ಭ್ರಷ್ಟಾಚಾರದ ಸುಳಿಯಲ್ಲಿ ಭಾರತ

ವಿಕಿಪೀಡಿಯ ಇಂದ
Jump to navigation Jump to search
ಭ್ರಷ್ಟಾಚಾರದ ಸುಳಿಯಲ್ಲಿ ಭಾರತ
ಲೇಖಕರುವೈ. ಜಿ. ಮುರಳೀಧರನ್
ದೇಶಭಾರತ
ಭಾಷೆಕನ್ನಡ
ವಿಷಯಕಾನೂನು
ಪ್ರಕಾರಅಪರಾಧ ನಿಯಂತ್ರಣ
ಪ್ರಕಾಶಕರುನವಕರ್ನಾಟಕ ಪಬ್ಲಿಕೇಶನ್ಸ್ ಪ್ರೈವೇಟ್ ಲಿಮಿಟೆಡ್
ಪ್ರಕಟವಾದ ದಿನಾಂಕ
೨೦೧೩, ೧ನೇ ಮುದ್ರಣ
ಪುಟಗಳು೧೬೬
ಐಎಸ್‍ಬಿಎನ್81-8467-324-8

ಭ್ರಷ್ಟಾಚಾರದ ಸುಳಿಯಲ್ಲಿ ಭಾರತ ವೈ. ಜಿ. ಮುರಳೀಧರನ್ ಬರೆದ ಪುಸ್ತಕ.

ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ಬರೆದಿರುವ ಈ ಕೃತಿಯಲ್ಲಿ ಭ್ರಷ್ಟಾಚಾರವನ್ನು ತಡೆಗಟ್ಟುವ ಬಗ್ಗೆ ಸಾಕಷ್ಟು ಕಿವಿಮಾತುಗಳನ್ನು, ಭ್ರಷ್ಟಾಚಾರ ಬೆಳೆದಿರುವ ಅಗಾಧ ಪ್ರಮಾಣವನ್ನೂ ವಿವರಿಸಿದ್ದಾರೆ. ಇಂದು ಭ್ರಷ್ಟ ವ್ಯವಸ್ಥೆಯನ್ನು ತಡೆಗಟ್ಟುವ ಪ್ರಯತ್ನವೆಂದರೆ ಬುಡಸಹಿತ ಬೇರನ್ನು ಕೀಳುವ ಬದಲು ಮರದ ರೆಂಬೆ ಕೊಂಬೆಗಳನ್ನು ಕಡಿದು ಹಾಕುವಷ್ಟಕ್ಕೆ ಸೀಮಿತವಾಗಿದೆ. ದಿನವೂ ತಮ್ಮ ಕೆಲಸ ಕಾರ್ಯಗಳು ಸುಗಮವಾಗಿ ನಡೆಯದೆ ಇರುವುದಕ್ಕೆ ಕಾರಣ ಭ್ರಷ್ಟಾಚಾರ ಎಂಬ ಹೆಬ್ಬಂಡೆಯೊಂದು ಎದುರಾಗಿರುವುದು ಶ್ರೀಸಾಮಾನ್ಯನ ಅರಿವಿಗೆ ಬಂದಿದೆ. ಭ್ರಷ್ಟಾಚಾರದ ದೊಡ್ಡ ದೊಡ್ಡ ಹಗರಣಗಳಿಂದಾಗಿ ಬಡಜನತೆ ತನಗರಿವಿಲ್ಲದೇ ಅದರ ಆಳ ಸುಳಿಗೆ ಸಿಲುಕಿ ನರಳುತ್ತಿದೆ. ಭ್ರಷ್ಟಾಚಾರವನ್ನು ಕೊನೆಗೊಳಿಸಲು ಜನಜಾಗೃತಿ ಉಂಟುಮಾಡುವುದು, ಮಾಹಿತಿ ಹಕ್ಕು ಕಾನೂನನ್ನು ಬಳಸುವುದು, ಸರ್ಕಾರಿ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳ ಹಾಗೂ ಲೋಕಯುಕ್ತರ ನೆರವನ್ನೂ ಪಡೆಯುವ ಸಲಹೆ ಈ ಪುಸ್ತಕದಲ್ಲಿ ಲಭ್ಯವಿದೆ.

೨೦೧೬ ರ ವರದಿ[ಬದಲಾಯಿಸಿ]

  • 7 Mar, 2017
  • ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಹೊರತಾಗಿಯೂ ಭಾರತದಲ್ಲಿ ನಾಗರಿಕರು ಮೂಲ ಸೌಲಭ್ಯ ಪಡೆಯಲು ಲಂಚ ನೀಡಲೇ ಬೇಕಾದ ಒತ್ತಡದಲ್ಲಿ ಸಿಲುಕಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.
  • ಸರ್ಕಾರಿ ಸಾರ್ವಜನಿಕ ಸೇವೆಗಳಾದ ಶಾಲೆ, ಆಸ್ಪತ್ರೆಗಳಂತಹ ಮೂಲ ಸೌಲಭ್ಯ ಪಡೆಯಲು 10 ಮಂದಿ ಭಾರತೀಯರಲ್ಲಿ ಏಳು ಮಂದಿ(ಶೇಕಡಾ 69) ಲಂಚ ನೀಡಬೇಕಾದ ಸ್ಥಿತಿ ಇದೆ ಎಂದು ‘ಟ್ರಾನ್ಸ್‌ಪರೆನ್ಸಿ ಇಂಟರ್‌ ನ್ಯಾಷನಲ್‌’ ವರದಿಯಲ್ಲಿ ಹೇಳಿದೆ ಎಂದು ‘ಫ್ಲಿಪ್‌ಬೋರ್ಡ್‌’ ವರದಿ ಮಾಡಿದೆ.
  • ‘ಸಾರ್ವಜನಿಕರು ಮತ್ತು ಭ್ರಷ್ಟಾಚಾರ: ಏಷ್ಯಾ ಪೆಸಿಫಿಕ್‌’ ಶೀರ್ಷಿಕೆ ಅಡಿ 16 ರಾಷ್ಟ್ರಗಳು ಹಾಗೂ ಇತರೆ ಕೆಲವು ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಅತಿ ಹೆಚ್ಚು ಲಂಚದ ಪ್ರಮಾಣ ಭಾರತದಲ್ಲಿ ನಡೆಯುತ್ತಿದೆ ಎಂದು ವರದಿ ಬಹಿರಂಗಪಡಿಸಿದೆ. ಭ್ರಷ್ಟಾಚಾರ ವಿರೋಧಿ ಸಂಘಟನೆ 2016ರ ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ಭಾರತದಲ್ಲಿ 2,802 ಜನರ ಮುಖಾ ಮುಖಿ ಸಂದರ್ಶನ ನಡೆಸಿದೆ.[೧][೨][೩]

ಬಾಹ್ಯ ಸಂಪರ್ಕ[ಬದಲಾಯಿಸಿ]

ಭ್ರಷ್ಟಾಚಾರ ಮಟ್ಟ ಸೂಚ್ಯಂಕದಲ್ಲಿ (ಸಿಪಿಐ) . ಭ್ರಷ್ಟಾಚಾರ . ಅಣ್ಣಾ ಹಜಾರೆ . ಮೇಧಾ ಪಾಟ್ಕರ್
ಭ್ರಷ್ಟಾಚಾರದ ಸುಳಿಯಲ್ಲಿ ಭಾರತ . ಲೋಕಾಯುಕ್ತ . ಲೋಕಪಾಲ ಮಸೂದೆ . ಅರವಿಂದ್ ಕೇಜ್ರಿವಾಲ್ . ಬಿ.ಎಸ್. ಯಡಿಯೂರಪ್ಪ

ಉಲ್ಲೇಖ[ಬದಲಾಯಿಸಿ]

  1. ಭ್ರಷ್ಟಾಚಾರ ಕಡಿವಾಣ ಹೊರತಾಗಿಯೂ ಮೂಲಸೌಲಭ್ಯಕ್ಕಾಗಿ ಲಂಚ ನೀಡಿಕೆ ಒತ್ತಡದಲ್ಲಿ ಶೇ 70ರಷ್ಟು ಭಾರತೀಯರು;ಏಜೆನ್ಸಿಸ್‌;7 Mar, 2017
  2. Report of the Capacity Building Workshop for Consumer Organisations Held at NLSIU, Bangalore on 1 & 2 May, 2009
  3. ವೈ. ಜಿ. ಮುರಳೀಧರನ್ ಅವರ ಪುಸ್ತಕಗಳು