ವಿಷಯಕ್ಕೆ ಹೋಗು

ಸೂಕ್ಷ್ಮ ಅರ್ಥಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸರಬರಾಜು ಮತ್ತು ಬೇಡಿಕೆಯ ಮಾದರಿ, ಸಮತೋಲನೆಯ ಫಲಿತಾಂಶದಿಂದಾಗಿ, ಪ್ರತಿ ಬೆಲೆಗೆ(ಸರಬರಾಜು) ಉತ್ಪನ್ನದ ಲಭ್ಯತೆ ಮತ್ತು ಪ್ರತಿ ಬೆಲೆಯಲ್ಲಿ ಉತ್ಪನ್ನವನ್ನು ಕೊಂಡುಕೊಳ್ಳುವುದರೊಂದಿಗೆ ಬಯಸುವವರ ನಡುವೆ ಹೇಗೆ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ ಎಂಬುದನ್ನು ವಿವರಿಸುತ್ತದೆ. ಮೇಲ್ಕಂಡ ರೇಖಾಚಿತ್ರವು ಬಲಬದಿ- D1 ನಿಂದ D2ರ ವರೆಗಿನ ಬೇಡಿಕೆಯನ್ನು ಚಿತ್ರಿಸುತ್ತದೆ. ಇದರೊಂದಿಗೆ ಕ್ರಮಬದ್ಧವಾಗಿ ಹೆಚ್ಚುತ್ತಿರುವ ಬೆಲೆಯನ್ನು ಮತ್ತು ಹೊಸ ಮಾರುಕಟ್ಟೆಯನ್ನು ತಲುಪಲು ಅಗತ್ಯವಿರುವ ಪರಿಮಾಣವನ್ನು ವಿವರಿಸುತ್ತದೆ- ಸರಬರಾಜು(ತಿರುವು) ವಕ್ರರೇಖೆ(S) ನ ಮೇಲೆ ಸಮತೋಲನ ಬಿಂದುವನ್ನು ಸಂಪೂರ್ಣಗೊಳಿಸಿದೆ.
ಅರ್ಥಶಾಸ್ತ್ರ
ವಿಷಯಗಳ ರೂಪರೇಖೆ
ಸಾಮಾನ್ಯ ವರ್ಗೀಕರಣಗಳು

ಸೂಕ್ಷ್ಮ ಅರ್ಥಶಾಸ್ತ್ರ · ಸ್ಥೂಲ ಅರ್ಥಶಾಸ್ತ್ರ
ಆರ್ಥಿಕ ಚಿಂತನೆಯ ಇತಿಹಾಸ
ಕ್ರಮಶಾಸ್ತ್ರ · ಅಸಾಂಪ್ರದಾಯಿಕ ವಿಧಾನಗಳು

ಕಾರ್ಯವಿಧಾನಗಳು

ಗಣಿತ · ಅರ್ಥಶಾಸ್ತ್ರ ಮಾಪನ ಪದ್ಧತಿ
ಪ್ರಾಯೋಗಿಕ · ರಾಷ್ಟ್ರೀಯ ಹಣಕಾಸು ಲೆಕ್ಕ ವ್ಯವಸ್ಥೆ

ಕ್ಷೇತ್ರ ಮತ್ತು ಉಪಕ್ಷೇತ್ರಗಳು

ವರ್ತನೆ · ಸಾಂಸ್ಕೃತಿಕ · ವಿಕಾಸವಾದಿ
ಬೆಳವಣಿಗೆ · ಅಭಿವೃದ್ಧಿ · ಇತಿಹಾಸ
ಅಂತರರಾಷ್ಟ್ರೀಯ · ಆರ್ಥಿಕ ವ್ಯವಸ್ಥೆಗಳು
ವಿತ್ತ ಮತ್ತು ಹಣಕಾಸು
ಸಾರ್ವಜನಿಕ ಮತ್ತು ಸಮಾಜಕಲ್ಯಾಣ ಅರ್ಥಶಾಸ್ತ್ರ
ಆರೋಗ್ಯ · ದುಡಿಮೆ · ನಿರ್ವಾಹಕ
ವ್ಯಾಪಾರ · ಮಾಹಿತಿ · ಕೌಶಲಯುತ ಸಂವಹನ ಸಿದ್ಧಾಂತ
ಔದ್ಯೋಗಿಕ ಸಂಯೋಜನೆ  · ಕಾನೂನು
ಕೃಷಿ · ಪ್ರಾಕೃತಿಕ ಸಂಪತ್ತು
ಪರಿಸರ · ಜೀವಿ ಪರಿಸ್ಥಿತಿ ವಿಜ್ಞಾನ
ನಗರ ಪ್ರದೇಶದ · ಗ್ರಾಮೀಣ · ಪ್ರಾದೇಶಿಕ

ಪಟ್ಟಿಗಳು

ನಿಯತಕಾಲಿಕಗಳು · ಪ್ರಕಟಣೆಗಳು
ವರ್ಗಗಳು · ವಿಷಯಗಳು · ಅರ್ಥಶಾಸ್ತ್ರಜ್ಞರು

ಸಣ್ಣ ಪ್ರಮಾಣದ ಗ್ರಾಹಕರ, ವ್ಯಕ್ತಿಗಳ ಮತ್ತು ಚಿಕ್ಕ ಕಂಪನಿಗಳ ಆರ್ಥಿಕ ವಹಿವಾಟೇ ಸೂಕ್ಷ್ಮ ಅರ್ಥಶಾಸ್ತ್ರ . ( ಗ್ರೀಕ್ ನ ಪೂರ್ವಪ್ರತ್ಯಯ ಮೈಕ್ರೋ- ಅರ್ಥ "ಚಿಕ್ಕ" + "ಎಕನಾಮಿಕ್ಸ್"(ಅರ್ಥಶಾಸ್ತ್ರ) ಎಂಬುದರಿಂದ ಹುಟ್ಟಿಕೊಂಡಿದೆ.) ಇದು ಅರ್ಥಶಾಸ್ತ್ರದ ಶಾಖೆಯಾಗಿದ್ದು, ಇದು ಸೀಮಿತ ಮೂಲಗಳ ವಿಂಗಡಣೆಯಲ್ಲಿ ಆಧುನಿಕ ಕುಟುಂಬದ ವ್ಯಕ್ತಿಯ ನಡವಳಿಕೆ ಮತ್ತು ವ್ಯಾಪಾರೀ ಸಂಸ್ಥೆ ತೆಗೆದುಕೊಳ್ಳುವ ನಿರ್ಧಾರವನ್ನು ಅಧ್ಯಯನ ಮಾಡುತ್ತದೆ.[] ಸಾಮಾನ್ಯವಾಗಿ, ಇದು ಸರಕು ಮತ್ತು ಸೇವೆಗಳ ಖರೀದಿ ಮತ್ತು ಮಾರಾಟದ ಮಾರುಕಟ್ಟೆಗೆ ಅನ್ವಯವಾಗುತ್ತದೆ. ವಹಿವಾಟಿನ ನಿರ್ಧಾರಗಳು ಮತ್ತು ನಡವಳಿಕೆಗಳು ಸರಕು ಮತ್ತು ಸೇವೆಗಳಿಗಾಗಿ ಪೂರೈಕೆ, ಸರಬರಾಜು ಮತ್ತು ಬೇಡಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ, ಎಂಬುದನ್ನು ಸೂಕ್ಷ್ಮ ಅರ್ಥಶಾಸ್ತ್ರ, ಪರಿಶೀಲಿಸುತ್ತದೆ. ಇದು ಬೆಲೆಯ ಪ್ರಮಾಣವನ್ನು ನಿರ್ಧರಿಸುತ್ತದೆ. ಅಲ್ಲದೇ ಸರಬರಾಜು ಮಾಡಲಾದ ಸರಕಿನ ಪರಿಮಾಣ ಮತ್ತು ಬೇಡಿಕೆಯಿರುವ ಸರಕು ಮತ್ತು ಸೇವೆಗಳ ಪರಿಮಾಣವನ್ನೂ ನಿರ್ಧರಿಸುತ್ತದೆ.[][]

ಇದು ಬೃಹದರ್ಥಶಾಸ್ತ್ರಕ್ಕೆ ತದ್ವಿರುದ್ಧವಾಗಿದ್ದು,ಅಭಿವೃದ್ಧಿ, ಹಣದುಬ್ಬರ ಮತ್ತು ನಿರುದ್ಯೋಗದ ವಿಷಯಗಳೊಂದಿಗೆ ವ್ಯವಹರಿಸುವ ಮೂಲಕ "ಸಮಗ್ರ ಆರ್ಥಿಕತೆಯ ನಿರ್ವಹಣೆಯಾಗಿದೆ.[] ಸೂಕ್ಷ್ಮ ಅರ್ಥಶಾಸ್ತ್ರ, ಮೇಲೆ ತಿಳಿಸಲಾದ ಆರ್ಥಿಕ ಅಂಶಗಳ ಮೇಲೆ ರಾಷ್ಟ್ರೀಯ ಆರ್ಥಿಕ ನೀತಿಗಳು ಬೀರುವ (ಉದಾಹರಣೆಗೆ ತೆರಿಗೆಯ ಬದಲಾಗುತ್ತಿರುವ ಹಂತಗಳು) ಪರಿಣಾಮಗಳೊಂದಿಗೂ ವ್ಯವಹರಿಸುತ್ತದೆ.[] ವಿಶೇಷವಾಗಿ ಲ್ಯೂಕಾಸ್‌ ವಿಶ್ಲೇಷಣೆಯ ಜಾಗೃತಿಯಲ್ಲಿ, ಬಹುಪಾಲು ಆಧುನಿಕ ಬೃಹದರ್ಥಶಾಸ್ತ್ರದ ಸಿದ್ಧಾಂತವನ್ನು 'ಸೂಕ್ಷ್ಮ ಅಡಿಪಾಯ'ದ ಮೇಲೆ ಸೃಷ್ಟಿಸಲಾಗಿದೆ— ಉದಾಹರಣೆಗೆ ಸೂಕ್ಷ್ಮ ಹಂತದ ನಡವಳಿಕೆ ಮೇಲೆ ಮಾಡಲಾದ ಊಹೆಗಳನ್ನು ಆಧರಿಸಿ ಎನ್ನಬಹುದು.

ಮಾರುಕಟ್ಟೆ ಕಾರ್ಯಾಚರಣೆಯನ್ನು ವಿಶ್ಲೇಷಿಸುವುದು, ಸೂಕ್ಷ್ಮ ಅರ್ಥಶಾಸ್ತ್ರದ ಗುರಿಗಳಲ್ಲಿ ಒಂದಾಗಿದೆ. ಇದು ಸರಕು ಮತ್ತು ಸೇವೆಗಳ ನಡುವೆ ಹತ್ತಿರದ ಬೆಲೆಯನ್ನು ನಿರ್ಧರಿಸುತ್ತದೆ. ಅಲ್ಲದೇ ಅನೇಕ ಪರ್ಯಾಯ ಬಳಕೆಗಳ ನಡುವೆ ಸೀಮಿತ ಸಂಪನ್ಮೂಲಗಳನ್ನು ವಿಂಗಡಿಸುತ್ತದೆ. ಸೂಕ್ಷ್ಮ ಅರ್ಥಶಾಸ್ತ್ರವು, ಮಾರುಕಟ್ಟೆಯ ದಕ್ಷ ಫಲಿತಾಂಶ ನೀಡುವಲ್ಲಿ ವಿಫಲವಾದಾಗ ಮಾರುಕಟ್ಟೆ ವಿಫಲತೆಯನ್ನು ವಿಶ್ಲೇಷಿಸುತ್ತದೆ. ಅಲ್ಲದೇ ಪರಿಪೂರ್ಣ ಸ್ಪರ್ಧೆಗೆ ಅಗತ್ಯವಿರುವ ಸೈದ್ಧಾಂತಿಕ ಸ್ಥಿತಿಗತಿಗಳನ್ನು ವಿವರಿಸುತ್ತದೆ. ಸೂಕ್ಷ್ಮ ಅರ್ಥಶಾಸ್ತ್ರದಲ್ಲಿ ಅಧ್ಯಯನದ ಪ್ರಮುಖ ಕ್ಷೇತ್ರಗಳು ಕೆಳಕಂಡಂತಿವೆ: ಸಾಮಾನ್ಯ ಸಮತೋಲನ ಸಿದ್ಧಾಂತ,(ಕುಶಲತೆ ಕಾರ್ಯ) ಅಸಮ ಕೆಲಸದ ಮಾಹಿತಿಯ ಅಂತರ್ಗತ ಮಾರುಕಟ್ಟೆಗಳು, ಅನಿಶ್ಚಿತತೆಯ ಅಂತರ್ಗತ ವಿಕಲ್ಪ ಹಾಗು ಕ್ರೀಡಾ ಸಿದ್ಧಾಂತದ ಆರ್ಥಿಕ ಅನ್ವಯಿಕೆಗಳು. ಇವುಗಳ ಜೊತೆಯಲ್ಲಿ ಮಾರುಕಟ್ಟೆ ವ್ಯವಸ್ಥೆಯೊಳಗೆ ಉತ್ಪನ್ನಗಳ ಸ್ಥಿತಿಸ್ಥಾಪಕತ್ವತೆಯ ಬಗ್ಗೆಯೂ ವಿಚಾರ ಮಾಡಲಾಗುತ್ತದೆ.

ಊಹೆಗಳು ಮತ್ತು ವ್ಯಾಖ್ಯಾನಗಳು

[ಬದಲಾಯಿಸಿ]

ಸರಬರಾಜು ಮತ್ತು ಬೇಡಿಕೆಯ ಸಿದ್ಧಾಂತವು, ಸಾಮಾನ್ಯವಾಗಿ ಮಾರುಕಟ್ಟೆಗಳು ಸಂಪೂರ್ಣವಾಗಿ ಸ್ಪರ್ಧಾತ್ಮಕವಾಗಿರುತ್ತವೆ, ಎಂದು ಭಾವಿಸುತ್ತದೆ. ಮಾರುಕಟ್ಟೆಯಲ್ಲಿ ಕೊಳ್ಳುವವರು ಮತ್ತು ಮಾರುವವರು ಅನೇಕರಿದ್ದಾರೆ. ಆದರೆ ಅವರಲ್ಲಿ ಯಾರಿಗೂ ಸರಕು ಮತ್ತು ಸೇವೆಗಳ ಬೆಲೆಯನ್ನು ಗಮನಾರ್ಹವಾಗಿ ಪ್ರಭಾವಿತಗೊಳಿಸುವ ಸಾಮರ್ಥ್ಯವಿಲ್ಲ ಎಂಬುದನ್ನು ಇದು ಸೂಚಿಸುತ್ತದೆ. ನಿಜ ಜೀವನದ ಅನೇಕ ವಹಿವಾಟುಗಳಲ್ಲಿ ಈ ಊಹೆ ವಿಫಲವಾಗುತ್ತದೆ. ಏಕೆಂದರೆ ಕೊಳ್ಳುವ ಅಥವಾ ಮಾರಾಟ ಮಾಡುವ ಪ್ರತ್ಯೇಕ ವ್ಯಕ್ತಿಗೆ ಬೆಲೆಯನ್ನು ಪ್ರಭಾವಿತಗೊಳಿಸುವ ಸಾಮರ್ಥ್ಯವಿರುತ್ತದೆ. ಉತ್ತಮ ಮಾದರಿಯ ಬೇಡಿಕೆ-ಸರಬರಾಜು ಸಮೀಕರಣವನ್ನು ಅರ್ಥಮಾಡಿಕೊಳ್ಳಲು ಅತ್ಯುತ್ತಮವಾದ(ಆಧುನೀಕರಿಸಿದ) ವಿಶ್ಲೇಷಣೆಯು ಯಾವಾಗಲೂ ಅಗತ್ಯವಿರುತ್ತದೆ. ಅದೇನೇ ಆದರೂ ಈ ಊಹೆಗಳನ್ನು ಪ್ರತಿಬಿಂಬಿಸುವುದರೊಂದಿಗೆ ಸಾಮಾನ್ಯ ಸಂದರ್ಭಗಳಲ್ಲಿ ಈ ಸಿದ್ಧಾಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.ಮುಖ್ಯವಾಹಿನಿ ಅರ್ಥಶಾಸ್ತ್ರ, ಸಾಮಾಜಿಕ ಸಂಸ್ಥೆ-ಸಂಘಟನೆಗಳ ಇತರ ರೂಪಗಳಿಗೆ ಮಾರುಕಟ್ಟೆ ಶ್ರೇಯಸ್ಕರವಾಗಿರುತ್ತದೆ, ಎಂಬ ಪ್ರಾಥಮಿಕ ಸಂಗತಿಯನ್ನು ಊಹಿಸುವುದಿಲ್ಲ. ಇದರ ಬದಲಿಗೆ ಸಂಪನ್ಮೂಲ ವಿಂಗಡನೆಗೆ ಕಾರಣವಾದ ಮಾರುಕಟ್ಟೆ ವಿಫಲತೆಗಳ ಮೇಲೆ ಹೆಚ್ಚು ವಿಶ್ಲೇಷಣೆಯನ್ನು ಮಾಡಲಾಗುತ್ತದೆ. ಇವುಗಳನ್ನು ಕೆಲವೊಂದು ಪ್ರಮಾಣಕಗಳ ಮೂಲಕ ಅಧಿಕವೆಂಬುದು ಗರಿಷ್ಠವಾಗಿರುವುದಿಲ್ಲ ಎಂಬುದನ್ನು ತಿಳಿಯಲಾಗುತ್ತದೆ.(ರಕ್ಷಣಾ ವೆಚ್ಚವು ಉತ್ತಮ ಉದಾಹರಣೆಯಾಗಿದೆ, ಇವು ಬಳಕೆಯಲ್ಲಿ ಎಲ್ಲರಿಗೂ ಲಾಭದಾಯಕವಾಗಿವೆ; ಆದರೆ ಹಣಕಾಸು ಒದಗಿಸುವಲ್ಲಿ ಯಾರಿಗೂ ನೇರವಾಗಿ ಲಾಭದಾಯಕವಾಗುವುದಿಲ್ಲ). ಇಂತಹ ಸಂದರ್ಭಗಳಲ್ಲಿ ಅರ್ಥಶಾಸ್ತ್ರಜ್ಞರು, ಸರ್ಕಾರದ ನಿಯಂತ್ರಣದ ಮೂಲಕ ನೇರವಾಗಿ,ಅಥವಾ ಕಾನೂನುಗಳ ಮೂಲಕ ಪರೋಕ್ಷವಾಗಿ ವ್ಯರ್ಥವಾಗುವುದನ್ನು ತಪ್ಪಿಸುವಂತಹ ನೀತಿಗಳನ್ನು ರಚಿಸಲು ಪ್ರಯತ್ನಿಸಬಹುದಾಗಿದೆ. ಇದು ಮಾರುಕಟ್ಟೆಯಲ್ಲಿ ಪಾಲ್ಗೊಳ್ಳುವವರನ್ನು, ಗರಿಷ್ಠ ಹಿತರಕ್ಷಣೆಗೆ ಸರಿಹೊಂದುವಂತೆ ಕಾರ್ಯನಿರ್ವಹಿಸಲು ಪ್ರೇರೇಪಿಸುತ್ತದೆ. ಅಥವಾ ಕುಶಲ ವ್ಯಾಪಾರವನ್ನು ಅಸ್ಥಿತ್ವಕ್ಕೆ ತರಲು ಹಿಂದೆ ಅಸ್ಥಿತ್ವದಲ್ಲಿಲ್ಲದ "ಕಳೆದುಹೋದ ಮಾರುಕಟ್ಟೆ"ಗಳನ್ನು ಸೃಷ್ಟಿಸುತ್ತವೆ. ಇದನ್ನು ಸಾಮೂಹಿಕ ಕ್ರಿಯೆಯ ಕ್ಷೇತ್ರದಲ್ಲಿ ಅಧ್ಯಯನ ಮಾಡಲಾಗುತ್ತದೆ. ಇದು ಸಕಾರಾತ್ಮಕ ಅಥವಾ "ಅನುಕೂಲಾತ್ಮಕ ಕಲ್ಯಾಣ" ವನ್ನು ಸಾಮಾನ್ಯವಾಗಿ (ಇಟಲಿಯ ಅರ್ಥಶಾಸ್ತ್ರಜ್ಞ ಪ್ಯಾರೆಟೊ ಅವರ ತತ್ವಗಳ ಮೇಲೆ) ಪ್ಯಾರೆಟೊ ದಕ್ಷತೆಯ ಮಾದರಿಯ ಮೂಲಕ ಸಾಧಿಸಬಹುದೆಂಬುದರ ಕಡೆಗೂ ಹೆಚ್ಚು ಗಮನಹರಿಸುತ್ತದೆ. ಅಲ್ಲದೇ ಇದು ಇದರ ಕಾಲ್ಡೊರ್–ಹಿಕ್ಸ್ ವಿಧಾನದ ಗಣಿತೀಯ ಅನ್ವಯಿಕೆಯಲ್ಲಿ, ಅರ್ಥಶಾಸ್ತ್ರದ ಪ್ರಮಾಣಕದೊಳಗೆ ಪ್ರಯೋಜನ ತತ್ವದೊಂದಿಗೆ ಸ್ಥಿರವಾಗಿರುವುದಿಲ್ಲ. ಅಲ್ಲದೇ ಸಾರ್ವಜನಿಕ ಆಯ್ಕೆಯೆಂದು ಕರೆಯಲಾಗುವ ಸಾಮೂಹಿಕ ಕ್ರಿಯೆಯನ್ನು ಅಧ್ಯಯನ ಮಾಡುತ್ತದೆ. ಸಕಾರಾತ್ಮಕ ಅರ್ಥಶಾಸ್ತ್ರದಲ್ಲಿ(ಸೂಕ್ಷ್ಮ ಅರ್ಥಶಾಸ್ತ್ರ) ಮಾರುಕಟ್ಟೆಯ ವಿಫಲತೆ, ಅರ್ಥಶಾಸ್ತ್ರಜ್ಞರ ವಿಶ್ವಾಸ ಮತ್ತು ಆತನ ಅಥವಾ ಆಕೆಯ ಸಿದ್ಧಾಂತವನ್ನು ಬೆರೆಸದಿದ್ದರೆ ಪ್ರಭಾವದಲ್ಲಿ ಸೀಮಿತವಾಗಿರುತ್ತದೆ.ಅನೇಕ ಉಪಯುಕ್ತ ಪದಾರ್ಥಗಳಿಗೆ ವ್ಯಕ್ತಿಗಳು ಮಂಡಿಸುವ ಬೇಡಿಕೆಯನ್ನು, ಸಾಮಾನ್ಯವಾಗಿ ಬಳಕೆ ಗರಿಷ್ಠಗೊಳಿಸುವ ವಿಧಾನದ ಪರಿಣಾಮದ ರೂಪದಲ್ಲಿ ತಿಳಿಯಲಾಗುತ್ತದೆ. ಬೆಲೆ ಮತ್ತು ಬೇಡಿಕೆಯ ನಡುವೆ ಇರುವ ಈ ಸಂಬಂಧದ ವ್ಯಾಖ್ಯಾನ ಒಂದು ವಸ್ತುವಿನ ಬೇಡಿಕೆಯನ್ನು ಮುಂದಿಡುತ್ತದೆ. ಎಲ್ಲಾ ರೀತಿಯ ವಸ್ತುಗಳು ಮತ್ತು ನಿರ್ಬಂಧನೆಗಳು ಇರುವುದರಿಂದ, ಆಯ್ಕೆಯ ಈ ಸೆಟ್ (ಸಮೂಹ)ಗ್ರಾಹಕನನ್ನು ಅತ್ಯಂತ ಸಂತೋಷಗೊಳಿಸುತ್ತದೆ.ಸಣ್ಣ ಪ್ರಮಾಣದ ಗ್ರಾಹಕರ,ವ್ಯಕ್ತಿಗಳ ಮತ್ತು ಚಿಕ್ಕ ಕಂಪನಿಗಳ ಆರ್ಥಿಕ ವಹಿವಾಟವೇ ಸೂಕ್ಷ್ಮ ಅರ್ಥಶಾಸ್ತ್ರ . ( ಗ್ರೀಕ್ ನ ಪೂರ್ವಪ್ರತ್ಯಯ ಮೈಕ್ರೋ- ಅರ್ಥ "ಚಿಕ್ಕ" + "ಎಕನಾಮಿಕ್ಸ್"(ಅರ್ಥಶಾಸ್ತ್ರ) ಎಂಬುದರಿಂದ ಹುಟ್ಟಿಕೊಂಡಿದೆ.) ಇದು ಅರ್ಥಶಾಸ್ತ್ರದ ಶಾಖೆಯಾಗಿದ್ದು, ಇದು ಸೀಮಿತ ಮೂಲಗಳ ವಿಂಗಡನೆಯಲ್ಲಿ ಆಧುನಿಕ ಕುಟುಂಬದ ವ್ಯಕ್ತಿಯ ನಡವಳಿಕೆ ಮತ್ತು ವ್ಯಾಪಾರೀ ಸಂಸ್ಥೆ ತೆಗೆದುಕೊಳ್ಳುವ ನಿರ್ಧಾರವನ್ನು ಅಧ್ಯಯನ ಮಾಡುತ್ತದೆ.[೧] ಸಾಮಾನ್ಯವಾಗಿ, ಇದು ಸರಕು ಮತ್ತು ಸೇವೆಗಳ ಖರೀದಿ ಮತ್ತು ಮಾರಾಟದ ಮಾರುಕಟ್ಟೆಗೆ ಅನ್ವಯವಾಗುತ್ತದೆ. ವಹಿವಾಟಿನ ನಿರ್ಧಾರಗಳು ಮತ್ತು ನಡವಳಿಕೆಗಳು ಸರಕು ಮತ್ತು ಸೇವೆಗಳಿಗಾಗಿ ಪೂರೈಕೆ, ಸರಬರಾಜು ಮತ್ತು ಬೇಡಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ, ಎಂಬುದನ್ನು ಸೂಕ್ಷ್ಮ ಅರ್ಥಶಾಸ್ತ್ರ, ಪರಿಶೀಲಿಸುತ್ತದೆ. ಇದು ಬೆಲೆಯ ಪ್ರಮಾಣವನ್ನು ನಿರ್ಧರಿಸುತ್ತದೆ. ಅಲ್ಲದೇ ಸರಬರಾಜು ಮಾಡಲಾದ ಸರಕಿನ ಪರಿಮಾಣ ಮತ್ತು ಬೇಡಿಕೆಯಿರುವ ಸರಕು ಮತ್ತು ಸೇವೆಗಳ ಪರಿಮಾಣವನ್ನೂ ನಿರ್ಧರಿಸುತ್ತದೆ.[೨][೩] ಇದು ಬೃಹದರ್ಥಶಾಸ್ತ್ರಕ್ಕೆ ತದ್ವಿರುದ್ಧವಾಗಿದ್ದು,ಅಭಿವೃದ್ಧಿ, ಹಣದುಬ್ಬರ ಮತ್ತು ನಿರುದ್ಯೋಗದ ವಿಷಯಗಳೊಂದಿಗೆ ವ್ಯವಹರಿಸುವ ಮೂಲಕ "ಸಮಗ್ರ ಆರ್ಥಿಕತೆಯ ನಿರ್ವಹಣೆಯಾಗಿದೆ.[೨] ಸೂಕ್ಷ್ಮ ಅರ್ಥಶಾಸ್ತ್ರ, ಮೇಲೆ ತಿಳಿಸಲಾದ ಆರ್ಥಿಕ ಅಂಶಗಳ ಮೇಲೆ ರಾಷ್ಟ್ರೀಯ ಆರ್ಥಿಕ ನೀತಿಗಳು ಬೀರುವ (ಉದಾಹರಣೆಗೆ ತೆರಿಗೆಯ ಬದಲಾಗುತ್ತಿರುವ ಹಂತಗಳು) ಪರಿಣಾಮಗಳೊಂದಿಗೂ ವ್ಯವಹರಿಸುತ್ತದೆ.[೪] ವಿಶೇಷವಾಗಿ ಲ್ಯೂಕಾಸ್‌ ವಿಶ್ಲೇಷಣೆಯ ಜಾಗೃತಿಯಲ್ಲಿ, ಬಹುಪಾಲು ಆಧುನಿಕ ಬೃಹದರ್ಥಶಾಸ್ತ್ರದ ಸಿದ್ಧಾಂತವನ್ನು 'ಸೂಕ್ಷ್ಮ ಅಡಿಪಾಯ'ದ ಮೇಲೆ ಸೃಷ್ಟಿಸಲಾಗಿದೆ— ಉದಾಹರಣೆಗೆ ಸೂಕ್ಷ್ಮ ಹಂತದ ನಡವಳಿಕೆ ಮೇಲೆ ಮಾಡಲಾದ ಊಹೆಗಳನ್ನು ಆಧರಿಸಿ ಎನ್ನಬಹುದು.ಮಾರುಕಟ್ಟೆ ಕಾರ್ಯಾಚರಣೆಯನ್ನು ವಿಶ್ಲೇಷಿಸುವುದು, ಸೂಕ್ಷ್ಮ ಅರ್ಥಶಾಸ್ತ್ರದ ಗುರಿಗಳಲ್ಲಿ ಒಂದಾಗಿದೆ. ಇದು ಸರಕು ಮತ್ತು ಸೇವೆಗಳ ನಡುವೆ ಹತ್ತಿರದ ಬೆಲೆಯನ್ನು ನಿರ್ಧರಿಸುತ್ತದೆ. ಅಲ್ಲದೇ ಅನೇಕ ಪರ್ಯಾಯ ಬಳಕೆಗಳ ನಡುವೆ ಸೀಮಿತ ಸಂಪನ್ಮೂಲಗಳನ್ನು ವಿಂಗಡಿಸುತ್ತದೆ. ಸೂಕ್ಷ್ಮ ಅರ್ಥಶಾಸ್ತ್ರವು, ಮಾರುಕಟ್ಟೆಯ ದಕ್ಷ ಫಲಿತಾಂಶ ನೀಡುವಲ್ಲಿ ವಿಫಲವಾದಾಗ ಮಾರುಕಟ್ಟೆ ವಿಫಲತೆಯನ್ನು ವಿಶ್ಲೇಷಿಸುತ್ತದೆ. ಅಲ್ಲದೇ ಪರಿಪೂರ್ಣ ಸ್ಪರ್ಧೆಗೆ ಅಗತ್ಯವಿರುವ ಸೈದ್ಧಾಂತಿಕ ಸ್ಥಿತಿಗತಿಗಳನ್ನು ವಿವರಿಸುತ್ತದೆ. ಸೂಕ್ಷ್ಮ ಅರ್ಥಶಾಸ್ತ್ರದಲ್ಲಿ ಅಧ್ಯಯನದ ಪ್ರಮುಖ ಕ್ಷೇತ್ರಗಳು ಕೆಳಕಂಡಂತಿವೆ: ಸಾಮಾನ್ಯ ಸಮತೋಲನ ಸಿದ್ಧಾಂತ,(ಕುಶಲತೆ ಕಾರ್ಯ) ಅಸಮ ಕೆಲಸದ ಮಾಹಿತಿಯ ಅಂತರ್ಗತ ಮಾರುಕಟ್ಟೆಗಳು, ಅನಿಶ್ಚಿತತೆಯ ಅಂತರ್ಗತ ವಿಕಲ್ಪ ಹಾಗು ಕ್ರೀಡಾ ಸಿದ್ಧಾಂತದ ಆರ್ಥಿಕ ಅನ್ವಯಿಕೆಗಳು. ಇವುಗಳ ಜೊತೆಯಲ್ಲಿ ಮಾರುಕಟ್ಟೆ ವ್ಯವಸ್ಥೆಯೊಳಗೆ ಉತ್ಪನ್ನಗಳ ಸ್ಥಿತಿಸ್ಥಾಪಕತ್ವತೆಯ ಬಗ್ಗೆಯೂ ವಿಚಾರ ಮಾಡಲಾಗುತ್ತದೆ.ಸಣ್ಣ ಪ್ರಮಾಣದ ಗ್ರಾಹಕರ,ವ್ಯಕ್ತಿಗಳ ಮತ್ತು ಚಿಕ್ಕ ಕಂಪನಿಗಳ ಆರ್ಥಿಕ ವಹಿವಾಟವೇ ಸೂಕ್ಷ್ಮ ಅರ್ಥಶಾಸ್ತ್ರ . ( ಗ್ರೀಕ್ ನ ಪೂರ್ವಪ್ರತ್ಯಯ ಮೈಕ್ರೋ- ಅರ್ಥ "ಚಿಕ್ಕ" + "ಎಕನಾಮಿಕ್ಸ್"(ಅರ್ಥಶಾಸ್ತ್ರ) ಎಂಬುದರಿಂದ ಹುಟ್ಟಿಕೊಂಡಿದೆ.) ಇದು ಅರ್ಥಶಾಸ್ತ್ರದ ಶಾಖೆಯಾಗಿದ್ದು, ಇದು ಸೀಮಿತ ಮೂಲಗಳ ವಿಂಗಡನೆಯಲ್ಲಿ ಆಧುನಿಕ ಕುಟುಂಬದ ವ್ಯಕ್ತಿಯ ನಡವಳಿಕೆ ಮತ್ತು ವ್ಯಾಪಾರೀ ಸಂಸ್ಥೆ ತೆಗೆದುಕೊಳ್ಳುವ ನಿರ್ಧಾರವನ್ನು ಅಧ್ಯಯನ ಮಾಡುತ್ತದೆ.[೧] ಸಾಮಾನ್ಯವಾಗಿ, ಇದು ಸರಕು ಮತ್ತು ಸೇವೆಗಳ ಖರೀದಿ ಮತ್ತು ಮಾರಾಟದ ಮಾರುಕಟ್ಟೆಗೆ ಅನ್ವಯವಾಗುತ್ತದೆ. ವಹಿವಾಟಿನ ನಿರ್ಧಾರಗಳು ಮತ್ತು ನಡವಳಿಕೆಗಳು ಸರಕು ಮತ್ತು ಸೇವೆಗಳಿಗಾಗಿ ಪೂರೈಕೆ, ಸರಬರಾಜು ಮತ್ತು ಬೇಡಿಕೆಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ, ಎಂಬುದನ್ನು ಸೂಕ್ಷ್ಮ ಅರ್ಥಶಾಸ್ತ್ರ, ಪರಿಶೀಲಿಸುತ್ತದೆ. ಇದು ಬೆಲೆಯ ಪ್ರಮಾಣವನ್ನು ನಿರ್ಧರಿಸುತ್ತದೆ. ಅಲ್ಲದೇ ಸರಬರಾಜು ಮಾಡಲಾದ ಸರಕಿನ ಪರಿಮಾಣ ಮತ್ತು ಬೇಡಿಕೆಯಿರುವ ಸರಕು ಮತ್ತು ಸೇವೆಗಳ ಪರಿಮಾಣವನ್ನೂ ನಿರ್ಧರಿಸುತ್ತದೆ.[೨][೩]ಇದು ಬೃಹದರ್ಥಶಾಸ್ತ್ರಕ್ಕೆ ತದ್ವಿರುದ್ಧವಾಗಿದ್ದು,ಅಭಿವೃದ್ಧಿ, ಹಣದುಬ್ಬರ ಮತ್ತು ನಿರುದ್ಯೋಗದ ವಿಷಯಗಳೊಂದಿಗೆ ವ್ಯವಹರಿಸುವ ಮೂಲಕ "ಸಮಗ್ರ ಆರ್ಥಿಕತೆಯ ನಿರ್ವಹಣೆಯಾಗಿದೆ.[೨] ಸೂಕ್ಷ್ಮ ಅರ್ಥಶಾಸ್ತ್ರ, ಮೇಲೆ ತಿಳಿಸಲಾದ ಆರ್ಥಿಕ ಅಂಶಗಳ ಮೇಲೆ ರಾಷ್ಟ್ರೀಯ ಆರ್ಥಿಕ ನೀತಿಗಳು ಬೀರುವ (ಉದಾಹರಣೆಗೆ ತೆರಿಗೆಯ ಬದಲಾಗುತ್ತಿರುವ ಹಂತಗಳು) ಪರಿಣಾಮಗಳೊಂದಿಗೂ ವ್ಯವಹರಿಸುತ್ತದೆ.[೪] ವಿಶೇಷವಾಗಿ ಲ್ಯೂಕಾಸ್‌ ವಿಶ್ಲೇಷಣೆಯ ಜಾಗೃತಿಯಲ್ಲಿ, ಬಹುಪಾಲು ಆಧುನಿಕ ಬೃಹದರ್ಥಶಾಸ್ತ್ರದ ಸಿದ್ಧಾಂತವನ್ನು 'ಸೂಕ್ಷ್ಮ ಅಡಿಪಾಯ'ದ ಮೇಲೆ ಸೃಷ್ಟಿಸಲಾಗಿದೆ— ಉದಾಹರಣೆಗೆ ಸೂಕ್ಷ್ಮ ಹಂತದ ನಡವಳಿಕೆ ಮೇಲೆ ಮಾಡಲಾದ ಊಹೆಗಳನ್ನು ಆಧರಿಸಿ ಎನ್ನಬಹುದು. ಮಾರುಕಟ್ಟೆ ಕಾರ್ಯಾಚರಣೆಯನ್ನು ವಿಶ್ಲೇಷಿಸುವುದು, ಸೂಕ್ಷ್ಮ ಅರ್ಥಶಾಸ್ತ್ರದ ಗುರಿಗಳಲ್ಲಿ ಒಂದಾಗಿದೆ. ಇದು ಸರಕು ಮತ್ತು ಸೇವೆಗಳ ನಡುವೆ ಹತ್ತಿರದ ಬೆಲೆಯನ್ನು ನಿರ್ಧರಿಸುತ್ತದೆ. ಅಲ್ಲದೇ ಅನೇಕ ಪರ್ಯಾಯ ಬಳಕೆಗಳ ನಡುವೆ ಸೀಮಿತ ಸಂಪನ್ಮೂಲಗಳನ್ನು ವಿಂಗಡಿಸುತ್ತದೆ. ಸೂಕ್ಷ್ಮ ಅರ್ಥಶಾಸ್ತ್ರವು, ಮಾರುಕಟ್ಟೆಯ ದಕ್ಷ ಫಲಿತಾಂಶ ನೀಡುವಲ್ಲಿ ವಿಫಲವಾದಾಗ ಮಾರುಕಟ್ಟೆ ವಿಫಲತೆಯನ್ನು ವಿಶ್ಲೇಷಿಸುತ್ತದೆ. ಅಲ್ಲದೇ ಪರಿಪೂರ್ಣ ಸ್ಪರ್ಧೆಗೆ ಅಗತ್ಯವಿರುವ ಸೈದ್ಧಾಂತಿಕ ಸ್ಥಿತಿಗತಿಗಳನ್ನು ವಿವರಿಸುತ್ತದೆ. ಸೂಕ್ಷ್ಮ ಅರ್ಥಶಾಸ್ತ್ರದಲ್ಲಿ ಅಧ್ಯಯನದ ಪ್ರಮುಖ ಕ್ಷೇತ್ರಗಳು ಕೆಳಕಂಡಂತಿವೆ: ಸಾಮಾನ್ಯ ಸಮತೋಲನ ಸಿದ್ಧಾಂತ,(ಕುಶಲತೆ ಕಾರ್ಯ) ಅಸಮ ಕೆಲಸದ ಮಾಹಿತಿಯ ಅಂತರ್ಗತ ಮಾರುಕಟ್ಟೆಗಳು, ಅನಿಶ್ಚಿತತೆಯ ಅಂತರ್ಗತ ವಿಕಲ್ಪ ಹಾಗು ಕ್ರೀಡಾ ಸಿದ್ಧಾಂತದ ಆರ್ಥಿಕ ಅನ್ವಯಿಕೆಗಳು. ಇವುಗಳ ಜೊತೆಯಲ್ಲಿ ಮಾರುಕಟ್ಟೆ ವ್ಯವಸ್ಥೆಯೊಳಗೆ ಉತ್ಪನ್ನಗಳ ಸ್ಥಿತಿಸ್ಥಾಪಕತ್ವತೆಯ ಬಗ್ಗೆಯೂ ವಿಚಾರ ಮಾಡಲಾಗುತ್ತದೆ. ಸರಬರಾಜು ಮತ್ತು ಬೇಡಿಕೆಯ ಮಾದರಿ, ಸಮತೋಲನೆಯ ಫಲಿತಾಂಶದಿಂದಾಗಿ, ಪ್ರತಿ ಬೆಲೆಗೆ(ಸರಬರಾಜು) ಉತ್ಪನ್ನದ ಲಭ್ಯತೆ ಮತ್ತು ಪ್ರತಿ ಬೆಲೆಯಲ್ಲಿ ಉತ್ಪನ್ನವನ್ನು ಕೊಂಡುಕೊಳ್ಳುವುದರೊಂದಿಗೆ ಬಯಸುವವರ ನಡುವೆ ಹೇಗೆ ಬೆಲೆಯಲ್ಲಿ ವ್ಯತ್ಯಾಸವಾಗುತ್ತದೆ ಎಂಬುದನ್ನು ವಿವರಿಸುತ್ತದೆ. ಮೇಲ್ಕಂಡ ರೇಖಾಚಿತ್ರವು ಬಲಬದಿ- D1 ನಿಂದ D2ರ ವರೆಗಿನ ಬೇಡಿಕೆಯನ್ನು ಚಿತ್ರಿಸುತ್ತದೆ. ಇದರೊಂದಿಗೆ ಕ್ರಮಬದ್ಧವಾಗಿ ಹೆಚ್ಚುತ್ತಿರುವ ಬೆಲೆಯನ್ನು ಮತ್ತು ಹೊಸ ಮಾರುಕಟ್ಟೆಯನ್ನು ತಲುಪಲು ಅಗತ್ಯವಿರುವ ಪರಿಮಾಣವನ್ನು ವಿವರಿಸುತ್ತದೆ- ಸರಬರಾಜು(ತಿರುವು) ವಕ್ರರೇಖೆ(S) ನ ಮೇಲೆ ಸಮತೋಲನ ಬಿಂದುವನ್ನು ಸಂಪೂರ್ಣಗೊಳಿಸಿದೆ.

ಕಾರ್ಯಾಚರಣೆಯ ಬಗೆಗಳು

[ಬದಲಾಯಿಸಿ]

ಅಂಜಿ ಸಂಸ್ಥೆಗಳು ತರ್ಕಬದ್ಧವಾಗಿ ನಿರ್ಧರಿಸುವುದನ್ನು ಅನುಸರಿಸುತ್ತವೆ. ಅಲ್ಲದೇ ಲಾಭವನ್ನು ಗರಿಷ್ಠಗೊಳಿಸುವ ಉತ್ಪಾದಕತೆಯನ್ನು (ಔಟ್ ಪುಟ್)ನೀಡುತ್ತವೆ ಎಂದು ಭಾವಿಸಲಾಗಿದೆ. ಈ ಊಹೆಯನ್ನು ಉದಾಹರಣೆಯೊಂದಿಗೆ ನೀಡುವುದರೊಂದಿಗೆ ಸಂಸ್ಥೆಯ ಲಾಭದ ಮೇಲೆ ನಾಲ್ಕು ಶ್ರೇಣಿಗಳಲ್ಲಿ ವಿಚಾರ ಮಂಡಿಸಬಹುದಾಗಿದೆ.

  • ಒಂದು ವ್ಯವಹಾರ ಸಂಸ್ಥೆಯ ಸರಾಸರಿ ಒಟ್ಟು ವೆಚ್ಚವು, ಲಾಭವನ್ನು ಗರಿಷ್ಠಗೊಳಿಸುವ ಉತ್ಪಾದನೆಯಲ್ಲಿ ಪ್ರತಿ ಅಧಿಕ ಉತ್ಪನ್ನದ ಬೆಲೆಗಿಂತ ಕಡಿಮೆ ಇದ್ದರೆ, ಅಂತಹ ಸಂಸ್ಥೆಯು ಆರ್ಥಿಕ ಲಾಭವನ್ನು ಗಳಿಸುತ್ತಿರುವ ಸಂಸ್ಥೆ ಎಂದು ಕರೆಯಲಾಗುತ್ತದೆ. ಆರ್ಥಿಕ ಲಾಭವು, ಸರಾಸರಿ ಒಟ್ಟು ವೆಚ್ಚ ಮತ್ತು ಬೆಲೆಯ ನಡುವಿನ ಅಂತರದಿಂದ ಗುಣಿಸಿದಾಗ ಬರುವ ಪರಿಮಾಣದ ಉತ್ಪಾದನೆಗೆ ಸಮನಾಗಿರುತ್ತದೆ.
  • ಒಂದು ವ್ಯವಹಾರ ಸಂಸ್ಥೆಯ ಆರ್ಥಿಕ ಲಾಭ ಶೂನ್ಯಕ್ಕೆ ಸಮವಾಗಿದ್ದರೆ, ಆಗ ಅದು ಸಾಮಾನ್ಯ ಲಾಭಗಳಿಸುತ್ತಿದೆ, ಎಂದು ಹೇಳಲಾಗುತ್ತದೆ. ಲಾಭವನ್ನು ಗರಿಷ್ಠಗೊಳಿಸುವ ಉತ್ಪಾದನೆಯಲ್ಲಿ ಸರಾಸರಿ ಒಟ್ಟು ವೆಚ್ಚವು ಬೆಲೆಗೆ ಸಮನಾಗಿದ್ದರೆ ಈ ಸಾಮಾನ್ಯ ಲಾಭದ ಸ್ಥಿತಿ ಉಂಟಾಗುತ್ತದೆ.
  • ಲಾಭವನ್ನು ಗರಿಷ್ಠಗೊಳಿಸುವ ಉತ್ಪಾದನೆಯಲ್ಲಿ ಬೆಲೆಯು, ಸರಾಸರಿ ಒಟ್ಟು ವೆಚ್ಚ ಮತ್ತು ಸರಾಸರಿ ಅನಿಶ್ಚಿತ ಮೌಲ್ಯದ ನಡುವೆ ಇದ್ದಲ್ಲಿ, ಆ ಸಂಸ್ಥೆಯನ್ನು ನಷ್ಟ ಕನಿಷ್ಠಗೊಳಿಸುತ್ತಿರುವ ಸ್ಥಿತಿಯಲ್ಲಿರುವ ಸಂಸ್ಥೆ ಎಂದು ಕರೆಯಲಾಗುತ್ತದೆ. ಅದೇನೇ ಅದರೂ ಸಂಸ್ಥೆಯು ಉತ್ಪಾದನೆಯನ್ನು ಮುಂದುವರೆಸಬೇಕೆಂದು ಹೇಳಲಾಗಿದೆ. ಏಕೆಂದರೆ ಅದು ಉತ್ಪಾದನೆಯನ್ನು ನಿಲ್ಲಿಸಿದಲ್ಲಿ ನಷ್ಟ ಹೆಚ್ಚಾಗಬಹುದು. ಉತ್ಪಾದನೆಯನ್ನು ಮುಂದುವರೆಸುವ ಮೂಲಕ ಸಂಸ್ಥೆಯು, ಅದರ ಅನಿಶ್ಚಿತ ಮೌಲ್ಯ ಮತ್ತು ಅದರ ಸ್ಥಿರ ವೆಚ್ಚದ ಸ್ವಲ್ಪ ನಷ್ಟವನ್ನಾದರೂ ಸರಿತೂಗಿಸಬಲ್ಲದು. ಆದರೆ ಉತ್ಪಾದನೆಯನ್ನು ಪೂರ್ಣವಾಗಿ ನಿಲ್ಲಿಸುವುದರಿಂದ ಇದರ ಸ್ಥಿರ ವೆಚ್ಚದ ಸಮಗ್ರತೆ ಕಳೆದುಕೊಳ್ಳುತ್ತದೆ.
  • ಲಾಭವನ್ನು ಗರಿಷ್ಠಗೊಳಿಸುವ ಉತ್ಪಾದನೆಯಲ್ಲಿ ಬೆಲೆಯು ಸರಾಸರಿ ಚರ ವೆಚ್ಚಗಿಂತ ಕಡಿಮೆ ಇದ್ದಲ್ಲಿ, ಆಗ ಸಂಸ್ಥೆಯು ಕಾರ್ಯವನ್ನು ನಿಲ್ಲಿಸಬೇಕಾಗುತ್ತದೆ. ಉತ್ಪಾದನೆಯನ್ನು ನಿಲ್ಲಿಸುವ ಮೂಲಕ ನಷ್ಟವನ್ನು ಕಡಿಮೆ ಮಾಡಬಹುದು. ಏಕೆಂದರೆ ಯಾವುದೇ ಉತ್ಪಾದನೆ ಸ್ಥಿರ ಮೌಲ್ಯದ ಮತ್ತು ಚರ ವೆಚ್ಚದ ಭಾಗದ ನಷ್ಟವನ್ನು ಪೂರೈಸುವಷ್ಟು ಅಧಿಕ ಉತ್ಪಾದನೆ ನೀಡುವುದಿಲ್ಲ. ಉತ್ಪಾದನೆಯನ್ನು ನಿಲ್ಲಿಸುವುದರಿಂದ ಸಂಸ್ಥೆ ಕೇವಲ ಅದರ ಸ್ಥಿರ ವೆಚ್ಚಗಳ ಮೌಲ್ಯವನ್ನು ಮಾತ್ರ ಕಳೆದುಕೊಳ್ಳುತ್ತದೆ. ಈ ಸ್ಥಿರ ಮೌಲ್ಯವನ್ನು ಕಳೆದುಕೊಳ್ಳುವುದರಿಂದ ಕಂಪನಿ ಸವಾಲನ್ನು ಎದುರಿಸಬೇಕಾಗುತ್ತದೆ. ಇದು ಮಾರುಕಟ್ಟೆಯಿಂದ ಹೊರನಡೆಯಬೇಕು, ಅಥವಾ ಮಾರುಕಟ್ಟೆಯಲ್ಲಿ ಉಳಿದುಕೊಂಡು ಸಂಪೂರ್ಣ ನಷ್ಟವಾಗಬಹುದಾದ ಅಪಾಯವನ್ನು ಎದುರಿಸಬೇಕು.

ಅವಕಾಶವಾದಿ ಮೌಲ್ಯ(ಆಯಾ ಕಾಲದ ಉತ್ಪಾದಕತೆಗಳ ವೆಚ್ಚ)

[ಬದಲಾಯಿಸಿ]

ಯಾವುದೇ ಕಾರ್ಯಚಟುವಟಿಕೆಯ (ಅಥವಾ ಸರಕುಗಳು) ಅವಕಾಶವಾದಿ ಮೌಲ್ಯವು ಭವಿಷ್ಯತ್ ನ ಅತ್ಯುತ್ತಮ ಪರ್ಯಾಯ ಆಯ್ಕೆಗೆ ಸಮನಾಗಿರುತ್ತದೆ. ಅವಕಾಶವಾದಿ ಮೌಲ್ಯ ವನ್ನು ಪರಿಮಾಣಿಸುವುದು ಕಷ್ಟವಾದರೂ ಕೂಡ, ಅವಕಾಶವಾದಿ ವೆಚ್ಚದ ಪರಿಣಾಮವು ಸಾರ್ವತ್ರಿಕವಾಗಿರುತ್ತದೆ. ಅಲ್ಲದೇ ವ್ಯಕ್ತಿಗತ ಮಟ್ಟದಲ್ಲಿ ಅತ್ಯಂತ ಸಹಜವಾಗಿರುತ್ತದೆ. ವಾಸ್ತವವಾಗಿ ಈ ಸಿದ್ಧಾಂತ ಕೇವಲ ಆರ್ಥಿಕ ಮಾತ್ರವಲ್ಲದೇ ಎಲ್ಲಾ ನಿರ್ಧಾರಗಳಿಗೂ ಅನ್ವಯಿಸುತ್ತದೆ. ಆಸ್ಟ್ರೇಲಿಯಾದ ಅರ್ಥಶಾಸ್ತ್ರಜ್ಞ ಫ್ರೆಡ್ರಿಕ್ ವನ್ ವೀಸರ್ರವರ ರಚನೆಯ ಕಾಲದಿಂದ ಅವಕಾಶವಾದಿ ವೆಚ್ಚವನ್ನು, ಮೌಲ್ಯ ಸೀಮಿತ ಸಿದ್ಧಾಂತದ ಆಧಾರದಂತೆ ನೋಡಲಾಗುತ್ತಿದೆ.

ಅವಕಾಶವಾದಿ ಮೌಲ್ಯವು ಯಾವುದೇ ಒಂದು ವಸ್ತುವಿನ ಬೆಲೆಯನ್ನು ನಿಖರವಾಗಿ ಲೆಕ್ಕಹಾಕುವ ಒಂದು ಮಾರ್ಗವಾಗಿದೆ. ಸುಮ್ಮನೆ ಗುರುತಿಸಿ ಯೋಜನೆಯ ಮೌಲ್ಯವನ್ನು ಸೇರಿಸುವುದರ ಬದಲಿಗೆ, ಇದೇ ಮೊತ್ತದ ಹಣವನ್ನು ಖರ್ಚು ಮಾಡಲು ಇರುವ ಮುಂದಿನ ಅತ್ಯುತ್ತಮ ಪರ್ಯಾಯ ಮಾರ್ಗ ಯಾವುದೆಂದು ಗುರುತಿಸಬಹುದಾಗಿದೆ. ಮುಂದಿನ ಈ ಅತ್ಯುತ್ತಮ ಪರ್ಯಾಯ ಆಯ್ಕೆಯ ಪೂರ್ವನಿರ್ಧರಿತ ಲಾಭವು, ಮೂಲ ಆಯ್ಕೆಯ ಅವಕಾಶವಾದಿ ಮೂಲ್ಯವಾಗಿದೆ. ಇದಕ್ಕಿರುವ ಸಾಮಾನ್ಯ ಉದಾಹರಣೆಯೆಂದರೆ: ಒಬ್ಬ ಕೃಷಿಕ ಆತನ ಜಮೀನನ್ನು ಆತನ ನೆರೆಹೊರೆಯವರಿಗೆ ಗುತ್ತಿಗೆ ಕೊಡುವ ಬದಲು ಆತನೇ ವ್ಯವಸಾಯ ಮಾಡುತ್ತಾನೆ. ಇಲ್ಲಿ ಅವಕಾಶವಾದವು ಕೆಲಸ ಗುತ್ತಿಗೆ ಕೊಡುವುದರಿಂದ ದೊರೆಯುವ ಪೂರ್ವನಿಶ್ಚಿತ ಲಾಭವಾಗಿದೆ. ಇಂತಹ ಸಂದರ್ಭದಲ್ಲಿ, ಕೃಷಿಕ ಏಕಾಂಗಿಯಾಗಿ ಅಧಿಕ ಲಾಭವನ್ನು ಆತನೇ ಪಡೆಯಲು ಬಯಸುತ್ತಾನೆ. ಇದೇ ರೀತಿಯಲ್ಲಿ ಕಳೆದುಕೊಂಡ ಸಂಬಳ, ವಿಶ್ವವಿದ್ಯಾನಿಲಯಕ್ಕೆ ಹಾಜರಾಗುವುದರಿಂದ ಪಡೆದ ಅವಕಾಶವಾದಿ ಮೌಲ್ಯವಾಗಿದೆ. ಇದನ್ನು ವಿದ್ಯಾರ್ಥಿ ಮನೆಪಾಠ, ಪುಸ್ತಕಗಳು ಮತ್ತು ಅಗತ್ಯವಾದ ಇತರ ವಸ್ತುಗಳ(ಇವುಗಳ ಒಟ್ಟು ಮೊತ್ತ ಹಾಜರಿಯ ಸಂಪೂರ್ಣ ಮೌಲ್ಯವಾಗಿದೆ.) ಮೇಲೆ ಖರ್ಚು ಮಾಡುವುದರ ಬದಲು ಕಾರ್ಯಪಡೆಯಲ್ಲಿದ್ದುಕೊಂಡು ಗಳಿಸಬಲ್ಲ ಸಂದರ್ಭವೆನ್ನಬಹುದು. ಬಹಾಮಾಸ್ ನಲ್ಲಿ ರಜಾಕಾಲದ ಅವಕಾಶವಾದಿ ಮೌಲ್ಯವು,(ಲಾಭದ) ಒಂದು ಮನೆಯ ಆರಂಭಿಕ ವೆಚ್ಚದ ಪಾವತಿಯಾಗಬಹುದು.

ಅವಕಾಶವಾದಿ ವೆಚ್ಚ ಪ್ರಮಾಣವು, ಎದುರಿಗಿರುವ ಪರ್ಯಾಯ ಆಯ್ಕೆಗಳ ಒಟ್ಟು ಮೊತ್ತ ವಾಗಿರದೇ, ಅತ್ಯುತ್ತಮ ಪರ್ಯಾಯ ಏಕ ಆಯ್ಕೆಯ ಲಾಭವಾಗಿರುತ್ತದೆ ಎಂಬುದನ್ನು ಗಮನಿಸಿ. ವ್ಯಕ್ತಿ ನಗರದಲ್ಲಿರುವ ಆತನ ಭೂಮಿಯಲ್ಲಿ ಆಸ್ಪತ್ರೆಯನ್ನು ಕಟ್ಟಿಸಲು ನಿರ್ಧರಿಸಿದರೆ, ಅದರ ಅವಕಾಶವಾದಿ ವೆಚ್ಚವು ಕ್ರೀಡಾ ಕೇಂದ್ರಕ್ಕೆ ಭೂಮಿಯ ನಷ್ಟ, ಅಥವಾ ನಿಲ್ದಾಣದ ಬಳಕೆಗೆ ಭೂಮಿಯನ್ನು ಬಳಸಲಾಗದಿರುವುದು; ಅಥವಾ ಭೂಮಿಯನ್ನು ಮಾರಿ ಪಡೆಯಬಹುದಾಗಿದ್ದ ಹಣದ ನಷ್ಟದ ರೂಪದಲ್ಲಿರುತ್ತದೆ, ಅಥವಾ ಸಾಧ್ಯವಿರುವ ಯಾವುದೇ ಇತರ ಬಳಕೆಯ ನಷ್ಟದ ರೂಪದಲ್ಲಿರುತ್ತದೆ — ಆದರೆ ಸಮಗ್ರವಾಗಿ ಎಲ್ಲವೂ ಅಲ್ಲ. ಮೇಲೆ ಪಟ್ಟಿಮಾಡಲಾದವುಗಳಲ್ಲಿ ಅತ್ಯಂತ ಲಾಭದಾಯಕವಾಗಿರುವ ಬಳಕೆಯ ಪೂರ್ವನಿಶ್ಚಿತ ಲಾಭವೇ ನಿಜವಾದ ಅವಕಾಶವಾದಿ ಮೌಲ್ಯವಾಗಿರುತ್ತದೆ.

ಇಲ್ಲಿ ಹೋಲಿಕೆ ಮಾಡಲು ಮತ್ತು ಅವಕಾಶವಾದಿ ಮೌಲ್ಯವನ್ನು ನಿರ್ಣಯಿಸಲು, ಪ್ರತಿ ಪರ್ಯಾಯ ಆಯ್ಕೆಯ ಹಣದ ವೆಚ್ಚ,ಮೌಲ್ಯ ಎಷ್ಟೆಂಬುದನ್ನು ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಏಳುತ್ತದೆ. ಇದು ನಾವು ಹೋಲಿಸುವ ವಸ್ತುಗಳ ಮೇಲೆ ಅವಲಂಬಿಸಿರುತ್ತಲ್ಲದೆ, ಇದನ್ನು ನಿರ್ಧರಿಸುವುದು ಹೆಚ್ಚು ಅಥವಾ ಕಡಿಮೆ ಕಷ್ಟದ್ದಾಗಿರುತ್ತದೆ. ಉದಾಹರಣೆಗೆ, ಅನೇಕ ನಿರ್ಧಾರಗಳು ಪರಿಸರೀಯ ಪ್ರಭಾವಗಳನ್ನು ಒಳಗೊಂಡಿರುತ್ತವೆ. ವೈಜ್ಞಾನಿಕ ಅಸ್ಥಿರತೆಯಿಂದಾಗಿ ಇವುಗಳ ಹಣದ ಮೌಲ್ಯವನ್ನು ವೆಚ್ಚದ ರೂಪದಲ್ಲಿ ನಿರ್ಣಯಿಸುವುದು ಕಷ್ಟ. ಮಾನವನ ಜೀವನದ ಮಹತ್ವ ಅಥವಾ ಆರ್ಕಟಿಕ್ ನಲ್ಲಿ ಎಣ್ಣೆ ಸೋರಿ ಆದ ನಷ್ಟದ ಮೇಲೆ ಉಂಟಾದ ಆರ್ಥಿಕ ಪ್ರಭಾವವು, ನೈತಿಕ ಪ್ರಭಾವಗಳೊಂದಿಗೆ ವೈಯಕ್ತಿಕ ಆಯ್ಕೆಗಳ ಸೃಷ್ಟಿಯನ್ನು ಒಳಗೊಂಡಿರುತ್ತದೆ.

ಯಾವುದೂ ಕೂಡ ಉಚಿತವಾಗಿ ದೊರೆಯುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾದ ಅಗತ್ಯವಿದೆ. ಒಬ್ಬ ವ್ಯಕ್ತಿ ಏನನ್ನು ಮಾಡಲು ಬಯಸುತ್ತಾನೆ ಎಂಬುದನ್ನು ಕಟ್ಟಿಕೊಂಡು ಏನೂ ಆಗಬೇಕಿಲ್ಲ, ಆತ ಅಥವಾ ಆಕೆ ಯಾವಾಗಲೂ ಬದಲಿಗೆ ಏನನ್ನಾದರೂ ಕೊಡುತ್ತಾರೆ. ಅವಕಾಶವಾದಿ ಮೌಲ್ಯದ ಒಂದು ಉದಾಹರಣೆ ಕೆಳಕಂಡಂತಿದೆ: ವಾದ್ಯಗೋಷ್ಥಿಗೆ ಹೋಗುವುದಾ ಅಥವಾ ಮನೆ ಪಾಠವನ್ನು ಮಾಡುವುದಾ ಎಂಬುದನ್ನು ನಿರ್ಧರಿಸುವುದಾಗಿದೆ. ಅವರು ವಾದ್ಯಗೋಷ್ಠಿಗೆ ಹೋಗಲು ನಿರ್ಧರಿಸಿದರೆ ಆತ ಅಥವಾ ಆಕೆ ಓದಲು ಅವರಿಗೆ ದೊರೆತ್ತಿದ್ದ ಅಮೂಲ್ಯವಾದ ಸಮಯವನ್ನು ಕಳೆದುಕೊಳ್ಳುತ್ತಾರೆ. ಆದರೆ ಆತ ಅಥವಾ ಆಕೆ ಮನೆಪಾಠ ಮಾಡಲು ಬಯಸಿದರೆ ಆಗ ಅವಕಾಶವಾದಿ ಮೌಲ್ಯವು ವಾದ್ಯಗೋಷ್ಠಿಯ ನಷ್ಟವಾಗಿರುತ್ತದೆ. ಅವಕಾಶವಾದಿ ಮೌಲ್ಯ, ಸೂಕ್ಷ್ಮ ಅರ್ಥಶಾಸ್ತ್ರ ಮತ್ತು ತೆಗೆದುಕೊಳ್ಳುವ ನಿರ್ಧಾರಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಅತ್ಯಂತ ಮುಖ್ಯವಾಗಿದೆ.

ಆನ್ವಯಿಕ ಸೂಕ್ಷ್ಮ ಅರ್ಥಶಾಸ್ತ್ರ

[ಬದಲಾಯಿಸಿ]

ಆನ್ವಯಿಕ ಸೂಕ್ಷ್ಮ ಅರ್ಥಶಾಸ್ತ್ರವು, ಇತರ ಅಧ್ಯಯನ ಕ್ಷೇತ್ರಗಳ ಪದ್ಧತಿಗಳನ್ನು ಅಳವಡಿಸಿಕೊಂಡಿರುವ, ಅಧ್ಯಯನದ ವಿಶಿಷ್ಟ ಕ್ಷೇತ್ರಗಳ, ವಿಭಿನ್ನ ಪ್ರಕಾರಗಳನ್ನು ಒಳಗೊಂಡಿದೆ. ಆನ್ವಯಿಕ ಕಾರ್ಯವು ಬೆಲೆ ಸಿದ್ಧಾಂತ, ಸರಬರಾಜು ಮತ್ತು ಬೇಡಿಕೆಯ ಮೂಲತತ್ವಗಳಿಂತ ಸ್ವಲ್ಪ ಅಧಿಕವಾದುದನ್ನು ಬಳಸುತ್ತದೆ. ಔದ್ಯೋಗಿಕ ಸಂಸ್ಥೆ ಮತ್ತು ವಿಧಿಸಲಾದ ನಿಯಮವು ವ್ಯಾಪಾರ ಸಂಸ್ಥೆಗಳ ಪ್ರವೇಶ ಮತ್ತು ನಿರ್ಗಮನ, ನಾವೀನ್ಯತೆ, ವ್ಯಾಪಾರ ಮುದ್ರೆಗಳ ಪಾತ್ರದಂತಹ ವಿಷಯಗಳನ್ನು ಪರಿಶೀಲಿಸುತ್ತವೆ. ಕಾನೂನು ಮತ್ತು ಅರ್ಥಶಾಸ್ತ್ರ,ಸ್ಪರ್ಧಾತ್ಮಕ ಕಾನೂನು ನೀತಿ-ಸೂತ್ರಗಳನ್ನು ಮತ್ತು ಇದಕ್ಕೆ ಸಂಬಂಧಿತ ದಕ್ಷತೆಗಳನ್ನು ಆಯ್ಕೆ ಮಾಡುವ ಮತ್ತು ವಿಧಿಸುವ ಕ್ರಿಯೆಯಲ್ಲಿ ಸೂಕ್ಷ್ಮ ಅರ್ಥಶಾಸ್ತ್ರದ ತತ್ವಗಳನ್ನು ಅನ್ವಯಿಸುತ್ತದೆ. ಕಾರ್ಮಿಕರ ಅರ್ಥಶಾಸ್ತ್ರ, ಸಂಬಳ, ಉದ್ಯೋಗ ಮತ್ತು ಕಾರ್ಮಿಕರ ಮಾರುಕಟ್ಟೆ ಗತಿಶೀಲತೆಯನ್ನು ಪರಿಶೀಲಿಸುತ್ತದೆ. ಸಾರ್ವಜನಿಕ ಹಣಕಾಸು (ಇದನ್ನು ಸಾರ್ವಜನಿಕರ ಅರ್ಥಶಾಸ್ತ್ರ ಎಂದು ಕೂಡ ಕರೆಯಲಾಗುತ್ತದೆ) , ಸರ್ಕಾರಿ ತೆರಿಗೆಯ ರಚನೆ ಮತ್ತು ವೆಚ್ಚ ಮಾಡುವ ನೀತಿಗಳನ್ನು ಹಾಗು ಈ ನೀತಿ-ಸೂತ್ರಗಳ ಆರ್ಥಿಕ ಪರಿಣಾಮಗಳನ್ನು ಪರಿಶೀಲಿಸುತ್ತದೆ. (ಉದಾಹರಣೆಗೆ ಸಾಮಾಜಿಕ ವಿಮಾ ಕಾರ್ಯಕ್ರಮಗಳು).

ರಾಜಕೀಯ ಆರ್ಥಶಾಸ್ತ್ರ,ಇದು ಸರ್ಕಾರೀ ನೀತಿಗಳಿಂದ ಉಂಟಾಗಬಹುದಾದ ಪರಿಣಾಮಗಳನ್ನು ನಿರ್ಧರಿಸುವಲ್ಲಿ ರಾಜಕೀಯ ಸಂಸ್ಥೆಗಳ ಪಾತ್ರವನ್ನು ಪರಿಶೀಲಿಸುತ್ತದೆ. ಆರೋಗ್ಯ ಅರ್ಥಶಾಸ್ತ್ರ ಆರೋಗ್ಯ ರಕ್ಷಣಾ ಕಾರ್ಯಪಡೆ ಮತ್ತು ಆರೋಗ್ಯ ವಿಮಾ ಕಾರ್ಯಕ್ರಮಗಳ ಪಾತ್ರವನ್ನು ಒಳಗೊಂಡಂತೆ ಆರೋಗ್ಯ ರಕ್ಷಣಾ ವ್ಯವಸ್ಥೆಯ ಸಂಘಟನೆಗಳನ್ನು ಪರಿಶೀಲಿಸುತ್ತದೆ. ನಗರ ಅರ್ಥಶಾಸ್ತ್ರ, ಇದು ಅವ್ಯವಸ್ಥಿತ ಬೆಳವಣಿಗೆ, ವಾಯು ಮತ್ತು ಜಲ ಮಾಲಿನ್ಯ, ಸಂಚಾರ ನಿಬಿಡತೆ ಮತ್ತು ಬಡತನದಂತಹ ವಿಷಯಗಳಲ್ಲಿ ನಗರಗಳು ಎದುರಿಸುವ ಸವಾಲುಗಳನ್ನು ಪರಿಶೀಲಿಸುತ್ತದೆ. ಅಲ್ಲದೇ ಪಟ್ಟಣ ಮತ್ತು ಸಮಾಜಶಾಸ್ತ್ರದ ಕ್ಷೇತ್ರಗಳಲ್ಲಿಯೂ ಕಾರ್ಯನಿರ್ವಹಿಸುತ್ತದೆ.

ಹಣಕಾಸಿನ ಅರ್ಥಶಾಸ್ತ್ರದ ಕ್ಷೇತ್ರವು, ಅತ್ಯುತ್ತಮ ಬಂಡವಾಳಗಳ ಪಟ್ಟಿಯ ರಚನೆ, ಹೂಡಿದ ಬಂಡವಾಳಕ್ಕೆ ದೊರೆಯುವ ಪ್ರತಿಫಲದ ದರ, ನಿಶ್ಚಿತ ಫಲಿತಾಂಶಗಳ ಅರ್ಥಮಾಪನ ವಿಶ್ಲೇಷಣೆಗಳು ಮತ್ತು ಕಾರ್ಪೊರೇಟ್ ನ ಹಣಕಾಸಿನ ನಡವಳಿಕೆಗಳಂತಹ ವಿಷಯಗಳನ್ನು ಪರಿಶೀಲಿಸುತ್ತದೆ. ಆರ್ಥಿಕ ಇತಿಹಾಸ, ಇದು ಅರ್ಥಶಾಸ್ತ್ರ, ಇತಿಹಾಸ, ಭೂಗೋಳಶಾಸ್ತ್ರ, ಸಮಾಜಶಾಸ್ತ್ರ, ಮನಃಶಾಸ್ತ್ರ ಮತ್ತು ರಾಜ್ಯಶಾಸ್ತ್ರದ ವಿಧಾನ ಮತ್ತು ರೀತಿಗಳನ್ನು ಬಳಸಿ ಅರ್ಥಶಾಸ್ತ್ರದ ಉಗಮ ಮತ್ತು ಆರ್ಥಿಕ ಸಂಘಟನೆಗಳನ್ನು ಪರಿಶೀಲಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Marchant, Mary A. "Macroeconomic and International Policy Terms" (PDF). University of Kentucky. Retrieved 2007-05-04. {{cite web}}: Unknown parameter |coauthors= ignored (|author= suggested) (help)
  2. ೨.೦ ೨.೧ "Economics Glossary". Monroe County Women's Disability Network. Archived from the original on 2016-12-02. Retrieved 2008-02-22.
  3. "Social Studies Standards Glossary". New Mexico Public Education Department. Archived from the original on 2007-08-08. Retrieved 2008-02-22.
  4. "Glossary". ECON100. Retrieved 2008-02-22.

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • Bade, Robin (2001). Foundations of Microeconomics. Addison Wesley Paperback 1st Edition. {{cite book}}: Unknown parameter |coauthors= ignored (|author= suggested) (help)
  • ಕೊಲ್ಯಾಂಡರ್, ಡೇವಿಡ್. ಮೈಕ್ರೋಎಕನಾಮಿಕ್ಸ್‌. ಮ್ಯಾಕ್ ಗ್ರ್ಯಾವ್-ಹಿಲ್ ಪೇಪರ್ ಬ್ಯಾಕ್, 7ನೇ ಆವೃತ್ತಿ: 2008.
  • Dunne, Timothy, J. Bradford Jensen, and Mark J. Roberts (2009). Producer Dynamics: New Evidence from Micro Data. University of Chicago Press. ISBN 9780226172569.{{cite book}}: CS1 maint: multiple names: authors list (link)
  • ಎಟನ್, B. ಕರ್ಟಿಸ್; ಎಟನ್, ಡೈನೆ F.; ಮತ್ತು ಡೌಗ್ಲಾಸ್ W. Aಅಲೆನ್. ಮೈಕ್ರೋಎಕನಾಮಿಕ್ಸ್ ‌. ಪ್ರಿಂಟೆಸ್ ಹಾಲ್, 5ನೇ ಆವೃತ್ತಿ: 2002.
  • ಫ್ರಾಂಕ್, ರಾಬರ್ಟ್ A.; ಮೈಕ್ರೋಎಕನಾಮಿಕ್ಸ್ ಅಂಡ್ ಬಿಹೇವಿಯರ್ . ಮ್ಯಾಕ್ ಗ್ರ್ಯಾವ್-ಹಿಲ್/ಇರ್ವಿನ್, 6ನೇ ಆವೃತ್ತಿ: 2006.
  • ಫ್ರೈಡ್ ಮೆನ್, ಮಿಲ್ಟನ್. ಪ್ರೈಸ್ ಥಿಯರಿ. ಅಲ್ಡೈನ್ ಟ್ರಾನ್ಸಾಕ್ಷನ್: 1976
  • ಹ್ಯಾಗೆನ್ಡ್ರಾಫ್, ಕ್ಲೌಸ್: ಲೇಬರ್ ವ್ಯಾಲ್ಯೂಸ್ ಅಂಡ್ ದಿ ಥಿಯರಿ ಆಫ್ ದಿ ಫರ್ಮ್. ಪಾರ್ಟ್ I: ದಿ ಕಾಂಪಿಟೇಟಿವ್ ಫರ್ಮ್. ಪ್ಯಾರಿಸ್: EURODOS; 2009.
  • ಹ್ಯಾರ್ಬರ್ಗರ್, ಅರ್ನಾಲ್ಡ್ C., 2008. "ಮೈಕ್ರೋಎಕನಾಮಿಕ್ಸ್," ದಿ ಕನ್ ಸೈಸ್ ಎನ್ ಸೈಕ್ಲಪೀಡಿಯ ಆಫ್ ಎಕನಾಮಿಕ್ಸ್ .
  • ಹೈಕ್ಸ್, ಜಾನ್ R. ವ್ಯಾಲ್ಯೂ ಅಂಡ್ ಕ್ಯಾಪಿಟಲ್ . ಕ್ಲೇರೆನ್ ಡನ್ ಪ್ರೆಸ್. [1939] 1946, 2ನೇ ed.
  • ಜೆಹ್ಲೆ, ಗಿಯೋಫ್ರೆ A.; ಮತ್ತು ಫಿಲಿಪ್ J. ರೆನಿ. ಅಡ್ವಾನ್ಡ್ ಮೈಕ್ರೋಎಕನಾಮಿಕ್ಸ್ ಥಿಯರಿ. ಅಡಿಷನ್ ವೆಸ್ಲೆ ಪೇಪರ್ ಬ್ಯಾಕ್, 2ನೇ ಆವೃತ್ತಿ: 2000.
  • ಕ್ಯಾಟ್ಜ್, ಮೈಕೆಲ್ L.; ಮತ್ತು ಹ್ಯಾರ್ವೆ S. ರೋಸನ್. ಮೈಕ್ರೋಎಕನಾಮಿಕ್ಸ್ ‌. ಮ್ಯಾಕ್ ಗ್ರೌ-ಹಿಲ್/ಐರ್ವಿನ್, 3ನೇ ಆವೃತ್ತಿ: 1997.
  • ಕ್ರೆಪ್ಸ್, ಡೇವಿಡ್ M. ಅ ಕೋರ್ಸ್ ಇನ್ ಮೈಕ್ರೋಎಕನಾಮಿಕ್ ಥಿಯರಿ . ಪ್ರಿನ್ಸ್‌‌ಟನ್‌ ಯೂನಿವರ್ಸಿಟಿ ಪ್ರೆಸ್‌, 1980
  • ಲ್ಯಾಂಡ್ಸ್ ಬರ್ಗ್, ಸ್ಟೀವನ್. ಪ್ರೈಸ್ ಥಿಯರಿ ಅಂಡ್ ಅಪ್ಲಿಕೇಷನ್ಸ್ . ಸೌತ್-ವೆಸ್ಟ್ ಕಾಲೇಜು ಪಬ್, 5ನೇ ಆವೃತ್ತಿ: 2001.
  • ಮ್ಯಾನ್ ಕಿವ್ , N. ಗ್ರೆಗರಿ. ಪ್ರಿನ್ಸಿಪಲ್ಸ್ ಆಫ್ ಮೈಕ್ರೋಎಕನಾಮಿಕ್ಸ್ . ಸೌತ್-ವೆಸ್ಟ್ ಪಬ್, 2ನೇ ಆವೃತ್ತಿ: 2000.
  • ಮ್ಯಾಸ್-ಕೊಲೇಲ್, ಆಂಡ್ರೀವ್ಯೂ; ವಿನ್ ಸ್ಟನ್, ಮೈಕೆಲ್ D.; ಮತ್ತು ಜೆರಿ R. ಗ್ರೀನ್. ಮೈಕ್ರೋಎಕನಾಮಿಕ್ ಥಿಯರಿ . ಆಕ್ಸ್ ಫರ್ಡ್ ಯುನಿವರ್ಸಿಟಿ ಪ್ರೆಸ್, US: 1995.
  • ಮ್ಯಾಕ್ ಗ್ವಿಗನ್, ಜೇಮ್ಸ್ R.; ಮೊಯರ್, R. ಚಾರ್ಲೆಸ್; ಮತ್ತು ಫ್ರೆಡ್ ರಿಕ್ H. ಹ್ಯಾರೀಸ್. ಮ್ಯಾನೇಜಿರಿಯಲ್ ಎಕನಾಮಿಕ್ಸ್: ಅಪ್ಲಿಕೇಷನ್ಸ್, ಸ್ಟ್ರ್ಯಾಟಜಿ ಅಂಡ್ ಟ್ಯಾಕ್ಟಿಕ್ಸ್ . ಸೌತ್-ವೆಸ್ಟನ್ ಎಜುಕೇಷನಲ್ ಪಬ್ಲಿಷಿಂಗ್, 9ನೇ ಆವೃತ್ತಿ: 2001.
  • ನಿಕಾಲ್ಸನ್, ವಾಲ್ಟರ್. ಮೈಕ್ರೋಎಕನಾಮಿಕ್ ಥಿಯರಿ: ಬೇಸಿಕ್ ಪ್ರಿನ್ಸಿಪಲ್ಸ್ ಅಂಡ್ ಎಕ್ಸ್ ಟೇನ್ಷನ್ಸ್ ಸೌತ್-ವೆಸ್ಟನ್ ಕಾಲೇಜ್ ಪಬ್, 8ನೇ ಆವೃತ್ತಿ: 2001.
  • ಪರ್ ಲಾಫ್, ಜೆಫ್ರೀ M. ಮೈಕ್ರೋಎಕನಾಮಿಕ್ಸ್ . ಪಿಯರ್ ಸನ್ - ಅಡಿಸನ್ ವೆಸ್ಲೆ, 4ನೇ ಆವೃತ್ತಿ: 2007.
  • ಪರ್ ಲಾಫ್, ಜೆಫರಿ M. ಮೈಕ್ರೋಎಕನಾಮಿಕ್ಸ್: ಥಿಯರಿ ಅಂಡ್ ಅಪ್ಲಿಕೇಷನ್ಸ್ ವಿತ್ ಕ್ಯಾಲ್ ಕುಲಸ್ . ಪಿಯರ್ ಸನ್ - ಅಡಿಸನ್ ವೆಸ್ಲಿ, 1ನೇ ಆವೃತ್ತಿ: 2007
  • ಪಿಂಡಿಕ್, ರಾಬರ್ಟ್ S.; ಮತ್ತು ಡೇನಿಯಲ್ L. ರುಬಿನ್ ಫೆಲ್ಡ್. ಮೈಕ್ರೋಎಕನಾಮಿಕ್ಸ್‌. ಪ್ರಿಟೈಸ್ ಹಾಲ್ , 7ನೇ ಆವೃತ್ತಿ: 2008.
  • ರೂಫಿನ್, ರಾಯ್ J.; ಅಂಡ್ ಪೌಲ್ R. ಗ್ರೆಗರಿ. ಪ್ರಿನ್ಸಿಪಲ್ಸ್ ಆಫ್ ಮೈಕ್ರೋಎಕನಾಮಿಕ್ಸ್ . ಅಡಿಸನ್ ವೆಲ್ಸೆ, 7ನೇ ಆವೃತ್ತಿ: 2000.
  • ವ್ಯಾರಿಯನ್, ಹಾಲ್ R. (1987). "ಮೈಕ್ರೋಎಕನಾಮಿಕ್ಸ್," The New Palgrave: A Dictionary of Economics , v. 3, pp. 461–63.
  • ವ್ಯಾರಿಯನ್, ಹಾಲ್ R. ಇಂಟರ್ ಮೀಡಿಯಟ್ ಮೈಕ್ರೋಎಕನಾಮಿಕ್ಸ್ . ಅಂಡ್ ಕಂಪನಿ, 7ನೇ ಆವೃತ್ತಿ.
  • ವೇರಿಯನ್, ಹಾಲ್ R. ಮೈಕ್ರೋಎಕನಾಮಿಕ್ ಅನಾಲಿಸಸ್ . W. W. ನಾರ್ಟನ್ ಅಂಡ್ ಕಂಪನಿ, 3ನೇ ಆವೃತ್ತಿ.

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಟೆಂಪ್ಲೇಟು:Microeconomics-footer