ತಿರುಪ್ಪೂರು

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
Tirupur
India-locator-map-blank.svg
Red pog.svg
Tirupur
ರಾಜ್ಯ
 - ಜಿಲ್ಲೆ
ತಮಿಳುನಾಡು
 - Tirupur
ನಿರ್ದೇಶಾಂಕಗಳು 11.1075° N 77.3398° E
ವಿಸ್ತಾರ
 - ಎತ್ತರ
 km²
 - 301.14 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2009)
 - ಸಾಂದ್ರತೆ
617180
 - /ಚದರ ಕಿ.ಮಿ. (5th in Tamilnadu(64th in india))
District collector Mr.C.Samayamoortyi IAS
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 641 601 to 610
 - +91 421
 - TN-39 and TN-42
ಅಂತರ್ಜಾಲ ತಾಣ: tiruppur.tn.nic.in/

ತಿರುಪ್ಪೂರು (ತಮಿಳು:திருப்பூர்)- ಇದು ನೋಯಲ್ ನದಿಯ ದಂಡೆಯ ಮೇಲಿರುವ ಜವಳಿನಗರದ Archived 2009-02-22 at the Wayback Machine. ಹೆಸರು.

ಇದು ತಿರುಪ್ಪೂರು ಜಿಲ್ಲೆಯ ಆಡಳಿತದ ಪ್ರಧಾನ ಕಾರ್ಯಸ್ಥಾನವಿರುವ ಊರು. ಇದು ದಕ್ಷಿಣ ಭಾರತದ ಪ್ರಾಚೀನ ಕೋಂಗು ನಾಡಿನ ಪ್ರದೇಶದ ಭಾಗವಾಗಿದೆ. ಇಲ್ಲಿಯ ಜನ ಪ್ರಾದೇಶಿಕ ರಾಜ್ಯವನ್ನು ಕಟ್ಟಿದವರಲ್ಲಿ ಮೊದಲಿಗರು. ತಿರುಪ್ಪೂರು ಜವಳಿ ಉದ್ಯಮ ಕ್ಷೇತ್ರದ ಕೇಂದ್ರ ಹಾಗು ನೈಪುಣ್ಯವಿಲ್ಲದ ಹಂಗಾಮಿ ಕೆಲಸಗಾರರಿಗೆ ಉದ್ಯೋಗಾವಕಾಶ ಸೃಷ್ಟಿಮಾಡುವ ದೊಡ್ಡ ಔದ್ಯೋಗಿಕ ಕೇಂದ್ರ.

ತಿರುಪ್ಪೂರು ಭಾರತದ ಬಹಳ ಪ್ರಮುಖ ವ್ಯಾಪಾರ ಕೇಂದ್ರ. ತಿರುಪ್ಪೂರು ಸಾರ್ವತ್ರಿಕವಾಗಿ ಹೋಸಿಅರಿ, ನಿಟೆಡ್ ಗಾರ್ಮೆಂಟ್ಸ್(ಹೆಣೆದ ಉಡುಪುಗಳು), ಕ್ಯಾಷುಯಲ್ ಕ್ಲಾತ್(ಅನೌಪಚಾರಿಕ ಉಡುಗೆಗಳು), ಮತ್ತು ಸ್ಪೋರ್ಟ್ಸ್‌ವೇರ್ (ಆಟದ ಉಡುಗೆಗಳು)- ಈ ಎಲ್ಲಾ ಜವಳಿಗಳನ್ನು ಒದಗಿಸುವ ಪ್ರಮುಖ ಕೇಂದ್ರವೆಂದು ಮನ್ನಣೆ ಪಡಿದಿದೆ. ತಿರುಪ್ಪೂರು ಮೂರು ದಶಕಗಳಿಂದ ದೇಶದ ನಿಟ್‌ವೇರ್ ರಾಜಧಾನಿಯಾಗಿ ಹೊರಹೊಮ್ಮಿದೆ.[೧] ತಿರುಪ್ಪೂರಿನ ರಫ್ತು ಕೇಂದ್ರಿತ ಜವಳಿ ಉದ್ಯಮ ಸುಮಾರು ಐದು ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿದೆ. ಇಲ್ಲಿಂದಾಗುವ ರಫ್ತಿನ ವಹಿವಾಟು ರೂ. 12,000 ಕೋಟಿಯ ಗಡಿಯನ್ನು ಕಳೆದ ವರ್ಷ ದಾಟಿದೆ.[೨]

ಭೂಗೋಳ[ಬದಲಾಯಿಸಿ]

ತಿರುಪ್ಪೂರು [ಜಿಲ್ಲೆ] 11°06′27″N 77°20′23″E / 11.1075°N 77.3398°E / 11.1075; 77.3398 ಯಲ್ಲಿ ಸ್ಥಿತವಾಗಿದೆ.[೩] ಇದು ಸಮುದ್ರ ಮಟ್ಟಕ್ಕಿಂತ ಸರಾಸರಿ 295 ಮೀಟರ್ (967 ಅಡಿ) ಎತ್ತರದಲ್ಲಿದೆ.

ಇತಿಹಾಸ[ಬದಲಾಯಿಸಿ]

ತಿರುಪ್ಪೂರು ನಗರಕ್ಕೆ ನಿಟ್‌ಸಿಟಿ, ಕಾಟನ್ ಸಿಟಿ, ಎನ್ನುವ ಹೆಸುರಗಳಿಂದ ಕೂಡ ಕರೆಯಲಾಗುತ್ತಿದ್ದರೂ ಇದು ಭಾರತದ ಜವಳಿ ನಗರ ಎಂದು ಹೆಚ್ಚು ಜನಪ್ರಿಯವಾಗಿದೆ. ಇದು ಐತಿಹಾಸಿಕ ಕೇಂದ್ರ ಕೂಡ ಹೌದು.

ತಿರುಪ್ಪೂರು ಎನ್ನುವ ಈ ನಗರದ ಹೆಸರು ಪುರಾಣಕಾಲದಲ್ಲಿ ಉತ್ಪತ್ತಿಯಾಯಿತೆಂದು ಹೇಳಲಾಗುತ್ತದೆ. ಕಳ್ಳರು ಪಾಂಡವರಿಗೆ ಸೇರಿದ ಕುರಿಕಾಯುವವರನ್ನು ಕದ್ದು ಒಯ್ಯುತ್ತಾರೆ, ಆಗ ಪಾಂಡವರ ಸೈನ್ಯವು ಅವರನ್ನು ವಾಪಸ್ಸು(ತಿರುಗಿ) ಪಡೆಯುತ್ತಾರೆ. ಹೀಗಾಗಿ ಇದಕ್ಕೆ ತಿರುಪ್ಪು=ತಿರುಗಿ ಊರು=ಸ್ಥಳ ಎಂಬ ಹೆಸರು ಬಂತು. ಇದಲ್ಲದೆ ಧಾರಪುರಂ ಎನ್ನುವ ಊರಿನ ಹಳೆಯ ಹೆಸರು "ವಿರಾಟಪುರಂ" (ಧಾರಪುರಂ ಎನ್ನುವುದ ಪ್ರಸ್ತುತ ತಿರುಪ್ಪೂರು ಜಿಲ್ಲೆಯ ಊರು). ಈ ಹೆಸರನ್ನು ಮಹಾಭಾರತದ ಶ್ಲೋಕಗಳಲ್ಲಿ ಉಲ್ಲೇಖಿಸಲಾಗಿದೆ. ಆಧುನಿಕ ತಿರುಪ್ಪೂರಿನಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸುವ ಸಲುವಾಗಿ ಅಗೆಯುವಾಗ ಸಿಗುವ ಪ್ರಾಚೀನ ನಾಣ್ಯ, ಮಣ್ಣಿನ ಪಾತ್ರೆಗಳನ್ನು ಸಂಗ್ರಹಿಸಿವುದರ ಮೂಲಕ ಪ್ರಾಚೀನ ತಿರುಪ್ಪೂರಿನ ಇತಿಹಾಸವನ್ನು ಅರಿಯಲಾಗುತ್ತಿದೆ.

ಚೋಳರ ಕಾಲದ ಕಲ್ಲಿನ ಕೆತ್ತನೆಗಳಲ್ಲಿ "ಕಾಂಚಿ ಮಾನಧಿ" (ನೋಯಲ್ ನದಿ), ಹಾಗೂ ಅದರ ದಡದಲ್ಲಿರುವ ಫಲವತ್ತಾದ ಭೂಮಿಯ ಕುರಿತಂತೆ ಪ್ರಸ್ತಾಪ ಮಾಡಲಾಗಿದೆ. ಇದರಿಂದ ತಿರುಪ್ಪೂರು ಸುತ್ತಮುತ್ತಲಿನ ಭೂಮಿಯು ಫಲವತ್ತಾಗಿತ್ತು. ಅಲ್ಲದೆ ಕೃಷಿ ಚಟುವಟಿಕೆ ಈ ಪ್ರದೇಶದಲ್ಲಿ ಬಹಳ ಚೆನ್ನಾಗಿ ನಡೆಯುತ್ತಿತೆಂದು ಸ್ಪಷ್ಟವಾಗುತ್ತದೆ. ಹೀಗಾಗಿ ಇವತ್ತಿಗೂ ಕೂಡ ತಿರುಪ್ಪೂರು, ಹತ್ತಿ ತರಕಾರಿ ಇತ್ಯಾದಿ ಪದಾರ್ಥಗಳ ವ್ಯಾಪಾರ ಕೇಂದ್ರವಾಗಿದೆ. ತಿರುಪ್ಪೂರಿನ ಹೃದಯಭಾಗದಲ್ಲಿರುವ ವಿಶ್ವೇಶ್ವರಸ್ವಾಮಿ ದೇವಸ್ಥಾನ, ಈ ಪ್ರದೇಶದ ಅತ್ಯಂತ ಹಳೆಯ ದೇವಸ್ಥಾನಗಳಲ್ಲಿ ಒಂದು. ಈ ದೇವಸ್ಥಾನದಲ್ಲಿರುವ ಲಿಂಗವನ್ನು ಚೋಳರ ರಾಜನು ಕಾಶಿಯಿಂದ ತರುವಾಗ ಈ ದೇವಸ್ಥಾನದಲ್ಲಿ ಬಿಟ್ಟನೆಂದು ಹಿರಿಯರು ಹೇಳುತ್ತಾರೆ. ಇದಲ್ಲದೆ ನೋಯಲ್ ನದಿಯ ದಡದ ಮೇಲೆ ಚೆಲ್ಲಂಡಿ ಅಮ್ಮನ್ ದೇವಸ್ಥಾನವಿದೆ. ಇದರಲ್ಲಿ ಕೆಲವು ವಿಗ್ರಹಗಳು ಚೋಳ ಶೈಲಿಯ ಶಿಲ್ಪಕಲೆಯಲ್ಲಿದೆ.

ಇಂಡಿಯಾ ದೇಶಕ್ಕೆ ಸ್ವಾತಂತ್ರ‍್ಯ ಬರುವುದಕ್ಕೂ ಮುಂಚೆಯೆ ತಿರುಪ್ಪೂರು ತನ್ನ ಹೆಸರನ್ನು ಭಾರತದ ಇತಿಹಾಸದ ಪುಟಗಳಲ್ಲಿ ದಾಖಲಿಸಿಕೊಂಡಿದೆ. ಪ್ರಸಿದ್ಧ ಕೊಂಗುನಾಡಿನ ದಳವಾಯಿ ಮತ್ತು ಪಾಳೆಗಾರ, ಧೀರನ್‌ ಚಿನ್ನಮಲೈ ಬ್ರಿಟಿಷ್ ಸೈನ್ಯದ ವಿರುದ್ಧ ಹೋರಾಡಿದ. ಇವನನ್ನು ಸಂಕಗಿರಿಕೋಟೆಯಲ್ಲಿ ಬ್ರಿಟಿಷರು ನೇಣಿಗೆ ಹಾಕಿದರು. ತಿರುಪ್ಪೂರು ಕುಮಾರನ್, ಎನ್ನುವ ಸ್ವಾತಂತ್ರ ಯೋಧ ಕುಮಾರನ್ ರಸ್ತೆಯಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಕೆಳಗೆ ಇಳಿಸದೆ ದೇಶಪ್ರೇಮದಿಂದ ದಿಟ್ಟವಾಗಿ ಹೆಚ್ಚೆ ಹಾಕುತ್ತಿದ್ದಾಗ, ಬ್ರಿಟಿಷರು ಲಾಠಿ ಚಾರ್ಚ್‌ ಮಾಡಿ ಕೊಂದರು. ಈ ಘಟನೆ ಈ ನಗರದ ಜನರಿಗೆ ಇಂದಿಗೂ ದೊಡ್ಡ ಸ್ಪೂರ್ತಿಯಾಗಿದೆ. ತಿರುಪ್ಪೂರಿನ ಮುಖ್ಯರಸ್ತೆಗೆ ಕುಮಾರನ್ ಹೆಸರಿಡಲಾಗಿದೆ.[೪]

ಇದಲ್ಲದೆ ಈ ಊರಿಗೆ ಸಂಭಂದಪಟ್ಟ ಹಾಗೆ ಇನ್ನೊಂದು ಗಮನಿಸತಕ್ಕ ಘಟನೆಯೆಂದರೆ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಸಿ ಎನ್ ಅಣ್ಣಾದೊರೈ, ಭಾರತೀಯ ಇತಿಹಾಸದಲ್ಲಿ ತಿರುವು ಕೊಟ್ಟ ಘಟನೆಯೆಂದು ಪರಿಗಣಿಸಲಾಗಿರುವ ಪೆರಿಯಾರರ ಅಂದೋಲನದ ಸಂದರ್ಭದಲ್ಲಿ ಪೆರಿಯಾರ್ ಇ ವಿ ರಾಮಸ್ವಾಮಿ, ಅವರನ್ನು ಮೊದಲ ಬಾರಿಗೆ ತಿರುಪ್ಪೂರಿನಲ್ಲಿ ಭೇಟಿಮಾಡಿದರು.

ಜನಸಾಂದ್ರತೆ[ಬದಲಾಯಿಸಿ]

As of 2001 ಭಾರತದ ಜನಗಣತಿಯ (ಸೆನ್ಸಸ್),[೫] ಪ್ರಕಾರ ತಿರುಪ್ಪೂರು ಸುಮಾರು 346,551 ಜನಸಂಖ್ಯೆಯನ್ನು ಹೊಂದಿದೆ. ಈ ಜನಸಂಖ್ಯೆಯಲ್ಲಿ ಪುರುಷರು 52% ಮತ್ತು ಮಹಿಳೆಯರು 48% ಇದ್ದಾರೆ. ತಿರುಪ್ಪೂರಿನ ಸರಾಸರಿ ಸಾಕ್ಷರತಾ ಪ್ರಮಾಣವು 76% ಇದ್ದು,ಇದು ರಾಷ್ಟ್ರಿಯ ಸರಾಸರಿಯಾದ 59.5% ಗಿಂತ ಜಾಸ್ತಿಯಿದೆ; ಪುರುಷರ ಸಾಕ್ಷರತೆ: 82% ಮತ್ತು ಮಹಿಳೆಯರ ಸಾಕ್ಷರತೆ: 69% ಇದೆ. ತಿರುಪ್ಪೂರಿನ ಜನಸಂಖ್ಯೆಯ 10% ಜನ ಆರು ವರ್ಷ ಅಥವಾ ಅದಕ್ಕಿಂತ ಕೆಳಗಡೆ ಇದ್ದಾರೆ.

ತಿರುಪ್ಪೂರಿನ ಜನಸಂಖ್ಯೆಯಲ್ಲಿ ಬಹುತೇಕ ಭಾಗ ಹಿಂದೂ ಧರ್ಮದವರಾಗಿದ್ದರೂ, ಮುಸ್ಲಿಂ ಮತ್ತು ಕ್ರೈಸ್ಥ ಧರ್ಮದವರು ಕೂಡ ಸಾಕಷ್ಟು ಪ್ರಮಾಣದಲ್ಲಿ ಇದ್ದಾರೆ. ಸಿಖ್‌ ಮತ್ತು ಜೈನ್‌ ರ ಕೂಡ ಇಂದಿನ ದಿನಗಳಲ್ಲಿ ಸ್ವಲ್ಪ ಸಂಖ್ಯೆಯಲ್ಲಿ ಇದ್ದಾರೆ. ಕೋಂಗು ವೆಲಾಲರ್ ಗೌಂಡರ್ ಮತ್ತು ಮೊದಲಿಯಾರ್‌ಗಳು ಈ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದ ಜನಸಂಖ್ಯೆಯ ಬಹುದೊಡ್ದ ಭಾಗವಾಗಿದ್ದಾರೆ. ಈ ನಗರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಚೆಟ್ಟಿಯಾರ್‌ಗಳು ಕೂಡ ಇದ್ದಾರೆ. ಈ ನಗರದಲ್ಲಿ ಕೇರಳ, ಮುಖ್ಯವಾಗಿ ಪಾಳಕಾಡ್‌ನಿಂದ (ಹಿಂದೊಮ್ಮೆ ಕೊಂಗು ನಾಡಿನ ಭಾಗವಾಗಿತ್ತು), ಬಂದಿರುವ ಅನೇಕ ಮಂದಿಯಿದ್ದಾರೆ. ಇದ್ದಲವೇ ಉತ್ತರ ಭಾರತದಿಂದ ಬಂದಿರುವ ಬಹಳಷ್ಟು ಜೈನ ಮತ್ತು ಮಾರ್ವಾರಿಗಳು ವಾಣಿಜ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದಿನ ದಿನಮಾನದಲ್ಲಿ ಮಣಿಪುರ್ ಮತ್ತು ನಾಗಲ್ಯಾಂಡ್‌ಗಳಂತ ರಾಜ್ಯಗಳಂತಹ ಭಾರತದ ಈಶಾನ್ಯ ರಾಜ್ಯಗಳ ಜನರು ಕೂಡ ಉದ್ಯೋಗವನ್ನು ಅರಸಿಕೊಂಡು ತಿರುಪ್ಪೂರಿಗೆ ಬಂದು ನೆಲಿಸಿದ್ದಾರೆ.

ತಿರುಪ್ಪೂರಿನ ಜವಳಿ(ಬಟ್ಟೆ) ಮತ್ತು ರಂಗಿನ ಔದ್ಯೋಗಿಕ ಘಟಕಗಳು ತಮಿಳನಾಡಿನ ದಕ್ಷಿಣ ಜಿಲ್ಲೆಗಳಾದ ತಿರುಚಿರಾಪಳ್ಳಿ, ದಿಂಡಿಗಲ್ಲು, ರಾಮನಾಥಪುರಂ, ತಿರುನೆಲ್ವೆಲಿ ಮತ್ತು ನಾಗರ್‌‌ಕೋಯಿಲ್‌ ಗಳಿಂದ ಕೆಲಸಗಾರರನ್ನು ನೇಮಿಸಿಕೊಳ್ಳುತ್ತದೆ. ಇವರು ಕುಶಲತೆಯಿಲ್ಲದ ಕೆಲಸಗಾರರಾಗಿದ್ದರೂ ದಕ್ಷಿಣ ಭಾರತದ ಇತರ ಕಡೆಗಳಿಗೆ ಹೋಲಿಸಿ ನೋಡಿದಾಗ ಇಲ್ಲಿ ಇವರಿಗೆ ಯೋಗ್ಯ ಸಂಬಳ ದೊರಕುತ್ತದೆ. [[ ದಕ್ಷಿಣ ಭಾರತದ]] ರಾಜ್ಯಗಳಾದ ಕೇರಳ, ಕರ್ನಾಟಕ, ಮತ್ತು ಆಂಧ್ರಪ್ರದೇಶದಿಂದ ಕೂಡ ಬಹಳ ಜನರಿದ್ದಾರೆ. ಇತ್ತೀಚೆಗೆ, ತಿರುಪ್ಪೂರು ಮತ್ತು ಸುತ್ತಮುತ್ತಲಿರುವ ಗಾರ್ಮೆಂಟ್ಪ್ರೊಸೆಸ್ಸಿಂಗ್ (ಜವಳಿ ಸಂಸ್ಕರಣ) ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು 0}ಭಾರತದ ಇತರ ರಾಜ್ಯಗಳಾದ ಒಡಿಶಾ ಮತ್ತು ಬಿಹಾರದಿಂದಲೂ ಕೂಡ ಜನರು ಬರುತ್ತಿದ್ದಾರೆ.

ಹವಾಗುಣ[ಬದಲಾಯಿಸಿ]

ತಿರುಪ್ಪೂರು ಹಿತವಾದ, ಅರೋಗ್ಯದಾಯಕವಾದ ಹವಾಗುಣವನ್ನು ಹೊಂದಿದ್ದು ಇದರ ತಾಪಮಾನವು ದಕ್ಷಿಣ ಭಾರತದ ಕರಾವಳಿ ಪ್ರದೇಶದಷ್ಟು ತೀವ್ರತೆಯನ್ನು ಮುಟ್ಟುವುದಿಲ್ಲ. ತಮಿಳುನಾಡು ರಾಜ್ಯದ ಪಶ್ಚಿಮದಲ್ಲಿರುವ ಇದು ಸುಮಾರು 310 ಮೀಟರ್ ಎತ್ತರದಲ್ಲಿದೆ. ಬೇಸಿಗೆ ಮತ್ತು ಚಳಿಗಾಳದ ಸರಾಸರಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು 35 °C ರಿಂದ 18 °C ನಡುವೆ ಇರುತ್ತದೆ. ಇಲ್ಲಿಯವರೆಗೆ ದಾಖಲಾಗಿರುವ ಗರಿಷ್ಠ ತಾಪಮಾನ 41 °C ಆಗಿದ್ದು, ದಾಖಲಾಗಿರುವ ಕನಿಷ್ಠ ತಾಪಮಾನವು 12 °C ಆಗಿದೆ.

ಇಲ್ಲಿಯ ಬೆಟ್ಟಗಳ ಸಾಲುಗಳ ಕಾರಣದಿಂದಾಗಿ, ಜಿಲ್ಲೆಯ ಬಹುತೇಕ ಭಾಗ, ಜೂನ್‌ನಿಂದ ಆಗಸ್ಟ್‌ ತಿಂಗಳವರೆಗೆ ಸೌತ್-ವೆಸ್ಟ್‌ (ನೈಋತ್ಯ)ಮುಂಗಾರಿನಿಂದ ಪ್ರಯೋಜನ ಪಡೆಯುತ್ತದೆ. ಸೆಪ್ಟೆಂಬರ್ ವೆರೆಗಿನ ಒಣಹವೆಯ ನಂತರ, ಸಾಧಾರಣವಾಗಿ ಮುಂಗಾರು ಆಕ್ಟೋಬರ್‌ನಲ್ಲಿ ಶುರುವಾಗಿ ನವೆಂಬರ್‌ ತನಕ ಮುಂದುವರೆಯುತ್ತದೆ. ಈ ಮುಂಗಾರು ಈಶಾನ್ಯದಿಂದ ಬೀಸುವ ಒಂದು ಕ್ಲುಪ್ತ ಮಾರುತದ ಪರಿಣಾಮದಿಂದಾಗಿ ಉಂಟಾಗುತ್ತದೆ. ಸರಾಸರಿ ಮಳೆ ಪ್ರಮಾಣವು ಸುಮಾರು 700 mm ರಷ್ಟಿದೆ. ಒಟ್ಟು ಮಳೆಯ ಈಶಾನ್ಯದ ಮಾರುತದಿಂದಾಗಿ ಉಂಟಾಗುವ ಮಳೆಯ ಪ್ರಮಾಣ ಶೇಕಡಾ 47%ರಷ್ಟಿದ್ದರೆ, ನೈಋತ್ಯದಿಂದ(ಸೌತ್‌ವೆಸ್ಟ್‌) ಬೀಸುವ ಮಾರುತವು 28%ರಷ್ಟಿದೆ.

ಈ ಪ್ರದೇಶದ ಭೂಮಿಯ ಬಹುಪಾಳು ಮಣ್ಣು ಕಪ್ಪಮಣ್ಣಾಗಿದ್ದು, ಇದು ಹತ್ತಿ ಬೆಳೆಯಲು ಬಹಳ ಯೋಗ್ಯವಾಗಿದೆ. ಇದಲ್ಲದೆ ಈ ಪ್ರದೇಶದಲ್ಲಿ ಕೆಂಪು ಕಳಿಮಣ್ಣು ಕೂಡ ಇದೆ. ಕೊಯಮತ್ತೂರಿನ ಜೊತೆಯಲ್ಲಿ ತಿರುಪ್ಪೂರುನ್ನು ಸೈಸ್ಮಿಕ್ (ಭೂಕಂಪ) ವಲಯದ ಕ್ಲಾಸ್ III/IV ವಿಭಾಗಕ್ಕೆ ಸೇರಿಸಲಾಗಿದೆ.ಇಲ್ಲಿ 1900ರಲ್ಲಿ ರಿಚರ್ ಮಾಪಕದಲ್ಲಿ 6.0 ಪ್ರಮಾಣದ ಭೂಕಂಪನ ಸಂಭವಿಸಿದೆ.[6] ಸಲೀಂ ಆಲಿ ಸೆಂಟರ್ ಫಾರ್‌ ಆರ್ನಿತಾಲಜಿ ಅಂಡ್‌ ನಾಚುರಲ್‌ ಹಿಸ್ಟರಿಯು ಕೊಯಮತ್ತೂರು ಜಿಲ್ಲೆಯ ಅನೈಕಟ್ಟಿಯಲ್ಲಿದೆ(ಅಣೆಕಟ್ಟು). ಇದು ತಿರುಪ್ಪೂರಿಗೆ ಬಹಳ ಹತ್ತಿರದಲ್ಲಿದೆ.

ಆಡಳಿತ ವ್ಯವಸ್ಥೆ[ಬದಲಾಯಿಸಿ]

ತಿರುಪ್ಪೂರು ನಗರದ ಆಡಳಿತವನ್ನು ಮೇಯರ್ ಮತ್ತು ಉಪಮೇಯರ್ ಮುಂದಾಳತ್ವದಲ್ಲಿ ಸಿಟಿ ಮುನಿಸ್ಪಾಲಿಟಿ ಕಾರ್ಪೋರೇಷನ್‌ (ನಗರಪಾಲಿಕೆ) ನಡೆಸುತ್ತದೆ. ತಿರುಪ್ಪೂರು ಮುನ್ಸಿಪಾಲಿಟಿಯನ್ನು 1917ರಲ್ಲಿ ಸ್ಥಾಪಿಸಲಾಯಿತು, ಇದನ್ನು ಇತ್ತೀಚೆಗೆ 2008ರಲ್ಲಿ ತಿರುಪ್ಪೂರು ಕಾರ್ಪೋರೇಷನ್‌ ಎಂದು ಉನ್ನತ ದರ್ಜೆಗೇರಿಸಲಾಯಿತು. ಪ್ರಸ್ತುತ ಕಾರ್ಪೋರೇಷನ್ ಮಿತಿಯಲ್ಲಿ 27 ಕಿ.ಮೀ.ಇದ್ದು, ಇದು 2011ರಲ್ಲಿ, 150 ಕಿ.ಮೀ. ಗಿಂತಲೂ ಹೆಚ್ಚಾಗುವ ಸಾಧ್ಯತೆಯಿದೆ, ಈ ಯೋಚನೆಯಡಿಯಲ್ಲಿ ಸರಕಾರ ತಿರುಪ್ಪೂರು ಕಾರ್ಪೋರೇಷನ್‌ನಲ್ಲಿರುವ ಉಪನಗರ (ಸಬ್‌-ಅರ್ಬನ್‌)ಪ್ರದೇಶಗಳನ್ನು ಸೇರಿಸಿಕೊಳ್ಳುವ ಉದ್ದೇಶ ಹೊಂದಿದೆ.

ತಿರುಪ್ಪೂರಿನ ಉಪನಗರ(ಸಬ್‌-ಅರ್ಬನ್‌) ಪ್ರದೇಶಗಳು[ಬದಲಾಯಿಸಿ]

 • ನಲ್ಲೂರು:

ಇದು ತೃತೀಯ ದರ್ಜೆಯ ಮುನ್ಸಿಪಾಲಿಟಿಯಾಗಿದ್ದು, ಇದನ್ನು 2011ರ ವೇಳೆಗೆ ತಿರುಪ್ಪೂರು ಕಾರ್ಪೊರೇಷನ್ನಗೆ ಸೇರಿಸುವ ಯೋಚನೆಯಿದೆ.

 • 15 ವೆಲಂಪಾಳ್ಯಂ:

ಇದೊಂದು ತೃತೀಯ ದರ್ಜೆಯ ಮುನ್ಸಿಪಾಲಿಟಿಯಾಗಿದ್ದು, ಇದನ್ನು 2011ರ ವೇಳೆಗೆ ತಿರುಪ್ಪೂರು ಕಾರ್ಪೊರೇಷನ್ನಗೆ ಸೇರಿಸುವ ಯೋಚನೆಯಿದೆ.

ಈ ಕೆಳಕಂಡ ಉಪನಗರಗಳನ್ನು(ಸಬ್‌-ಅರ್ಬ್‌) 2011ರೊಳಗೆ ತಿರುಪ್ಪೂರು ಸಿಟಿ ಕಾರ್ಪೋರೇಷನ್ನೊಂದಿಗೆ (ನಗರಪಾಲಿಕೆ) ಸೇರಿಸಿಕೊಳ್ಳು ಉದ್ದೇಶವಿದೆ:

 • ಮುತ್ತಾನಪಾಳ್ಯಂ
 • ನೇರುಪರಿಚಲ್
 • ವೀರಪಾಂಡಿ
 • ಅಂಡಿಪಾಳ್ಯಂ
 • ಇದುವೈ
 • ತೋಟ್ಟಿಯಮನ್ನಾರೈ
 • ಮಂಗಳಂ
 • ಉತುಕುಲಿ
 • ಅನಪೂರಪಾಳ್ಯಂ

ರಾಜಕಾರಣ[ಬದಲಾಯಿಸಿ]

ತಿರುಪ್ಪೂರು ವಿಧಾನಸಭಾ(ಅಸೆಂಬ್ಲಿ) ಕ್ಷೇತ್ರವು ತಿರುಪ್ಪೂರು ಲೋಕಸಭಾ ಕ್ಷೇತ್ರದ ಭಾಗವಾಗಿದೆ.[೬]

ತಿರುಪ್ಪೂರನ್ನು ಉತ್ತರ ತಿರುಪ್ಪೂರು ಮತ್ತು ದಕ್ಷಿಣ ತಿರುಪ್ಪೂರು ಎನ್ನುವ ಕ್ಷೇತ್ರಗಳನ್ನಾಗಿ ವಿಭಜಿಸಲಾಗಿದೆ.

ತಿರುಪ್ಪೂರಿನ ಹೆಸರಿನಲ್ಲಿ ಒಂದು ಎಂ.ಪಿ (MP) ಕ್ಷೇತ್ರ ಕೂಡ ಇದೆ. ಇದರಲ್ಲಿ ಕೊಯಮತ್ತೂರು, ಗೋಬಿ, ಪಳನಿ ಎಂ.ಪಿ (MP) ಕ್ಷೇತ್ರಗಳಿಂದ ಆಯ್ದ ಪ್ರದೇಶಗಳನ್ನು ಸೇರಿಸಲಾಗಿದೆ.

ಆರ್ಥಿಕ ವ್ಯವಸ್ಥೆ[ಬದಲಾಯಿಸಿ]

ತಿರುಪ್ಪೂರು ಭಾರತದನಿಟ್‌ವೇರ್‌ ರಾಜಧಾನಿಯೆಂದು ಕರೆಯಲ್ಪಡುತ್ತದೆ. ಇದು ಭಾರತದಲ್ಲಿ ಜವಳಿ ಉದ್ಯಮವನ್ನು ಕಳೆದ ಮೂರು ದಶಕಗಳಿಂದ ಉನ್ನತ ಶಿಖರಕ್ಕೆ ಕೊಂಡೊಯ್ದಿದೆ. ಇಲ್ಲಿಯ ಆರ್ಥಿಕ ಆಭಿವೃದ್ಧಿಯು ಭಾರತದ ಉದ್ಯಮಿಗಳ ಸ್ಥೈರ್ಯ-ಧೈರ್ಯವನ್ನು ಹೆಚ್ಚಿಸುತ್ತದೆ. ಭಾರತದ ವಿದೇಶಿ ವಿನಿಮಯಕ್ಕೆ ಇದು ತನ್ನ ಕೊಡುಗೆಯನ್ನು ನೀಡುತ್ತದೆ.

ಉದ್ಯಮ/ಕೈಗಾರಿಕೆ[ಬದಲಾಯಿಸಿ]

ತಿರುಪ್ಪೂರು --- ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕ/ಔದ್ಯೋಗಿಕ ನಗರ[ಬದಲಾಯಿಸಿ]

ತಿರುಪ್ಪೂರು ತಮಿಳುನಾಡಿನಲ್ಲಿ ಅತ್ಯಂತ ವೇಗವಾಗಿ ಮತ್ತು ಬೃಹತ್ತಾಗಿ ಬೆಳೆಯುತ್ತಿರುವ ನಗರಪ್ರದೇಶಗಳಲ್ಲಿ ಒಂದು. ತಿರುಪ್ಪೂರು ಲಕ್ಷಾಂತರ ಜನರಿಗೆ ಜೀವನೀಡಿದೆ. ತಿರುಪ್ಪೂರಿನ ಆತ್ಮದಂತಿರುವ ನಿಟ್‌ವೇರ್‌ ಉದ್ಯಮವು ಎಲ್ಲಾ ವರ್ಗದ ಜನರಿಗೂ ಲಕ್ಷಾಂತರ ಉದ್ಯೋಗ ಅವಕಾಶಗಳನ್ನು ಕಲ್ಪಿಸಿದೆ. ಇಲ್ಲಿ ಸುಮಾರು 300 ಸಿವಿಂಗ್ ಘಟಕಗಳು, 450 ನಿಟ್ಟಿಂಗ್ ಘಟಕಗಳು ಮತ್ತು ನೂರಾರು ಡೈಯಿಂಗ್ ಘಟಕ ಹಾಗು ಅಸಂಖ್ಯ ಪೂರಕಕಾರ್ಖಾನೆಗಳಿವೆ(ಆನ್‌ಸಿಲರಿ).

ಫಾರ್‌-ಎಕ್ಸ್‌ ಬಿಸಿನೆಸ್‌ ನಿಂದ ಕಳೆದ 2008ರಲ್ಲಿ ಗಳಿಸಿದ ಅದಾಯವು ಸುಮಾರು ರೂ. 8,000 ಕೋಟಿಯಷ್ಟಿದೆ. ತಿರುಪ್ಪೂರಿನ ಅನುಕೂಲಕರ ಹವಾಗುಣ, ಕಚ್ಚಾ ವಸ್ತುಗಳ ಮತ್ತು ಕೆಲಸಗಾರ ಲಭ್ಯತೆ, ನಿಟ್‌ವೇರ್‌ ಉಡುಪುಗಳ (ಗಾರ್ಮೆಂಟ್‌) ರಫ್ತಿಗೆ ಬಹಳ ದೊಡ್ಡ ಪ್ರಮಾಣದ ಕೊಡುಗೆಯನ್ನು ನೀಡುತ್ತದೆ.ಮುತ್ತೂರು ಈ ಜಿಲ್ಲೆಗೆ ಸೇರಿದೆ.

[೭]

ಅಂತರ್‌ರಾಷ್ಟ್ರೀಯ ಬ್ರಾಂಡ್‌ಗಳು[ಬದಲಾಯಿಸಿ]

ತಿರುಪ್ಪೂರು ವಿಶ್ವದಾದ್ಯಂತ ಪ್ರತಿಷ್ಠಿತ ಬ್ರಾಂಡುಗಳಿಗೆ ಉಡುಪುಗಳನ್ನು ಒದಗಿಸುವ ಕಾರಣದಿಂದಾಗಿ ಇದನ್ನು ಭಾರತದ ನಿಟ್ ರಾಜಧಾನಿಯೆಂದು ಕರೆಯಲಾಗಿದೆ. ಸಾಮಾನ್ಯವಾಗಿ ವಿಶ್ವದ ಎಲ್ಲಾ ಅಂತರ್‌ರಾಷ್ಟ್ರೀಯ ನಿಟ್‌ವೇರ್‌ ಬ್ರಾಂಡ್‌ಗಳಿಗೆ ತಿರುಪ್ಪೂರಿನಲ್ಲಿ ತಯಾರಾದ ಬಟ್ಟೆಯ ಕೊಡುಗೆಯಿದೆ.

ಇಲ್ಲಿ ವಿವಿಧ ರೀತಿಯ ಕೈಗಾರಿಗಾ ಘಟಕಗಳಿದ್ದು, ಇಲ್ಲಿ ಮಕ್ಕಳು, ಮಹಿಳೆಯರ,ಪುರುಷರ ಒಳಉಡುಪು,ಟಾಪ್‌ ಮತ್ತು ಎಲ್ಲಾ ರೀತಿಯ ಬಟ್ಟೆಗಳನ್ನು ತಯಾರಿಸಿ ರಫ್ತು ಮಾಡಲಾಗುತ್ತದೆ. ಈ ನಗರವು ಹೋಸಿಅರಿ ರಫ್ತಿಗಾಗಿ ಪ್ರಸಿದ್ಧವಾಗಿದ್ದು, ಈ ಉದ್ಯಮವು ಸುಮಾರು 300,000 ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು]

ವಿಶ್ವದ ಅತಿ ದೊಡ್ಡ ವ್ಯಾಪಾರದಾರರಾದ C&A, ವಾಲ್‌ಮಾರ್ಟ್‌, ಪ್ರಿಮಾರ್ಕ್‌, ಸ್ವಿಚರ್‌, ಡೀಸಲ್‌, ARMY, ಟಾಮಿ ಹಿಲ್‌‌ಫಿಗರ್, M&S, FILA, H&M, HTHP, ವೇಲ್‌, ರೀಬಾಕ್ ಗಳನ್ನೊಳಗಂಡಂತೆ ವಿಶ್ವದ ಆತ್ಯಂತ ದೊಡ್ಡ ವರ್ತಕರು ತಿರುಪ್ಪೂರಿನಿಂದ ಬಟ್ಟೆ ಮತ್ತು ವಸ್ತ್ರವನ್ನು ಆಮದು ಮಾಡಿಕೊಳ್ಳುತ್ತಾರೆ. ರಫ್ತಿನಿಂದ ತಿರಸ್ಕರಿಸಲಾದ ಪದಾರ್ಥಗಳ ಬಹು ದೊಡ್ಡ ಮಾರುಕಟ್ಟೆ ಇಲ್ಲಿಯ ರೈಲು ನಿಲ್ದಾಣದ ಹತ್ತಿರದಲ್ಲಿರುವ ಪ್ರದೇಶವಾದ ಖಾದೆರ್‌ಪೇಟ್‌ನಲ್ಲಿದೆ.

ಅಗತ್ಯವಿರುವ ಮೂಲಭೂತ ಸೌಕರ್ಯಗಳು[ಬದಲಾಯಿಸಿ]

ನಗರವು ಅಭಿವೃದ್ಧಿಯಾಗುತ್ತಿದ್ದರೂ, ಇಲ್ಲಿರುವ ಮೂಲಭೂತ ಸೌಕರ್ಯಗಳು ಬಹಳ ಕಡಿಮೆ. ಯುನೈಟೆಡ್ ಸ್ಟೇಟ್ಸ್‌ ಆಫ್‌ ಅಮೇರಿಕಾಮತ್ತು ಯುರೋಪಿನ ಜನಪ್ರಿಯ ಕ್ಲೋದಿಂಗ್‌ ಬ್ರಾಂಡ್‌ಗಳಿಂದ ಉಡುಪುಗಳನ್ನು ತಯಾರಿಸಲು ಹೆಚ್ಚಿದ ಬೇಡಿಕೆಯಿಂದಾಗಿ ಈ ನಗರ ಬಹಳ ಶೀಘ್ರವಾಗಿ ಬೆಳೆಯಿತು. ಇದರ ಜೊತೆಯಲ್ಲಿ ಅಧುನಿಕ ತಂತ್ರಜ್ಞಾನ ಮತ್ತು ಕೌಶಲ್ಯವಿರುವ ಕೆಲಸಗಾರರ ಬಳಕೆಯಿಂದಾಗಿ ಈ ನಗರವು ಯಶಸ್ವಿಯಾಗಲು ಸಾಧ್ಯವಾಗಿ ಅಂತರ್‌ರಾಷ್ಟ್ರೀಯವಾಗಿ ಪೈಪೋಟಿಯನ್ನು ನೀಡಲು ಸಾಧ್ಯವಾಯಿತು.

ಅದರೆ ಇಲ್ಲಿಯ ಮೂಲಭೂತ ಸೌಕರ್ಯಗಳನ್ನು ಇಲ್ಲಿಂದ ಉತ್ಪತ್ತಿಯಾಗುವ ವಿದೇಶಿ ವಿನಿಮಯದೊಂದಿಗೆ ತಾಳೆಹಾಕಿ ನೋಡಿದಾಗ ಬಹಳ ದೊಡ್ಡ ನ್ಯೂನತೆಯಾಗಿ ಗಮನಾರ್ಹವಾಗುತ್ತದೆ. ತಿರುಪ್ಪೂರು ಎಕ್ಸ್‌ಪೋರ್ಟ್ರ್ಸ್‌ ಅಸೋಸಿಯೆಷನ್ (TEA) ಮತ್ತು ಇತರ ಸಂಘ, ಸಂಸ್ಥೆಗಳು ತಾವೆ ನೇರವಾಗಿ ಕೆಲವು ಕಾರ್ಯಕ್ರಮಗಳ ಮೂಲಕ ಕೆಲವೊಂದು ಸೌಕರ್ಯಗಳನ್ನು ಕಲ್ಪಿಸುತ್ತಿದ್ದಾರೆ. (ಉದಾಹರಣೆಗೆ ಮೂರನೇ ನೀರಿನ ಸ್ಕೀಂ ಮತ್ತು NAP).

ಒಳ್ಳೆಯ ಅಭಿವೃದ್ಧಿಯ ದರ ಮತ್ತು TEA --- ತಿರುಪ್ಪೂರು ಎಕ್ಸ್‌ಪೋರ್ಟ್ರ್ಸ್ ಅಸೋಸಿಯೇಷನ್[ಬದಲಾಯಿಸಿ]

ತಿರುಪ್ಪೂರಿನ ಹಲವಾರು ಕಂಪನಿಗಳು ಪ್ರಮುಖ ಪ್ರಮಾಣಪತ್ರಗಳನ್ನು ಪಡೆದಿವೆ, ಹಾಗು 1990ದಿಂದಿಚೆಗೆ ಪ್ರತಿ ವರ್ಷ ಸರಾಸರಿ 40% ಬೆಳೆವಣಿಗೆಯನ್ನು ಕಾಣುತ್ತಿದೆ.[೮]

The association formed by the Exporters of Tirupur (TEA) is one of the most successful association in India trying hard and been successful in helping the trade in Tirupur.

ತಿರುಪ್ಪೂರನ ರಫ್ತುದಾರರ ಸಂಘ - (TEA)ಭಾರತದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಸಂಘಗಳಲ್ಲಿ ಒಂದು. ಇದು ತಿರುಪೂರು ಮಾಡುವ ಉದ್ಯಮದಲ್ಲಿ ಯಶಸ್ವಿಯಾಗಿ ಕೈಜೋಡಿಸುತ್ತಿದೆ.

ತಿರುಪ್ಪೂರು ಕೈಗಾರಿಕಾ ಪಾರ್ಕ್‌[ಬದಲಾಯಿಸಿ]

ಹೊಸ ತಿರುಪ್ಪೂರು ಒಂದು ಚಿಕ್ಕ ಹೊಸದಾಗಿರುವ ನಗರ(ಕೈಗಾರಿಕೆ ಪಾರ್ಕ್), ಇದನ್ನು ತಿರುಪ್ಪೂರಿನಲ್ಲಿ ಅಭಿವೃದ್ಧಿಗೊಳಿಸಲಾಗಿದ್ದು ಮತ್ತು ರಫ್ತುಗಾರರಿಂದ NAP ಯಾಗಿ ಕಾರ್ಯನಿರ್ವಹಿಸುತ್ತಿದೆ. ಇದು ಭವಿಷ್ಯದಲ್ಲಿ ತಿರುಪ್ಪೂರು ಹೇಗಿರಬೇಕು ಎನ್ನುವುದಕ್ಕೆ ಮಾದರಿಯ ಉದಾಹರಣೆಯಾಗಿದೆ.

ನಗರದ ಪ್ರಮುಖ ಹೆಗ್ಗುರುತುಗಳು[ಬದಲಾಯಿಸಿ]

ಚಿತ್ರ:Kumaranmemorial.JPEG
ಕುಮಾರನ್‌ ಸ್ಮಾರಕ - ರೈಲ್ವೆ ನಿಲ್ದಾಣದ ಬಳಿ ಇದೆ.
 • ತಿರುಪ್ಪೂರಿನಲ್ಲಿ ಹರಿಯುವ ನೋಯಲ್‌ನದಿ ಒಂದು ಕಾಲದಲ್ಲಿ ಬಹಳ ಶುದ್ಧವಾಗಿತ್ತು, ಹೀಗಾಗಿ ಅದು ಆ ಕಾಲದ ಪ್ರಮುಖ ಹೆಗ್ಗುರುತಾಗಿತ್ತು. ಈ ನದಿಯು ನಗರವನ್ನು ಉತ್ತರ ಮತ್ತು ದಕ್ಷಿಣ ಎಂಬ ಎರಡು ಭಾಗಗಳಾಗಿ ವಿಭಜಿಸುತ್ತದೆ. ಅದರೆ, ಇತ್ತೀಚಿನ ದಿನಗಳಲ್ಲಿ ಈ ನದಿಯು ಡೈಯಿಂಗ್ ಕೈಗಾರಿಕೆಗಳಿಂದ ಹರಿದು ಬರುವ ಹಾನಿಕಾರಕ ಪದಾರ್ಥಗಳಿಂದಾಗಿ ಕಲುಷಿತಗೊಂಡಿದೆ.
 • ಟೌನ್‌ ಹಾಲ್‌, ಹೊಸ ರೈಲ್ವೆ ಮೇಲು-ಸೇತುವೆ, ರೈಲ್ವೆ ನಿಲ್ದಾಣದ ಬಳಿಯಿರುವ ತಿರುಪ್ಪೂರು ಕುಮಾರನ್ ಸ್ಮಾರಕ ವಿಗ್ರಹ, ಕಾರ್ಪೋರೇಷನ್‌ ಸ್ಮಾರಕ ಪಿಲ್ಲರ್ (ಅದರ ಮೇಲೆ ಗ್ಲೋಬ್‌ ಇರುವ)- ಇವೆಲ್ಲವೂ ತಿರುಪ್ಪೂರಿನ ಇತರ ಕೆಲವು ಹೆಗ್ಗುರುತುಗಳು.

== ಸಾರಿಗೆ ಸೌಕರ್ಯ ==

 • ವಿಮಾನ ಯಾನ

ತಿರುಪ್ಪೂರಿಗೆ ಅತಿ ಸಮೀಪದ ಅಂತರ್‌ರಾಷ್ಟ್ರೀಯ ವಿಮಾನನಿಲ್ದಾಣವೆಂದರೆ ಕೊಯಮತ್ತೂರು ವಿಮಾನನಿಲ್ದಾಣ. ಕೊಯಮತ್ತೂರಿನ ಅಂತರ್‌ರಾಷ್ಟ್ರೀಯ ವಿಮಾನನಿಲ್ದಾಣವನ್ನು ವಿಸ್ತರಿಸಿ ಗ್ರೀನ್‌ ಫೀಲ್ಡ್‌ ವಿಮಾನನಿಲ್ದಾಣವಾಗಿಸುವ ಪ್ರಸ್ತಾಪವಿದೆ. ಹೀಗಾದಲ್ಲಿ, ಈಗಿರುವ ವಿಮಾನನಿಲ್ದಾಣವನ್ನು ಇನ್ನೂ ಸ್ವಲ್ಪ ಪೂರ್ವಕ್ಕೆ ಸ್ಥಳಾಂತರಿಸಲಾಗುವುದು, ಇದರಿಂದಾಗಿ ತಿರುಪ್ಪೂರು ನಿವಾಸಿಗಳಿಗೆ ಆ ವಿಮಾನನಿಲ್ದಾಣ ಇನ್ನೂ ಹತ್ತಿರವಾಗುತ್ತದೆ, ಹಾಗು ಅಲ್ಲಿಗೆ ಹೋಗಿಬರುವುದು ಇನ್ನೂ ಸುಲಭವಾಗುತ್ತದೆ. ಪ್ರಸ್ತುತ ಇರುವ ವಿಮಾನನಿಲ್ದಾಣದಿಂದ ತಿರುಪ್ಪೂರಗೆ ಕೇವಲ 40 ನಿಮಿಷಗಳ ರಸ್ತೆಯ ಪ್ರಯಾಣ.

 • ರಸ್ತೆ

ತಿರುಪ್ಪೂರು ಮತ್ತು ಕೊಯಮತ್ತೂರು ಸಂಪರ್ಕಿಸುವ ಈಗಿರುವ ವಾಂಜಿಪಾಳ್ಯಂ ರಸ್ತೆಯ ಮೂಲಕ ಹೊಸ ರಸ್ತೆಯನ್ನು ಯೋಚಿಸಲಾಗಿದೆ.

ಪ್ರಮುಖ ರಸ್ತೆಗಳು

 • NH-47— ನಗರದಿಂದ ಕೇವಲ 12 ಕಿ.ಮೀ. ದೂರದಲ್ಲಿದೆ. (4/6 ಪಥ ರಸ್ತೆಯನ್ನು ಪ್ರಸ್ತಾಪಿಸಲಾಗಿದೆ).
 • NH-67—ನಗರದಿಂದ ಕೇವಲ 16 ಕಿ.ಮೀ. ದೂರದಲ್ಲಿದೆ.
 • SH-19—ಕೊಚಿನ್ ರಸ್ತೆ - ಪೋಲ್ಲಾಚಿ-ತಿರುಪ್ಪೂರು -ಅವಿನಾಶಿ(ಅವಿನಾಶಿಯಿಂದ ತಿರುಪ್ಪೂರಿಗೆ ಚತುಷ್ಪತ ರಸ್ತೆ)
 • SH-169-ತಿರುಪ್ಪೂರು-ಸೋಮನೂರು
 • SH-174-ತಿರುಪ್ಪೂರು-ಧಾರಪುರಂ
 • SH-172-ತಿರುಪ್ಪೂರು-ಕಾಂಗೇಯಂ(SH 172 A ಪಡಿಯೂರಿನಲ್ಲಿ ಶುರುವಾಗಿ ನಾಮಕಲ್ಲ್ ರಸ್ತೆಯಲ್ಲಿ ಸೇರುತ್ತದೆ)
 • ಬಸ್ ವ್ಯವಸ್ತೆ

ತಿರುಪ್ಪೂರು ನಗರವು ತನ್ನ ಗ್ರಾಮೀಣ ಬಸ್ ಸೇವೆಗಳ ಮೂಲಕ ತಮಿಳುನಾಡು, ಕೇರಳ, ಕರ್ನಾಟಕ ಮತ್ತು ಅಂಧ್ರ ರಾಜ್ಯಗಳ ಎಲ್ಲಾ ಪ್ರಮುಖ ಪಟ್ಟಣಗಳ ಮತ್ತು ನಗರಗಳ ಜೊತೆ ಸಂಪರ್ಕಹೊಂದಿದೆ. ಆವು:

ರಾಜ್ಯ ಪ್ರಮುಖ ನಗರಗಳು
ತಮಿಳುನಾಡು
 • ಕೊಯಮತ್ತೂರು, ಈರೋಡ್, ಸೇಲಂ,
 • ಕರೂರು,ತಿರುಚಿನಾಪಳ್ಳಿ,ಅರಿಯಲೂರ್,
 • ಚೆನ್ನೈ,ವೆಲ್ಲೂರ್,ತಿರುವನ್ನಾಮಲೈ,ಧರ್ಮಪುರಿ,ಕೃಷ್ಣಗಿರಿ,ಹೊಸೂರು,
 • ಚಿದಂಬರಂ,ಕುಂಭಕೋಣಂ, ತಂಜಾವೂರು,ತಿರುವರುರು
 • ಮಧುರೈ,ರಾಮೇಶ್ವರಂ,ದೇವಕೋಟೈ,
 • ಪಳನಿ,ಪೊಳ್ಳಾಚಿ,ಉದುಮಲೈ, ಕೊಡೈಕೆನಾಲ್
 • ಪಳಾದಂ,ಗೋಪಿಚೆಟ್ಟಿಪಾಳ್ಯಂ(ಗೋಬಿ),

ವಾಳಪಾರೈ, ಧಾರಪುರಂ, ಕಾಂಗೇಯಂ, ಸತ್ಯಮಂಗಳಂ,

 • ಮೆಟುಪಾಳ್ಯಂ, ಕೂನೂರ್, ಊಟಿ, ಕೋಠಗಿರಿ
 • ತಿರುಚೆಂಗೋಡ್, ರಾಸಿಪುರಂ, ನಾಮಕಲ್,
 • ಥೇಣಿ, ಕುಂಬಂ, ರಾಜಪಾಳ್ಯಂ
 • ವಿರುಧ್ನಗರ್, ತಿರುನಲ್ವೆಳಿ, ನಾಗರ್‌ಕೋಯಿಲ್, ತಿರುಚೆಂದೂರ್,
ಕೇರಳ ಕೋಚಿ, ತ್ರಿಚೂರ್, ತ್ರಿವೇಂಡ್ರಂ(ತಮಿಳುನಾಡು ಮತ್ತು ಕೇರಳದ ರಾಜ್ಯ ಸಾರಿಗೆ ಸಂಸ್ಥೆಗಳು ನಿರ್ವಹಿಸುತ್ತವೆ).
ಕರ್ನಾಟಕ ಬೆಂಗಳೂರು, ಮೈಸೂರು, ಕೊಳ್ಳೇಗಾಲ,(ತಮಿಳುನಾಡು ಮತ್ತು ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಗಳು ನಿರ್ವಹಿಸುತ್ತವೆ)
ಅಂಧ್ರ ತಿರುಪತಿ (ತಮಿಳುನಾಡು ಸಾರಿಗೆ ಸಂಸ್ಥೆ ಮತ್ತು ಅಂಧ್ರಪ್ರದೇಶ ಟೂರಿಸಂ ಡೆವಲೆಂಪ್‌‌ಮೆಂಟ್ ಕಾರ್ಪೋರೇಷನ್ ನಿರ್ವಹಿಸುತ್ತವೆ)
 • ರೈಲ್ವೆ
 • ತಿರುಪ್ಪೂರು ಚೆನ್ನೈ-ಕ್ಯಾಲಿಕಟ್ BG ಮುಖ್ಯ ಮಾರ್ಗದಲ್ಲಿ ಇದೆ (1893 ರಲ್ಲಿ ನಿರ್ಮಿಸಲಾದ). ಇದು ಸಂಪೂರ್ಣವಾಗಿ ವಿದ್ಯುತ್ತಿಕರಣಗೊಂಡಿದ್ದು, ಎರಡು ಹಳಿಗಳನ್ನು ಹೊಂದಿದೆ.
 • ತಿರುಪ್ಪೂರು ಈ ಕೆಳಗಿನ ರೈಲ್ವೆ ನಿಲ್ದಾಣಗಳನ್ನು ಹೊಂದಿದೆ.
 • 1. ತಿರುಪ್ಪೂರು(TUP)
 • 2. ವಂಜಿಪಾಳ್ಯಂ(VNJ)
 • 3. ಕೂಳಿಪಾಳ್ಯಂ(KUY)
 • 4. ಉಥುಕುಳಿ(UKL)
 • 5. ಸೋಮನೂರ್(SNO)

ಆದರೆ, ಎಲ್ಲಾ ಎಕ್ಸ್‌ಪ್ರೆಸ್‌ ರೈಲುಗಳು ಕೇವಲ ತಿರುಪ್ಪೂರಿನಲ್ಲಿ (ಕೋಡ್‌:TUP) ಮಾತ್ರ ನಿಲ್ಲುತ್ತವೆ. ಕೆಲವೇ ಕೆಲವು ಎಕ್ಸ್‌‌ಪ್ರೆಸ್‌ ರೈಲುಗಳು ಉಥುಕುಳಿ ಯಲ್ಲಿ ನಿಲ್ಲುತ್ತದೆ. ಇಲ್ಲಿಗೆ ತಿರುಪ್ಪೂರ್ ರೈಲ್ವೆ ನಿಲ್ದಾಣದಿಂದ ಹತ್ತು ನಿಮಿಷದ ಪ್ರಯಾಣವಾಗುತ್ತದೆ. ಪ್ಯಾಸೆಂಜರ್‌ ಷಟಲ್‌ ಗಳು ವಂಜಿಪುರಂ, ಸೋಮನೂರ್ ಮತ್ತು ಕೂಳಿಪಾಳ್ಯಂ ನಲ್ಲಿ ನಿಲ್ಲುತ್ತವೆ. ಇವೆಲ್ಲವೂ ಕೂಡ ತಿರುಪ್ಪೂರ ರೈಲ್ವೆ ನಿಲ್ದಾಣದಿಂದ ಹತ್ತು ನಿಮಿಷದ ಪ್ರಯಾಣವಾಗುತ್ತದೆ. ಇದಲ್ಲದೇ ಕೆಲವು ಕೇರಳಕ್ಕೆ ಹೋಗುವ ಸೂಪರ್‌ಫಾಸ್ಟ್‌ ರೈಲುಗಳು ತಿರುಪೂರಿನಲ್ಲಿ ನಿಲ್ಲುತ್ತವೆ.

ಸೇಲಂ ವಿಭಾಗದಲ್ಲಿ ಹೆಚ್ಚಿನ ಆದಾಯಗಳಿಸುವ ನಿಲ್ದಾಣಗಳ ಪೈಕಿ ತಿರುಪ್ಪೂರು ಪ್ರಮುಖವಾಗಿದ್ದರೂ, ಈ ನಿಲ್ದಾಣದಲ್ಲಿ ಕೇವಲ ಎರಡು ಫ್ಲಾಟ್‌ಫಾರಂಗಳಿದೆ, ಹಾಗು ಇಲ್ಲಿಂದ ಯಾವುದು ರೈಲು ಪ್ರಾರಂಭವಾಗುವುದಿಲ್ಲ.

ತಿರುಪ್ಪೂರು ಈ ಕೆಳಕಂಡ ಊರುಗಳ ಜೊತೆ ರೈಲಿನ ಸಂಪರ್ಕವನ್ನು ಹೊಂದಿದೆ: ಚೆನ್ನೈ,ಕೊಯಮತ್ತೂರು, ಈರೋಡ್,ಸೇಲಂ,ಬೆಂಗಳೂರು,ಹೈದಾರಬಾದ್,ಕನ್ಯಾಕುಮಾರಿ,ಗುವಹಾಟಿ,ಜೈಪುರ,ನ್ಯೂಡೆಲ್ಲಿ (ನವ ದೆಹಲಿ), ಮುಂಬಯಿ,ಕಲ್ಕತಾ,ಕೋಚಿ,ಮಂಗಳೂರು,ಕುಂಭಕೋಣಂ,ಮಧುರೈ,ವೆಲ್ಲೂರ್,ತಿರುನಲ್ವೆಳಿ,ನಾಗರ್‌ಕೋಯಿಲ್‌ ಮತ್ತು ತ್ರಿವೇಂಡ್ರಂ.

ತಿರುಪ್ಪೂರು ರೈಲ್ವೆ ನಿಲ್ದಾಣವನ್ನು (TUP) ಹಾದು ಹೋಗುವ ಕೆಲವು ಪ್ರತಿಷ್ಠಿತ ರೈಲುಗಳು:

 • ಚೇರನ್ ಎಕ್ಸ್‌ಪ್ರೆಸ್
 • ಕೋವೈ ಎಕ್ಸ್‌ಪ್ರೆಸ್
 • ನೀಳಗಿರಿ ಎಕ್ಸ್‌ಪ್ರೆಸ್‌
 • ಕೊಯಮತ್ತೂರು ಎಕ್ಸ್‌ಪ್ರೆಸ್‌
 • ವೆಸ್ಟ್‌ ಕೋಸ್ಟ್‌ ಎಕ್ಸ್‌ಪ್ರೆಸ್‌
 • ಕೊಯಮತ್ತೂರು ಜೈಪುರ್ SF ಎಕ್ಸ್‌ಪ್ರೆಸ್‌
 • ತ್ರಿವೇಂಡ್ರಂ ಮೈಲ್
 • ಚನ್ನೈ ಮೈಲ್
 • ಕೋಂಗು ಎಕ್ಸ್‌ಪ್ರೆಸ್‌.

ಪ್ರವಾಸ ತಾಣಗಳು[ಬದಲಾಯಿಸಿ]

ತಿರುಪ್ಪೂರು ಸಂಪೂರ್ಣವಾಗಿ ಕೈಗಾರಿಕೆಗಳಿರುವ ನಗರ, ಹೀಗಾಗಿ ಈ ಊರಿನಲ್ಲಿ ಪ್ರವಾಸ ತಾಣಗಳ ಬಹಳ ಕಡಿಮೆ ಸಂಖ್ಯೆಯಲ್ಲಿವೆ. ಆದರೆ ತಿರುಪ್ಪೂರನಲ್ಲಿ ಹಲವಾರು ಮನರಂಜನಾ ಕೇಂದ್ರಗಳಿವೆ.

 • ಶಿವನಮಲೈ
 • ಕೊಂಗಣಗಿರಿ ಗುಡ್ಡದ ದೇವಸ್ಥಾನ (ನಗರದಲ್ಲಿರುವ ಒಂದು ಚಿಕ್ಕ ಗುಡ್ಡದ ಮೇಲೆ ಒಂದು ಚಿಕ್ಕ ದೇವಸ್ಥಾನವಿದೆ).
 • ಅಂಡಿಪಾಳ್ಯಂ ಕೆರೆ(ಪ್ರವಾಸಿಗರಿಗೆ ಬೋಟಿಂಗ್ ಸೇವೆ ಇನ್ನೂ ಪ್ರಾರಂಭವಾಗಬೇಕಿದೆ)
 • ತಿರುಮುರುಗನ್ ಪೂಂಡಿ(ದೇವಸ್ಥಾನ; ನಿಶಬ್ಧ ಮತ್ತು ನೆಮ್ಮದಿಯ ವಾತವರಣವಿದೆ)
 • ವಾಲೈ ತೋಟ್ಟತು ಅಯ್ಯನ್ ದೇವಸ್ಥಾನ
 • ತಿರುಪ್ಪೂರು ತಿರುಪತಿ ದೇವಸ್ಥಾನ (ಅಂಧ್ರಪ್ರದೇಶದ ತಿರುಮಲ ತಿರುಪತಿಯ ದೇವಸ್ಥಾನದ ಮಾದರಿಯ ದೇವಸ್ಥಾನ)
 • ಸುಕ್ರೀಸ್ವರಾರ್ ದೇವಸ್ಥಾನ (ಇದು ಸುಮಾರು 10ನೇ ಶತಮಾನದ ದೇವಸ್ಥಾನ, ಇಲ್ಲಿ ನಾವು ಹಲವಾರು ಪ್ರಾಚೀನ ಕಟ್ಟಡಗಳನ್ನು ಕಾಣಬಹುದು)
 • ಅವಿನಾಶಿಅಪ್ಪಾರ್ ದೇವಸ್ಥಾನ (ಕೊಂಗು ನಾಡಿನ ಏಳು ಶಿವಸ್ಥಳಗಳಲ್ಲಿ ಇದು ಒಂದು)

ತಮಿಳನಾಡಿನ ಅನೇಕ ಪ್ರವಾಸಿ ತಾಣಗಳು ತಿರುಪ್ಪೂರಿನಿಂದ ಕೇವಲ ಎರಡರಿಂದ ಮೂರು ಗಂಟೆಯ ಪ್ರಯಾಣವಾಗುತ್ತದೆ. ಅವು: ಕೊಡೈಕೆನಾಲ್, ಊಟಿ, ಕೂನೂರ್, ಪೊಲ್ಲಾಚಿ, ಕೊವೈ ಕುಟ್ರಾಲಂ, ವೈದೇಹಿ ಜಲಪಾತ(ಫಾಲ್ಸ್) , ಟಾಪ್‌ಸ್ಲಿಪ್, ನೆಲಿಯಂಪಟ್ಟಿ, ವಾಳಪಾರೈ, ಕೊಥಗಿರಿ ಮತ್ತು ಪಳನಿ.

ಮಾಧ್ಯಮ ಮತ್ತು ಸಂಪರ್ಕ ಮಾಧ್ಯಮಗಳು[ಬದಲಾಯಿಸಿ]

ವೃತ್ತ ಪತ್ರಿಕೆಗಳು[ಬದಲಾಯಿಸಿ]

ತಮಿಳು, ಇಂಗ್ಲಿಷ್, ಹಿಂದಿ ಮತ್ತು ಇತರ ಪ್ರಾದೇಶಿಕ ಭಾಷೆಯ ಪ್ರಮುಖ ದಿನಪತ್ರಿಕೆಗಳು ತಿರುಪೂರಿನಲ್ಲಿ ಸಿಗುತ್ತದೆ.

ದೂರಸಂಪರ್ಕ ಮತ್ತು ಟಿವಿ ವಾಹಿನಿಗಳು (ಚಾನಲ್‌)[ಬದಲಾಯಿಸಿ]

 • ತಿರುಪ್ಪೂರು ತಮಿಳುನಾಡಿನ ಟೆಲಿಕಾಂ ಸರ್ಕಲ್‌ ಕೆಳಗೆ ಬರುತ್ತದೆ.
 • ಈ ನಗರದಲ್ಲಿ ಹಲವಾರು ಸ್ಥಳೀಯವಾದ ಟಿವಿ ವಾಹಿನಿಗಳಿವೆ.
 • ಸೇನಾಪತಿ ಕಂಗಾಯಂ ಕ್ಯಾಟಲ್ ರಿಸರ್ಚ್ ಫೌಂಡೇಷನ್ www.kangayambull.com

ರೇಡಿಯೋ ಕೇಂದ್ರಗಳು[ಬದಲಾಯಿಸಿ]

 • ಸೂರ್ಯನ್ FM (93.5 MHz),
 • ಕೋಡೈ FM (AIR-100.5 MHz (ಕೊಡೈಕೆನಾಲ್)),
 • ರೇಡಿಯೋ ಮಿರ್ಚಿ,
 • ಹಲೊ FM

ಚಲನಚಿತ್ರಮಂದಿರಗಳು/ಸಿನಿಮಾ ಮಂದಿರಗಳು[ಬದಲಾಯಿಸಿ]

ಚಲನಚಿತ್ರ ಮಂದಿರಗಳು ವೈಶಿಷ್ಟ್ಯಗಳು
ಅಭಿರಾಮಿ DTS (ಡಿ.ಟಿ.ಎಸ್)
ಸಿನಿಪಾರ್ಕ್ DTS
ವಜ್ರ DTS
ಜ್ಯೋತಿ DTS
M.P.S DTS
ನಟರಾಜ್ DTS
ರಾಗಂ DTS
ರಾಮಲಕ್ಷಮನ್ DTS
ರೇವತಿ DTS
ಶಕ್ತಿ DTS
ಸಂಗೀತಾ DTS
ಸರಣ್ಯ, ತಮಿಳ್‌ನಾಡು DTS
ಶಾಂತಿ DTS
ಶ್ರಿ ಶಕ್ತಿ DTS
ಸಿವನ್ DTS
ಶ್ರೀನಿವಾಸ ಮಲ್ಟಿಪ್ಲೆಕ್ಸ್, DTS
ಸೂರ್ಯ DTS
ಯುನಿವರ್ಸಲ್ DTS
ವರನಾಶಿ ಮಲ್ಟಿಪ್ಲೆಕ್ಸ್, DTS

ಟಿಪ್ಪಣಿಗಳು[ಬದಲಾಯಿಸಿ]

 1. "Helping Tirupur emerge as a leader in knitwear exports in India - Tiruppur". The Hindu. 2007-06-11. Archived from the original on 2007-11-28. Retrieved 2009-09-24.
 2. "City Guide :: Tirupur :: A.C & Refrigerators". India Catalog.Com. Retrieved 2009-09-24.
 3. "Falling Rain Genomics, Inc - Tiruppur". Fallingrain.com. Retrieved 2009-09-24.
 4. ಶರದ್ ಚಾರಿ ಬರೆದಿರುವ ಫ್ರಟರ್ನಲ್‌ ಕ್ಯಾಪಿಟಲ್
 5. GRIndia
 6. "List of Parliamentary and Assembly Constituencies" (PDF). Election Commission of India. Retrieved 2008-10-11. Unknown parameter |bhavesh= ignored (help)
 7. "The Noyyal River and Tiruppur". Archived from the original on 2010-01-14. Retrieved 2007-02-02.
 8. For Textile Information we suggest visiting www.tea-india.org

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]