ಭ್ರಷ್ಟಾಚಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭ್ರಷ್ಟಾಚಾರದ ವಿರುದ್ಧ ವಿಶ್ವಸಂಸ್ಥೆಯ ಸಮಾವೇಶ

ಭ್ರಷ್ಟಾಚಾರವು ಯಾವುದೇ ವ್ಯಕ್ತಿ ನಿಯಮಬಾಹಿರವಾದ ಮತ್ತು ತನಗೆ ತಮ್ಮವರಿಗೆ ನ್ಯಾಯಬದ್ಧವಾಗಿ ಸಲ್ಲಬೇಕಾದುದಕ್ಕಿಂತ ಹೆಚ್ಚಿನ ಸೌಲಭ್ಯ ಅಥವಾ ವಸ್ತು ಯಾ ಹಣ ಪಡೆಯುವುದು ಅಥವಾ ಲಾಭಮಾಡಿಕೊಳ್ಳುವುದು ಎನ್ನಬಹುದು. ಸಾರ್ವಜನಿಕ ಸೇವಾ ಸ್ಥಾನದಲ್ಲಿರುವವರು, ಜನ ಪ್ರತಿನಿಧಿಗಳು ಅಥವಾ ಸರಕಾರದ ಅಧಿಕಾರಿಗಳು ಯಾ ಸೇವಕರು ನಿಯಮ ಬಾಹಿರವಾಗಿ ಅಥವಾ ತಮ್ಮ ಆ ಸ್ಥಾನವನ್ನು ಉಪಯೋಗಿಸಿಕೊಂಡು ನಿಯಮಕ್ಕಿಂತ ಹೆಚ್ಚಿನ ಅಥವಾ ತಮಗೆ ಸಲ್ಲಬೇಕಾದುದಕ್ಕಿಂತ ಹೆಚ್ಚಿನ ಸೌಲಭ್ಯ ಅಥವಾ ಲಾಭ ಪಡೆಯುವುದು. ತಮ್ಮ ಅಧಿಕಾರವನ್ನು ನಿಯಮಕ್ಕೆ ವಿರುದ್ಧವಾಗಿ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳುವುದು.

ಭಾರತದಲ್ಲಿ ಭ್ರಷ್ಟಾಚಾರ[ಬದಲಾಯಿಸಿ]

  • 2016
  • ದೇಶದಲ್ಲಿ 2001ರಿಂದ 2015ರವರೆಗೆ 54 ಸಾವಿರಕ್ಕೂ ಹೆಚ್ಚು ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಅರ್ಧದಷ್ಟು ಪ್ರಕರಣಗಳ ವಿಚಾರಣೆ ಮಾತ್ರ ಪೂರ್ತಿಯಾಗಿದೆ.

ದೂರು ನೀಡಲು ಹಿಂದೇಟು[ಬದಲಾಯಿಸಿ]

ಪ್ರಕರಣ ದಾಖಲಾದರೂ ನ್ಯಾಯ ನೀಡಿಕೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗುವಲ್ಲಿ ವಿಳಂಬವಾಗುತ್ತಿರುವುದರಿಂದ ಭ್ರಷ್ಟಾಚಾರ ನಿಯಂತ್ರಣ ಪರಿಣಾಮಕಾರಿಯಾಗುತ್ತಿಲ್ಲ. ಹೀಗಾಗಿ ಹಲವೆಡೆ ಜನರು ದೂರು ನೀಡಲೂ ಹಿಂದೇಟು ಹಾಕುತ್ತಿದ್ದಾರೆ ಎಂದು ‘ಕಾಮನ್‌ವೆಲ್ತ್ ಹ್ಯೂಮನ್‌ ರೈಟ್ಸ್‌ ಇನಿಷಿಯೇಟಿವ್’ ಹೇಳಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಬಿಡುಗಡೆ ಮಾಡಿರುವ ವರದಿಯನ್ನು ಅಧ್ಯಯನ ಮಾಡಿ ಸಂಸ್ಥೆ ಈ ವರದಿ ಸಿದ್ಧಪಡಿಸಿದೆ.

ರಾಷ್ಟ್ರೀಯ ಭ್ರಷ್ಟಾಚಾರ ಅಪರಾಧಗಳ ಅಂಕಿ ಅಂಶ[ಬದಲಾಯಿಸಿ]

ವಿವರ ಸಂಖ್ಯೆ
ದಾಖಲಾದ ಪ್ರಕರಣಗಳು 54,139
ವಿಚಾರಣೆ ಮುಗಿದವು 29,920
ವಿಚಾರಣೆ ಎದುರಿಸಿದವರು 47,460
ಶಿಕ್ಷೆಗೆ ಗುರಿಯಾದವರು 10,571
ಖುಲಾಸೆಗೊಂಡವರು. 30,720

ರಾಜ್ಯವಾರು[ಬದಲಾಯಿಸಿ]

ರಾಜ್ಯ ಪ್ರಕರಣಗಳು ವಿಚಾರಣೆ ಮುಗಿದವು ಶಿಕ್ಷೆಗೆ ಗುರಿಯಾದವರು ವಿಚಾರಣೆ ಎದುರಿಸಿದವರು ಖುಲಾಸೆಗೊಂಡವರು
ಮಹಾರಾಷ್ಟ್ರ 8875 6399 1592 8055 7117
ರಾಜಸ್ಥಾನ 8369 2018 741 4214 3021
ಒಡಿಶಾ 5085 1865 743 2467 1586
ಕರ್ನಾಟಕ 4732 2958 614 3394 3660
ಆಂಧ್ರಪ್ರದೇಶ 3804 1925 1058 2541 1210

ಪರಾಮರ್ಶೆ[ಬದಲಾಯಿಸಿ]

  • ಪ್ರಕರಣ ದಾಖಲೆಯಲ್ಲಿ ಕರ್ನಾಟಕ ಮುಂದಿದೆ. ಆಂದ್ರದ ನಂತರ ಕೇರಳ ತಮಿಳುನಾಡು ಗೋವಾ ಮತ್ತು ಪುದುಚೇರಿಗಳಿವೆ. ಮೇಘಾಲಯದಲ್ಲಿ 15 ವರ್ಷಗಳಲ್ಲಿ ಕೇವಲ39 ಪ್ರಕರಣಗಳು ದಾಖಲಾಗಿವೆ.[೧]

೨೦೧೬ ರ ವರದಿ[ಬದಲಾಯಿಸಿ]

  • 7 Mar, 2017
  • ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಹೊರತಾಗಿಯೂ ಭಾರತದಲ್ಲಿ ನಾಗರಿಕರು ಮೂಲ ಸೌಲಭ್ಯ ಪಡೆಯಲು ಲಂಚ ನೀಡಲೇ ಬೇಕಾದ ಒತ್ತಡದಲ್ಲಿ ಸಿಲುಕಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.
  • ಸರ್ಕಾರಿ ಸಾರ್ವಜನಿಕ ಸೇವೆಗಳಾದ ಶಾಲೆ, ಆಸ್ಪತ್ರೆಗಳಂತಹ ಮೂಲ ಸೌಲಭ್ಯ ಪಡೆಯಲು 10 ಮಂದಿ ಭಾರತೀಯರಲ್ಲಿ ಏಳು ಮಂದಿ(ಶೇಕಡಾ 69) ಲಂಚ ನೀಡಬೇಕಾದ ಸ್ಥಿತಿ ಇದೆ ಎಂದು ‘ಟ್ರಾನ್ಸ್‌ಪರೆನ್ಸಿ ಇಂಟರ್‌ ನ್ಯಾಷನಲ್‌’ ವರದಿಯಲ್ಲಿ ಹೇಳಿದೆ ಎಂದು ‘ಫ್ಲಿಪ್‌ಬೋರ್ಡ್‌’ ವರದಿ ಮಾಡಿದೆ.
  • ‘ಸಾರ್ವಜನಿಕರು ಮತ್ತು ಭ್ರಷ್ಟಾಚಾರ: ಏಷ್ಯಾ ಪೆಸಿಫಿಕ್‌’ ಶೀರ್ಷಿಕೆ ಅಡಿ 16 ರಾಷ್ಟ್ರಗಳು ಹಾಗೂ ಇತರೆ ಕೆಲವು ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಅತಿ ಹೆಚ್ಚು ಲಂಚದ ಪ್ರಮಾಣ ಭಾರತದಲ್ಲಿ ನಡೆಯುತ್ತಿದೆ ಎಂದು ವರದಿ ಬಹಿರಂಗಪಡಿಸಿದೆ. ಭ್ರಷ್ಟಾಚಾರ ವಿರೋಧಿ ಸಂಘಟನೆ 2016ರ ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಭಾರತದಲ್ಲಿ 2,802 ಜನರ ಮುಖಾ ಮುಖಿ ಸಂದರ್ಶನ ನಡೆಸಿದೆ.[೨]

ಆಧಾರ[ಬದಲಾಯಿಸಿ]

  • ಕಾಮನ್‌: ಕಾಮನ್‌ವೆಲ್ತ್‌ ಹ್ಯೂಮನ್‌ ರೈಟ್ಸ್‌ ಇನಿಷಿಯೇಟಿವ್, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ

ನೋಡಿ[ಬದಲಾಯಿಸಿ]

ಭ್ರಷ್ಟಾಚಾರ ಮಟ್ಟ ಸೂಚ್ಯಂಕದಲ್ಲಿ (ಸಿಪಿಐ) . ಭ್ರಷ್ಟಾಚಾರ . ಅಣ್ಣಾ ಹಜಾರೆ . ಮೇಧಾ ಪಾಟ್ಕರ್
ಭ್ರಷ್ಟಾಚಾರದ ಸುಳಿಯಲ್ಲಿ ಭಾರತ . ಲೋಕಾಯುಕ್ತ . ಲೋಕಪಾಲ ಮಸೂದೆ . ಅರವಿಂದ್ ಕೇಜ್ರಿವಾಲ್ . ಬಿ.ಎಸ್. ಯಡಿಯೂರಪ್ಪ

[೩][೪][೫][೬]


ಉಲ್ಲೇಖಗಳು[ಬದಲಾಯಿಸಿ]

  1. "ಭ್ರಷ್ಟಾಚಾರ ಪ್ರಕರಣ; ಪರಿಣಾಮಕಾರಿಯಲ್ಲದ ಕಾನೂನು ಪ್ರಕ್ರಿಯೆ;ಪ್ರಜಾವಾಣಿ;19 Dec, 2016". Archived from the original on 2016-12-20. Retrieved 2016-12-20.
  2. ಭ್ರಷ್ಟಾಚಾರ ಕಡಿವಾಣ ಹೊರತಾಗಿಯೂ ಮೂಲಸೌಲಭ್ಯಕ್ಕಾಗಿ ಲಂಚ ನೀಡಿಕೆ ಒತ್ತಡದಲ್ಲಿ ಶೇ 70ರಷ್ಟು ಭಾರತೀಯರು;ಏಜೆನ್ಸಿಸ್‌;7 Mar, 2017
  3. [೧]
  4. [೨]
  5. https://www.merriam-webster.com/dictionary/corruption
  6. https://www.collinsdictionary.com/dictionary/english/corruption