ವಿಷಯಕ್ಕೆ ಹೋಗು

ಅಣ್ಣಾ ಹಜಾರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಿಷನ್ ಬಾಪಟ್ ಬಾಬುರಾವ್ ಹಜಾರೆ
2 ಅಕ್ಟೋಬರ್ 2014
ಜನನ (1937-06-15) ಜೂನ್ ೧೫, ೧೯೩೭ (ವಯಸ್ಸು ೮೭)
ರಾಷ್ಟ್ರೀಯತೆಭಾರತೀಯ
Movementಜಲವಿಭಾಜಕ ಅಭಿವೃದ್ದಿ ಕಾರ್ಯಕ್ರಮ; ಮಾಹಿತಿ ಹಕ್ಕು ಕಾಯ್ದೆ; ಬೃಷ್ಟಾಚಾರ ನಿರೋಧ ಚಳವಳಿ
ಪೋಷಕ(ರು)ಲಕ್ಷ್ಮಿಬಾಯಿ ಹಜಾರೆ(ತಾಯಿ)
ಬಾಬುರಾವ್ ಹಜಾರೆ (ತಂದೆ)
ಜಾಲತಾಣhttp://www.annahazare.org

ಡಾ. ಕಿಷನ್ ಬಾಬುರಾವ್ ಹಜಾರೆ , ಜನಪ್ರಿಯವಾಗಿ ಅಣ್ಣಾ ಹಜಾರೆ (ಜನನ: ಜೂನ್ ೧೫, ೧೯೩೮), ಭಾರತದ ಮಹಾರಾಷ್ಟ್ರ ರಾಜ್ಯದ ಅಹ್ಮದ್‌ನಗರ ಜಿಲ್ಲೆಯ ರಾಲೇಗನ್ ಸಿದ್ಧಿ ಎಂಬ ಹಳ್ಳಿಯ ಅಭಿವೃದ್ಧಿಗಾಗಿ ನೀಡಿರುವ ಕಾಣಿಕೆಗಳಿಗಾಗಿ ಮತ್ತು ಅದನ್ನು ಒಂದು ಮಾದರಿ ಹಳ್ಳಿಯಾಗಿ ಗುರುತಿಸಲು ಮಾಡಿರುವ ಪ್ರಯತ್ನಕ್ಕಾಗಿ ೧೯೯೨ರಲ್ಲಿ ಭಾರತ ಸರ್ಕಾರದಿಂದ ಪದ್ಮ ಭೂಷಣ ಪ್ರಶಸ್ತಿ ಗಳಿಸಿರುವ ಒಬ್ಬ ಭಾರತೀಯ ಸಾಮಾಜಿಕ ಕಾರ್ಯಕರ್ತ. ಸಾರ್ವಜನಿಕ ಕಛೇರಿಗಳಲ್ಲಿನ ಭ್ರಷ್ಟಾಚಾರ ತಡೆಗಾಗಿ ಲೋಕಪಾಲ ಕಾಯ್ದೆಯನ್ನು ಜಾರಿಗೊಳಿಸುವ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ೨೦೧೧ರ ಎಪ್ರಿಲ್ ೫ರಿಂದ ಅವರು ಆಮರಣಾಂತ ಉಪವಾಸ ಕೈಗೊಂಡರು. ಅಭಿವೃದ್ಧಿಯು ಭ್ರಷ್ಟಾಚಾರದಿಂದಾಗಿ ಕುಂಠಿತಗೊಂಡಿದೆ ಎಂದು ಮನಗಂಡು ಅಣ್ಣಾ ಅವರು ೧೯೯೧ರಲ್ಲಿ ಭ್ರಷ್ಟಾಚಾರ ವಿರೋಧೀ ಜನ ಆಂದೋಲನ ಎಂಬ ಭ್ರಷ್ಟಾಚಾರದ ವಿರುದ್ಧ ಸಾರ್ವಜನಿಕ ಚಳವಳಿ ಆರಂಭಿಸಿದರು. ೪೨ ಅರಣ್ಯಾಧಿಕಾರಿಗಳು ಸರ್ಕಾರಿ ಸಂಸ್ಥೆಯಲ್ಲಿನ ಭ್ರಷ್ಟಾಚಾರದಿಂದಾಗಿ ರಾಜ್ಯ ಸರ್ಕಾರಗಳಿಗೆ ಸಲ್ಲಬೇಕಾದ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ್ದರು ಎಂಬುದು ತಿಳಿದುಬಂದಿತು. ಹಜಾರೆ ಅವರು ಸರ್ಕಾರಕ್ಕೆ ಪುರಾವೆಗಳನ್ನು ಒದಗಿಸಿದರೂ ಆಳುವ ಪಕ್ಷದ ಒಬ್ಬ ಮಂತ್ರಿಯು ಹಗರಣದಲ್ಲಿ ಭಾಗಿಯಾಗಿದ್ದ ಕಾರಣ ಸರ್ಕಾರವು ಆ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ನಿರಾಕರಿಸಿತು. ಇದರಿಂದ ಮನನೊಂದ ಹಜಾರೆ ಅವರು ಪದ್ಮಶ್ರೀ ಪ್ರಶಸ್ತಿಯನ್ನು ರಾಷ್ಟ್ರಪತಿಗಳಿಗೆ ಹಿಂದಿರುಗಿಸಿದರು. ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರು ನೀಡಿದ್ದ ವೃಕ್ಷ ಮಿತ್ರ ಪ್ರಶಸ್ತಿಯನ್ನೂ ಕೂಡ ಹಿಂದಿರುಗಿಸಿದರು.

ಇದೇ ವಿಷಯದ ಸಲುವಾಗಿ ಅವರು ಆಮರಣಾಂತ ಉಪವಾಸ ಕೈಗೊಂಡರು. ಕೊನೆಗೂ ನಿದ್ದೆಯಿಂದ ಎಚ್ಚೆತ್ತ ಸರ್ಕಾರ ಅಪರಾಧಿಗಳ ವಿರುದ್ಧ ಕ್ರಮ ಕೈಗೊಂಡಿತು. ಛಲ ಬಿಡದ ಹಜಾರೆಯವರ ಈ ಕಾರ್ಯವು ಮಹತ್ತರ ಪರಿಣಾಮ ಬೀರಿತು - ಆರು ಮಂತ್ರಿಗಳು ರಾಜೀನಾಮೆ ಕೊಟ್ಟರು ಮತ್ತು ವಿವಿಧ ಕಛೇರಿಗಳ ನಾನೂರಕ್ಕೂ ಹೆಚ್ಚು ಅಧಿಕಾರಿಗಳು ಮನೆಗೆ ಕಳುಹಿಸಲ್ಪಟ್ಟರು. ಮಾಹಿತಿ ಹಕ್ಕು ಕಾಯ್ದೆ - ೨೦೦೫ ಕಾರ್ಯಗತವಾದ ಮೇಲೆ ಕಾಯ್ದೆಯ ಬಗ್ಗೆ ಅರಿವು ಮೂಡಿಸುತ್ತಾ ಹಜಾರೆಯವರು ರಾಜ್ಯದಲ್ಲಿ ೧೨,೦೦೦ ಕಿ.ಮೀಗೂ ಹೆಚ್ಚು ದೂರ ಸಂಚರಿಸಿದ್ದಾರೆ. ಎರಡನೇ ಹಂತದಲ್ಲಿ ಇವರು ಒಂದು ಲಕ್ಷಕ್ಕೂ ಹೆಚ್ಚು ವಿಧ್ಯಾರ್ಥಿಗಳೊಂದಿಗೆ ಸಂವಹನ ನೆಡೆಸಿದ್ದಾರೆ ಮತ್ತು ರಾಜ್ಯದ ೨೪ ಜಿಲ್ಲೆಗಳಲ್ಲಿ ಸಾರ್ವಜನಿಕ ಸಭೆಗಳನ್ನೂ ಆಯೋಜಿಸಿದ್ದಾರೆ. ಮೂರನೇ ಹಂತವು ೧೫೫ ತೆಸಿಲ್ (tehsil) ಜಾಗಗಳಲ್ಲಿ ಪ್ರತಿದಿನ ೨-೩ ಸಾರ್ವಜನಿಕ ಸಭೆಗಳನ್ನು ಒಳಗೊಂಡಿತ್ತು. ಈ ಮಹಾಚಳವಳಿಯಲ್ಲಿ ಭಿತ್ತಿಪತ್ರಗಳು ಪ್ರದರ್ಶನಗೊಂಡವು ಮತ್ತು ಕಾಯ್ದೆಯ ನಿಬಂಧನೆಗಳ ಪುಸ್ತಕಗಳು ಸಾಮಾನ್ಯ ದರದಲ್ಲಿ ವಿತರಿಸಲಾಯಿತು. ಇದು ಸಾಕಷ್ಟು ಜಾಗೃತಿಯನ್ನುಂಟುಮಾಡಿತು ಮತ್ತು ನಾಗರಿಕ ಹಕ್ಕುಗಳ ಬಗ್ಗೆ ಜನರು ತಿಳಿದುಕೊಂಡರು.

ಹಿನ್ನೆಲೆ

[ಬದಲಾಯಿಸಿ]

೧೫ನೆ ಜೂನ್ ೧೯೩೮ರಂದು ಅಣ್ಣಾ ಹಜಾರೆಯವರು ಭಿಂಗಾರ್‌ನಲ್ಲಿ ಜನಿಸಿದರು. ಅವರು ಕುಟುಂಬದ ಹಿರಿಯ ಮೊಮ್ಮಗುವಾಗಿದ್ದರು ಮತ್ತು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಭಿಂಗಾರ್‌ನಲ್ಲಿ ಹೊಂದಿದರು. ೧೯೬೨ರ ಚೀನೀಯರ ಆಕ್ರಮಣದ ಸಮಯದಲ್ಲಿ ಅಣ್ಣಾ ಸೇನೆಗೆ ಸೇರಿ ಸ್ಪಂದಿಸಿದರು. ಅಣ್ಣಾ ಕಾರ್ಯಪ್ರವೃತ್ತರಾದರು ಮತ್ತು ಸೈನ್ಯದ ತುಕಡಿಯನ್ನು ರವಾನಿಸುವ ತರಬೇತಿಯ ನಂತರ ರವಾನಿಸುವ ಟ್ರಕ್‌ನ ಚಾಲಕರಾಗಿ ನೇಮಕಗೊಂಡರು. ೧೯೬೨ ಮತ್ತು ೧೯೬೫ರ ಭಾರತ-ಪಾಕಿಸ್ತಾನ ಯುದ್ಧದ ನಡುವೆ ಅಣ್ಣಾ ಹಜಾರೆಯವರು ತಮ್ಮ ಬದುಕಿನ ಅರ್ಥವನ್ನು ಕಂಡುಕೊಂಡರು.

೧೯೯೮ರಲ್ಲಿ ಮಹಾರಾಷ್ಟ್ರ ಸಮಾಜ ಕಲ್ಯಾಣ ಮಂತ್ರಿಗಳಾಗಿದ್ದ ಬಬನ್‌ರಾವ್ ಗೊಳಪ್‌ರವರು ಮಾನನಷ್ಟ ಮೊಕ್ಕದ್ದಮೆಯನ್ನು ಅಣ್ಣಾ ಹಜಾರೆಯವರ ವಿರುದ್ದ ದಾಖಲಿಸಿದಾಗ ಬಂದನಕ್ಕೊಳಗಾದರು. ಸಾರ್ವಜನಿಕರ ಪ್ರತಿಭಟನೆಯ ನಂತರ ಅವರು ಬಿಡುಗಡೆ ಹೊಂದಿದರು.[]

ಲೋಕಪಾಲ ಮಸೂದೆ ಆಂದೋಲನ

[ಬದಲಾಯಿಸಿ]

೨೦೧೧ರಲ್ಲಿ ಅಣ್ಣಾ ಹಜಾರೆಯವರು ಭಾರತದ ಸಂಸತ್ತಿನಲ್ಲಿ ಪ್ರಬಲವಾದ ಭ್ರಷ್ಟಾಚಾರ-ವಿರೋಧಿ ಲೋಕಪಾಲ (ಲೋಕಾಯುಕ್ತ) ಮಸೂದೆ ಮಂಡನೆಗೆ ಆಂದೋಲನದ ನಾಯಕತ್ವ ವಹಿಸಿದರು. ಈ ಆಂದೋಲನದ ಭಾಗವಾಗಿ ಭಾರತದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿಗಳು ಮತ್ತು ಕರ್ನಾಟಕದ ಲೋಕಾಯುಕ್ತರಾದ ಎನ್. ಸಂತೋಷ್ ಹೆಗ್ಡೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ನ್ಯಾಯವಾಧಿಗಳಾದ ಪ್ರಶಾಂತ್ ಭೂಷಣ್, ಭ್ರಷ್ಟಾಚಾರದ ವಿರುದ್ಧ ಭಾರತ ಆಂದೋಲನದ ಸದಸ್ಯರೊಂದಿಗೆ ಹೆಚ್ಚು ಕಟ್ಟುನಿಟ್ಟಾದ ನಿಬಂಧನೆಗಳು ಮತ್ತು ಲೋಕಪಾಲ ರಿಗೆ ಹೆಚ್ಚಿನ ಅಧಿಕಾರ ನೀಡುವ ಜನ ಲೋಕಪಾಲ ಮಸೂದೆ (ಜನರ ಲೋಕಪಾಲ ಮಸೂದೆ) ಎಂಬ ಪರ್ಯಾಯ ಮಸೂದೆಯ ಕರಡನ್ನು ಸಿದ್ದಪಡಿಸಿದರು.[] ಸರ್ಕಾರ ಮತ್ತು ಸಾರ್ವಜನಿಕ ಸಮಾಜದ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಸಮಿತಿಯನ್ನು ರಚಿಸುವ ಬೇಡಿಕೆಯನ್ನು ಭಾರತದ ಪ್ರಧಾನ ಮಂತ್ರಿಗಳಾದ ಡಾ. ಮನಮೋಹನ್ ಸಿಂಗ್ರವರು ತಿರಸ್ಕರಿಸಿದ ನಂತರ ೫ ಏಪ್ರಿಲ್ ೨೦೧೧ರಿಂದ ಬೇಡಿಕೆಗೆ ಒತ್ತಾಯಿಸಿ ದೆಹಲಿಯ ಜಂತರ್ ಮಂತರ್ನಲ್ಲಿ ಆಮರಣಾಂತ ಉಪವಾಸ ಕೈಗೊಳ್ಳಲು ಹಜಾರೆಯವರು ನಿರ್ಧರಿಸಿದರು[]. ಮಾಧ್ಯಮಗಳ ಮೂಲಕ ಆಂದೋಲನವು ಬಹುಬೇಗ ಗಮನ ಸೆಳೆಯಿತು. ಸಾವಿರಾರು ಜನರು ಹಜರೆಯವರ ಕಾರ್ಯಕ್ಕೆ ಬೆಂಬಲ ನೀಡಲು ಕೈಜೋಡಿಸಿದ್ದಾರೆಂದು ವರದಿಯಾಗಿದೆ. ೧೫೦ರಷ್ಟು ಜನರು ಹಜರೆಯವರ ಜೊತೆ ಉಪವಾಸದಲ್ಲಿ ಪಾಲ್ಗೊಂಡಿದ್ದರೆಂದು ವರದಿಯಾಗಿದೆ.[] ಅಂತರ್ಜಾಲದ ಸಾಮಾಜಿಕ ಮಾಧ್ಯಮಗಳಾದ ಟ್ವಿಟರ್ ಮತ್ತು ಫ಼ೇಸ್‌ಬುಕ್‌ಗಳ ಮೂಲಕವೂ ಜನರು ಬೆಂಬಲ ಸೂಚಿಸಿ ಸೇರಿದ್ದಾರೆ. ಶೇಖರ್ ಕಪೂರ್, ಸಿದ್ಧಾರ್ಥ್ ನಾರಾಯಣ್,ಅನುಪಮ್ ಖೇರ್, ಮಧುರ ಭಂಡಾರ್ಕರ್, ಪ್ರಿತಿಶ್ ನಂದಿ, ಪ್ರಕಾಶ್ ರಾಜ್,ಆಮೀರ್ ಖಾನ್ ಮುಂತಾದ ಹಲವು ಪ್ರಸಿದ್ಧವ್ಯಕ್ತಿಗಳು ತಮ್ಮ ಬೆಂಬಲವನ್ನು ಟ್ವಿಟರ್‌ನಲ್ಲಿ ವ್ಯಕ್ತಪಡಿಸಿದರು.[]

ಪ್ರಶಸ್ತಿಗಳು

[ಬದಲಾಯಿಸಿ]
  • ೧೯೯೦ರಲ್ಲಿ ಭಾರತ ಸರ್ಕಾರದಿಂದ ಪದ್ಮಶ್ರೀ
  • ೧೯೯೨ರಲ್ಲಿ ಭಾರತ ಸರ್ಕಾರದಿಂದ ಪದ್ಮಭೂಷಣ
  • ಭಾರತ ಸರ್ಕಾರ ನವೆಂಬೆರ್ ೧೯, ೧೯೮೬ರಂದು ಭಾರತದ ಪ್ರಧಾನ ಮಂತ್ರಿಗಳಾದ ರಾಜೀವ್ ಗಾಂಧಿಯವರಿಂದ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿಯನ್ನು ನೀಡಿದೆ
  • ಮಹಾರಾಷ್ಟ್ರ ಸರ್ಕಾರದಿಂದ ೧೯೮೯ರಲ್ಲಿ ಕೃಷಿ ಭೂಷಣ ಪ್
  • ಪೂನ ಮಹಾನಗರಪಾಲಿಕೆಯಿಂದ ಅಭಿನಂಧನೆಗಳು.
  • ಕಿಸಾನ್ ಬಾಬುರಾವ್ ಹಜಾರೆಯವರು ಮಹೋನ್ನತ ಸಾರ್ವಜನಿಕ ಸೇವೆಗಾಗಿ ಏಪ್ರಿಲ್ ೧೫, ೨೦೦೮ರಂದು ವಿಶ್ವ ಬ್ಯಾಂಕಿನ ೨೦೦೮ ಜೀಟ್ ಗಿಲ್ ಮೆಮೋರಿಯಲ್ ಪ್ರಶಸ್ತಿಯನ್ನು ಸ್ವೀಕರಿಸಿದರು: "ಮಹಾರಾಷ್ಟ್ರ ರಾಜ್ಯದ ಹಿಂದುಳಿದ ಅಹ್ಮೆದ್‌ನಗರ್ ಪ್ರದೇಶ ರಾಲೇಗನ್ ಸಿದ್ಧಿಯಲ್ಲಿ ಹಜಾರೆಯವರು ಏಳಿಗೆ ಹೊಂದಿದ ಮಾದರಿ ಗ್ರಾಮ ನಿರ್ಮಿಸಿ, ಮಹಿತಿಹಕ್ಕನ್ನು ಪ್ರಚಾರ ಪಡಿಸಿದರು ಮತ್ತು ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸಿದರು."[]

ಬಾಹ್ಯ ಕೊಂಡಿಗಳು

[ಬದಲಾಯಿಸಿ]
ಭ್ರಷ್ಟಾಚಾರ ಮಟ್ಟ ಸೂಚ್ಯಂಕದಲ್ಲಿ (ಸಿಪಿಐ) . ಭ್ರಷ್ಟಾಚಾರ . ಅಣ್ಣಾ ಹಜಾರೆ . ಮೇಧಾ ಪಾಟ್ಕರ್
ಭ್ರಷ್ಟಾಚಾರದ ಸುಳಿಯಲ್ಲಿ ಭಾರತ ಲೋಕಾಯುಕ್ತ . ಲೋಕಪಾಲ ಮಸೂದೆ . ಅರವಿಂದ್ ಕೇಜ್ರಿವಾಲ್ . ಬಿ.ಎಸ್. ಯಡಿಯೂರಪ್ಪ

ಉಲ್ಲೇಖಗಳು‌

[ಬದಲಾಯಿಸಿ]
  1. "Anna Hazare's arrest". Anna Hazare's arrest. Archived from the original on 2011-04-10. Retrieved 2011-04-10.
  2. Deshpande, Vinaya (29 March 2011). "Anna Hazare faults Lokpal Bill". ದಿ ಹಿಂದೂ. Retrieved 5 April 2011.
  3. "Anna Hazare to start fast unto death for strong Lokpal Bil". Hindustan Times. 5 April 2011. Archived from the original on 10 ಏಪ್ರಿಲ್ 2011. Retrieved 5 April 2011.
  4. "Thousands join Anna Hazare's anti-graft fight". 06 April 2011. Archived from the original on 11 ಮೇ 2011. Retrieved 6 April 2011. {{cite news}}: Check date values in: |date= (help); Cite has empty unknown parameter: |5= (help); Unknown parameter |tv= ignored (help)
  5. "Bollywood supports Anna Hazare". nowrunning. 6-Apr-2011. Archived from the original on 2011-04-27. Retrieved 6-Apr-2011. {{cite news}}: Check date values in: |accessdate= and |date= (help)
  6. "timesofindia.indiatimes.com, Anna Hazare wins World Bank award". Archived from the original on 2008-05-21. Retrieved 2008-05-21.