ನಾಣ್ಯ
ಗೋಚರ
ನಾಣ್ಯವು ಚಿಕ್ಕ, ಚಪ್ಪಟೆಯಾದ, (ಸಾಮಾನ್ಯವಾಗಿ) ದುಂಡಗಿರುವ ಲೋಹ ಅಥವಾ ಪ್ಲಾಸ್ಟಿಕ್‍ನ ತುಂಡು. ಇದನ್ನು ಮುಖ್ಯವಾಗಿ ವಿನಿಮಯ ಮಾಧ್ಯಮ ಅಥವಾ ನ್ಯಾಯಸಮ್ಮತ ದ್ರವ್ಯವಾಗಿ ಬಳಸಲಾಗುತ್ತದೆ. ಇವು ತೂಕದಲ್ಲಿ ಪ್ರಮಾಣೀಕೃತವಾಗಿರುತ್ತವೆ, ಮತ್ತು ವ್ಯಾಪಾರವನ್ನು ಸುಗಮಗೊಳಿಸಲು ಇವನ್ನು ಟಂಕಸಾಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಇವನ್ನು ಬಹುತೇಕ ವೇಳೆ ಸರ್ಕಾರವು ಚಲಾವಣೆಗೆ ತರುತ್ತದೆ.
ನಾಣ್ಯಗಳನ್ನು ಸಾಮಾನ್ಯವಾಗಿ ಲೋಹ ಅಥವಾ ಮಿಶ್ರಲೋಹ, ಅಥವಾ ಕೆಲವೊಮ್ಮೆ ಕೃತಕ ವಸ್ತುಗಳಿಂದ ತಯಾರಿಸಲಾಗುತ್ತದೆ. ಇವು ಸಾಮಾನ್ಯವಾಗಿ ಬಿಲ್ಲೆ ಆಕಾರದ್ದಾಗಿರುತ್ತವೆ. ಬೆಲೆಬಾಳುವ ಲೋಹದಿಂದ ತಯಾರಿಸಲಾದ ನಾಣ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಬುಲಿಯನ್ ನಾಣ್ಯಗಳಾಗಿ ಶೇಖರಿಸಿಡಲಾಗುತ್ತದೆ..ಇತರ ನಾಣ್ಯಗಳನ್ನು ಹಣವಾಗಿ ದೈನಂದಿನ ವಹಿವಾಟುಗಳಲ್ಲಿ ಬಳಸಲಾಗುತ್ತದೆ, ಮತ್ತು ಬ್ಯಾಂಕುನೋಟುಗಳ ಜೊತೆಗೆ ಚಲಾವಣೆಯಾಗುತ್ತವೆ.
ಗ್ರಂಥಸೂಚಿ
[ಬದಲಾಯಿಸಿ]- Angus, Ian. Coins & Money Tokens. London: Ward Lock, 1973. ISBN 0-7063-1811-0.