ವಿಷಯಕ್ಕೆ ಹೋಗು

ಭಾರತೀಯ ಮಾಹಿತಿ ಹಕ್ಕು ಕಾಯಿದೆ, ೨೦೦೫

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಮಾಹಿತಿ ಹಕ್ಕು ಇಂದ ಪುನರ್ನಿರ್ದೇಶಿತ)
  • ಮಾಹಿತಿ ಹಕ್ಕು ಕಾಯಿದೆ 2005 (RTI ) ಎಂಬುದು ಭಾರತದ ಸಂಸತ್ತಿನ ಒಂದು ಕಾಯಿದೆಯಾಗಿದೆ. ಇದು ಭಾರತದಲ್ಲಿ ಮಾಹಿತಿಯ ಸ್ವಾತಂತ್ರ್ಯದ ಶಾಸನದ ಒಂದು ರಾಷ್ಟ್ರೀಯ ಮಟ್ಟದ ಕಾರ್ಯಗತಗೊಳಿಸುವಿಕೆಯಾಗಿದ್ದು, "ಮಾಹಿತಿ ಹಕ್ಕಿನ ಕಾರ್ಯಸಾಧ್ಯ ಆಡಳಿತ ಪದ್ಧತಿಯನ್ನು ನಾಗರಿಕರಿಗಾಗಿ ಸಜ್ಜುಗೊಳಿಸುವುದಕ್ಕೆ" ಸಂಬಂಧಿಸಿದ ಉದ್ದೇಶವು ಇದರ ಹಿಂದೆ ಅಡಗಿದೆ. ರಾಜ್ಯ-ಮಟ್ಟ ಕಾನೂನೊಂದರ ಅಡಿಯಲ್ಲಿ ಪರಿಗಣಿಸಿ ಚರ್ಚಿಸಲ್ಪಟ್ಟಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಹೊರತುಪಡಿಸಿದ, ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಈ ಕಾಯಿದೆಯು ಅನ್ವಯಿಸುತ್ತದೆ. ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ, ಯಾವುದೇ ನಾಗರಿಕನು "ಸಾರ್ವಜನಿಕ ಪ್ರಾಧಿಕಾರ"ವೊಂದರಿಂದ (ಸರ್ಕಾರದ ಒಂದು ಘಟಕ ಅಥವಾ "ರಾಜ್ಯದ ಸಾಧನತ್ವ") ಮಾಹಿತಿಗಾಗಿ ಮನವಿಮಾಡಿಕೊಳ್ಳಬಹುದು ಮತ್ತು ಇಂಥ ಸಾರ್ವಜನಿಕ ಪ್ರಾಧಿಕಾರವು ತ್ವರಿತವಾಗಿ ಅಥವಾ ಮೂವತ್ತು ದಿನಗಳ ಒಳಗಾಗಿ ಅವನಿಗೆ ಉತ್ತರಿಸುವುದು ಅಗತ್ಯವಾಗಿರುತ್ತದೆ. ಸದರಿ ಕಾಯಿದೆಯ ಅನುಸಾರ, ಮಾಹಿತಿಯ ವ್ಯಾಪಕ ಹರಡುವಿಕೆಗೆ ಸಂಬಂಧಿಸಿದಂತೆ ಹಾಗೂ ಮಾಹಿತಿಯ ನಿರ್ದಿಷ್ಟ ವರ್ಗಗಳನ್ನು ಪೂರ್ವನಿಯಾಮಕವಾಗಿ ಪ್ರಕಟಿಸುವುದಕ್ಕಾಗಿ, ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರವು ತನ್ನ ದಾಖಲೆಗಳನ್ನು ಗಣಕೀಕರಿಸುವುದು ಅಗತ್ಯವಾಗಿರುತ್ತದೆ; ಹೀಗೆ ಮಾಡುವುದರಿಂದ ಮಾಹಿತಿಗಾಗಿ ಔಪಚಾರಿಕವಾಗಿ ಮನವಿ ಸಲ್ಲಿಸುವುದಕ್ಕೆ ನಾಗರಿಕರಿಗೆ ಕನಿಷ್ಟ ಅವಲಂಬನೆಯಷ್ಟೇ ಸಾಕಾಗುತ್ತದೆ.

2005ರ ಜೂನ್‌ 15ರಂದು ಈ ಕಾನೂನು ಸಂಸತ್ತಿನಿಂದ ಅಂಗೀಕರಿಸಲ್ಪಟ್ಟಿತು ಹಾಗೂ 2005ರ (ಜಾರಿಗೆ ಬಂದ ದಿನಾಂಕವು ಅನೇಕವೇಳೆ 2005ರ ಅಕ್ಟೋಬರ್‌ 12 ಎಂಬುದಾಗಿ ತಪ್ಪಾಗಿ ಉಲ್ಲೇಖಿಸಲ್ಪಟ್ಟಿದೆ. ವಾಸ್ತವವಾಗಿ, 12ನೇ ಮತ್ತು 13ನೇ ದಿನಾಂಕದ ನಡುವಿನ ಮಧ್ಯರಾತ್ರಿಯಂದು ಈ ಕಾಯಿದೆಯು ಜಾರಿಗೆ ಬಂತು; ಅಂದರೆ 13ರ ನಂತರ ಇದು ಜಾರಿಗೆ ಬಂತು ಎಂದರ್ಥ.) ಅಕ್ಟೋಬರ್‌ 13ರಂದು ಸಂಪೂರ್ಣವಾಗಿ ಜಾರಿಗೆಬಂದಿತು. ಭಾರತದಲ್ಲಿ ಮಾಹಿತಿ ಬಹಿರಂಗಪಡಿಸುವಿಕೆಯ ಪ್ರಕ್ರಿಯೆಯು ಇಲ್ಲಿಯವರೆಗೆ 1923ರ ಅಧಿಕೃತ ರಹಸ್ಯಗಳ ಕಾಯಿದೆ ಮತ್ತು ಇತರ ಹಲವಾರು ವಿಶೇಷ ಕಾನೂನುಗಳಿಂದ ನಿರ್ಬಂಧಿಸಲ್ಪಟ್ಟಿದ್ದು, ಅದನ್ನೀಗ ಹೊಸ RTI ಕಾಯಿದೆಯು ಸಡಿಲಿಸಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಇರುವ ಆರ್ಟಿಕಲ್ 370 ರದ್ದತಿ ನಂತರ ಜಮ್ಮು ಮತ್ತು ಕಾಶ್ಮೀರವು ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ ಎಂದು ಕೇಂದ್ರಾಡಳಿತ ಪ್ರದೇಶವಾಗಿ ವಿಂಗಡಿಸಲಾಯಿತು.ಈಗ ಮಾಹಿತಿ ಹಕ್ಕು ಕಾಯಿದೆಯು ಭಾರತದ ಎಲ್ಲ ಪ್ರದೇಶಗಳಲ್ಲೂ ಅನ್ವಯಿಸುತ್ತದೆ.

ಹಿನ್ನೆಲೆ

[ಬದಲಾಯಿಸಿ]

ಬ್ರಿಟಿಷ್‌ ಆಳ್ವಿಕೆಯ ಕಾಲದಲ್ಲಿ ಜಾರಿಮಾಡಲ್ಪಟ್ಟಿದ್ದ ಕಾನೂನೊಂದರಿಂದ ಭಾರತದಲ್ಲಿ ಸರ್ಕಾರಿ ಮಾಹಿತಿಯ ಬಹಿರಂಗಪಡಿಸುವಿಕೆಯು ನಿರ್ವಹಿಸಲ್ಪಡುತ್ತಿದೆ. ಈಗ ಭಾರತದಲ್ಲಿರುವ ಬಹುಭಾಗಗಳ ಮೇಲೆ ಜಾರಿಮಾಡಲಾಗಿದ್ದ ಈ 1889ರ ಅಧಿಕೃತ ರಹಸ್ಯಗಳ ಕಾಯಿದೆಯನ್ನು 1923ರಲ್ಲಿ ತಿದ್ದುಪಡಿ ಮಾಡಲಾಯಿತು. ರಾಜ್ಯದ ಭದ್ರತೆಗೆ, ದೇಶದ ಸಾರ್ವಭೌಮತೆಗೆ ಮತ್ತು ವಿದೇಶಿ ರಾಜ್ಯಗಳೊಂದಿಗಿನ ಸ್ನೇಹಶೀಲ ಬಾಂಧವ್ಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಈ ಕಾನೂನು ಭದ್ರಪಡಿಸುತ್ತದೆ, ಮತ್ತು ಅವರ್ಗೀಕೃತ ಮಾಹಿತಿಯ ಬಹಿರಂಗಪಡಿಸುವಿಕೆಯನ್ನು ನಿಷೇಧಿಸುವ ನಿಬಂಧನೆಗಳನ್ನು ಇದು ಒಳಗೊಂಡಿದೆ. ಮಾಹಿತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುವುದಕ್ಕೆ ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳ ಅಧಿಕಾರಗಳ ಮೇಲೆ, ನಾಗರಿಕ ಸೇವಾ ನಡವಳಿಕೆಯ ನಿಯಮಗಳು ಮತ್ತು ಭಾರತೀಯ ಗೋಚರತೆ ಕಾಯಿದೆ ಇವುಗಳು ಮತ್ತಷ್ಟು ನಿರ್ಬಂಧಗಳನ್ನು ವಿಧಿಸುತ್ತವೆ.

ರಾಜ್ಯ ಮಟ್ಟದ ಕಾನೂನುಗಳು

[ಬದಲಾಯಿಸಿ]

RTI ಕಾನೂನುಗಳನ್ನು ಮೊದಲಿಗೆ ಯಶಸ್ವಿಯಾಗಿ ಜಾರಿಗೆ ತಂದ ರಾಜ್ಯ ಸರ್ಕಾರಗಳೆಂದರೆ: ತಮಿಳುನಾಡು (1997), ಗೋವಾ (1997), ರಾಜಾಸ್ತಾನ (2000), ಕರ್ನಾಟಕ (2000), ದೆಹಲಿ (2001), ಮಹಾರಾಷ್ಟ್ರ (2002), ಅಸ್ಸಾಂ (2002), ಮಧ್ಯಪ್ರದೇಶ (2003), ಹಾಗೂ ಜಮ್ಮು ಮತ್ತು ಕಾಶ್ಮೀರ (2004). ಮಹಾರಾಷ್ಟ್ರ ಮತ್ತು ದೆಹಲಿಯ ರಾಜ್ಯ ಮಟ್ಟದ ಶಾಸನಗಳು ಅತ್ಯಂತ ವ್ಯಾಪಕವಾಗಿ ಬಳಸಲ್ಪಟ್ಟವುಗಳು ಎಂಬುದಾಗಿ ಪರಿಗಣಿಸಲ್ಪಟ್ಟಿವೆ. ದೆಹಲಿ RTI ಕಾಯಿದೆಯು ಈಗಲೂ ಚಾಲ್ತಿಯಲ್ಲಿದೆ. ಜಮ್ಮು ಮತ್ತು ಕಾಶ್ಮೀರವು ತನ್ನದೇ ಆದ, 2009ರ ಮಾಹಿತಿ ಹಕ್ಕು ಕಾಯಿದೆಯನ್ನು ಹೊಂದಿದೆ; ಇದು ರದ್ದುಮಾಡಲ್ಪಟ್ಟ 2004ರ J&K ಮಾಹಿತಿ ಹಕ್ಕು ಕಾಯಿದೆ ಮತ್ತು ಅದರ 2008ರ ತಿದ್ದುಪಡಿಯ ತರುವಾಯದಲ್ಲಿ ಬಂದ ಕಾಯಿದೆಯಾಗಿದೆ.

2002ರ ಮಾಹಿತಿಯ ಸ್ವಾತಂತ್ರ್ಯದ ಕಾಯಿದೆ

[ಬದಲಾಯಿಸಿ]

ಆದಾಗ್ಯೂ, ರಾಷ್ಟ್ರೀಯ ಮಟ್ಟದ ಕಾನೂನೊಂದರ ಅಂಗೀಕರಿಸುವಿಕೆಯು ಒಂದು ಕಷ್ಟಕರ ಕಾರ್ಯಭಾರ ಎಂಬುದು ಸಾಬೀತಾಗಿದೆ. ಕಾರ್ಯಸಾಧ್ಯವಾದ ಶಾಸನದ ಅಂಗೀಕರಿಸುವಿಕೆಯಲ್ಲಿ ರಾಜ್ಯ ಸರ್ಕಾರಗಳು ಕಂಡುಕೊಂಡ ಅನುಭವವನ್ನು ಅರಿತಿರುವ ಕೇಂದ್ರ ಸರ್ಕಾರವು H.D. ಶೌರಿಯವರ ನೇತೃತ್ವದಲ್ಲಿ ಕಾರ್ಯನಿರತ ತಂಡವೊಂದನ್ನು ನೇಮಿಸಿದೆ ಮತ್ತು ಶಾಸನದ ಕರಡು ತಯಾರಿಸುವಿಕೆಯ ಕಾರ್ಯಭಾರವನ್ನು ಅದಕ್ಕೆ ನಿಯೋಜಿಸಿದೆ. ಶೌರಿ ತಂಡದ ಕರಡು ರಚನೆಯು, ಅತೀವವಾಗಿ ಸತ್ವಗುಂದಿಸಿದ ಒಂದು ಸ್ವರೂಪದಲ್ಲಿ, 2000ರಲ್ಲಿ ಬಂದ ಮಾಹಿತಿಯ ಸ್ವಾತಂತ್ರ್ಯದ ಮಸೂದೆಗೆ ಸಂಬಂಧಿಸಿದಂತಿದ್ದ ಆಧಾರವಾಗಿತ್ತು; ಇದು ಅಂತಿಮವಾಗಿ 2002ರ ಮಾಹಿತಿಯ ಸ್ವಾತಂತ್ರ್ಯದ ಕಾಯಿದೆಯ ಅಡಿಯಲ್ಲಿ ಕಾನೂನಾಗಿ ಮಾರ್ಪಟ್ಟಿತು. ಅಗತ್ಯಕ್ಕಿಂತ ಹೆಚ್ಚಿನ ವಿನಾಯಿತಿಗಳಿಗೆ ಅನುಮತಿ ನೀಡಿರುವುದಕ್ಕಾಗಿ ಈ ಕಾಯಿದೆಯು ತೀವ್ರವಾಗಿ ಟೀಕಿಸಲ್ಪಟ್ಟಿತು; ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಯ ಪ್ರಮಾಣಕ ಆಧಾರಗಳ ಅಡಿಯಲ್ಲಿ ಮಾತ್ರವೇ ಅಲ್ಲದೇ, "ಸಾರ್ವಜನಿಕ ಪ್ರಾಧಿಕಾರವೊಂದರ ಆಕರಗಳ ವಿಷಮ ಪ್ರಮಾಣದ ಅಥವಾ ಪರಸ್ಪರ ಹೊಂದಿಕೆ ಇಲ್ಲದ ಮಾರ್ಗಾಂತರಣ"ವನ್ನು ಒಳಗೊಳ್ಳುವ ಮನವಿಗಳಿಗೆ ಸಂಬಂಧಿಸಿದಂತೆಯೂ ಅನುಮತಿ ನೀಡಿದ್ದು ಸದರಿ ಟೀಕೆಗೆ ಕಾರಣವಾಗಿತ್ತು. ವಿಧಿಸಬಹುದಾದ ಶುಲ್ಕಗಳ ಮೇಲೆ ಅಲ್ಲಿ ಯಾವುದೇ ಗರಿಷ್ಟ ಮಿತಿಯಿರಲಿಲ್ಲ. ಮಾಹಿತಿಗೆ ಸಂಬಂಧಿಸಿದ ಒಂದು ಮನವಿಯೊಂದಿಗೆ ಅನುವರ್ತಿಸದಿರುವುದಕ್ಕಾಗಿ ಅಥವಾ ಹೊಂದಿಕೆಯಾಗದಿರುವುದಕ್ಕಾಗಿ ಅಲ್ಲಿ ಯಾವುದೇ ದಂಡಗಳಿರಲಿಲ್ಲ. ಇದರ ಪರಿಣಾಮವಾಗಿ, FoI ಕಾಯಿದೆಯು ಪರಿಣಾಮಕಾರಿಯಾಗಿ ಜಾರಿಗೆ ಬರಲೇ ಇಲ್ಲ.

ದುರವಸ್ಥೆಗೀಡಾದ FoI ಕಾಯಿದೆಯು ಒಂದು ಉತ್ತಮವಾದ ರಾಷ್ಟ್ರೀಯ RTI ಶಾಸನಕ್ಕೆ ಸಂಬಂಧಿಸಿದಂತೆ ಏಕಪ್ರಕಾರವಾದ ಒತ್ತಡವು ಹೊರಹೊಮ್ಮಲು ಕಾರಣವಾಯಿತು. ಮಾಹಿತಿ ಹಕ್ಕು ಮಸೂದೆಯ ಮೊದಲ ಕರಡು ಪ್ರತಿಯನ್ನು 2004ರ ಡಿಸೆಂಬರ್‌ 22ರಂದು ಸಂಸತ್ತಿಗೆ ಸಾದರಪಡಿಸಲಾಯಿತು. ತೀವ್ರಸ್ವರೂಪದ ಚರ್ಚೆಯ ನಂತರ, 2004ರ ಡಿಸೆಂಬರ್‌ ಮತ್ತು 2005ರ ಜೂನ್‌ 15ರ ನಡುವಣ ಕರಡು ಮಸೂದೆಗೆ ಒಂದು ನೂರಕ್ಕೂ ಹೆಚ್ಚಿನ ತಿದ್ದುಪಡಿಗಳನ್ನು ಮಾಡಲಾಯಿತು, ಹಾಗೂ 2005ರ ಜೂನ್‌ 15ರಂದು ಮಸೂದೆಯು ಅಂತಿಮವಾಗಿ ಅಂಗೀಕರಿಸಲ್ಪಟ್ಟಿತು. 2005ರ ಅಕ್ಟೋಬರ್‌ 12ರಂದು ಕಾಯಿದೆಯು ಸಂಪೂರ್ಣವಾಗಿ ಜಾರಿಗೆಬಂದಿತು.

ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗವನ್ನು ಒಳಗೊಂಡಂತೆ ಎಲ್ಲಾ ಸಾಂವಿಧಾನಿಕ ಪ್ರಾಧಿಕಾರಗಳಿಗೆ ಇದು ಅನ್ವಯಯೋಗ್ಯವಾಗಿದೆ; ಅಷ್ಟೇ ಅಲ್ಲ, ಸಂಸತ್ತಿನ ಅಥವಾ ರಾಜ್ಯದ ಶಾಸನಸಭೆಯೊಂದರ ಕಾಯಿದೆಯೊಂದರಿಂದ ಪ್ರಮಾಣೀಕರಿಸಲ್ಪಟ್ಟ ಅಥವಾ ಕಾನೂನುಬದ್ಧವಾಗಿ ಸಂಯೋಜಿಸಲ್ಪಟ್ಟ ಯಾವುದೇ ಸಂಸ್ಥೆ ಅಥವಾ ಘಟಕಕ್ಕೂ ಇದು ಅನ್ವಯಿಸುತ್ತದೆ. ಈ ಕಾಯಿದೆಯ ವ್ಯಾಪ್ತಿಯೊಳಗೆ ಯಾವುದೆಲ್ಲಾ ಅಧಿಕಾರ ಘಟಕಗಳು ಅಥವಾ ಪ್ರಾಧಿಕಾರಗಳು ಅಥವಾ ಸಂಸ್ಥೆಗಳು ಬರುತ್ತವೆ ಎಂಬುದೂ ಸಹ ಈ ಕಾಯಿದೆಯಲ್ಲಿ ವ್ಯಾಖ್ಯಾನಿಸಲ್ಪಟ್ಟಿದೆ. ಅಂದರೆ, ಸರ್ಕಾರದ ಸ್ವಾಮ್ಯದ, ಸರ್ಕಾರದಿಂದ ನಿಯಂತ್ರಿಸಲ್ಪಟ್ಟ ಅಥವಾ ಸರ್ಕಾರದಿಂದ ಗಣನೀಯವಾಗಿ ಧನಸಹಾಯವನ್ನು ಪಡೆದಿರುವ ಘಟಕಗಳು, ಅಥವಾ ಸರ್ಕಾರದಿಂದ ಒದಗಿಸಲ್ಪಟ್ಟ ನಿಧಿಗಳಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಗಣನೀಯವಾಗಿ ಧನಸಹಾಯವನ್ನು ಪಡೆದಿರುವ ಸರ್ಕಾರೇತರ ಸಂಘಟನೆಗಳೂ ಸೇರಿದಂತೆ, ಯುಕ್ತವಾದ ಸರ್ಕಾರದ ಆದೇಶ ಅಥವಾ ಅಧಿಸೂಚನೆಯಿಂದ ಪ್ರಮಾಣೀಕರಿಸಲ್ಪಟ್ಟ ಅಥವಾ ಕಾನೂನುಬದ್ಧವಾಗಿ ಸಂಯೋಜಿಸಲ್ಪಟ್ಟ ಘಟಕಗಳು ಅಥವಾ ಪ್ರಾಧಿಕಾರಗಳು ಈ ಕಾಯಿದೆಯ ವ್ಯಾಪ್ತಿಯಲ್ಲಿ ಬರುತ್ತವೆ.

ಖಾಸಗಿ ಘಟಕಗಳು ಪ್ರತ್ಯಕ್ಷವಾಗಿ ಈ ಕಾಯಿದೆಯ ವ್ಯಾಪ್ತಿಯೊಳಗೆ ಬರುವುದಿಲ್ಲ. ಆದಾಗ್ಯೂ, ಸಾರ್ವಜನಿಕ ಪ್ರಾಧಿಕಾರವೊಂದರಿಂದ ಚಾಲ್ತಿಯಲ್ಲಿರುವ ಬೇರಾವುದೇ ಕಾನೂನಿನ ಅಡಿಯಲ್ಲಿ ಸಂಪರ್ಕಿಸಬಹುದಾದ ಮಾಹಿತಿಯ ಕುರಿತಾಗಿಯೂ ಮನವಿ ಸಲ್ಲಿಸಬಹುದಾಗಿದೆ. 2006ರ ನವೆಂಬರ್ 30ರಂದು ಹೊರಹೊಮ್ಮಿದ ಸ್ಥಿತ್ಯಂತರ-ಸೂಚಕ ತೀರ್ಮಾನವೊಂದರಲ್ಲಿ ('ಸಬ್ರಜಿತ್‌ ರಾಯ್‌ ಎದುರಾಗಿ DERC') ಕೇಂದ್ರ ಮಾಹಿತಿ ಆಯೋಗವು ಪುನರ್‌ದೃಢೀಕರಣವನ್ನೂ ನೀಡಿ, ಖಾಸಗೀಕರಣಗೊಂಡ ಸಾರ್ವಜನಿಕ ಉಪಯೋಗದ ಕಂಪನಿಗಳು, ಅವು ಖಾಸಗೀಕರಣಗೊಂಡಿದ್ದರೂ ಸಹ RTI ಕಾಯಿದೆಯ ವ್ಯಾಪ್ತಿಯೊಳಗೆ ಮುಂದುವರಿಯುತ್ತವೆ ಎಂದು ತಿಳಿಸಿತು. 2005ರ ಜೂನ್ 15ರಂದು ಚಾಲ್ತಿಯಲ್ಲಿದ್ದ ಅಧಿಕೃತ ರಹಸ್ಯಗಳ ಕಾಯಿದೆ ಮತ್ತು ಇತರ ಕಾನೂನುಗಳನ್ನು ಅಸಾಮಂಜಸ್ಯವೆನಿಸುವಷ್ಟರ ಮಟ್ಟಿಗೆ ಈ ಕಾಯಿದೆಯು ಸ್ಪಷ್ಟವಾಗಿ ಬದಿಗೊತ್ತಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿತು.

ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿ

[ಬದಲಾಯಿಸಿ]

ಈ ಕೆಳಗೆ ನಮೂದಿಸಿರುವುದರ ಕುರಿತಾದ ಹಕ್ಕನ್ನು ನಾಗರಿಕರು ಹೊಂದಿರುತ್ತಾರೆ ಎಂಬುದಾಗಿ ಈ ಕಾಯಿದೆಯು ನಿರ್ದಿಷ್ಟವಾಗಿ ಹೇಳುತ್ತದೆ:

  • ಯಾವುದೇ ಮಾಹಿತಿಯ ಕುರಿತು ಮನವಿ ಸಲ್ಲಿಸುವುದು (ವಿಶದೀಕರಿಸಲ್ಪಟ್ಟಂತೆ).
  • ದಸ್ತಾವೇಜುಗಳ ಪ್ರತಿಗಳನ್ನು ತೆಗೆದುಕೊಳ್ಳುವು.
  • ದಸ್ತಾವೇಜುಗಳು, ಕೆಲಸಗಳು ಮತ್ತು ದಾಖಲೆಗಳನ್ನು ಪರಿಶೀಲಿಸುವುದು.
  • ಕೆಲಸದ ಸಾಮಗ್ರಿಗಳ ಪ್ರಮಾಣಿತ ಮಾದರಿಗಳನ್ನು ತೆಗೆದುಕೊಳ್ಳುವುದು.
  • ಮುದ್ರಿತ ಪ್ರತಿಗಳು, ಅಡಕ ಮುದ್ರಿಕೆಗಳು, ಮೆದುತಟ್ಟೆಗಳು, ಟೇಪುಗಳು, ವಿಡಿಯೋ ಕ್ಯಾಸೆಟ್ಟುಗಳು ಸ್ವರೂಪದಲ್ಲಿ 'ಅಥವಾ ಇನ್ನಾವುದೇ ವಿದ್ಯುನ್ಮಾನ ವಿಧಾನದಲ್ಲಿ' ಅಥವಾ ಮುದ್ರಿತ ಪ್ರತಿಗಳ ಮೂಲಕ ಮಾಹಿತಿಯನ್ನು ಪಡೆದುಕೊಳ್ಳುವುದು.

ಕಾರ್ಯವಿಧಾನ

[ಬದಲಾಯಿಸಿ]

ಈ ಕಾಯಿದೆಯ ಅಡಿಯಲ್ಲಿ ಬರುವ ಎಲ್ಲಾ ಪ್ರಾಧಿಕಾರಗಳು ತಮ್ಮ ಸಾರ್ವಜನಿಕ ಮಾಹಿತಿ ಅಧಿಕಾರಿ ಯನ್ನು (ಪಬ್ಲಿಕ್‌ ಇನ್ಫರ್ಮೇಷನ್‌ ಆಫೀಸರ್‌-PIO) ನೇಮಿಸಬೇಕಾಗುತ್ತದೆ. ಯಾವುದೇ ವ್ಯಕ್ತಿಯು ಮಾಹಿತಿಗಾಗಿ PIOಗೆ ಲಿಖಿತರೂಪದಲ್ಲಿ ಮನವಿಯೊಂದನ್ನು ಸಲ್ಲಿಸಬಹುದಾಗಿರುತ್ತದೆ. ಕಾಯಿದೆಯ ಅಡಿಯಲ್ಲಿ ಮಾಹಿತಿಯನ್ನು ಕೋರುವಂಥ ಭಾರತದ ನಾಗರಿಕರಿಗೆ ಮಾಹಿತಿಯನ್ನು ಒದಗಿಸುವುದು PIOನ ಹೊಣೆಗಾರಿಕೆಯಾಗಿರುತ್ತದೆ. ಒಂದು ವೇಳೆ ಮನವಿಯು ಮತ್ತೊಂದು ಸಾರ್ವಜನಿಕ ಪ್ರಾಧಿಕಾರಕ್ಕೆ (ಇಡಿಯಾಗಿ ಅಥವಾ ಆಂಶಿಕವಾಗಿ) ಸಂಬಂಧಿಸಿರುವಂಥದ್ದಾಗಿದ್ದರೆ, 5 ದಿನಗಳ ಒಳಗಾಗಿ ಮತ್ತೊಂದರ PIOಗೆ ಮನವಿಯ ಸಂಬಂಧಪಟ್ಟ ಭಾಗಗಳನ್ನು ವರ್ಗಾಯಿಸುವುದು/ಮುಂದಕ್ಕೆ ರವಾನಿಸುವುದು PIOನ ಜವಾಬ್ದಾರಿಯಾಗಿರುತ್ತದೆ. ಇದರ ಜೊತೆಗೆ, ತಮ್ಮ ಸಾರ್ವಜನಿಕ ಪ್ರಾಧಿಕಾರದ PIOಗಳಿಗೆ ರವಾನಿಸುವುದಕ್ಕೆ ಸಂಬಂಧಿಸಿದಂತೆ RTI ಮನವಿಗಳು ಮತ್ತು ಮೇಲ್ಮನವಿಗಳನ್ನು ಸ್ವೀಕರಿಸಲು ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳನ್ನು (APIOಗಳನ್ನು) ಪ್ರತಿಯೊಂದು ಸಾರ್ವಜನಿಕ ಪ್ರಾಧಿಕಾರವು ನಿಯೋಜಿಸುವುದು ಅಗತ್ಯವಾಗಿರುತ್ತದೆ. ಮಾಹಿತಿಗಾಗಿ ಕೋರಿಕೆಯನ್ನು ಸಲ್ಲಿಸುತ್ತಿರುವ ನಾಗರಿಕನು ತನ್ನ ಹೆಸರು ಮತ್ತು ಸಂಪರ್ಕ ವಿವರಗಳನ್ನು ಹೊರತುಪಡಿಸಿ ಬೇರಾವುದೇ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂಬ ನಿರ್ಬಂಧವನ್ನು ಹೇರಲಾಗುವುದಿಲ್ಲ.

ಸಲ್ಲಿಸಲ್ಪಟ್ಟ ಮನವಿಗೆ ಉತ್ತರಿಸುವುದಕ್ಕೆ ಸಂಬಂಧಿಸಿದ ಕಾಲಮಿತಿಗಳನ್ನು ಕಾಯಿದೆಯು ನಿರ್ದಿಷ್ಟಪಡಿಸಿದೆ.

  • ಒಂದು ವೇಳೆ ಮನವಿಯು PIOಗೆ ಸಲ್ಲಿಸಲ್ಪಟ್ಟಿದ್ದರೆ, ಸ್ವೀಕೃತಿಯಾದ 30 ದಿನಗಳ ಒಳಗಾಗಿ ಉತ್ತರವನ್ನು ನೀಡಬೇಕಾಗುತ್ತದೆ.
  • ಒಂದು ವೇಳೆ ಮನವಿಯು ಓರ್ವ APIOಗೆ ಸಲ್ಲಿಸಲ್ಪಟ್ಟಿದ್ದರೆ, ಸ್ವೀಕೃತಿಯಾದ 35 ದಿನಗಳ ಒಳಗಾಗಿ ಉತ್ತರವನ್ನು ನೀಡಬೇಕಾಗುತ್ತದೆ.
  • ಒಂದು ವೇಳೆ PIO ಮನವಿಯನ್ನು (ಕೋರಲ್ಪಟ್ಟ ಮಾಹಿತಿಯೊಂದಿಗೆ ಹೆಚ್ಚಿನ ರೀತಿಯಲ್ಲಿ ಸಂಬಂಧಿಸಿರುವ) ಮತ್ತೊಂದು ಸಾರ್ವಜನಿಕ ಪ್ರಾಧಿಕಾರಕ್ಕೆ ವರ್ಗಾಯಿಸಿದರೆ, ಉತ್ತರಿಸಲು ಅವಕಾಶ ನೀಡಲಾಗುವ ಕಾಲಾವಧಿಯು 30 ದಿನಗಳಾದರೂ , ವರ್ಗಾಯಿತ ಪ್ರಾಧಿಕಾರದ PIOನಿಂದ ಅದು ಸ್ವೀಕರಿಸಲ್ಪಟ್ಟ ನಂತರದ ದಿನದಿಂದ ಇದರ ಲೆಕ್ಕಹಾಕಲಾಗುತ್ತದೆ.
  • ಪಟ್ಟಿಯಲ್ಲಿ ಸೇರಿಲ್ಪಟ್ಟಿರುವ ಭದ್ರತೆ ಸಂಸ್ಥೆಗಳು (ಕಾಯಿದೆಯ ಎರಡನೇ ತಪ್ಸೀಲಿನಲ್ಲಿ ಪಟ್ಟಿಮಾಡಲ್ಪಟ್ಟಿರುವಂಥವು) ಎಸಗಿದ ಭ್ರಷ್ಟಾಚಾರ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಗಳಿಗೆ ಸಂಬಂಧಪಟ್ಟಿರುವ ಮಾಹಿತಿಯನ್ನು 45 ದಿನಗಳ ಒಳಗಾಗಿ ಒದಗಿಸುವುದು ಅಗತ್ಯವಾಗಿದೆಯಾದರೂ, ಇದಕ್ಕಾಗಿ ಕೇಂದ್ರ ಮಾಹಿತಿ ಆಯೋಗದ ಪೂರ್ವಭಾವಿ ಅನುಮೋದನೆಯನ್ನು ಪಡೆಯಬೇಕಾಗುತ್ತದೆ.
  • ಆದಾಗ್ಯೂ, ಒಂದು ವೇಳೆ ವ್ಯಕ್ತಿಯೋರ್ವನ ಜೀವನ ಅಥವಾ ಸ್ವಾತಂತ್ರ್ಯವು ಇದರಲ್ಲಿ ತೊಡಗಿಸಿಕೊಂಡಿದ್ದರೆ, 48 ಗಂಟೆಗಳ ಒಳಗಾಗಿ PIO ಉತ್ತರಿಸಬೇಕೆಂದು ನಿರೀಕ್ಷಿಸಲಾಗುತ್ತದೆ.

ಸದರಿ ಮಾಹಿತಿಯನ್ನು ಪಡೆಯುವುದಕ್ಕೆ ಹಣವನ್ನು ಪಾವತಿಸಬೇಕಾಗುತ್ತದೆಯಾದ್ದರಿಂದ, ಮನವಿಯನ್ನು ನಿರಾಕರಿಸುವುದಕ್ಕೆ (ಇಡಿಯಾಗಿ ಅಥವಾ ಆಂಶಿಕವಾಗಿ) ಮತ್ತು/ಅಥವಾ "ಹೆಚ್ಚುವರಿ ಶುಲ್ಕಗಳ" ಒಂದು ಗಣನೆಯನ್ನು ಒದಗಿಸುವುದಕ್ಕೆ PIOನ ಉತ್ತರವು ಅವಶ್ಯವಾಗಿ ಸೀಮಿತಗೊಳಿಸಲ್ಪಟ್ಟಿರುತ್ತದೆ. PIOನ ಉತ್ತರ ಹಾಗೂ ಮಾಹಿತಿಗೆ ಸಂಬಂಧಿಸಿದಂತಿರುವ ಹೆಚ್ಚುವರಿ ಶುಲ್ಕಗಳನ್ನು ಠೇವಣಿಯಾಗಿಡುವುದಕ್ಕೆ ತೆಗೆದುಕೊಂಡ ಸಮಯದ ನಡುವಿನ ಅವಧಿಯನ್ನು, ಅವಕಾಶ ನೀಡಲಾಗಿರುವ ಕಾಲಾವಧಿಯಿಂದ ಹೊರಗಿಡಲಾಗಿರುತ್ತದೆ.

ಒಂದು ವೇಳೆ ಈ ಅವಧಿಯೊಳಗಾಗಿ ಮಾಹಿತಿಯು ಒದಗಿಸಲ್ಪಡದಿದ್ದಲ್ಲಿ, ಅದು ನಿರಾಕರಣೆಯಾಗಿ ಭಾವಿಸಲ್ಪಟ್ಟಿದೆ ಎಂದು ಪರಿಗಣಿಸಲಾಗುತ್ತದೆ. ಕಾರಣಗಳೊಂದಿಗಿನ ಅಥವಾ ಕಾರಣರಹಿತವಾಗಿರುವ ನಿರಾಕರಣೆಯು ಮೇಲ್ಮನವಿ ಅಥವಾ ದೂರಿಗೆ ಸಂಬಂಧಿಸಿದಂತೆ ಆಧಾರವಾಗಿ ಹೊರಹೊಮ್ಮಬಹುದು. ಮೇಲಾಗಿ, ನಿಗದಿಪಡಿಸಲ್ಪಟ್ಟ ಕಾಲಾವಧಿಗಳಲ್ಲಿ ಮಾಹಿತಿಯು ಒದಗಿಸಲ್ಪಡದಿದ್ದಲ್ಲಿ, ಅದನ್ನು ಶುಲ್ಕವಿಲ್ಲದೆಯೇ ಉಚಿತವಾಗಿ ಒದಗಿಸಬೇಕಾಗುತ್ತದೆ.

ಕೇಂದ್ರಸರ್ಕಾರದ ಇಲಾಖೆಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ as of 2006[[ವರ್ಗ:Articles containing potentially dated statements from ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".]], ಮನವಿಯನ್ನು ಭರ್ತಿಮಾಡುವುದಕ್ಕಾಗಿ 10 ರೂ., ಪ್ರತಿ ಪುಟದಷ್ಟು ಮಾಹಿತಿಗೆ ತಲಾ 2 ರೂ. ಹಾಗೂ ಮೊದಲ ಗಂಟೆಯ ನಂತರದ ತಲಾ ಗಂಟೆಯ ಪರಿಶೀಲನೆಗಾಗಿ 5 ರೂ. ಶುಲ್ಕವನ್ನು ನಿಗದಿಪಡಿಸಲಾಗಿದೆ. ಒಂದು ವೇಳೆ ಅರ್ಜಿದಾರನು ಬಡತನರೇಖೆಗಿಂತ ಕೆಳಗಿರುವವರಿಗೆ ನೀಡಲಾಗುವ ಕಾರ್ಡನ್ನು ಹೊಂದಿದವನಾಗಿದ್ದಲ್ಲಿ, ಯಾವುದೇ ಶುಲ್ಕವು ಅನ್ವಯಿಸುವುದಿಲ್ಲ. ಇಂಥ BPL ಕಾರ್ಡುದಾರರು ತಮ್ಮ ಅರ್ಜಿಯೊಂದಿಗೆ ತಾವು ಹೊಂದಿರುವ BPL ಕಾರ್ಡಿನ ಒಂದು ಪ್ರತಿಯನ್ನು ಲಗತ್ತಿಸಬೇಕಾಗುತ್ತದೆ. ರಾಜ್ಯ ಸರ್ಕಾರಗಳು ಮತ್ತು ಉಚ್ಚ ನ್ಯಾಯಾಲಯಗಳು ತಮ್ಮದೇ ಆದ ನಿಯಮಗಳನ್ನು ನಿಗದಿಪಡಿಸುತ್ತವೆ.

ಯಾವುದನ್ನು ಮುಕ್ತವಾಗಿ ಬಹಿರಂಗಪಡಿಸಬಾರದು?

[ಬದಲಾಯಿಸಿ]

ಬಹಿರಂಗಪಡಿಸುವಿಕೆಯಿಂದ ಈ ಕೆಳಗಿನ ಅಂಶಗಳಿಗೆ ವಿನಾಯಿತಿ ಕೊಡಲಾಗಿದೆ [S.8)]

  • ಬಹಿರಂಗಪಡಿಸುವಿಕೆಯಿಂದಾಗಿ ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗಳಿಗೆ, ರಾಜ್ಯದ ಭದ್ರತೆಗೆ, "ಕಾರ್ಯತಂತ್ರದ, ವೈಜ್ಞಾನಿಕ ಅಥವಾ ಆರ್ಥಿಕ" ಹಿತಾಸಕ್ತಿಗಳಿಗೆ, ವಿದೇಶಿ ರಾಜ್ಯದೊಂದಿಗಿನ ಬಾಂಧವ್ಯಕ್ಕೆ ಪೂರ್ವಗ್ರಹಪೀಡಿತ ರೀತಿಯಲ್ಲಿ ಅಥವಾ ಕೆಡುಕುಂಟುಮಾಡುವ ರೀತಿಯಲ್ಲಿ ಪರಿಣಾಮ ಬೀರುವ ಮಾಹಿತಿ, ಅಥವಾ ಅಪರಾಧವೊಂದರ ಚಿತಾವಣೆಗೆ ಕಾರಣವಾಗುವ ಮಾಹಿತಿ;
  • ಯಾವುದೇ ನ್ಯಾಯಮಂಡಲಿ ಅಥವಾ ನ್ಯಾಯಾಧಿಕರಣದಿಂದ ಪ್ರಕಟಿಸಲ್ಪಡುವುದಕ್ಕೆ ಉದ್ದೇಶಪೂರ್ವಕವಾಗಿ ನಿಷೇಧಿಸಲ್ಪಟ್ಟಿರುವ ಮಾಹಿತಿ ಅಥವಾ ಅದರ ಬಹಿರಂಗಪಡಿಸುವಿಕೆಯಿಂದ ನ್ಯಾಯಾಲಯದ ನಿಂದನೆಯಾದಂತಾಗುತ್ತದೆ ಎಂದು ಕಾನೂನುಬದ್ಧವಾಗಿ ಸಂಯೋಜಿಸಲ್ಪಟ್ಟಿರುವ ಮಾಹಿತಿ;
  • ಬಹಿರಂಗಪಡಿಸುವಿಕೆಯಿಂದ ಸಂಸತ್ತು ಅಥವಾ ರಾಜ್ಯ ಶಾಸನಸಭೆಯ ಒಂದು ಹಕ್ಕಿನ ಲೋಪವುಂಟಾಗುತ್ತದೆ ಎಂದು ಹೇಳಲಾಗುವ ಮಾಹಿತಿ;
  • ಬಹಿರಂಗಪಡಿಸುವುದರಿಂದಾಗಿ ಓರ್ವ ಮೂರನೇ ಪಕ್ಷಸ್ಥನ ಸ್ಪರ್ಧಾತ್ಮಕ ಸ್ಥಾನಕ್ಕೆ ಧಕ್ಕೆಯಾಗುತ್ತದೆ ಎಂದು ಪರಿಗಣಿಸಲ್ಪಟ್ಟಿರುವ, ಮತ್ತು ಇಂಥ ಮಾಹಿತಿಯ ಬಹಿರಂಗಪಡಿಸುವಿಕೆಯನ್ನು ವ್ಯಾಪಕವಾದ ಸಾರ್ವಜನಿಕ ಹಿತಾಸಕ್ತಿಯು ಸಮರ್ಥಿಸುತ್ತದೆ ಎಂಬ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ಮನವರಿಕೆಯಾಗದ ಹೊರತು ಬಹಿರಂಗಪಡಿಸಲಾಗದ ವಾಣಿಜ್ಯ ವಲಯದ ಗುಟ್ಟು, ವ್ಯಾಪಾರದ ರಹಸ್ಯಗಳು ಅಥವಾ ಬೌದ್ಧಿಕ ಸ್ವತ್ತನ್ನು ಒಳಗೊಂಡಂತಿರುವ ಮಾಹಿತಿ;
  • ಬಹಿರಂಗಪಡಿಸುವಿಕೆಯನ್ನು ವ್ಯಾಪಕವಾದ ಸಾರ್ವಜನಿಕ ಹಿತಾಸಕ್ತಿಯು ಸಮರ್ಥಿಸುತ್ತದೆ ಎಂಬ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ಮನವರಿಕೆಯಾಗದ ಹೊರತು ಬಹಿರಂಗಪಡಿಸಲಾಗದ, ವ್ಯಕ್ತಿಯೋರ್ವನ ನ್ಯಾಸರಕ್ಷಣೆಯ ಸಂಬಂಧದಲ್ಲಿ ಅವನಿಗೆ ಲಭ್ಯವಿರುವ ಮಾಹಿತಿ;
  • ವಿದೇಶಿ ಸರ್ಕಾರದಿಂದ ಗುಟ್ಟಾಗಿ ಸ್ವೀಕರಿಸಲ್ಪಟ್ಟ ಮಾಹಿತಿ;
  • ಬಹಿರಂಗಪಡಿಸುವಿಕೆಯಿಂದ ಯಾವುದೇ ವ್ಯಕ್ತಿಯ ಜೀವನ ಅಥವಾ ಭೌತಿಕ ಸುರಕ್ಷತೆಯು ಅಪಾಯಕ್ಕೆ ಸಿಲುಕುತ್ತದೆ ಎನ್ನುವಂಥ ಅಥವಾ, ಕಾನೂನು ವಿಧಿಸುವಿಕೆ ಅಥವಾ ಭದ್ರತೆ ಉದ್ದೇಶಗಳಿಗೆ ಸಂಬಂಧಿಸಿದಂತೆ ಮಾಹಿತಿಯ ಮೂಲವನ್ನು ಗುರುತಿಸುವ ಅಥವಾ ಗುಟ್ಟಾಗಿನೀಡಲಾದ ನೆರವನ್ನು ಗುರುತಿಸುವಂಥ ಮಾಹಿತಿ;
  • ತಪ್ಪಿತಸ್ಥರ ತನಿಖೆ ಅಥವಾ ದಸ್ತಗಿರಿ ಅಥವಾ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದರ ಪ್ರಕ್ರಿಯೆಯನ್ನು ನಿರೋಧಿಸುವಂಥ ಮಾಹಿತಿ;
  • ಸಂಪುಟ ಸಭೆ, ಕಾರ್ಯದರ್ಶಿಗಳು ಮತ್ತು ಇತರ ಅಧಿಕಾರಿಗಳ ಚರ್ಚೆಗಳ ದಾಖಲೆಗಳನ್ನು ಒಳಗೊಂಡಂತಿರುವ ಸಚಿವ ಸಂಪುಟದ ಕಾಗದ-ಪತ್ರಗಳು;
  • ಮಾಹಿತಿಯು ವೈಯಕ್ತಿಕ ವಿವರಗಳಿಗೆ ಸಂಬಂಧಿಸಿದಂತಿದ್ದು, ಅದರ ಬಹಿರಂಗಪಡಿಸುವಿಕೆಯಿಂದ ಯಾವುದೇ ಸಾರ್ವಜನಿಕ ಚಟುವಟಿಕೆ ಅಥವಾ ಹಿತಾಸಕ್ತಿಗೆ ಯಾವುದೇ ಸಂಬಂಧವಿರುವುದಿಲ್ಲ ಎನ್ನುವಂಥ, ಅಥವಾ ವ್ಯಕ್ತಿಯೋರ್ವನ ಖಾಸಗಿತನದ ಮೇಲೆ ಅಸಮರ್ಥನೀಯವಾದ ಆಕ್ರಮಣವನ್ನು ಉಂಟುಮಾಡುವಂಥ ಮಾಹಿತಿ (ಆದರೆ, ಸಂಸತ್ತಿಗೆ ಅಥವಾ ಒಂದು ರಾಜ್ಯ ಶಾಸನಸಭೆಗೆ ನಿರಾಕರಿಸಲಾಗದ ಮಾಹಿತಿಯನ್ನು ಈ ವಿನಾಯಿತಿಯಿಂದ ನಿರಾಕರಿಸಲಾಗುವುದಿಲ್ಲ ಎಂಬ ಷರತ್ತೂ ಇಲ್ಲಿದೆ);
  • ಮೇಲೆ ಪಟ್ಟಿಮಾಡಲ್ಪಟ್ಟಿರುವ ವಿನಾಯಿತಿಗಳ ಪೈಕಿ ಯಾವುದು ಏನೇ ಇದ್ದರೂ, ಒಂದು ವೇಳೆ ಬಹಿರಂಗಪಡಿಸುವಿಕೆಯಲ್ಲಿನ ಸಾರ್ವಜನಿಕ ಹಿತಾಸಕ್ತಿಯು, ರಕ್ಷಿಸಲ್ಪಟ್ಟ ಹಿತಾಸಕ್ತಿಗಳಿಗೆ ಆಗುವ ಹಾನಿಗಿಂತ ಹೆಚ್ಚು ತೂಗಿದಲ್ಲಿ ಸಾರ್ವಜನಿಕ ಪ್ರಾಧಿಕಾರವೊಂದು ಮಾಹಿತಿಗೆ ಸಂಪರ್ಕವನ್ನು ಒದಗಿಸಬಹುದು. (ಗಮನಿಸಿ: ಕಾಯಿದೆಯ ಉಪ-ವಿಭಾಗ 11(1)ಕ್ಕೆ ಇರುವ ಕರಾರುವಾಕ್ಯದಿಂದ ಈ ನಿಬಂಧನೆಯು ಅಧಿಕೃತತೆಯನ್ನು ಪಡೆದುಕೊಂಡಿದ್ದು, ಅದು 8(1)(d) ಜೊತೆಯಲ್ಲಿ ಓದಿಕೊಂಡಾಗ ಈ ಒಳಪ್ರಕರಣದ ಅಡಿಯಲ್ಲಿ "ಕಾನೂನಿನಿಂದ ರಕ್ಷಿಸಲ್ಪಟ್ಟ ವ್ಯಾಪಾರ ಅಥವಾ ವಾಣಿಜ್ಯ ರಹಸ್ಯಗಳ" ಬಹಿರಂಗಪಡಿಸುವಿಕೆಗೆ ವಿನಾಯಿತಿ ಕೊಡುತ್ತದೆ)

ಆಂಶಿಕ ಬಹಿರಂಗಪಡಿಸುವಿಕೆ

[ಬದಲಾಯಿಸಿ]

ಬಹಿರಂಗಪಡಿಸುವಿಕೆಯಿಂದ ವಿನಾಯಿತಿ ಪಡೆಯದ ಮತ್ತು ಒದಗಿಸಲ್ಪಡಬೇಕಾದ ವಿನಾಯಿತಿ ಪಡೆದ ಮಾಹಿತಿಯನ್ನು ಒಳಗೊಂಡಿರುವ ಭಾಗಗಳಿಂದ ಯುಕ್ತವಾಗಿ ಪ್ರತ್ಯೇಕಿಸಲ್ಪಡಬಹುದಾದ ದಾಖಲೆಯ ಆ ಭಾಗಗಳಿಗೆ ಈ ಕಾಯಿದೆಯು ಅವಕಾಶ ನೀಡುತ್ತದೆ.

ಹೊರಗಿಡುವಿಕೆಗಳು

[ಬದಲಾಯಿಸಿ]

ಎರಡನೇ ತಪ್ಸೀಲಿನಲ್ಲಿ ನಿರ್ದಿಷ್ಟವಾಗಿ ಹೆಸರಿಸಲಾಗಿರುವ ಕೇಂದ್ರ ಗುಪ್ತಚರ ಮತ್ತು ಭದ್ರತಾ ಸಂಸ್ಥೆಗಳಾದ, IB, RAW, ಕೇಂದ್ರೀಯ ತನಿಖಾ ದಳ (CBI), ಕಂದಾಯ ಗುಪ್ತಚರ ನಿರ್ದೇಶನಾಲಯ, ಕೇಂದ್ರೀಯ ಆರ್ಥಿಕ ಗುಪ್ತಚರ ದಳ, ಜಾರಿ ನಿರ್ದೇಶನಾಲಯ, ಮಾದಕವಸ್ತು ನಿಯಂತ್ರಣ ದಳ, ವಾಯುಯಾನ ಸಂಶೋಧನಾ ಕೇಂದ್ರ, ವಿಶೇಷ ಗಡಿನಾಡು ಜಾರಿಗೆ, BSF, CRPF, ITBP, CISF, NSG, ಅಸ್ಸಾಂ ರೈಫಲ್ಸ್‌, ವಿಶೇಷ ಸೇವಾ ದಳ, ವಿಶೇಷ ಶಾಖೆ (CID), ಅಂಡಮಾನ್‌ ಮತ್ತು ನಿಕೋಬಾರ್‌, ಅಪರಾಧ ಶಾಖೆ-CID-CB, ದಾದ್ರಾ ಮತ್ತು ನಗರ್‌ ಹವೇಲಿ ಮತ್ತು ವಿಶೇಷ ಶಾಖೆ, ಲಕ್ಷದ್ವೀಪ್‌ ಪೊಲೀಸ್‌ ಇವು ಇದರಲ್ಲಿ ಸೇರಿವೆ. ಒಂದು ಅಧಿಸೂಚನೆಯ ಮೂಲಕ ರಾಜ್ಯ ಸರ್ಕಾರಗಳ ವತಿಯಿಂದ ನಿರ್ದಿಷ್ಟವಾಗಿ ಹೆಸರಿಸಲ್ಪಟ್ಟಿರುವ ಸಂಸ್ಥೆಗಳನ್ನೂ ಸಹ ಹೊರಗಿಡಲಾಗುತ್ತದೆ. ಆದಾಗ್ಯೂ, ಹೊರಗಿಡುವಿಕೆ ಎಂಬುದು ಪರಿಪೂರ್ಣವಾಗಿಲ್ಲ ಮತ್ತು ಭ್ರಷ್ಟಾಚಾರ ಹಾಗೂ ಮಾನವ ಹಕ್ಕುಗಳು ಉಲ್ಲಂಘನೆಗಳ ಆರೋಪಗಳಿಗೆ ಸಂಬಂಧಿಸಿರುವ ಮಾಹಿತಿಯನ್ನು ಒದಗಿಸುವ ಒಂದು ಹೊಣೆಗಾರಿಕೆಯನ್ನು ಈ ಸಂಘಟನೆಗಳು ಹೊಂದಿರುತ್ತವೆ. ಮೇಲಾಗಿ, ಮಾನವ ಹಕ್ಕುಗಳ ಉಲ್ಲಂಘನೆಯ ಆರೋಪಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಕೊಡಬಹುದಾದರೂ, ಅದಕ್ಕೆ ಕೇಂದ್ರ ಅಥವಾ ರಾಜ್ಯದ ಮಾಹಿತಿ ಆಯೋಗದ ಅನುಮೋದನೆಯನ್ನು ಪಡೆಯಲೇಬೇಕಾಗುತ್ತದೆ.

ಸರ್ಕಾರದ ಪಾತ್ರ

[ಬದಲಾಯಿಸಿ]

ಈ ಕೆಳಕಂಡ ಪ್ರಕ್ರಿಯೆಗಳನ್ನು ಕೈಗೊಳ್ಳುವುದಕ್ಕಾಗಿ ಅವಶ್ಯಕ ಕ್ರಮಗಳಿಗೆ ಚಾಲನೆ ನೀಡುವಂತೆ, ಕೇಂದ್ರ ಸರ್ಕಾರಕ್ಕೆ ಮತ್ತು ಭಾರತ ಒಕ್ಕೂಟದ ರಾಜ್ಯ ಸರ್ಕಾರಗಳಿಗೆ (J&Kಯನ್ನು ಹೊರತುಪಡಿಸಿ) ಕಾಯಿದೆಯ 26ನೇ ಪ್ರಕರಣವು ಆದೇಶಿಸುತ್ತದೆ:

  • ಸಾರ್ವಜನಿಕರಿಗೆ ಅದರಲ್ಲೂ ವಿಶೇಷವಾಗಿ ಅನನುಕೂಲ ಸ್ಥಿತಿಯಲ್ಲಿರುವ ಸಮುದಾಯಗಳಿಗೆ RTI ಕುರಿತಾದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಅಭಿವೃದ್ಧಿಪಡಿಸುವುದು.
  • ಇಂಥ ಕಾರ್ಯಕ್ರಮಗಳ ಅಭಿವೃದ್ಧಿ ಮತ್ತು ಸಂಘಟನೆಯಲ್ಲಿ ಭಾಗವಹಿಸಲು ಸಾರ್ವಜನಿಕ ಪ್ರಾಧಿಕಾರಗಳನ್ನು ಪ್ರೋತ್ಸಾಹಿಸುವುದು.
  • ಸಾರ್ವಜನಿಕರಿಗೆ ನಿಖರವಾದ ಮಾಹಿತಿಯು ಸಕಾಲಿಕವಾಗಿ ಹರಡುವಂತಾಗಲು ಉತ್ತೇಜಿಸುವುದು.
  • ಅಧಿಕಾರಿಗಳಿಗೆ ತರಬೇತಿ ನೀಡುವುದು ಮತ್ತು ತರಬೇತಿ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸುವುದು.
  • ಸಂಬಂಧಪಟ್ಟ ಅಧಿಕೃತ ಭಾಷೆಯಲ್ಲಿ ಸಾರ್ವಜನಿಕರಿಗಾಗಿ ಬಳಕೆದಾರ ಕೈಪಿಡಿಯೊಂದನ್ನು ಸಂಕಲಿಸುವುದು ಮತ್ತು ಪ್ರಸಾರಮಾಡುವುದು.
  • PIOಗಳ ಹೆಸರುಗಳು, ಪದನಾಮ, ಅಂಚೆ ವಿಳಾಸಗಳು ಮತ್ತು ಸಂಪರ್ಕ ವಿವರಗಳನ್ನು ಪ್ರಕಟಿಸುವುದು ಮತ್ತು ಪಾವತಿಸಲ್ಪಡಬೇಕಾದ ಶುಲ್ಕಗಳ ಕುರಿತಾದ ಸೂಚನಾಪತ್ರಗಳು, ಒಂದು ವೇಳೆ ಮನವಿಯು ತಿರಸ್ಕರಿಸಲ್ಪಟ್ಟಲ್ಲಿ ಕಾನೂನಿನಲ್ಲಿ ಲಭ್ಯವಿರುವ ಪರಿಹಾರಗಳು ಇತ್ಯಾದಿಗಳಂಥ ಇತರ ಮಾಹಿತಿಯನ್ನು ಪ್ರಕಟಿಸುವುದು.

ನಿಯಮಗಳನ್ನು ರೂಪಿಸುವ ಅಧಿಕಾರ

[ಬದಲಾಯಿಸಿ]
  • S.2(e)ನಲ್ಲಿ ವ್ಯಾಖ್ಯಾನಿಸಲ್ಪಟ್ಟಿರುವಂತೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಮತ್ತು ಸಕ್ಷಮ ಪ್ರಾಧಿಕಾರಗಳು 2005ರ ಮಾಹಿತಿ ಹಕ್ಕು ಕಾಯಿದೆಯ ನಿಬಂಧನೆಗಳನ್ನು ನಿರ್ವಹಿಸುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸುವ ಅಧಿಕಾರಗಳನ್ನು ಹೊಂದಿವೆ. (S.27 & S.28)

ಈ ಕಾಯಿದೆಯನ್ನು ಅನುಷ್ಠಾನಗೊಳಿಸುವಾಗ ತಲೆದೋರುವ ತೊಡಕುಗಳನ್ನು ನಿಭಾಯಿಸುವ ಅಧಿಕಾರವನ್ನು ಯಾರು ಹೊಂದಿದ್ದಾರೆ?

[ಬದಲಾಯಿಸಿ]
  • ಒಂದು ವೇಳೆ ಕಾಯಿದೆಯಲ್ಲಿರುವ ನಿಬಂಧನೆಗಳನ್ನು ಜಾರಿಗೆ ತರುವಲ್ಲಿ ಏನಾದರೂ ತೊಡಕು ಉದ್ಭವವಾದರೆ, ಕೇಂದ್ರ ಸರ್ಕಾರವು ಅಧಿಕೃತವಾದ ಸರ್ಕಾರಿ ಪ್ರಕಟನ ಪತ್ರಿಕೆಯಲ್ಲಿ (ಗೆಜೆಟ್‌) ಆದೇಶವನ್ನು ಪ್ರಕಟಿಸುವ ಮೂಲಕ, ತೊಡಕನ್ನು ತೆಗೆದುಹಾಕುವುದಕ್ಕೆ ಸಂಬಂಧಿಸಿದಂತೆ ಅವಶ್ಯಕವಾಗಿರುವ/ಯಥೋಚಿತವಾಗಿರುವ ನಿಬಂಧನೆಗಳನ್ನು ರೂಪಿಸಬಹುದು. (S.30)

ಪರಿಣಾಮಗಳು

[ಬದಲಾಯಿಸಿ]

ರಾಷ್ಟ್ರೀಯ RTIನ ಮೊದಲ ವರ್ಷದಲ್ಲಿ, ಮಾಹಿತಿಯನ್ನು ಕೋರಿ ಕೇಂದ್ರದ (ಅಂದರೆ ಒಕ್ಕೂಟದ) ಸಾರ್ವಜನಿಕ ಪ್ರಾಧಿಕಾರಗಳಿಗೆ 42,876 (ಇದಿನ್ನೂ ಅಧಿಕೃತವಾಗಿಲ್ಲ) ಅರ್ಜಿಗಳು ಸಲ್ಲಿಸಲ್ಪಟ್ಟವು. ಇವುಗಳ ಪೈಕಿ 878 ಅರ್ಜಿಗಳ ಕುರಿತು ಅಂತಿಮ ಮೇಲ್ಮನವಿಯ ಹಂತದಲ್ಲಿ, ಅಂದರೆ ನವದೆಹಲಿಯಲ್ಲಿರುವ ಕೇಂದ್ರ ಮಾಹಿತಿ ಆಯೋಗದಲ್ಲಿ ಚರ್ಚಿಸಲಾಯಿತು. ಅದಾದ ನಂತರದಲ್ಲಿ, ಇವುಗಳ ಪೈಕಿಯ ಕೆಲವೊಂದು ತೀರ್ಮಾನಗಳು ಭಾರತದ ಹಲವಾರು ಉಚ್ಚ ನ್ಯಾಯಾಲಯಗಳಲ್ಲಿನ ಮುಂದುವರಿದ ಕಾನೂನಿನ ವಿವಾದದಲ್ಲಿ ಸಿಕ್ಕಿಕೊಂಡವು. ಕೇಂದ್ರ ಮಾಹಿತಿ ಆಯೋಗದ ಒಂದು ಅಂತಿಮ ಮೇಲ್ಮನವಿಯ ತೀರ್ಮಾನದ ವಿರುದ್ಧದ ಮೊದಲ ತಡೆಯಾಜ್ಞೆಯನ್ನು 2006ರ ಮೇ ತಿಂಗಳ 3ರಂದು ನೀಡಲಾಯಿತು.WP(C)6833-35/2006ರಲ್ಲಿ "ಕೇಂದ್ರ ಮಾಹಿತಿ ಆಯೋಗ ಮತ್ತು ಇತರರ ಎದುರಾಗಿ NDPL ಮತ್ತು ಇತರರು" ಎಂಬುದಾಗಿ ಉಲ್ಲೇಖಿಸಲ್ಪಟ್ಟ ತಡೆಯಾಜ್ಞೆಯನ್ನು ದೆಹಲಿಯ ಉಚ್ಚ ನ್ಯಾಯಾಲಯವು ನೀಡಿತು ಎಂಬುದು ಗಮನಾರ್ಹ ಸಂಗತಿ. RTI ಕಾಯಿದೆಯನ್ನು ತಿದ್ದುಪಡಿ ಮಾಡುವುದರ ಅರ್ಥಕೊಡುವಂಥ ಭಾರತ ಸರ್ಕಾರದ ಆಶಯವು ಸಾರ್ವಜನಿಕ ಕಳವಳವು ವ್ಯಕ್ತವಾದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿತಾದರೂ, 2009ರಲ್ಲಿ ಮತ್ತೊಮ್ಮೆ DoPT ವತಿಯಿಂದ ಪುನರೂರ್ಜಿತಗೊಂಡಿದೆ. []

ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]