿವಿಧ ಅಭಿಪ್ರಾಯಗಳಿವೆ.ಕಡಿಮೆ ಅಥವಾ ಮಧ್ಯಮ ಪ್ರಮಾಣದ ಹಣದುಬ್ಬರಗಳು ಸರಕು ಮತ್ತು ಸೇವೆಗಳ ನೈಜ ಬೇಡಿಕೆಯಲ್ಲಿ ಏರುಪೇರುಗಳಿಗೆ ಕಾರಣವಾಗಿರಬಹುದು, ಅಥವಾ ಕೊರತೆಗಳ ಕಾಲದಲ್ಲಿ ಲಭ್ಯ ಪೂರೈಕೆಗಳಲ್ಲಿ ಬದಲಾವಣೆಗಳು, ಹಾಗೂ ಹಣದ ಪೂರೈಕೆಯಲ್ಲಿ ವೃದ್ಧಿ.ಆದಾಗ್ಯೂ, ಆರ್ಥಿಕ ಬೆಳವಣಿಗೆಗಿಂತಲೂ ವೇಗವಾಗಿ ಹಣ ಪೂರೈಕೆಯಾದಾಗ ದೀರ್ಘ ಕಾಲಾವಧಿಯ ಹಣದುಬ್ಬರವಾಗುತ್ತದೆ ಎಂಬುದು ಒಮ್ಮತದ ಅಭಿಪ್ರಾಯ.[೭][೮]
ಇಂದು, ಮುಖ್ಯವಾಹಿನಿಯಲ್ಲಿರುವ ಬಹಳಷ್ಟು ಅರ್ಥ ಶಾಸ್ತ್ರಜ್ಞರು ಕಡಿಮೆ ದರದ ಸ್ಥಿರ ಹಣದುಬ್ಬರವನ್ನು ಬಯಸುತ್ತಾರೆ.[೯] ಕಡಿಮೆ ದರದ (ಶೂನ್ಯ ಅಥವಾ ನಕಾರಾತ್ಮಕಕ್ಕೆ ವಿರುದ್ಧವಾಗಿ) ಹಣದುಬ್ಬರವು ಆರ್ಥಿಕ ಹಿಂಜರಿಕೆಗಳ ತೀವ್ರತೆಯನ್ನು ಕಡಿಮೆಗೊಳಿಸಬಹುದಾಗಿದೆ. ಶ್ರಮ ಮಾರುಕಟ್ಟೆಯು ಹಿಂಜರಿಕೆಗೆ ಬೇಗ ಸರಿಹೊಂದುವಂತೆ ಮಾಡಿ, ಮತ್ತು ದ್ರವತೆಯ ಯುಕ್ತಿ ಆರ್ಥಿಕತೆಯ ಸ್ಥಿರತೆಗೆ ಆಗಬಹುದಾದ ಅಪಾಯನ್ನು ಹಣಕಾಸಿನ ನೀತಿಮೂಲಕ ತಪ್ಪಿಸುತ್ತದೆ.[೧೦] ಹಣದುಬ್ಬರದ ದರವನ್ನು ಕಡಿಮ ಹಾಗೂ ಸ್ಥಿರ ಮಟ್ಟದಲ್ಲಿಯೇ ಇಡುವ ಜವಾಬ್ದಾರಿ ಹಣಕಾಸಿನ ಅಧಿಕಾರಿಗಳದ್ದಾಗಿದೆ. ಸಾಮಾನ್ಯವಾಗಿ, ಈ ಹಣಕಾಸಿನ ಅಧಿಕಾರಿಗಳು, ಕೇಂದ್ರೀಯ ಬ್ಯಾಂಕ್‌ಗಳಾಗಿದ್ದು, ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಮತ್ತು ಬ್ಯಾಂಕಿಂಗ್ ನಿಧಿ ಅಗತ್ಯಗಳ ಸ್ಥಾಪನೆಗಳ ಮೂಲಕ ಬಡ್ಡಿ ದರಗಳನ್ನು ನಿಗದಿಪಡಿಸಿ, ಹಣದ ಪೂರೈಕೆಯ ಪ್ರಮಾಣದ ಮೇಲೆ ನಿಗಾ ವಹಿಸುತ್ತವೆ.[೧೧]
ಮೂಲಗಳು
[ಬದಲಾಯಿಸಿ]ಮೂಲತ: ಚಲಾವಣೆಯ ಕೆಡಿಸುವಿಕೆಗೆ ಹಣದುಬ್ಬರ ಎನ್ನಲಾಗಿತ್ತು.ಚಿನ್ನವನ್ನು ಚಲಾವಣೆಯಾಗಿ ಬಳಸುತ್ತಿದ್ದಾಗ, ಚಿನ್ನದ ನಾಣ್ಯಗಳನ್ನು ಸರ್ಕಾರವು ಸಂಗ್ರಹಿಸಿ, ಕರಗಿಸಿ, ಬೆಳ್ಳಿ, ತಾಮ್ರ ಮತ್ತು ಸೀಸೆಯಂತಹ ಬೇರೆ ಲೋಹಗಳೊಂದಿಗೆ ಬೆರೆಸಿ ಪುನ: ಅದೇ ಕಡಿಮೆ ಮೌಲ್ಯದಲ್ಲಿ ಮರು ಚಲಾವಣೆ ಮಾಡಲಾಗುತ್ತಿತ್ತು.ಚಿನ್ನವನ್ನು ಇತರೆ ಲೋಹಗಳೊಂದಿಗೆ ಬೆರೆಸಿ ಸತ್ವಗುಂದಿಸುವುದರ ಮೂಲಕ, ಸರ್ಕಾರವು ನಾಣ್ಯಗಳನ್ನು ತಯಾರಿಸಲು ಬಳಸಲಾದ ಚಿನ್ನದ ಪ್ರಮಾಣವನ್ನು ಹೆಚ್ಚಿಸದೆ ನಾಣ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಚಲಾವಣೆಗೊಳಿಸಲಾಗುತ್ತಿತ್ತು. ಪ್ರತಿಯೊಂದು ನಾಣ್ಯದ ಬೆಲೆ ಈ ರೀತಿ ಕಡಿಮೆಯಾದಾಗ, ಟಂಕನ ಲಾಭದಲ್ಲಿ ಹೆಚ್ಚಳವಾಗಿ ಸರ್ಕಾರವು ಲಾಭಗಳಿಸುತ್ತಿತ್ತು.[೧೨] ಈ ಪದ್ಧತಿಯು ಹಣದ ಪೂರೈಕೆಯನ್ನು ಹೆಚ್ಚಿಸುತ್ತದಾದರೂ ಇದೇ ಸಮಯದಲ್ಲಿ ಪ್ರತಿಯೊಂದು ನಾಣ್ಯದ ನಿರ್ದಿಷ್ಟ ಮೌಲ್ಯವು ಕಡಿಮೆಯಾಗುವುದು. ನಾಣ್ಯದ ನಿರ್ದಿಷ್ಟ ಮೌಲ್ಯವು ಕಡಿಮೆಯಾದಾಗ, ಗ್ರಾಹಕರು ಅದೇ ಸರಕು-ಸೇವೆಗಳನ್ನು ಕೊಳ್ಳಲು ಇನ್ನೂ ಹೆಚ್ಚು ನಾಣ್ಯಗಳು ಬೇಕಾಗುತ್ತಿದ್ದವು.ನಾಣ್ಯಗಳ ಮೌಲ್ಯವು ಕಡಿಮೆಯಾದಾಗ ಈ ಸರಕು-ಸೇವೆಗಳ ಬೆಲೆ ಏರಿಕೆಯಾಗುತ್ತವೆ.[೧೩]
ಹತ್ತೊಂಬತ್ತನೆಯ ಶತಮಾನದಲ್ಲಿ, ಆರ್ಥಶಾಸ್ತ್ರಜ್ಞರು ಸಗಳ ಬೆಲೆ ಏರಿಕೆ ಮತ್ತು ಇಳಿತದ ಹಿಂದಿನ ಕಾರಣಗಳನ್ನು ಮೂರು ಪ್ರತ್ಯೇಕ ಕಾರಣಗಳನ್ನಾಗಿ ವಿಂಗಡಿಸಿದರು: ಸರಕಿನ ಮೌಲ್ಯ ಅಥವಾ ಸಂಪನ್ಮೂಲಗಳಲ್ಲಿ ಬದಲಾವಣೆ, ಚಲಾವಣೆಯಲ್ಲಿದ್ದ ಲೋಹಾಂಶದಲ್ಲಿನ ಏರುಪೇರಾಗಿರುವಂತಹ ಹಣದ ಬೆಲೆ ಮತ್ತು ನಾಣ್ಯದಲ್ಲಿರುವ ಮರುಪಡೆಯಬಹುದಾದ ಲೋಹದ ಪ್ರಮಾಣಕ್ಕೆ ನಿರ್ದಿಷ್ಟವಾಗಿ ಹೆಚ್ಚಾದ ಚಲಾವಣೆಯ ಪರಿಣಾಮವಾಗಿ ಚಲಾವಣೆಯ ಮೌಲ್ಯಹರಣ. ಅಮೆರಿಕಾ ದೇಶದ ನಾಗರಿಕ ಸಮರದ ಸಮಯದಲ್ಲಿ ಖಾಸಗಿ ಬ್ಯಾಂಕ್ ನೋಟುಗಳು ವ್ಯಾಪಕವಾಗಿ ಅಚ್ಚಾದ ಹಿನ್ನೆಲೆಯಲ್ಲಿ "ಹಣದುಬ್ಬರ"ವೆಂಬ ಪದವು ನೇರ ಪ್ರಸ್ತಾಪವಾಗಿ ಹೊಮ್ಮಲು ಶುರುವಾಗಿ ಮರುಪಡೆಯಬಹುದಾದ ಬ್ಯಾಂಕ್ ನೋಟುಗಳು ಲಭ್ಯ ಲೋಹ ಪ್ರಮಾಣಕ್ಕಿಂತಲೂ ಮೀರಿ ಚಲಾವಣೆಯ ಮೌಲ್ಯ ಹರಣ ಕ್ಕೆ ಕಾರಣವಾಯಿತು.ಹಾಗಾಗಿ, ಹಣದುಬ್ಬರವೆಂಬ ಪದವನ್ನು ಸರಕುಗಳ ಬೆಲೆ ಏರಿಕೆಗೆ ಬದಲಾಗಿ ಚಲಾವಣೆಯ ಅಪಮೌಲ್ಯವೆಂದು ಹೇಳಲಾಗಿದೆ.[೧೪]
ಬ್ಯಾಂಕ್ ನೋಟುಗಳ ಅತಿ-ಪೂರೈಕೆ ಮತ್ತು ಇದರಿಂದ ಉಂಟಾದ ಅವುಗಳ ಮೌಲ್ಯಹರಣವನ್ನು ಮೊದಲ ಶಾಸ್ತ್ರೀಯ ಅರ್ಥಶಾಸ್ತ್ರಜ್ಞರಾದ ಡೇವಿಡ್ ಹ್ಯೂಮ್ ಮತ್ತು ಡೇವಿಡ್ ರಿಕಾರ್ಡೊ ಅವರು ಗಮನಿಸಿ, ಪರಿಶೀಲಿಸಿ ಚಲಾವಣೆಯ ಮೌಲ್ಯಹರಣ (ಹಣಕಾಸಿನ ಉಬ್ಬರ ವೆಂದು ಅನಂತರ ಹೆಸರಿಸಲಾದ) ಸರಕುಗಳ ಬೆಲೆಯ (ಅನಂತರ ಬೆಲೆಯ ಹಣದುಬ್ಬರ ಮತ್ತು ಅಂತಿಮವಾಗಿ ಸುಮ್ಮನೆ ಹಣದುಬ್ಬರ ಎನ್ನಲಾದ) ಮೇಲೆ ಯಾವ ರೀತಿಯ ಪ್ರಭಾವವನ್ನು ಬೀರಬಲ್ಲದು ಎಂದು ಚರ್ಚಿಸುತ್ತಿದ್ದರು.[೧೫]
ಸಂಬಂಧಿಸಿದ ವ್ಯಾಖ್ಯಾನಗಳು
[ಬದಲಾಯಿಸಿ]"ಹಣದುಬ್ಬರ"ವೆಂಬ ಪದವು ಸಾಮಾನ್ಯವಾಗಿ, ಆರ್ಥಿಕತೆಯಲ್ಲಿ ಸರಕುಗಳ ಮತ್ತು ಸೇವೆಗಳ ಬೆಲೆಗಳ ಒಟ್ಟಾರೆ ಮಟ್ಟವನ್ನು ನಿರೂಪಿಸುವ ಸ್ಥೂಲ ಬೆಲೆ ಸೂಚ್ಯಂಕಲ್ಲಿ ಅಳತೆಯಾದಂತಹ ಏರಿಕೆಯನ್ನು ವ್ಯಾಖ್ಯಾನಿಸುತ್ತದೆ.ಗ್ರಾಹಕ ಬೆಲೆ ಸೂಚ್ಯಂಕ (CPI), ವೈಯಕ್ತಿಕ ಬಳಕೆಯ ಖರ್ಚು ಬೆಲೆ ಸೂಚ್ಯಂಕ (PCEPI) ಮತ್ತು GDP ಹಣದುಬ್ಬರದ ತಗ್ಗು ಸ್ಥೂಲ ಬೆಲೆ ಸೂಚ್ಯಂಕದ ಕೆಲವು ಉದಾಹರಣೆಗಳಾಗಿವೆ. ಹಣದುಬ್ಬರವೆಂಬ ಪದವು ಸ್ವತ್ತು, ಆರ್ಥಿಕತೆಯೊಂದರಲ್ಲಿ ಸರಕುಗಳು (ಆಹಾರ, ಇಂಧನ, ಲೋಹಗಳು ಸೇರಿದಂತೆ), ಆರ್ಥಿಕ ಸ್ವತ್ತುಗಳು (ಷೇರ್‌ಗಳು, ಬಾಂಡ್‌ಗಳು ಮತ್ತು ಜಮೀನು) ಮತ್ತು ಸೇವೆಗಳು (ಮನರಂಜನೆ ಮತ್ತು ಆರೋಗ್ಯಸೇವೆ) - ಇವುಗಳಂತಹ ಸರಕು ಮತ್ತು ಸೇವೆಗಳ ಇಕ್ಕಟ್ಟಾದ ಗುಂಪಿನ ಬೆಲೆಯ ಏರಿಕೆಯ ಮಟ್ಟವನ್ನು ವಿವರಿಸಲು ಬಳಸಬಹುದು.ರಾಯ್ಟರ್ಸ್-CRB ಸೂಚ್ಯಂಕ (CCI), ಉತ್ಪಾದಕ ಬೆಲೆ ಸೂಚ್ಯಂಕ ಮತ್ತು ಉದ್ಯೋಗ ಬೆಲೆ ಸೂಚ್ಯಂಕ (ECI) ಆರ್ಥಿಕತೆಯ ವಿಶಿಷ್ಟ ಕ್ಷೇತ್ರಗಳಲ್ಲಿ ಬೆಲೆಯ ಹಣದುಬ್ಬರವನ್ನು ಅಳೆಯಲು ಬಳಸಲಾದ ಇಕ್ಕಟ್ಟಾದ ಬೆಲೆ ಸೂಚ್ಯಂಕಗಳ ಉದಾಹರಣೆಗಳು. ಸ್ವತ್ತು ಬೆಲೆ ಹಣದುಬ್ಬರವು,ಸರಕು ಮತ್ತು ಸೇವೆಗಳ ಬೆಲೆಗಳ ಹಣದುಬ್ಬರಕ್ಕೆ ವಿರುದ್ಧವಾಗಿ, ಸ್ವತ್ತುಗಳ ಬೆಲೆಯಲ್ಲಿ ಏರಿಕೆಯಾಗಿದೆ. ತಿರುಳು ಹಣದುಬ್ಬರ ಆಹಾರ ಮತ್ತು ಇಂಧನ ಬೆಲೆಗಳನ್ನು ಹೊರತಪಡಿಸಿದ ಸ್ಥೂಲ ಬೆಲೆ ಸೂಚ್ಯಂಕಲ್ಲಿನ ಬೆಲೆಯ ಏರುಪೇರಿನ ಅಳತೆಯಾಗಿದೆ. ಫೆಡರಲ್ ರಿಸರ್ವ್ ಮಂಡಳಿ ಒಟ್ಟಾರೆ ಹಣದುಬ್ಬರವನ್ನು ಅಳೆಯಲು ಮೂಲ ಹಣದುಬ್ಬರವನ್ನು ಬಳಸುವುದು, ಅಲ್ಪಕಾಲದ ಬೆಲೆಯ ಏರುಪೇರನ್ನು ಶಮನ ಮಾಡಲು ಆಹಾರ ಮತ್ತು ಇಂಧನ ಬೆಲೆಗಳನ್ನು ತೆಗೆದು ಹಾಕುವುದು, ಅವು ಸಾಮಾನ್ಯ ಆರ್ಥಿಕ ವ್ಯವಸ್ಥೆಯಲ್ಲಿ ಹಣದುಬ್ಬರ ಪ್ರವೃತ್ತಿಯ ದೀರ್ಘ ಕಾಲದ ಅಂದಾಜುಗಳನ್ನು ತಿರುಚುವ ಸಾಧ್ಯತೆಗಳಿವೆ.[೧೬]
ಇತರೆ ಸಂಬಂಧಿತ ಆರ್ಥಿಕ ಪರಿಕಲ್ಪನೆಗಳು ಒಳಗೊಂಡಿರುವುದು: ಹಣದುಬ್ಬರವಿಳಿತ – ಸಾಮಾನ್ಯ ಬೆಲೆ ಮಟ್ಟ; ಹಣದುಬ್ಬರದ ತಗ್ಗುವಿಕೆ – ಹಣದುಬ್ಬರದ ಪ್ರಮಾಣದಲ್ಲಿ ಇಳಿತ; ತೀವ್ರ-ಹಣದುಬ್ಬರ – ನಿಯಂತ್ರಣ ಮೀರುವಂತಹ ಹಣದುಬ್ಬರ; "ಉಬ್ಬರಮಂದ ಸ್ಥಿತಿ" – ಹಣದುಬ್ಬರ, ನಿಧಾನಗತಿಯ ಆರ್ಥಿಕ ವಿಕಾಸ ಮತ್ತು ತೀವ್ರ ನಿರುದ್ಯೋಗ ಸಮಸ್ಯೆಗಳ ಒಗ್ಗೂಡಿಕೆ; ಮತ್ತು ನಾಣ್ಯವರ್ಧನೆ – ಹಣದುಬ್ಬರವಿಳಿತದ ಒತ್ತಡವನ್ನು ಕಡಿಮೆಗೊಳಿಸಲು ಬೆಲೆಗಳನ್ನು ಹಿಂದಿನ ಮಟ್ಟಕ್ಕೆ ಏರಿಸುವ ಪ್ರಯತ್ನವಾಗಿದೆ.
ಅಳತೆಗಳು
[ಬದಲಾಯಿಸಿ]ಹಣದುಬ್ಬರವನ್ನು ಸಾಮಾನ್ಯವಾಗಿ ಬೆಲೆ ಸೂಚ್ಯಂಕದ ಹಣದುಬ್ಬರದ ಪ್ರಮಾಣ ಲೆಕ್ಕಾಚಾರ ಮಾಡಿ ಅಂದಾಜು ಮಾಡಲಾಗುತ್ತದೆ, ಸಾಮಾನ್ಯವಾಗಿ ಗ್ರಾಹಕ ಬೆಲೆ ಸೂಚ್ಯಂಕ.[೧೭] ಗ್ರಾಹಕ ಬೆಲೆ ಸೂಚ್ಯಂಕ, "ವಿಶಿಷ್ಟ ಗ್ರಾಹಕ" ಕೊಂಡುಕೊಳ್ಳುವ ಆಯ್ದ ಸರಕು-ಸೇವೆಗಳ ಬೆಲೆಯನ್ನು ಅಳೆಯುತ್ತದೆ.[೧೮] ಹಣದುಬ್ಬರದ ಪ್ರಮಾಣವು ಕಾಲಾವಧಿಯಲ್ಲಿ ಬೆಲೆ ಸೂಚ್ಯಂಕ ಬದಲಾವಣೆಯ ದರವಾಗಿರುತ್ತದೆ.
ಉದಾಹರಣೆಗೆ, ಜನವರಿ 2007ರಲ್ಲಿ, U.S. ಗ್ರಾಹಕ ಬೆಲೆ ಸೂಚ್ಯಂಕ 202.416 ಇದ್ದದ್ದು, ಜನವರಿ 2008ರಲ್ಲಿ 211.080 ಆಗಿತ್ತು. CPIಯಲ್ಲಿನ 2007ರ ವಾರ್ಷಿಕ ಶೇಕಡಾವಾರು ಹಣದುಬ್ಬರದ ಪ್ರಮಾಣವನ್ನು ಗಣಿಸಲು ಬಳಸುವಂತಹ ಸೂತ್ರವು:
ಈ ಒಂದು ವರ್ಷದ ಅವಧಿಯಲ್ಲಿ ಹಣದುಬ್ಬರದ ಪ್ರಮಾಣವು 4.28% ಆಗಿತ್ತು, ಅರ್ಥಾತ್ ವಿಶಿಷ್ಟ U.S. ಗ್ರಾಹಕರಿಗಾಗಿ ಸಾಮಾನ್ಯ ಬೆಲೆಯ ಮಟ್ಟವು 2007ರಲ್ಲಿ ಏರಿಕೆಯನ್ನು ಕಂಡಿತ್ತು.[೧೯]
ಹಣದುಬ್ಬರವನ್ನು ಗಣಿಸಲು ಬಳಸಲಾದ ಇತರೆ ವ್ಯಾಪಕ ಬಳಕೆಯಲ್ಲಿರುವ ಬೆಲೆ ಸೂಚ್ಯಂಕಗಳು ಹೀಗಿವೆ:
- ಜೀವನ ವೆಚ್ಚ ಸೂಚ್ಯಂಕಗಳು (COLI) CPIನಂತೆಯೇ ಸೂಚ್ಯಂಕವಾಗಿದ್ದು ನಿಶ್ಚಿತ ಮತ್ತು ಗುತ್ತಿಗೆ ಆದಾಯಗಳನ್ನು ಹೊಂದಿಸಿ ಈ ಆದಾಯಗಳ ನೈಜ ಮೌಲ್ಯವನ್ನು ನಿರ್ವನಿಸಲು ಬಳಸಲಾಗುತ್ತದೆ.
- ಉತ್ಪಾದಕ ಬೆಲೆ ಸೂಚ್ಯಂಕ (PPIs) ತಮ್ಮ ಉತ್ಪಾದನೆಗಾಗಿ ಸ್ಥಳೀಯ ಉತ್ಪಾದಕರು ಪಡೆದ ಬೆಲೆಗಳಲ್ಲಿ ಸರಾಸರಿ ಬದಲಾವಣೆಯನ್ನು ಅಳೆಯುತ್ತದೆ.CPI ಬೆಲೆಯ ಸಬ್ಸಿಡಿ, ಲಾಭಾಂಶ ಮತ್ತು ತೆರಿಗೆಗಳು ಉತ್ಪಾದಕರು ಪಡೆದ ಮೊತ್ತಕ್ಕಿಂತ ಗ್ರಾಹಕನು ನೀಡಿದ ಮೊತ್ತವು ವ್ಯತ್ಯಾಸವಾಗುವುದೆಂಬುದರ ಮೂಲಕ ಭಿನ್ನವಾಗಿದೆ.PPIನ ಹೆಚ್ಚಳ ಮತ್ತು CPIನಲ್ಲಿನ ಇತರೆ ಅಂತಿಮ ಹೆಚ್ಚಳದ ನಡುವೆ ವಿಳಂಬವಿರುತ್ತದೆ. ಗ್ರಾಹಕ ಬೆಲೆ ಸೂಚ್ಯಂಕ ಕಚ್ಚಾ ವಸ್ತುಗಳ ಬೆಲೆಗಳ ಕಾರಣ ಉತ್ಪಾದಕರ ಮೇಲಿನ ಒತ್ತಡದ ಪ್ರಮಾಣವನ್ನು ಅಳೆಯುತ್ತದೆ.ಇದನ್ನು ಗ್ರಾಹಕರಿಗೆ "ರವಾನಿಸಬಹುದಾಗಿದೆ, ಅಥವಾ ಅದನ್ನು ಲಾಭವಾಗಿ ಸೇರಿಸಿಕೊಳ್ಳಬಹುದಾಗಿದೆ, ಅಥವಾ ಉತ್ಪಾದಕತೆಯ ಹೆಚ್ಚಳದ ಮೂಲಕ ಸರಿತೂಗಿಸಬಹುದಾಗಿದೆ.ಭಾರತ ಹಾಗೂ ಅಮೆರಿಕಾ ದೇಶದಲ್ಲಿ, PPIನ ಮೊದಲಿನ ಆವೃತ್ತಿಯನ್ನು ಸಗಟು ಬೆಲೆ ಸೂಚ್ಯಂಕ ಎನ್ನಲಾಗಿತ್ತು.
- ಸರಕು ಬೆಲೆ ಸೂಚ್ಯಂಕಗಳು ಆಯ್ದ ಸರಕುಗಳ ಬೆಲೆಯನ್ನು ಅಳತೆ ಮಾಡುತ್ತವೆ. ಪ್ರಸ್ತುತ ಸರಕು ಬೆಲೆ ಸೂಚ್ಯಂಕಗಳಲ್ಲಿ ನೌಕರನ ಬೆಲೆಗೆ ಸರಕುಗಳ ಅಂಶಗಳ ಪ್ರಾಮುಖ್ಯತೆಗಳೊಂದಿಗೆ ತೂಗಿಸಿ ನೋಡಲಾಗುತ್ತದೆ.
- ತಿರುಳು ಬೆಲೆ ಸೂಚ್ಯಂಕಗಳು: ಆಹಾರ ಮತ್ತು ತೈಲ ಮಾರುಕಟ್ಟೆಗಳಲ್ಲಿ ಪೂರೈಕೆ ಮತ್ತು ಬೇಡಿಕೆಯ ಸ್ಥಿತಿಗಳು ಬದಲಾಗುವುದರ ಕಾರಣ ಅಹಾರ ಮತ್ತು ತೈಲ ಬೆಲೆಗಳು ಬಹಳ ಬೇಗ ಬದಲಾಗಬಹುದು; ಹಾಗಾಗಿ, ಆ ಬೆಲೆಗಳನ್ನು ಸೇರಿಸಿಕೊಂಡಾಗ ಬೆಲೆ ಮಟ್ಟಗಳಲ್ಲಿ ದೀರ್ಘಕಾಲದ ಪ್ರವೃತ್ತಿಯನ್ನು ಪತ್ತೆ ಹಚ್ವುವುದು ಕಷ್ಟವಾಗಬಹುದು.ಅದಕ್ಕಾಗಿ ಹಲವು ಸಂಖ್ಯಾಶಾಸ್ತ್ರದ ನಿಯೋಗಗಳು ಸಹ 'ತಿರುಳು ಹಣದುಬ್ಬರ'ದ ಅಳತೆಯನ್ನು ವರದಿ ಮಾಡಿದ್ದು, CPIನಂತಹ ವಿಸ್ತಾರ ಬೆಲೆ ಸೂಚ್ಯಂಕದಿಂದ (ಆಹಾರ ಮತ್ತು ತೈಲದಂತಹ) ಲವಲವಿಕೆಯ ಅಂಶಗಳನ್ನು ತೆಗೆದುಹಾಕಿದೆ, ಏಕೆಂದರೆ ವಿಶಿಷ್ಟ ಮಾರುಕಟ್ಟೆಯಲ್ಲಿ ಕಡಿಮೆಗೊಂಡ ಪೂರೈಕೆ ಮತ್ತು ಬೇಡಿಕೆಯ ಪರಿಸ್ಥಿತಿಗಳು ಅದರ ಮೇಲೆ ಪ್ರಭಾವ ಬೀರಿಲ್ಲ. ಕೇಂದ್ರೀಯ ಬ್ಯಾಂಕ್‌ಗಳು ವರ್ತಮಾನ ಹಣಕಾಸು ನೀತಿಯ ಹಣದುಬ್ಬರದ ಪ್ರಭಾವವನ್ನು ಅಳತೆ ಮಾಡಲು ಇದನ್ನು ಅವಲಂಬಿಸಿದ್ದಾರೆ.
ಹಣದುಬ್ಬರದ ಇತರೆ ಸಾಮಾನ್ಯ ಅಳತೆಗಳು ಹೀಗಿವೆ:
- GDP ಹಣದುಬ್ಬರ ತಗ್ಗಿಸುವ ಸಾಧನ (ಡಿಫ್ಲೇಟರ್) ಸಮೃದ್ಧ ಸ್ಥಳೀಯ ಉತ್ಪಾದನ (GDP)ಯಲ್ಲಿರುವ ಎಲ್ಲ ಸರಕು-ಸೇವೆಗಳ ಬೆಲೆಗಳ ಅಳತೆಯಾಗಿದೆ. US ವಾಣಿಜ್ಯ ಇಲಾಖೆಯು US GDPಗಾಗಿ ಒಂದು ಡಿಫ್ಲೇಟರ್ ಸರಣಿಯನ್ನು ಪ್ರಕಟಿಸಿದ, ಅದರಂತೆ ನೈಜ GDP ಅಳತೆಯಿಂದ ಭಾಗಿಸಲಾದ ನಾಮಕಾವಸ್ಥೆ GDP ಅಳತೆ ಆಗಿದೆ.
- ಪ್ರಾದೇಶಿಕ ಹಣದುಬ್ಬರ ಶ್ರಮ ಮಾಪನಾ ಮಂಡಳಿಯು CPI-U ಲೆಕ್ಕಾಚಾರವನ್ನು USನ ವಿವಿಧ ವಲಯಗಳಾಧ್ಯಂತ ಒಡೆಯುತ್ತದೆ.
- ಐತಿಹಾಸಿಕ ಹಣದುಬ್ಬರ ಆರ್ಥಿಕ ಮಾಹಿತಿಯನ್ನು ಸಂಗ್ರಹಿಸುವುದು ಸರ್ಕಾರಕ್ಕೆ ಒಂದು ಪ್ರಮಾಣಕವಾಗುವ ಮುಂಚೆ, ಮತ್ತು ಸಂಬಂಧಿತ ಜೀವನ ಗುಣಮಟ್ಟಗಳ ಬದಲಾಗಿ ಸಮಗ್ರ ಜೀವನ ಗುಣಮಟ್ಟಗಳನ್ನು ಹೋಲಿಸಲು, ಅರ್ಥಶಾಸ್ತ್ರಜ್ಞರು ಹಣದುಬ್ಬರದ ಅಂಕಿಅಂಶಗಳನ್ನು ಗಣಿಸಿದ್ದಾರೆ. 20ನೆಯ ಶತಮಾನದ ಶುರುವಿಗೆ ಮುಂಚಿನ ಹಣದುಬ್ಬರದ ದತ್ತಾಂಶವನ್ನು ಸಂಕಲಿಕೆಯ ಬದಲಾಗಿ ಸರಕುಗಳ ತಿಳಿದ ಬೆಲೆಯನ್ನು ಹೊರಿಸಲಾಗಿತ್ತು.ತಂತ್ರಜ್ಞಾನದ ಆಸ್ತಿತ್ವಕ್ಕಾಗಿ ನೈಜ ಜೀವನಗುಣಮಟ್ಟದಲ್ಲಿನ ವ್ಯತ್ಯಾಸವನ್ನು ಸರಿಹೊಂದಿಸಲು ಇದನ್ನು ಬಳಸಲಾಗುತ್ತಿತ್ತು.
- ಸ್ವತ್ತು ಬೆಲೆ ಹಣದುಬ್ಬರ ವು ಸ್ಟಾಕ್ (ಇಕ್ವಿಟಿ) ಮತ್ತು ಜಮೀನು - ಇಂತಹ ನೈಜ ಅಥವಾ ಆರ್ಥಿಕ ಸ್ವತ್ತಿನ ಬೆಲೆಗಳಲ್ಲಿ ಅನುಚಿತ ಏರಿಕೆಯಾಗಿದೆ.ಈ ರೀತಿಯ ಒಪ್ಪಿಗೆಯಾಗಿರುವಂತಹ ಸೂಚ್ಯಂಕವಿಲ್ಲದಿದ್ದರೂ, ಕೇವಲ CPI ಅಥವಾ ತಿರುಳು ಹಣದುಬ್ಬರವನ್ನು ಸ್ಥಿರಗೊಳಿಸುವ ಬದಲಿಗೆ, ಕೆಲವು ಸ್ವತ್ತುಗಳ ಬೆಲೆಯನ್ನು ಒಳಗೊಂದಿರುವ ವಿಸ್ತೃತ ಸಾಮಾನ್ಯ ಬೆಲೆ ಮಟ್ಟ ಹಣದುಬ್ಬರದ ಅಳತೆಯನ್ನು ಸ್ಥಿರಗೊಳಿಸಬೇಕೆಂದು ಕೆಲವು ಕೇಂದ್ರೀಯ ಬ್ಯಾಂಕ್‌ಗಳು ಸಲಹೆ ನೀಡಿವೆ.ಇದಕ್ಕೆ ಕಾರಣ, ಸ್ಟಾಕ್ ಹಾಗೂ ಜಮೀನು ಬೆಲೆಗಳು ಏರಿದಾಗ ಬಡ್ಡಿ ದರವನ್ನು ಏರಿಸಿ ಸ್ವತ್ತುಗಳ ಬೆಲೆಗಳು ಇಳಿದಾಗ ಬಡ್ಡಿ ದರಗಳನ್ನು ಇಳಿಸುವುದರ ಮೂಲಕ ಕೇಂದ್ರೀಯ ಬ್ಯಾಂಕ್‌ಗಳು ಆರ್ಥಿಕ ಉಬ್ಬು ಮತ್ತು ಸ್ವತ್ತುಗಳ ಬೆಲೆಗಳ ಕುಸಿತವನ್ನು ತಡೆಗಟ್ಟುವುದರಲ್ಲಿ ಸಫಲವಾಗಬಹುದು.[dubious ]
ಅಳತೆಗಳಲ್ಲಿನ ಪ್ರಕರಣಗಳು
[ಬದಲಾಯಿಸಿ]ಆರ್ಥಿಕತೆಯಲ್ಲಿ ಹಣದುಬ್ಬರವನ್ನು ಅಳತೆ ಮಾಡಲು ಸರಕುಗಳ ಸಾಮಾನ್ಯ ಗುಂಪಿನ ಬೆಲೆಯಲ್ಲಿನ ಬದಲಾವಣೆಗಳಲ್ಲಿ ವ್ಯತ್ಯಾಸ ಮಾಡುವ ವಸ್ತುನಿಷ್ಠ ರೀತಿಯ ಅಗತ್ಯವಿದೆ, ಆ ಬೆಲೆಯ ವ್ಯತ್ಯಾಸವು ಘನ, ಪ್ರಮಾಣ ಅಥವಾ ಕಾರ್ಯಶೀಲತೆಯ ಮೇಲೂ ಸಹ ಹೋಗುತ್ತದೆ.ಉದಾಹರಣೆಗೆ, 10 ಔನ್ಸ್‌ಗಳ ಧಾನ್ಯದ ಡಬ್ಬವು, ಒಂದು ವರ್ಷದಲ್ಲಿ ಗುಣಮಟ್ಟದಲ್ಲಿ ಬದಲಾಗದೆ $0.90ರಿಂದ $1.00ಕ್ಕೆ ಬದಲಾದರೆ ಈ ಬದಲಾವಣೆಯು ಹಣದುಬ್ಬರವಾಗಿ ನಿರೂಪಣೆಯಾಗುತ್ತದೆ. ಆದಾಗ್ಯೂ, ಈ ಏಕೈಕ ಬೆಲೆಯ ಬದಲಾವಣೆಯು ಒಟ್ಟಾರೆ ಆರ್ಥಿಕತೆಯಲ್ಲಿನ ಸಾಮಾನ್ಯ ಹಣದುಬ್ಬರವನ್ನು ನಿರೂಪಿಸಲಾರದು.ಒಟ್ಟಾರೆ ಹಣದುಬ್ಬರವನ್ನು ಅಳತೆ ಮಾಡಬೇಕಾದಲ್ಲಿ, ಪ್ರಾತಿನಿಧಿಕ ಸರಕು ಮತ್ತು ಸೇವೆಗಳ ದೊಡ್ಡ 'ಬುಟ್ಟಿ'ಯ ಬೆಲೆಯ ಬದಲಾವಣೆಯನ್ನು ಅಳೆಯಲಾಗುತ್ತದೆ.ಹಲವು ಸರಕು-ಸೇವೆಗಳ "ಬುಟ್ಟಿ"ಯ ಒಗ್ಗೂಡಿದ ಬೆಲೆಯ ಉದ್ದೇಶವೇ ಬೆಲೆ ಸೂಚ್ಯಂಕದ್ದಾಗಿದೆ.ಒಗ್ಗೂಡಿಸಿದ ಬೆಲೆಯು "ಬುಟ್ಟಿ"ಯಲ್ಲಿರುವ ಸರಕುಗಳ ಸರಾಸರಿ ಬೆಲೆಯ ಮೊತ್ತವಾಗಿದೆ.ಗ್ರಾಹಕರು ಖರೀದಿಸುವ ಸರಕುಗಳ ಏಕಮಾನ ಬೆಲೆ ಮತ್ತು ಪ್ರಮಾಣವನ್ನು ಗುಣಿಸಿದಾಗ ಆ ಸರಕಿನ ಒಟ್ಟು ಬೆಲೆಯು ಲಭಿಸುತ್ತದೆ.ಆರ್ಥಿಕತೆಯ ಒಟ್ಟಾರೆ ಹಣದುಬ್ಬರದ ಮೇಲೆ ಏಕಮಾನ ಬೆಲೆಯ ಬದಲಾವಣೆಯ ಪ್ರಭಾವವನ್ನು ಅಳೆಯಲು ಒಟ್ಟು ಬೆಲೆಯ ಅಗತ್ಯವಿದೆ.ಉದಾಹರಣೆಗೆ, ಗ್ರಾಹಕ ಬೆಲೆ ಸೂಚ್ಯಂಕವು ಮನೆಮಂದಿಗಳ ಸಮೀಕ್ಷೆ ನಡೆಸಿ ಸಂಗ್ರಹಿಸಿದ ದತ್ತಾಂಶವನ್ನು ಬಳಸಿ, ಗ್ರಾಹಕರ ವಿಶಿಷ್ಟ ಸರಕು ಹಾಗೂ ಸೇವೆಗಳ ಮೇಲಿನ ಒಟ್ಟಾರೆ ಖರ್ಚನ್ನು ನಿರ್ಣಯಿಸಿ, ಇದರಂತೆ ಅಂತಹ ಸಾಮಗ್ರಿಗಳ ಸರಾಸರಿ ಬೆಲೆಯನ್ನು ತೂಗಿಸುತ್ತದೆ. ಆ ಒಟ್ಟು ಸರಾಸರಿ ಬೆಲೆಗಳನ್ನು ಒಗ್ಗೂಡಿಸಿ ಒಟ್ಟಾರೆ ಬೆಲೆಯನ್ನು ಗಣಿಸಲಾಗುತ್ತದೆ.ಕಾಲಾವಧಿಯಲ್ಲಿ ಸಮರ್ಪಕ ರೀತಿಯಲ್ಲಿ ಬೆಲೆಯ ಬದಲಾವಣೆಗಳನ್ನು ಹೊಂದಿಸಲು, ಸೂಚ್ಯಂಕಗಳು ವಿಶಿಷ್ಟವಾಗಿ "ಆಧಾರ ವರ್ಷ" ಬೆಲೆಯನ್ನು ಆಯ್ದು ಅದಕ್ಕೆ 100ರ ಬೆಲೆಯನ್ನು ನಿಗದಿಪಡಿಸುತ್ತದೆ.ಅನಂತರದ ವರ್ಷಗಳಲ್ಲಿ, ಆಧಾರ ವರ್ಷ ಬೆಲೆಗೆ ಸಂಬಂಧಿಸಿದಂತೆ ಸೂಚ್ಯಂಕ ಬೆಲೆಗಳನ್ನು ನಿಗದಿಪಡಿಸಲಾಗುತ್ತದೆ.[೧೧]
ಕಾಲಾವಧಿಯಲ್ಲಿ ಹಣದುಬ್ಬರದ ಅಳತೆಗಳನ್ನು ಆಗಾಗ್ಗೆ ಬದಲಾಯಿಸಿ, ಬುಟ್ಟಿಯಲ್ಲಿನ ಸರಕುಗಳ ನಿರ್ದಿಷ್ಟ ತೂಕಕ್ಕಾಗಿ ಅಥವಾ ವರ್ತಮಾನ ಸಾಮಗ್ರಿ ಮತ್ತು ಸೇವೆಗಳನ್ನು ಭೂತಕಾಲದ ಸಾಮಗ್ರಿ ಮತ್ತು ಸೇವೆಗಳೊಂದಿಗೆ ಹೋಲಿಸಲಾಗುತ್ತದೆ.'ವಿಶಿಷ್ಟ ಗ್ರಾಹಕರು' ಖರೀದಿಸಿದ ಸರಕು ಮತ್ತು ಸೇವೆಗಳ ವಿಧಗಳಲ್ಲಿ ಬದಲಾವಣೆಗಳನ್ನು ಪ್ರತಿಬಿಂಬಿಸಲು ಆಯ್ದ ಸರಕು ಮತ್ತು ಸೇವೆಗಳ ವಿಧಗಳಲ್ಲಿ ಅಧಿಕಾವಧಿಯಲ್ಲಿ ಹೊಂದಾಣಿಕೆಗಳನ್ನು ಮಾಡಲಾಗುತ್ತವೆ.ಹೊಸ ಉತ್ಪಾದನೆಗಳನ್ನು ಪರಿಚಯಿಸಬಹುದು, ಹಳೆಯ ಉತ್ಪಾದನೆಗಳು ಮಾಯವಾಗಬಹುದು, ಪ್ರಸ್ತುತ ಉತ್ಪಾದನೆಗಳ ಗುಣಮಟ್ಟಗಳು ಬದಲಾಗಬಹುದು ಮತ್ತು ಗ್ರಾಹಕ ಆಯ್ಕೆಗಳು ಬದಲಾಗಬಹುದು. "ಬುಟ್ಟಿ"ಯಲ್ಲಿ ಸೇರ್ಪಡೆಯಾಗಿರುವ ಸರಕು ಮತ್ತು ಸೇವೆಗಳ ವಿಧಗಳು ಮತ್ತು ಹಣದುಬ್ಬರದ ಅಳತೆಯಲ್ಲಿ ಬಳಸಲಾದ ಒಟ್ಟು ಬೆಲೆಯನ್ನು ಮಾರುಕಟ್ಟೆಯಲ್ಲಿನ ಬದಲಾವಣೆಗಳಿಗೆ ಅಣುಗುಣವಾಗಿ, ಕಾಲಾವಧಿಯಲ್ಲಿ ಬದಲಾಯಿಸಲಾಗುವುದು,
ನಿರೀಕ್ಷಿತ ಆವರ್ತನದ ಬೆಲೆ ಬದಲಾವಣೆಗಳನ್ನು ವ್ಯತ್ಯಾಸ ಮಾಡಲು ಹಣದುಬ್ಬರದ ಸಂಖ್ಯೆಗಳನ್ನು ಆಗಾಗ್ಗೆ ಕಾಲಕ್ಕನುಗುಣವಾಗಿ ಸರಿಹೊಂದಿಸಲಾಗುವುದು.ಉದಾಹರಣೆಗೆ, ಗೃಹ ಉಷ್ಣ ಸೇವಾ ಖರ್ಚುಗಳು ಶೀತಲ ಮಾಸಗಳಲ್ಲಿ ಏರುವ ನಿರೀಕ್ಷೆಯಲ್ಲಿದೆ ಮತ್ತು ಇಂಧನ ಅಥವಾ ಇಂಧನದ ಬೇಡಿಕೆಯ ಆವರ್ತಿತ ಏರಿಕೆಗೆ ಕಾಲಕ್ಕನುಗುಣವಾಗಿ ಹೊಂದಾಣಿಕೆಗಳನ್ನು ಆಗಾಗ್ಗೆ ಬಳಸಲಾಗುತ್ತದೆ. ಏಕಮಾನೀಯ ಬೆಲೆಗಳ ಸಂಖ್ಯಾಶಾಸ್ತ್ರೀಯ ವಿಸ್ವರ ಮತ್ತು ಬಾಷ್ಪಶೀಲತೆಗಳನ್ನು ತೆಗೆದುಬಿಡಲು, ಹಣದುಬ್ಬರದ ಅಂಕಿಅಂಶಗಳನ್ನು ಸರಾಸರಿಗೊಳಿಸಬಹುದು ಅಥವಾ ಸಂಖ್ಯಾಶಾಸ್ತ್ರೀಯ ತಂತ್ರಗಳಿಗೆ ಒಳಪಡಿಸಬಹುದು.
ಹಣದುಬ್ಬರದತ್ತ ನೋಟ ಹಾಯಿಸಿದಾಗ, ಆರ್ಥಿಕ ಸಂಸ್ಥೆಗಳು ಕೇವಲ ವಿಶಿಷ್ಟ ವಿಧಗಳ ಬೆಲೆಗಳ ಮೇಲೆ, ಅಥವಾ ಕೇಂದ್ರೀಯ ಬ್ಯಾಂಕ್‌ಗಳು ಹಣಕಾಸಿನ ನೀತಿಯನ್ನು ಸೂತ್ರೀಕರಿಸಲು ಬಳಸುವಂತಹ ತಿರುಳು ಹಣದುಬ್ಬರ ಸೂಚ್ಯಂಕದಂತಹ ವಿಶೇಷ ಸೂಚ್ಯಂಕ ಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಬಹುದು.
ಪ್ರಭಾವಗಳು
[ಬದಲಾಯಿಸಿ]ಸಾಮಾನ್ಯ
[ಬದಲಾಯಿಸಿ]ಬೆಲೆಗಳ ಸಾಮಾನ್ಯ ಮಟ್ಟದಲ್ಲಿ ಏರಿಕೆಯು ಚಲಾವಣೆಯ ಕೊಳ್ಳುವಿಕೆಯ ಶಕ್ತಿಯಲ್ಲಿ ಇಳಿತವನ್ನು ಸೂಚಿಸುತ್ತದೆ.ಅದೇನೆಂದರೆ, ಬೆಲೆಗಳ ಸಾಮಾನ್ಯ ಮಟ್ಟವು ಏರಿದಾಗ, ಪ್ರತಿ ಹಣಕಾಸಿನ ಏಕಮಾನವು ಕಡಿಮೆ ಸರಕು ಮತ್ತು ಸೇವೆಗಳನ್ನು ಕೊಳ್ಳುತ್ತವೆ.[೨೦] ಹಣದುಬ್ಬರದ ಪ್ರಭಾವವು ಒಂದೇ ಸಮವಾಗಿ ಹಂಚಿರುವುದಿಲ್ಲ; ಕೊಳ್ಳುವಿಕೆಯ ಶಕ್ತಿಯ ಇಳಿತದ ಈ ಪರಿಣಾಮವಾಗಿ ಕೆಲವುಗಳಲ್ಲಿ ಅಡಗಿದ ಖರ್ಚುಗಳಿದ್ದು ಇನ್ನು ಕೆಲವಲ್ಲಿ ಅನುಕೂಲಗಳಿರುತ್ತವೆ.ಉದಾಹರಣೆಗೆ, ಸಾಲಗಳ ಅಥವಾ ಠೇವಣಿಗಳ ಮೇಲೆ ಬಡ್ಡಿ ಸ್ವೀಕರಿಸುವ ಸಾಲದಾತರು ಅಥವಾ ಠೇವಣಿದಾರರು ಹಣದುಬ್ಬರದ ಕಾರಣ, ತಮ್ಮ ಬಡ್ಡಿ ಸಂಪಾದನೆಗಳ ಕೊಳ್ಳುವಿಕೆಯ ಶಕ್ತಿಯನ್ನು ಕಳೆದುಕೊಳ್ಳುತ್ರಾರೆ; ಸಾಲದಾರರು ಅನುಕೂಲಗಳನ್ನು ಪಡೆಯುತ್ತಾರೆ.ನಗದು ಸ್ವತ್ತುಗಳನ್ನು ಹೊಂದಿರುವ ಒಬ್ಬ ವ್ಯಕ್ತಿ ಅಥವಾ ಸಂಸ್ಥಾನಗಳು ಅವರ ಹಿಡುವಳಿಗಳ ಕೊಳ್ಳುವಿಕೆಯ ಶಕ್ತಿಯಲ್ಲಿ ಇಳಿತವನ್ನು ಅನುಭವಿಸುತ್ತಾರೆ. ಕಾರ್ಮಿಕರಿಗೆ ಮತ್ತು ನಿವೃತ್ತಿ ವೇತನದಾರರಿಗೆ, ಅದರಲ್ಲೂ ನಿಶ್ಚಿತ ಸಂದಾಯಗಳನ್ನು ಸ್ವೀಕರಿಸುವವರಿಗೆ ಸಂದಾಯಗಳು ಆಗಾಗ್ಗೆ ಹಣದುಬ್ಬರದ ಹಿಂದುಳಿಯುತ್ತದೆ.[೧೧]
ಬೆಲೆ ಮಟ್ಟದಲ್ಲಿ ಏರಿಕೆಯು (ಹಣದುಬ್ಬರವು) ಹಣದ (ಕ್ರಿಯಾ ಚಲಾವಣೆ)ಯ, ಹಣದ ರೀತಿಯಲ್ಲಿ ಬೆಲೆ ಕಟ್ಟಲಾದ (ಉದಾಹರಣೆಗೆ ಸಾಲಗಳು, ಬಾಂಡ್‌ಗಳು, ನಿಶ್ಚಿತ ನಿವೃತ್ತಿ ವೇತನದ ಸಂದಾಯಗಳು ಮತ್ತು ಮತ್ತು ಇತರೆ ಹಣಕಾಸು ಸ್ವರೂಪದ ವಸ್ತುಗಳ ನೈಜ ಮೌಲ್ಯವನ್ನು ಕೊರೆಯುತ್ತದೆ.ಆದಾಗ್ಯೂ ಹಣದುಬ್ಬರವು ಹಣಕಾಸೇತರ ವಸ್ತು ಮತ್ತು ಹಣದ ರೂಪದಲ್ಲಿ ನಿಶ್ಚಿತ ಬೆಲೆಯಿರದ ವಸ್ತುಗಳು (ಉದಾಹರಣೆಗೆ, ಕಾರ್‌ಗಳು, ಚಿನ್ನ, ಜಮೀನಿನಂತಹ ಸರಕುಗಳು) ಗಳ ನೈಜ ಮೌಲ್ಯದ ಮೇಲೆ ಯಾವ ಪ್ರಭಾವವನ್ನು ಹೊಂದಿರುವುದಿಲ್ಲ.[೨೧]
ನಕಾರಾತ್ಮಕ
[ಬದಲಾಯಿಸಿ]ಹೆಚ್ಚಿನ ಅಥವಾ ಮುಂಗಾಣಲಾಗದ ಹಣದುಬ್ಬರದ ದರಗಳು ಒಟ್ಟಾರೆ ಆರ್ಥಿಕತೆಗೆ ಕೆಟ್ಟದು.ಅವು ಮಾರುಕಟ್ಟೆಗೆ ಅದಕ್ಞತೆಯನ್ನು ಸೇರಿಸಿ, ಉದ್ದಿಮೆಗಳಿಗೆ ಬಜೆಟ್ ಮತ್ತು ಇತರೆ ದೀರ್ಘಕಾಲಾವಧಿಯ ವ್ಯಾವಹಾರಿಕ ರೂಪುರೇಖೆಯನ್ನು ಹಾಕದಂತೆ ಮಾಡುತ್ತವೆ.ಹಣದುಬ್ಬರವು ಉತ್ಪಾದಕತೆಯ ಮೇಲೆ ಜಗ್ಗುವಂತಹ ಪ್ರಭಾವ ಬೀರಿ, ನಗ-ನಾಣ್ಯ ಹಣದುಬ್ಬರದಿಂದ ಆಗುವ ಲಾಭ-ನಷ್ಟಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಲು ಉದ್ದಿಮೆಗಳು ಉತ್ಪಾದನೆ ಮತ್ತು ಸೇವೆಗಳಿಂದ ಸಂಪನ್ಮೂಲಗಳನ್ನು ದೂರ ಸರಿಸುವಂತೆ ಮಾಡುತ್ತದೆ.[೧೧] ಹಣದ ಭವಿಷ್ಯದಲ್ಲಿ ಕೊಳ್ಳುವ ಶಕ್ತಿಯ ಬಗೆಗಿನ ಅನಿಶ್ಚಿತತೆಯು ಬಂಡವಾಳ ಹೂಡಿಕೆ ಮತ್ತು ಉಳಿತಾಯ ಮಾಡುವುದನ್ನು ಹಿಂಜರಿಯುವಂತೆ ಮಾಡುತ್ತದೆ.[೨೨] ಹಣದುಬ್ಬರವು ಅಡಗಿದ ತೆರಿಗೆ ಹೆಚ್ಚಳಗಳನ್ನು ವಿಧಿಸಬಹುದು, ಉಬ್ಬಿದ ಸಂಪಾದನೆಗಳು ಕಂದಾಯದಾರರನ್ನು ಹೆಚ್ಚಳ ಕಂದಾಯ ದರಗಳ ಆವರಣದೊಳಗೆ ತಳ್ಳಬಹುದು.
ಹೆಚ್ಚಿದ ಹಣದುಬ್ಬರದಲ್ಲಿ, ಕೊಳ್ಳುವಿಕೆ ಶಕ್ತಿಯು ಪುನ: ಹಂಚಲಾಗಿ,ನಿವೃತ್ತ ವೇತನದಾರರಂತಹ ನಿಶ್ಚಿತ ಆದಾಯಗಳಿಂದ ಹಣದುಬ್ಬರದೊಂದಿಗೆ ಸರಿಹೊಂದಬಲ್ಲ ವ್ಯತ್ಯಾಸವುಳ್ಳ ಆದಾಯಗಳತ್ತ ಹರಡುತ್ತಿದೆ.[೧೧] ಕೊಳ್ಳುವಿಕೆಯ ಶಕ್ತಿಯ ಪುನ: ಹಂಚಿಕೆಯು ಅಂತಾರಾಷ್ಟ್ರೀಯ ವಹಿವಾಟು ಪಾಲುದಾರರ ನಡುವೆಯೂ ಸಂಭವಿಸುತ್ತದೆ.ಎಲ್ಲಿ ನಿಶ್ಚಿತ ವಿನಿಮಯ ದರಗಳು ವಿಧಿಸಲಾಗಿವೆಯೋ, ಒಂದು ಆರ್ಥಿಕತೆಯಲ್ಲಿ ಏರುತ್ತಿರುವ ಹಣದುಬ್ಬರವು ರಫ್ತುಗಳನ್ನು ಇನ್ನೂ ದುಬಾರಿಯನ್ನಾಗಿಸಿ ವಹಿವಾಟಿನ ಸಮತೋಲನದ ಮೇಲೆ ಪ್ರಭಾವ ಬೀರುತ್ತದೆ. ಮುಂಗಾಣಲಾಗದ ಹಣದುಬ್ಬರದಿಂದ ಚಲಾವಣೆ ವಿನಿಮಯ ಬೆಲೆಗಳಲ್ಲಿ ಹೆಚ್ಚಿದ ಅಸ್ಥಿರತೆಯ ಕಾರಣ, ವಹಿವಾಟಿಗೆ ನಕಾರಾತ್ಮಕ ಪ್ರಭಾವಗಳಿರಬಹುದು.
- ಬೆಲೆ-ತಳ್ಳುವ ಹಣದುಬ್ಬರ
- ಏರುತ್ತಿರುವ ಹಣದುಬ್ಬರವು, ಗ್ರಾಹಕ ಬೆಲೆಗಳೊಂದಿಗೆ ಸರಿಹೊಂದಿಸಿಕೊಳ್ಳಲು ನೌಕರರನ್ನು ವೇತನಗಳ ಹೆಚ್ಚಳದ ಬೇಡಿಕೆಯನ್ನು ಮುಂದಿಡಲು ಪ್ರೇರೇಪಿಸಬಹುದು.ವೇತನದ ಹೆಚ್ಚಳವು ಸರದಿಯಲ್ಲಿ ಹಣದುಬ್ಬರದ ಹೆಚ್ಚಳಕ್ಕೆ ಕಾರಣವಾಗಬಹುದು.ಸಾಮೂಹಿಕ ಚೌಕಾಸಿಯ ವಿಚಾರದಲ್ಲಿ, ವೇತನಗಳನ್ನು ಬೆಲೆಯ ನಿರೀಕ್ಷೆ ಕಾರಣವಾಗಿಟ್ಟು ಹಣದುಬ್ಬರವು ಹೆಚ್ಚಳದ ಪ್ರವೃತಿಯನ್ನು ತೋರಿದಾಗ ವೇತನಗಳನ್ನೂ ಹೆಚ್ಚಿಸಬೇಕಾಗುತ್ತದೆ.ಇದರಿಂದ ವೇತನದ ಏರಿಕೆಯಾಗಬಹುದು.[೨೩] ಒಂದು ರೀತಿಯಲ್ಲಿ ಹಣದುಬ್ಬರವು ಇನ್ನಷ್ಟು ಉಬ್ಬಿದ ನಿರೀಕ್ಷೆಗಳಿಗೆ ಎಡೆ ಮಾಡಿಕೊಡಬಹುದು.
- ಕೂಡಿಡುವಿಕೆ
- ಅಪಮೌಲ್ಯವಾಗುವ ಮುಂಚೆಯೇ ಹೆಚ್ಚುವರಿ ನಗದನ್ನು ವಿಲೇವಾರಿ ಮಾಡಲು ಕಾರ್ಯರೂಪಕ್ಕೆ ಬರಬಲ್ಲ ಪರ್ಯಾಯಗಳ ಅನುಪಸ್ಥಿತಿಯಲ್ಲಿ ಜನರು ಅಂಗಡಿಗಳಲ್ಲಿ ಗ್ರಾಹಕ ಬೆಲೆಬಾಳುವ ವಸ್ತುಗಳನ್ನು ಕೊಂಡು ಶೇಖರಿಸಿಟ್ಟುಕೊಂಡು, ಹಾಗಾಗಿ ಕೂಡಿಟ್ಟ ಸರಕುಗಳ ಕೊರತೆಯನ್ನುಂಟುಮಾಡುತ್ತಾರೆ.
- ಅತಿ-ಹಣದುಬ್ಬರ
- ಹಣದುಬ್ಬರವು ಸಂಪೂರ್ಣವಾಗಿ ಹತೋಟಿ ಮೀರಿ ಮೇಲಿನ ದಿಕ್ಕಿನಲ್ಲಿ ಹೋದರೆ, ಆರ್ಥಿಕತೆಯ ಸಹಜ ಕಾರ್ಯನಿರ್ವಹಣೆಗೆ ಅಡಿಯಾಗಿ ಅದರ ಪೂರೈಕೆಯ ಕ್ಷಮತೆಯ ಮೇಲೆ ನಕಾರಾತ್ಮಕ ಪ್ರಭಾವ ಬೀರಬಹುದು.
- ನಿಗದಿಸಬಲ್ಲ ದಕ್ಷತೆ
- ಸರಕೊಂದರ ಪೂರೈಕೆ ಅಥವಾ ಬೇಡಿಕೆಯು ಸಹಜವಾಗಿಯೂ ಅದರ ಬೆಲೆಯು ಬದಲಾಗುವಂತೆ ಮಾಡಿ, ಕೊಳ್ಳುವವರಿಗೆ ಮತ್ತು ಮಾರುವವರಿಗೆ ಮಾರುಕಟ್ಟೆಯ ಸ್ಥಿತಿಗೆ ಪ್ರತಿಕ್ರಿಯೆಯಾಗಿ ಸಂಪನ್ಮೂಲಗಳನ್ನು ಪುನರ್ನಿಗದಿಪಡಿಸಲು ಸಂಕೇತವನ್ನು ನೀಡುತ್ತದೆ.ಆದರೆ, ಹಣದುಬ್ಬರದ ಕಾರಣ ಬೆಲೆಗಳು ಒಂದೇ ಸಮನೆ ಬದಲಾಗುತ್ತಿರುವಾಗ, ಸಾಚಾ ಬೆಲೆ ಸಂಕೇತಗಳು ಕರ್ಕಶ ಶಬ್ದಗಳ ನಡುವೆ ಅದೆಲ್ಲೋ ಕಳೆದುಹೋಗುತ್ತವೆ. ಹಾಗಾಗಿ ನಿಯೋಗಿಗಳು ಅವುಗಳಿಗೆ ಬೇಗನೆ ಪ್ರತಿಕ್ರಿಯೆ ನೀಡಲಾರರು.ಇದರಿಂದ ನಿಗದಿಸಬಲ್ಲ ದಕ್ಷತೆಯ ನಷ್ಟವಾಗುತ್ತದೆ.
- ಪಾದರಕ್ಷೆಯ ತೊಗಲಿನ ಬೆಲೆ
- ಹೆಚ್ಚಿದ ಹಣದುಬ್ಬರವು ಹಿಡುವಳಿಗಳ ನಗದು ಜಮೆಯ ಅವಕಾಶ ವೆಚ್ವವನ್ನು ಹಚ್ಚಿಸಿ ಜನರನ್ನು ಸ್ವತ್ತಿನ ಹೆಚ್ಚಿನ ಪ್ರಮಾಣವನ್ನು ಬಡ್ಡಿ ಸಂದಾಯ ಮಾಡುವ ಖಾತೆಗಳಲ್ಲಿ ಹಿಡಿದಿಟ್ಟುಕೊಳ್ಳಲು ಪ್ರೇರೇಪಿಸುತ್ತದೆ. ಆದಾಗ್ಯೂ, ವ್ಯವಹಾರಕ್ಕಾಗಿ ನಗದು ಬೇಕಾಗಿರುವುದರಿಂದ, ಇದರ ಅರ್ಥ, ನಗದನ್ನು ಖಾತೆಯಿಂದ ತೆಗೆಯಲು ಬ್ಯಾಂಕಿಗೆ ಹಲವು ಬಾರಿ ಹೋಗಿ ಬರಬೇಕಾಗುತ್ತದೆ, ಹಾಗಾಗಿ ಪ್ರತಿಯೊಂದು ಬಾರಿಯೂ "ಪಾದರಕ್ಷೆಯ ತೊಗಲ"ನ್ನು ಸವೆಸುವುದೆಂದು.
- ಸೂಚಿಯ ವೆಚ್ಚಗಳು
- ಹೆಚ್ಚಿದ ಹಣದುಬ್ಬರದೊಂದಿಗೆ, ಆರ್ಥಿಕತೆಯಾದ್ಯಂತ ಬದಲಾವಣೆಗಳಿಗೆ ಅನುಗುಣವಾಗಿ ಉದ್ದಿಮೆಗಳು ಅವರ ಬೆಲೆಗಳನ್ನು ಆಗಾಗ್ಗೆ ಬದಲಾಯಿಸಬೇಕು.ಆದರೂ, ಸ್ಪಷ್ಟವಾಗಿ ಆಗಲಿ (ಉದಾಹರಣೆಗೆ, ಹೊಸ ಸೂಚಿಯನ್ನು ಅಚ್ಚು ಮಾಡುವ ಕೆಲಸ) ಅಥವಾ ಅಡಕವಾಗಿ ಆಗಲಿ, ಆಗಾಗ್ಯೆ ಬೆಲೆಗಳನ್ನು ಬದಲಾಯಿಸುವುದೇ ಒಂದು ದುಬಾರಿ ಕ್ರಮವಾಗಿದೆ.
- ವ್ಯವಹಾರ ವರ್ತುಲಗಳು
- ಆಸ್ಟ್ರಿಯನ್ ವ್ಯವಹಾರ ವರ್ತುಲ ಸಿದ್ಧಾಂತದ ಪ್ರಕಾರ ಹಣದುಬ್ಬರವು ವ್ವವಹಾರದ ವರ್ತುಲಕ್ಕೆ ನಾಂದಿಯಾಗುತ್ತದೆ. ಇದು ಹಣದುಬ್ಬರದ ಅತಿ ಹಾಳುಗೆಡಹುವ ಪ್ರಭಾವವೆಂದು ಆಸ್ಟ್ರಿಯನ್ ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.ಆಸ್ಟ್ರಿಯನ್ ಸಿದ್ಧಾಂತದ ಪ್ರಕಾರ, ಕೃತಕವಾಗಿ ಕಡಿಮೆ ಬಡ್ಡಿ ದರಗಳು ಮತ್ತು ಸಂಬಂಧಿತ ಹಣ ಪೂರೈಕೆಯಲ್ಲಿ ಹೆಚ್ಚಳವು ದುಡುಕಿನ, ಊಹನದ ಎರವಲು,ಇದರ ಪರಿಣಾಮವಾಗಿ ಸರಿಯಿಲ್ಲದ ಹೂಡಿಕೆಗಳ ಗೊಂಚಲುಗಳು, ಅನಂತರ ನಿರ್ವಹಿಸಲಾಗದಿದ್ದಾಗ ಅವುಗಳನ್ನು ಮುಚ್ಚಿಸುವುದಾಗಿದೆ.[೨೪]
ಸಕಾರಾತ್ಮಕ
[ಬದಲಾಯಿಸಿ]- ಶ್ರಮ-ಮಾರುಕಟ್ಟೆ ಸರಿಹೊಂದಿಕೆಗಳು
- ಕಡಿಮೆ ವೇತನಗಳನ್ನು ಇಳಿಮುಖವಾಗಿ ಸರಿಹೊಂದಿಸುವುದು ನಿಧಾನವಾಗುತ್ತದೆಂದು ಕೇನ್ಸ್ ಪಂಥೀಯರು ನಂಬಿದ್ದಾರೆ.ಶ್ರಮ ಮಾರುಕಟ್ಟೆಯಲ್ಲಿ ದೀರ್ಘಕಾಲದ ಅಸಮಾನತೆ ಮತ್ತು ಹೆಚ್ಚಿದ ನಿರುದ್ಯೋಗಕ್ಕೆ ನಾಂದಿಯಾಗುತ್ತದೆ.ಕಡಿಮೆ ವೇತನಗಳನ್ನು ಒಂದೇ ರೀತಿಯಲ್ಲಿಟ್ಟರೆ ಹಣದುಬ್ಬರವು ನೈಜ ವೇತನವನ್ನು ಕಡಿಮೆಗೊಳಿಸುವುದಾದ್ದರಿಂದ, ಸಣ್ಣ ಪ್ರಮಾಣದ ಹಣದುಬ್ಬರ ಆರ್ಥಿಕತೆಗೆ ಒಳ್ಳೆಯದು, ಏಕೆಂದರೆ ಶ್ರಮ ಮಾರುಕಟ್ಟೆಗಳು ಬೇಗನೆ ಸಮತುಲ ಸ್ಥಿತಿಗೆ ತಲುಪುತ್ತದೆಂದು ಕೇನ್ಸ್ ಪಂಥೀಯರು ವಾದಿಸುತ್ತಾರೆ.
- ಸಾಲ ಮುಕ್ತ
- ಸಾಲಗಾರರು ನಿಶ್ಚಿತ, ಕಡಿಮೆ ಬಡ್ಡಿದರವುಳ್ಳ ಋಣವಿದ್ದವರು, ಹಣದುಬ್ಬರವು ಹಚ್ಚಾದಾಗ "ನೈಜ" ಬಡ್ಡಿ ದರದಲ್ಲಿ ಕಡಿತವನ್ನು ಕಾಣುತ್ತಾರೆ.ಸಾಲದ ಮೇಲಿನ "ನೈಜ" ಬಡ್ಡಿಯು ಕಡಿಮೆ ದರದಿಂದ ಹಣದುಬ್ಬರದ ದರವನ್ನು ಕಳೆದಾಗ ಲಭಿಸುತ್ತದೆ.[dubious ] (R=n-i) ಉದಾಹರಣೆಗೆ, ನೀವು ಕಡಿತ ಬಡ್ಡಿ ದರ 6%ರಂತೆ ಸಾಲ ತೆಗೆದುಕೊಂಡು, ಹಣದುಬ್ಬರದ ದರವು 3% ಇದ್ದಲ್ಲಿ, ನೀವು ಸಲಕ್ಕೆ ಪಾವತಿಸುತ್ತಿರುವ ನೈಜ ಬಡ್ಡಿ ದರವು 3%. ನೀವು 6% ನಿಶ್ಚಿತ ಬಡ್ಡಿ ದರದಲ್ಲಿ ಸಾಲ ಪಡೆದಿದ್ದು, ಹಣದುಬ್ಬರವು 20%ಕ್ಕೆ ಏರಿದಲ್ಲಿ ನಿಮ್ಮ ನೈಜ ಬಡ್ಡಿ ದರವು -14% ಆಗಬಹುದು.ಬ್ಯಾಂಕ್‌ಗಳು ಮತ್ತು ಇತರೆ ಸಾಲದಾತರು ಹಣದುಬ್ಬರದ ಪ್ರೀಮಿಯಂನ್ನು ಸಾಲದ ವೆಚ್ಚಮೊಂದಿಗೆ ಸೇರಿಸಿ ಹೆಚ್ಚಿದ ಬಡ್ಡಿದರವನ್ನು ಹೇಳಿ ಅಥವಾ ಬಡ್ಡಿದರವನ್ನು ವ್ಯತ್ಯಾಸವಾಗುವ ದರದಲ್ಲಿ ನಿಗದಿಪಡಿಸಿ ಈ ಹಣದುಬ್ಬರದ ಅಪಾಯ ಸಾಧ್ಯತೆಗಾಗಿ ಸರಿಹೊಂದಿಸುವರು.
- ಚಾತುರ್ಯದಿಂದ ನಡೆಸಲು ಅವಕಾಶ
- ಹಣ ಪೂರೈಕೆಯನ್ನು ನಿಯಂತ್ರಿಸಲು ಪ್ರಾಥಮಿಕ ಸಾಧನೆಗಳು ರಿಯಾಯಿತಿ ದರ (ಬ್ಯಾಂಕ್‌ಗಳು ಕೇಂದ್ರೀಯ ಬ್ಯಾಂಕ್‌ನಿಂದ ಎರವಲು ಪಡೆಯಬಹುದಂತಹ ದರ) ಮತ್ತು ಮುಕ್ತ ಮಾರುಕಟ್ಟೆ ಕಾರ್ಯನಿರ್ವಹಣೆಗಳು ಇವು ಕಡಿಮೆ ಬಡ್ಡಿ ದರವನ್ನು ಪ್ರಭಾವಕ್ಕೊಳಪಡಿಸುವ ಉದ್ದೇಶದೊಂದಿಗೆ ಬಾಂಡ್ ಮಾರುಕಟ್ಟೆಯೊಳಗೆ ಕೇಂದ್ರೀಯ ಬ್ಯಾಂಕ್‌ನ ಮಧ್ಯಪ್ರವೇಶವಾಗಿದೆ.ಈಗಾಗಲೇ ಅತಿಕಡಿಮೆ ಅಥವಾ ಕೆಲವೊಮ್ಮೆ ಶೂನ್ಯ ಬಡ್ಡಿದರಗಳಿರುವಾಗ ಆರ್ಥಿಕತೆಯು ಹಿಂಜರಿತದಲ್ಲಿ ಕಂಡುಬಂದಲ್ಲಿ, ಆರ್ಥಿಕತೆಗೆ ಪುನಶ್ಚೇತನ ನೀಡಲು ಬ್ಯಾಂಕ್‌ಗಳು ಈ ಬಡ್ಡಿದರಗಳನ್ನು ಇನ್ನಷ್ಟು ಕಡಿಮೆಗೊಳಿಸಲು ಸಾದ್ಯವಾಗದು (ಏಕೆಂದರೆ ನಕಾರಾತ್ಮಕ ಬಡ್ಡಿ ದರಗಳು ಸಾಧ್ಯವೇ ಇಲ್ಲ) - ಈ ಪರಿಸ್ಥಿತಿಗೆ ಆಸ್ತಿಬಾಬ್ತು ಬೋನು ಎನ್ನಲಾಗುತ್ತದೆ. ಮಧ್ಯಸ್ಥವಾದ ಹಣದುಬ್ಬರದ ಪ್ರಮಾಣವು ಬಡ್ಡಿ ದರಗಳು ಸೊನ್ನೆಗಿಂತಲೂ ಹೆಚ್ಚಾಗಿರುವಂತೆ ಮಾಡುತ್ತದೆ; ಅಗತ್ಯವಿದ್ದಲ್ಲಿ ಬ್ಯಾಂಕ್ ಈ ಬಡ್ಡಿ ದರವನ್ನು ಕಡಿತಗೊಳಿಸಬಹುದು.
- ಟೊಬಿನ್ ಪ್ರಭಾವ
- ಮಧ್ಯಸ್ಥವಾದ ಹಣದುಬ್ಬರವು ಆರ್ಥಿಕತೆಯಲ್ಲಿ ಹೂಡಿಕೆಯನ್ನು ಹೆಚ್ಚಿಸಬಹುದು, ಹಾಗಾಗಿ ವೇಗವಾದ ಅಭಿವೃದ್ಧಿ ಅಥವಾ ಕನಿಷ್ಠ ಪಕ್ಷ ಹೆಚ್ಚಿನ ಮಟ್ಟದಲ್ಲಿ ಒಂದೇ ಸಮಾನಾದ ವೇತನವಿರುತ್ತದೆ ಎಂದು ನೊಬೆಲ್ ಬಹುಮಾನ ಪುರಸ್ಕೃತ ಅರ್ಥಶಾಸ್ತ್ರಜ್ಞ ಜೇಮ್ಸ್ ಟೊಬಿನ್ ಒಂದು ಹಂತದಲ್ಲಿ ವಾದಿಸಿದ್ದರು.ಹಣದುಬ್ಬರವು ಭೌತಿಕ ಬಂಡವಾಳದಂತಹ ನೈಜ ಸ್ವತ್ತಿಗೆ ಸಂಬಂಧಿತ ಹಣಕಾಸಿನ ಸ್ವತ್ತಿನ ಮೇಲಿನ ಪ್ರತಿಫಲ ಲಾಭವನ್ನು ಕಡಿಮೆಗೊಳಿಸುವುದು ಇದಕ್ಕೆ ಕಾರಣವಾಗಿದೆ.ಹಣದುಬ್ಬರವನ್ನು ತಡೆಗಟ್ಟಲು, ಹೂಡಿಕೆದಾರರು ತಮ್ಮ (ಹಣ ಮತ್ತು ಹಣದುಬ್ಬರಕ್ಕೆ ಈಡಾಗುವ ಇತರೆ) ಸ್ವತ್ತಿನ ಬದಲಾಗಿ ನೈಜ ಬಂಡವಾಳ ಯೋಜನೆಗಳಲ್ಲಿ ತೊಡಗಿಸಲಿಚ್ಛಿಸುತ್ತಾರೆ.ನೋಡಿ: ಟೊಬಿನ್ ಹಣಕಾಸಿನ ಮಾದರಿ [೨೫]
ಕಾರಣಗಳು
[ಬದಲಾಯಿಸಿ]
ಐತಿಹಾಸಿಕವಾಗಿ, ಬಹಳಷ್ಟು ಅರ್ಥಿಕ ಸಾಹಿತ್ಯಗಳು ಹಣದುಬ್ಬರದ ಹಿಂದಿನ ಕಾರಣಗಳೇನು ಮತ್ತು ಅದರ ಪ್ರಭಾವಗಳೇನೆಂಬುದರ ಬಗ್ಗೆ ವೈಚಾರಿಕ ರೂಪದಲ್ಲಿದ್ದವು.ಹಣದುಬ್ಬರದ ಕಾರಣಗಳ ಬಗ್ಗೆ ವಿಭಿನ್ನ ವಿಚಾರಪಂಥಗಳಿದ್ದವು.ಹಲವನ್ನು ಎರಡು ಸ್ಥೂಲ ಕ್ಷೇತ್ರಗಳಾಗಿ ವಿಂಗಡಿಸಬಹುದಾಗಿವೆ: ಹಣದುಬ್ಬರದ ಗುಣಮಟ್ಟ ಸಿದ್ಧಾಂತಗಳು ಮತ್ತು ಹಣದುಬ್ಬರದ ಪ್ರಮಾಣ ಸಿದ್ದಾಂತಗಳು.ಮಾರಾಟಗಾರರು ಹಣಕಾಸನ್ನು ಸ್ವೀಕರಿಸಿ ಅದನ್ನು ಆನಂತರ ಅದೇ ಹಣಕಾಸನ್ನು ನೀಡಿ ಸರಕುಗಳನ್ನು ಕೊಳ್ಳುವ ನಿರೀಕ್ಷೆಯ ಮೇಲೆ ಹಣದುಬ್ಬರದ ಗುಣಮಟ್ಟದ ಸಿದ್ಧಾಂತವು ನಿಂತಿದೆ.ಹಣದ ಪೂರೈಕೆ, ಅದರ ವೇಗ, ಮತ್ತು ವಿನಿಮಯದ ಕನಿಷ್ಠ ಮೌಲ್ಯ - ಇವೆಲ್ಲದಕೂ ಸಂಬಂಧಿಸುವ ಹಣದ ಪ್ರಮಾಣ ಸಮೀಕರಣದ ಮೇಲೆ ಹಣದುಬ್ಬರದ ಪರಿಮಾಣ ಸಿದ್ಧಾಂತವು ನಿಲ್ಲುತ್ತದೆ.ಆಡಮ್ ಸ್ಮಿತ್ ಮತ್ತು ಡೇವಿಡ್ ಹ್ಯೂಮ್ ಹಣಕ್ಕಾಗಿ ಹಣದುಬ್ಬರದ ಪ್ರಮಾಣದ ಸಿದ್ಧಾಂತ ಮತ್ತು ಉತ್ಪಾದನೆಗಾಗಿ ಹಣದುಬ್ಬರದ ಗುಣಮಟ್ಟದ ಸಿದ್ಧಾಂತವನ್ನು ಪ್ರಸ್ತಾಪಿಸಿದರು.[ಸೂಕ್ತ ಉಲ್ಲೇಖನ ಬೇಕು]
ಸದ್ಯಕ್ಕೆ ಹಣದ ಪರಿಮಾಣ ಸಿದ್ಧಾಂತವು ಹಣದುಬ್ಬರದ ನಿಖರವಾದ ಮಾದರಿಯಾಗಿ ವ್ಯಾಪಕವಾಗಿ ಸ್ವೀಕಾರವಾಗಿದೆ.ಪರಿಣಾಮವಾಗಿ, ಹಣದುಬ್ಬರದ ಪ್ರಮಾಣವು ಅಗತ್ಯವಾಗಿಯೂ ಹಣದ ಪೂರೈಕೆಯ ಬೆಳವಣಿಗೆ ದರವನ್ನು ಅವಲಂಬಿಸಿದೆಯೆಂಬುದು ಅರ್ಥಶಾಸ್ತ್ರಜ್ಞರ ನಡುವೆ ಸ್ಥೂಲವಾದ ಒಪ್ಪಂದವಾಗಿದೆ.ಆದರೆ, ಅಲ್ಪ ಮತ್ತು ಮಧ್ಯಮಾವಧಿಗಳಲ್ಲಿ ಹಣದುಬ್ಬರವು ಆರ್ಥಿಕತೆಯ ಪೂರೈಕೆ ಮತ್ತು ಬೇಡಿಕೆಯ ಒಟ್ಟಡಗಳಿಂದ ಪ್ರಭಾವಿತವಾಗಬಹುದು, ಹಾಗೂ ಸಂಬಂಧಿತ ವೇತನ, ಬೆಲೆ ಮತ್ತು ಬಡ್ಡಿ ದರಗಳ ಸ್ಥಿತಿಸ್ಥಾಪಕತೆಯಿಂದ ಪರಿಣಾಮಕ್ಕೀಡಾಗುತ್ತದೆ.[೨೬] ಇಂತಹ ಅಲ್ಪಾವಧಿಯ ಪ್ರಭಾವಗಳು ಪ್ರಮುಖವಾಗುವಷ್ಟು ದೀರ್ಘಕಾಲ ಉಳಿಯುತವೋ ಇಲ್ಲವೋ ಎಂಬುದು ಪ್ರಶ್ನೆಯು ಹಣಕಾಸು-ಪರ ಹಾಗು ಕೇನ್ಸ್ ಪಂಥೀಯ ಅರ್ಥಶಾಸ್ತ್ರಜ್ಞರ ನಡುವೆ ಇರುವ ಚರ್ಚೆಯಾಗಿದೆ.ಹಣಕಾಸುವಾದದಲ್ಲಿ ಬೆಲೆಗಳು ಮತ್ತು ವೇತನಗಳು ಇತರೆ ಕಾರಣಗಳನ್ನು ಸಾಮಾನ್ಯ ಪ್ರವೃತ್ತಿಯಲ್ಲಿ ಕನಿಷ್ಠವಾಗುವಂತೆ ಬಹಳ ಬೇಗ ಸರಿಹೊಂದಿಕೊಳ್ಳುತ್ತವೆ. ಕೇನ್ಸ್ ಪಂಥೀಯ ದೃಷ್ಟಿಯಲ್ಲಿ, ಆರ್ಥಿಕತೆಯಲ್ಲಿ ಜನರ ದೃಷ್ಟಿಯಿಂದ, ಬೆಲೆಗಳು ಮತ್ತು ವೇತನಗಳು ವಿವಿಧ ದರಗಳಲ್ಲಿ ಸರಿಹೊಂದುತ್ತವೆ ಹಾಗೂ ಈ ವ್ಯತ್ಯಾಸಗಳು ನೈಜ ಉತ್ಪಾದನೆಗಳ ಮೇಲೆ ಸಾಕಷ್ಟು ದೀರ್ಘಕಾಲ ಉಳಿಯುವಂತಹ ಪ್ರಭಾವ ಬೀರುತ್ತವೆ.
ಕೇನ್ಸ್ ಪಂಥೀಯ ದೃಷ್ಟಿ
[ಬದಲಾಯಿಸಿ]ಕೇನ್ಸ್ ಪಂಥೀಯ ಆರ್ಥಿಕ ಸಿದ್ಧಾಂತದ ಪ್ರಸ್ತಾಪದ ಪ್ರಕಾರ, ಹಣದ ಪೂರೈಕೆಯಲ್ಲಿ ಬದಲಾವಣೆಗಳು ಬೆಲೆಗಳ ಮೇಲೆ ನೇರವಾದ ಪರಿಣಾಮವನ್ನು ಬೀರುವುದಿಲ್ಲ ಹಾಗೂ ಗೋಚರಿಸುವ ಹಣದುಬ್ಬರವು ಆರ್ಥಿಕತೆಯೊಳಗಿನ ಬೆಲೆಗಳ ಮೂಲಕ ವ್ಯಕ್ತವಾಗುವ ಒತ್ತಡಗಳ ಪರಿಣಾಮವಾಗಿದೆ.ಹಣದ ಪೂರೈಕೆಯು ಹಣದುಬ್ಬರದ ಮಾತ್ರವಲ್ಲದಿದ್ದರೂ, ಒಂದು ಪ್ರಮುಖ ಕಾರಣವಾಗಿದೆ.
ರಾಬರ್ಟ್ ಜೆ. ಗೊರ್ಡಾನ್ ಕರೆಯುವ "ತ್ರಿಕೋನ ಮಾದರಿ"ಯ ಪ್ರಕಾರ, ಹಣದುಬ್ಬರದ ಮೂರು ಪ್ರಮುಖ ರೀತಿಗಳಿವೆ:[೨೭]
- ಬೇಡಿಕೆ-ಸೆಳೆತ ಹಣದುಬ್ಬರ ವು ಹೆಚ್ಚಿದ ಖಾಸಗಿ ಮತ್ತು ಸರ್ಕಾರಿ ವೆಚ್ಚ ಇತ್ಯಾದಿಗಳ ಕಾರಣ ಸಮುಚ್ಚಯ ಬೇಡಿಕೆಯಲ್ಲಿ ಹೆಚ್ಚಳ ಕಾರಣವಾಗಿದೆ. ಬೇಡಿಕೆ ಹಣದುಬ್ಬರವು ವೇಗ ಪ್ರಮಾಣದಲ್ಲಿನ ಆರ್ಥಿಕ ವಿಕಸನಕ್ಕೆ ರಚನಾತ್ಮಕವಾಗಿದೆ, ಏಕೆಂದರೆ ಮೀರಿದ ಬೇಡಿಕೆ ಮತ್ತು ಅನುಕೂಲಕರವಾದ ಮಾರುಕಟ್ಟೆ ಸ್ಥಿತಿಯು ಹೂಡಿಕೆ ಮತ್ತು ವಿಸ್ತರಣೆಗೆ ಉತ್ತೇಜನವನ್ನು ನೀಡುತ್ತದೆ.
- ಸಮುಚ್ಚಯ ಪೂರೈಕೆ (ಸಂಭಾವ್ಯ ಉತ್ಪಾದನೆ)ಯಲ್ಲಿ ಇಳಿತದ ಕಾರಣ ಬೆಲೆ-ತಳ್ಳುವ ಹಣದುಬ್ಬರ, ಅಥವಾ "ಪೂರೈಕೆಯ ಆಘಾತದ ಹಣದುಬ್ಬರ" ಸಂಭವಿಸುತ್ತದೆ, ಇದಕ್ಕೆ ಸ್ವಾಭಾವಿಕ ವಿಪತ್ತು ಅಥವಾ ಆದಾನಗಳ ಬೆಲೆಗಳಲ್ಲಿ ಏರಿಕೆಯು ಕಾರಣ.ಉದಾಹರಣೆಗೆ, ತೈಲ ಪೂರೈಕೆಯಲ್ಲಿ ಹಠಾತ್ ಇಳಿತದಿಂದ ಸಂಭವಿಸುವ ತೈಲ ಬೆಲೆಗಳ ಹೆಚ್ಚಳದಿಂದಾಗಿ ಬೆಲೆ-ತಳ್ಳುವ ಹಣದುಬ್ಬರಕ್ಕೆ ಕಾರಣವಾಗಬಹುದು.ತೈಲಗಳು ತಮ್ಮ ವೆಚ್ಚಗಳ ಅಂಶವಾಗಿರುವುದನ್ನು ಪರಿಗಣಿಸುವ ಉತ್ಪಾದಕರು ಇದನ್ನು ಹೆಚ್ಚಿದ ಬೆಲೆಗಳ ಮೂಲಕ ಗ್ರಾಹಕರಿಗೆ ವರ್ಗಾಯಿಸುತ್ತಾರೆ.
- ಹೊಂದಿಸಬಲ್ಲ ನಿರೀಕ್ಷೆಗಳು ಅಂತರ್ನಿರ್ವಿಷ್ಟ ಹಣದುಬ್ಬರಕ್ಕೆ ಪ್ರೇರೇಪಿಸಿ ಅದು "ಬೆಲೆ/ವೇತನದ ಏರಿಕೆ"ಗೆ ಕೊಂಡಿಯಾಗಿದೆ. ಇದು ಕಾರ್ಮಿಕರು ಬೆಲೆಯೇರಿಕೆಗೆ ತಕ್ಕಂತೆ ತಮ್ಮ ವೇತನಗಳನ್ನು (ಹಣದುಬ್ಬರದ ದರಕ್ಕಿಂತಲೂ ಹಚ್ಚಾಗಿ) ಹೆಚ್ಚಾಗಿಸಲು ಮತ್ತು ಆ ಉದ್ದಿಮೆಯು ಹೆಚ್ಚಿದ ಶ್ರಮ ವೆಚ್ಚಗಳನ್ನು ಗ್ರಾಹಕರಿಗೆ ಹೆಚ್ಚಿನ ಬೆಲೆಗಳ ಮೂಲಕ ವರ್ಗಾಯಿಸುತ್ತದೆ, ಹಾಗಾಗಿ ಇದು ದೋಷ ಪೂರಿತ ವರ್ತುಲವಾಗುತ್ತದೆ.ಅಂತರ್ನಿರ್ವಿಷ್ಟ ಹಣದುಬ್ಬರವು ಹಿಂದಿನ ಪ್ರವೃತ್ತಿಯನ್ನು ನಿರೂಪಿಸಿದೆ ಹಾಗಾಗಿ ಇದಕ್ಕೆ ಜಡತ್ವದ ಹಣದುಬ್ಬರವೆಂದು ಪರಿಗಣಿಸಬಹುದಾಗಿದೆ.
ಸಮುಚ್ಚಯ ಬೇಡಿಕೆ ಆರ್ಥಿಕತೆಯ ಉತ್ಪಾದನಾ ಕ್ಷಮತೆ (ಅದರ ಸಂಭಾವ್ಯ ಉತ್ಪಾದನೆ) ಗೂ ಮೀರಿಹೋದರೆ ಹಣದುಬ್ಬರದ ದರವು ವೇಗಗೊಳ್ಳುತ್ತದೆ ಎಂಬುದು ಬೇಡಿಕೆ ಹಿಂಸೆಳೆತ ಸಿದ್ಧಾಂತದ ಹೇಳಿಕೆ.ಆದ್ದರಿಂದ, ಸಮುಚ್ಚಯ ಬೇಡಿಕೆಯನ್ನು ಹೆಚ್ಚಿಸುವಂತಹ ಯಾವುದೇ ಕಾರಣವು ಹಣದುಬ್ಬರಕ್ಕೆ ಕಾರಣವಾಗಬಹುದು.ಆದಾಗ್ಯೂ, ದೀರ್ಘಾವಧಿಯಲ್ಲಿ, ಕೇವಲ ಚಲಾವಣೆಯಲ್ಲಿರುವ ಹಣದ ಪ್ರಮಾಣದ ವೇಗವನ್ನು ಆರ್ಥಿಕತೆ ನೈಜ ವಿಕಸನ ದರಕ್ಕಿಂತಲೂ ಹೆಚ್ಚಾಗಿಸಿ ಸಮುಚ್ಚಯ ಬೇಡಿಕೆಯನ್ನು ಉತ್ಪಾದನಾ ಕ್ಷಮತೆಗಿಂತಲೂ ಹಚ್ಚಾಗಿಯೇ ಉಳಿಸಿಕೊಳ್ಳಬಹುದು.ಇನ್ನೊಂದು (ಆದಾಗ್ಯೂ ಕಡಿಮೆ ಸರ್ವಸಮಾನ) ಕಾರಣವೇನೆಂದರೆ, ಹಣದ ಬೇಡಿಕೆ ಯಲ್ಲಿ ವೇಗವಾದ ಇಳಿತ, ಉದಾಹರಣೆಗೆ ಯೂರೋಪಿನಲ್ಲಿ ಕರಾಳ ಸಾವು ಅವಧಿಯಲ್ಲಿ, ಅಥವಾ 1945ರಲ್ಲಿ ಜಪಾನಿನ ಸೋಲಿಗೂ ಮುಂಚೆ ಜಪಾನೀ ಆಕ್ರಮಿಕ ಪ್ರಾಂತ್ಯಗಳಲ್ಲಿ ಸಂಭವಿಸಿದ ಹಣದ ಬೇಡಿಕೆ.
ನಾಗರಿಕ ಸಮರದಂತಹ ವಿಪತ್ತಿನ ಕಾಲದಲ್ಲಿ ಸರ್ಕಾರಗಳು ಹಣವನ್ನು ಅತಿಹೆಚ್ಚಾಗಿ ಮುದ್ರಿಸಿ, ಖರ್ಚುಗಳಿಗೆ ಆರ್ಥಿಕ ಬೆಂಬಲ ನೀಡುವಾಗ ಹಣದುಬ್ಬರದ ಮೇಲೆ ಹಣದ ಪ್ರಭಾವವು ಎದ್ದುಕಾಣುತ್ತದೆ.ಇದು ಕೆಲವೊಮ್ಮೆ ಬೆಲೆಗಳು ಒಂದು ತಿಂಗಳ ಅವಧಿಯೊಳಗೆ ದುಪ್ಟಟ್ಟಾಗುವಂತಹ ಅತಿಹಣದುಬ್ಬರಕ್ಕೆ ಹುಟ್ಟುಹಾಕಬಹುದು. ಪ್ರಾಮುಖ್ಯತೆಯ ಬಗ್ಗೆ ಅದೆಷ್ಟೇ ಭಿನ್ನಾಭಿಪ್ರಾಯಗಳಿದ್ದರೂ, ಹಣದುಬ್ಬರದ ಮಧ್ಯಸ್ಥ ಮಟ್ಟವನ್ನು ನಿರ್ಣಯಿಸಲು ಹಣದ ಪೂರೈಕೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ.ಉದಾಹರಣೆಗೆ, ಕೊಂಡಿಯು ದೃಢವಾಗಿದೆಯೆಂದು ಹಣಕಾಸುವಾದಿ ಅರ್ಥಶಾಸ್ತ್ರಜ್ಞರು ನಂಬಿದರೆ; ತದ್ವಿರುದ್ಧವಾಗಿ, ಹಣದುಬ್ಬರವನ್ನು ನಿರ್ಣಯಿಸಲು ಹಣದ ಪೂರೈಕೆಯ ಬದಲಾಗಿ ಆರ್ಥಿಕತೆಯಲ್ಲಿ ಸಮುಚ್ಚಯ ಬೇಡಿಕೆಯ ಪಾತ್ರದ ಬಗ್ಗೆ ಕೇನ್ಸ್‌ವಾದಿ ಅರ್ಥಶಾಸ್ತ್ರಜ್ಞರು ವಿಶಿಷ್ಟವಾಗಿ ಒತ್ತು ನೀಡಿದ್ದಾರೆ.ಅದೇನೆಂದರೆ, ಕೇನ್ಸ್‌ವಾದಿಗಳಿಗೆ, ಹಣದ ಪೂರೈಕೆಯು ಸಮುಚ್ಚಯ ಬೇಡಿಕೆಯ ಕೇವಲ ಒಂದು ನಿರ್ಧಾರಕವಷ್ಡೆ.
ಕೆಲವು ಕೇನ್ಸ್‌ವಾದಿ ಅರ್ಥಶಾಸ್ತ್ರಜ್ಞರು, ಕೇಂದ್ರೀಯ ಬ್ಯಾಂಕ್‌ಗಳು ನಿಯಂತ್ರಣವನ್ನು ಹೊಂದಿರದು, ಏಕೆಂದರೆ ಹಣದ ಪೂರೈಕೆಯು ಹಣದ ಪೂರೈಕೆಯು ವಾಣಿಜ್ಯ ಬ್ಯಾಂಕ್‌ಗಳು ನೀಡಿದ ಬ್ಯಾಂಕ್ ಕ್ರೆಡಿಟ್‌ಗಾಗಿ ಬೇಡಿಕೆಗೆ ಹೊಂದುಕೊಳ್ಳುತ್ತವೆ ಎಂದು ವಾದಿಸಿ, ಕೇಂದ್ರೀಯ ಬ್ಯಾಂಕ್‌ಗಳು ಹಣದ ಪೂರೈಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸುತ್ತವೆಂಬ ಊಹೆಯನ್ನು ಅಲ್ಲಗೆಳೆಯುತ್ತಾರೆ.ಇದಕ್ಕೆ ಅಂತರ್ವರ್ಧಕ ಹಣದ ಸಿದ್ಧಾಂತವೆನ್ನಲಾಗುತ್ತದೆ ಮತ್ತು ಇದನ್ನು 1960ರ ದಶಕದಷ್ಟು ಹಿಂದೆಯೇ ಕೇನ್ಸ್‌ವಾದದ ತರುವಾಯದವರು ಬಲವಾಗಿ ಪ್ರಸ್ತಾಪಿಸಿದ್ದಾರೆ.ಇಂದು ಇದು ಟೇಲರ್ ನಿಯಮದ ಸಮರ್ಥಕರ ಗಮನದ ಕೇಂದ್ರವಾಗಿದೆ.ಈ ನಿಲುವನ್ನು ಸಾರ್ವತ್ರಿಕವಾಗಿ ಸ್ವೀಕಾರವಾಗಿಲ್ಲ - ಬ್ಯಾಂಕ್‌ಗಳು ಸಾಲಗಳನ್ನು ಮಾಡಿ ಹಣವನ್ನು ಸೃಷ್ಟಿಸುತ್ತಾರೆ, ಆದರೆ ನೈಜ ಬಡ್ಡಿ ದರಗಳು ಹಚ್ಚಿದಾಗ, ಈ ಸಾಲಗಳ ಸಮುಚ್ಚಯ ಘನವು ಕ್ಷೀಣಿಸುತ್ತದೆ.ಹಾಗಾಗಿ, ಕೇಂದ್ರೀಯ ಬ್ಯಾಂಕ್‌ಗಳು ಹಣವನ್ನು ಅಗ್ಗಗೊಳಿಸಿ ಅಥವಾ ದುಬಾರಿಗೊಳಿಸಿ ಹಣದ ಪೂರೈಕೆಯನ್ನು ಪ್ರಭಾವಿಸಿ,ಅದರ ಉತ್ಪಾದನೆಯನ್ನು ಹೆಚ್ಚಿಸಬಹುದು ಅಥವಾ ಕಡಿಮೆಗೊಳಿಸಬಹುದು.
ಹಣದುಬ್ಬರದ ವಿಶ್ಲೇಷಣೆಯಲ್ಲಿ ಮೂಲಭೂತ ಪರಿಕಲ್ಪನೆಯು ಹಣದುಬ್ಬರ ಮತ್ತು ನಿರುದ್ಯೋಗದ ನಡುವಿನ ಸಂಬಂಧವಾಗಿದ್ದು, ಅದನ್ನು ಫಿಲಿಪ್ಸ್ ವಕ್ರರೇಖೆ. ಈ ಮಾದರಿಯು ಬೆಲೆಯ ಸ್ಥಿರತೆ ಮತ್ತು ಉದ್ಯೋಗದ ನಡುವಿನ ರಾಜಿ-ವಿನಿಮಯದ ಬಗ್ಗೆ ಸೂಚಿಸುತ್ತದೆ. ಆದ್ದರಿಂದ ನಿರುದ್ಯೋಗವನ್ನು ಕನಿಷ್ಠಗೊಳಿಸಲು ಸ್ವಲ್ಪ ಮಟ್ಟದ ಹಣದುಬ್ಬರದ ಅಗತ್ಯವನ್ನು ಪರಿಗಣಿಸಬಹುದಾಗಿದೆ.ಫಿಲಿಪ್ಸ್ ವಕ್ರರೇಖಾ ಮಾದರಿಯು U.S. ಅನುಭವವನ್ನು 1960ರ ದಶಕದಲ್ಲಿ ಸಮರ್ಪಕವಾಗಿ ವಿವರಸಿತು, ಆದರೆ 1970ರಲ್ಲಿ ಏರುತ್ತಿದ್ದ ಹಣದುಬ್ಬರ ಮತ್ತು ಆರ್ಥಿಕತೆಯ ಸ್ಥಗಿತ (ಕೆಲವೊಮ್ಮೆ ಉಬ್ಬರಮಂದ ಸ್ಥಿತಿ ಎನ್ನಲಾದದ್ದು)ದ ಅನುಭವವನ್ನು ವಿವರಿಸಲು ವಿಫಲವಾಯಿತು.
ಹಾಗಾಗಿ, ಆಧುನಿಕ ಮಹದರ್ಥಶಾಸ್ತ್ರವು ಪೂರೈಕೆಯ ಧಕ್ಕೆ ಮತ್ತು ಹಣದುಬ್ಬರವು ಆರ್ಥಿಕತೆಯ ಸಹಜ ಕ್ರಿಯೆಯೊಳಗೆ ಸೇರುವಂತಹ ವಿಷಯಗಳ ಕಾರಣ ಸ್ಥಳಾಂತರಗೊಳ್ಳುವ (ಹಾಗಾಗಿ ಹಣದುಬ್ನರ ಮತ್ತು ನಿರುದ್ಯೋಗದ ನಡುವಿನ ರಾಜಿ-ವಿನಿಮಯವು ಬದಲಾಗುವ) ಫಿಲಿಪ್ಸ್ ವಕ್ರರೇಖೆಯನ್ನು ಬಳಸಿ ಹಣದುಬ್ಬರವನ್ನು ವಿವರಿಸುತ್ತದೆ.ಮೊದಲನೆಯದು 1970ರ ದಶಕದಲ್ಲಿನ ತೈಲ ಧಕ್ಕೆಗಳಂತಹ ಘಟನೆಗಳನ್ನು ಹಾಗೂ ಎರಡನೆಯದು ಬೆಲೆ/ವೇತನದ ಏರಿಕೆ ಮತ್ತು ಹಣದುಬ್ಬರದ ನಿರೀಕ್ಷೆಗಳನ್ನು ಉಲ್ಲೇಖಿಸುತ್ತದೆ; ಅರ್ಥಾತ್ ಆರ್ಥಿಕತೆಯು ಹಣದುಬ್ಬರದಿಂದ ನರಳುತ್ತದೆ.ಹಾಗಾಗಿ, ಫಿಲಿಪ್ಸ್ ವಕ್ರರೇಖೆಯು ತ್ರಿಕೋನ ಮಾದರಿಯಲ್ಲಿ ಕೇವಲ ಬೇಡಿಕೆ ಹಿಂಸೆಳೆತದ ಅಂಶವನ್ನು ನಿರೂಪಿಸುತ್ತದೆ.
ಇನ್ನೊಂದು ಮಹತ್ಬದ ಪರಿಕಲ್ಪನೆಯೇನೆಂದರೆ GDPಯ ಒಂದು ಹಂತವಾದ ಸಂಭಾವ್ಯ ಉತ್ಪಾದನೆ (ಕೆಲವೊಮ್ಮೆ "ಸ್ವಾಭಾವಿಕ ಸಾರಾಸಗಟು ಸ್ಥಳೀಯ ಉತ್ಪಾದನೆ") ಇಲ್ಲಿ ಸಾಂಸ್ಥಾನಿಕ ಮತ್ತು ಸ್ವಾಭಾವಿಕ ಕಟ್ಟುಪಾಡುಗಳಿದ್ದರೂ ಆರ್ಥಿಕತೆಯು ತನ್ನ ಉತ್ಪಾದನೆಯ ಅತ್ಯುತ್ತಮ ಮಟ್ಟದಲ್ಲಿರುತ್ತದೆ.(ಉತ್ಪಾದನೆಯ ಈ ಹಂತವು ವೇಗವಾಗಿರದ ನಿರುದ್ಯೋಗ ದರ NAIRU, ಅಥವಾ "ಸ್ವಾಭಾವಿಕ" ನಿರುದ್ಯೋಗ ದರ ಅಥವಾ ಪೂರ್ಣಪ್ರಮಾಣದ-ನಿರುದ್ಯೋಗ ನಿರುದ್ಯೋಗ ದರಕ್ಕೆ ಹೊಂದಿಕೆಯಾಗುತ್ತದೆ.) GDPಯು ತನ್ನ ಸಂಭಾವ್ಯವನ್ನು ಮೀರಿಸಿ (ನಿರುದ್ಯೋಗವು NAIRUವಿನ ಕೆಳಗೇ ಇದ್ದಲ್ಲಿ), ಪೂರೈಕೆದಾರರು ತಮ್ಮ ಬೆಲೆಗಳನ್ನು ಹೆಚ್ಚಿಸುವ ಮತ್ತು ಅಂತರ್ನಿರ್ಮಿತ ಹಣದುಬ್ಬರವು ಬಿಗಡಾಯಿಸುವ ಕಾರಣ ಹಣದುಬ್ಬರವು ತ್ವರೆ ಗೊಳ್ಳುತ್ತದೆ ಎಂದು ಸಿದ್ಧಾಂತವು ಹೇಳುತ್ತದೆ.GDPಯು ತನ್ನ ಸಂಭಾವ್ಯ ಮಟ್ಟಕ್ಕಿಂತಲೂ ಕಳಗೆ ಬಿದ್ದಲ್ಲಿ (ನಿರುದ್ಯೋಗ ಮಟ್ಟವು NAIRUಗಿಂತಲೂ ಮೇಲಿದ್ದಲ್ಲಿ), ಪೂರೈಕೆದಾರರು ಮಿತಿಮೀರಿದ ಕ್ಷಮತೆಯನ್ನು ಭರಿಸಲು ಯತ್ನಿಸಿ ಬೆಲೆಗಳನ್ನು ಕಡಿತಗೊಳಿಸಿ ಅಂತರ್ನಿರ್ಮಿತ ಹಣದುಬ್ಬರವನ್ನು ಕುಗ್ಗಿಸಿ ಹಣದುಬ್ಬರವು ವೇಗ ಕಡಿಮೆ ಗೊಳಿಸುತ್ತದೆ.
ಆದಾಗ್ಯೂ, ನೀತಿ-ನಿರ್ಮಾಣದ ದೃಷ್ಟಿಯಿಂದ ಈ ಸಿದ್ಧಾಂತದೊಂದಿಗಿನ ಒಂದು ಸಮಸ್ಯೆಯೇನೆಂದರೆ ಸಂಭಾವ್ಯ ಉತ್ಪಾದನೆಯ (ಮತ್ತು NAIRUವಿನ) ನಿಖರ ಮಟ್ಟವು ಸಾಮಾನ್ಯವಾಗಿ ಗೊತ್ತಿಲ್ಲವಾಗಿದೆ ಮತ್ತು ಸಮಯಾವಧಿಯಲ್ಲಿ ಬದಲಾಗುವ ಪ್ರವೃತ್ತಿಯನ್ನು ತೋರುತ್ತದೆ.ಹಣದುಬ್ಬರವು ಬೀಳುವುದಕ್ಕಿಂತ ಹೆಚ್ಚು ವೇಗವಾಗಿ ಏರುವುದರ ಮೂಲಕ ಅಸಮಕೆಲದ ರೀತಿಯಲ್ಲಿ ವರ್ತಿಸುತ್ತದೆ.ಅದೂ ಸಾಲದಕ್ಕೆ, ಅದು ನೀತಿಯ ಪ್ರಕಾರವೂ ಬದಲಾಗಬಹುದಾಗಿದೆ: ಉದಾಹರಣೆಗೆ,ಅಂದಿನ ಬ್ರಿಟಿಷ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಆಳ್ವಿಕೆಯಲ್ಲಿ ಕಂಡ ಹೆಚ್ಚು ನಿರುದ್ಯೋಗವು NAIRUವಿನ ಹುಟ್ಟು (ಮತ್ತು ಸಂಭಾವ್ಯದಲ್ಲಿ ಕುಸಿತ)ಕ್ಕೆ ಕಾರಣವಾಯಿತು, ಕಾರಣ ಹಲವು ನಿರುದ್ಯೋಗಿಗಳು ತಾವು ತಮ್ಮ ನೈಪುಣ್ಯತೆಗಳಿಗೆ ಅನುಗುಣವಾಗಿರುವ ಕೆಲಸಗಳನ್ನು ಕಂಡುಕೊಳ್ಳಲಾಗದೆ ರಾಚನಿಕವಾಗಿ ನಿರುದ್ಯೋಗಿಗಳಾಗಿದ್ದರು. (ನಿರುದ್ಯೋಗ ಇದನ್ನೂ ನೋಡಿ), ರಾಚನಿಕ ನಿರುದ್ಯೋಗದಲ್ಲಿ ಏರಿಕೆಯ ಸ್ಥಿತಿಯಲ್ಲಿ, ಶ್ರಮ ಪಡೆಯಲ್ಲಿ ಕಡಿಮೆಯಷ್ಟು ಜನರು,ಆರ್ಥಿಕತೆಯು ತ್ವರೆಗೊಳ್ಳುವಂತಹ ಹಣದುಬ್ಬರದ ಹೊಸ್ತಿಲನ್ನು ಮುಟ್ಟದಿರುವ NAIRUವಿನಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳಬಹುದು.
ಹಣಕಾಸುವಾದಿ ದೃಷ್ಟಿ
[ಬದಲಾಯಿಸಿ]
ಹಣದುಬ್ಬರ ಅಥವಾ ಹಣದ ಕುಗ್ಗಿನ ಮೇಲೆ ಪ್ರಭಾವ ಬೀರುವ ಅತಿ ಪ್ರಮುಖ ಕಾರಣ, ಕ್ರೆಡಿಟ್‌ನ ಸಡಿಲಿಕೆ ಯಾ ಬಿಗಿಗೊಳಿಸುವಿಕೆಯ ರೀತ್ಯಾ ಹಣ ಪೂರೈಕೆಯ ವ್ಯವಸ್ಥಾಪನೆ ಎಂದು ಹಣಕಾಸುವಾದಿಗಳು ನಂಬಿದ್ದಾರೆ. ಆರ್ಥಿಕ ನೀತಿ ಅಥವಾ ಸರ್ಕಾರಿ ವೆಚ್ವ ಮತ್ತು ಕಂದಾಯವು ಹಣದುಬ್ಬರವನ್ನು ನಿಯಂತ್ರಿಸಲು ಅಸಮರ್ಥಕ ಎಂದು ಅವರು ಪರಿಗಣಿಸಿದ್ದಾರೆ.[೨೮]
ಹಣಕಾಸು ಇತಿಹಾಸದ ಪ್ರಯೋಗವಾದಿ ಅಧ್ಯಯನವು ಹಣದುಬ್ಬರವು ಯಾವಾಗಲೂ ಹಣಕಾಸಿನ ಪ್ರವೃತ್ತಿಯೇ ಆಗಿದೆ ಎಂದು ಹಣಕಾಸುವಾದಿಗಳು ಸಮರ್ಥಿಸುತ್ತಾರೆ.ಹಣಕಾಸಿನ ಪ್ರಮಾಣ ಸಿದ್ಧಾಂತವು ಸರಳವಾಗಿ ಹೇಳುವುದಾದರೆ, ಆರ್ಥಿಕತೆಯಲ್ಲಿ ಖರ್ಚಿನ ಒಟ್ಟು ಮೊತ್ತವು ಆಸ್ತಿತ್ವದಲ್ಲಿರುವ ಒಟ್ಟು ಹಣದಿಂದ ನಿರ್ಣಯಿಸಲಾಗುವುದು ಎಂದು ಹೇಳುತ್ತದೆ. ಈ ಸಿದ್ದಾಂತವು ಈ ಸೂತ್ರದೊಂದಿಗೆ ಶುರುವಾಗುತ್ತದೆ:
ಇದರಲ್ಲಿ
ಈ ಸೂತ್ರದಲ್ಲಿ, ಸಾಮಾನ್ಯ ಬೆಲೆ ಮಟ್ಟವು ಆರ್ಥಿಕತಾ ಚಟುವಟಿಕೆಯ ಮಟ್ಟದಿಂದ ಪ್ರಭಾವಿತವಾಗಿರುತ್ತದೆ (Q ), ಹಣಕಾಸಿನ ಪ್ರಮಾಣ (M ) ಮತ್ತು ಹಣದ ವೇಗ (V ). ಸೂತ್ರವು ಒಂದು ಅನನ್ಯತೆಯಾಗಿದೆ, ಏಕೆಂದರೆ ಹಣದ ವೇಗ (V ) ಅಂತಿಮ ಖರ್ಚಿನ () ಮತ್ತು ಹಣದ ಪ್ರಮಾಣ (M )ದ ನಿಷ್ಪತ್ತಿಯಾಗಿರುವಂತೆ ವ್ಯಾಖ್ಯಾನವಾಗಿದೆ.
ಹಣದ ವೇಗವನ್ನು ಅಚಲವೆಂದು ಕಲ್ಪಿಸಲಾಗಿದೆ ಮತ್ತು ಉತ್ಪಾದನೆಯ ನೈಜ ಮೌಲ್ಯವು ಆರ್ಥಿಕತೆಯ ಉತ್ಪಾದನಾ ಕ್ಷಮತೆಯ ಮೇಲೆ ನಿರ್ಣಯವಾಗಿದೆ.ಈ ಕಲ್ಪನೆಗಳಡಿ, ಸಾಮಾನ್ಯ ಬೆಲೆ ಮಟ್ಟದಲ್ಲಿ ಬದಲಾವಣೆಯ ಹಿಂದಿನ ಪ್ರಮುಖ ಕಾರಣ ಹಣದ ಪ್ರಮಾಣದಲ್ಲಿನ ಬದಲಾವಣೆಗಳು.ಅಲ್ಪಾವಧಿಯಲ್ಲಿ, ಅಚಲ ವೇಗದೊಂದಿಗೆ, ಹಣದ ಪೂರೈಕೆಯು ಕನಿಷ್ಠ ಉತ್ಪಾದನೆಯ ಮೌಲ್ಯವನ್ನು ನಿರ್ಣಯಿಸುತ್ತದೆ (ಅಂತಿಮ ಖರ್ಚಿಗೆ ಸಮಾನವಾಗಿದೆ).ಆದರೆ ಪ್ರಾಯೋಗಿಕವಾಗಿ, ವೇಗವು ಅಚಲವಲ್ಲ, ಅದನ್ನು ಪರೋಕ್ಷವಾಗಿ ಅಳೆಯಲು ಸಾಧ್ಯ, ಹಾಗಾಗಿ, ಸೂತ್ರವು ಹಣದ ಪೂರೈಕೆ ಮತ್ತು ಕನಿಷ್ಠ ಉತ್ಪಾದನೆಯ ನಡುವಿನ ಸ್ಥಿರ ಸಂಬಂಧವನ್ನು ಆವಶ್ಯವಾಗಿ ಸೂಚಿಸಲಾರದು.ಆದರೆ, ದೀರ್ಘಾವಧಿಯಲ್ಲಿ, ಹಣ ಪೂರೈಕೆಯಲ್ಲಿ ಬದಲಾವಣೆಗಳು ಮತ್ತು ಆರ್ಥಿಕ ಚಟುವಟಿಕೆಗಳ ಮಟ್ಟವು ಸಾಮಾನ್ಯವಾಗಿ ವೇಗದಲ್ಲಿ ಬದಲಾವಣೆಗಳನ್ನು ಕುಬ್ಜಗೊಳಿಸುತ್ತದೆ.ವೇಗವು ತುಲನಾತ್ಮಕವಾಗಿ ಅಚಲವಾಗಿದ್ದಲ್ಲಿ, ದೀರ್ಘಾವಧಿಯಲ್ಲಿ ಬೆಲೆಯೇರಿಕೆಯ ದರವು,ದೀರ್ಘಾವಧಿಯಲ್ಲಿ ಹಣ ಪೂರೈಕೆಯ ವಿಕಸನ ದರ ಮತ್ತು ದೀರ್ಘಾವಧಿ ನೈಜ ಉತ್ಪಾದನೆಯ ವಿಕಸನ ದರಗಳ ನಡುವಿನ ವ್ಯತ್ಯಾಸಕ್ಕೆ ಸಮಾನವಾಗಿದೆ.[೭]
ಅಕರಣಿ ಅಪೇಕ್ಷಾ ಸಿದ್ಧಾಂತ
[ಬದಲಾಯಿಸಿ]ಅಕರಣಿ ಅಪೇಕ್ಷಾ ಸಿದ್ದಾಂತವು ಆರ್ಥಿಕತೆಯ ಪಾತ್ರಧಾರಿಗಳು ತಮ್ಮ ಯೋಗಕ್ಷೇಮವನ್ನು ಉತ್ತಮಗೊಳಿಸುತ್ತ ಭವಿಷ್ಯದತ್ತ ದೃಷ್ಟಿ ಹರಿಸಿ, ಸದ್ಯಕ್ಕೆ ಸಂಭವಿಸುವ ಅವಕಾಶದ ವೆಚ್ಚ ಮತ್ತು ಒತ್ತಡಗಳಿಗೆ ಪ್ರತಿಕ್ತಿಯೆ ನೀಡುವುದಿಲ್ಲ.ಈ ದೃಷ್ಟಿಯಲ್ಲಿ, ಹಣಕಾಸುವಾದದಲ್ಲಿಯೇ ಉಳಿದುಕೊಂಡಿರುವಾಗ, ಭವಿಷ್ಯದ ನಿರೀಕ್ಷೆ ಮತ್ತು ಕಾರ್ಯತಂತ್ರಗಳು ಹಣದುಬ್ಬರಕ್ಕಾಗಿಯೂ ಬಹಳ ಮುಖ್ಯವಾಗಿವೆ.
ಅಕರಣಿ ಅಪೇಕ್ಷಾ ಸಿದ್ಧಾಂತದ ಸಮರ್ಥನೆಯೇನೆಂದರೆ ಪಾತ್ರಧಾರಿಗಳು ಮತ್ತಷ್ಟು ಹಣದುಬ್ಬರದ ಮುನ್ಸೂಚನೆಗಳಿಗೆ ಅನುಗುಣವಾಗಿ ನಡೆದು ಕೇಂದ್ರ ಬ್ಯಾಂಕ್ ನಿರ್ಧಾರಗಳನ್ನು ತಳ್ಳಿಹಾಕಲು ನೋಡುತ್ತಾರೆ. ಇದರ ಅರ್ಥವು, ಹಣದುಬ್ಬರವನ್ನು ಎದುರಿಸಲು ಕೇಂದ್ರೀಯ ಬ್ಯಾಂಕ್‌ಗಳು ತಮ್ಮ ವಿಶ್ವಾಸಾರ್ಹತೆಯನ್ನು ಸಮರ್ಥಿಸಿಕೊಳ್ಳಬೇಕು, ಅಥವಾ, ಕೇಂದ್ರೀಯ ಬ್ಯಾಂಕ್ ಆರ್ಥಿಕ ಹಿಂಜರಿಕೆಗೆ ಆಸ್ಪದ ಕೊಡದೆ ಹಣದ ಪೂರೈಕೆಯನ್ನು ವಿಸ್ತರಿಸಿ ಆರ್ಥಿಕತೆಯು ವಿಕಸನಗೊಳ್ಳುತ್ತದೆ, ಎಂದು ಆರ್ಥಿಕತೆಯ ಪಾತ್ರಧಾರಿಗಳು ಪಣತೊಡಬೇಕಾಗಿದೆ.
ಆಸ್ಟ್ರಿಯನ್ ಸಿದ್ಧಾಂತ
[ಬದಲಾಯಿಸಿ]- ಈ ಅಧ್ಯಾಯದ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಹಣದುಬ್ಬರದ ಬಗ್ಗೆ ಆಸ್ಟ್ರಿಯಾದ ದೃಷ್ಡಿಯನ್ನು ನೋಡಿ
ಹಣದುಬ್ಬರವು ಹಣ ಪೂರೈಕೆಯ ಹೆಚ್ಚಳಕ್ಕೆ ಕಾರಣವಾಗಿದ್ದು, ಬೆಲೆ ಏರಿಕೆಗಳು ಕೇವಲ ಪರಿಣಾಮಗಳಾಗಿದ್ದು, ಈ ಲಾಕ್ಷಣಿಕ ವ್ಯತ್ಯಾಸವು ಹಣದುಬ್ಬರದ ವ್ಯಾಖ್ಯಾನಕ್ಕಾಗಿ ಬಹಳ ಮುಖ್ಯ ಎಂದು ಆಸ್ಟ್ರಿಯನ್ ಶಾಲೆಯು ಸಮರ್ಥಿಸುತ್ತದೆ.[೨೯] ಹಣಕಾಸಿನ ಉಬ್ಬರ ಮತ್ತು ಸಾಮಾನ್ಯ ಬೆಲೆ ಹಣದುಬ್ಬರ ಪರಿಕಲ್ಪನೆಗಳ ನಡುವೆ ಯಾವುದೇ ವಸ್ತುಕ ವ್ಯತ್ಯಾಸವಿಲ್ಲವೆಂದು ಆಸ್ಟ್ರಿಯಾದ ಅರ್ಥಶಾಸ್ತ್ರಜ್ಞರು ನಂಬಿದ್ದಾರೆ.ಕಾಲಾವಧಿಯಲ್ಲಿ ಸೃಷ್ಟಿಯಾಗಿ, ವಿನಿಮಯದಲ್ಲಿ ಕೂಡಲೆ ಬಳಕೆಗೆ ಲಭ್ಯವಾಗಿ ವಿಕಸನಗೊಳ್ಳುವ ಹಣದ ಹೊಸ ಏಕಮಾನ್ಯಗಳನ್ನು ಗಣಿಸಿ ಆಸ್ಟ್ರಿಯನ್ ಅರ್ಥಶಾಸ್ತ್ರಜ್ಞರು {1}ಹಣಕಾಸಿನ ಉಬ್ಬರ{/1}ವನ್ನು ಅಳೆಯುತ್ರಾರೆ.[೩೦][೩೧][೩೨] ಹಣದುಬ್ಬರದ ಈ ಅರ್ಥಕಲ್ಪನೆಯು ಹಣದುಬ್ಬರವು ಯಾವಾಗಲೂ ಕೇಂದ್ರ ಸರ್ಕಾರ ಅಥವಾ ಅದರ ಕೇಂದ್ರೀಯ ಬ್ಯಾಂಕ್ ಹಣ ಪೂರೈಕೆಗೆ ಅಥವಾ ಹೆಚ್ಚಳಕ್ಕೆ ಅನುವಾಗುವಂತೆ ಕೈಗೊಂಡ ಕ್ರಮವಾಗಿದೆ ಎಂದು ಸೂಚಿಸುತ್ತದೆ.[೩೩] ರಾಜ್ಯ-ಚಾಲಿತ ಹಣಕಾಸಿನ ವಿಸ್ತರಣೆಯೊಂದಿಗೆ,ವಿಶ್ವದಲ್ಲಿನ ಹಲವು ಆರ್ಥಿಕ ಮತ್ತು ಹಣಕಾಸು ವ್ಯವಸ್ಥೆಗಳು ಬಳಸುವ ಅಂಶೀಯ-ನಿಧಿ ಬ್ಯಾಂಕಿಂಗ್ ವ್ಯವಸ್ಥೆಗಳ ಕಾರಣ ಹಣ ಪೂರೈಕೆಯ ಪ್ರಭಾವಗಳು ಕ್ರೆಡಿಟ್ ವಿಸ್ತರಣೆಯ ಕಾರಣ ಎದ್ದುಕಾಣುತ್ತವೆ ಎಂದು ಆಸ್ಟ್ರಿಯನ್ ಶಾಲೆಯು ಸಮರ್ಥಿಸುತ್ತದೆ.[೩೪]
ರಾಜ್ಯವು ತನ್ನ ಚಟುವಟಿಕೆಗಳಿಗೆ ಹಣ ಬೆಂಬಲಕ್ಕಾಗಿ ಹಣದುಬ್ಬರವನ್ನು ಮೂರು ರೀತಿಗಳಲ್ಲೊಂದಾಗಿ (ಹಣದುಬ್ಬರ ತೆರಿಗೆ,) (ಉಳಿದೆರಡು ತರಿಗೆ ಮತ್ತು ಎರವಲು) ಬಳಸುತ್ತದೆ ಎಂದು ಆಸ್ಟ್ರಿಯನ್ನರು ವಾದಿಸುತ್ತಾರೆ.[೩೫] ಸೇನಾ ವೆಚ್ಚದ ಹಲವಾರು ರೀತಿಗಳು ಹಣದುಬ್ಬರದ ಮತ್ತು ಎರವಲಿಗೆ ಒಂದು ಕಾರಣವಾಗಿದ್ದು, ಮಾರುಕಟ್ಟೆಯಲ್ಲಿ ಚಲಿಸಬಲ್ಲ ಸಂಪನ್ಮೂಲಗಳನ್ನು ತನ್ನದಾಗಿಸಿಕೊಳ್ಳಲು ಒಂದು ಅಲ್ಪಾವಧಿಯ ಕ್ರಮವಾಗಿದೆ; ಕಂಗಾಲಾದ, ಋಣದಲ್ಲಿರುವ ಸರ್ಕಾರಗಳು ಹಾಗೆ ಮಾಡುತ್ತವೆ.[೩೬]
ಬೇರೆ ಪ್ರಕರಣಗಳಲ್ಲಿ, ಸರ್ಕಾರವು ತಾನೇ ಕೃತಕ ಭರಾಟೆಯನ್ನು ಸೃಷ್ಡಿಸಿ ಉತ್ಪಾದನೆಯ ರಚನೆಯನ್ನೇ ತಿರುಚಿ, ಆರ್ಥಿಕ ಹಿಂಜರಿತ ಮತ್ತು ಕುಸಿತವನ್ನು ಸೃಷ್ಡಿಸುತ್ತದೆ ಎಂದು ಆಸ್ಟ್ರಿಯನ್ನರು ವಾದಿಸುತ್ತಾರೆ.ಕೆಂದ್ರೀಯ ಬ್ಯಾಂಕ್ ಆರ್ಥಿಕ ಹಿಂಜರಿತ ಅಥವಾ ಕುಸಿತಗಳ ಕಾರಣವಾಗಿ ಹಬ್ಬುತ್ತಿರುವ ದಿವಾಳಿತನವನ್ನು ವಿಳಂಬಗೊಳಿಸಲು ಅಥವಾ ತಪ್ಪಿಸಲು, ಹಣಪೂರೈಕೆಯನ್ನು "ಪ್ರೋತ್ಸಾಹಿಸಿ" ಕೃತಕವಾಗಿ ಕಡಿಮೆಗೊಂಡ ಬಡ್ಡಿ ದರದಲ್ಲಿ ಎರವಲು ಪಡೆದು ಆರ್ಥಿಕತೆಯನ್ನು ಕೃತಕವಾಗಿ ಪ್ರಚೋದಿಸಬಹುದು.[೩೭] ಹಾಗಾಗಿ, ಹಲವು ಆಸ್ಟ್ರಿಯನ್ ಅರ್ಥಶಾಸ್ತ್ರಜ್ಞರು ಕೇಂದ್ರೀಯ ಬ್ಯಾಂಕ್‌ಗಳನ್ನು ಮತ್ತು ಅಂಶೀಯ-ನಿಧಿ ಬ್ಯಾಂಕಿಂಗ್ ವ್ಯವಸ್ಥೆಯ ರದ್ಧತಿಯನ್ನು ಸಮರ್ಥಿಸಿ, 100% ಚಿನ್ನ ಪ್ರಮಾಣ, ಅಥವಾ, ಕಡಿಮೆ ಆವರ್ತನದಲ್ಲಿ, ಮುಕ್ತ ಬ್ಯಾಂಕಿಂಗ್ನತ್ತ ವಾಪಸಿಗೆ ಸಮರ್ಥನೆ ನೀಡುತ್ತಾರೆ.[೩೮][೩೯] ಇದು ನಿರ್ವಹಿಸಲಾಗದ ಮತ್ತು ಬಾಷ್ಪಯುತ ಅಂಶೀಯ-ನಿಧಿ ಬ್ಯಾಂಕಿಂಗ್ ಪದ್ಧತಿಯನ್ನು ನಿರ್ಬಂಧಿಸಿ, ಹಣಪೂರೈಕೆಯ ವೃದ್ಧಿ (ಮತ್ತು ಹಣದುಬ್ಬರ) ನಿಯಂತ್ರಣ ಮೀರಿಹೋಗದಂತೆ ನೋಡಿಕೊಳ್ಳುತ್ತದೆ ಎಂದು ಅವರು ವಾದಿಸುತ್ತಾರೆ.[೪೦][೪೧]
ನೈಜ ವಿಧೇಯಕಗಳ ತತ್ವ
[ಬದಲಾಯಿಸಿ]ಹಣಕ್ಕೆ ನಿಗದಿತ ನಾಣ್ಯವೇ ಆಧಾರ ಸನ್ನಿವೇಶದಲ್ಲಿ, ಹಣದ ಪರಿಮಾಣ ಸಿದ್ಧಾಂತ ಮತ್ತು ನೈಜ ವಿಧೇಯಕಗಳ ತತ್ವ (RBD) ನಡುವೆ ಒಂದು ಮುಖ್ಯ ವಿವಾದವಿದೆ. ಈ ಸನ್ನಿವೇಶದೊಳಗೆ, ನಾಣ್ಯಕ್ಕೆ ವಿರುದ್ಧವಾಗಿ ಅಪೂರ್ಣ ಮೀಸಲು ಹಣದ ಲೆಕ್ಕಾಚಾರ ಮಟ್ಟಕ್ಕೆ ಅನುವು ಮಾಡಿಕೊಡುವ ಪ್ರಮಾಣ ಸಿದ್ಧಾಂತ ಅನ್ವಯವಾಗುತ್ತದೆ.ಆರ್ಥ ಶಾಸ್ತ್ರದ ಚಲಾವಣೆ ಮತ್ತು ಬ್ಯಾಂಕಿಂಗ್ ಶಾಲೆಗಳು RBD ತತ್ವವನ್ನು ಪ್ರತಿಪಾದಿಸುತ್ತವೆ, ವಹಿವಾಟಿನ ವಿಧೇಯಕಗಳಿಗೆ ಪ್ರತಿಯಾಗಿ ಬ್ಯಾಂಕುಗಳು ಹಣ ನೀಡುವಂತಿರಬೇಕು, ಅವುಗಳನ್ನು "ನೈಜ ವಿಧೇಯಕಗಳು" ಎನ್ನಲಾಗಿದ್ದು, ವ್ಯಾಪಾರಿಗಳಿಂದ ಖರೀದಿಸಲಾಗುತ್ತದೆ.19ನೇ ಶತಮಾನದಲ್ಲಿ ಹಣಕಾಸು ಸುಸ್ಥಿತಿ ಕುರಿತ "ಬ್ಯಾಂಕಿಂಗ್" ಮತ್ತು "ಚಲಾವಣೆ" ಶಾಲೆಗಳ ನಡುವೆ ನಡೆದ ಚರ್ಚೆಗಳಲ್ಲಿ, ಮತ್ತು ಫೆಡರಲ್ ರಿಸರ್ವ್ ರಚನೆಯಲ್ಲಿ ಈ ಸಿದ್ಧಾಂತ ಪ್ರಮುಖ ಪಾತ್ರ ವಹಿಸಿತ್ತು.1913ರಲ್ಲಿ ಅಂತರರಾಷ್ಟ್ರೀಯ ಚಿನ್ನದ ಗುಣಮಟ್ಟದ ಪತನದ ತರುವಾಯ ಎಚ್ಚೆತ್ತುಕೊಂಡ ಸರ್ಕಾರ ಕೋತಾ ಹಣಕಾಸಿನ ವಿಚಾರದಲ್ಲಿ ಹೆಜ್ಜೆ ಇಟ್ಟ ಕಾರಣ, RBD ಅಪ್ರಧಾನ ವಿಷಯವಾಗಿಯೇ ಉಳಿಯಿತು, ಸೀಮಿತ ಸನ್ನಿವೇಶದಲ್ಲಿ ಪ್ರಾಥಮಿಕ ಹಿತಾಸಕ್ತಿ ಪರಿಗಣಿಸಿದಾಗ, ಅವುಗಳೆಂದರೆ ಚಲಾವಣೆ ಮಂಡಳಿಗಳು.ಫೆಡರಲ್ ರಿಸರ್ವ್ ರಾಜ್ಯಪಾಲ ಫ್ರೆಡ್ರಿಕ್ ಮಿಶ್ಕಿನ್ ಒಂದು ಹೆಜ್ಜೆ ಮುಂದೆ ಹೋಗಿ "ಸಂಪೂರ್ಣ ಅಪಕೀರ್ತಿ"ಗೊಳಗಾಗಿದೆ ಎಂದು ಹೇಳಿದ್ದರಿಂದಾಗಿ ಇಂದು ಈ ಸಿದ್ಧಾಂತಕ್ಕೆ ಸಾಮಾನ್ಯರ ನಡುವೆ ಉತ್ತಮ ಹೆಸರಿಲ್ಲ. ಹೀಗಿದ್ದೂ, ಬಹುತೇಕ ಎಲ್ಲ ಸ್ವಾತಂತ್ರ್ಯವಾದಿ ಆರ್ಥಿಕ ತಜ್ಢರು RBDಯನ್ನು ವಿರೋಧಿಸಿದ್ದಾಗಿಯೂ, ಈ ಸಿದ್ಧಾಂತಕ್ಕೆ ಕೆಲವು ಅರ್ಥ ಶಾಸ್ತ್ರಜ್ಞರಿಂದ ತಾತ್ವಿಕ ಬೆಂಬಲ ದೊರಕಿದೆ, ನಿರ್ದಿಷ್ಟವಾಗಿ ಹೇಳುವುದಿದ್ದರೆ ನಿರ್ದಿಷ್ಟ ನಂಬಿಕೆಯಿರುವ ವರ್ಗಗಳ ಮೇಲಿನ ನಿರ್ಬಂಧಗಳನ್ನು ನೋಡುವವರು, ಅಂದರೆ ತಾಟಸ್ಥ್ಯ-ನೀತಿಯ ಸ್ವಾತಂತ್ರ್ಯವಾದಿ ತತ್ವಗಳೊಂದಿಗೆ ಹೊಂದಿಕೊಳ್ಳದವರು.
ಚಲಾವಣೆ ಅಥವಾ ಪರಿಮಾಣ ಸಿದ್ಧಾಂತ ನಡುವಿನ ಚರ್ಚೆ, ಮತ್ತು ಪ್ರಸಕ್ತ ಹಣಕಾಸಿನ ವಿಶ್ವಾಸಾರ್ಹತೆ ಬಗ್ಗೆ ಎದ್ದಿರುವ ಪ್ರಶ್ನೆಗಳನ್ನು 19ನೆ ಶತಮಾನದಲ್ಲಿ ಬ್ರಿಟನ್ ನಲ್ಲಿದ್ದ ಬ್ಯಾಂಕಿಂಗ್ ಶಾಲೆಗಳು ಮೊದಲೇ ಹೇಳಿವೆ.19ನೆ ಶತಮಾನದಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಗ್ರೇಟ್ ಬ್ರಿಟನ್‌ನ ನೀತಿಗಳ ಮೇಲೆ ಬ್ಯಾಂಕಿಂಗ್ ಶಾಲೆ ಮಹತ್ವದ ಪ್ರಭಾವ ಬೀರಿತ್ತು, ಇದೇ ವೇಳೆ ಚಲಾವಣೆ ಶಾಲೆಯು "ಭೂಖಂಡ"ದ ಮೇಲೆ ಹೆಚ್ಚಿನ ಪ್ರಭಾವ ಬೀರಿತ್ತು, ಪ್ರಮುಖವಾಗಿ ಬ್ರಿಟೀಷೇತರ ದೇಶಗಳಾದ ಲ್ಯಾಟಿನ್ ಹಣಕಾಸು ಒಕ್ಕೂಟ ಮತ್ತು ಹಿಂದಿನ ಸ್ಕ್ಯಾಂಡಿನಾವಿಯಾ ಹಣಕಾಸು ಒಕ್ಕೂಟ ಈ ಪ್ರಭಾವಕ್ಕೆ ಒಳಗಾಗಿದ್ದವು.
ಶಾಸ್ತ್ರ-ವಿರೋಧಿ ಅಥವಾ ಆಧಾರ ಸಿದ್ಧಾಂತ
[ಬದಲಾಯಿಸಿ]ಶಾಸ್ತ್ರೀಯ ರಾಜಕೀಯ ಅರ್ಥ ವ್ಯವಸ್ಥೆ ಜೊತೆಗಿರುವ ಇನ್ನೊಂದು ಸಮಸ್ಯೆಯೇನೆಂದರೆ ಹಣದ ಶಾಸ್ತ್ರ-ವಿರೋಧಿ ಕಲ್ಪನೆ, ಅಥವಾ "ಆಧಾರ ತತ್ವ". ಹಣ ನೀಡುವ ಸಂಸ್ಥೆಯ ಆಸ್ತಿಪಾಸ್ತಿ ಮತ್ತು ಸಾಲಸೋಲಗಳ ಆಧಾರದಲ್ಲಿ ಹಣದ ಮೌಲ್ಯ ನಿರ್ಧಾರವಾಗುತ್ತದೆ ಎಂಬುದು ಆಧಾರ ಸಿದ್ಧಾಂತದ ವಾದ.[೪೨] ಇದು ಶಾಸ್ತ್ರೀಯ ರಾಜಕೀಯ ಅರ್ಥ ವ್ಯವಸ್ಥೆಯ ಪ್ರಮಾಣ ಸಿದ್ಧಾಂತದ ಹಾಗಲ್ಲ, ಹಣ ನೀಡುವಾತನ ಬಳಿ ಬಾಧ್ಯತೆಗಳನ್ನು ಮುಚ್ಚುವಷ್ಟು ಆಸ್ತಿಪಾಸ್ತಿಗಳು ಇರುವವರೆಗೆ ಹಣದುಬ್ಬರಕ್ಕೆ ಕಾರಣವಾಗದ ರೀತಿಯಲ್ಲಿ ಬ್ಯಾಂಕುಗಳಂತಹ ಹಣಕಾಸು ಸಂಸ್ಥೆಗಳು ಹಣ ನೀಡಬಹುದು ಎಂದು ಆಧಾರ ಸಿದ್ಧಾಂತ ವಾದಿಸಿದೆ.
ಹಣದುಬ್ಬರ ನಿಯಂತ್ರಣ
[ಬದಲಾಯಿಸಿ]ಹಣದುಬ್ಬರವನ್ನು ನಿಯಂತ್ರಿಸುವ ಪ್ರಯತ್ನವಾಗಿ ಬಗೆಬಗೆಯ ವಿಧಾನಗಳನ್ನು ಬಳಸಲಾಗುತ್ತಿದೆ.
ಹಣಕಾಸು ನೀತಿ
[ಬದಲಾಯಿಸಿ]{{Expand}}
is a disambiguation entry; please do not transclude it. Instead, use a more specific template, such as {{Incomplete}}
, {{Expand list}}
, {{Missing}}
, or {{Expand section}}
.ಹಣಕಾಸು ನೀತಿ ಇಂದು ಹಣದುಬ್ಬರ ನಿಯಂತ್ರಣಕ್ಕಿರುವ ಪ್ರಾಥಮಿಕ ಸಾಧನ . ಫೆಡರಲ್ ರಿಸರ್ವ್‌ಗಳ ಸಾಲ ಪ್ರಮಾಣ ಕೆಳ ಮಟ್ಟದಲ್ಲಿರುವಂತೆ ನೋಡಿಕೊಳ್ಳುವ ಕೆಲಸ ಹೆಚ್ಚಿನ ಕೇಂದ್ರ ಬ್ಯಾಂಕುಗಳದ್ದಾಗಿದೆ, ಸಾಮಾನ್ಯವಾಗಿ ಉದ್ದೇಶಿತ ಗುರಿ ಪ್ರಮಾಣ ಸರಿಸುಮಾರು ವರ್ಷಕ್ಕೆ 2% ರಿಂದ 3%, ಮತ್ತು ಅಲ್ಪ ಹಣದುಬ್ಬರ ವ್ಯಾಪ್ತಿಯ ಉದ್ದೇಶಿತ ಗುರಿಯೊಳಗೆ, ಎಲ್ಲೋ ಒಂದೆಡೆ ವರ್ಷಕ್ಕೆ ಸುಮಾರು 2% ರಿಂದ 6%. ಹಣದುಬ್ಬರವಿಳಿತ ಸಂದರ್ಭದ ಪರಿಸ್ಥಿತಿಗಳು ಆರ್ಥ ವ್ಯವಸ್ಥೆಯ ಆರೋಗ್ಯಕ್ಕೆ ಅಪಾಯಕಾರಿಯಾಗಿರುವುದರಿಂದ, ಅಲ್ಪ ಪ್ರಮಾಣದ ಗುಣಾತ್ಮಕ ಹಣದುಬ್ಬರ ಸಾಮಾನ್ಯವಾಗಿ ಗುರಿಯಾಗಿರುತ್ತದೆ.
ಹಣದುಬ್ಬರ ನಿಯಂತ್ರಣದಲ್ಲಿಡುವ ಹಲವಾರು ವಿಧಾನಗಳ ಬಗ್ಗೆ ಸಲಹೆಗಳಿವೆ. ಕೇಂದ್ರ ಬ್ಯಾಂಕುಗಳಾದ U.S. ಫೆಡರಲ್ ರಿಸರ್ವ್‌ಯಂತಹ ಬ್ಯಾಂಕುಗಳು ಬಡ್ಡಿ ದರಗಳ ನಿಗದಿ ಹಾಗೂ ಇತರ ಕಾರ್ಯಾಚರಣೆಗಳ ಮೂಲಕ ಹಣದುಬ್ಬರದ ಮೇಲೆ ಅರ್ಥಪೂರ್ಣ ಪರಿಣಾಮ ಬೀರಬಹುದು. ಹೆಚ್ಚಿನ ಬಡ್ಡಿ ದರಗಳು ಮತ್ತು ಹಣಕಾಸು ಪೂರೈಕೆಯಲ್ಲಿ ನಿಧಾನಗತಿಯಂತಹ ಸಂಪ್ರದಾಯಿಕ ಮಾರ್ಗಗಳೊಂದಿಗೆ ಕೇಂದ್ರ ಬ್ಯಾಂಕುಗಳು ಹೋರಾಡುತ್ತವೆ ಅಥವಾ ಹಣದುಬ್ಬರವನ್ನು ತಪ್ಪಿಸುತ್ತವೆ, ಅವುಗಳ ಕ್ರಮಗಳು ಬೇರೆಬೇರೆಯಾಗಿದ್ದರೂ. ಉದಾಹರಣೆಗೆ, ಗುರಿಯನ್ನು ಮೀರಿ ಹಣದುಬ್ಬರ ಮುನ್ನಡೆದಾಗ, ಕೆಲವರು ಸುಸಂಗತ ಹಣದುಬ್ಬರ ಗುರಿ ಅನುಸರಿಸಿದರೆ, ಉಳಿದವರು ಹಣದುಬ್ಬರ ನಿಯಂತ್ರಣ ಅನುಸರಿಸುತ್ತಾರೆ, ಅದು ಕರಾರುವಕ್ಕಾಗಿರಬಹುದು ಅಥವಾ ಅಸ್ಪಷ್ಟವಾಗಿರಬಹುದು.
ಹಣದ ಅಭಿವೃದ್ಧಿ ದರವನ್ನು ಸ್ಥಿರವಾಗಿಡಲು ಮತ್ತು ಹಣದುಬ್ಬರ ನಿಯಂತ್ರಣಕ್ಕೆ ಹಣಕಾಸು ನೀತಿ ಬಳಸಲು ಹಣಕಾಸು ತಜ್ಞರು ಒತ್ತು ನೀಡಿದ್ದಾರೆ (ಬಡ್ಡಿದರ ಹೆಚ್ಚಿಸುವುದು, ಹಣದ ಪೂರೈಕೆಯಲ್ಲಿ ನಿಧಾನಗತಿ).ಆದರೆ ಆರ್ಥಿಕ ವಿಸ್ತರಣೆಗಳ ಸಂದರ್ಭದಲ್ಲಿ ಒಟ್ಟು ಬೇಡಿಕೆಯನ್ನು ಇಳಿಸಬೇಕು ಮತ್ತು ಆರ್ಥಿಕ ಹಿಂಜರಿತ ವೇಳೆ ಹಣದುಬ್ಬರವನ್ನು ಸ್ಥಿರವಾಗಿಡುವುದಕ್ಕಾಗಿ ಬೇಡಿಕೆ ಹೆಚ್ಚಿಸಬೇಕು ಎಂಬುದು ಕಿನಿಷಿಯನ್ನರ ವಾದ. ಹಣಕಾಸು ನೀತಿ ಮತ್ತು ವಿತ್ತ ನೀತಿಯನ್ನು ಬಳಸಿ ಒಟ್ಟು ಬೇಡಿಕೆಯನ್ನು ನಿಯಂತ್ರಿಸಬಹುದು (ತೆರಿಗೆ ಹೆಚ್ಚಳ ಅಥವಾ ಬೇಡಿಕೆ ಇಳಿಸಲು ಸರ್ಕಾರಿ ವೆಚ್ಚದಲ್ಲಿ ಕಡಿತ).
ಸ್ಥಿರ ವಿನಿಮಯ ದರಗಳು
[ಬದಲಾಯಿಸಿ]
ಸ್ಥಿರ ವಿನಿಮಯ ದರ ಚಲಾವಣೆ ಪ್ರಭುತ್ವದಡಿ, ದೇಶಗಳ ಚಲಾವಣೆಯು ಇನ್ನೊಂದು ಏಕ ಚಲಾವಣೆಯ ಮೌಲ್ಯಕ್ಕೆ ಒಳಪಟ್ಟಿದೆ ಅಥವಾ ಇತರೇ ಚಲಾವಣೆಗಳ ಬುಟ್ಟಿಗೆ (ಅಥವಾ ಕೆಲವೊಮ್ಮೆ ಮೌಲ್ಯದ ಇನ್ನೊಂದು ಅಳತೆಮಾನಕ್ಕೆ, ಅದು ಚಿನ್ನವಿರಬಹುದು). ಸ್ಥಿರ ವಿನಿಮಯ ದರವನ್ನು ಸಾಮಾನ್ಯವಾಗಿ ಚಲಾವಣೆ ಮೌಲ್ಯವನ್ನು ಸ್ಥಿರವಾಗಿಡಲು ಬಳಸುತ್ತಾರೆ, ಮುಖಾಮುಖಿಯಾದಾಗ ಚಲಾವಣೆಯನ್ನು ಸ್ಥಿರಗೊಳಿಸಲು. ಹಣದುಬ್ಬರ ನಿಯಂತ್ರಿಸುವ ಸಾಧನವಾಗಿ ಕೂಡ ಇದನ್ನು ಬಳಸಬಹುದು. ಆದಾಗ್ಯೂ, ಉಲ್ಲೇಖಿಸಿದ ಚಲಾವಣೆಯ ಮೌಲ್ಯ ಹೆಚ್ಚಾದಲ್ಲಿ ಮತ್ತು ಇಳಿದಲ್ಲಿ, ಚಲಾವಣೆ ಸಹ ಅದಕ್ಕೆ ಹೊಂದಿಕೊಳ್ಳುತ್ತದೆ. ಇದರ ಮೂಲಭೂತ ಅರ್ಥವೇನೆಂದರೆ ಸ್ಥಿರ ವಿನಿಮಯ ದರವಿರುವ ದೇಶದಲ್ಲಿ ಹಣದುಬ್ಬರ ದರವನ್ನು ಚಲಾವಣೆ ಸ್ಥಿರವಾಗಿರುವ ದೇಶದ ಹಣದುಬ್ಬರ ದರ ನಿರ್ಧರಿಸುತ್ತದೆ. ಹೆಚ್ಚುವರಿಯಾಗಿ, ಮಹದಾರ್ಥಿಕ ಸ್ಥಿರತೆಯನ್ನು ತರುವುದಕ್ಕಾಗಿ ಸರ್ಕಾರ ತನ್ನ ದೇಶಿಯ ಹಣಕಾಸು ನೀತಿ ಬಳಸುವುದನ್ನು ಸ್ಥಿರ ವಿನಿಮಯ ದರ ತಪ್ಪಿಸುತ್ತದೆ.
ಬ್ರೆಟ್ಟನ್ ವುಡ್ಸ್ ಒಪ್ಪಂದದ ಅಡಿಯಲ್ಲಿ , ಜಗತ್ತಿನ ಬಹುತೇಕ ದೇಶಗಳು US ಡಾಲರ್ ಗೆ ನಿಗದಿಪಡಿಸಿದ ಚಲಾವಣೆಯನ್ನು ಹೊಂದಿದವು. ಇದರಿಂದಾಗಿ ಆ ದೇಶಗಳಲ್ಲಿ ಸೀಮಿತ ಹಣದುಬ್ಬರ ಉಂಟಾಯಿತು, ಅಲ್ಲದೆ ಉಹನಾತ್ಮಕ ದಾಳಿಗಳ ಅಪಾಯಕ್ಕೆ ತಮ್ಮನ್ನು ಒಡ್ಡುವಂತಾಯಿತು. 1970ರ ಆದಿಯಲ್ಲಿ ಬ್ರೆಟ್ಟನ್ ವುಡ್ಸ್ ಒಪ್ಪಂದ ಮುರಿದು ಬಿದ್ದ ನಂತರ, ದೇಶಗಳು ಕ್ರಮೇಣವಾಗಿ ಚರ(ಬದಲಾಗುತ್ತಿರುವ) ವಿನಿಮಯ ದರಗಳತ್ತ ತಿರುಗಿದವು. ಆದಾಗ್ಯೂ, 20ನೆ ಶತಮಾನದ ಕೊನೆಯ ಭಾಗದಲ್ಲಿ ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ಪ್ರಯತ್ನದ ಒಂದು ಭಾಗವಾಗಿ ಕೆಲವು ದೇಶಗಳು ಸ್ಥಿರ ವಿನಿಮಯ ದರಕ್ಕೆ ಮರಳಿದವು. ಹಣದುಬ್ಬರ ನಿಯಂತ್ರಣಕ್ಕೆ ಸ್ಱಿರ ವಿನಿಮಯ ದರವನ್ನು ಬಳಸುವ ನೀತಿಯನ್ನು 20ನೆ ಶತಮಾನದ ಕೊನೆಯ ಭಾಗದಲ್ಲಿ ದಕ್ಷಿಣ ಅಮೆರಿಕಾದ ಅನೇಕ ದೇಶಗಳಲ್ಲಿ ಜಾರಿಗೆ ತರಲಾಯಿತು.(ಉದಾಹರಣೆಗೆ ಅರ್ಜೆಂಟೀನಾ(1991-2002), ಬೊಲಿವಿಯಾ, ಬ್ರೆಜಿಲ್ ಮತ್ತು ಚಿಲಿ).
ಚಿನ್ನದ ಗುಣಮಟ್ಟ
[ಬದಲಾಯಿಸಿ]ಚಿನ್ನದ ಗುಣಮಟ್ಟವು ಒಂದು ಹಣಕಾಸು ವ್ಯವಸ್ಥೆಯಾಗಿದ್ದು, ಅಲ್ಲಿ ಪ್ರಾದೇಶಿಕ ಸಾಮಾನ್ಯ ವಿನಿಮಯ ಮಾಧ್ಯಮಗಳೆಂದರೆ ಕಾಗದ ನೋಟುಗಳು, ಅವುಗಳನ್ನು ಸಾಮಾನ್ಯವಾಗಿ ಉಚಿತವಾಗಿ ನಿರ್ದಿಷ್ಟ ಚಿನ್ನದ ಪ್ರಮಾಣಗಳಿಗೆ ಪೂರ್ವ ಸಂಯೋಜಿಸಿ ಪರಿವರ್ತಿಸಬಹುದು. ಒಂದು ಚಲಾವಣೆಗೆ ನಾಣ್ಯದ ಪ್ರಮಾಣ ಎಷ್ಟಿರಬೇಕೆಂಬುದನ್ನು ತಿಳಿಯಪಡಿಸಿ, ಚಿನ್ನವನ್ನು ಹೇಗೆ ಬೆಂಬಲವಾಗಿ ಕಾರ್ಯರೂಪಕ್ಕೆ ತರಬಹುದು ಎಂಬುದನ್ನು ಈ ಗುಣಮಟ್ಟ ನಿರ್ದಿಷ್ಟವಾಗಿ ತಿಳಿಸುತ್ತದೆ. ಚಲಾವಣೆಗೆ ಯಾವುದೇ ಸಹಜ ಮೌಲ್ಯ ವಿಲ್ಲ, ಆದರೆ ಇದನ್ನು ವ್ಯಾಪಾರಿಗಳು ಸ್ವೀಕರಿಸುತ್ತಾರೆ ಏಕೆಂದರೆ ಸಮನಾದ ನಾಣ್ಯ ತೆತ್ತು ಇದನ್ನು ಮತ್ತೆ ಗಳಿಸಬಹುದು. ಉದಾಹರಣೆಗೆ, ರಜತದ ಒಂದು ತುಂಡನ್ನು ನೀಡಿ U.S. ರಜತ ಪ್ರಮಾಣಪತ್ರವನ್ನು ಮತ್ತೆ ಪಡೆದಂತೆ ಅಥವಾ ಬಿಡಿಸಿಕೊಂಡಂತೆ.
ಅಪೂರ್ವತೆ, ಬಾಳಿಕೆ, ವಿಭಜನೀಯತೆ, ವಿನಿಮಯ ಗುಣ, ಮತ್ತು ಸುಲಭ ಗುರುತಿಸುವಿಕೆಯಿಂದಾಗಿ ಚಿನ್ನ ಪ್ರಕಾರ ಎಲ್ಲೆಡೆ ಹಣದ ಪ್ರತೀಕವಾಗಿದೆ.[೪೩]ಅತಿ ಹಣದುಬ್ಬರ ಮತ್ತು ಹಣಕಾಸು ನೀತಿಯ ಇತರೆ ದುರುಪಯೋಗಗಳಿಂದ ಪ್ರಜೆಗಳನ್ನು ರಕ್ಷಿಸಲು ಹಣದ ಪ್ರತೀಕ ಮತ್ತು ಚಿನ್ನದ ಗುಣಮಟ್ಟವನ್ನು ಬಳಸಲಾಯಿತು, ಮಹಾನ್ ಕುಸಿತದ ವೇಳೆ ಕೆಲವು ದೇಶಗಳಲ್ಲಿ ಇವು ಕಂಡು ಬಂದಿದ್ದವು. ಆದಾಗ್ಯೂ, ಸಮಸ್ಯೆಗಳು ಮತ್ತು ಟೀಕೆಗಳಿಗೆ ಅವರು ಹೊರತಾಗಿರಲಿಲ್ಲ, ಮತ್ತು ಬ್ರೆಚ್ಚನ್ ವುಡ್ಸ್ ವ್ಯವಸ್ಥೆ ಅಂತರರಾಷ್ಟ್ರೀಯವಾಗಿ ಸ್ವೀಕೃತವಾದಾಗ ಅವರು ಭಾಗಷಃ ತೊರೆದರು. ಈ ವ್ಯವಸ್ಥೆಯಡಿ ಎಲ್ಲ ಇತರ ಪ್ರಮುಖ ಚಲಾವಣೆಗಳು ಡಾಲರ್ ನಿಗದಿಪಡಿಸಿದ ದರಕ್ಕೆ ಒಳಪಟ್ಟವು, ಆಗ ಚಿನ್ನದ ತಲಾ ಒಂದು ಔನ್ಸಿಗೆ $35 ದರ ನಿಗದಿಯಾಯಿತು. 1971ರಲ್ಲಿ ಬ್ರೆಟ್ಟನ್ ವುಡ್ಸ್ ವ್ಯವಸ್ಶೆ ಮುರಿದು ಬಿತ್ತು, ಪರಿಣಾಮವಾಗಿ ಹೆಚ್ಚಿನ ದೇಶಗಳು ಕಾಗದ ಹಣಕ್ಕೆ ಬದಲಾಯಿಸಿಕೊಂಡವು - ಈ ಹಣವನ್ನು ಆಯಾ ದೇಶದ ಕಾನೂನುಗಳೇ ನಿರ್ಧರಿಸುತ್ತವೆ. ಈ ನಡುವೆ, ಶೇಕಡ 100 ಚಿನ್ನದ ಗುಣಮಟ್ಟಕ್ಕೆ ಮರಳುವುದನ್ನು ಆಸ್ಟ್ರೇಲಿಯಾದ ಅರ್ಥ ಶಾಸ್ತ್ರಜ್ಞರು ಪ್ರಬಲವಾಗಿ ಪ್ರತಿಪಾದಿಸಿದರು.
ಚಿನ್ನದ ಗುಣಮಟ್ಟದಡಿ, ದೀರ್ಘಕಾಲದ ಹಣದುಬ್ಬರ (ಅಥವಾ ಹಣದುಬ್ಬರವಿಳಿತ)ದರವನ್ನು ಒಟ್ಟು ಫಲಿತಾಂಶಕ್ಕೆ ಸಂಬಂಧಿಸಿದ ಚಿನ್ನದ ಪೂರೈಕೆಯಲ್ಲಿನ ಬೆಳವಣಿಗೆಯ ಪ್ರಮಾಣದಿಂದ ನಿರ್ಧರಿಸಬಹುದು.[೪೪] ಇದು ಹಣದುಬ್ಬರ ಪ್ರಮಾಣದಲ್ಲಿ ಅನಿಯಂತ್ರಿತ ಅನಿಶ್ಚಿತತೆಗೆ ಕಾರಣವಾಗಬಹುದು ಎಂದು ವಿಮರ್ಶಕರು ವಾದಿಸಿದರೆ, ಮತ್ತು ಚಿನ್ನದ ಗಣಿಗಾರಿಕೆಯಿಂದಲೇ ಮೂಲಭೂತವಾಗಿ ಹಣಕಾಸು ನೀತಿಯ ನಿರ್ಧಾರವಾಗಬೇಕು,[೪೫][೪೬] ಈ ವಾದವೇ ಮಹಾನ್ ಕುಸಿತಕ್ಕೆ ಕಾರಣವಾಯಿತು ಎಂದೂ ಕೆಲವರು ನಂಬಿದರು.[೪೬][೪೭][೪೮]
ವೇತನ ಮತ್ತು ಬೆಲೆ ನಿಯಂತ್ರಣಗಳು
[ಬದಲಾಯಿಸಿ]ಹಿಂದೆ ಪ್ರಯತ್ನಿಸಿದ ಇನ್ನೊಂದು ವಿಧಾನವೆಂದರೆ ವೇತನ ಮತ್ತು ಬೆಲೆ ನಿಯಂತ್ರಣಗಳು ("ಆದಾಯ ನೀತಿಗಳು"). ಯುದ್ದಕಾಲದ ಸನ್ನಿವೇಶಗಳಲ್ಲಿ ವೈಚಾರಿಕತೆಯೂ ಜೊತೆಗೂಡಿದಾಗ ವೇತನ ಮತ್ತು ಬೆಲೆ ನಿಯಂತ್ರಣಗಳು ಯಶಸ್ವಿಯಾಗಿವೆ. ಆದಾಗ್ಯೂ, ಇತರೆ ಸಂದರ್ಭಗಳಲ್ಲಿ ಅವುಗಳ ಬಳಕೆಗೆ ಹೆಚ್ಚು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 1972ರಲ್ಲಿ ರಿಚರ್ಡ್ ನಿಕ್ಸನ್ ವೇತನ ಮತ್ತು ಬೆಲೆ ನಿಯಂತ್ರಣಗಳನ್ನು ಹೇರಿದ್ದು ಅವುಗಳ ಬಳಕೆಯಲ್ಲಾದ ಗಮನಾರ್ಹ ವೈಫಲ್ಯತೆಗಳು. ಆಸ್ಟ್ರೇಲಿಯಾದಲ್ಲಿ ಬೆಲೆಗಳು ಮತ್ತು ಆದಾಯಗಳ ಒಡಂಬಡಿಕೆ ಮತ್ತು ನೆದರ್ ಲೆಂಡ್ ನ ವಾಸ್ಸೆನಾರ್ ಒಪ್ಪಂದ ಹೆಚ್ಚು ಯಶಸ್ಸು ಪಡೆದ ಉದಾಹರಣೆಗಳಲ್ಲಿ ಸೇರಿವೆ.
ವೇತನ ಮತ್ತು ಬೆಲೆ ನಿಯಂತ್ರಣಗಳು ಸಾರ್ವತ್ರಿಕವಾಗಿ ತಾತ್ಕಾಲಿಕ ಮತ್ತು ಅಸಾಧಾರಣ ಎನಿಸಿಕೊಂಡಿವೆ, ಇವು ಪರಿಣಾಮಕಾರಿಯಾಗುವುದು ವೇತನ ಮತ್ತು ಬೆಲೆ ನಿಯಂತ್ರಣ ಪ್ರಭುತ್ವದ ಸಮಯದಲ್ಲಿ ಹಣದುಬ್ಬರದ ಪ್ರಮುಖ ಕಾರಣಗಳನ್ನು ಕಡಿಮೆಗೊಳಿಸಲು ನೀತಿಗಳನ್ನು ರೂಪಿಸಿದಲ್ಲಿ ಮಾತ್ರ, ಉದಾಹರಣೆಗೆ, ಹೋರಾಡುತ್ತಲೇ ಯುದ್ಧ ಗೆಲ್ಲುವುದು. ಅವುಗಳು ಮಾರುಕಟ್ಟೆಗೆ ಕಳುಹಿಸುವ ತಿರುಚಿದ ಸೂಚನೆಗಳಿಂದಾಗಿ ಆಗಿಂದಾಗ್ಗೆ ವ್ಯತಿರಿಕ್ತ ಪರಿಣಾಮಗಳೂ ಆಗುತ್ತವೆ. ಕೃತಕವಾದ ಕಡಿಮೆ ಬೆಲೆಗಳು ಆಗ್ಗಿಂದಾಗ್ಗೆ ವೈಚಾರಿಕತೆ ಮತ್ತು ಕೊರತೆಗಳು ಮತ್ತು ಭವಿಷ್ಯದ ಬಂಡವಾಳ ಹೂಡಿಕೆಯನ್ನು ವಿರೋಧಿಸುತ್ತವೆ, ಪರಿಣಾಮವಾಗಿ ಮತ್ತಷ್ಟು ಕೊರತೆ ಉಂಟಾಗುತ್ತದೆ. ಸಾಮಾನ್ಯ ಆರ್ಥಿಕ ವಿಶ್ಲೇಷಣೆಯೆಂದರೆ, ಯಾವುದೇ ಉತ್ಪನ್ನ ಅಥವಾ ಸೇವೆ ನಿಜವಾದ ಬೆಲೆಗಿಂತ ಕಡಿಮೆ ಬೆಲೆಗೆ ದೊರಕಿದಲ್ಲಿ ಅವು ಹೆಚ್ಚು ಬಳಕೆಯಾಗುತ್ತವೆ. ಉದಾಹರಣೆಗೆ, ಬ್ರೆಡ್ಡಿನ ಅಧಿಕೃತ ಬೆಲೆ ಅತಿ ಕಡಿಮೆಯಾಗಿದ್ದಲ್ಲಿ, ಅಧಿಕೃತ ಬೆಲೆಗಳಿಗೆ ಅತಿ ಕಡಿಮೆ ಬ್ರೆಡ್ ಸಿಗಬಹುದು, ಮತ್ತು ಭವಿಷ್ಯದ ಅಗತ್ಯಗಳನ್ನು ತೃಪ್ತಿಪಡಿಸುವುದಕ್ಕಾಗಿ ಮಾರುಕಟ್ಟೆಯಲ್ಲಿ ಬ್ರೆಡ್ಡಿನ ಮೇಲೆ ಅತಿ ಕಡಿಮೆ ಬಂಡವಾಳ ಹೂಡಲಾಗಿದೆ, ಇದರಿಂದಾಗಿ ದೀರ್ಘಾವಧಿಯಲ್ಲಿ ಸಮಸ್ಯೆಯನ್ನು ಹೆಚ್ಚಿಸಿದಂತಾಗುತ್ತದೆ.
ಹಣದುಬ್ಬರದ ವಿರುದ್ಧ ಹೋರಾಟದ ಮಾರ್ಗ ಕಂಡುಕೊಳ್ಳುವುದಕ್ಕಾಗಿ ತಾತ್ಕಾಲಿಕ ನಿಯಂತ್ರಣಗಳು ಕುಸಿತವನ್ನು ಪೂರಕ ವಾಗಿ ನೀಡುವ ಸಾಧ್ಯತೆಗಳಿವೆ: ಹಣದುಬ್ಬರದ ವಿರುದ್ಧ ಹೋರಾಡಲು ನಿಯಂತ್ರಣಗಳು ಕುಸಿತವನ್ನು ಪರಿಣಾಮಕಾರಿಯಾಗಿ ಮಾಡುತ್ತವೆ (ನಿರುದ್ಯೋಗ ಹೆಚ್ಚಿಸುವ ಅಗತ್ಯವನ್ನು ಕಡಿಮೆಗೊಳಿಸುವುದರಿಂದ), ಈ ನಡುವೆ ಬೇಡಿಕೆ ಹೆಚ್ಚಿದ್ದ ಸಂದರ್ಭದಲ್ಲಿ ಉದ್ದೇಶವನ್ನು ನಿಯಂತ್ರಿಸುವ ವಿಕೃತ ಸ್ವಭಾವಗಳನ್ನು ಕುಸಿತ ತಪ್ಪಿಸುತ್ತದೆ. ಆದಾಗ್ಯೂ, ಆರ್ಥಿಕ ತಜ್ಱರ ಸಾರ್ವತ್ರಿಕ ಸಲಹೆಯೆಂದರೆ ಬೆಲೆ ನಿಯಂತ್ರಣಗಳನ್ನು ಹೇರುವುದಲ್ಲ, ಬದಲಾಗಿ ಆರ್ಥಿಕತೆ ಮುಂದೆ ಹೊಂದಾಣಿಕೆ ಮಾಡಿಕೊಳ್ಳುತ್ತದೆ ಮತ್ತು ಲಾಭವಲ್ಲದ ಆರ್ಥಿಕ ಚಟುವಟಿಕೆಗಳನ್ನು ತೊರೆಯುತ್ತದೆ ಎಂದು ಕಲ್ಪಿಸಿಕೊಂಡು ಬೆಲೆಗಳನ್ನು ಉದಾರಗೊಳಿಸುವುದು. ಹಣದುಬ್ಬರಕ್ಕೆ ಯಾವುದೇ ವಸ್ತುಗಳು ಕಾರಣವಾಗಿದ್ದರೂ ಕಡಿಮೆ ಚಟುವಟಿಕೆಗಳು ಕೆಲವು ಬೇಡಿಕೆಗಳನ್ನು ಸೃಷ್ಟಿಸುತ್ತವೆ, ಅದು ಕೆಲಸವಾಗಿರಬಹುದು ಅಥವಾ ಸಂಪನ್ಮೂಲಗಳಿರಬಹುದು, ಮತ್ತು ಒಟ್ಟು ಆರ್ಥಿಕ ಫಲಿತಾಂಶದ ಜೊತೆಗೆ ಹಣದುಬ್ಬರ ಸಹ ಬಂದು ನಿಲ್ಲುತ್ತದೆ. ಇದು ಆಗ್ಗಿಂದಾಗ್ಗೆ ತೀವ್ರ ಕುಸಿತಕ್ಕೆ ಕಾರಣವಾಗುತ್ತದೆ, ಉತ್ಪಾದನಾ ಸಾಮರ್ಥ್ಯ ಪುನರ್ ವಿಂಗಡನೆಯಾದಾಗ ಮತ್ತು ಹೀಗೆ ಆಗ್ಗಿಂದಾಗ್ಗೆ ಜೀವನೋಪಾಯಕ್ಕೆ ಕಲ್ಲು ಹಾಕುವುದರಿಂದಾಗಿ ಇದು ಜನರಿಗೆ ಅಪ್ರಿಯವಾಗಿದೆ (ನೋಡಿ ರಚನಾತ್ಮಕ ವಿನಾಶ)
ಜೀವನ ವೆಚ್ಚ ಭತ್ಯ
[ಬದಲಾಯಿಸಿ]
ಸ್ಥಿರ ಪಾವತಿಯು ತನ್ನ ನೈಜ ಮೌಲ್ಯವನ್ನು ಸ್ಥಿರವಾಗಿ ಇಡಲು ಹಣದುಬ್ಬರದ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ಅದರ ನೈಜ ಖರೀದಿ ಸಾಮಾರ್ಥ್ಯವನ್ನು ಹಣದುಬ್ಬರ ತಿಂದು ಹಾಕುತ್ತದೆ. ಹಲವು ದೇಶಗಳಲ್ಲಿ, ಉದ್ಯೋಗ ಕರಾರುಗಳು, ಪಿಂಚಣಿ ಭತ್ಯಗಳು, ಮತ್ತು ಸರ್ಕಾರಿ ಭತ್ಯಗಳು (ಸಾಮಾಜಿಕ ಭದ್ರತೆ) ಜೀವನ ವೆಚ್ಚ ಸೂಚ್ಯಂಕಕ್ಕೆ ಮತ್ತು ಮಾದರಿಯಾಗಿ ಗ್ರಾಹಕ ಬೆಲೆ ಸೂಚ್ಯಂಕಕ್ಕೆ ಒಳಪಟ್ಟಿವೆ.[೪೯] ಜೀವನ ವೆಚ್ಚ ಸೂಚ್ಯಂಕದಲ್ಲಿ ಆಗುವ ಬದಲಾವಣೆಗಳ ಆಧಾರದ ಮೇಲೆ ಜೀವನ ವೆಚ್ಚ ಭತ್ಯ (COLA) ವೇತನಗಳನ್ನು ಹೊಂದಾಣಿಸುತ್ತದೆ. ವೇತನಗಳನ್ನು ವಾರ್ಷಿಕವಾಗಿ ಹೊಂದಾಣಿಸುವುದು ಸಾಮಾನ್ಯ.[೪೯] ಇವು ಸಹ ಜೀವನ ವೆಚ್ಚ ಸೂಚ್ಯಂಕದ ಜೊತೆ ಸೇರಿರಬಹುದು, ಅಂದರೆ ನೌಕರನು ಇನ್ನೊಂದು ಭೂಪ್ರದೇಶಕ್ಕೆ ವರ್ಗಾವಣೆಗೊಂಡಲ್ಲಿ, ಆ ಪ್ರದೇಶಕ್ಕೆ ಅನುಗುಣವಾಗಿ ಜೀವನ ವೆಚ್ಚ ಬದಲಾಗುತ್ತದೆ.
ಉದ್ಯೋಗ ಕರಾರಿನಲ್ಲಿರುವ ವಾರ್ಷಿಕ ಏರಿಕೆ ಕಲಂಗಳು ನಿರ್ದಿಷ್ಟವಾಗಿ ಪೂರ್ವಾನ್ವಯವಾಗುತ್ತವೆ ಅಥವಾ ಕಾರ್ಮಿಕನ ವೇತನದಲ್ಲಿ ಭವಿಷ್ಯದಲ್ಲಾಗುವ ಶೇಕಡ ಹೆಚ್ಚಳ ಯಾವುದೇ ಸೂಚ್ಯಂಕಕ್ಕೆ ಒಳಪಟ್ಟಿಲ್ಲ. ಮಾತುಕತೆಗಳ ಮೂಲಕ ಹೆಚ್ಚಾದ ಈ ವೇತನವನ್ನು ಆಡು ಭಾಷೆಯಲ್ಲಿ ಜೀವನ ವೆಚ್ಚ ಹೊಂದಾಣಿಕೆಗಳು ಎನ್ನುತ್ತೇವೆ ಅಥವಾ ಬಾಹ್ಯ ನಿರ್ಧಾರಿತ ಸೂಚ್ಯಂಕಗಳಲ್ಲಿ ಇದೇ ರೀತಿಯ ಹೆಚ್ಚಳ ಕಂಡು ಬಂದಲ್ಲಿ ಜೀವನ ವೆಚ್ಚವೂ ಹೆಚ್ಚುವುದು. ಅನೇಕ ಅರ್ಥ ಶಾಸ್ತ್ರಜ್ಞರು ಮತ್ತು ಪರಿಹಾರ ವಿಶ್ಲೇಷಕರು ಪೂರ್ವ ನಿರ್ಧರಿತ ಭವಿಷ್ಯವನ್ನು ಪರಿಗಣಿಸಿದಾಗ "ಜೀವನ ವೆಚ್ಚ ಏರಿಕೆ" ಎರಡು ಕಾರಣಗಳಿಗೆ ತಪ್ಪು ದಾರಿ ಹಿಡಿಯುವ ಸಾಧ್ಯತೆಗಳಿರುವುದು ಕಂಡು ಬಂತು: (1) ಕೈಗಾರಿಕೀಕರಣಗೊಂಡ ಜಗತ್ತಿನ ಇತ್ತೀಚಿನ ದಿನಗಳಲ್ಲಿ, ಲೆಕ್ಕಾಚಾರದ ಜೀವನ ವೆಚ್ಚ ಸೂಚ್ಯಂಕಕ್ಕಿಂತಲೂ ವೇಗದಲ್ಲಿ ಸರಾಸರಿ ವೇತನ ಏರಿದೆ. ಸರಳ ಜೀವನ ವೆಚ್ಚದ ಬದಲು ಉತ್ಪಾದನೆಯಲ್ಲಿನ ಏರಿಕೆ ಮತ್ತು ಕಾರ್ಮಿಕನ ಚೌಕಾಸಿ ಸಾಮಾರ್ಥ್ಯದ ಪ್ರಭಾವ ಪ್ರತಿಬಿಂಬಿಸಿರುವುದು ಇದಕ್ಕೆ ಕಾರಣ, (2) ಮತ್ತು ಹೆಚ್ಚಿನ ಜೀವನ ವೆಚ್ಚ ಸೂಚ್ಯಂಕಗಳು ದೂರದೃಷ್ಟಿ ಹೊಂದಿಲ್ಲ, ಆದರೆ ಅವು ಹಾಲಿ ಅಥವಾ ಹಳೆ ಮಾಹಿತಿಯ ಜೊತೆ ತುಲನೆ ಮಾಡುತ್ತವೆ.
ಇದನ್ನು ನೋಡಿರಿ
[ಬದಲಾಯಿಸಿ]- ಕೃಷಿ ಹಣದುಬ್ಬರ
- ಸ್ಥಿರ ಖರೀದಿ ಸಾಮಾರ್ಥ್ಯ ಲೆಕ್ಕಾಚಾರ
- ಗ್ರಾಹಕ ಬೆಲೆ ಸೂಚ್ಯಂಕ
- ಹಣದುಬ್ಬರವಿಳಿತ
- ಮೌಲ್ಯ ಇಳಿಯುವಿಕೆ
- ಹಣದುಬ್ಬರ ಇಳಿಕೆ
- ಅಪಮೌಲೀಕರಣ
- ಅತಿ ಹಣದುಬ್ಬರ
- ಹಣದುಬ್ಬರ ಲೆಕ್ಕಶಾಸ್ತ್ರ
- ಹಣದುಬ್ಬರ ಹೊಂದಿಕೆ
- ಹಣದುಬ್ಬರ ತಡೆ
- ಅಂತರಾಷ್ಟ್ರೀಯ ಹಣಕಾಸು ವರದಿ ಮಾನಕ
- ಹಣದುಬ್ಬರ ದರದ ಆಧಾರದಲ್ಲಿ ದೇಶದ ಪಟ್ಟಿಗಳು
- ಮಹದಾರ್ಥಿಕ ಶಾಸ್ತ್ರ
- ದರ ಕ್ರಾಂತಿ
- ನೈಜ ವಿರುದ್ಧ ನಾಮಕಾವಸ್ಥೆ ಮೌಲ್ಯ (ಅರ್ಥಶಾಸ್ತ್ರ)
- 72ರ ನಿಯಮ
- ಉಬ್ಬರಮಂದ ಸ್ಥಿತಿ
- ಸ್ಥಿರ ರಾಜ್ಯ ಆರ್ಥಿಕತೆ
- ತೆರವಳಿ
- ಸಂಯುಕ್ತ ರಾಷ್ಟ್ರಗಳ ಅಂಕಿಅಂಶ ವಿಭಾಗ
- 1920ರ ಜರ್ಮನ್ ಹಣದುಬ್ಬರ
- 2007–2008ರ ವಿಶ್ವ ಆಹಾರ ಬೆಲೆ ಬಿಕ್ಕಟ್ಟು
ಟಿಪ್ಪಣಿಗಳು
[ಬದಲಾಯಿಸಿ]- ↑ ನೋಡಿ:
- Wyplosz & Burda 1997 (Glossary);
- Blanchard 2000 (Glossary)
- Barro 1997 (Glossary)
- Abel & Bernanke 1995 (Glossary)
- ↑ ಬೆಲೆಯ ಸ್ಥಿರತೆ ಯಾಕೆ ಬೇಕು?, ಸೆಂಟ್ರಲ್ ಬ್ಯಾಂಕ್ ಆಫ್ ಐರ್‌ಲ್ಯಾಂಡ್, ಸಪ್ಟೆಂಬರ್ 11, 2008ರಲ್ಲಿ ಪ್ರವೇಶಿಸಲಾಗಿದೆ.
- ↑ ಪೌಲ್ ಹೆಚ್. ವಾಲ್ಗೆನ್‌ಬಾಚ್, ನೋರ್ಮನ್ ಈ. ಡಿಟ್ರಿಚ್ ಮತ್ತು ಎರ್ನೆಸ್ಟ್ ಐ. ಹಾನ್ಸನ್, (1973), ಫೈನಾನ್ಶಿಯನ್ ಅಕೌಂಟಿಂಗ್, ನ್ಯೂ ಯಾರ್ಕ್: ಹರ್‌ಕೋರ್ಟ್ ಬ್ರಾಸ್ ಜವೊನೊವಿಚ್, ಇಂಕ್. ಪುಟ 429. “ಘಟಕ ಅಳೆಯುವ ತತ್ವ: ಲೆಕ್ಕಶಾಸ್ತ್ರದಲ್ಲಿ ಘಟಕದ ಅಳೆತೆಯು ಹೆಚ್ಚು ಸೂಕ್ತ ನೋಟಿನ ಹಣದ ಘಟಕದ ಆಧಾರದ ಮೇಲೆ ಅಳೆಯಲಾಗುವುದು. ಅಳತೆಯ ಘಟಕ ಸ್ಥರವಾಗಿದೆ ಎಂದು ತತ್ವ ಸಹ ಊಹಿಸುತ್ತದೆ; ಅವುಗಳೆಂದರೆ ಸಾಮಾನ್ಯ ಖರೀದಿಯ ಸಾಮರ್ಥ್ಯದಲ್ಲಿನ ಬದಲಾವಣೆಗಳಾದಲ್ಲಿ ಮೂಲ ಹಣಕಾಸು ಹೇಳಿಕೆಗಳಿಗೆ ಸೂಕ್ತ ಹೊಂದಾಣಿಕೆಗಳನ್ನು ಮಾಡುವ ಅಗತ್ಯವಿಲ್ಲ ಎಂದು ನಿರ್ಧರಿಸಲಾಗಿದೆ.”
- ↑ Mankiw 2002, pp. 22–32
- ↑ ಹಮ್ಮೆಲ್, ಜೆಫ್ರೆ ರೋಜರ್ಸ್. "ಡೆತ್ ಆಂಡ್ ಟ್ಯಾಕ್ಸ್‌ಸ್, ಇನ್‌ಕ್ಲೂಡಿಂಗ್ ಇನ್‌ಫ್ಲೇಶನ್: ದಿ ಪಬ್ಲಿಕ್ ವರ್ಸಸ್ ಇಕನಾಮಿಸ್ಟ್" (ಜನವರಿ 2007). http://www.econjournalwatch.org/pdf/HummelCommentJanuary2007.pdf Archived 2009-03-25 ವೇಬ್ಯಾಕ್ ಮೆಷಿನ್ ನಲ್ಲಿ. p.56
- ↑ [11] ^ ರಾಬರ್ಟ್ ಬರ್ರೊ ಮತ್ತು ವಿಕ್ಟೋರಿಯಾ ಗ್ರಿಲ್ಲಿ (1994), ಯುರೋಪಿಯನ್ ಮ್ಯಾಕ್ರೋಇಕನಾಮಿಕ್ಸ್ , Ch. 8, ಪು. 139, ಚಿ. 8.1. ಮ್ಯಾಕ್‌ಮಿಲನ್, ISBN 0-333-57764-7.
- ↑ ೭.೦ ೭.೧ Mankiw 2002, pp. 81–107
- ↑ Abel & Bernanke 2005, pp. 266–269
- ↑ ಹಮ್ಮೆಲ್, ಜೆಫ್ರೆ ರೋಜರ್ಸ್. "ಡೆತ್ ಆಂಡ್ ಟ್ಯಾಕ್ಸ್‌ಸ್, ಇನ್‌ಕ್ಲೂಡಿಂಗ್ ಇನ್‌ಫ್ಲೇಶನ್: ದಿ ಪಬ್ಲಿಕ್ ವರ್ಸಸ್ ಇಕನಾಮಿಸ್ಟ್" (ಜನವರಿ 2007). http://www.econjournalwatch.org/pdf/HummelCommentJanuary2007.pdf Archived 2009-03-25 ವೇಬ್ಯಾಕ್ ಮೆಷಿನ್ ನಲ್ಲಿ. p.56
- ↑ [17] ^ "ಎಸ್ಕೆಪಿಂಗ್ ಫ್ರಮ್ ಎ ಲಿಕ್ವಿಡಿಟಿ ಟ್ರ್ಯಾಪ್ ಆಂಡ್ ಡಿಫ್ಲೇಶನ್: ದಿ ಫೂಲ್‌ಫ್ರೂಫ್ ವೇ ಆಂಡ್ ಆದರ್ಸ್" ಲಾರ್ಸ್ ಈ.ಒ. ಸ್ವೆನಸ್ಸನ್, ಜರ್ನಲ್ ಆಫ್ ಇಕನಾಮಿಕ್ಸ್ ಪರ್ಸ್ಪೆಕ್ಟಿವ್ಸ್ , ಸಂಪುಟ 17, ಸಂಚಿಕೆ 4 ಕುಸಿತ 2003, ಪು145-166
- ↑ ೧೧.೦ ೧೧.೧ ೧೧.೨ ೧೧.೩ ೧೧.೪ Taylor, Timothy (2008), Principles of Economics, Freeload Press, ISBN 193078905
{{citation}}
: Check|isbn=
value: length (help) - ↑ ವಾರ್ಷಿಕ ವರದಿ (2006), ರಾಯಲ್ ಕ್ಯಾನೆಡಿಯನ್ ಮಿಂಟ್, ಪು. 4
- ↑ [21] ^ ಫ್ರಾಂಕ್ ಶೋಸ್ಟಾಕ್, "ಕಾಮೊಡಿಟಿ ಪ್ರೈಸಸ್ ಆಂಡ್ ಇನ್‌ಫ್ಲೇಶನ್: ವಾಟ್ ಇಸ್ ದ ಕನೆಕ್ಷನ್?", ಮಿಸಸ್ ಸಂಸ್ಥೆ Archived 2009-08-07 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಮೈಕಲ್ ಎಫ್. ಬ್ರ್ಯಾನ್, "'ಹಣದುಬ್ಬರ' ಪದದ ಮೂಲ ಮತ್ತು ವಿಕಸನ Archived 2008-08-19 ವೇಬ್ಯಾಕ್ ಮೆಷಿನ್ ನಲ್ಲಿ."
- ↑ [23] ^ ಮಾರ್ಕ್ ಬ್ಲೌಗ್, "ಇಕನಾಮಿಕ್ಸ್ ಥೀಯರಿ ಇನ್ ರೆಟ್ರೊಸ್ಪೆಕ್ಟ್", ಪುಟ. 129: "...ಇದು ಹಣದುಬ್ಬರದ ಕಾರಣವಾಗಿದೆ, ಅಥವಾ, ದಿನದ ಭಾಷೆಯನ್ನು ಬಳಸಲು, 'ಬ್ಯಾಂಕ್‌ನೋಟ್‌ಗಳ ಮೌಲ್ಯ ಇಳಿಕೆ.'"
- ↑ Kiley, Michael J. (2008), "Estimating the common trend rate of inflation for consumer prices and consumer prices excluding food and energy prices" (PDF), Finance and Economic Discussion Series, Federal Reserve Board
- ↑ ನೋಡಿ:
- ↑ Mankiw 2002, p. 22-32
- ↑ ಈ ಸಂಖ್ಯೆಗಳು ಮೂಲ ವರ್ಷ 1982ರಲ್ಲಿ ಮೂಲ ಮಟ್ಟ 100ರಿಂದ ಎಲ್ಲಾ ನಗರ ಗ್ರಾಹಕರು, ಎಲ್ಲಾ ವಸ್ತುಗಳು, CPIAUCNS ಸರಣಿಗಳಿಗಾಗಿ ಯುಎಸ್ ಗ್ರಾಹಕ ಬೆಲೆ ಸೂಚ್ಯಂಕಕ್ಕೆ ಇಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿ ಮಾಡಿದೆ. 2008 ಆಗಸ್ಟ್ 8ರಲ್ಲಿ ಸೈಂಟ್ ಲೂಯಿಸ್‌ನ ಫೆಡರಲ್ ರಿಸರ್ವ್ ಬ್ಯಾಂಕ್‌ನಲ್ಲಿ FRED ಡಾಟಾಬೇಸ್ ನಿಂದ ಡೌನ್‌ಲೋಡ್ ಮಾಡಲಾಗಿದೆ.
- ↑ Mankiw 2002, p. 81-107
- ↑ [37] ^ ಪ್ರೋ. ಡಾ. ಉಮಿತ್ ಗುಸೆನ್ಮೆ, ಡಾ. ಐಲಿನ್ ಪೊರೊಯ್ ಅರ್ಸೊಯ್, ಟರ್ಕಿಯಲ್ಲಿ ಹಣಕಾಸು ವರದಿ ಮಾಡುವಿಕೆಯಲ್ಲಿ ಬದಲಾವಣೆ, ಹಣದುಬ್ಬರ ಲೆಕ್ಕಶಾಸ್ತ್ರ ಐತಿಹಾಸಿಕ ಅಭಿವೃದ್ಧಿ 1960 - 2005, ಪುಟ 9, "ಪರ್ಚೇಸಿಂಗ್ ಪವರ್ ಆಫ್ ನಾನ್ ಮಾನಿಟರಿ ಐಟ್ಸಂ ಡಸ್ ನಾಟ್ ಚೇಂಚ್ ಇನ್ ಸ್ಪೈಟ್ ಆಫ್ ವೇರಿಯೇಶನ್ ಇನ್ ನ್ಯಾಷನಲ್ ಕರೆನ್ಸಿ ವ್ಯಾಲ್ಯೂ." http://www.mufad.org/index2.php?option=com_docman&task=doc_view&gid=9&Itemid=100
- ↑ Bulkley, George (1981). "Personal Savings and Anticipated Inflation". The Economic Journal. 91 (361): 124–135. doi:10.2307/2231702. Retrieved 2008-09-30.
{{cite journal}}
: Unknown parameter|month=
ignored (help) - ↑ ಬ್ರಿಟಾನಿಕಾ ವಿಶ್ವಕೋಶ, "ದರ ಏರಿಕೆ ಸಿದ್ಧಾಂತ".
- ↑ [43] ^ ಥೋರ್ಸ್ಟೆನ್ ಪೊಲಿಯಟ್, "ಇನ್‌ಫ್ಲೇಶನ್ ಇಸ್ ಎ ಪಾಲಿಸಿ ದ್ಯಾಟ್ ಕ್ಯಾನಾಟ್ ಲಾಸ್ಟ್ Archived 2009-04-29 ವೇಬ್ಯಾಕ್ ಮೆಷಿನ್ ನಲ್ಲಿ.", ಮಿಸಸ್ ಸಂಸ್ಥೆ
- ↑ ತೋಬಿನ್, ಜೆ., ಎಕೊನೊಮೆಟ್ರಿಕಾ, ಸಂ 33, 1965 "ಹಣ ಮತ್ತು ಆರ್ಥಿಕ ಅಭಿವೃದ್ಧಿ"
- ↑ ಕಾಂಗ್ರೆಸ್‌ಗೆ ಫೆಡರಲ್ ರಿಸರ್ವ್ ಮಂಡಳಿಯ ಅರ್ಧವಾರ್ಷಿಕ ಹಣಕಾಸು ನೀತಿ ವರದಿದುಂಡುಮೇಜು Archived 2007-09-30 ವೇಬ್ಯಾಕ್ ಮೆಷಿನ್ ನಲ್ಲಿ.2004ರ ಜುಲೈ 1ರಂದು ಜೀನ್ ಮತ್ತು ಕ್ಲೌಡ್ ಟ್ರಿಚೆಟ್‌ರವರಿಂದ ಪರಿಚಯಾತ್ಮಕ ಹೇಳಿಕೆ ''
- ↑ [48] ^ ರೊಬರ್ಟ್ ಜೆ. ಗೊರ್ಡನ್ (1988), ಮೈಕ್ರೋಇಕನಾಮಿಕ್ಸ್: ಥೀಯರಿ ಮತ್ತು ನೀತಿ , 2ನೇ ಆ., ಅದ್ಯಾ. 22.4, 'ಹಣದುಬ್ಬರದ ಆಧುನಿಕ ಸಿದ್ದಾಂತಗಳು'. ಮ್ಯಾಕ್‌ಗ್ರಾವ್-ಹಿಲ್.
- ↑ Lagassé, Paul (2000). "Monetarism". The Columbia Encyclopedia (6th ed.). New York: Columbia University Press. ISBN 0-7876-5015-3.
- ↑ Shostak, Ph. D, Frank (2002-03-02). "Defining Inflation". Mises Institute. Archived from the original on 2008-09-30. Retrieved 2008-09-20.
- ↑ [56] ^ ಲುಡ್ವಿಂಗ್ ವೊನ್ ಮಿಸಸ್ ಸಂಸ್ಥೆ, "ನೈಜ ಹಣ ಪೂರೈಕೆ"
- ↑ ಜೋಸೆಫ್ ಟಿ. ಸಲೆರ್ನೊ, (1987), ಆಸ್ಟ್ರಿಯನ್ ಆರ್ಥಿಕ ಸುದ್ಧಿಪತ್ರಗಳು, ""ನೈಜ" ಹಣ ಪೂರೈಕೆ: ಯು.ಎಸ್. ಆರ್ಥಿಕತೆಯಲ್ಲಿ ವಿನಿಮಯ ಮಾಧ್ಯಮಗಳ ಅಳತೆ "
- ↑ ಫ್ರಾಂಕ್ ಶೊಸ್ಟಾಕ್, (2000), "ದಿ ಮಿಸ್ಟರಿ ಆಫ್ ಮನಿ ಸಪ್ಲೈ ಡೆಫಿನೇಶನ್"
- ↑ ಲುಡ್ವಿಗ್ ವೊನ್ ಮಿಸಸ್, ದಿ ಡಿಯರಿ ಆಫ್ ಮನಿ ಆಂಡ್ ಕ್ರೆಡಿಟ್ Archived 2010-04-12 ವೇಬ್ಯಾಕ್ ಮೆಷಿನ್ ನಲ್ಲಿ.", ISBN 0-913966-70-3 ಇದನ್ನು ಸಹ ನೋಡಿ: ಜೀಸಸ್ ಹುಯೆರ್ಟಾ ಡೆ ಸೊಟೊ, "ಮನಿ, ಬ್ಯಾಂಕ್ ಕ್ರೆಡಿಟ್, ಆಂಡ್ ಆರ್ಥಿಕತೆ ಚಕ್ರಗಳು", ISBN 0-945466-39-4
- ↑ ಮುರ್ರಿ ರೊಥ್‌ಬಾರ್ಡ್, "ವಾಟ್ ಹ್ಯಾಸ್ ಗವರ್ನಮೆಂಟ್ ಡನ್ ಟೂ ಅವರ್ ಮನಿ?", ISBN 978-0-945466-44-4 [
- ↑ ಲಿವ್ ರಾಕ್‌ವೆಲ್, ಸಂದರ್ಶನದಲ್ಲಿ "ಈಗ ಬಿಲ್ ಮೊಯರ್ಸ್‌ನೊಂದಿಗೆ Archived 2011-05-11 ವೇಬ್ಯಾಕ್ ಮೆಷಿನ್ ನಲ್ಲಿ."
- ↑ ಲಿವ್ ರಾಕ್‌ವೆಲ್, "ಯುದ್ಧ ಮತ್ತು ಹಣದುಬ್ಬರ Archived 2009-07-07 ವೇಬ್ಯಾಕ್ ಮೆಷಿನ್ ನಲ್ಲಿ.", ಲುಡ್ವಿಗ್ ವೊನ್ ಮಿಸಸ್ ಸಂಸ್ಥೆ
- ↑ ಥೊರ್ಸ್ಟನ್ ಪೊಲೀಯಿಟ್, "ಮ್ಯಾನ್ಯುಪುಲೇಟಿಂಗ್ ದಿ ಇಂಟ್ರೆಸ್ಟ್ ರೇಟ್ Archived 2008-12-16 ವೇಬ್ಯಾಕ್ ಮೆಷಿನ್ ನಲ್ಲಿ.", 2007 ಡಿಸೆಂಬರ್ 13
- ↑ ಲುಡ್ವಿಗ್ ವೊನ್ ಮಿಸಸ್ ಸಂಸ್ಥೆ, "ಚಿನ್ನದ ಗುಣಮಟ್ಟ"
- ↑ ರಾನ್ ಪೌಲ್, "ದಿ ಕೇಸ್ ಫಾರ್ ಗೋಲ್ಡ್"
- ↑ ಮುರ್ರೆ ರೋತ್‌ಬಾರ್ಡ್, "ದಿ ಕೇಸ್ ಫಾರ್ 100 ಪರ್ಸೆಂಟ್ ಗೋಲ್ಡ್ ಡಾಲರ್"
- ↑ ಲುಡ್ವಿಗ್ ವೊನ್ ಮಿಸಸ್ ಸಂಸ್ಥೆ, "ಮನಿ, ಬ್ಯಾಂಕಿಂಗ್ ಆಂಡ್ ದಿ ಫೆಡರಲ್ ರಿಸರ್ವ್ Archived 2009-07-07 ವೇಬ್ಯಾಕ್ ಮೆಷಿನ್ ನಲ್ಲಿ."
- ↑ "www.econ.ucla.edu/workingpapers/wp830.pdf" (PDF).
- ↑ Krech, Shepard (2004). Encyclopedia of World Environmental History. p. 597.
{{cite book}}
: Unknown parameter|coauthors=
ignored (|author=
suggested) (help) - ↑ ಬೋರ್ಡೊ, ಎಮ್. (2002) "ಚಿನ್ನದ ಗುಣಮಟ್ಟ" ಕಾನ್ಸಿಸ್ ಎನ್‌ಸೈಕ್ಲೋಪಿಡಿಯಾ ಆಫ್ ಇಕನಾಮಿಕ್ಸ್
- ↑ Barsky, Robert B (1991). "Forecasting Pre-World War I Inflation: The Fisher Effect and the Gold Standard". Quarterly Journal of Economics. 106 (3): 815–36. doi:10.2307/2937928. Archived from the original on 2008-08-30. Retrieved 2008-09-27.
{{cite journal}}
: Unknown parameter|coauthors=
ignored (|author=
suggested) (help) - ↑ ೪೬.೦ ೪೬.೧ DeLong, Brad. "Why Not the Gold Standard?". Archived from the original on 2010-10-18. Retrieved 2008-09-25.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ಹ್ಯಾಮಿಲ್ಟನ್, ಜೆ.ಡಿ. (ಡಿಸೆಂಬರ್ 12, 2005) "ದಿ ಗೋಲ್ಡ್ ಸ್ಟ್ಯಾಂಡರ್ಡ್ ಆಂಡ್ ದಿ ಗ್ರೇಟ್ ಡಿಪ್ರೇಶನ್" Archived 2011-10-16 ವೇಬ್ಯಾಕ್ ಮೆಷಿನ್ ನಲ್ಲಿ. ಎಕೊನ್‌ಬ್ರೌಸರ್ , ಸಿಟಿಂಗ್ "ದೊಡ್ಡ ಕುಸಿತದ ಪ್ರಸಾರದಲ್ಲಿ ಅಂತರಾಷ್ಟ್ರೀಯ ಚಿನ್ನದ ಗುಣಮಟ್ಟದ ಪಾತ್ರ," 1988ರಲ್ಲಿ ಸಮಕಾಲಿನ ನೀತಿ ಸಮಸ್ಯೆಗಳಲ್ಲಿ ಪ್ರಕಟಿಸಲಾಗಿದೆ
- ↑ ವರ್ಬರ್ಟನ್, ಸಿ. ಕುಸಿತ, ಹಣದುಬ್ಬರ, ಮತ್ತು ಹಣಕಾಸು ನೀತಿ, ಆಯ್ದ ಪತ್ರಿಕೆಗಳಲ್ಲಿ, 1945-1953 "ದಿ ಮಾನಿಟರಿ ಡಿಸ್‌ಇಕ್ವಿಲಿಬ್ರಿಯಮ್ ಹೈಪೋತೆಸಿಸ್," (ಜಾನ್ಸ್ ಹಾಪ್ಕಿನ್ಸ್ ಮುದ್ರಣಾಲಯ, 1966), ಪು. 25-35.
- ↑ ೪೯.೦ ೪೯.೧ Flanagan, Tammy (2006-09-08). "COLA Wars". Government Executive. National Journal Group. Archived from the original on 2012-01-19. Retrieved 2008-09-23.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help)
ಆಕರಗಳು
[ಬದಲಾಯಿಸಿ]- Abel, Andrew; Bernanke, Ben (2005), Macroeconomics (5th ed.), Pearson
- Barro, Robert J. (1997), Macroeconomics, Cambridge, Mass: MIT Press, p. 895, ISBN 0-262-02436-5
- Blanchard, Olivier (2000), Macroeconomics (2nd ed.), Englewood Cliffs, N.J: Prentice Hall, ISBN 013013306X
- Mankiw, N. Gregory (2002), Macroeconomics (5th ed.), Worth
- Hall, Robert E.; Taylor, John B. (1993), Macroeconomics, New York: W.W. Norton, p. 637, ISBN 0-393-96307-1
- Burda, Michael C.; Wyplosz, Charles (1997), Macroeconomics: a European text, Oxford [Oxfordshire]: Oxford University Press, ISBN 0-19-877468-0
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- ಬೌಮೊಲ್, ವಿಲಿಯಂ ಜೆ. ಮತ್ತು ಅಲಾನ್ ಎಸ್. ಬ್ಲಿಂಡರ್ರವರ ಮಹದಾರ್ಥಿಕತೆ: ತತ್ವಗಳು ಮತ್ತು ನೀತಿ , ಹತ್ತನೇ ಆವೃತ್ತಿ. ಥೋಮ್ಸನ್ ಸೌತ್-ವೆಸ್ಟರ್ನ್, 2006. ISBN 0-324-22114-2
- ಮಿಶ್ಕಿನ್, ಫ್ರೆಡೆಕ್ ಎಸ್., ದಿ ಇಕನಾಮಿಕ್ಸ್ ಆಫ್ ಮನಿ, ಬ್ಯಾಂಕಿಂಗ್, ಆಂಡ್ ಫೈನಾನ್ಶಿಯಲ್ ಮಾರ್ಕೆಟ್ಸ್ , ನ್ಯೂಯಾರ್ಕ್, ಹಾರ್ಪರ್ ಕೋಲಿನ್ಸ್, 1995.
- ಫ್ರೇಡ್ಮ್ಯಾನ್, ಮಿಲ್ಟನ್, ನೋಬಲ್ ಉಪನ್ಯಾಸ: ಹಣದುಬ್ಬರ ಮತ್ತು ನಿರುದ್ಯೋಗ Archived 2009-03-25 ವೇಬ್ಯಾಕ್ ಮೆಷಿನ್ ನಲ್ಲಿ. 1977
- ಹೆನ್ರಿ ಹಜ್ಲಿಟ್, ನೀವು ಹಣದುಬ್ಬರದ ಬಗ್ಗೆ ಏನು ತಿಳಿಯಬೇಕು
- ಬಸ್ಟನ್ನ ಫೆಡರಲ್ ರಿಸರ್ವ್ ಬ್ಯಾಂಕ್, "ಹಣದುಬ್ಬರವನ್ನು ಅರ್ಥೈಸಿಕೊಳ್ಳುವುದು ಮತ್ತು ಹಣಕಾಸು ನೀತಿಗಾಗಿ ತೊಡಗಿಸುವಿಕೆಗಳು: ಫಿಲಿಪ್ಸ್ ವಕ್ರರೇಖೆ ಸಿಂಹಾವಲೋಕನ ಪ್ರದರ್ಶನ" Archived 2013-08-26 ವೇಬ್ಯಾಕ್ ಮೆಷಿನ್ ನಲ್ಲಿ., ಸಭೆ ಸರಣಿಗಳು 53, ಜೂನ್ 9–11, 2008, ಚತಮ್, ಮಸ್ಸಾಚುಸೆಟ್ಟಸ್. (ಕಾನ್. ಫಿಲಿಪ್ಸ್ ವಕ್ರರೇಖೆ ಲೇಖನ ಸಹ)
- ಡಾಲರ್ಸ್ & ಸೆನ್ಸ್ ನಲ್ಲಿ, ವಸುದೇವನ್, ರಾಮ, "ಹಣದುಬ್ಬರ ಮತ್ತು ನಿರುದ್ಯೋಗದ ನಡುವಿನ ವ್ಯತ್ಯಾಸವೇನು?", ಸೆಪ್ಟಂಬರ್/ಅಕ್ಟೋಬರ್ 2006
ಹೊರಗಿನ ಕೊಂಡಿಗಳು
[ಬದಲಾಯಿಸಿ]- ನಾಸಾ ಹಣದುಬ್ಬರ ಗಣಕಯಂತ್ರ Archived 2009-10-22 ವೇಬ್ಯಾಕ್ ಮೆಷಿನ್ ನಲ್ಲಿ.
- OECD ದರ ಅಂಕಿಅಂಶ
- ಯುನೈಟೆಡ್ ಸ್ಟೇಟ್ಸ್ನ ಕಾರ್ಮಿಕ ಅಂಕಿಅಂಶಗಳ ಮಂಡಳಿ ಗ್ರಾಹಕ ಬೆಲೆ ಸೂಚ್ಯಂಕ ಮುಖಪುಟ
- ಹಳೆಯ ಹಣದ ಪ್ರಸ್ತುತ ಮೌಲ್ಯ Archived 2007-10-11 ವೇಬ್ಯಾಕ್ ಮೆಷಿನ್ ನಲ್ಲಿ. - ಕಾಲಕ್ರಮೇಣ ಹಣದ ಮೌಲ್ಯದಲ್ಲಿನ ಬದಲಾವಣೆಯ ಚರ್ಚೆಗಳು.
- ಹಣದುಬ್ಬರ 1290-2006 Archived 2008-04-22 ವೇಬ್ಯಾಕ್ ಮೆಷಿನ್ ನಲ್ಲಿ. - ಸ್ವೇಡಿಶ್ ರಿಕ್ಸ್ಬ್ಯಾಂಕ್ನ ಐತಿಹಾಸಿಕ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ
- ಹಣದುಬ್ಬರ ಗಣಕಯಂತ್ರ
- ಯುಕೆಗಾಗಿ ನವೀಕೃತ ಸ್ಥಿತಿಯಲ್ಲಿರುವ ಮಾಸಿಕ ಹಣದುಬ್ಬರ ದರಗಳು Archived 2009-05-25 ವೇಬ್ಯಾಕ್ ಮೆಷಿನ್ ನಲ್ಲಿ.
- ಎರಡು ದಿನಾಂಕಗಳ ನಡುವೆ ವಿಕಸನವನ್ನು ಹೋಲಿಸಲು ಗಣಕಯಂತ್ರದೊಂದಿಗೆ 1901ರಿಂದ ಪ್ರಸ್ತುತ ಮತ್ತು ಐತಿಹಾಸಿಕ - ಫ್ರೆಂಚ್ ಹಣದುಬ್ಬರ.
- Pages using the JsonConfig extension
- Harv and Sfn no-target errors
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: ISBN
- CS1 errors: unsupported parameter
- CS1 errors: redundant parameter
- Pages using ISBN magic links
- Articles with hatnote templates targeting a nonexistent page
- All accuracy disputes
- Articles with disputed statements from November 2008
- Articles with disputed statements from July 2009
- Articles with unsourced statements from February 2009
- ಹಣದುಬ್ಬರ
- ಮೂಲ ಹಣಕಾಸಿನ ವಿಷಯಗಳು
- ಆರ್ಥಿಕ ಸಮಸ್ಯೆಗಳು