ವಿಷಯಕ್ಕೆ ಹೋಗು

ಕಾನೂನು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
[ನ್ಯಾಯದೇವತೆ ನ್ಯಾಯದ ಪ್ರತೀಕ.ಕೈಯಲ್ಲಿ ಹಿಡಿದಿರುವ ಕತ್ತಿ ನ್ಯಾಯಾಲಯದ ಪ್ರಶ್ನಾತೀತ ಅಧಿಕಾರವನ್ನು ಸೂಚಿಸಿದರೆ,ತಕ್ಕಡಿಯು ವಸ್ತುನಿಷ್ಠತೆಯನ್ನು ಮತ್ತು ಕಣ್ಣಿಗೆ ಕಟ್ಟಿದ ಬಟ್ಟೆ ನ್ಯಾಯದ ಮುಂದೆ ಎಲ್ಲರೂ ಸಮಾನರು ಎಂಬುದನ್ನು ಸೂಚಿಸುತ್ತದೆ.[]


ನಿಯಮಗಳ ಕ್ರಮಬದ್ಧ ಜೋಡಣೆಯೇ ಕಾನೂನು. ಕಾನೂನಿನ ವಿವಿಧ ಸಂಸ್ಥೆಗಳ ಮೂಲಕ ಕಾನೂನನ್ನು ಜಾರಿ ಮಾಡಲಾಗುತ್ತದೆ. ನಮ್ಮ ಜೀವನ ಮತ್ತು ಸಮಾಜವನ್ನು ಕಾನೂನು ಹಲವು ರೀತಿಗಳಲ್ಲಿ ಪರಿಣಾಮ ಬೀರುತ್ತದೆ. ಕರಾರು ಕಾನೂನು ಬಸ್ ಟಿಕೆಟ್ ಪಡೆಯುವುದರಿಂದ ಹಿಡಿದು ಆಸ್ತಿ ಕೊಳ್ಳುವುದರ ತನಕ ಸಹಾಯ ಮಾಡುತ್ತದೆ. ಆಸ್ತಿ ಕಾನೂನು ಒಂದು ಆಸ್ತಿಯ ಒಡೆತನದ ಹಕ್ಕು, ಹೊಣೆಗಾರಿಕೆ ಇತ್ಯಾದಿಗಳ ಬಗ್ಗೆ ವಿವರಿಸುತ್ತದೆ. ಅಪಕೃತ್ಯ ಕಾನೂನು ಖಾಸಗಿ ಮತ್ತು ಕಾನೂನು ಹಕ್ಕುಗಳಿಗೆ (private and legal rights) ಚ್ಯುತಿ (injury) ಬಂದಾಗ ಉಪಯೋಗಿಸಲಾಗುತ್ತದೆ. ಅಪರಾಧ ಕಾನೂನಿನಲ್ಲಿ ಮಾಡಿದ ತಪ್ಪುಗಳಿಗೆ ದಂಡನೀತಿಯ (penal code) ಪ್ರಕಾರ ಶಿಕ್ಷೆ ನೀಡಲಾಗುತ್ತದೆ. ಸಾಂವಿಧಾನಿಕ ಕಾನೂನು ಯಾವುದೇ ರಾಷ್ಟ್ರದಲ್ಲಿ ತನ್ನ ಸಂವಿಧಾನದ ಚೌಕಟ್ಟಿನೊಳಗೆ ಬೇರೆಯ ಕಾನೂನುಗಳನ್ನು ಸೃಷ್ಟಿ ಮಾಡುವ ಬಗ್ಗೆ ಮತ್ತು ಜನರ ಹಕ್ಕುಗಳನ್ನು ಕಾಪಾಡುವ ಬಗ್ಗೆ ವಿವರಿಸುತ್ತದೆ. ಆಡಳಿತ ಕಾನೂನು ಸರ್ಕಾರದ ಆಡಳಿತ ಸಂಸ್ಥೆಗಳ ಕಾರ್ಯ ಛಟುವಟಿಕೆ ಮತ್ತು ಕ್ರಮಗಳ ಬಗ್ಗೆ ವಿವರಿಸುತ್ತದೆ. ಸರ್ಕಾರಿ ಸಂಸ್ಥೆಗಳು ತಮ್ಮ ಕಾರ್ಯನೀತಿಗಳಲ್ಲಿ ನಿಯಮ ರೂಪಿಸುವುದು ಮತ್ತು ಪರಿಪಾಲನೆ ಮಾಡುವುದು ಎಲ್ಲವೂ ಸೇರಿರುತ್ತದೆ. ಅಂತರರಾಷ್ಟ್ರೀಯ ಕಾನೂನು ಸಾರ್ವಭೌಮ ರಾಷ್ಟ್ರಗಳ ನಡುವಿನ ಉದ್ಯಮ, ಸೇನೆ, ಪರಿಸರ ಮತ್ತು ಇತರ ವಿಷಯಗಳ ಬಗ್ಗೆ ವಿವರಿಸುತ್ತದೆ. ಗ್ರೀಕ್ ತತ್ವಜ್ಞಾನಿ ಅರಿಸ್ಟಾಟಲ್ "ಕಾನೂನಿನ ಆಡಳಿತವು ಒಬ್ಬ ಮನುಷ್ಯನ ಆಡಳಿತಕ್ಕಿಂತ ಉತ್ತಮ" ಎಂದು ಹೇಳಿದ್ದಾನೆ.[]


  • ಈ ಲೇಖನವನ್ನು ಇಂಗ್ಲೀಷ್ ವಿಕಿಪೀಡಿಯ ದಿಂದ ತರ್ಜುಮೆ ಮಾಡಲಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Luban, Law's Blindfold, 23
  2. "ಆರ್ಕೈವ್ ನಕಲು". Archived from the original on 2016-08-09. Retrieved 2017-02-16.


"https://kn.wikipedia.org/w/index.php?title=ಕಾನೂನು&oldid=1054292" ಇಂದ ಪಡೆಯಲ್ಪಟ್ಟಿದೆ