ಕೆಂಪುಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೆಂಪುಪಟ್ಟಿ (ರೆಡ್ ಟೇಪ್) ಪದವು ಒಂದು ನುಡಿಗಟ್ಟಾಗಿದ್ದು ಅತಿಯಾದ ನಿಯಂತ್ರಣ ಅಥವಾ ವಿಧ್ಯುಕ್ತ ನಿಯಮಗಳಿಗೆ ಕಟ್ಟುನಿಟ್ಟಿನ ಅನುಸರಣೆಯನ್ನು ಸೂಚಿಸುತ್ತದೆ. ಇದನ್ನು ಅನಗತ್ಯ ಅಥವಾ ಅಧಿಕಾರಿ ಮನೋಭಾವವುಳ್ಳದ್ದು ಎಂದು ಪರಿಗಣಿಸಲಾಗುತ್ತದೆ ಮತ್ತು ಕ್ರಿಯೆ ಅಥವಾ ತೀರ್ಮಾನ ಮಾಡುವುದಕ್ಕೆ ತಡೆಯೊಡ್ಡುತ್ತದೆ ಅಥವಾ ಅದನ್ನು ಅಡ್ಡಿಪಡಿಸುತ್ತದೆ. ಈ ಪದವನ್ನು ಸಾಮಾನ್ಯವಾಗಿ ಸರಕಾರಗಳು, ನಿಗಮಗಳು ಮತ್ತು ಇತರ ದೊಡ್ಡ ಸಂಸ್ಥೆಗಳಿಗೆ ಅನ್ವಯಿಸಲಾಗುತ್ತದೆ. ಹಲವುವೇಳೆ "ಕೆಂಪು ಪಟ್ಟಿ" ಎಂದು ವಿವರಿಸಲಾದ ವಿಷಯಗಳಲ್ಲಿ ದಸ್ತೈವಜುಗಳನ್ನು ತುಂಬುವುದು, ಪರವಾನಗಿಗಳನ್ನು ಪಡೆಯುವುದು, ಒಂದು ನಿರ್ಧಾರವನ್ನು ಅನುಮೋದಿಸಲು ಹಲವು ಜನರು ಅಥವಾ ಸಮಿತಿಗಳು ಇರುವುದು ಮತ್ತು ವ್ಯವಹಾರಗಳನ್ನು ನಿರ್ವಹಿಸುವುದುನ್ನು ನಿಧಾನಮಾಡುವ ಅಥವಾ ಹೆಚ್ಚು ಕಷ್ಟಕರ ಮಾಡುವ ಅಥವಾ ಎರಡನ್ನೂ ಮಾಡುವ ವಿವಿಧ ಕೆಳಮಟ್ಟದ ನಿಯಮಗಳು ಸೇರಿರುತ್ತವೆ.[೧][೨][೩] ಪಶ್ಚಾತ್ ಜ್ಞಾನದ ತೀರ್ಮಾನಗಳನ್ನು ಸರ್ಕಾರವು ಮಾಡುತ್ತಿರುವುದರಿಂದ, ಒಂದು ಮೇಜಿನಿಂದ ಮತ್ತೊಂದಕ್ಕೆ ಹೋಗಲು ಅನೇಕ ಸರ್ಕಾರಿ ಉದ್ಯೋಗಿಗಳು ಅನುಮತಿ ಪಡೆಯಬೇಕಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. "red tape: Definition from". Answers.com. Retrieved 2012-10-09.
  2. "What is red tape? definition and meaning". Businessdictionary.com. Archived from the original on 2012-11-09. Retrieved 2012-10-09.
  3. "Red Tape Reduction Initiative | Business". Gov.nl.ca. Archived from the original on 2012-11-09. Retrieved 2012-10-09.